ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಇದು ನನಗೆ ನನ್ನ ಸ್ನೇಹಿತರೊಬ್ಬರಿಂದ ಬಂದ ಈ-ಮೇಲ್ ನ ಕನ್ನಡ ಅನುವಾದ.....................................................
-------------------------------------------------------------------------------------------------------------
ಇದೊಂದು ಹಳೆಯ ಕತೆ ಅಂತ ತಿಳ್ಕೋಬೇಡಿ. ಈ ಹಳೆಯ ಕತೆಗೆ ಹೊಸ ಭಾಗವೊಂದು ಸೇರ್ಪಡೆಯಗಿದೆ. ಕುತೂಹಲಕಾರಿಯಾಗಿದೆ!
ಒಬ್ಬ ಯುವಕ ಮನೆಯಲ್ಲೇ ಟೋಪಿಗಳನ್ನು ತಯಾರಿಸಿ ಊರಿಂದೂರಿಗೆ ಹೋಗಿ ಅವನ್ನು ಮಾರುತ್ತಿದ್ದ. ಬೆಳಿಗ್ಗೆ ಒಂದೂರಿನಲ್ಲಿದ್ದರೆ, ಮಧ್ಯಾಹ್ನ ಮತ್ತೊಂದೂರು, ಸಂಜೆ ಮಗದೊಂದೂರು. ಒಂದು ಮಧ್ಯಾಹ್ನ ಒಂದೂರಿನಿಂದ ಮತ್ತೊಂದೂರಿಗೆ ನಡೆದು ಹೋಗುತ್ತಿದ್ದ. ತಲೆಯ ಮೇಲೆ ಟೋಪಿಯಿದ್ದರೂ, ಬಿಸಿಲು ಹೆಚ್ಚಾಗಿದ್ದುದರಿಂದ ಸ್ವಲ್ಪ ವಿಶ್ರಾಂತಿ ಪಡೆಯೋಣವೆನಿಸಿತು. ದಾರಿಯಲ್ಲೊಂದು ಮಾವಿನ ಮರ ಕಂಡಿತು. ಟೋಪಿಗಳಿದ್ದ ಚೀಲ ಪಕ್ಕದಲ್ಲಿಟ್ಟುಕೊಂಡು ಮರದ ನೆರಳಲ್ಲಿ ಮಲಗಿಬಿಟ್ಟ. ನಿದ್ದೆಯಿಂದೆದ್ದು ನೋದಿದರೆ ಚೀಲದಲ್ಲಿ ಒಂದು ಟೋಪಿಯೂ ಇರಲಿಲ್ಲ. ಗಾಬರಿಗೊಂಡು ತಲೆಯೆತ್ತಿ ನೋಡಿದಾಗ ಮರದ ಮೇಲೆ ಹತ್ತಾರು ಕೋತಿಗಳು ಕುಳಿತಿದ್ದವು. ಎಲ್ಲ ಕೋತಿಗಳೂ ತಲೆಗೊಂದೊಂದು ಟೋಪಿಗಳನ್ನು ಹಾಕಿಕೊಂಡು ಕುಳಿತಿದ್ದವು. ಕೋತಿಗಳದ್ದು ಅನುಕರಣ ಬುದ್ಧಿಯೆಂಬುದು ಈತನಿಗೆ ಗೊತ್ತಿತ್ತು. ಆತ ತನ್ನ ಟೋಪಿಯನ್ನು ನೆಲಕ್ಕೆಸೆದ. ಎಲ್ಲ ಕೋತಿಗಳು ತಮ್ಮ ಟೋಪಿಗಳನ್ನು ನೆಲಕ್ಕೆಸೆದವು. ಆತ ತಕ್ಷಣ ಎಲ್ಲ ಟೋಪಿಗಳನ್ನು ಆಯ್ದುಕೊಂಡು ತನ್ನ ಚೀಲಕ್ಕೆ ತುಂಬಿಕೊಂಡು, ಮುಂದಿನೂರಿಗೆ ಓಡಿದ. ಅಂದು ಸಂಜೆ ತನ್ನ ಬುದ್ಧಿವಂತಿಕೆ ಕತೆಯನ್ನು ಮಕ್ಕಳಿಗೆ ಹೇಳಿದ. ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕರು.
ಇದಿಷ್ಟು ಕತೆಯ ಹಳೆಯ ಭಾಗೆ. ಈಗ ಹೊಸ ಭಾಗವನ್ನು ನೋಡಿ.
ಐವತ್ತು ವರ್ಷಗಳ ನಂತರ ಆತನ ಮೊಮ್ಮಗನೂ ವಂಶಪಾರಂಪರೆಯ ವೃತ್ತಿಯಲ್ಲಿದ್ದ. ಟೋಪಿ ತಯಾರಿಸಿ, ಊರಿಂದೂರಿಗೆ ಅಲೆಯುತ್ತ ಟೋಪಿಗಳನ್ನು ಮಾರುತ್ತಿದ್ದ. ಒಂದು ದಿನ ತಾತನಿಗಾದ ಅನುಭವವೇ ಮೊಮ್ಮಗನಿಗೂ ಆಯಿತು. ಆತ ಬಿಸಿಲಿನಲ್ಲಿ ಬಳಲಿ ಅದೇ ಮಾವಿನ ಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ. ತಲೆಯ ಮೇಲೆ ಟೊಪಿ ಹಾಕಿಕೊಂಡಿದ್ದ. ಪಕ್ಕದಲ್ಲಿ ಟೋಪಿಗಳು ತುಂಬಿದ್ದ ಚೀಲವಿತ್ತು. ವಿಶ್ರಾಂತಿಯ ನಂತರ ಎದ್ದು ನೋಡಿದಾಗ ಚೀಲದಲ್ಲಿ ಒಂದು ಟೋಪಿಯೂ ಇರಲಿಲ್ಲ. ಮರದ ಮೇಲಿದ್ದ ಕೋತಿಗಳೆಲ್ಲ ಆತನ ಚೀಲದಿಂದ ಟೋಪಿಯನ್ನು ಹಾರಿಸಿಕೊಂಡು ಹೋಗಿ ತಲೆಯ ಮೇಲೇರಿಸಿಕೊಂಡು ನಲಿಯುತ್ತಿದ್ದವು.
ತಕ್ಷಣ ಆತನಿಗೆ ತನ್ನ ತಾತ ಹೇಳುತ್ತಿದ್ದ ಕತೆಯ ನೆನಪಾಯಿತು. ಆತ ಎದ್ದು ನಿಂತು ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿದ. ಕೋತಿಗಳೂ ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿದವು. ಆತ ನಿಂತಲ್ಲಿಯೇ ಮೂರು ಸುತ್ತು ಸುತ್ತಿದ. ಕೋತಿಗಳೂ ಮೂರು ಸುತ್ತು ಸುತ್ತಿದವು. ಆತ ಏನೇನು ಮಾಡಿದನೋ ಕೋತಿಗಳೂ ಅದನ್ನೇ ಮಾಡಿದವು. ಕೊನೆಗೆ ಆತ ತನ್ನ ತಲೆಯಿಂದ ಟೋಪಿಯನ್ನು ತೆಗೆದು ನೆಲಕ್ಕೆಸೆದ. ಆದರೆ ಒಂದು ಕೋತಿಯೂ ಟೋಪಿಯನ್ನು ಕಿತ್ತೆಸೆಯಲಿಲ್ಲ. ಎಲ್ಲ ಗಂಭೀರವಾಗಿ ಕುಳಿತಿದ್ದವು. ಆತನಿಗೆ ದಿಕ್ಕೇ ತೋಚಲಿಲ್ಲ. ಆಗ ಮರದ ಮೇಲಿಂದ ಒಂದು ಕೋತಿಯು ಕೆಳಗಿಳಿದು ಆತನ ಬಳಿ ಬಂದು ’ನಿನಗೊಬ್ಬನೇ ತಾತ ಇದ್ದಾನೆ ಎಂದುಕೊಂಡಿದ್ದೀಯಾ? ನಿಮ್ಮ ತಾತ ನಿನಗೆ ಕತೆ ಹೇಳಿದಂತೆ, ನಮ್ಮ ತಾತಂದಿರೂ ನಮಗೆ ಕತೆಯನ್ನು ಹೇಳಿದ್ದಾರೆ’ ಎಂದು ಹೇಳಿ ಮತ್ತೆ ಮರವನ್ನೇರಿ ಕುಳಿತುಕೊಂಡಿತು. ಟೋಪಿಯನ್ನೆಸೆಯಲಿಲ್ಲ.
ಪಾಪ! ಮೊಮ್ಮಗ ನಿರಾಶನಾಗಿ ಹೊರಟುಹೋದ.
ಈಗ ಮೊಮ್ಮಕ್ಕಳಿಗೆ ಕತೆಗಳನ್ನು ಹೇಳುವ ಅಜ್ಜ-ಅಜ್ಜಿಯರೂ ಇಲ್ಲ, ಅಜ್ಜ-ಅಜ್ಜಿಯರಿದ್ದರೂ ಕೇಳುವಷ್ಟು ಸಮಯ, ಸಹನೆ ಮೊಮ್ಮಕ್ಕಳಿಗಿಲ್ಲ. ಅವರಿಗೆ ಏನನ್ನಾದರೂ ನೀತಿ ಕತೆಗಳನ್ನು ಹೇಳಬೇಕಿದ್ದರೆ ಟೀವಿಯ ಮೂಲಕವೋ ಅಂತರ್ಜಾಲದ ಮೂಲಕವೋ ಹೇಳಬೇಕಾಗುತ್ತದೆ. ಅಲ್ಲವೇ?

- anil.ramesh ರವರ ಬ್ಲಾಗ್
- Login or register to post comments
- 468 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ನನ್ನ ಚಿಕ್ಕ೦ದಿನ ಕತೆ ನೆನಪಿಸಿಕೊಟ್ಟಿದಕ್ಕೆ ಧನ್ಯವಾದಗಳು
ಆತ್ಮೀಯತೆ ಇ೦ದ,
ಕೃಷ್ಣ
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಅನಿಲ್,
ಇನ್ನೂ ಬರೆಯಿರಿ.
*ಅಶೋಕ್
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಅಶೋಕ್,
ಸುಮ್ಮನೆ ಯೋಚನೆ ಮಾಡ್ತಾ ಇದ್ರೆ ಬರೆಯೋದಕ್ಕೆ ಸಾಕಷ್ಟು ಸಿಗುತ್ತೆ...
ಆದ್ರೆ, ಬರೆಯೋದಕ್ಕೆ ಕೂತ್ರೆ, ಎನೂ ಹೊಳೆಯೋದೇ ಇಲ್ಲ...
ಇನ್ನು ಮುಂದೆ ಪ್ರಯತ್ನ ಪಡುತ್ತೇನೆ...
ಅಂದ ಹಾಗೆ, ನಿಮ್ಮ ಪ್ರತಿಕ್ರಿಯೆಗೆ ನನ್ನಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಆದ್ರೆ, ಬರೆಯೋದಕ್ಕೆ ಕೂತ್ರೆ, ಎನೂ ಹೊಳೆಯೋದೇ ಇಲ್ಲ...
ಹೀಗೆ ಮಾಡಿದರೆ ಹೇಗೆ?
ಒಂದೋ ಯೋಚನೆ ಬಂದೊಡನೆ ಬರೆಯೋದು.
ಇಲ್ಲ ಬರೆಯಲು ಕುಳಿತಾಗ ಯೋಚಿಸೋದು.
*ಅಶೋಕ್
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಮರೆತೆ....
ತಲೆಬರಹ ತಲೆ ತೂಗುವಂತಿದೆ.
*ಅಶೋಕ್
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಇದು ರಾಷ್ಟ್ರಕವಿ ಡಾ|| ಜಿ. ಎಸ್. ಶಿವರುದ್ರಪ್ಪ ಅವರ ’ಹಾಡು ಹಳೆಯದಾದರೇನು| ಭಾವ ನವನವೀನ||’ ಇಂದ Inspire ಆಗಿರೋದು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಹಾಗೇ ಮಾಡ್ತೀನಿ... ಇನ್ನ್ ಮುಂದೆ...
ನಿಮ್ಮ ಸಲಹೆಗೆ ಮತ್ತೊಮ್ಮೆ ಥ್ಯಾಂಕ್ಸ್...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಕೃಷ್ಣ ಅವರೇ,
ನಿಮ್ಮ ಪ್ರತಿಕ್ರಿಯೆಗೆ ನನ್ನಿ...
ಇದು ನನಗೆ ಅಮ್ಮ ನನ್ನ ಚಿಕ್ಕ ವಯಸ್ಸಿನಲ್ಲಿ ಹೇಳುತ್ತಿದ್ದ ಕತೆ... ಈ ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡಿದೆ... ಅಷ್ಟೆ...
ಮತ್ತೊಮ್ಮೆ ನಿಮಗೆ ನನ್ನಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಇವತ್ತಿನ ವಿಜಯ ಕರ್ನಾಟಕದ "ಕ್ಷಣ ಹೊತ್ತು ಅಣಿ ಮುತ್ತು" ಅಂಕಣದಲ್ಲಿ ಇದೇ ಕಥೆ ಬಂದಿದೆ. ನೋಡಿ.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಓಹ್, ಹೌದೇನು?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ನಮ್ಮನೇಲಿ ಪ್ರಜಾವಾಣಿ ತರಿಸೋದು... ಆದ್ರಿಂದ ಇದರ ಬಗ್ಗೆ ಮಾಹಿತಿ ಇಲ್ಲ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ವಿಜಯಕರ್ನಾಟಕದಲ್ಲಿ ಥೇಟ್ ಹೀಗೇ ಇದೆಯಲ್ರಿ!
ಲೇಖನ ಯಾರು ಬರೆದಿದ್ದು?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಹೌದೇ?
ನಂಗೆ ಸ್ನೇಹಿತರೊಬ್ಬರಿಂದ ಈ-ಮೇಲ್ ಬಂದಿತ್ತು, ಕನ್ನಡಕ್ಕೆ ಅನುವಾದಿಸಿ ಬರೆದದ್ದು... ಶೀರ್ಷಿಕೆಯ ಹೆಸರು ನಾನೇ ಇಟ್ಟಿದ್ದು...
ನಿಜವಾಗಿಯೂ ಕಾಪಿ ಹೊಡೆದಿಲ್ಲ ಸರ್,
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಕಾಪಿ ಹೊಡೆದಿರಿ ಎಂದು ಎಲ್ಲಿ ಹೇಳಿದೆ? ಷಡಾಕ್ಷರಿಯವರಿಗೆ ಎಲ್ಲಿಂದ ಸಿಕ್ಕಿತು ಎಂದು ಕೇಳಿ ನೋಡಬೇಕು. ಈಗ ಅವರ "ಅಣಿಮುತ್ತುಗಳ" ಬಗ್ಗೆ ಡೌಟು ಬರ್ತಾ ಇದೆ. ನೀವಿಬ್ಬರೂ ಒಂದೇ ಇ-ಮೇಯ್ಲ್ ಓದಿ ಅನುವಾದ ಮಾಡಿರಲಿಕ್ಕೂ ಸಾಕು.
ಆದರೆ ಬಂದ ಇ-ಮೇಯ್ಲೊಂದರ ಅನುವಾದ ಇದು ಎಂದು ಬರೆದುಬಿಡೋದಲ್ವ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ನಾಡಿಗರೆ,
ಷಡಕ್ಷರಿಯವರು ತಮ್ಮ ಲೇಖನದಲ್ಲಿ...
"ಈ ತಮಾಷೆ ಕಥೆಯನ್ನು ಪುನಶ್ಚೇತನ ಕಾರ್ಯಕ್ರಮದಲ್ಲಿ ತರಬೇತುದಾರ ಚೇತನ್ ರಾಮ್ ರವರು ಹೇಳಿ ಎಲ್ಲರನ್ನು ನಗಿಸಿದರು. ಅವರಿಗೆ ನಮಸ್ಕಾರಗಳು."
ಅಂಥಾ ಬರೆದಿದ್ದಾರೆ !
--ಶ್ರೀ
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಹೌದಲ್ಲವೆ, ಈಗ ಗಮನಿಸಿದೆ. ನನಗೂ ಸಮಯವಿಲ್ಲದ ಸಮಯದಲ್ಲಿ ಎರಡು ಪ್ಯಾರಾಗ್ರಾಫ್ ಮಾತ್ರ ಓದುವ ಪರಿಸ್ಥಿತಿ.
ಅನಿಲ್, ಬರೆಯುವಾಗ ಲೇಖನ ಇ-ಮೇಯ್ಲೊಂದರಿಂದ ಅನುವಾದ ಮಾಡಿದ್ದರೆ, ನಿಮ್ಮದಲ್ಲದಿದ್ದರೆ, ಅಥವ ಎರವಲು ಪಡೆದಿದ್ದರೆ, ಎರವಲು ಪಡೆದದ್ದು ಎಲ್ಲಿಂದ ಎಂದು ಬರೆಯುವುದು ಉತ್ತಮ, ಅಲ್ವೆ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಹರಿ,
ಸರಿಯಾಗಿ ಹೇಳಿದಿರಿ...
ಆದ್ರೆ ಈ ಈ-ಮೇಲ್ ಬಂದಾಗ ಅದು ಪೂರ್ತಿ ಎಡಿಟ್ ಆಗಿ ಬಂತು... ಆದ್ರಿಂದ ಇದನ್ನು ಯಾರು ಬರೆದದ್ದು ಅಂತ ಗೊತ್ತಾಗ್ಲಿಲ್ಲ...
ಮುಂದಿನ ಸಲ ಅನುವಾದ ಮಾಡೋವಾಗ ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತೇನೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಈ ನವ ನವೀನ ಕೋತಿಯ ಕತೆ ಈಗ ಸುಮಾರು ಹತ್ತು ವರ್ಷಗಳ ಹಿಂದೆಯೇ ಮಯೂರದಲ್ಲಿ ಪ್ರಕಟವಾಗಿತ್ತು . ಬರೆದವರು ಯಾರಂತ , ಯಾವಸಂಚಿಕೆಯಲ್ಲಿ ಇದಾವುದೂ ನೆನಪಿಲ್ಲ . ಆದರೂ ನನಗೆ ಈ ಕತೆ ಅನೇಕ ಸಾರಿ ನೆನಪಾಗುತ್ತಲೇ ಇದೆ .
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಕತೆಯು ಹಳೆಯದಾದರೇನು, ಅನುವಾದ ನವನವೀನ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಪ್ರತಿಕ್ರಿಯಿಸಿದ ಎಲ್ಲರಿಗೂ ಹೆನ್ನನ್ನಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.