ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

"ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

June 2, 2008 - 4:57pm — anivaasi

ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ.

ಅಂತಹ ದೇಶದಲ್ಲಿ ಅಕಿರಾ ಕುರೋಸಾವಾ "ಐ ಲೀವ್ ಇನ್ ಫಿಯರ್‍" ಎಂಬ ಚಿತ್ರ ಮಾಡಿದ್ದಾನೆ -೧೯೫೫ರಲ್ಲಿ - ಅಟಾಮಿಕ್ ಬಾಂಬ್ ಸಿಡಿದ ಹತ್ತು ವರ್ಷಕ್ಕೆ. ಚಿತ್ರದ ನಾಯಕ ಒಂದು ಕೋಲ್ ಫೌಂಡ್ರಿಯ ಮಾಲೀಕ. ಬಾಂಬಿಂದ ತಪ್ಪಿಸಿಕೊಳ್ಳಲು ಬ್ರೆಜಿಲ್ಲಿಗೆ ವಲಸೆ ಹೋಗುವುದೊಂದೇ ಉಳಿದಿರುವ ದಾರಿ ಎಂಬ ಅಚಲವಾದ ನಿರ್ಧಾರಕ್ಕೆ ಬಂದಿದ್ದಾನೆ. "ಸಾಯುವುದು ಹೌದು, ಆದರೆ ಕೊಲ್ಲಲ್ಪಡಬಾರದು" ಎಂಬುದು ಅವನ ಸವಾಲು. ಕುಟುಂಬಕ್ಕೆ ಸೇರಿದ ಫೌಂಡ್ರಿಯನ್ನು ಮಾರಿ ಬಂದ ದುಡ್ಡಲ್ಲಿ ಕುಟುಂಬವೆಲ್ಲಾ ಬ್ರೆಜಿಲ್ಲಿಗೆ ಹೋಗಬೇಕೆಂದು ಅವನ ಯೋಚನೆ. ಅದಕ್ಕೆ
ಅವನ ಮಕ್ಕಳಿಂದ ತೀವ್ರ ವಿರೋಧ. ಅವನಿಗೆ ಹುಚ್ಚೆಂದು ಸಾಬೀತು ಮಾಡಿ ವಲಸೆ ತಪ್ಪಿಸಲು ಅವನ ಮಕ್ಕಳು ಫ್ಯಾಮಿಲಿ ಕೋರ್ಟಿಗೆ ಹೋಗುತ್ತಾರೆ.

ಕೋರ್ಟು ಮಕ್ಕಳ ಪರವಾಗಿ ತೀರ್ಪಿತ್ತು ನಾಯಕನ ವಲಸೆಯ ನಿರ್ಧಾರಕ್ಕೆ ಆಧಾರವಿಲ್ಲ ಎನ್ನುತ್ತದೆ.

ಆ ತೀರ್ಪು ಕೊಟ್ಟ ಗುಂಪಿನಲ್ಲಿ ಒಬ್ಬ ಹಲ್ಲಿನ ಡಾಕ್ಟರ್‍ ಇದ್ದಾನೆ. ಅವನಿಗೆ ತೀರ್ಪು ಸರಿಯಾಗಲಿಲ್ಲ ಎಂಬ ಅಪರಾಧಿ ಭಾವ ಹತ್ತಿಕೊಂಡಿದೆ. ಮುಂಚೊಮ್ಮೆ ಕೋರ್ಟಿನ ಆಗುಹೋಗಿನಲ್ಲಿ ಅವನು ನಾಯಕನನ್ನು - "ಭಯದಿಂದಾಗಿ ಈ ನಿರ್ಧಾರಕ್ಕೆ ಬಂದೆಯ?" ಎಂದು ಕೇಳಿರುತ್ತಾನೆ. ಅದಕ್ಕೆ ನಾಯಕ "ಭಯವೇನೂ ಇಲ್ಲ. ಏಕೆಂದರೆ ತಪ್ಪಿಸಿಕೊಳ್ಳುವ ದಾರಿ ಇದೆಯಲ್ಲ!" ಎಂದು ಸಹಜವಾಗಿ ಹೇಳಿರುತ್ತಾನೆ.

ತೀರ್ಪಿತ್ತ ಎಷ್ಟೋ ದಿನದ ಬಳಿಕ ಆ ಡಾಕ್ಟರ್‍ ನಾಯಕನನ್ನು ಬಸ್ಸು ಲಾರಿ ಕಾರು ಗಿಜಿಗುಡುವ ಒಂದು ಬ್ರಿಡ್ಜಿನಡಿ ಎದುರಾಗುತ್ತಾನೆ. ನಾಯಕ "ಮುಂಚೆ ಭಯವಿರಲಿಲ್ಲ. ಆದರೆ ನಿಮ್ಮಿ ತೀರ್ಪಿನ ನಂತರ ನಾನು ಹಗಲಿರುಳು ಭಯದಿಂದ ನರಳುವಂತಾಗಿದೆ" ಎಂದು ಸಿಡಿಮಿಡಿಯಾಗಿ ಬಯ್ದು ನಡೆದು ಹೋಗುತ್ತಾನೆ. ಒಬ್ಬ ಮಹಾ ದುರಂತ ನಾಯಕನ ಹಾಗೆ ಕಾಣುತ್ತಾನೆ.

ತನ್ನ ಕುಟುಂಬವನ್ನು ಉಳಿಸಲಾಗದಕ್ಕೆ ವ್ಯಗ್ರನಾಗುತ್ತಾ, ಅಂತರ್ಮುಖಿಯಾಗುತ್ತಾ ಹೋಗುತ್ತಾನೆ. ತನ್ನ ಒಬ್ಬ ಕಾನೂನು ಬಾಹಿರ ಮಗಳ ಮಗುವನ್ನು ರಕ್ಷಿಸುತ್ತಿದ್ದೇನೆ ಎಂದು ಭ್ರಾಂತನಾಗುತ್ತಾನೆ. ಪಾರಾಗುವ ಯಾವ ದಾರಿಯೂ ಹೊಳೆಯದಾಗ, ತನ್ನ ಇಡೀ ಜೀವನದ ಬೆವರಿನ ಫಲವಾದ ನೆಚ್ಚಿನ ಫೌಂಡ್ರಿಗೇ ಬೆಂಕಿಯಿಡುತ್ತಾನೆ. ಅದು ಸುಟ್ಟಳಿದ ಮೇಲಾದರೂ ಮಕ್ಕಳು ತನ್ನೊಡನೆ ಬ್ರೆಜಿಲ್ಲಿಗೆ ಬರುತ್ತಾರೆ ಎಂಬ ಆಸೆಯವನಿಗೆ. ಆದರೆ, ಫೌಂಡ್ರಿಯ ಅವಶೇಷದ ಎದುರು ಅವನ ಕೆಲಸಗಾರರಲ್ಲೊಬ್ಬ - "ಹಾಗಾದರೆ ನಮ್ಮದು ನಾಯಿಪಾಡಾಗುತ್ತದಲ್ಲ, ಅದು ನಿಮಗೆ ಸರಿಯೆ?" ಎಂದು ಕೇಳುತ್ತಾನೆ. ಆ ಪ್ರಶ್ನೆ ಚಿತ್ರದ ಹರವು ಕುಟುಂಬದ ಪರಿಧಿಯನ್ನು ಮೀರಿ ತಟ್ಟನೆ ಹಿಗ್ಗಿಸಿಬಿಡುತ್ತದೆ. ಇಷ್ಟು ಹೊತ್ತಿಗಾಗಲೇ ತನ್ನ ಸೋಲಿನಿಂದಾಗಿ ಹುಚ್ಚಾಗಿರುವ ನಾಯಕ "ಬನ್ನಿ ಎಲ್ಲರೂ ಬ್ರೆಜಿಲ್ಲಿಗೆ ಹೋಗೋಣ" ಎನ್ನುತ್ತಾನೆ!

ಇನ್ಸೂರೆನ್ಸ್ ಫ್ರಾಡ್ ಆಪಾದನೆಯ ಮೇಲೆ ನಾಯಕನನ್ನು ಜೈಲಿಗೆ ತಳ್ಳುತ್ತಾರೆ. ಜೈಲಿನಲ್ಲಿ ಇಬ್ಬರು ಬಂಧಿಗಳು ಇವನನ್ನು ಕೆಣಕುತ್ತಾ "ಬ್ರೆಜಿಲ್ಲಿಗೆ ಹೋದರೆ ಲೋಕವನ್ನು ಸುಡುವ ಬಾಂಬಿನಿಂದ ತಪ್ಪಿಸಿಕೊಳ್ಳಬಲ್ಲೆ ಎಂದುಕೊಂಡೆಯ? ತಪ್ಪಿಸಿಕೊಳ್ಳಬೇಕಾದರೆ ನೀನು ಈ ಲೋಕವನ್ನೇ ತೊರೆದು ಹೋಗಬೇಕು" ಎಂದು ಹೀಯಾಳಿಸುತ್ತಾರೆ.

ಕುಟುಂಬದವರು ಜೈಲಿನಿಂದ ಬಿಡಿಸಿ ನಾಯಕನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ. ತೀರ್ಪುಗಾರರಲ್ಲಿ ಒಬ್ಬನಾದ ಡಾಕ್ಟರ್‍ ಅವನನ್ನು ಬಂದು ಭೇಟಿ ಮಾಡುತ್ತಾನೆ. ನಮ್ಮ ದುರಂತ ನಾಯಕ "ಅತ್ತ ಕಡೆಯ ಲೋಕ ಹೇಗಿದೆ? ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ" ಎನ್ನುತ್ತಾನೆ. ಕಿಟಕಿಯಾಚೆ ಪ್ರಖರವಾಗಿ ಉರಿಯುತ್ತಿರುವ ಸೂರ್ಯನನ್ನು ನೋಡಿ ಸಂಕಟ ಮತ್ತು ನೋವಿನಿಂದ "ಅಯ್ಯೋ ಭೂಮಿ ಸುಟ್ಟು ಹೋಯಿತೆ?" ಎಂದು ಕೇಳುತ್ತಾನೆ.

ಆ ಡಾಕ್ಟರ್‍ ಅಲ್ಲಿಂದ ಹೊರಗೆ ಹೋಗುವಾಗ, ನಾಯಕನ ಕಾನೂನು ಬಾಹಿರ ಮಗಳು, ಅವನ ನೆಚ್ಚಿನ ಮೊಮ್ಮಗುವನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಅವನಿಗೆ ಊಟ ತರುತ್ತಾಳೆ. ನಾಯಕನ ಬಗ್ಗೆ ಅಪಾರವಾದ ಕರುಣೆ ತೋರುವ ಇವರಿಬ್ಬರೂ ಒಬ್ಬರನ್ನೊಬ್ಬರು ದಾಟಿ ಹೋಗಿ ಒಂದು ಕ್ಷಣ ನಿಲ್ಲುತ್ತಾರೆ. ಮಾತಿಗೇನೂ ಉಳಿದಿಲ್ಲ ಎಂಬಂತೆ ಮುಂದುವರೆಯುತ್ತಾರೆ. ಅವರ ಹೆಜ್ಜೆ ಸಪ್ಪಳ ಆಸ್ಪತ್ರೆಯ ಆವರಣದಲ್ಲಿ ಪ್ರತಿಧ್ವನಿಯಾಗಿ ಮೊಳಗುತ್ತಾ ಚಿತ್ರ ಮುಗಿಯುತ್ತದೆ.

ಯಾವುದೇ ಪ್ರಣಾಳಿಕೆಯ ಬೆನ್ನುಹತ್ತದೆ, ಕುರೋಸಾವಾನಿಗೇ ವಿಶಿಷ್ಟವಾದ ಮಾನವೀಯ ನೆಲೆಯಲ್ಲಿ ಕತೆ ಬಿಚ್ಚಿಕೊಳ್ಳುತ್ತದೆ, ಹರಡಿಕೊಳ್ಳುತ್ತದೆ ಮತ್ತು ಸುತ್ತಿಕೊಳ್ಳುತ್ತದೆ. ಶಾಂತಿ, ಯುದ್ಧ, ಬಾಂಬುಗಳ ಬಗ್ಗೆಗಿನ ನಮ್ಮ ಚಿಂತನೆಗೆ ಹಲವಾರು ಸವಾಲುಗಳನ್ನು ಎಬ್ಬಿಸಿಟ್ಟು ಚಿತ್ರ ಕೊನೆಗೊಳ್ಳುತ್ತದೆ.

  • ಚಲನಚಿತ್ರ
~.~
  • anivaasi ರವರ ಬ್ಲಾಗ್
  • Login or register to post comments
  • 352 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 3, 2008 - 9:15am — mahesha

ಉ: "ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

mahesha's picture

ಸಾರ್‍..

ಈ ಜಪಾನಿ ಮತ್ತು ಕೊರಿಯದ ಸಿನಿಮಗಳು ತಿಳಿಯೋದೇ ಇಲ್ಲ..

ಅದರಲ್ಲೂ ಈ ಜಪಾನಿ ಮಂದಿಯ ಬಾಯಿಬಿಡಿಸೋದೇ ಕಶಟ. ಅವರು ಏನೂ ಹೇಳಿಕೊಳ್ಳದ ಮಂದಿಯಂತೆ!

ಈ ಸಿನಿಮ ಸಿಕ್ಕರೇ ನೋಡಿವೆ...

ನಿಮ್ಮ ಬರವಣಿಗೆಗೆಯಲ್ಲಿ ಏನೋ ಯತುವಾಸವಾಗಿದೆ.. ಏನೆಂದು ನನಗೆ ತಿಳೀತಿಲ್ಲ.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 2:41pm — anivaasi

ಉ: "ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

anivaasi's picture

ಮಹೇಶ್,
ನೋಡಿ, ಹಾಗೆ ಕರೊಸಾವಂದು ಯಾವುದು ಸಿಕ್ಕರು ನೋಡಿ. ನಾನು ಎಲ್ಲ ನೋಡಿಲ್ಲ. ಆದರೆ ನೋಡಿದವೆಲ್ಲಾ ಒಂದಲ್ಲ ಒಂದು ಬಗೆ ಇಷ್ಟವಾಗಿದೆ.

ಯತ್ವಾಸ ಅಂತ ಯಾಕನ್ನಿಸ್ತು ಅಂತನಾರೂ ಹೇಳಿದರೆ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:05am — mahesha

ಉ: "ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

mahesha's picture

ಯಾಕೆ ಅಂತ ನನಗೆ ತಿಳೀತಿಲ್ಲ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 11:18pm — hpn

ಉ: "ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

hpn's picture

ಕುರೋಸಾವಾರ ಸುಮಾರು ಎಲ್ಲ ಚಿತ್ರಗಳನ್ನೂ ನೋಡಿರುವೆ. "ಡರ್ಸು ಉಝಾಲಾ" ಹಾಗೂ "ಇಕಿರು" ಕೂಡ ಹೀಗೆಯೇ - ಒಬ್ಬ ವ್ಯಕ್ತಿಯ ಮನಸಿನ ಚಿತ್ರಗಳು ಕಾಣಿಸಿಕೊಳ್ಳುತ್ತವೆ.

"ಅತ್ತ ಕಡೆಯ ಲೋಕ ಹೇಗಿದೆ? ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ"

ಒಂದೆರಡು ಕ್ಷಣ ಮೌನವಾಗಿಸಿತು!

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 4:20am — anivaasi

ಉ: "ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

anivaasi's picture

ನೀವೇ ಅದೃಷ್ಟವಂತರು-ನಾನು ಅವನ ಎಲ್ಲಾ ಚಿತ್ರಗಳನ್ನು ನೋಡಿಲ್ಲ.
ಇಕಿರುವಿನ ನಿರೂಪಣಾ ತಂತ್ರವಂತೂ ಎಷ್ಟು ಸಲ ನೋಡಿದರೂ ಕಲಿಯುವುದಿದೆ ಅನಿಸತ್ತೆ. ಆ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನು ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎರಡು ಬೆಸ್ತರ ನೀಲುಗಳು
  • ಝೆನ ಕಥೆ ೩೬: ಛತ್ರ
  • ಪತನದ ಕತೆ
  • ಝೆನ್ ಕಥೆ ೩೩: ಸಾವಧಾನ!
  • ನೀಳ್ಗತೆ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 354 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator