ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?
ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?
ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ
ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.
ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.









RSS:
ಪ್ರತಿಕ್ರಿಯೆಗಳು
ಉ: ಜಗನ್ನಾಥನ ತಬ್ಬಲಿ ಮಕ್ಕಳು
ಬಹಳ ಚನ್ನಾಗಿದೆ ಎಂದು ಹೇಳಹೊರಟಿದ್ದೆ, ಆದರೆ ಅಷ್ಟೇ ಹೇಳಿಬಿಟ್ಟರೆ ಈ (avoidable) ದುರಂತಕ್ಕೆ, ಅದರಲ್ಲಿ ಮಡಿದವರಿಗೆ, ಈ ಕವನದಲ್ಲಿ ಹರಳುಗಟ್ಟಿರುವ ಭಾವನೆಗಳಿಗೆ ಅವಮಾನವಾಗಿಬಿಡುತ್ತದೇನೊ!
ದೇವುಡು ಅವರ ಮಹಾಬ್ರಾಹ್ಮಣ ಕಾದಂಬರಿಯಲ್ಲಿ ಕೌಶಿಕ ವಿಶ್ವಾಮಿತ್ರನಾಗುವ ಹಾದಿಯಲ್ಲಿ ಸೃಷ್ಟಿ ರಹಸ್ಯವನ್ನು ಅರಿಯುವಾಗ, ಧಡಧಡನೆ ಉರುಳುತ್ತಿರುವ ಜಗನ್ನಾಥನ ತೇರನ್ನೂ, ಅದಕ್ಕೆ ಸಿಲುಕಿ ಹಲವರು ಸಾಯುತ್ತಿದ್ದರೂ ಮತ್ತೆ ಮತ್ತೆ ಜನ ಬಂದು ಅದನ್ನು ಎಳೆಯುವದನ್ನೂ ಕನಸಿನಲ್ಲಿ ಕಾಣುತ್ತಾನೆ. ಆ ಕನಸು ಅದೆಷ್ಟು ಬಾರಿ ನಿಜವಾಗಿದೆಯೋ!
ಅನಿಲ
ಉ: ಜಗನ್ನಾಥನ ತಬ್ಬಲಿ ಮಕ್ಕಳು
ಚಂದಕ್ಕಿಂತ ಪರಿಣಾಮದ ಬಗ್ಗೆ ಗಮನ ಹರಿಸಿದ್ದಕ್ಕೆ ತ್ಯಾಂಕ್ಸ್...
ಕೌಶಿಕನ ಕನಸಿನ ಬಗ್ಗೆ ಗೊತ್ತಿರಲಿಲ್ಲ... ಆದರೆ, ಅದು ಕನಸಾಗಿ ಏಕೆ ಬಂತು ಎಂದು ಯೋಚಿಸುವಂತೆ ಮಾಡಿದಿರಿ... ಅದಕ್ಕೂ ತ್ಯಾಂಕ್ಸ್. ಅದು ದೇವುಡುರವರು ಹುಟ್ಟು ಹಾಕಿದ್ದೋ ಅಥವಾ ಪುರಾಣದಲ್ಲೂ ಬರುತ್ತದೋ? ಕುತೂಹಲ.
ಉ: ಜಗನ್ನಾಥನ ತಬ್ಬಲಿ ಮಕ್ಕಳು
ಕೌಶಿಕ ಕನಸಿನಲ್ಲಿ ಕಾಲಪುರುಷನನ್ನು ಹಾಗೆ ಕಾಣುತ್ತಾನೆ ಅಂತ ನೆನಪು. ಪುರಾಣದಲ್ಲಿ ಬರುವದೋ ಏನೋ ಗೊತ್ತಿಲ್ಲ.
ಉ: ಜಗನ್ನಾಥನ ತಬ್ಬಲಿ ಮಕ್ಕಳು
ನನಗೆ ನೆನಪಿರುವಂತೆ ನಂಜನಗೂಡಿನಲ್ಲೂ ಒಮ್ಮೆ ಹೀಗಾಗಿತ್ತು. ಅಮ್ಮ ಹೇಳುವ ಗಾದೆ ನೆನಪಾಗುತ್ತೆ: "ಜನ ಮರುಳೋ ಜಾತ್ರೆ ಮರುಳೋ".
--
ನನ್ನ ಬ್ಲಾಗ್:
ಪರಿವೇಶಣ | PariveshaNa