ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ

April 12, 2007 - 10:32am — anivaasi

ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋಗಿಸಬಹುದು. ಮೊಳಕೆ ಬರಿಸಿದರೆ ಪೌಷ್ಟಿಕವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಆದರೆ ಅದು ಹಾಗೇ ಆಗಬೇಕೆಂದೇನೂ ಇಲ್ಲ. ಮೊಳಕೆಯೊಡೆದ ಪದದ ರುಚಿ ನಿಮಗೆ ಹಿಡಿಸದಿದ್ದರೆ ಹಾಗೇ ಉಪಯೋಗಿಸಲೂ ಬಹುದು. ಪೌಷ್ಟಿಕದಷ್ಟೇ ರುಚಿಯೂ ಮುಖ್ಯವಲ್ಲವೆ?
ಇನ್ನು ಕೆಲವು ಪದಗಳು ಚೆನ್ನಾಗಿ ಬಲಿತಿದ್ದರೆ ಒಳ್ಳೆಯದು. ಜಗಿದಾಗ ಬಾಯಿಗೆ ಸಿಕ್ಕುವಂತಿರಬೇಕು. ಅಂಥ ಪದಗಳನ್ನು ಚೆನ್ನಾಗಿ ಬೇಯಿಸಬೇಕಾಗಬಹುದು. ಕೆಲವೊಮ್ಮೆ ಉಪ್ಪುಖಾರ ಚೆನ್ನಾಗಿ ಹಾಕಿ ಬಲಿತ ಪದಗಳನ್ನು ಬೇಯಿಸಿದರೆ ಗಮ್ಮತ್ತಾಗಿರುತ್ತದೆ. ಇನ್ನು ಕೆಲವು ಪದಗಳು ಎಳೆಯದಾಗಿದ್ದರೆ ತುಂಬಾ ರುಚಿ. ಅವುಗಳನ್ನು ಬೇಯಿಸಲೇಬೇಕಾಗಿಲ್ಲ. ಬಿಸಿನೀರಿನಲ್ಲಿ ಒಂದಷ್ಟು ಹೊತ್ತು ಮುಳಿಗಿಸಿಟ್ಟು ತೆಗೆದು ಬಿಡಬಹುದು. ಆಗ ಆ ಪದಗಳ ಒಳಗಿನ ಪರಿಮಳ ಇನ್ನೂ ಚೆನ್ನಾಗಿ ಮೂಗಿಗೆ ಅಡರುತ್ತದೆ. ಎಳೆಯ ಪದಗಳನ್ನು ಹಾಗೆ ಉಪಯೋಗಿಸುವಾಗ ಹೆಚ್ಚು ಉಪ್ಪುಖಾರಹುಳಿ ಬೇಡ, ಅದು ಪದದ ನಿಜ ಸೊಗಡನ್ನು ಮುಚ್ಚಿಬಿಡುತ್ತದೆ ಎಂಬ ಅಪವಾದವೂ ಇದೆ.
ಇನ್ನು ಪದಗಳನ್ನು ಹೆಚ್ಚುವಾಗ ಉದ್ದಕ್ಕೂ ಹೆಚ್ಚಬಹುದು, ಅಡ್ಡಕ್ಕೂ ಹೆಚ್ಚಬಹುದು. ಅದು ಅಲಂಕಾರಿಕ ಅಷ್ಟೆ ಅಂತ ಹೇಳುವವರು ಇದ್ದಾರೆ. ಆದರೆ, ಅದು ಪದದ ಮೂಲ ಸ್ವರೂಪದ ಮೇಲೆ ಅವಲಂಬಿತ ಅಂತ ನನಗನಿಸುವುದು. ಉದ್ದುದ್ದ ಪದವಾದರೆ, ಅಡ್ಡಕ್ಕೆ ಹೆಚ್ಚಿ, ದಪ್ಪ ದಪ್ಪ ಪದವಾದರೆ ಉದ್ದಕ್ಕೆ ಹೆಚ್ಚಬಹುದು. ಯಾರಿಗಾದರೂ ಸಿಟ್ಟು ಬರುವ ಮೊದಲೇ ಹೇಳಿಬಿಡುತ್ತೇನೆ, ದಪ್ಪ ಪದಗಳನ್ನು ಅಡ್ಡಕ್ಕೆ ಹೆಚ್ಚುವವರು ಇರುವಂತೆ, ಉದ್ದಕ್ಕಿರುವ ಪದಗಳನ್ನು ಉದ್ದಕ್ಕೆ ಹೆಚ್ಚುವವರೂ ಇದ್ದಾರೆ. ಒಟ್ಟಾರೆ ರುಚಿಯ ಮೇಲೆ ನಿಮ್ಮ ಗಮನವಿದ್ದು, ಯಾವುದು ಹೆಚ್ಚು ರುಚಿ ಕೊಡುತ್ತದೆ, ಯಾವುದರಿಂದ ಹೆಚ್ಚು ಜಗಿಯುವವರಿಗೆ ಸಂತೋಷಕೊಡುತ್ತದೆ ಎಂಬುದಷ್ಟೇ ಮುಖ್ಯ. ಹಾಗೇ ಪದಗಳನ್ನು ಜಜ್ಜಿ ಗುದ್ದಿ ಉಪಯೋಗಿಸುವುದೂ ಕೆಲವೊಮ್ಮೆ ತುಂಬ ಅನಿವಾರ್ಯ. ಅದನ್ನೂ ಗಮನದಲ್ಲಿಟ್ಟುಕೊಳ್ಳಬೇಕು.
ಪೇಟೆಯಿಂದ ತಂದು ತುಂಬಾ ದಿನವಾಗಿದ್ದರೆ ಪದಗಳು ಎಲ್ಲಾದರೂ ಒಳಗೆ ಕೊಳೆತಿದೆಯೋ ನೋಡಿ ಉಪಯೋಗಿಸುವುದು ಆರೋಗ್ಯಕ್ಕೆ ಕ್ಷೇಮಕರ. ಕೆಲವೊಮ್ಮೆ ಪದಗಳು ಮೇಲೆ ಚೆನ್ನಾಗಿಯೇ ಇರವಂತೆ ಗೋಚರಿಸಿದರೂ ಒಳಗೆ ಕೊಳೆತುಬಿಟ್ಟಿರುತ್ತದೆ. ಅಂಥ ಪದಗಳನ್ನು ಉಪಯೋಗಿಸಿಬಿಟ್ಟರೆ, ನಂತರ ಅಡ್ಡವಾಸನೆ ಬಂದು ಬಹಳ ಕಷ್ಟವೂ ಆಗುತ್ತದೆ.
ಇನ್ನು ಪದಗಳ ಬಣ್ಣಗಳ ಬಗ್ಗೆಯೂ ಸ್ವಲ್ಪ ಎಚ್ಚರಿಕೆ ಇರುವುದು ಒಳ್ಳೆಯದು. ಯಾಕೆಂದರೆ ಒಂದು ಪದಕ್ಕೆ ಇರುವ ಬಣ್ಣ ಎಷ್ಟೇ ಬೇಕೆಂದರೂ ಇನ್ನೊಂದು ಪದಕ್ಕೆ ಬರುವುದಿಲ್ಲ. ಅಥವಾ ಬರಲಿ ಎಂದು ಎಷ್ಟು ಕಷ್ಟಪಟ್ಟರೂ ಅದು ವ್ಯರ್ಥ. ಆಯಾ ಪದಗಳ ಬಣ್ಣಗಳು ಆಯಾ ಪದಗಳಿಗೇ ಹೆಚ್ಚು ಸೂಕ್ತ. ಆದರೆ ನೋಡಿ, ಕೆಲವರು ಒಂದು ಪದಕ್ಕೆ ಮತ್ತೊಂದು ಪದದ ಬಣ್ಣವನ್ನು ಬರುವಂತೆ ಕುದಿಸಿಯೋ, ಸುಟ್ಟೋ ಉಪಯೋಗಿಸುವುದೂ ಇದೆ. ಆದರೆ, ಅದಕ್ಕೆ ತುಂಬಾ ಧೈರ್ಯಬೇಕು. ಆಮೇಲೆ ಬರುವ ಆರೋಪಗಳನ್ನು ತಡೆದುಕೊಳ್ಳುವ ಎದೆಗಾರಿಕೆ ಬೇಕು. ಎದೆಗಾರಿಕೆಯಿದ್ದರೆ, ಹಾಗೆ ಬಣ್ಣಬದಲಾಯಿಸಿ ಪದಗಳನ್ನು ಉಪಯೋಗಿಸಬಹುದು.
ತುಂಬಾ ಹಸಿವಾದಾಗ ಪದಗಳು ಹೇಗಿದ್ದರೂ ಪರವಾಗಿಲ್ಲ ಎಂಬ ಒಂದು ವಾದವೂ ಇದೆ. ಅದರಲ್ಲಿ ತಿರುಳಿಲ್ಲ ಅನ್ನುವ ಹಾಗಿಲ್ಲ. ಆದರೆ ಪದಗಳು ಬರೇ ಹಸಿವಿಗೆ ಮಾತ್ರ ಎಂದು ತಿಳಿದುಬಿಟ್ಟರೆ ತಪ್ಪಾಗಿ ಬಿಡುತ್ತದೆ. ಪದಗಳು ಬೇರೆ ಬೇರೆ ರೀತಿಯಲ್ಲಿ ನಮಗೆ ಬೇಕಾಗುತ್ತದೆ. ಬರೇ ಹಸಿವೆ ಹಿಂಗಿಸುವುದಕ್ಕಷ್ಟೇ ಅಲ್ಲ.
ಪದಗಳ ಬಗ್ಗೆಗಿನ ಈ ಕಿರುಟಿಪ್ಪಣಿಯಿಂದ ಓದಿದವರಿಗೆ ಸ್ವಲ್ಪವಾದರೂ ಅನುಕೂಲವಾಗಬಹುದು ಎಂಬುದು ನನ್ನ ಎಣಿಕೆ.

~.~
  • anivaasi ರವರ ಬ್ಲಾಗ್
  • Login or register to post comments
  • 1453 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 12, 2007 - 2:17pm — ASHOKKUMAR

Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ

ASHOKKUMAR's picture

ಪದಗಳನ್ನು ಉಪ್ಪಿನಲ್ಲಿ ಹಾಕಿಟ್ಟು ಬೇಕಾದಾಗ ಬಳಸಬಹುದೇ? ಹಾಗೇ ಬಿಸಿಲಿಗೆ ಒಣಗಿಸಿ,ನಿಧಾನವಾಗಿ ಬಳಸಿದರೆ ಹೇಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 12, 2007 - 2:38pm — mahesha

ಒರೆಗಳ ಬಳಕೆಯ ಬಗ್ಗೆ ಒಂದು ಕಿರುಟಿಪ್ಪಣಿ

mahesha's picture

ಒಟ್ಟಿನಲ್ಲಿ ನೀವು

ಮಾಡದೊಡಗಿರುವುದು ಯಾವ ತಿಂಡಿಯನ್ನು?

ಪದವುಪ್ಪಿಟೇ?
ಒರೆಯ ಒಗ್ಗರಣೆಯೋಗರವೇ?
ವರ್ಡು ಪಾಯಸವೇ?
ಶಬ್ದದ ಸಾಂಬಾರೇ?
ಸದ್ದಿನ ಚಕ್ಕುಲಿಯೇ?
ವ್ಯಂಜನd ವಿಚಿತ್ರಾನ್ನವೇ?

ಯಾವುದು? Laughing out loud

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 13, 2007 - 8:49pm — Yamini

ಬೆಳ್ಳಿ ರೇಖೆ

Yamini's picture

ಬರೆಯುವುದಕ್ಕೆ ಹೆದರಿಕೆಯಾಗುವಷ್ಟು ಭಾಷೆ, ಪದ ಶುದ್ಧಿಯ ಚರ್ಚೆ ನಡೆಯುತ್ತಿರುವಾಗ ನಿಮ್ಮ ಲೇಖನ ಕತ್ತಲಲ್ಲೊಂದು ಬೆಳ್ಳಿರೇಖೆಯಂತೆ ಭಾಸವಾಯಿತು. ನಮಗೆ ಬೇಕಿರುವಂತೆಯೂ ಪದಗಳನ್ನು ಬಳಸಬಹುದಲ್ಲ! ಸಮಾಧಾನವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 13, 2007 - 10:44pm — hpn

ಉ: ಬೆಳ್ಳಿ ರೇಖೆ

hpn's picture

ಯಾಮಿನಿಯವರೆ, ಭಾಷಾ ಪೋಲಿಸರ ಬಗ್ಗೆ ತಲೆಕೆಡಿಸಿಕೊಂಡು ಬರೆಯುವುದನ್ನ ನಿಲ್ಲಿಸಿಬಿಟ್ಟೀರಿ ಮತ್ತೆ. ಬರೆಯುವಾಗ ಎಂದಿಗೂ ಪದ ಬಳಕೆಯ ಬಗ್ಗೆ ಹಳೆಗನ್ನಡೋತ್ತಮರಂತೆ ಆಲೋಚಿಸುತ್ತ ಕುಳಿತುಕೊಳ್ಳಲಾಗದು.

ನನಗೆ ಅಚ್ಚರಿ ತರುತ್ತಿರುವ ವಿಷಯವೆಂದರೆ ಸಂಪದದಲ್ಲಿ ಭಾಷೆಯೆ policing ನಡೆಸಲು ಯತ್ನಿಸುತ್ತಿರುವ ಸದಸ್ಯರು ಹೆಚ್ಚು ಕಡಿಮೆ ಎಲ್ಲರೂ (ಇರುವುದೇ ಮೂರು ಜನ) ನನ್ನ ವಯಸ್ಸಿನವರೇ, ಜೊತೆಗೆ ಮೂರರಲ್ಲಿ ಇಬ್ಬರು ನನಗೆ ತಿಳಿದಿರುವವರು ಮತ್ತು ಐ ಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು.

ಈಗ ವಾಸ್ತವವನ್ನು ಪರಿಶೀಲಿಸೋಣ. ಎ ಸಿ ರೂಮಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಭಾಷೆಯ ಬಗ್ಗೆ ಆಲೋಚಿಸುವುದು ದೂರದ ದೆಹಲಿಯ ಏ ಸಿ ರೂಮಿನಲ್ಲಿ ಕುಳಿತ ರಾಜಕಾರಣಿ ಬರ ಹಾಗು ರೈತರ ಆತ್ಮಹತ್ಯೆಯ ಬಗ್ಗೆ ಆಲೋಚಿಸಿದಂತೆ. ಎದುರಿಗೆ ಏನು ಪುರಾವೆಗಳಿದ್ದರೂ ಉಪಯೋಗ ತಲುಪಬೇಕಾದವರಿಗೆ ಉಪಯೋಗವಾಗದಂತಹ ನಿಲುವುಗಳೇ ಹೊರಬರುವುದು ಜಾಸ್ತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 9:35am — Sunil Jayaprakash

ನನಗೆ ಗೊತ್ತಿತ್ತು ;)

Sunil Jayaprakash's picture

ಲೋ, ಹರಿ ನನಗೆ ಗೊತ್ತಿತ್ತು ಕಣೋ, ನೀನು ಇದಕ್ಕೆ ಗ್ಯಾರೆಂಟಿ ಸೇರಿಸುತ್ತೀಯಾ ಅಂತ Eye-wink LOL. ಇರಲಿ ಸರಳವಾದ ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುತ್ತಿರುವ ಶಂಕರಭಟ್ಟರಿಗೇ, ಪಂಡಿತೋತ್ತಮರೆನಿಸಿಕೊಂಡ ಅನೇಕ ಬಿರುದಾಂಕಿತರು "ಕೂಚುಬಟ್ಟ, ಚಂಕರ ಪಟ್ಟ, ಪಯಂಕರ ಪಟ್ಟ" ಎಂದೆಲ್ಲ ಬಿರುದಿತ್ತಿರುವಾಗ, ನಮ್ಮ ಮೇಲಿನ ಆಪಾದನೆ ಯಾವ ಮೂಲೆಯದ್ದು. ಅಂದ ಹಾಗೆ, ನಿನಗೆ ಗೊತ್ತಿದೆಯೋ ಇಲ್ಲವೋ, ಯಾಮಿನಿಯವರಿಗೆ ಭಯವಾದ ಹಾಗೆ, ಕನ್ನಡದಲ್ಲಿ ಜ್ಞಾನದ ಹುಡುಕಾಟವನ್ನು ಮೆಚ್ಚಿದವರೂ ತುಂಬಾ ಮಂದಿ. ಅವುಗಳು ಆಯಾ ಎಳೆಗಳಲ್ಲಿ ಮತ್ತು ನಮಗೆ ಬಂದ ವೈಯಕ್ತಿಕ ಮೇಯ್ಲುಗಳಲ್ಲಿ ವ್ಯಕ್ತವಾಗಿದೆ. ಅದು ಇಲ್ಲಿ ಅಪ್ರಸ್ತುತ.

@ಯಾಮಿನಿ,
ಅಂದ ಹಾಗೆ. ನೀವು ಗಮನಿಸಿದ್ದೀರೋ ಇಲ್ಲವೋ, ಬರೆಯುವವರು ಮೂರೇ ಜನ (ಇದು ಬರೀ ಹರಿಯ ಪ್ರಕಾರ, ಆದರೆ ಕನ್ನಡದ ಬಗ್ಗೆ ಬರೆದವರು, ಬರೆಯುತ್ತಿರುವವರು ಇನ್ನೂ ತುಂಬಾ, ಕಳೆದೆರೆಡು ವಾರಗಳ ಚರ್ಚೆಗಳನ್ನು ಫಾಲೋ ಮಾಡಿದ ಎಂಥವರಿಗೂ ತಿಳಿದೀತು). ಆದರೂ, ನಾವು ಬರೆದದ್ದನ್ನು ಓದಿ ಅದರಲ್ಲಿರುವ ಸತ್ಯಾಸತ್ಯತೆಯನ್ನು ಕಂಡುಕೊಂಡು, ನಮ್ಮದೇ ಕನ್ನಡವನ್ನು ಸರಳವಾಗಿಸಿಕೊಳ್ಳುವ ಕಡೆ, ತುದಿಗಾಲಲ್ಲಿ ನಿಂತಿರುವವರು ತುಂಬಾ ಮಂದಿ. ಬಹುಶಃ ನಾವು ಮೂವರು (ಮತ್ತೆ, ಬರೀ ಹರಿ ಪ್ರಕಾರ) ಬರೆದಿರುವ ಲೇಖನಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾದದ್ದು ನಾವುಗಳು, ಸಂಸ್ಕೃತವಾಗಲೀ, ಇಂಗ್ಲೀಷಾಗಲೀ, ಹಳಗನ್ನಡವಾಗಲೀ, ಹೊಸಗನ್ನಡವಾಗಲೀ ಯಾರ ಮೇಲೂ ಹೇರಿಲ್ಲ. ಒಟ್ಟಿನಲ್ಲಿ ಜ್ಞಾನ ಕನ್ನಡದಲ್ಲಿ ಹಂಚಿಕೆಯಾಗಬೇಕು. "ಹೀಗಲ್ಲ, ಹೀಗೂ ಕನ್ನಡದಲ್ಲಿ ಸರಳವಾಗಿ ಹೇಳಬಹುದು" ಎಂದು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದು ಜನರಿಗೆ ಇಷ್ಟವಾದರೆ, ಬಳಸುತ್ತಾರೆ. ಅದು ಅವರವರ ಇಷ್ಟ. ಇದಕ್ಕೆ ನೀವೇಕೆ ಭಯಪಟ್ಟುಕೊಳ್ಳಬೇಕು ?. ಕನ್ನಡವು ಜಾಳು, ಎಂಬ ಮನಸ್ಥಿತಿಯನ್ನು ಆಧಾರಸಮೇತ ವಸ್ತುನಿಷ್ಟವಾಗಿ ಕನ್ನಡವು ಜಾಳಲ್ಲ ಎಂದು ನಿರೂಪಿಸಿವುದು ಒಬ್ಬ ಸಹೃದಯನಾಗಿ, ನನಗೆ ಯಾವ ರೀತಿಯ ಅಪರಾಧವೂ ಕಾಣಿಸದು. ಇದನ್ನು ಒಪ್ಪಿಕೊಳ್ಳುವ ಬಗೆ ಇಲ್ಲದೆ ಏನೇನೋ ಆಪಾದನೆ ಮಾಡುವುದು ಸಂಕುಚಿತ ಮನೋಭಾವವಷ್ಟೇ (ನೀವು ಹಾಗೆ ಎಂದು ನಾನು ಹೇಳುತ್ತಿಲ್ಲ).

ನೋಡಿ, ನಿಮಗೆ ಏನು ಹೇಳಬೇಕೋ ಅದನ್ನು ನಿರ್ಭಯವಾಗಿ ಹೇಳುವ ಹಕ್ಕು ನಿಮಗೆ ಇದೆ. ಭಯಪಟ್ಟುಕೊಂಡು ಬರೆಯುವುದನ್ನು ನಿಲ್ಲಿಸಬೇಕಾಗಿಲ್ಲ. ಅಂದ ಹಾಗೆ, ನೀವು ಇನ್ನೂ ಭಯದಲ್ಲಿಯೇ ಇರುವಿರಾದರೆ (ನನಗೆ ಇದರ ಬಗ್ಗೆ ಅನುಮಾನ), ಕವಿರಾಜಮಾರ್ಗದಲ್ಲಿ ಹೀಗೆ ಹೇಳಿದೆ, "ಮದ, ಮಾನ, ಮಾಯ, ಭಯ, ಲೋಭ, ವಿಷಾದ, ಹರ್ಷಾಭ್ಯುದಿ" ಇವುಗಳು ಅಂತರಂಗ ರಿಪುವರ್ಗ. ಭಯಪಟ್ಟಕೊಂಡು ಬರೆಯುವುದು, ಅಥವಾ ಭಯಪಟ್ಟುಕೊಂಡು ಬರೆಯುವುದನ್ನು ನಿಲ್ಲಿಸುವುದು, ತನ್ನತನವನ್ನು ಇನ್ನೂ ಕಂಡುಕೊಳ್ಳದಿರುವ ಸಂಕೇತ. ಆವರಣದ ಬಗ್ಗೆ ನಿರ್ಭಯವಾಗಿ ನಿಮ್ಮ ಅನಿಸಿಕೆ ಮುಂದಿಟ್ಟಿರುವ ನೀವು, ಇದಕ್ಕೆ ಹೊರತಾದವರು ಎಂದು ಭಾವಿಸುತ್ತೇನೆ.

@ಎಲ್ಲರಿಗೂ,
ಕನ್ನಡದ ಬಗೆಗಿನ ಮಾತನ್ನು ಕಂಡು ಕೆಲವರಿಗೆ ಭಯವಾಗುವುದಾದರೆ, ಅದು ಎಲ್ಲಿ ತಾವು ಇಷ್ಟು ವರ್ಷ ಆಚರಿಸಿಕೊಂಡು ಬಂದ ಮಡಿವಂತಿಕೆ ದೂರವಾಗಿಬಿಡುವುದೋ ಎಂಬ ಶಂಕೆ ಅಥವಾ ಎಲ್ಲಿ ತಾವು ಇಷ್ಟು ವರ್ಷ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದ ಜ್ಞಾನ ಇತರರ ಪಾಲಾಗುವದೋ ಎಂಬ ದುಗುಡ ಕಾಡಿರಬಹುದು. (ಈ ಕಡೆಯ ಮಾತು ಕೂಡ ಯಾಮಿನಿಯವರನ್ನು ಉದ್ದೇಶಿಸಿದ್ದಲ್ಲ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 3:06pm — mahesha

ಅಂಜಿಕೆ

mahesha's picture

Quote:

ಕನ್ನಡದ ಬಗೆಗಿನ ಮಾತನ್ನು ಕಂಡು ಕೆಲವರಿಗೆ ಭಯವಾಗುವುದಾದರೆ, ಅದು ಎಲ್ಲಿ ತಾವು ಇಷ್ಟು ವರ್ಷ ಆಚರಿಸಿಕೊಂಡು ಬಂದ ಮಡಿವಂತಿಕೆ ದೂರವಾಗಿಬಿಡುವುದೋ ಎಂಬ ಶಂಕೆ ಅಥವಾ ಎಲ್ಲಿ ತಾವು ಇಷ್ಟು ವರ್ಷ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದ ಜ್ಞಾನ ಇತರರ ಪಾಲಾಗುವದೋ ಎಂಬ ದುಗುಡ ಕಾಡಿರಬಹುದು.

ಸುನಿಲ, ಒಪ್ಪವಾದ ಮಾತು...!!!

AC ರೂಮಲ್ಲಿ ಕೂತು, ನಿನಗಿಂತ ಅರಿವಲ್ಲಿ, classಅಲ್ಲಿ ಕೆಳಗಿದ್ದು, ಸಾಸಿರ ವರುಸಗಳಿಂದ ಕೀಳೆಸಿಕೊಂಡು ಮೋಸ ಹೋದವರ ಬಗ್ಗೆ ನಿನ್ನ ಉಂಕೇ, ನಿಗವೇ ಸಾಕು, ಇಂತಹ ಉಂಕೇ ಇಲ್ಲದ 'ಧರ್ಮಿಷ್ಠ; ನೀತಿವಂತ; ಮಡಿವಂತ; ಪಂಡಿತ" ನಿಗಿಂತ ಮೇಲು.

"ದೇವರ ಪ್ರಸಾದವಾದ ಓಗರವೂ ಒಕ್ಕಲಿಗ(ರೈತ)ನ ಬೆವರಿಂದ ಆದದ್ದೇ"
"ಕಡವಳನ ಪಿತಾಂಬರವೂ ಒಕ್ಕಲಿಗನ ನೆಲದ ಹತ್ತಿಯೇ"
"ಕಡವಳನಿಗೆ ಸುರಿಯುವ ಹಾಲು ಗೊಲ್ಲನು ಮಳೆಯಲ್ಲಿ ಬಿಸಿಲಲ್ಲ ಮೇಯಿಸಿದ ಆಕಳಿಂದಲೇ"
"ಯಾವ ಮಂತ್ರವೂ , ತಂತ್ರವೂ, ಬಕುತಿಯ ಆವೇಷವೂ, ಇವನ್ನು ಪಣ್ಣಲಾರವು(produce ಮಾಡಲಾರವು) Laughing out loud "
=========================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 2:54pm — mahesha

AC ಕೋಣೆ

mahesha's picture

Quote:

ಈಗ ವಾಸ್ತವವನ್ನು ಪರಿಶೀಲಿಸೋಣ. ಎ ಸಿ ರೂಮಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಭಾಷೆಯ ಬಗ್ಗೆ ಆಲೋಚಿಸುವುದು ದೂರದ ದೆಹಲಿಯ ಏ ಸಿ ರೂಮಿನಲ್ಲಿ ಕುಳಿತ ರಾಜಕಾರಣಿ ಬರ ಹಾಗು ರೈತರ ಆತ್ಮಹತ್ಯೆಯ ಬಗ್ಗೆ ಆಲೋಚಿಸಿದಂತೆ. ಎದುರಿಗೆ ಏನು ಪುರಾವೆಗಳಿದ್ದರೂ ಉಪಯೋಗ ತಲುಪಬೇಕಾದವರಿಗೆ ಉಪಯೋಗವಾಗದಂತಹ ನಿಲುವುಗಳೇ ಹೊರಬರುವುದು ಜಾಸ್ತಿ.

HPN...

ನೀನು AC ಕೋಣೆಯಲ್ಲಿ ಇಲ್ಲವೇ? ನಿನ್ನ ಕೆಲಸವೂ IT ಅಲ್ಲವೇ?( ನನಗೆ ದಿಟವಾಗಲು ತಿಳಿಯದು )

ಕನ್ನಡಿಗರೂ AC ಕೋಣೆಯಲ್ಲಿ ಕುಳಿತು ಕನ್ನಡದ ಬಗ್ಗೆ ಮಾತಾಡಿದರೆ ಅದು ಹಗುರವೇ?
ಬರಹದ ಶೇಷಾದ್ರಿ ವಾಸು ಮುಂತಾದವು AC ಕೋಣೆಯಲ್ಲಿ ಕುಳಿತ IT ಕಂಪೆನಿಯ ತತ್ತಿಗರೇ!!!

ಸಂಪದಲ್ಲಿ ಕನ್ನಡಿಗ ಯಾವ ಗೆಯ್ಮೆ ಮಾಡುವನು ಎಂಬುದು ಹೇಗೆ ಮುಕ್ಯ, ಪ್ರಸ್ತುತ?

Quote:

ಎದುರಿಗೆ ಏನು ಪುರಾವೆಗಳಿದ್ದರೂ ಉಪಯೋಗ ತಲುಪಬೇಕಾದವರಿಗೆ ಉಪಯೋಗವಾಗದಂತಹ ನಿಲುವುಗಳೇ ಹೊರಬರುವುದು ಜಾಸ್ತಿ.

"ಅವರು ಬರಿ ಮಾತಾಡಿಕೊಂಡ ಇದ್ದಾರೆ. ಕನ್ನಡಕ್ಕಾಗಿ ಯಾವ ಕೆಲಸವೂ ಮಾಡುತ್ತಿಲ್ಲ, ತಲುಪಬೇಕಾದವರಿಗೆ ತಲುಪಿಸಲು ಮೊಗಸುತ್ತಿಲ್ಲ" ಎಂಬುದಕ್ಕೆ ಏನು ಪುರಾವೆ? Sad

ಸಂಪದದ 'ದೊರೆ(owner)'ಯಾದ ನೀನು, ಸಂಪದದಲ್ಲಿ
"ಹಳೆಗನ್ನಡ, ಕನ್ನಡ ಗ್ರಾಮರ್‍, ಒರೆಗಳ ಅರಿವು " ಇವನ್ನು ಯಾರು ಎತ್ತಬಾರದು ಎಂದು ಹೇಳಿಬಿಡಬಹುದು. ಆಗ ಯಾವುದು "ನಿಷಿದ್ಧ" ಎಂದು ಎಲ್ಲರಿಗೂ ತಿಳಿಯುವುದು.

ಇಲ್ಲಿ ಕನ್ನಡದ ನುಡಿಯ, ಒರೆಯ ಬಗ್ಗೆ ಮಾತಾಡುವಾಗ ಎಲ್ಲರೂ ಪಾಲ್ಗೊಳ್ಳಿ ಎಂದು ಯಾರು ಬೇಡುತ್ತಿರುವರು? ಇಲ್ವೇ ಅಂತಹ ರೂಲು ಕಟ್ಟಳೆ ಇದೆಯೇ?

ಯಾರಿಗೆ ಅಂತಹ ಸಂಗತಿಗಳಲ್ಲಿ ಹುರುಪಿದೆಯೋ, ಅವರು ಅಲ್ಲಿ ಪಾಲ್ಗೊಳ್ಳುವರು.

ಉದಾಹರಣೆಯಾಗಿ ನೀನು, ಯಾವಿನಿ, ಮುಂತಾದವರಿಗೆ, ಅಲ್ಲಿ ಮಾತಾಡುವುದು, ಅಂತಹ ಸಂಗತಿಗಳು ಬೇಡ, ಇಷ್ಟವಿಲ್ಲವೆಂದರೆ ನೀವು ಅಲ್ಲಿ ಮಾತಾಡದೇ ಇದ್ದರೆ ಆಯಿತು.

ಇನ್ನು
"ಸಂಪದ' ಅಂತರಜಾಲದಲ್ಲಿ ಕನ್ನಡಿಗರ ನಡುವೆ ಕನ್ನಡದಲ್ಲಿ ಸಂವಹನ ಮೂಡಿಸುವ ಉದ್ದೇಶದಿಂದ ಹುಟ್ಟುಹಾಕಿದ ..." ಅಂತ ಇದೆ..
ಹಾಗಾದರೆ ಕನ್ನಡದಲ್ಲಿ 'ಸಂವಹನ' ಮಾಡಿ ಆದರೆ ಕನ್ನಡದ ಕುರಿತು ಬೇಡ ಅಂತಲೇ?
==============================================================

ನನ್ನ ಮಾತಿನಲ್ಲಿ "ಶಿಷ್ಟಾಚಾರ" ದೋಷಗಳಿದ್ದರೆ ಮನ್ನಿಸಿ!!! errors in courtesy!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 2:16am — ವೈಭವ

Re: ಉ: ಬೆಳ್ಳಿ ರೇಖೆ

ವೈಭವ's picture

HPNರವರೆ,

  ಮೊದಲೆ ಹೇಳಿದ ಹಾಗೆ ಇದು ಇತಿಹಾಸದ ಓದು...ಪದಗಳ ಇತಿಹಾಸದ ಓದು(ಹಳೆಗನ್ನಡದ ಪದಗಳು, ಅಣ್ಣೆ ಕನ್ನಡದ ಪದಗಳ ಹುಡುಕಾಟ ಈ ಚರ್ಚೆಗಳು).. ಇದನ್ನು ಕಟ್ಟುಪಾಡು ಅಂತ ಇತರರು ಏಕೆ ತಿಳಿಬೇಕು ಅನ್ನೋದೆ ನನಗೆ ಅರ್ಥ ಆಗ್ತಾ ಇಲ್ಲ... ಇನ್ನು ಈ ತರದ ಪದಗಳ ಚರ್ಚೆ ಮಾಡಿದರೆ ಕನ್ನಡ ಉದ್ಧಾರ ಆಗುಬಿಡುತ್ತೆ ಅಂತಾನೂ ಇಲ್ಲ. Smiling

ಕೆಲವು ಸಂಪದಿಗರಿಗೆ(ನನಗೂ ಕೂಡ) ಕನ್ನಡವು ಹೇಗೆ ಸ್ವಂತಿಕೆ (concecptually independent ಮತ್ತು traditionally independent) ಉಳಿಸಿಕೊಳ್ಳಬಹುದು ಅಂತ ತಿಳಿದಿಕೊಳ್ಳುವ ಹಂಬಲವಿದೆ. ಆದ್ದರಿಂದ ಅಂತ ಚರ್ಚೆಗಳು ಜಾಸ್ತಿ ಆಗಿದೆ. ಹಾಗಂದೊಡೆ ಎಲ್ಲರಿಗೂ ಈ ಹಂಬಲ ಇರ್ಬೇಕು ಅಂತೇನೂ ಇಲ್ಲ..

ಒಟ್ಟಿನಲ್ಲಿ ಪದಗಳಿಗೆ ಕಟ್ಟುಪಾಡು ಯಾರು ಯಾರಿಗೂ ಹೇರ್ತಾ ಇಲ್ಲಾ, ಹೇರಲೂಬಾರದು.....ಅವರವರ ಕಷ್ಟ - ಇಷ್ಟ ..ಅಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 2:37pm — kannadakanda

ಉ: ಬೆಳ್ಳಿ ರೇಖೆ

kannadakanda's picture

ಹರಿಪ್ರಸಾದ್ ನಾಡಿಗರೇ,
ನಮ್ಮ ವಿಚಾರ ಸಮಗ್ರವಾಗಬೇಕು. ಸಂಪೂರ್ಣವಾಗಬೇಕು. ಆಗ ಹೞೆಯ ಹೊಸದರೆಲ್ಲದಱ ಅಱಿವು ಬೇಕಾಗುತ್ತದೆ. ಬಱಿ ಸದ್ಯಕ್ಕಷ್ಟೆ ಇರುವ ವಿಚಾರಗಳಿಂದ ಸಂಪೂರ್ಣ ಅಱಿವಾಗದು. ಹೞೆಯ ಹೊಸದೆಲ್ಲವನ್ನೂ ಜೀರ್ಣಿಸಿಕೊಳ್ಳಬೇಕು. ನಮಗೆ ಬೇಕಾದ್ದನ್ನು ತೆಗೆದುಕೊಳ್ಳುತ್ತೇವೆಂದರೆ ಆಗ ಎಲ್ಲರಿಗೂ ಉತ್ತರ ಹೇೞಲಾಗದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 2:29pm — mahesha

ಬೆಳ್ಳಿ ಗೆರೆ

mahesha's picture

Laughing out loud

ಕನ್ನಡದ ಒರೆಗಳ ಬಗ್ಗೆ ನಾನು ಇಲ್ಲಿ ಮಾತಾಡುತ್ತಾ ಬಂದಿರುವುದರಿಂದ, ನಿಮಗೆ ಮಾರುಲಿಯುತ್ತಿದ್ದೇನೆ.

ಗವನಕ್ಕೆ:
"ಹಂಸಾನಂದಿಯ ಸಂಗೀತದ ಎಳೆಯಲ್ಲಿ, ಯಾರೂ ವ್ಯಾಕರಣ ಚಕಾರ ಎತ್ತಿಲ್ಲ"
"ಧರ್ಮಾಂಧತೆ" ಯ ಎಳೆಯಲ್ಲೂ ಇರಲಿಲ್ಲ.

ಇನ್ನೂ ಈ ಎಳೆಯಲ್ಲಿ "ಭಾಷಾಶುದ್ಧಿ"/"ನುಡಿಯಣ್ಣೆ"ಯನ್ನು ಎತ್ತಿದ್ದು out of topic. ನಾವು ಆ ಕಾದಂಬರಿ ಬಗ್ಗೆ ಮಾತಾಡುತ್ತಿದ್ದೆವು.

ಇನ್ನು

Quote:

ಬರೆಯುವುದಕ್ಕೆ ಹೆದರಿಕೆಯಾಗುವಷ್ಟು ಭಾಷೆ, ಪದ ಶುದ್ಧಿಯ ಚರ್ಚೆ ನಡೆಯುತ್ತಿರುವಾಗ ನಿಮ್ಮ ಲೇಖನ ಕತ್ತಲಲ್ಲೊಂದು ಬೆಳ್ಳಿರೇಖೆಯಂತೆ ಭಾಸವಾಯಿತು. ನಮಗೆ ಬೇಕಿರುವಂತೆಯೂ ಪದಗಳನ್ನು ಬಳಸಬಹುದಲ್ಲ.

ಇದರ ಹಿಂದಿನ ಭಾವವೇನು? ವ್ಯಂಗ್ಯ, ಕುಹುಕ, ಕೊಂಕು?( ಇದು ಮುಕ್ಯ )!!!

ನಾವು ನಮ್ಮ ಪಾಡಿಗೆ ನಮ್ಮ ನುಡಿಯ ಒಳಹೊರಗಳ ಬಗ್ಗೆ ಮಾತಾಡುತ್ತಾ ಇದ್ದೀವಿ. ನಿಮಗೆ ಅದರಲ್ಲಿ ಹುರುಪಿದ್ದರೆ, ನೀವು ಬಂದು ಮಾತಾಡಬಹುದು. !!
ನಮ್ಮ ಹುರುಪಿನ ಸಂಗತಿಯ ಬಗ್ಗೆ ಮಾತಾಡುವುದು ನಮ್ಮ personal taste. ಅದು ಎಲ್ಲರಿಗೂ ಹಿಡಸದಿದ್ದರೆ ಅದಕ್ಕೆ ಏನು ಮಾಡಲಾಗದು.

ಸಂಪದದಲ್ಲಿ ನುಡಿಯ ಒಳಹೊರಗಳ ಬಗ್ಗೆ, ಗ್ರಾಮರ್ರ‍ ಬಗ್ಗೆ ಮಾತಾಡುವ "ಅಭಿವ್ಯಕ್ತಿ ಸ್ವಾತಂತ್ರ್‍ಯ" ಎಲ್ಲರಿಗೂ ಇದೆ.

ಈ ಎಳೆಯ ಮಾತುಕತೆಯನ್ನು ಈ ಮೇಲಿನ ಕಮೆಂಟು ದಾರಿ ತಪ್ಪಿಸಿತು. ಆ ಕಾದಂಬರಿಯ ಸಂಗತಿ ಹೋಗಿ "ನುಡಿಯಣ್ಣೆ" ಬಂದಿತು.
"ನುಡಿ"ಯ ಬಗ್ಗೆ ಬೇಕಾದನಿತ್ತು ಎಳೆಗಳಿರುವಾಗ ಅಲ್ಲೇ ಈ ಸಂಗತಿ ಎತ್ತ ಬಹುದಿತ್ತು.
========================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 3:44pm — Yamini

Re: ಬೆಳ್ಳಿ ಗೆರೆ

Yamini's picture

ಕ್ಷಮಿಸಿ. ನೀವು ಚರ್ಚಿಸುತ್ತಿರುವ ಭಾಷಾಶಾಸ್ತ್ರ ಸಂಬಂಧೀ ವಿಷಯಗಳು ನನಗೆ ಗೊತ್ತಿಲ್ಲ. ಅದನ್ನು ಕುಹಕ ಮಾಡುವುದೂ ನನ್ನ ಉದ್ದೇಶವಲ್ಲ. ಹೇಗೆ ಬರೆದವರೂ ತಪ್ಪಾಗುತ್ತದೆಯಲ್ಲಾ ಎಂದು ಭಯವಾದದ್ದು ಹೌದು. ಇನ್ನು ಮುಂದೆ ಈ ತಪ್ಪು ಮಾಡುವುದಿಲ್ಲ.

-ಯಾಮಿ 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 4:30pm — mahesha

Re: ಬೆಳ್ಳಿ ಗೆರೆ

mahesha's picture

ಯಾಮಿನಿಯವರೆ,

ನೀವು ಕ್ಷಮೆ ಕೇಳಬೇಕಿಲ್ಲ.!!! ಒಂದು ಸಂಗತಿ ತಿಳೀದೇ ಇರುವುದು ತಪ್ಪಲ್ಲ.!

ನೀವು ಹೇಗೆ ಬರೆದರೂ ಸರಿಯೇ.... ನಾವು ಅದನ್ನೇ ಹೇಳ ಹತ್ತಿರುವುದು..

ಬಾಗ್ಯ/ಬಾಗಿಯ/ಭಾಗ್ಯ ಎಲ್ವೂ ಸರಿ.. ಬರಿ ಭಾಗ್ಯ ಒಂದೇ ಅಲ್ಲ. ( ಇದನ್ನೇ ಶಂಕರಬಟ್ಟರ ಹೊತ್ತಗೆಗಳೂ ಹೇಳುವುದು )

ಇದನ್ನೇ ಕನ್ನಡವನ್ನು ಕಠಿಣ ಮಾಡಿರುವ ಸಂಸ್ಕೃತಪದಗಳು" ಕಿರುಬರಹದಲ್ಲಿ ಹೇಳಬಯಸಿದ್ದು.

ಪಟ್ಟಣದವರಿಗೆ, ಮೇಲುಮಂದಿಗೆ( ಮೇಲು ಅಂತ ಅಂದುಕೊಂಡೋರು ), ಇಂಗ್ಲೀಸು-ಸಂಸ್ಕ್ರುತ ಕಲಿತವರಿಗೆ, ಚೆನ್ನಾಗಿ ಓದಿಕೊಂಡವರಿಗೆ ಈಗ ಇರುವ ಕನ್ನಡ ಸುಲಬ, ಕಾರಣ ಅವರಿಗೆ( ಒಂದು ಪಂಗಡಕ್ಕೆ ) ಅದು ಚೆನ್ನಾಗಿ ಗೊತ್ತು.

ಆದರೆ, ನಮಗಿಂತ ಹೆಚ್ಚು ಪಾಟಿಯಲ್ಲಿ( quantity)ಯಲ್ಲಿ ಇರುವ, ಕನ್ನಡವನ್ನು ಬಿಟ್ಟು ಬೇರಾವ ನುಡಿಯನ್ನೂ ಅರಿಯದ, ತಮ್ಮನ್ನು ತಮ್ಮ ನುಡಿಯನ್ನು, ಉಲಿ(pronounce)ಯನ್ನು ಕೀಳೆಂದು ಮೋಸ ಮಾಡುವವರ, ಇದುರು ನಿಲ್ಲಲು ಅರಿವು/ತಿಳಿವು ಸಾಲದೇ ಒದ್ದಾಡುವವರು, ಕೀಳರಿಮೆ ಪಡುವವರು, ನಮ್ಮಂತೆ ತಾವು ಆಡುವುದನ್ನು, ಉಂಕಿಸುವುದನ್ನು(think), ಹೇಳಬಯಸುವುದನ್ನು, ಸಲೀಸಾಗಿ ಹೇಳಬೇಕಾದರೆ ಅವರಿಗೆ ಅವರದೂ ಕೂಡ ಅಣ್ಣೆಗನ್ನಡ, ಮೇಲ್ಗನ್ನಡ. ಅದುವೇ ದಿಟವಾದುದು ಎಂಬ ನಂಬಿಕೆ, ದೈರ್ಯ, ಮೇಲರಿಮೆ ಬರಬೇಕು. ತಿಳಿದವರು, ಅರಿತವರು, ಓದಿಕೊಂಡವರು ಬರಿಸಬೇಕು.

ಇಂದು 'ಮೇಲು' ಎಂದು ಬಡೆದುಕೊಳ್ಳುವವರ ಅಬ್ಬರದಲ್ಲಿ ಅವರ ದನಿ ಕೇಳದೇ ಹೋಗಿದೆ. ಈ ಮೇಲು ಜನರೇ ಕನ್ನಡಕ್ಕೂ ಕಟ್ಟುಪಾಡುಗಳನ್ನು, ಉಚ್ಚಾರದೋಷವೆಂಬ ಬೇಲಿವನ್ನು, ಅವರಿಗೆ ಉಲಿಯಲೇ ಆಗದ ಒರೆ(ಪದ)ಗಳ ಹೊರೆಯನ್ನು ,'ಶಿಷ್ಟ-ಸಭ್ಯ' ಎಂಬ ಗರ್ಭಗುಡಿಯನ್ನು, ಕಟ್ಟಿ ಅವರನ್ನು ದೂರ ತಳ್ಳಿ, ಹೊರಗಿರಿಸಿದೆ.

ಈ 'ಮೇಲು'ಮಂದಿ ಕನ್ನಡ ಬೇಡವಾದರೆ, ಇಂಗ್ಲೀಸಾಡುವರು, ಸಂಸ್ಕೃತ-ಪಾಡುವರು, ಹಿಂದಿ ಕಲಿಯುವರು, ಅವರಿಗೆ ಕನ್ನಡ ಬರಿ ಜುಟ್ಟಿನ ಮಲ್ಲೆ, ತಮ್ಮ ಪಾಂಡಿತ್ಯ ಪ್ರದರ್ಶನ, ತಾನು ದೊಡ್ಡ thinker ಎಂದು ತೋರಿಸುವ ತೋರಿಕೆಯ tool, ಕನ್ನಡ ನೆಲದಲ್ಲಿ ತಮ್ಮ ಹಿಡಿತದಲ್ಲಿ 'ಅರಿವಿನ ಕೋಟೆ'ಯನ್ನು ಬಿಗಿಯಾಗಿ ಇಟ್ಟುಕೊಳ್ಳುವ ambition. ಒಟ್ಟಿನಲ್ಲಿ ಒಂದು ಶೋಕಿಯ ಸರಕು..!!!

ಆದರೆ ಈ 'ಕೆಳ'ಮಂದಿಗೆ ಬರುವುದು ಕನ್ನಡವೊಂದೇ, ಅದೇ ಅವರ ಕೂಳುಗಳಿಸುವ ದಾರಿ, ಅದೇ ಅವರು ಜಗತ್ತನ್ನು ನೋಡುವ ಕಣ್ಣುಗಳು, ಕೇಳುವ ಕಿವಿಗಳು. ಅವರ ಮೂಗಿಗೆ ಬಲು ತೂಕವಾದ, ತೊಂದರೆಯಾದ, ಸಂಸ್ಕ್ರತ-ಇಂಗ್ಲೀಸು-ಉರ್ದು ಮುಂತಾದ ಹೊರನುಡಿಗಳ ಕಪ್ಪು-ಕನ್ನಡಕ ಬೇಡ. ಆ ಕನ್ನಡಕ ಅವರಿಗೆ ಕಣ್ಣು ದೋಷವನ್ನು ಕೊಡುವುದೇ ಹೊರತು, ಸರಿಯಾಗಿ ಕಾಣಿಸುವುದಿಲ್ಲ. ಆದರೆ ಅದನ್ನು ಇಂದು ಬಲವಂತವಾಗಿ, ಅವರಿಗೆ ಅರಿಯದಂತೆ ಮೋಸದಿಂದ ತೊಡಲಾಗುತ್ತಿದೆ.
ಅವರಿಗೆ "ಕುಕ್ಕುಟ ಪಾಲನೆ, ಬಾಹ್ಯಾಕಾಶ, ಗರ್ಭಣಿ ಶುಶ್ರುಷೆ, ನಿಧನ, ಭೋಜನ, ಖ್ಯಾತ, ಬೃಹತ್" ಬೇಡ, ಬದಲಿಗೆ ಕೋಳಿ ಸಾಕಣೆ, ಹೊರಬಾನು, ಬಸುರಿ ಆರೈಕೆ, ಸಾವು/ತೀರಿಕೊ, ಊಟ/ಕೂಳು, ಹೆಸರುವಾಸಿ, ದೊಡ್ಡ" ಬೇಕು.

======================================
ನನ್ನ ಕೈಯಲ್ಲಿ ಎಲ್ಲವೂ ಆಗದು. ಆಗುವದನ್ನೂ ಮಾಡದೇ ಹೋದರೆ .........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 1:54am — tksbhat

Re: ಬೆಳ್ಳಿ ಗೆರೆ

tksbhat's picture

ಮಹೇಶರು ಬೇರೊಬ್ಬರ ಬೇಕು-ಬೇಡಗಳನ್ನು ತಾವೆ ನಿರ್ಧರಿಸಿಕೊಂಡಿರುವಂತಿದೆ. ಹೊಟ್ಟೆ-ಬಟ್ಟೆಗೆ ಇಂಗ್ಲೀಷು ಬಳಸುವ ಐಟಿ-ಬಿಟಿ ಮಂದಿಗೆ ಕನ್ನಡ ಮಾತನಾಡುವವರ ಕುರಿತು ಬಹಳ ವಿಚಿತ್ರವಾದ ಸ್ಟೀರಿಯೋಟೈಪ್ ಇರುವುದು ಎದ್ದು ಕಾಣುತ್ತಿದೆ. ಬಸ್ಸು ಲಾರಿ ಬ್ಯಾಟು ಬಾಲು ಕನ್ನಡ ಮಾತನಾಡುವ ಕನ್ನಡಿಗರಿಗೆ ತಿಳಿಯುತ್ತದೆ. ಐಟಿ-ಬಿಟಿ ಮಂದಿ ಕನ್ನಡ ಬಳಸಿ ಶುದ್ಧಗೊಳಿಸಿ 'ಕನ್ನಡ ಸೇವೆ' ಮಾಡುತ್ತಿದ್ದೇವೆ, ಕನ್ನಡಕ್ಕೆ 'ಉಪಕಾರ' ಮಾಡುತ್ತಿದ್ದೇವೆ ಎಂಬ ಮನೋಭಾವದಿಂದ ಹೊರಬರಬೇಕಿದೆ.

- ಟಿ ಕೆ ಎಸ್ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 2:15pm — mahesha

Re: ಬೆಳ್ಳಿ ಗೆರೆ

mahesha's picture

Quote:

ಮಹೇಶರು ಬೇರೊಬ್ಬರ ಬೇಕು-ಬೇಡಗಳನ್ನು ತಾವೆ ನಿರ್ಧರಿಸಿಕೊಂಡಿರುವಂತಿದೆ.

ಹಾಗೆ ಇಲ್ಲ. !! ನೀವು ಭ್ರಾಂತರಾಗಬಾರದು( ಬಹುದುಗೆ opposite, optional )

Quote:

ಹೊಟ್ಟೆ-ಬಟ್ಟೆಗೆ ಇಂಗ್ಲೀಷು ಬಳಸುವ ಐಟಿ-ಬಿಟಿ ಮಂದಿಗೆ ಕನ್ನಡ ಮಾತನಾಡುವವರ ಕುರಿತು ಬಹಳ ವಿಚಿತ್ರವಾದ ಸ್ಟೀರಿಯೋಟೈಪ್ ಇರುವುದು ಎದ್ದು ಕಾಣುತ್ತಿದೆ.

ಆ ಬಗೆಯಲ್ಲಿ "ಸ್ಟೀರಿಯೋಟೈಪ್" ಕಾಣುವ ಕಣ್ಣುಗಳಿಗೆ ತಾನೆ. ಅದು ಅವರವರ ದೃಷ್ಟಿ; ದೃಷ್ಟಿದೋಷವೂ ಇರಬಹುದು.!!!

ಹಲವು ಕನ್ನಡದ ಕವಿಗಳೂ ಇಂಗ್ಲೀಸ್ ಕಲಿಸುವವರಾಗಿದ್ದರು/ಆಗಿದ್ದಾರೆ. ಈಗಲೂ ಕಸಾಪ ಅಧಿಯಕ್ಷರಾದ ಚಂಪಾ ಇವರು ಇಂಗ್ಲೀಷ್ ಶಿಕ್ಷಕರಾಗಿದ್ದವರೇ.

ಹಾಗಾದರೆ ಸಂಸ್ಕೃತದ ಪಂಡಿತರಿಗೆ ಏಕೆ ಕನ್ನಡದ ಉಸಾಬರಿ? ಅವರೂ ಸಂಸ್ಕೃತದಿಂದಲೇ ತಾನೆ ಹೊಟ್ಟೆಹೊರೆಯ್ತಿರೋದು.

"ಇಂದು ಸಂಸ್ಕೃತ ತುಂಬಿದ ಕನ್ನಡ ಮೀಡಯಂ ಓದುವುದಕ್ಕಿಂತ, ಇಂಗ್ಲೀಸ್ ಮೀಡಿಯಂ ಅಲ್ಲಿ ಓದೋದೇ ಲೇಸು." - ಇದು ನನ್ನ ಮಾತಲ್ಲ. ನೆನ್ನೆ ಬಂದ ದೀಪಕ್ ತಮ್ಮಯ್ಯ ಅವರ ಮಾತುಕತೆ ನೋಡಿದೋರಿಗೆ ಗೊತ್ತಿರುತ್ತೆ.!!!!

Quote:

ಐಟಿ-ಬಿಟಿ ಮಂದಿ ಕನ್ನಡ ಬಳಸಿ ಶುದ್ಧಗೊಳಿಸಿ 'ಕನ್ನಡ ಸೇವೆ' ಮಾಡುತ್ತಿದ್ದೇವೆ, ಕನ್ನಡಕ್ಕೆ 'ಉಪಕಾರ' ಮಾಡುತ್ತಿದ್ದೇವೆ ಎಂಬ ಮನೋಭಾವದಿಂದ ಹೊರಬರಬೇಕಿದೆ.

ಇದು ನಿಮ್ಮ ಸ್ವಂತ ನಿರ್ಧಾರ ತಾನೆ. ನೋಡಿ "ಮಹೇಶನು ತಾವೆ ನಿರ್ಧರಿಸಿಕೊಂಡಿರುವಂತಿದೆ" ಎಂದು ಹೇಳುವ ನೀವೇ, ಹೀಗೆ ನಿರ್ಧರಕ್ಕೆ ಹೊರಟಿರುವಿರುವಂತಿದೆ.

ಐಟಿ-ಬಿಟಿ ಮಂದಿಯೂ ಕನ್ನಡಿಗರೂ ತಾನೆ. ಕನ್ನಡಕ್ಕೆ ನೆರವಾಗೋದು ಅವರ ಹೊಣೆ ತಾನೆ. ಅದರಲ್ಲಿ ಅವರಿಗೂ ಅನುವಿದೆ ತಾನೆ.
ಬರಿ ಐಟಿ-ಬಿಟಿಯಲ್ಲಿ ಇಲ್ಲದವರು ಕನ್ನಡಕ್ಕೆ "ದೊಡ್ಡ ನೆರವು" ಗಯ್ಯುತ್ತಿದ್ದೇವೆ ಎಂಬ ಅನಿಸಿಕೆಯೂ, ಉಂಕೂ, ಸರಿಯಲ್ಲ ಆಟೇ.!!

ಕನ್ನಡವು ಬರಿ ಐಟಿ-ಬಿಟಿಯಲ್ಲಿ ಇಲ್ಲದವರ ಸೊತ್ತಲ್ಲ ತಾನೆ;

ಇರಲಿ!!

ಒಟ್ಟಿನಲ್ಲಿ ಕನ್ನಡಕ್ಕೆ ಐಟಿ-ಬಿಟಿಯವರು ಅವರ ಕೈಲಾದುದನ್ನು ಅವರು ಮಾಡಲಿ, ಮಿಕ್ಕವರು ಅವರ ಕೈಲಾದುದನ್ನು ಅವರೂ ಮಾಡಲಿ. ಇದರಲ್ಲಿ ತೀಯಾಟ ಇರಬಾರದು!!
============================================
ಮನದೊಳಗಣ ಕಿಚ್ಚು, ಮನೆಯ ಸುಟ್ಟಲ್ಲದೇ ನೆರೆ ಮನೆಯ ಸುಡದೋ........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2007 - 8:58pm — ಸಂಗನಗೌಡ

Re: ಬೆಳ್ಳಿ ರೇಖೆ

ಸಂಗನಗೌಡ's picture

ಯಾಮಿನಿಯವರೇ, 

ಹಾಗೆ ನೋಡಿದರೆ ನಿಮಗೆ ಬರೆಯೋದಕ್ಕೆ ಹೆದರಿಕೆ ಅಂತ ಅನಿಸೋದಿಲ್ಲ.

ನೀವು ಒಬ್ಬ ದಿಟ್ಟ ಸಂಪದಗಾತಿ ಅಂತಾನೆ ಹೇಳಬಹುದು.  Smiling

ಏನೇ ಹೇಳಿ, ಸಕ್ಕತ್ ದಿಟ್ಟತನ ಇದೆ ನಿಮ್ಗೆ.

-----------------------------------------------------------ನಡೆವವ ಎಡವಬಹುದಲ್ಲದೇ, ನಿಂತವ ಎಡವಲಾರ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 13, 2007 - 9:41pm — ಸಂಗನಗೌಡ

Re: ಪದಗಳನ್ನು ಒಣಗಿಸಿ ಬಳಸಬಹುದಾ?

ಸಂಗನಗೌಡ's picture

ಪದಗಳನ್ನು ಜೋಳದ ರೊಟ್ಟಿಯಂತೆ ನೆರಳಿನಲ್ಲಿ ಒಣಗಿಸಿ ಬಳಸಬಹುದು. ಅದಕ್ಕೇ ಕರಿ ಮಣ್ಣಿನ 'ಜೋಳದ ರೊಟ್ಟಿ-ಕುಟ್ಟಿದ ಕೆಂಪು ಮೆಣಸಿನಕಾಯಿ' ಮಂದಿ, ಹಳೆ ಪದಗಳನ್ನೂ ಒಳ್ಳೇ ರುಚಿಯಿಂದ ಸವಿಯುವುದು. Smiling

 ಹಳೆಯ ಕನ್ನಡದ ಒರೆಗಳನ್ನು ಮಮ್ಮಿಫಾಯ್(ಮಮ್ಮೀಕರಣ) ಮಾಡಿಟ್ಟಿದ್ದಾರೆ, ಅವು ವೈರಸ್‍ನಂತೆ ಮುಂದಿನ ದಿನಗಳಲ್ಲಿ ಹೊಳ್ಳಿ ಜೀವ ಪಡದೆರೂ ಪಡಿಬಹುದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 13, 2007 - 9:09pm — Sunil Jayaprakash

ಪದಗಳ ಸೈಡ್ ಡಿಶಸ್ ;)

Sunil Jayaprakash's picture

ಈದಿನ ಸ್ವಲ್ಪ ಸೈಡ್ ಡಿಶಸ್ ನೋಡೋಣ.

ಚಟ್ನಿಪುಡಿ - ಇದನ್ನು ಮಾಡುವುವರು ಸ್ವಲ್ಪ ಗಟ್ಟಿಗರಾಗಿರಬೇಕು. ಏಕೆಂದರೆ ಇದಕ್ಕೆ ಕಷ್ಟವಾದ ಸೀನು ಬರಿಸುವ ಪದಗಳನ್ನು ಹುರಿದು, ಅವುಗಳನ್ನು ಮಿಕ್ಸಿಗೆ ಹಾಕಿ ಪುಡಿಮಾಡಿಕೊಳ್ಳಬೇಕು. ಈ ಚಟ್ನಿಪುಡಿ ಒಂದು ರೀತಿ ಎಲ್ಲದಕ್ಕೂ ಬಳಸಬಹುದು. ಪದಗಳಿಗೆ ಚಟ್ನಿಪುಡಿ ಸೇರಿದಾಗ ಒಂದು ರೀತಿ ಇಸುಕಿದಂತಾಗುತ್ತದೆ. ಚಟ್ನಿಪುಡಿ ಗುಂಪಿಗೆ ಸೇರುವ ಮತ್ತಷ್ಟು ಪದಗಳು ಮೆಣಸಿನಪುಡಿ, ಹುಳಿಪುಡಿ, ವಾಂಗೀಭಾತ್ ಪುಡಿ, ಮೆಂತಿಟ್ಟು..

ಉಪ್ಪಿನಕಾಯಿ - ಇದೂ ಕೂಡ ಒಂದು ರೀತಿ ಚಟ್ನಿಪುಡಿ ಕುಟುಂಬಕ್ಕೆ ಸೇರಿದ್ದು. ಇದಂತೂ ತುಂಬಾ ರುಚಿ. ಮಾಡುವುದಕ್ಕೆ ತುಂಬಾ ದಿನಗಳು ಬೇಕು. ಕೆಲವೆಡೆ ಬಿಸಿ ಉಪ್ಪಿನಕಾಯಿ ದಿಢೀರ್ ಅಂತ ಮಾಡುವ ಪರಿಪಾಠವಿದೆ. ಅಂದ ಹಾಗೆ, ಅನೇಕ ಬಗೆಯ ಉಪ್ಪಿನಕಾಯಿಗಳು ಉಂಟು.
೧. ಗುಂಡಾಗಿರುವ ಮೂಗಿನ ಸಹಾಯದಿಂದ ಮಾಡಿದರೆ ನಿಂಬೆಹಣ್ಣಿನಂತಹ ಪದಗಳು ಸಿಗುತ್ತವೆ.
೨. ಮಾವಿನಕಾಯಿಯಿಂದ ಉಪ್ಪಿನಕಾಯಿ ಮಾಡಿಕೊಳ್ಳುವಾಗ ವಾಟೆಯನ್ನು ತೆಗೆದು ಉಪ್ಪಿನಕಾಯಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಹಿಯಾಗುತ್ತದೆ.

ಅಮ್ಮ ಮಾಡಿಕೊಟ್ಟ ಉಪ್ಪಿನಕಾಯಿಯಾದರೆ ತುಂಬಾ ರುಚಿಯಾಗಿರುತ್ತದೆ. ಹಾಗೆಯೇ, ಯಾವುದೇ ಉಪ್ಪಿನಕಾಯಿಯನ್ನು ಮಾಡುವುದಕ್ಕೆ ಅರಿವೆಂಬ ಕಾಪಿಗಳನ್ನು (ಪ್ರಿಸರ್ವೇಟೀವ್ಸ್) ಬಳಸಲೇಬೇಕು.

ಸಂಡಿಗೆ - ಇದು ಈಗೀಗ ರೆಡಿಮೇಡಾಗಿ ಅಂಗಡಿಗಳಲ್ಲಿ, ಅಂತರ್ಜಾಲದಲ್ಲಿ ಕೋಶಗಳ ರೂಪದಲ್ಲಿ ಸಿಗುತ್ತಿದ್ದರೂ, ಅನೇಕ ಮನಗಳಲ್ಲಿ ಇನ್ನೂ ಇವುಗಳನ್ನು ಮಾಡುವ ಪದ್ದತಿ ಇದೆ. ಮಾದರಿಗೆ, ಪದಗಳನ್ನು ನೆನೆಹಾಕಿ, ನಂತರ ಬೇಯಿರಿ, ಹಬೆಯಾಡುತ್ತಿರುವಾ, ಸಂಡಿಗೆಯಾಕಾರದಲ್ಲಿ ಲಟ್ಟಿಸಿ, ಪ್ಲಾಸ್ಟಿಕ್ ಕವರಿನ ಮೇಲೆ ಹಾಕಿ, ಬಿಸಿಲಲ್ಲಿ ಒಣಗಿಸಬೇಕು. ಪೂರ್ತಿ ಒಣಗಿದ ನಂತರ ಎಣ್ಣೆಯಲ್ಲಿ ಕರಿದು ತಿನ್ನುವುದು ತುಂಬಾ ತುಂಬಾ ಸುಲಭ. ಕರಿಯುವುದೇನೋ ಸುಲಭ ಆದರೆ ತಯಾರು ಮಾಡುವುದೇ ಎಲ್ಲಕ್ಕಿಂತ ಕಷ್ಟ.

ಧಿಡೀರ್ ತಿಂಡಿ - ಈಗೀಗ ದರ್ಶಿನಿ, ಫಾಸ್ಟ್ ಫುಡ್ ಜಂಕ್ಫುಡ್ಗಳು ಜಾಸ್ತಿಯಾಗಿರುವುದರಿಂದ, ಏನೂ ಯೋಚಿಸದೆ, ಎಲ್ಲೆಲ್ಲಿ ಏನೇನಿದೆಯೋ ಎಲ್ಲವನ್ನೂ ಅದರ ಮುಂದಿನ ಆಗುಹೋಗುಗಳನ್ನು ತಿಳಿಯದೆ, ಮುಕ್ಕುವ ಪದ್ದತಿಯೂ ಜಾರಿಯಲ್ಲಿದೆ Eye-wink

ನಿಮ್ಮ ಲೇಖನ ಓದಿದವರಿಗೆ ನಗು ತಡೆಯಲು ಸಾಧ್ಯವೇ ಇಲ್ಲವೇನೋ. ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 13, 2007 - 9:29pm — ASHOKKUMAR

Re: ಪದ ಜಾಮೂನು

ASHOKKUMAR's picture

ಇನ್ಯಾರಾದರೂ ಯುಗಾದಿಗೆ ವಿಶೇಷ ಸಿಹಿ ತಿನಸುಗಳ ರೆಸಿಪಿ ಹೇಳ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 13, 2007 - 10:29pm — ರಘುನಂದನ

Re: ಪದಗಳ ಸೈಡ್ ಡಿಶಸ್ ;)

ರಘುನಂದನ's picture

ಇಷ್ಟಾಕೊಂದು ಹೊಸಾ ಹೊಸಾ ನಮೂನಿ ತಿಂಡಿ ತಿಂದ್ರ ಹ್ವಟ್ಟಿ ಉಬ್ಬಿಕ್ವಂಡ್ ಸತ್ತs ಹೊಕ್ಕೇವಿ ಅಷ್ಟ! ಏನಿಲ್ಲಿಕ್ರೂ ತಲೀ‍ ಕೆಡದಂಕ್ರೂ ಖರೇನ ಬಿಡ್ರಿ. ಒಂದೊಂದ್ಸಲ ನಾವೆಲ್ಲ ಸುಮ್ಸುನ ಒದ್ಯಾಡsದು ಜಾಸ್ತಿ ಆತು ಅಂತ ಅನಸ್ತದ್ರ್ಯಪ! ಸುನೀಲಣ್ಣಾರ. ಆದ್ರ ನೋಡ್ರಿ ಒಂದಿಷ್ಟ್ ಮಂದಿ ಸಂಸ್ಕೃತ ಬ್ಯಾಡ್ರೋ! ಅಂತ ಹ್ವಡಕೊಳ್ಳೀಕ್ಕೆ ಹತ್ಯಾರ ಆದ್ರ ಇಂಗ್ಲೀಷ್ನ ಮನಸ್ಸಿಗೆ ಕಿರಿಕಿರಿ ಆಗೋವಷ್ಟು ಸೇರ್ಸಲಿಕ್ಕೆ ನಿಂತಾರಲ್ಲ! ಇವಕ್ಕs ಏನನ್ನದು? ತನಗ ತಾನs ಸಂಸ್ಕೃತಾನೋ ಇಂಗ್ಲೀಷೋ ಯಾವ್ದೋ ಒಂದಿಷ್ಟು ಸೇರಿದ್ರ ಏನೋ ಕಿರಿಕಿರಿ ಇಲ್ಲೇನ್ರಪ. ಆದ್ರ ಬಲವಂತಕ್ಕ ಯಾಕ ಎಳಕ್ವಂಡ್ ಬಂದು ತುರುಕೋ/ ಕಿತ್ತಿ ವಗಿಯೋ ಹಟ?

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 3:39pm — Yamini

Re: ಪದಗಳ ಸೈಡ್ ಡಿಶಸ್ ;)

Yamini's picture

ಎಷ್ಟು ಚೆನ್ನಾಗಿ ಬರೆದಿದ್ದೀರಿ! ನಿಮ್ಮ ನಿಲುವಿಗೆ ನನ್ನ ಬೆಂಬಲವಿದೆ.

-ಯಾಮಿ

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2007 - 3:49pm — mahesha

Re: ಪದಗಳ ಸೈಡ್ ಡಿಶಸ್ ;)

mahesha's picture

ಸುನಿಲ,

ನಿಂಗೆ ಈಟೊಂದು ಬಗೆ ತಿಂಡಿ-ತಿನಿಸು ಗೊತ್ತಿರೋದ್ರಿಂದ... ನಿನ್ನ ಸ್ಯಾನೆ ತಿಂಡಿ- ಚಪಲವೇ ಇರಬೇಕು Smiling

ನೀನು ಮದುವೆಯಾದ/ಯಾಗೋ ಹೆಣ್ಗೆ
೧) ನಿನಗೆ ಈ ಎಲ್ಲ ತಿಂಡಿ-ತಿನಿಸು ಮಾಡಕ್ಕೆ ಬಂದ್ರೆ, ಸಕ್ಕತ್ ಆರಾಮು. ನೀನು ಮಾಡಿ ಬಡಿಸದ್ರೆ. ಆಕೆ ತಿನ್ತಾ ಇರಬೋದು.
೨)ನಿನಗೆ ಈ ಎಲ್ಲ ತಿಂಡಿ-ಗಿಂಡ ಮಾಡಕ್ಕೆ ಬರದೆ ಇದ್ರೆ, ಕೆಲಸ ಕೆಡ್ತು.
ಪಾಪಾ.. ನಿನಗೆ ಇರೋ ಈ ಬಾಯ್‌ಚಪಲ ನೋಡದ್ರೆ, ಆಯಮ್ಮನ್ನ ನೀನು 'ಇದೆಲ್ಲ ಮಾಡೆ'ಎಂದು ಕಾಡಿಸೇ ಕಾಡಿಸ್ತೀಯಿ. Laughing out loud. ನಿಮ್ಮ ಮನೆಯಾಗೆ ತಿಂಡಿ-ಜಗಳ ದಿನಾಲು ಆಮೇಲೆ Laughing out loud.....

ಏನೇ ಆದರು ಒಂದು ಹೋಟ್ಲು ಹತ್ರ ಮನೇ ಮಾಡೋದು ಒಳ್ಳೇದು ನೋಡಪ್ಪ!!!Laughing out loud
.
.
.

ಆದ್ರೆ ಈ ತಿಂಡಿ ಲಿಸ್ಟು ತುಂಬ ವೆಜಿಟೇರಿಯನ್ ಆಯ್ತು.... ತುಸು ಬಾಡೂ ಬರಲಿ... Smiling
===========================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 1:59pm — suresh_k

Re: ಪದಗಳ ಸೈಡ್ ಡಿಶಸ್ ;)

suresh_k's picture

ಸುನಿಲ್ ಸೈಡ್ ಡಿಶಸ್ ಬಗ್ಗೆ ಬರೆದಿದ್ದನ್ನು ಓದಿದಾಗ ನಮ್ಮ ಸರ್ಕಾರ ಕನ್ನಡದಲ್ಲೇ ಹೋಟೆಲ್ ಮೆನು ಮುದ್ರಿಸಬೇಕೆಂದು ಆದೇಶ ಹೊರಡಿಸಿದ್ದರ ನೆನಪಾಯಿತು.

ನಮ್ಮ ಇಸ್ಮಾಯಿಲ್ ಪ್ರಕಾರ ಕನ್ನಡ ಸಸ್ಯಾಹಾರಿ ಭಾಷೆ; ಮಾಂಸದ ಸಾರು, ಮೀನಿನ ಪಲ್ಯಗಳಿಗಷ್ಟೇ ಸೀಮಿತ (ಓದಿ- http://ismail.sampada.net/node/8). ಮೆನುವಲ್ಲಿನ ಇತರೆ ಮಾಂಸಾಹಾರಕ್ಕೆ ಕನ್ನಡದಲ್ಲಿ ಏನು ಹೇಳಬಹುದು ಎಂಬುದು ಮಾಂಸಾಹಾರಿ ಅಲ್ಲದ (?) ನನ್ನ ಕುತೂಹಲವಷ್ಟೆ. ಕನ್ನಡ ಪದಗಳನ್ನು ರುಚಿ ರುಚಿಯಾಗಿ ಬಡಿಸುತ್ತಿರುವವರು ಮಾಂಸಾಹಾರಕ್ಕೂ ರುಚಿಯಾದ ಪದಪಾಕ ತಯಾರಿಸುತ್ತೀರೆಂದು ನಂಬಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 2:45pm — hpn

ಮಾಂಸಾಹಾರಕ್ಕೆ ಕನ್ನಡ ಪದಗಳು

hpn's picture

ಹೌದ್ರಿ. ಸಂಪದದಲ್ಲಿ ಹಳೆಗನ್ನಡ ಪದಗಳ ಪ್ರಯೋಗ ನಡೆಸಿ ಧೂಳೆಬ್ಬಿಸಿರುವ ಪಂಡಿತೋತ್ತಮರು, ಕನ್ನಡೋತ್ತಮರು ಮೊದಲು ಈ ಕೆಲಸ ಮಾಡಬೇಕಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 3:38pm — shreekant.mishrikoti

ಕನ್ನಡ ಪದಗಳು

shreekant.mishrikoti's picture

೧. ಅನಿವಾಸಿಯವರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಆಗಿಲ್ಲ.

೨.ಮೂವರು ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದಾರೆ ಅನ್ನುವುದು ತಪ್ಪು
ಜನ ಪ್ರತಿಕ್ರಿಯೆ ಕೊಡದೆ ಇರಬಹುದು, ಆದರೆ ಓದುತ್ತಾ ಇದ್ದಾರೆ

ನಾವೆಲ್ಲ ಕನ್ನಡವನ್ನು ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು ಎಂದು ಯೋಚಿಸುತ್ತಾ ಇದ್ದೀವಿ. ಅದಕ್ಕಾಗಿ ಕನ್ನಡ ಶಬ್ಡಗಳ ಬಗ್ಗೆ ಚರ್ಚೆ ನಡೆಸುತ್ತಾ ಇದ್ದೇವೆ.
ಹಳೆಗನ್ನಡ , ದ್ರಾವಿಡ ,ಸಂಸ್ಕ್ರುತ , ಇಂಗ್ಲೀಷು ಮತ್ತಾವುದೇ ಮೂಲದಿಂದ ಕನ್ನಡದ ಜಾಯಮಾನಕ್ಕೆ ಹೊಂದುವ ಶಬ್ಡಗಳನ್ನು ಹೆಕ್ಕಿ ತೆಗೀತಾ ಇದ್ದೇವೆ. ಅಷ್ಟೇ. ಆಡುಗನ್ನಡದಿಂದಲೂ ಶಬ್ಡಗಳನ್ನು ಹುಡುಕುತ್ತಾ ಇದ್ದೇವೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2007 - 11:01pm — hpn

ಉ: ಕನ್ನಡ ಪದಗಳು

hpn's picture

ಮೂವರು ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದಾರೆ ಅನ್ನುವುದು ತಪ್ಪು

ನಾನು ಬರೆದಿರುವ ಕಾಮೆಂಟನ್ನ ಮತ್ತೊಮ್ಮೆ ಸರಿಯಾಗಿ ಓದ್ರೀ. ಸುಮಾರು ಜನ ಸುಮ್ಮನೆ presumptionಗಳನ್ನಿಟ್ಟುಕೊಂಡು ಕಾಮೆಂಟ್ ಬರೆಯುತ್ತಿರುವ ಹಾಗಿದೆ. ನಾನು ಬರೆದದ್ದನ್ನು ಪ್ರತ್ಯೇಕ ಓದಿ ನೋಡಿ.

(ಸಾಮಾನ್ಯವಾಗಿ ಹೀಗೆ presumptions ಇಟ್ಟುಕೊಂಡು ಬರೆದದ್ದಕ್ಕೆ ನಾನು ಉತ್ತರಿಸುವುದಿಲ್ಲ. ನಿಮ್ಮ ಬಗ್ಗೆ ಇರುವ ಗೌರವ ಈ ಕಾಮೆಂಟನ್ನು ನನ್ನಿಂದ ಬರೆಸಿದೆ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 16, 2007 - 11:45am — Sunil Jayaprakash

"ನಾನು ಹೇಳಿದಂತೆ ಕೇಳು, ನಾನು ಮಾಡಿದಂತೆ ಮಾಡಬೇಡ"..ಸಂಪದದ ಓದುಗರು ದಡ್ಡರೇ

Sunil Jayaprakash's picture

ಸುಮಾರು ಜನ ಸುಮ್ಮನೆ presumptionಗಳನ್ನಿಟ್ಟುಕೊಂಡು ಕಾಮೆಂಟ್ ಬರೆಯುತ್ತಿರುವ ಹಾಗಿದೆ.

ಇದಂತೂ ಎಲ್ಲರೂ ಒಪ್ಪಬೇಕಾದ್ದ ಮಾತು. ಹರಿ ನಿನ್ನ ಮಾತು ತುಂಬಾ ಹಿಡಿಸಿತು. ಆದರೆ ಒಂದು ಮಾತು. presumptionಗಳ ಮಾತನಾಡಿದ ನಿನಗೆ, "ಕನ್ನಡದ ಬಗ್ಗೆ ಬರೆಯುವವರು ಎ.ಸಿ.ರೂಮಿನಲ್ಲಿ ಕುಳಿತು ಯೋಚಿಸುತ್ತಿದ್ದಾರೆ, ಹಳೆಗನ್ನಡ ಬಳಸಿ ಧೂಳೆಬ್ಬಿಸುತ್ತಿದ್ದಾರೆ, ಎಂಬಂತಹ ಮಾತುಗಳು" ಅದೇ presumption(ಪೂರ್ವಾಗ್ರಹ ಪೀಡಿತ ಮನಸ್ಥಿತಿ) ಎಂಬುದು ತಿಳಿಯಲಿಲ್ಲವೇ ?. ನಾನು ಹಾಗೆ ಬರೆದಿಲ್ಲ, ಅಥವಾ ನೀನು ಹಾಗೆ ಅರ್ಥಮಾಡಿಕೊಂಡರೆ ಅದು ನನ್ನ ತಪ್ಪಲ್ಲ ಎಂಬುದಾಗಿ ಹೇಳಬೇಡ. ನಿನ್ನ ಕಾಮೆಂಟ್ ಓದುವ ಎಂಥವರಿಗೂ ತಿಳಿಯುವ ಸಾರ ಅವು. ಹಾಗೆಯೇ, ಕನ್ನಡವು ಜಾಳು ಎಂಬ ಆಪಾದನೆಗೆ ಸಮರ್ಥನೆಯನ್ನು ನೀಡಲಾಗದೆ, ಕೊನೆಗೆ "ನೀನು ಉದ್ವೇಗದಲ್ಲಿ ಬರೆಯುತ್ತೀಯಾ" ಎನ್ನುವಂತೆ ವೈಯಕ್ತಿಕ ಮಟ್ಟಕ್ಕಿಳಿದು ಅಲ್ಲಿ ಏನನ್ನೂ ಹೇಳಲಾಗದೆ, ನಂತರ ದೂರ ಸರಿದು, ಬೇರೆ ಸಂಬಂಧಪಡದ ಚರ್ಚೆಗಳಲ್ಲಿ, ಮತ್ತದೇ ವ್ಯಂಗ್ಯವಾಡುವುದು ಕೂಡ ಅದೇ presumption ಮನಸ್ಥಿತಿ ಎಂಬುದನ್ನು ಮರೆಯಬೇಡ.

ಈ ಕಾಮೆಂಟಿಗೆ ನಾನೇನು ಉತ್ತರ ನಿರೀಕ್ಷಿಸುವುದಿಲ್ಲ. ಆದರೆ ಕನ್ನಡದ ಬಗೆ ವಸ್ತುನಿಷ್ಟವಾದ ಚರ್ಚೆಗೈದು, ಕನ್ನಡದಲ್ಲಿ concenptualization ಹೇಗೆ ಮಾಡಿಕೊಳ್ಳಬಹುದು ಎಂಬುದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವವರು ಯಾರು, ಹಾಗೆಯೇ ಹೊಸತಾಗಿ ಏನನ್ನೂ ಹೇಳಲಾಗದೆ, ಪ್ರತಿ ಎಳೆಯಲ್ಲಿಯೂ ಕೇವಲ ವೈಯಕ್ತಿಕ ಮಟ್ಟದಲ್ಲಿಯೇ ಕಾಮೆಂಟು ಬರೆಯುತ್ತಿರುವವರು ಯಾರು ಎಂಬುದನ್ನು ತಿಳಿಯಲಾರದಷ್ಟು ದಡ್ಡರಲ್ಲ ಸಂಪದದ ಓದುಗರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 16, 2007 - 11:12am — Sunil Jayaprakash

ದನಿಗೂಡು: ಕನ್ನಡ ಪದಗಳು

Sunil Jayaprakash's picture

ನಾವೆಲ್ಲ ಕನ್ನಡವನ್ನು ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು ಎಂದು ಯೋಚಿಸುತ್ತಾ ಇದ್ದೀವಿ. ಅದಕ್ಕಾಗಿ ಕನ್ನಡ ಶಬ್ಡಗಳ ಬಗ್ಗೆ ಚರ್ಚೆ ನಡೆಸುತ್ತಾ ಇದ್ದೇವೆ. ಹಳೆಗನ್ನಡ , ದ್ರಾವಿಡ ,ಸಂಸ್ಕ್ರುತ , ಇಂಗ್ಲೀಷು ಮತ್ತಾವುದೇ ಮೂಲದಿಂದ ಕನ್ನಡದ ಜಾಯಮಾನಕ್ಕೆ ಹೊಂದುವ ಶಬ್ಡಗಳನ್ನು ಹೆಕ್ಕಿ ತೆಗೀತಾ ಇದ್ದೇವೆ. ಅಷ್ಟೇ. ಆಡುಗನ್ನಡದಿಂದಲೂ ಶಬ್ಡಗಳನ್ನು ಹುಡುಕುತ್ತಾ ಇದ್ದೇವೆ

ಕ್ಷಮಿಸಿ, ಕಳೆದೆರೆಡು ದಿನ ಮೈಸೂರು ಪ್ರವಾಸಕ್ಕೆ ಹೋಗಿದ್ದರಿಂದ ದನಿ ಸೇರಿಸುವದು ತಡವಾಯಿತು. ಮಿಶ್ರಿಕೋಟಿಗಳೇ, ಈ ನಿಮ್ಮ ಮೇಲಿನ ಮಾತಿಗೆ ತುಂಬಾ ತುಂಬಾ ನನ್ನಿಗಳು. "ಕನ್ನಡದ ಬಗೆಗಿನ ಚರ್ಚೆಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿರದೆ ವಸ್ತುನಿಷ್ಠವಾಗಿ ಓದಿಕೊಂಡಾಗ ಯಾವ ರೀತಿಯ ಮನೋಭಾವ ಹೊರಹೊಮ್ಮತ್ತದೆ" ಎಂಬುದಕ್ಕೆ ಇದಕ್ಕಿಂತ ಪುರಾವೆ ಬೇಕಿಲ್ಲ. ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಾಯಿತು.

ಮೂವರು ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದಾರೆ ಅನ್ನುವುದು ತಪ್ಪು.....<ಮತ್ತು ನಂತರ>...ನಾನು ಬರೆದಿರುವ ಕಾಮೆಂಟನ್ನ ಮತ್ತೊಮ್ಮೆ ಸರಿಯಾಗಿ ಓದ್ರೀ.

ಹ್ಮ್. ಹರಿ ಬರೆದಿದ್ದನ್ನು ಪ್ರತ್ಯೇಕವಾಗಿ ಓದಿದ್ದೀರಿ ಎಂದು ಭಾವಿಸುವೆ. ಅಲ್ಲಿ ಅವನು ಬರೆದದ್ದು, ಕನ್ನಡದ policing ಮಾಡುತ್ತಿರುವವರು (ಇರುವುದೇ ಮೂರೇ ಜನ) ನನ್ನ ವಯಸ್ಸಿನವರು. ಆದರೆ ಆ "ಇರುವುದೇ ಮೂರು ಜನ" ಮಾತಿನ ಪೊಳ್ಳುತನ ನಿಮ್ಮಗೂ ಸೇರಿ ಎಷ್ಟೋ ಜನರ ಅರಿವಿಗೆ ಬಂದದ್ದು ಸವಿನೆರವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 16, 2007 - 12:08pm — mahesha

ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು

mahesha's picture

ಮಿಶ್ರಿಕೋಟಿ ಸಾರ್‍..

ಆ ಸಂಗತಿಯ ಬಗ್ಗೆ ನಿಮ್ಮ ಚೂಪು ಚೆನ್ನಾಗಿದೆ.

ಒಟ್ಟಿನಲ್ಲಿ 'ಕನ್ನಡದ ಜಾಯಮಾನಕ್ಕೆ ಹೊಂದ'ಬೇಕು!

ನನ್ನಿ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 17, 2007 - 9:49am — ಸಂಗನಗೌಡ

Re: ಮೂವರು ಆಟೇನಾ?

ಸಂಗನಗೌಡ's picture

ಇಲ್ಲಿ ನೋಡಿ, ಹಳೆಯ ಬಡಿದಾಟ. Smiling

http://sampada.net/article/2077

http://sampada.net/article/2104

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 2:42pm — kannadakanda

ಉ: ಮಾಂಸಾಹಾರಕ್ಕೆ ಕನ್ನಡ ಪದಗಳು

kannadakanda's picture

ಪಿಱಿತಿನಿ=ಪಿಱಿ+ತಿನಿ. ಪಿಱಿ=ಮಾಂಸ ತಿನಿ=ತಿನ್ನುವ ವ್ಯಕ್ತಿ/ಪ್ರಾಣಿ. ಪಿಱಿತಿನಿ. ಸದ್ಯಕ್ಕೆ ನನ್ನನ್ನು ನಿಮ್ಮ ತಲೆತಿನಿ ಪ್ರಾಣಿ ಎಂದುಕೊಳ್ಳೋಲ್ಲ ಎಂದು ಭಾವಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 11:25pm — Sunil Jayaprakash

ಉ: ಮಾಂಸಾಹಾರಕ್ಕೆ ಕನ್ನಡ ಪದಗಳು

Sunil Jayaprakash's picture

ಪಿಱಿ ಅಂದರೆ ಮಾಂಸ ಎಂಬುದನ್ನು ತಿಳಿಸಿದ್ದಕ್ಕೆ ಹೆನ್ನನ್ನಿ. ಈ ಪಿಱಿ ಪದ ಇಟ್ಕೊಂಡು ಎಷ್ಟೋ ಮಾಂಸಾಹಾರಿ ತಿಂಡಿಗಳಿಗೆ ಹೆಸರಿಡಬಹುದು. ಸೂಪರ್, ಕಣ್ರೀ ನಿಮ್ಮ ತಲೆ, ಇನ್ನು ನೀವು ತಲೆತಿನಿ ಹೇಗಾಗ್ತೀರಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 16, 2007 - 1:31pm — Sunil Jayaprakash

ದನಿಗೂಡು: ಪದಗಳ ಸೈಡ್ ಡಿಶಸ್ ;)

Sunil Jayaprakash's picture

ಸುರೇಶರೆ ನೀವೇನೇ ಹೇಳಿ ನಿಮ್ಮ ಈ ಕಾಮೆಂಟು ನನಗೆ ತುಂಬಾ ಇಷ್ಟವಾಯಿತು. ಇದು ವ್ಯಂಗ್ಯಕ್ಕಾಗಿಯೇ ಬರೆದದ್ದಿರಲಿ ಅಥವಾ ಕನ್ನಡದ ಬಗ್ಗೆ ಮನದಾಳದ ನಿಜವಾದ ಕಾಳಜಿಯೇ ಆಗಿರಲಿ ಏನೇ ಆದರೂ ತಲೆಬುಡವಿಲ್ಲದ ಇತರ ಕಾಮೆಂಟುಗಳಿಗಿಂತ ಇದು ಚೆನ್ನಿಹುದು. :ಚಪ್ಪಾಳೆ: ಸುರೇಶರೇ, ಇಸ್ಮಾಯಿಲರ ಲೇಖನವನ್ನು ನಾನು ಎಂದೋ ಓದಿದ್ದೆ. ಆದರೆ ಇಸ್ಮಾಯಿಲರ ಆ ಲೇಖನದಲ್ಲಿ ಹುದುಗಿರುವ ಆಶಯವನ್ನು ಗ್ರಹಿಸಿದ ನಂತರ ಅದಕ್ಕೆ ನಾನು ರಿಪ್ಲೈ ಮಾಡುವ ಪ್ರಮೇಯವೇ ಬರಲಿಲ್ಲ. ಏಕೆಂದರೆ ಕನ್ನಡದಲ್ಲಿ ನಮ್ಮ ಜ್ಞಾನದ ತುಡಿತ ಮತ್ತು ಇಸ್ಮಾಯಿಲರು ಪ್ರಸ್ತಾಪಿಸಿದ ವಾಸ್ತವತೆ ಎರಡೂ ತಾಳೆಯಾಗುತ್ತದೆ. ಅವರು ಪ್ರಸ್ತಾಪಿಸಿದ್ದನ್ನು ಮತ್ತೊಮ್ಮೆ ನೋಡಿ.

೧. ಕಬಾಬ್, ಟಿಕ್ಕಾಗಳ ಮಸಾಲೆಗೇ ಕನ್ನಡ ಜಗ್ಗಲಿಲ್ಲ. ಅಂದರೆ ಕನ್ನಡ ಜಗ್ಗಿಲ್ಲ. ಜಗ್ಗುವುದೂ ಇಲ್ಲ. ಕನ್ನಡವು ತನಗೆ ಏನೇನು ಬೇಕೋ ಅದನ್ನು ಎಲ್ಲ ಕಡೆಯಿಂದಲೂ ತನ್ನದಾಗಿಸಿಕೊಂಡು ಬರುತ್ತಲೇ ಇದೆ. ಇವುಗಳನ್ನು ನಾವ್ಯಾರೂ ವಿರೋಧಿಸುವುದಿಲ್ಲ. ಆದರೆ ಸಮಸ್ಯೆಯಿರುವುದು "ಎಲ್ಲಿಂದ ಬೇಕಾದರೂ ಹೊಸತನ ಬರಲಿ, ಕನ್ನಡದಿಂದ ಮಾತ್ರ ಬೇಡ" ಎನ್ನುವಂತಹ ಮನಸ್ಥಿತಿಯಲ್ಲಿ. ಇದೂ ಕೂಡ ನಮ್ಮ ಇಸ್ಮಾಯಿಲರೇ ಹರಿಬಿಟ್ಟದ್ದು. ನೀವು ಅದನ್ನು ಮಿಸ್ ಮಾಡಿಕೊಂಡಿದ್ದರೆ ಅಲ್ಲಿ ನೋಡಿ. ಹಾಗೆಯೇ, ಕನ್ನಡವೇ ಎಲ್ಲ, ಸಂಸ್ಕೃತ ಬಿಸಾಕಿ, ಉರ್ದು ಪಾರ್ಸಿ ಬಿಸಾಕಿ ಎನ್ನುವಂತಹ ಕಾಮೆಂಟು, ಲೇಖನಗಳನ್ನು ನಾವು ಬರೆದದ್ದು ನಿಮ್ಮ ಕಣ್ಣಿಗೆ ಬಿದ್ದಿದ್ದರೆ ಅದನ್ನು ಬೆತ್ತಲಾಗಿಸಿ.

೨. ಇಸ್ಮಾಯಿಲರು "ಕನ್ನಡವು ಸಸ್ಯಾಹಾರಿ ಭಾಷೆ" ಎಂದರೇ ಹೊರತು "ಪುಳಿಚಾರು ಭಾಷೆ" ಎನ್ನಲಿಲ್ಲ. ಕನ್ನಡವು ಕೇವಲ ಪುಳಿಚಾರು ಭಾಷೆ ಎಂದೇನಾದರೂ ಅವರು ಹೇಳಿದ್ದರೆ ವಸ್ತುನಿಷ್ಠವಾಗಿ, "ಇವರು ಸಂಸ್ಕೃತ ವಿರೋಧಿಗಳು, ಹಳಗನ್ನಡದ ಧೂಳೆಬ್ಬಿಸುವವರು, ಪಂಡಿತೋತ್ತಮರು" ಎಂಬಂತಹ ತಲೆಬುಡವಿಲ್ಲದ ವೈಯಕ್ತಿಕ ಮಟ್ಟದ ವ್ಯಂಗ್ಯಗಳನ್ನೂ ಮೀರಿ ಅದು ಸುಳ್ಳೆಂದು ನಿರೂಪಿಸುತ್ತಿದ್ದ