ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅನಿವಾಸಿ
*~*~*~*
ಧರ್ಮಿಷ್ಟರ ದಂಧೆ
"ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!" ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ "ಹಾಳಾಗಿ ಹೋಗಲಿ" ಎಂಬಂತೆ ಇನ್ನೊಂದತ್ತ ತಿರುಗಿದರು.
ಈ ಒಂದು ವಾರದಲ್ಲಿ ಸಿಡ್ನಿಯ ಮಂದಿಗೆ ತಮ್ಮ ನಂಬಿಕೆಯ ಬಗ್ಗೆಯಷ್ಟೇ ಅಲ್ಲ - ಆದರೆ ಕ್ಯಾತಲಿಕ್ ಎಂಬ ಬಹುದೊಡ್ಡ ಸಂಯೋಜಿತ ಧರ್ಮದ ಬಗ್ಗೆ ತಲೆಯಲ್ಲಿ ಹಲವು ಯೋಚನೆ ಅನುಮಾನ ಅಭಿಮಾನ ಎಲ್ಲ ಮೂಡಿ ಮುಳುಗುತ್ತಿದೆ. ನೂರಾರು ಸಾವಿರ ಮಂದಿ ಸೇರಬೇಕೆ ಅದೂ ಈ ಕಾಲದಲ್ಲಿ ಅಂದಾಗ ಇಸ್ಲಾಂ ಧರ್ಮದ ಹಜ್ ಯಾತ್ರೆಯನ್ನು ನೆನಪಿಸುತ್ತಾರೆ. ಹಿಂದೂಗಳ ಪ್ರತಿ ಹಬ್ಬಕ್ಕೂ ಹತ್ತಾರು ಸಾವಿರವಾದರೂ ಸೇರುವುದನ್ನೂ, ಕುಂಭಮೇಳಕ್ಕೆ ಕೋಟಿ ಕೋಟಿಯಲ್ಲಿ ಸೇರುವುದನ್ನು ಎತ್ತಿ ತೋರಿಸುತ್ತಾರೆ. ಒಬ್ಬರಿಗಿರುವ ನಂಬಿಕೆ ಇನ್ನೊಬ್ಬರಿಗೆ ಬೇಡವೇ ಎಂಬಂತೆ ಮುಖ ನೋಡುತ್ತಾರೆ.
ಜಾಗತಿಕ ಯುವ ದಿನ ಎಂದು ಕ್ಯಾತಲಿಕ್ ಚರ್ಚ್ ಹಮ್ಮಿಕೊಳ್ಳುವ ಈ ಉತ್ಸವ ಎರಡು ವರ್ಷಕೊಮ್ಮೆ ನಡೆಯುತ್ತದಂತೆ. ಸಿಡ್ನಿಗೆ ನೂರಾರು ಸಾವಿರ ಮಂದಿ ಬಂದಿಳಿದು ಗದ್ದಲ ಶುರುಮಾಡಿದ್ದಾರೆ. ಸಿಡ್ನಿಯ ಮುಖ್ಯ ಬೀದಿಗಳೆಲ್ಲಾ ಮುಚ್ಚಲಾಗಿದ್ದು ಧರ್ಮಿಷ್ಟರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ. ಸಿಡ್ನಿಯ ನಡುವಲ್ಲಿರುವ ಚಂದವಾದ ಡಾರ್ಲಿಂಗ್ ಹಾರ್ಬರಿನಲ್ಲಿ ಪೋಪಜ್ಜನ ಮಾಸ್ ಅಂತೆ. ನಂತರ ಸಿಡ್ನಿಯನ್ನು ಆವರಿಸಿರುವ ಸಾಗರದ ಒಳನೀರುಗಳಲ್ಲಿ ಪೋಪಜ್ಜನ ಬೋಟಕೇಡ್ ಅಂತೆ.
ಜಗತ್ತಿನ ಎಲ್ಲ ಕಡೆಯಿಂದ ಬಂದಿಳಿದಿರುವ ಯಾತ್ರಿಗಳ ಹಾಡು, ಗದ್ದಲ ಗಲಭೆ. ಈ ಮಧ್ಯೆ, ನಾಮ ಹಾಕಿಕೊಂಡು, ಶಾಠಿ ಉಟ್ಟ ಹರೇ ಕೃಷ್ಣದವರ ಕಿರಿಕಿರಿ. ಇಂಡಿಯಾದಿಂದ ಇದಕ್ಕಾಗಿ ಎಂಬಂತೆ ಬಂದು ನ್ಯೂಜಿಲಾಂಡಿನೊಳಗೆ ತೂರಿ ಮಾಯವಾದ ನಿರಾಶ್ರಿತರು ಮತ್ತೊಂದು ಕಡೆ. ಅವರು ಕ್ಯಾತಲಿಕ್ಕರೇ ಅಲ್ಲ ಅಂತ ಒತ್ತಿ ಹೇಳುತ್ತಿದ್ದಾರೆ ಬೇರೆ.
ಈ ಗುರುವಾರ ಸಿಡ್ನಿಯ ಎದೆಯನ್ನು ಸೀಳುವಂತೆ ನಡು ರಸ್ತೆಯಲ್ಲಿ ಪೋಪಜ್ಜನ ಬಹುದೊಡ್ಡ ಪೆರೇಡಂತೆ. ಊರ ತುಂಬಾ ಜನ. ಭಕ್ತರು, ನಿರಾಸಕ್ತರು ಮತ್ತು ತಪ್ತರು. ಎಲ್ಲರ ಸಂತೆ ಸೇರಲಿದೆ.
ಸಿಡ್ನಿಯ ತುಂಬಾ ಎಲ್ಲಿ ಹೆಜ್ಜೆಯಿಟ್ಟರು ನಂಬು, ನಂಬದಿರು, ಅಥವಾ ನಂಬವುದೇ ಯಾಕೆ ಎನ್ನುವಂತ ತಿಕ್ಕಾಟ. ಇವೆಲ್ಲದರಿಂದ ಚಳಿಯಲ್ಲೂ ಗರಮ್ಮಾದ ಹವೆ.

- anivaasi ರವರ ಬ್ಲಾಗ್
- Login or register to post comments
- 518 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಧರ್ಮಿಷ್ಟರ ದಂಧೆ
ಅನಿವಾಸಿ ಆತ್ಮೀಯರೆ,
ಈ ಸಿಡ್ನಿಯಲ್ಲಿ ಹೀಗೆಲ್ಲ ಆಗ್ತಾಯಿದ್ಯೆ ಈಗ ?
ಈ ಯಾತ್ರೆಯನ್ನು ತಮ್ಮ ಕ್ಯಾತಲಿಕ್ ಧರ್ಮದ ಚಿಂತನೆ ಹಾಗು ಚರ್ಚೆಗಾಗಿ ನಡೆಸುತ್ತಿದ್ದಾರೊ ಇಲ್ಲವೆ ಬೇರೆ ಧರ್ಮದ ಮೇಲೆ ಯಾವುದಾದರು ಅಘಾತಕರ ಉದ್ದೇಶಗಳೊಳಗೊಂಡಂತ ಘಟನೆಗಳು ನಡೆದು ಬಂದೆವೆಯಾ ?
ನಮ್ಮ ೩೫ ಭಾರತೀಯರು ನ್ಯುಜಿಲ್ಯಾಂಡಿನಲ್ಲಿ ಕಳೆದು ಹೋಗಿದ್ದಾರೆಂದು ತಿಳಿದು ಮನಸಿಗೆ ಬಹಳ ದುಖಃವಾಯ್ತು..!!
-ಯುವಪ್ರೇಮಿ
ಉ: ಧರ್ಮಿಷ್ಟರ ದಂಧೆ
ಯುವಪ್ರೇಮಿಗಳೇ,
ಆದರೂ ಸಿಡ್ನಿಯ ಹತ್ತಾರು ಎಡೆಗಳಲ್ಲಿ ಸಮಾವೇಶ ಅದೂ ಇದೂ ನಡೀತಿದೆ.
ಅಯ್ಯಪ್ಪನ ವ್ರತ, ಗಣೇಶನ ಹಬ್ಬಗಳಲ್ಲಿ ನಡೆಯುವಷ್ಟೇ ಧರ್ಮದ ಚಿಂತನೆ ಹಾಗು ಚರ್ಚೆ ನಡೆಯುತ್ತದೆ!
ಇನ್ನು "ಅಘಾತಕರ ಉದ್ದೇಶಗಳೊಳಗೊಂಡಂತ ಘಟನೆ" ಎಂದರೆ ಎಂತವು ಎಂದು ತಿಳಿಯಲಿಲ್ಲ. ಕೈಕಾಲು ಕತ್ತರಿಸುವುದು, ಕೊಲ್ಲುವುದು ಅಂತಹವ? ಇಲ್ಲ ನಡೆದಿಲ್ಲ.
೩೫ ಮಂದಿಗಳ ಸುದ್ದಿಯಿಂದ ನೋವೇಕಾಯಿತು?
ಉ: ಧರ್ಮಿಷ್ಟರ ದಂಧೆ
"ಸಿಡ್ನಿಯ ತುಂಬಾ ಎಲ್ಲಿ ಹೆಜ್ಜೆಯಿಟ್ಟರು ನಂಬು, ನಂಬದಿರು, ಅಥವಾ ನಂಬವುದೇ ಯಾಕೆ ಎನ್ನುವಂತ ತಿಕ್ಕಾಟ. ಇವೆಲ್ಲದರಿಂದ ಚಳಿಯಲ್ಲೂ ಗರಮ್ಮಾದ ಹವೆ."
ನಾನು ನಿಮ್ಮಿಂದ ಇದು ಎಕ್ಸ್‌ಪೆಕ್ಟ್ ಮಾಡಿದ್ದೆ... ನಮ್ಮಿಬ್ಬರ ತಲೆ ಒಂದೇ ತರ ಓಡಿದರೂ ನೀವು ಹೆಚ್ಚಯನ್ನು ನೋಡಿ ಹಾಕುತ್ತೀರಿ ಮತ್ತು ಹಾಕಿ ನೋಡುತ್ತೀರಿ... ಆದರೆ ನಾನು ಹೆಚ್ಚೆಯನ್ನು ನೋಡುವುದೇ ಇಲ್ಲ ಬರೀ ಓಡುವುದಶ್ಟೇ!
ತುಂಬಾ ಹಿಡಿಸಿತು.. ಈ ಬರಹ.. ಮತ್ತೆ ಮತ್ತೆ ಓದಲು ಬಹುದು..
ಉ: ಧರ್ಮಿಷ್ಟರ ದಂಧೆ
’ಹೆಜ್ಜೆ’ ’ಹೆಚ್ಚೆ’ ಆಗೋಗಿದೆ
ಉ: ಧರ್ಮಿಷ್ಟರ ದಂಧೆ
ಮಹೇಶರೆ,
ಮತ್ತೆ ಮತ್ತೆ ಓದಿಸಿಕೊಂಡಿತು ಎಂದು ಕೇಳಿ ಖುಷಿಯಾಯಿತು. ಅಂದ ಹಾಗೆ, ಎಕ್ಸ್‌ಪೆಕ್ಟ್ ಮಾಡಿದ್ದೆ ಅಂದಿರಲ್ಲ... ನನ್ನ ನುಡಿಬಗೆಯೂ ರಿಪೀಟ್ ಆಗುತ್ತಿದೆ ಅನಿಸುತ್ತಿದೆ. ಅದನ್ನು ಎತ್ತಿ ಹಿಡಿಯುವಂತೆ ಈ ಬರಹದ ಅಡಿಯಲ್ಲಿರುವ ಹೋಲುವ ಪುಟಗಳೆಲ್ಲಾ ನನ್ನವೆ!
ಉ: ಧರ್ಮಿಷ್ಟರ ದಂಧೆ
ಅನಿವಾಸಿಯ ಬರಹಬಗೆ ಏನು ಅಂತ ಹೇಳಲಾಗದು.. ಅದೊಂತರ ಅನುಬವ.. ಎಂದು ಹೇಳಿ ನಾನು ದೊಡ್ಡ ಮಾತು ಪುಂಗಲಾರೆ.
ಆದರೆ ನಿಮ್ಮ ಬರಹ ಓದಿದ ಕೂಡಲೆ ಇದು ಆಸಟ್ಟರೇಲಿಯದ ಅನಿವಾಸಿದೇ ಎಂದು ಹೇಳಬೋದು...!!
ನಿಮ್ಮ ಬರಹ ಹುರುಳು ತಿಳಿಯುವುದು ತುಸು ಸಾಸವೇ!
ಉ: ಧರ್ಮಿಷ್ಟರ ದಂಧೆ
ಉಹುಂ, ನನಗ್ಯಾಕೋ ಹಿಡಿಸಲಿಲ್ಲ ಈ ಕಾನ್ಸೆಪ್ಟು.
ಈಗ ನನಗೆ ಕ್ರಿಕೆಟ್ ಎಂದರೆ ಇಷ್ಟವೆಂದಿಟ್ಟುಕೊಳ್ಲೋಣ. ಆದರೆ ನಾನು ದಿನಾ ಓಡಾಡುವ ದಾರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೆ ಕ್ರಿಕೆಟ್ ಇಟ್ಟುಕೊಳ್ಳುತ್ತಾರೆ. ಸಾವಿರಾರು ಜನ ಸೇರುತ್ತಾರೆ. ಗಲಾಟೆ, ಟ್ರಾಫಿಕ್ ಜಾಮ್, ಕಿರಿಕಿರಿಗಳು ನೂರು. ಅದೂ ಅಲ್ಲದೇ ಎಲ್ಲಿ ಹೋದರೂ ಮತ್ತದೇ ಚರ್ಚೆ. ಅವನು ಹಿಂಗೆ ಆಡಿದ ಹಂಗೆ ಆಡಿದ, ಔಟಾದ, ಫೋರ್ ಹೊಡೆದ, ಸೋತರು, ಗೆದ್ದರು, ಹಿಂಗೆ ಆಡಬೆಕಿತ್ತು ಅದೂ ಇದು. ಪಾಕಿಸ್ತಾನದ ಮೇಲೆ ಕುಂಬ್ಳೆ ೧೦ ವಿಕೆಟ್ ತೆಗೆದಾಗ ಬೆಂಗಳೂರಲ್ಲಿ ಅವನ ಮೆರವಣಿಗೆ ಮಾಡಿದರು, ಜ್ಯೂನಿಯರ್ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಂಡು ಬಂದಾಗ ಏರ್ ಪೋರ್ಟಿಂದ ಮೆರೆವಣಿಗೆ ಮಾಡಿದರು. ಕ್ರಿಕೆಟ್ ನೋಡುವುದಕ್ಕೇ ಎಂದು ಪಾಕಿಸ್ತಾನದಿಂದ ಬಂದು ಮರೆಯಾದವರೂ ಇಲ್ಲಿದ್ದಾರಂತೆ!
ಈ ಪರಿಸ್ಥಿತಿಯನ್ನು ನೀವು ಬರೆದುದ್ದಕ್ಕೆ ಸಮೀಕರಿಸಿ ನೋಡಿದರೆ ಯಾವ ವ್ಯತ್ಯಾಸವೂ ಇಲ್ಲ. ಇಲ್ಲಿ ಆಟದ ಹೆಸರಲ್ಲಿ ನೆಡೆದರೆ ಅಲ್ಲಿ ಧರ್ಮದ ಹೆಸರು ಅಷ್ಟೆ.
**************************
http://vikasavada.blogspot.com/
**************************
ಉ: ಧರ್ಮಿಷ್ಟರ ದಂಧೆ
ಮನ್ನಿಸಿ, ಮೇಲಿನ ಅನಿಸಿಕೆಯಲ್ಲಿ "ನನಗೆ ಕ್ರಿಕೆಟ್ ಎಂದರೆ ಇಷ್ಟವಿಲ್ಲವೆಂದಿಟ್ಟುಕೊಳ್ಳೋಣ" ಎಂದು ತಿದ್ದಿಕೊಂಡು ಓದಿ. ಹಾಗೂ "ನನ್ನಂತೆಯೇ ಈ ನಗರದಲ್ಲಿ ಲಕ್ಷಾಂತರ ಜನರಿದ್ದಾರೆ" ಎಂಬ ವಾಕ್ಯ ಸೇರಿಸಿಕೊಳ್ಳಿ.
**************************
http://vikasavada.blogspot.com/
**************************
ಉ: ಧರ್ಮಿಷ್ಟರ ದಂಧೆ
ಯಾವ ಕಾನ್ಸೆಪ್ಪು ಹಿಡಿಸಲಿಲ್ಲ - ತೀರ್ಥಯಾತ್ರೆಯ ಕಾನ್ಸೆಪ್ಟೆ?
ಕ್ರಿಕೆಟನ್ನು ಇದಕ್ಕೆ ಸಮೀಕರಿಸುವುದು ಬೇಕಾಗಿಲ್ಲ. ಸಮೀಕರಿಸಲು ಇನ್ನೂ ಹತ್ತಿರದ ಧರ್ಮದ ಸಂಗತಿಗಳೇ ನಮ್ಮಲ್ಲಿ ಇವೆಯಲ್ಲಾ... ಅವು ಎಷ್ಟು ಜನರಿಗೆ ಕಸಿವಿಸಿ ಉಂಟುಮಾಡುತ್ತವೆ ಯೋಚಿಸಿ - ಗಣೇಶನ ಹಬ್ಬದ ಪೆಂಡಾಲುಗಳು, ಅಯ್ಯಪ್ಪ ಸ್ವಾಮಿಯ ಕೂಗಾಟಗಳು, ಮಸೀದಿಯ ಅಲ್ಲಾಹೂಗಳು...
ಅಂದಹಾಗೆ ಇವೆಲ್ಲಾ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇದೆ. ಯಾವುದೋ ಚೌತಿಗೆ ಮಾಡರ್ನ್ ದೇವಾಸ್ಥಾನವೊಂದರಲ್ಲಿ ಅರ್ಚನೆ ಮಾಡಿಸಿದರೆ ಅತ್ಯಂತ ಪುಣ್ಯಫಲ ಅಂತ ನಂಬಿ ಸೇರಿದ್ದ ಮಂದಿಗೆ ಲೆಕ್ಕವಿಲ್ಲ. ಜೆ.ಪಿ.ನಗರದ ಮುಖ್ಯ ಬೀದಿಯನ್ನೇ ಮುಚ್ಚಿಬಿಟ್ಟಿದ್ದರು!
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
ಉ: ಧರ್ಮಿಷ್ಟರ ದಂಧೆ
ನಮಸ್ಕಾರ. ಅನಿವಾಸಿಯವರಿಗೆ. ಸಂಪದದ ಮೂಲಕ ವಿಶ್ವದ ಅನುಭವ ಮಾಡಿಸಿಬಿಟ್ರಿ. ಧನ್ಯವಾದ. ಚಿತ್ರವಂತೂ "ಮೈಂಡ್ ಬ್ಲೋಯಿಂಗ್". ಮನುಷ್ಯ ಮನುಷ್ಯರನ್ನು ಬೆಸೆಯುವ ಯಾವ ಧರ್ಮವಾದರೂ ಒಳ್ಳೆಯದೇ. ಆದರೆ, ಯಾವುದು ಒಡೆಯುತ್ತದೆಯೋ ಅದು ಸುತರಾಂ ಬೇಡ. ಅದಕ್ಕೆ "ಮಾನವ ಧರ್ಮ" ಎಲ್ಲದಕ್ಕಿಂತ ದೊಡ್ಡದು ಅನ್ನೋದು ನನ್ನ ಭಾವನೆ.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಧರ್ಮಿಷ್ಟರ ದಂಧೆ
ಶಶಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
"ಮಾನವ ಧರ್ಮ" ತಾನೇ ತಾನಾಗಿ ಇರುವಂತಹದು. ಅದಕ್ಕೆ ಯಾರ ಒತ್ತಾಯವೂ ಬೇಕಾಗಿರುವುದಿಲ್ಲ. ಅಂದ ಹಾಗೆ ಧರ್ಮವಿರುವುದೇ ಜನರನ್ನು ಭಾಗ ಮಾಡಲು ಅಲ್ಲವೆ? ಯಾವ ಧರ್ಮದಲ್ಲೂ ಉದ್ಧಾತ ಮಾತುಗಳಿಗೇನು ಕಡಿಮೆಯಿಲ್ಲ. ಆದರೆ, ಎಲ್ಲ ಧರ್ಮಗಳೂ ನಡೆವಳಿಕೆಯಲ್ಲಿ ಅಂತಹ ಉದ್ಧಾತತೆ ತೋರಿಸಿಲ್ಲ ಎಂದು ನನ್ನ ಅನಿಸಿಕೆ.
ಉ: ಧರ್ಮಿಷ್ಟರ ದಂಧೆ
ಗರಮ್ ಹವೆಯಲ್ಲಿ ಅನಿವಾಸಿಗಳೆ ನೀವು ಬೆಚ್ಚಗಾದಿರಿ. ಮೈ ಕೊಡವಿಕೊಂಡ್ರಿ.
ಪೋಪಜ್ಜ ಕ್ಷಮೆಯಾಚಿಸಲಿದ್ದಾರಂತೆ ಅಲ್ಲಿರುವ ಕ್ರೈಸ್ತ ಪಾದ್ರಿಗಳಿಂದಾಗಿರುವ sexual abuseಇಗೆ.
ಹೋದ ವರ್ಷ ಆಸ್ಕರ್ ಪಡೆದ ಒಂದು ಡಾಕ್ಯುಮೆಂಟರಿ ತಂದು ನೋಡುತ್ತಿದ್ದೆ. ಇದೇನಿದು ಹೀಗೆಲ್ಲ ಅನ್ನಿಸಿತು. ಆಶ್ಚರ್ಯವಾಯ್ತು. ಕೊನೆಗೆ ಇದೇನು ನಿಜವಾ ಅನ್ನಿಸಿತು. ಅದರ ವಿಷಯ ಬೇರೇನೂ ಅಲ್ಲ ಇದೇನೆ ಮತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಧರ್ಮಿಷ್ಟರ ದಂಧೆ
ಹರಿ,
ಮೈ ಕೊಡವಿಕೊಂಡಿದ್ದರೆ - ಇದನ್ನು ಬರೆದು ಇಲ್ಲಿ ಹಾಕುತ್ತಿರಲಿಲ್ಲ ಅಲ್ಲವೆ?
ಪೋಪಜ್ಜ ಕ್ಷಮೆಯಾಚುಸುವುದು ಖಾತ್ರಿಯಿಲ್ಲವಂತೆ! ಇದು ಈವತ್ತಿನ ಸುದ್ದಿ. ಇಲ್ಲಿದೆ ನೋಡಿ!
ನಮ್ಮ ದೇಶದಲ್ಲೂ ಇದೇನು ಹೊಸತಲ್ಲ ಅಲ್ಲವೆ? ಧರ್ಮಾಧಿಕಾರಿಗಳಲ್ಲಿ ಜನ ದೇವರಲ್ಲಿಟ್ಟಷ್ಟೇ ನಂಬಿಕೆಯನ್ನು ತಪ್ಪಾಗಿ ಇಡುತ್ತಾರೆ. ಅವರು ಅದರ ದುರ್ಬಳಕೆ ಮಾಡಿಕೊಳ್ಳುತ್ತಾರೆ.
ಅಂದ ಹಾಗೆ, ಕೆಲಸದ ಒತ್ತಡದಿಂದಾಗಿ ಚರ್ಚೆಗಳಲ್ಲಿ ಅನಿಸಿದಷ್ಟು ಪಾಲ್ಗೊಳ್ಳಲು ಆಗುತ್ತಿಲ್ಲ
ಉ: ಧರ್ಮಿಷ್ಟರ ದಂಧೆ
ನನಗೂ ಓದಿದ ಮೇಲೆ ಇದ್ಯಾಕೋ ಸರಿಯಾಗಿ ಬರೆದಹಾಗಾಗಲಿಲ್ಲ ಅನಿಸಿತು. ಕ್ಷಮೆಯಿರಲಿ. ಅಲ್ಲಿ ನೆರೆದಿರುವ crowdನಿಂದ ಮೈಕೊಡವಿಕೊಂಡಿರಿ (ನೀವೂ ಸುಲಭವಾಗಿ ಅವರಲ್ಲೊಬ್ಬರಾಗುವ ಸಂಭವ ಇತ್ತು ಮೈಕೊಡವಿ ತಪ್ಪಿಸಿಕೊಂಡ್ರಿ) ಅನ್ನೋ ಹಾಗೆ ಏನೋ ಬರೆಯೋಕೆ ಹೊರಟಿದ್ದೆ. ನಾನಂದುಕೊಂಡಂತೆ ಬರಲಿಲ್ಲ.
ಹೂನ್ರಿ, ನನಗೂ ಹಾಗೇ ಆಗಿಬಿಟ್ಟಿದೆ. ನಾನು ಒಂದೆರಡು ಲೈನು ಪ್ರತಿಕ್ರಿಯೆ ಬರೆದು ಹೋಗಿತ್ತಿರುವೆ ಸಾಧ್ಯವಾದಾಗಲೆಲ್ಲ (ಇನ್ನುಳಿದ ಸಮಯ ಮೇಲಿನಂತೆ ನಿದ್ರೆಗಣ್ಣಿನಲ್ಲಿ ತಪ್ಪು ತಪ್ಪಾಗಿ ಬರೆದದ್ದು).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಧರ್ಮಿಷ್ಟರ ದಂಧೆ
>> ಪೋಪಜ್ಜ ಕ್ಷಮೆಯಾಚುಸುವುದು ಖಾತ್ರಿಯಿಲ್ಲವಂತೆ! ಇದು ಈವತ್ತಿನ ಸುದ್ದಿ. ಇಲ್ಲಿದೆ ನೋಡಿ!
ಪೋಪಜ್ಜ ಕ್ಷಮೆ ಕೇಳಿದ್ದಾನೆ...
ಕೊಂಡಿ ನೋಡಿ...
http://www.nytimes.com/2008/07/19/world/asia/19apology.html?hp
ಉ: ಧರ್ಮಿಷ್ಟರ ದಂಧೆ
ನಾನು ಗಮನಿಸಿದ ಪ್ರಕಾರ ಎಲ್ಲ ದೇವರಿಗೂ 'ಸೀಸನ್ 'ಗಳಿವೆ...
ಚಿಕ್ಕವನಾದಗಿಂದ ನೋಡ್ತಾ ಬಂದ್ರೆ...
ಸತ್ಯ ನಾರಾಯಣ ವ್ರತ ಆಯ್ತು, ವೈಭವ ಲಕ್ಷ್ಮಿ ವ್ರತ ಆಯ್ತು...ರಾಘವೇಂದ್ರ ಸ್ವಾಮಿ, ಅಯ್ಯಪ್ಪ...
ಉತ್ತರದಿಂದ ಇಲ್ಲಿಗೂ ಬಂತು ಸಂತೋಷಿ ಮಾತ ವ್ರತ ...
ಹೀಗೆ...
ಗಣೇಶನ ಸೀಸನ್ ತುಂಬಾ ವರ್ಷ ನಡೆದು ಇತ್ತೀಚೆಗೆ ಅದೂ ತಣ್ಣಗೆ ಆಗ್ತ ಇದೆ...
ಇತ್ತೀಚೆಗೆ ಜೀಸುಸ್ ಸೀಸನ್ ಅಂತ ಕಾಣತ್ತೆ...ಎಲ್ಲ ಕಡೆ ಅದೇ ಬೋರ್ಡ್ ಬೆಂಗಳೂರ್ ತುಂಬ...
ಚರ್ಚ್ ಗಳು ಸಿಕ್ಕಾಪಟ್ಟೆ ಕಾಣಿಸ್ಕೋತಾಇದೆ...
--ಶ್ರೀ