ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅನಿವಾಸಿ
*~*~*~*
ಕ್ರೌರ್ಯ ಮತ್ತು ಬಲಿ
ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ.
ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವನ್ನು ಬಯಲಿಗೆಳೆದು ಲೋಕಕ್ಕೆ ತಿಳಿಸಿದವನು. ಕಡೆಯವರೆಗೂ ಪ್ರಭುತ್ವದ ಜತೆ ಮುಜುಗರದ ಸಂಬಂಧವನ್ನ ಉಳಿಸಿಕೊಂಡವನು. ಬೋರಿಸ್ ಎಲ್ಸಿನ್ ನೀಡಲು ಬಂದ ರಷ್ಯಾದ ಅತಿ ಉನ್ನತ ಪದವಿ "ಆರ್ಡರ್ ಆಪ್ ಸೇಂಟ್ ಆಂಡ್ರೂ"ವನ್ನು ತಿರಸ್ಕರಿಸಿದವನು. ಅವನ "ಒನ್ ಡೇ ಇನ್ ದ ಲೈಫ್ ಆಫ್ ಇವಾನ್ ಡೆನಿಸೋವಿಚ್" ಒಮ್ಮೆ ಓದಿದರೆ ಸಾಕು, ಮತ್ತೆ ಮತ್ತೆ ಕಾಡುವಂತಹದು. ಸದಾ ಜತೆಗೆ ಉಳಿಯುವಂತಹದು. ಅಮೇರಿಕಾದ ರಾಜಕೀಯ ಹಂದರವನ್ನೂ ಒಪ್ಪಲಾರದೆ - ರಷ್ಯಾ ತನ್ನ ಜಾಡನ್ನು ತಾನೇ ಕಂಡುಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳಿದವನು. ಎಲ್ಸಿನ್ ಮಹಾ ಗಡಿಬಿಡಿಯಲ್ಲಿ ರಷ್ಯಾದ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿದ್ದನ್ನು ಹೀಗಳೆದವನು. ತನ್ನ ಅದಮ್ಯ ಚೇತನದಿಂದ ಈ ಜಗತ್ತಿನ ಅತ್ಯಂತ ಕ್ರೂರ ಪ್ರಭುತ್ವಕ್ಕೆ ಸೆಡ್ಡು ಹೊಡೆದು-ಕೊಲ್ಲುತ್ತಾರೆ ಎಂದುಕೊಳ್ಳುತ್ತಲೇ ಬದುಕಿದವನು. ಬರೆದದ್ದು ನಾಶಮಾಡುತ್ತಾರೆ ಎನ್ನುತ್ತಲೇ ಉಳಿಸಿಕೊಂಡವನು.
ಇನ್ನೆರಡು ದಿನಕ್ಕೆ ಮತ್ತೆ "ಹಿರೋಶೀಮಾ ದಿನ". ಎರಡನೇ ಮಹಾಯುದ್ಧ ಕೊನೆಗೊಳಿಸಿದ ಅತ್ಯಂತ ಭೀಕರವಾದ ಅನಗತ್ಯ ಹತ್ಯಾಕಾಂಡ. ಅಮೇರಿಕಾದ ಜನರಿಗೆ ಏನೂ ಹೇಳದೆ ಮಹಾಗುಟ್ಟಿನಲ್ಲಿ ಓಪನ್‌ಹೈಮರ್ ನಿರ್ದೇಶನದಲ್ಲಿ ಒಟ್ಟುಗೂಡಿಸಿದ ಅಟಾಮಿಕ್ ಬಾಂಬದು. ನಾಜೀಗಳನ್ನು ಮಟ್ಟ ಹಾಕಲು ಹಲ್ಲು ಮಸೆಯುತ್ತಾ ಕಟ್ಟಿಕೊಂಡಿದ್ದು. ಕೊಂದದ್ದು ಮಾತ್ರ ಜಪಾನಿನ ಸಾವಿರಾರು ಜನರನ್ನು. ಅಂದಿನ ಅಣುಭೌತಿಕ ವಿಜ್ಞಾನಿಗಳೂ ಆ ಕ್ರೌರ್ಯದಲ್ಲಿ ಶಾಮೀಲಗಾಗಿದ್ದನ್ನು ಈಗ ಯಾರೂ ಅಲ್ಲಗಳೆಯಲಾರರು.
ಯೋಚಿಸಿದಂತೆಲ್ಲಾ ಇವೆಲ್ಲಕ್ಕೆ ಇಂಡಿಯಾದ ನಾಯಕರ ಮಾತುಗಳು ಮರುದನಿಗೊಡುತ್ತದೆ. ಪಾಕಿಸ್ತಾನದ ಮೇಲೆ ಹಲ್ಲುಮಸೆಯುತ್ತಾ ಕಟ್ಟಿಕೊಳ್ಳುವ ನಮ್ಮ ಬಾಂಬು ಯಾರನ್ನು ಆಹುತಿ ಪಡೆಯಬಹುದು ಎಂದು ಎಣಿಸದರೆ ಎದೆ ನಡುಗುತ್ತದೆ. ನಾವೂ ಗುಟ್ಟಾಗಿ ಅಣುಬಾಂಬು ಕಟ್ಟಿದ್ದೇವೆ, ಸಿಡಿಸಿದ್ದೇವೆ. ಅದಕ್ಕೆ ಕಾರಣರಾದ ಇಂಜಿನಿಯರನ್ನು "ವಿಜ್ಞಾನಿ" ಎಂದು ತುಂಬಿ ತುಳುಕುವಂತೆ ಹೊಗಳಿ "ಭಾರತ ರತ್ನ" ಮಾಡಿದ್ದೇವೆ, ಪ್ರೆಸಿಡೆಂಟ್ ಮಾಡಿದ್ದೇವೆ. ಗುಟ್ಟನ್ನೇ ರಾಜಕೀಯ, ವೈಜ್ಞಾನಿಕ ಮಂತ್ರವನ್ನಾಗಿ ಮಾಡಿದ್ದೇವೆ. ಬಹುಶಃ ನಮಗೂ ಒಬ್ಬ ಸೋಲ್ಸನಿತ್ಸನ್ ಬೇಕೇನೋ...
ಈವೆಲ್ಲಾ ತಲೆ ಕೆಡಿಸುತ್ತಿರುವಾಗ ಮತ್ತೆ ನಮ್ಮ ದೇವಾಸ್ಥಾನದ ಕ್ರೌರ್ಯಕ್ಕೆ ನೂರಾರು ಪುಟ್ಟ ಮಕ್ಕಳು, ತಾಯಂದಿರು ಹಾಗು ವಯಸ್ಸಾದವರು ಬಲಿಯಾಗಿದ್ದಾರೆ. ಈ ಕ್ರೌರ್ಯಕ್ಕೆ ಸೆಡ್ಡು ಹೊಡೆಯಬೇಕಾದವರೇ ಮತ್ತೆ ಮತ್ತೆ ಬಲಿಯಾಗುತ್ತಿದ್ದಾರೆ.
ಈ ಬಗೆಯಲ್ಲಿ ನಮ್ಮ ಜನರನ್ನೇ ನಾವು ವಿಧಿವತ್ತಾಗಿ ನಿಯತಕಾಲಿಕವಾಗಿ ಬಲಿತೆಗೆದುಕೊಳ್ಳಲು ಬಾಂಬುಗಳೂ ಬೇಡ, ಆತಂಕವಾದವೂ ಬೇಡ.

- anivaasi ರವರ ಬ್ಲಾಗ್
- Login or register to post comments
- 667 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


ಪ್ರತಿಕ್ರಿಯೆಗಳು
ಉ: ಕ್ರೌರ್ಯ ಮತ್ತು ಬಲಿ
ಕ್ರೌರ್ಯ .. ಅದು ಮನುಗುಣ...
ಮನುಶ್ಯರಿರೋದೇ ಹಿಂಗೆ..
ಕೋಳಿ ತಿನ್ನೋದು ಚಪಲಕ್ಕಲ್ಲ.. ಹೊಟ್ಟೆ ಪಾಡಿಗೆ...!
ಆದರೂ ನಿಮ್ಮ ಬರಹದಲ್ಲಿ ಇರುವ ಮಾತನ್ನು ಒಪ್ಪಬೇಕು..
ಬಲಿ(ಕೋಳಿ, ಕುರಿ ಕಡಿಯುವುದು) ಮತ್ತು ಬಲಿದಾನ(ಸಯ್ನಿಕರು ಸಾಯುವುದು) ಎರಡೂ ಒಂದೇ ಅಲ್ವ...ಎಲ್ಲವೋ ಹಿಂದೆ ಎಲ್ಲವನ್ನೂ ಅಂಕೆಯಲ್ಲಿ ಹಿಡಿದಿರುವ/ಹಿಡಿಯ ಬಯಸುವ "ಒಡೆಯನ" ಸಂತ್ರುಪ್ತಿಗೆ ...
ನಿನ್ನಿ.
ಉ: ಕ್ರೌರ್ಯ ಮತ್ತು ಬಲಿ
ಕೋಳಿ ತಿನ್ನೋದು ಚಪಲಕ್ಕಲ್ಲ.. ಹೊಟ್ಟೆ ಪಾಡಿಗೆ...!
ಇಲ್ಲಾರಿ ಮಹೇಶರೇ!! ಹೊಟ್ಟೆ ಪಾಡಿಗಾಗಿ ತಿನ್ನ್ಲಾರರು ಅನ್ತ ನನ್ನ ಅನಿಸಿಕೆ!! ಕೋಳಿ ದುಬಾರಿ ಕಣ್ರಿ!!! ಬಡವರಿಗೆ ಎರಡು ಹೊತ್ತಿನ ಕೂಳಿಗಾದ್ರೆ ಸಾಕು, ಅವರ ಜೀವ್ನ ನಡೆದ ಹಾಗೆ ಕಣ್ರಿ!!
ಉ: ಕ್ರೌರ್ಯ ಮತ್ತು ಬಲಿ
ಸರಿ.. ನೀವು. ನಾನು ಯಾವ ದಾಟಿಯಲ್ಲಿ ಹೇಳಿದ್ದು ಆ ದಾಟಿಯಲ್ಲಿ ತಗೊಳ್ಳಿಲ್ಲ...
ಹೋಗಲಿ ಅಮೆರಿಕದಲ್ಲಿ ದನದ ಬಾಡು ಗಿಡತಿನಿಗಿಂತ ಅಗ್ಗ.. ಸರಿಯಾ.. ಅಲ್ಲ ಮಂದಿ ಚಪಲಕ್ಕಿಂತ, ಹೊಟ್ಟೆಗೆ ಅಂತ ತಿಂತಾರೆ.
ಉ: ಕ್ರೌರ್ಯ ಮತ್ತು ಬಲಿ
"ಮನುಷ್ಯರಿರೋದೇ ಹಿಂಗೆ..." ನನ್ನ ಅನುಭವದಲ್ಲಿ ಮಾತ್ರ ಬಹುಪಾಲು ಜನ ಇನ್ನೊಬ್ಬರಿಗೆ ಹಾನಿ ಮಾಡದೆ ಇರುವವರೇ... ಕ್ರೌರ್ಯಕ್ಕೆ ಹೆದರುವವರೇ. ಒಬ್ಬ ಹಿಟ್ಲರ್, ಒಬ್ಬ ಸ್ಟಾಲಿನ್, ಒಬ್ಬ ಮೋದಿಯಂತವರ ಬಗ್ಗೆ ತುಂಬಾ ಯೋಚಿಸಬೇಕಾದ್ದರಿಂದ ಲೋಕದ ತುಂಬಾ ಅಂತಹವರೇ ಅನಿಸುತ್ತದೆ ಅಷ್ಟೆ.
ಉ: ಕ್ರೌರ್ಯ ಮತ್ತು ಬಲಿ
ಉ: ಕ್ರೌರ್ಯ ಮತ್ತು ಬಲಿ
ಸೋಲ್ಸನಿತ್ಸಿನ್ ನಮ್ಮ ನಡುವೆ ಇರಲೇ ಬೇಕಿತ್ತು.ಆತನಂಥ ಕ್ರಾಂತಿಕಾರಿ ಸಿದ್ಧಾಂತ ಉಳ್ಳವರು ನಮ್ಮ ನಡುವೆ ಇದ್ದಾರೆ ಆದರೆ ಸರಕಾರ ಕೊಟ್ಟ ಉಪಾಧಿಯನ್ನು ನಿರಾಕರಿಸುವಷ್ಟು ಗಟ್ಟಿತನದ ವ್ಯಕ್ತಿತ್ವ ಅವರದಲ್ಲ.
ಅಮೇರಿಕಾದೊಂದಿಗೆ ಭಾರತವನ್ನು ಹೋಲಿಸಿರುವುದು ಅಷ್ಟು ಸಮಂಜಸ ಅನ್ನಿಸುವುದಿಲ್ಲ. ಪರಿಸ್ಥಿತಿಗಳು ಬೇರೆ ಬೇರೆ ಇದ್ದಾವೆ ಅಲ್ಲವೇ? ಪಾಕಿಸ್ತಾನದ ವರ್ತನೆ ಗಮನಿಸಿದರೆ ಭಾರತ ಬೇರಿನ್ನಾವ ರೀತಿಯಲ್ಲಾದರೂ ಪ್ರತಿಕ್ರಿಯಿಸಬಹುದಿತ್ತು ಎಂದು ಹೇಳಲಾಗುತ್ತದೆಯೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಕ್ರೌರ್ಯ ಮತ್ತು ಬಲಿ
ದೇವಸ್ಥಾನದ ಕ್ರೌರ್ಯ? ? ?
*ಅಶೋಕ್
ಉ: ಕ್ರೌರ್ಯ ಮತ್ತು ಬಲಿ
ನಾವು ನಮ್ಮದನ್ನ ರಕ್ಷಿಸಿಕೊನ್ಡ್ರೆ ನಾವೆಲ್ಲಾ ಕಮ್ಯುನಲ್ಗಳು ಆನ್ನೋ ಕಾಲ ಬನ್ದಿದೆ.
ಬೇರೆಯವರು ಮಾಡಿದ್ರೆ ಮಣೆ ಹಾಕ್ತಾರೆ ಈ ನಡುವೆ.
ಉ: ಕ್ರೌರ್ಯ ಮತ್ತು ಬಲಿ
ಇಂತಹ ಕುಚೇಷ್ಟೆಯ ಮಾತುಗಳಿಂದ ಏನೂ ಲಾಭವಿಲ್ಲ.
ಉ: ಕ್ರೌರ್ಯ ಮತ್ತು ಬಲಿ
ಕುಚೇಷ್ಟೆ ಏನ್ ಬನ್ತು ಇಲ್ಲಿ??? ಇದ್ದದನ್ನಾ ಇದ್ದನ್ಗೆ ಹೇಳಿದ್ರೆ!!
ಉ: ಕ್ರೌರ್ಯ ಮತ್ತು ಬಲಿ
"ನಾವು", "ಬೇರೆಯವರು" ಯಾರು? ಇದನ್ನು ಜಾತಿ/ಧರ್ಮದ ಆಧಾರದ ಮೇಲೆ ಹೇಳುತ್ತಿದ್ದೀರ ಎಂದು ಊಹಿಸಿದರೂ "ನೀವು" ಯಾರು? ಇದೇ ಮಾತನ್ನು ಎಲ್ಲ ಜಾತಿ, ಪಂಗಡ, ಧರ್ಮದವರೂ ಹೇಳಬಹುದು, ಹೇಳುತ್ತಾರೆ.
ಇಂತಹ ಡಾಗ್-ವಿಸಲಿಂಗ್ ನುಡಿಗಟ್ಟುಗಳನ್ನು ನೀಚ ರಾಜಕೀಯದಲ್ಲಿ ಬಳಸುತ್ತಾರೆ. ಅದನ್ನು ಯೋಚಿಸದೇ ನುಂಗಿ, ಕಕ್ಕುವವರು ಆಡುತ್ತಾರೆ. ತಮ್ಮನ್ನು ಬರೇ ಒಂದು ಜಾತಿ/ಧರ್ಮದ ಆಧಾರದ ಮೇಲೆ ನಿರೂಪಿಸಿಕೊಳ್ಳುವವರ ಹಳಸಲು ಮಾತುಗಳು ಇವು.
ಹೋಗಲಿ ಬಿಡಿ, ಈ ಬಗೆಯ ಮಾತುಗಳು ಬೇಡವೆಂದರೂ ಆರೋಪದ ದನಿ ಪಡೆದುಕೊಳ್ಳುತ್ತದೆ.
ಉ: ಕ್ರೌರ್ಯ ಮತ್ತು ಬಲಿ
ಏನೋಪ್ಪ, ನಿಮ್ಮದು ನೋಡಿದ್ರೆ lopsided ಲಾಜಿಕ್ಕೂ ಅ೦ತ ಕಾಣ್ಸುತ್ತೆ.
ಅಯ್ಯೋ೦ತ್ಲೂ ಅನ್ಸುತ್ತೆ ಕೂಡ ಕಶ್ತಪಟ್ಟು ಬರೆಯೋದ್ ನೋಡಿದ್ರೆ!!
ಉ: ಕ್ರೌರ್ಯ ಮತ್ತು ಬಲಿ
> ತಮ್ಮನ್ನು ಬರೇ ಒಂದು ಜಾತಿ/ಧರ್ಮದ ಆಧಾರದ ಮೇಲೆ ನಿರೂಪಿಸಿಕೊಳ್ಳುವವರ ಹಳಸಲು ಮಾತುಗಳು ಇವು...
ಒಮ್ಮೆ ಯೋಚಿಸುವಂತೆ ಮಾಡಿದಂತ ಮಾತು ಇದು..... ನನ್ನೀ ...
ನಮ್ಮ ಗಮನಕ್ಕೇ ಬಾರದಂತೆ ನಾವು ಕೆಲವೊಮ್ಮೆ ನಮ್ಮನ್ನು ಸೀಮಿತಗೊಳಿಸಿಕೊಂಡು ಬಿಡುತ್ತೆವೇನೋ?!
ಸವಿತೃ
ಉ: ಕ್ರೌರ್ಯ ಮತ್ತು ಬಲಿ
ತ್ಚ್!! ಇಷ್ಟೊದು ಕೀಳಾಗಿರತ್ತೆ ಅನ್ಕೋ೦ಡಿರ್ಲಿಲ್ಲಾ ನಿಮ್ಮ ರಿಪ್ಲೈ!!
ಏನ್ ಮಾಡೊದು ನಿಮ್ಮ ಹಣೆಬರಹ!!
ಉ: ಕ್ರೌರ್ಯ ಮತ್ತು ಬಲಿ
ಒಂದು ದಿನ "ಎನೋಪ lopsided" ಅಂದ್ರಿ. ಮರುದಿನ ಅದೇ ಕಾಮೆಂಟು "ಕೀಳು ರಿಪ್ಲೈ" ಅಂತ ಆಗಿದೆ. ಈಗ ನನ್ನ ಬರಹ ಬಿಟ್ಟು ಹಣೆಬರಹವನ್ನೇ ಹಳಿಯುವ ವಯಕ್ತಿಕ ಬಯ್ಗುಳಕ್ಕೆ ಇಳಿಯುತಿದ್ದೀರ.
ಉ: ಕ್ರೌರ್ಯ ಮತ್ತು ಬಲಿ
ಈ ಬಗೆಯ ಸಾವಿಗೆ ಯಾರು ಹೊಣೆಗಾರರು? ಈವರೆಗೆ ಎಷ್ಟು ಜನರನ್ನು ಹೊಣೆ ಮಾಡಿ ಕೋರ್ಟಿನ ಕಟೆಕಟೆಯಲ್ಲಿ ನಿಲ್ಲಿಸಲಾಗಿದೆ? ಈ ಜೀವತೆತ್ತ ಸೇವಾರ್ಥಿಗಳ ಯಾತ್ರೆಯಿಂದ ಲಾಭ ಯಾರಿಗೆ? "ದೇವಸ್ಥಾನದ ಕ್ರೌರ್ಯ" ಅನ್ನದೇ ಬೇರೆ ಹೇಗೆ ಇದನ್ನು ವಿವರಿಸಲು ಬರುತ್ತದೆ?!
ಉ: ಕ್ರೌರ್ಯ ಮತ್ತು ಬಲಿ
‘ಯಾತ್ರೆಯಿಂದ’ ಸಾಧಿಸಿದ್ದಾದರೂ ಏನು? ಈ ಪ್ರಶ್ನೆಯನ್ನು ನೀವು ಕೇಳುತ್ತಿರುವುದು ಯಾರಿಗೆ? ಇಲ್ಲಿ ತುಂಬಾ ನೇರವಾಗಿ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ, ಹಜ್ ಯಾತ್ರೆಯನ್ನೂ ನೀವು ಈ ಪಟ್ಟಿಗೆ ಸೇರಿಸುತ್ತೀರಾ? ಹಜ್ ಯಾತ್ರೆಗೆ ಹೋದ ಸಾವಿರಾರು ಮಂದಿ ಕಾಲ್ತುಳಿತಕ್ಕೆ ಬಲಿಯಾಗುತ್ತಾರೆ ಪ್ರತಿ ವರ್ಷ, ನೆನಪಿರಲಿ, ಇದು ಆಕಸ್ಮಿಕ ಅಲ್ಲ. ಹೀಗಿರುವಾಗ ನಿಮಗದು ಬಲಿಯಾಗಿಯೋ ಇಲ್ಲವೇ ಕ್ರೌರ್ಯವಾಗಿ ಕಂಡಿದೆಯೇ? ಜೀವಹರಣಕ್ಕೆ ಯಾರದೂ ಬೆಂಬಲವಿಲ್ಲ. ರೈಲು ಹಳಿ ತಪ್ಪಿ ಜೀವಕಳೆದರೂ, ರೈಲಿನಡಿ ಬಾಂಬು ಸಿಡಿದು ಜೀವಗಳು ಬಲಿಯಾದರೂ ಅದು ಒಂದೇ. ಆದರೆ ನಮ್ಮದು ಹಿಂತಿರುಗಿ ಒದೆಯದ ಕತ್ತೆಯ ಮೇಲಿನ ನ್ಯಾಯ ನಿರ್ಣಯ ಆಗಬೇಕೆ?
ಇದೂ ಕುಚೇಷ್ಟೆ ಅನ್ನಿಸಿದರೆ ನನ್ನ ಬಾಲಿಶತನವನ್ನು ಮನ್ನಿಸಿಬಿಡಿ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಕ್ರೌರ್ಯ ಮತ್ತು ಬಲಿ
ಹಜ್ ಆಗಲೀ, ಕುಂಭಮೇಳವಾಗಲೀ, ವ್ಯಾಟಿಕನ್ ಸಂತೆ ಆಗಲೀ - ಎಲ್ಲ ಧರ್ಮಿಷ್ಠರ ದಂಧೆಯೂ ಒಂದೇ... ಏನೂ ವ್ಯತ್ಯಾಸವಿಲ್ಲ. ಅಂದರೆ ಈ ಬಗೆಯ ಕ್ರೌರ್ಯಕ್ಕೆ ಧರ್ಮಬೇಧವಿಲ್ಲ! ಇದು ಹೊಸ ಮಾತೇನೂ ಅಲ್ಲ.
ಉ: ಕ್ರೌರ್ಯ ಮತ್ತು ಬಲಿ
ಧರ್ಮವನ್ನು ಬಿಟ್ಟು ಬಿಡಿ, ಹೊಸ ವರ್ಷಾಚರಣೆ, ಫನ್ ಫೇರ್ ಇವನ್ನು ತೆಗೆದುಕೊಳ್ಳಿ ಇವನ್ನು ಧರ್ಮ ಭ್ರಷ್ಠರ ಧಂಧೆ ಎಂತಾದರೂ ಕರೆಯಿರಿ ಇಲ್ಲವೇ ಧರ್ಮಾತೀತ ದಂಧೆಯೆಂತಾದರೂ ಕರೆಯಿರಿ. ಇಲ್ಲಿ ನಡೆಯುವ ಅಮಾಯಕರ ಸಾವಿಗೆ ಯಾರು ಕಾರಣ?
ಯಾವುದು ಅಮಾಯಕ ಸಾವು ಯಾವುದು ಅಲ್ಲ ಎಂದು ಹೇಳುವಲ್ಲಿನ ನಿಮ್ಮ ನಿಖರತೆಗೂ ನಾನು ಬೆರಗಾಗಬೇಕು
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಕ್ರೌರ್ಯ ಮತ್ತು ಬಲಿ
ಮಾತೂ ನಿಮ್ಮದೇ, ಪ್ರತಿಕ್ರಿಯೆಯೂ ನಿಮ್ಮದೆ.
ಇವು ಮಾತ್ರವೇ "ಅಮಾಯಕ ಸಾವು" ಎಂದು ನಾನು ಹೇಳಿಲ್ಲ. ನೀವೇ ಊಹಿಸಿಕೊಳ್ಳುತ್ತಿದ್ದೀರ. "ಅಮಾಯಕ" ಪದವೂ ನಿಮ್ಮದೆ, ನನ್ನದಲ್ಲ. ಈಗ ಧರ್ಮ ಬಿಟ್ಟು ಮಾತಾಡಬೇಕು ಅನ್ನುತ್ತಿದ್ದೀರ. ಅದನ್ನೂ ನೀವೇ ಹೇಳುತ್ತಿರುವುದು. ನನ್ನ ನಿಖರತೆ ನಿಮ್ಮ ಊಹೆ ಅಷ್ಟೆ!
ಉ: ಕ್ರೌರ್ಯ ಮತ್ತು ಬಲಿ
ಈ ಬಗೆಯಲ್ಲಿ ನಮ್ಮ ಜನರನ್ನೇ ನಾವು ವಿಧಿವತ್ತಾಗಿ ನಿಯತಕಾಲಿಕವಾಗಿ ಬಲಿತೆಗೆದುಕೊಳ್ಳಲು ಬಾಂಬುಗಳೂ ಬೇಡ, ಆತಂಕವಾದವೂ ಬೇಡ. [\quote]
ಈ ನಿಮ್ಮ ಮಾತಿನ ಅರ್ಥವೇನು? ನನ್ನ ಊಹೆಯ ನಿಖರತೆಯನ್ನು ಊಹಿಸಿದ್ದೀರಿ, ಸಂತೋಷ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಕ್ರೌರ್ಯ ಮತ್ತು ಬಲಿ
"ಯಾವುದು ಅಮಾಯಕ ಸಾವು ಯಾವುದು ಅಲ್ಲ" ಎಂಬ ನಿಖರತೆ ನೀವು ಕೊಟ್ಟಿರುವ ನನ್ನ ಮಾತಲ್ಲಿ ನಿಮಗೆ ಕಂಡಿದ್ದರೆ ಮರುಕಪಡೆಬಲ್ಲೆನಷ್ಟೆ. ನಿಮಗೆ ಒಳ್ಳೆಯದಾಗಲಿ.
ಈ ಮಾತುಕತೆಯನ್ನು ಹೆಚ್ಚು ಮುಂದುವರಿಸುವುದಿಲ್ಲ. ಮನ್ನಿಸಿ.
ಉ: ಕ್ರೌರ್ಯ ಮತ್ತು ಬಲಿ
"ಅಮೇರಿಕಾದೊಂದಿಗೆ ಭಾರತವನ್ನು ಹೋಲಿಸಿರುವುದು ಅಷ್ಟು ಸಮಂಜಸ ಅನ್ನಿಸುವುದಿಲ್ಲ." ಪಾಕಿಸ್ತಾನದ ಬಗ್ಗೆ ನೀವು ತಳೆವ ನಿಲುವಿಗೆ ಅತ್ಯಂತ ಹತ್ತಿರದ ನಿಲುವನ್ನು ಅಮೇರಿಕಾ ನಾಜಿಗಳ ಬಗ್ಗೆ, ರಷ್ಯಾದ ಬಗ್ಗೆ ತಳೆದಿತ್ತು ಎನ್ನುವುದು ಈಗ ಚರಿತ್ರೆ. ಆದ್ದರಿಂದ ಹೋಲಿಕೆ ಅನ್ನುವುದಕ್ಕಿಂತ ಒಂದರ ಬೆಳಕಲ್ಲಿ ಇನ್ನೊಂದನ್ನು ನೋಡವುದು ಅರ್ಥಪೂರ್ಣ, ಅಷ್ಟೆ.
ಉ: ಕ್ರೌರ್ಯ ಮತ್ತು ಬಲಿ
ಯುದ್ಧ ಗೆದ್ದವರು ಚರಿತ್ರೆಯನ್ನು ಬರೆಯುತ್ತಾರೆ ನಿಜ, ಆದರೆ ಅವರು ಬರೆದ ಚರಿತ್ರೆಯನ್ನು ನಾವು ತಿರುವುಮುರುವಾಗಿಸಿದರೆ ಏನನ್ನೂ ಸಾಧಿಸಿದ ಹಾಗಾಗುವುದಿಲ್ಲ. ಯುದ್ಧದಲ್ಲಿ ಗೆದ್ದವನು ರಾಜನಾದರೆ, ರಾಜನ ಮೇಲಿನ ಅಸಹನೆಯಿಂದ ಸೋತವನನ್ನು, ಸತ್ತವನನ್ನು ಹುತಾತ್ಮ ಮಾಡಲು ಹೊರಡುವುದು ಬುದ್ಧಿವಂತಿಕೆಯಲ್ಲ. ಆ ನಮ್ಮ ‘ಹುತಾತ್ಮ’ ಬದುಕಿರುತ್ತಿದ್ದಿದ್ದರೆ ರಾಜನಾಗಿರುತ್ತಿದ್ದ. ಇಷ್ಟೇ ನಮ್ಮ ಚರಿತ್ರೆ ಹಾಗೂ ಅದರ ಬೆಳಕು.
ಭಾರತದಲ್ಲಿರುವುದಕ್ಕೆ ನಾವು ಅಮೇರಿಕಾದ ಚರಿತ್ರೆಯ ಬೆಳಕಿನಲ್ಲಿ ನಮ್ಮನ್ನೇಕೆ ಕಾಣಬೇಕು? ನಾಜಿಗಳ ಬೆಳಕಿನಲ್ಲಿ ನಮ್ಮನ್ನು ಕಾಣಬಹುದಲ್ಲವೇ? ಇಲ್ಲೂ ಯಾಕೆ ರಾಜರಾಗುವುದು ನಾವೇ ಎಂಬ ಭ್ರಮೆ? ಸೋಲ್ಸೆನಿತ್ಸಿನ್ ಇಷ್ಟೆಲ್ಲಾ ನೆನಪಿಸುತ್ತಾನಾ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಕ್ರೌರ್ಯ ಮತ್ತು ಬಲಿ
"ಇಷ್ಟೇ ನಮ್ಮ ಚರಿತ್ರೆ ಹಾಗೂ ಅದರ ಬೆಳಕು" - ಇನ್ನೇನು ಹೇಳಲು ಉಳಿದಿಲ್ಲ!
(ನಿಮ್ಮ ನಿಖರತೆಗೆ ಬೆರಗಾಗಿ)
ಉ: ಕ್ರೌರ್ಯ ಮತ್ತು ಬಲಿ
ಅನಿವಾಸಿಯವರೆ ತಮ್ಮ ಬರಹ ನಿಜಕ್ಕೂ ಹೆಚ್ಚಿನ ಆತಂಕವನ್ನು ಉಂಟು ಮಾಡುತ್ತಿದೆ. ತಮ್ಮ ಮಾತು ನೂರಕ್ಕೆ ನೂರು ಸತ್ಯ. ಎಲ್ಲೆಲ್ಲೂ ಕ್ರೌರ್ಯ ತಾಂಡವ ವಾಡುತ್ತಿದೆ. ದೇವಸ್ಥಾನದ ಕಥೆ, ಬಾಂಬುಗಳ ಸಿಡಿತ ಎಲ್ಲೆಲ್ಲೂ ಅಮಾಯಕರ ಬಲಿ ನಿಜಕ್ಕೂ ಸಂಕಟ ತರಿಸುವಂತಹುದು. ನೀವು ಹೇಳಿದಂತೆ ನಮಗೂ ಒಬ್ಬ ಸೋಲ್ಸನಿತ್ಸನ್ ಬೇಕು ಎಂದು ಅನ್ನಿಸುತ್ತದೆ.
ಶೈಲಾಸ್ವಾಮಿ
ಉ: ಕ್ರೌರ್ಯ ಮತ್ತು ಬಲಿ
ಶೈಲಾಸ್ವಾಮಿಯವರೆ, ಈಗ ಅನಿಸುತ್ತಿದೆ. "ಸೋಲ್ಸಿನಿತ್ಸನ್ ಬೇಕೇನೋ..." ಅನ್ನೋದಕ್ಕಿಂತ "ಸೋಲ್ಸನಿತ್ಸನ್ ಆಗಬೇಕೇನೋ..." ಅಂತ. ಅಲ್ವ?
ಉ: ಕ್ರೌರ್ಯ ಮತ್ತು ಬಲಿ
ಮೋದಿ fixation ಜಾಸ್ತಿ ಆಯ್ತು ಈ ನಡುವೆ
ಉ: ಕ್ರೌರ್ಯ ಮತ್ತು ಬಲಿ
ಹೌದು ಇವರಿಗೆ ಇಂದಿರಾ ಗಾಂದಿ ಸತ್ತಾಗ ನಡೆದ ಗಲಬೆ, ಮೊನ್ನೆ ಮೊನ್ನೆ ಪ.ಬಂಗಾಲ ದಲ್ಲಾದ ಗಲಬೆ ಯೇನು ಅಲ್ಲ.. ಗುಜರಾತ್ ಗಲಬೆನೇ ಹಿಟ್ಲರ್..ಮಾಡಿದಕಿಂತ್ತ ಜೋರು...
ಉ: ಕ್ರೌರ್ಯ ಮತ್ತು ಬಲಿ
ಹೌದು ಹೌದು!! ಇವರಿಗೆ ಇಂದಿರಾ ಗಾಂದಿ ಸತ್ತಾಗ ನಡೆದ ಗಲಬೇಲಿ , ಮೊನ್ನೆ ಮೊನ್ನೆ ಪ.ಬಂಗಾಲ ದಲ್ಲಾದ ಗಲಬೇಲಿ ಯಾರಿಗೂ ಏನು ಆಗಲಿಲ್ಲ...... ಅವರ್ರೆಲ್ಲರೂ ಗುಜರಾತ್ ಗಲಬೇಲೇ ಅವರಾಗವರೇ ಬ೦ದು ಸತ್ತರು ಅನ್ನೋ ತರಹ !! ಅಲ್ವಾ!!
ಉ: ಕ್ರೌರ್ಯ ಮತ್ತು ಬಲಿ
ನನ್ನ ಬ್ಲಾಗಿನಲ್ಲಿ ಹೇಳಿದ್ದೀರ ಎಂದು ಹೇಳುತ್ತಿದ್ದೇನೆ ಅಷ್ಟೆ.
ಇಂದಿರಾಗಾಂಧಿ, ಮೋದಿ ಅಷ್ಟೆ ಅಲ್ಲ - ಹಿಟ್ಲರ್, ಸ್ಟಾಲಿನ್ ಜತೆಗೆ ಪಾಲ್‌ಪಾಟ್, ಮುಗಾಬೆ, ಪಿನೋಚೆ ... ಹೀಗೆ ಪಟ್ಟಿ ಉದ್ದವಿದೆ. ಎಲ್ಲರನ್ನೂ ಪ್ರತಿಸಲವೂ ಹೇಳುವ ಗರ್ಜಿರಬೇಕಾಗಿಲ್ಲ.
ಇರಲಿ. ಯಾರು ಹೆಚ್ಚು ಕ್ರೂರಿಗಳು, ಪಟ್ಟಿಯಲ್ಲಿ ಯಾರು ಮೇಲಿರಬೇಕು, ಯಾರು ಕೆಳಗಿರಬೇಕು ಎಂಬುದನ್ನು ದಯವಿಟ್ಟು ಬೇರೆ ಎಳೆಯಲ್ಲಿ ಚರ್ಚಿಸಿ ನಿರ್ಧರಿಸಿಕೊಳ್ಳಿ.
ನಿಮಗೆ ಒಳ್ಳೆಯದಾಗಲಿ.
ಉ: ಕ್ರೌರ್ಯ ಮತ್ತು ಬಲಿ
ಅನಿವಾಸಿ..ಗಳೇ
ಇಲ್ಲಿಯೂ ಕೆಲವರ ’ಕ್ರೌರ್ಯ’ಕ್ಕೆ ನಿಮ್ಮ ಬ್ಲಾಗ್ ’ಬಲಿ’ಯಾಯ್ತು.
ಸದ್ಯ.. ಮುಗಿಸಿದ್ದು ಒಳ್ಳೇದಾಯ್ತು.. ..!
ನಿಮಗಾಗಿ ಒಂದು ಸಂಗತಿ ಹೇಳ್ತೀನಿ...
ಮೊನ್ನೆ ಎನ್.ಡಿ.ಟಿವಿಯಲ್ಲಿ ಒಂದು ಡಾಕ್ಯುಮೆಂಟರಿ ಬಂತು, ಮುಂಬಯ್ ಬಗ್ಗೆ.. ಅದ್ರಲ್ಲಿ..
ಮುಂಬಯ್ ಜಾಗದ ಮೂಲನೆಲೆಗಾರರ ಕೋಳಿ ಬುಡಕಟ್ಟಿನವರು. ಅವರಲ್ಲಿ ಎಶ್ಟೋ ಸಾವಿರ ವರ್ಶಗಳಿಂದ ಅವ್ರಂತೆ. ಅವರ ಕುಲಕಸಬು ಮೀನುಗಾರಿಕೆ. ಹಿಂದಿನಿಂದ್ಲೂ ಅವರು ಕಡಲ ಮೀನು ಹಿಡಿದು ಮಾರಿ ಬದುವವರು. ಮುಂಬಯ್ಯ ಹೆಚ್ಚು ಮಂದಿ ಮೀನು ತಿನ್ನುವವರಾಗಿದ್ದರಂತೆ. ಅದರಿಂದ ಮೀನುಮಾರುಕಟ್ಟೆಯ ಪಕ್ಕದಲ್ಲಿ ಮನೆಗಳಿದ್ದರೂ ಅವರೆಂದೂ ಮೀನಿನ ಕಂಪಿಗೆ ಗೊಡವೆ ಮಾಡದವರಂತೆ. ಪಾಪಾ ಕೋಳಿಮಂದಿ ಕಶ್ಟಪಟ್ಟು ದುಡಿದು ಹೊಟ್ಟೆಹೊರುವವರು.
ಆಮೇಲೇ ಏನಾಯ್ತು ಅಂದ್ರೆ.. ಈ ಕೋಳಿಗಳ ಮೀನು ಮಾರುಕಟ್ಟೆಯ ಪಕ್ಕ.. ಎಂದು ದೊಡ್ಡ ಅಪಾರ್ಟ್ಮೆಂಟ್ಗಳ ಕಟ್ಟಡ ಎದ್ದಿತಂತೆ. ಅದ್ರಾಗೆ ಗುಜರಾತಿನ ಮಂದಿ ತುಂಬಿಕೊಂಡರಂತೆ.. ಗುಜರಾತಿನ ಜಯ್ನರು, ಬ್ರಾಮ್ರೂ ಇರಬೇಕು.. ನೆನೆಪಿಲ್ಲ.. ಅವರೋ ಶುದ್ದಸಸ್ಯಹಾರಿಗಳಂತೆ, ಅದಕ್ಕೆ ಆಗ ಕಟ್ಟಡಗೊಂಚಲಿನಲ್ಲಿರು ೧೫೦ ಸುಮಾರು ಮನೆಗಳನ್ನು ಬರೀ ಗಿಡತಿನಿಗಳಿಗೇನೇ ಮೀಸಲಂತೆ, ಮಿಕ್ಕವರು ಒಳಕ್ಕೂ ಹೊಕ್ಕತಕ್ಕವರಲ್ಲ.
ಮೀನು ಮಾರುಕಟ್ಟೆಯ ಪಕ್ಕದಲ್ಲೇ ನೆಲಗಬಳಿಸಿ ಕಟ್ಟಡಕಟ್ಟಿಕೊಂಡಿದ್ದರಿಂದ, ಈ ಕೋಳಿಗಳ ಮೀನು ಯಾಪಾರಕ್ಕೆ ಕುಂದುಂಟಾಯ್ತು. ಅದಕ್ಕೆ ಪಾಪಾ ಅವರು ಮೀನುಗಳನ್ನು ಬುಟ್ಟಿಗಳಲ್ಲಿ ಹೊತ್ತು ಅಲೆದು ಮಾರಲು ಸುರು ಮಾಡಿದ್ರು. ಆದ್ರೇ ಇಶ್ಟಕ್ಕೆ ಬಿಡುವರೇ ಪರಮ ದಯಾಳುಗಳಾದ ಶುದ್ಧಶಾಖಾಹಾರಿಗಳು.. ಮೀನು ಮಾರುಕಟ್ಟೆಯಿಂದ ತಮಗೆ ಬಲು ಕೆಟ್ಟವಾಸನೆ ಬರುವುದೆಂದು.. ರಾಜಕೀಯ ಮಾಡಿ, ಆ ಮೀನುಮಾರುಗಟ್ಟೆಯನ್ನ ಮುಚ್ಚಿಸಿಯೇ ತೀರಿದರಂತೆ.
ಇಲ್ಲಿ ಶುದ್ಧಶಾಖಾಹಾರಿಗಳ ಪರಮಪತ್ಯೆಗೆ ಧರ್ಮಾಚರಣೆಗೆ ಬಡಕೋಳಿಗಳ ನೆಲೆ ಹೋಯ್ತು.. ಬದುಕುವ ಕಸಬಿಗೆ ಕುಂದಾಯ್ತು..
ಬದುಕಿರುವ ಮಂದಿಗೆ ಮೇಲಿದು ಕ್ರರ್ವ್ಯವಲ್ಲವೇ? ಅಲ್ಲಾಗೆ ಒಂದ್ ಬಾಂಬೆಸೆದು ಎಲ್ರನ್ನ ಕೊಲ್ಲೋದೇ ವಾಸಿ...ಬದುಕಿಸಿ ನೋವುಕೊಡೋದು.. //!!
ಇದಕ್ಕೆ ಕಮೆಂಟು ಹಾಕಿದಿದ್ದರೂ ಅಡ್ಡಿಯಿಲ್ಲ.. ಓದಿಕೊಳ್ಳಿ ಸಾಕು..
ಉ: ಕ್ರೌರ್ಯ ಮತ್ತು ಬಲಿ
ಅಲ್ಲಾಗೆ = ಅಲ್ಲಿ + ಆಗೆ
ಉ: ಕ್ರೌರ್ಯ ಮತ್ತು ಬಲಿ
ಓಹ್ ..ಇಂತವರ ಬ್ಲಾಗ್ ನಲ್ಲಿ ಇಂತವರೇ ಕಮೆಂಟ್ ಹಾಕಬೇಕು ಅನ್ನೊದಿದೆಯೊ ಇಲ್ಲಿ ಗೊತ್ತಿರಲಿಲ್ಲ..ಕ್ಶಮಿಸಿ. ಬರೆಯುವಾಗ ಮೊದಿ,ಇನ್ನೊಬ್ಬ ಅಂತ ಬರೆದು ಕೊನೆಗೆ ನಾನು ಹಾಗೆ ಹೇಳಿಲ್ಲ ಅನ್ನುವವರೇ ಇಲ್ಲಿ ಯೆಲ್ಲ, ಅದಕ್ಕೆ ಒಬ್ಬರು ಒಂದು ಕತೆ ಬೇರೆ ಬರಿತಾರೆ..ಇಂತ ಸಾವಿರ ಕತೆ ನಿಮಗೆ ಅಪಥ್ಯ ಆಗುವಂತದು ನಡೆದರು ಸಮರ್ಥಿಸಲು..ಇಂತವುಗಳನ್ನು ಚೆನ್ನಾಗಿ ಹೆಣೆಯುತ್ತೀರಿ. ನನಗು ನಿಮ್ಮ ಈ ವಿಷಯ ಮುಂದುವರಿಸಲು ಇಚ್ಚೆ ಇಲ್ಲ..(ಪ್ರಯೊಜನ ಇಲ್ಲ)..
ಒಳ್ಳೆಯದಾಗಲಿ
ಉ: ಕ್ರೌರ್ಯ ಮತ್ತು ಬಲಿ
ರೋಶನ್...
ನಾನು ಮೋದಿ ಬಗ್ಗೆ ಹೇಳಲ್ಲಿಪ್ಪ..
ಅನಿವಾಸಿಗಳ ಮತ್ತು ನನ್ನ ನಡುವೆ ಮಾತುಕತೆ ಬಲು ನಾಳುಗಳಿಂದ ಇದೆ. ಅವರು ನಾನು ಸಂಪದದಿಂದ ಹೊರಗೂ ಮಾತಾಡ್ತಾ ಇರ್ತೀವಿ.
ನನಗೆ ಅನಿವಾಸಿಗಳಿಗೆ ಆ ಕತೆ ಹೇಳಬೇಕು ಅಂತ ಅನ್ನಿಸ್ತು ಹೇಳಿದೆ...
ನಾನು ಕೊಟ್ಟ ಮಾದರಿ, ನರೇಂದ್ರ ಮೋದಿ, ಇಂದಿರಗಾಂದಿ, ಹಿಟ್ಲರ್ ಅಂತ ಮುಂದಾಳುಗಳಿಗೆ ನಂಟಾದುದಲ್ಲ.. ನಾನು ಕೊಟ್ಟದ್ದು.. ಸಮಾಜದಲ್ಲಿ ಹೇಗೆ ಒಂದು ಗುಂಪು ಇನ್ನೊಂದು ಗುಂಪಿನ ಕುಂದಿಗೆ, ತೊಂದರೆಗೆ, ಓಸುಗರವಾಗಬಲ್ಲದೆಂದು....
ನಾನು ಬರೆದುದು ಅನಿವಾಸಿಯವರ ’ಕ್ರರ್ವ್ಯ’ ಎಂಬುದ ಇನ್ನೊಂದು ನೋಟಕ್ಕೆ ಹೊರತು.. ನೀವೆಲ್ಲರು ಮಾಡುತ್ತಿದ್ದ ಮೋದಿ-ಗೀದಿ ವಿಶಯವಾಗಿಲ್ಲ..!
ನನ್ನ ಕಮೆಂಟಲ್ಲಿ ನಿಮ್ಮ ಇಲ್ಲಿ ಬರೆಯಬೇಡಿ ಎಂದು ಹೇಳುವ ಸಾಲುಗಳಿದ್ದರೆ ನನ್ನ ಮನ್ನಿಪಿದೆ...
ದಯವಿಟ್ಟು ಬರೆಯಿರಿ.. ಯಾರನ್ನೂ ಅಡ್ಡ-ಹೆಸರು ಕರೆದು ಬಾಯಿಮುಚ್ಚಿಸುವುದು ನಮ್ಮ ನಂಬಿಕೆಗೆ ಇದಿರು.. ಮಾತಿಗೆ ಮರುಮಾತುಕೊಡುವೆವು ಹೊರತು.. ಬಾಯಿಮುಚ್ಚಿ ಎಂದು ಹೇಳಲ್ಲ..
ಬಾಯಿಮುಚ್ಚಿ, ಆ ವಿಚಾರವೇಕೆ ಇಲ್ಲಿ, ವಿತಂಡವಾದ, ಅಪ್ರಸ್ತುತ, ಇದನ್ನು ಬರೆಯಬೇಡ ಮುಂತಾದ ಪದಪ್ರಯೋಗವಿಜೃಂಬಣಲೋಲಪಂಗಡವೇ ಬೇರೆಯಿದೆ. ಅದರಲ್ಲಿ ನಾನು ಪಾಲಲ್ಲ.
ನಾನು ಹೇಳೋದು ಇಶ್ಟೇ.. ದಿಟ ಎಂಬು ಮುಕ್ಯ.. ದರ್ಮವೆಂಬುದಲ್ಲ....
ಉ: ಕ್ರೌರ್ಯ ಮತ್ತು ಬಲಿ
ನಾನು ಹೇಳಿರೊದು ಮೊದಿ ಯನ್ನು ಹಿಟ್ಲರ್, ಸ್ಟಾಲಿನ್ ಸಾಲಿನಲ್ಲಿ ನಿಲ್ಲಿಸುವ ಅತಿಬುದ್ದಿವಂತರ ಬಗ್ಗೇನೆ...ಇರಲಿ ಬಿಡಿ... ತೊಂದರೆ ನಮ್ಮ ಬೆನ್ನಿಗೆ ತಾಗಿದಾಗ ತಾನೆ ಯೆಲ್ಲರಿಗು ಅರಿವಾಗುವುದು..ಅಲ್ಲಿ ವರೆಗೆ ಬಾಷಣಗಳನ್ನು ,ಚರ್ಚೆಗಳನ್ನು ನಡೆಸೊಣ..
ಉ: ಕ್ರೌರ್ಯ ಮತ್ತು ಬಲಿ
^ ^
)
ಉ: ಕ್ರೌರ್ಯ ಮತ್ತು ಬಲಿ
ಆದ್ರೇ ಹೇಗೆ ಒಂದು ಗುಂಪು ತನ್ನ ದರ್ಮಾಚರಣೆ ಅನ್ನೋ ತೆವಲಿಂದ ಮತ್ತೊಂದು ಗುಂಪಿನ ಅನ್ನಕ್ಕೆ ಕುತ್ತು ತರ್ತದೆ ಎಂದು ನನ್ನ ಹೇಳಿಕೆ.
ದರ್ಮ-ಅದರ ಮರ್ಮ-ಕರ್ಮ ರಂಪಾಟ ಇವೆಲ್ಲ ಇಲ್ದೇನೇ ಶಾಂತಿಯಿಂದಲೇ ಬದುಕಬೋದು... ಆದ್ರೆ ಹಂಗೆ ಬದುಕಬಯಸುವವರಿಗೆ ದರ್ಮಿಶ್ಟಿರೆಂಬೋ ದರ್ಮಹುಚ್ಚು ಬಿಡರು. ಅಶ್ಟೇ..
ನಾನು ಹೇಳಿದ್ದು ಅನಿವಾಸಿಯವರಿಗೆ ಏನು ಅಂತ ತಿಳಿದರೆ ಸಾಕು.!
ಉ: ಕ್ರೌರ್ಯ ಮತ್ತು ಬಲಿ
ಮಾಯ್ಸಣ್ಣ,
ನಿಮ್ಮ ಕಥೆ ನಿಜಕ್ಕೂ ಆಲೋಚನೆಗೆ ಹಚ್ಚುವಂಥದ್ದಾಗಿದೆ. ನಿಮ್ಮ ಕಥೆಯಲ್ಲಿನ ಎರಡು ಜನಾಂಗಗಳ ಉಲ್ಲೇಖವನ್ನು ಸಾಂಕೇತಿಕವಾಗಿ ತೆಗೆದುಕೊಂಡು ಚರ್ಚಿಸುವುದಾದರೆ ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಜನಾಂಗ ಹಾಗೂ ಹೊಟ್ಟೆ ತುಂಬಿ ಅನಂತರದ ಗೋಜಲುಗಳಲ್ಲಿ ಮುಳುಗಿರುವ ಜನಾಂಗದ ನಡುವಿನ ತಿಕ್ಕಾಟವಿದು ಎನ್ನಬಹುದು. ನಾವು ಇಂಥ ಚರ್ಚೆಗಳನ್ನು ಮಾಡುವಾಗ moral high ground ತೆಗೆದುಕೊಂಡು ಬಿಡುತ್ತೇವೆ. ಅಲ್ಲದೇ ನಾವು ಕೂಡ ನಮ್ಮ ಐಡೆಂಟಿಟಿಗಳೊಂದಿಗೆ ಅಭಿಪ್ರಾಯ ಮಂಡನೆ ಮಾಡುತ್ತಿರುತ್ತೇವೆ. ಹೀಗಾಗಿ ನಮ್ಮ ಐಡೆಂಟಿಟಿಗಳಿಗೆ moral high ground ಕೊಟ್ಟುಕೊಂಡು ಬಿಡುತ್ತೇವೆ. ಚರ್ಚೆಯ ಹಂತಗಳಲ್ಲಿನ ಸ್ವವಿಮರ್ಶೆಯಿಂದ, ಕೆಲವೊಂದು ಖಾರವಾದ ಟೀಕೆಗಳಿಂದ ಈ ಅಪಾಯದಿಂದ ಪಾರಾಗಬಹುದು.
ನಮ್ಮ ಸಮಾಜದಲ್ಲಿ ಬಹುತೇಕ ಚರ್ಚೆಗಳು ಹಾದಿತಪ್ಪುವುದು, ಬಹುತೇಕ ಬುದ್ಧಿಜೀವಿಗಳು ಆಷಾಢಭೂತಿಗಳೆನಿಸಿಕೊಳ್ಳುತ್ತಿರುವುದು ಇದೇ ಕಾರಣಕ್ಕೆ. ತಮ್ಮ ಮುಖ್ಯ ಚರ್ಚೆಯಲ್ಲಿ ಕೇವಲ ಒಂದು ವರ್ಗವನ್ನು, ಒಂದು ಧರ್ಮವನ್ನು ಹಿಡಿದುಕೊಂದು ವಿಶ್ಲೇಷಿಸುತ್ತಾರೆ. ಅವರ ಇಡೀ ಚರ್ಚೆಯ ಆಶಯ ಕೇವಲ ಆ ಒಂದು ವರ್ಗದ, ಧರ್ಮದ, ಸಂಘಟನೆಗಳ ವಿರುದ್ಧ ಮಾತ್ರವಾಗಿರುತ್ತದೆ. ಆ ವಿಮರ್ಶೆಯನ್ನು ಒಪ್ಪಿಕೊಳ್ಳಲು ಯಾರಿಗೂ ತೊಂದರೆಯಿಲ್ಲ. ಆದರೆ ಅಲ್ಲಿ ಪ್ರಶ್ನೆ ಏಳುವುದು ವಿಮರ್ಶೆ ಮಾಡುವವನ ಬದ್ಧತೆಯ ಬಗ್ಗೆ. ಈತನಿಗೆ ನಿಜಕ್ಕೂ ವಸ್ತುನಿಷ್ಠ ಚರ್ಚೆ ನಡೆಸುವ ಆಶಯವಿದೆಯೋ ಅಥವಾ ಹಾಯದ, ಒದೆಯದ ಪ್ರಾಣಿಯ ಮೇಲೆ ‘ಸತ್ಯಾನ್ವೇಷಣೆಯ’ ಪ್ರಯೋಗ ಮಾಡುವ ಉಮ್ಮೇದು ಇದೆಯೋ ಎಂಬುದನ್ನು ತಿಳಿಯಬೇಕಾಗುತ್ತದೆ. ಇಂಥ ಪ್ರಶ್ನೆ ಬಂದಾಗಲೆಲ್ಲಾ ಕೇವಲ ಪಾಸಿಂಗ್ ರೆಫರೆನ್ಸಿನ ಹಾಗೆ ಇವರು ಬೇರೆಲ್ಲಾ ಸಂಗತಿಗಳನ್ನೂ ಹೆಸರಿಸುತ್ತಾರೆ. ಯಾರೂ ಸಹ ತಣ್ಣಗೆ ಕಂಪ್ಯೂಟರಿನ ಮುಂದೆ ಕುಳಿತು ತಮ್ಮ ಪ್ರಾಣಕ್ಕೆ ಕುತ್ತು ತರಬಹುದಾದಂಥ ‘ಅಭಿಪ್ರಾಯ ಮಂಡನೆ’, ‘ಅಭಿವ್ಯಕ್ತಿ’ಗಾಗಿ ಇಷ್ಟಪಡುವುದಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com