ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅನಿವಾಸಿ
*~*~*~*
ಬಿಗುಮಾನದ ಚಿತ್ರಗಳು
ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ.
ಸುಡಾನಿನಿಂದ ಹಿಡಿದು ನಮ್ಮ ಬಿಹಾರದವರೆಗೆ ಭೀಕರ ಮಾನ್ಸೂನ್ ನೆರೆ ಜನರನ್ನು ಕಂಗಾಲಾಗಿಸಿದೆ. ಸಾವಿರಾರು ಜನರ ಸಾವು ಮತ್ತು ಲಕ್ಷಾಂತರ ಮಂದಿ ಮನೆಮಠ ಕಳಕೊಂಡು ನಿರಾಶ್ರಿತರಾಗಿದ್ದಾರೆ.
ವಸಂತದ ಹೂಗಳು - ಇನ್-ಸೆನ್ಸಿಟಿವ್ ಆಗುತ್ತದೆ ಎಂದು ಮನಸ್ಸು ಕೂಗುತ್ತದೆ.
ಪ್ರಕೃತಿಯ ವಿಕೋಪ, ನದಿಮಾತೆಯ ಸಿಟ್ಟು ಎಂಬ ಮಾತುಗಳು ಜಿಗುಪ್ಸೆ ಹುಟ್ಟಿಸುತ್ತದೆ. ನದಿಯನ್ನು ಮಾತೆಯೆಂದು ನೋಡುವ ಮನೋಭಾವದಲ್ಲಿ ಬಹಳಷ್ಟು ಒಳ್ಳೆಯದಿದೆ. ಆದರೆ, ಮುನ್ನೆಚ್ಚರಿಕೆ ವಹಿಸಬೇಕಾದವರು ಹೀಗಾಡಿದರೆ ಕಪಾಳಕ್ಕೆ ಬಿಗಿಯಬೇಕೆನಿಸುತ್ತದೆ. ಯಾಕೆಂದರೆ, ನುಗ್ಗಿದ ನೀರಿನಲ್ಲಿ ಮಕ್ಕಳನ್ನು ಹಿಡಿದುಕೊಳ್ಳಲಾಗದೆ ಕಳಕೊಂಡವರು ಕಣ್ಣಮುಂದೆ ಬರುತ್ತಾರೆ.
ಚಳಿಗಾಲದಲ್ಲಿ ಎಲೆ ಹುಲ್ಲು ಎಲ್ಲ ಇಬ್ಬನಿಯಿಂದ ತೊಯ್ದು ಕಣ್ಣೀರಿಡುವಂತೆ ಕಾಣುತ್ತದೆ. ದರಿದ್ರ ವಸಂತ ಕಾಲಿಟ್ಟೊಡನೆ ಆ ತೇವವೆಲ್ಲಾ ಹಾರಿ ಹೋಗಿ ಬಿಗುಮಾನವೊಂದೇ ಬಂಡವಾಳದಂತೆ ಕಾಣುತ್ತದೆ.
ವಾಟ್ಲ್ ಹೂಗಳ ಚಿತ್ರಗಳು ಕಂಪ್ಯೂಟರಿನ ಒಂದು-ಸೊನ್ನೆಗಳಲ್ಲಿ ಹಾಗೇ ಉಳಿದಿದೆ.

- anivaasi ರವರ ಬ್ಲಾಗ್
- Login or register to post comments
- 292 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬಿಗುಮಾನದ ಚಿತ್ರಗಳು
ಇಷ್ಟು ರಾತ್ರಿಯಾದರೂ ನಿದ್ರೆಗೆಟ್ಟು ಕಂಪ್ಯೂಟರಿನ ಮುಂದೆ ಕುಳಿತಿದ್ದೀನಿ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಬಿಗುಮಾನದ ಚಿತ್ರಗಳು
ಹರಿ,
ಅರ್ಥವಾಗಲಿಲ್ಲ!?
ಉ: ಬಿಗುಮಾನದ ಚಿತ್ರಗಳು
ಸಾರ್! ಹರಿ ನಿದ್ದೆ ಮಾಡ್ಕೊಂಡ್ ಇದನ್ನ ಬರೆದ ಹಾಗಿದೆ
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಬಿಗುಮಾನದ ಚಿತ್ರಗಳು
ಹೌದು, ನಿದ್ರೆಗಣ್ಣಿನಲ್ಲೇ ಬರೆದದ್ದು. ಆದರೆ ಇದನ್ನೆಲ್ಲ ಓದುವಾಗ ನನಗೆ ನನ್ನ ಮೇಲೇ ಕೋಪ ಬಂತು! ಇಷ್ಟು ಹೊತ್ತಾದರೂ ನಿದ್ರೆ ಮಾಡಲಿಲ್ಲ. ಮತ್ತೊಂದು ದಿನ ಹೀಗೇ ಕುಳಿತುಬಿಟ್ಟೆನಲ್ಲ ಮತ್ತೆ ಕಂಪ್ಯೂಟರ್ ಮುಂದೆ ಅಂತ! ಇವತ್ತೂ ಸಿಟ್ಟು ಬರುತ್ತಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa