ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › anil.ramesh ರವರ ಬ್ಲಾಗ್

ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

October 9, 2008 - 11:47pm — anil.ramesh

ಇಂದು ವಿಜಯದಶಮಿಯ ಪ್ರಯುಕ್ತ ರಾತ್ರಿ ೮.೩೦ಕ್ಕೆ ಕಸ್ತೂರಿ ವಾಹಿನಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಹಾಗೂ ಅವರ ಮನೆಯವರೆಲ್ಲರ ಸಂದರ್ಶನ ಬರುತ್ತಿತ್ತು. ಆಗ ನನಗೆ ನೆನಪಿಗೆ ಬಂದದ್ದು ಅವರು ನಿರ್ದೇಶಿಸಿದ "ಮುತ್ತಿನ ಹಾರ" ಚಲನಚಿತ್ರ. ಆ ಚಿತ್ರದ ಹಾಡುಗಳು ನನ್ನ ಬಳಿ ಇಲ್ಲದಿದ್ದರಿಂದ ಗೂಗಲ್ ನಲ್ಲಿ ಸರ್ಚ್ ಮಾಡುವ ಯೋಚನೆ ಮನಸ್ಸಿಗೆ ಬಂತು. ನನಗೆ You tube ಮೂಲಕ ಈ ಚಿತ್ರದ ’ದೇವರು ಹೊಸೆದ ಪ್ರೇಮದ ದಾರ’ ಹಾಡಿನ ವೀಡಿಯೋ ಲಿಂಕ್ ದೊರೆಯಿತು.

ಈ ಹಾಡನ್ನು ನೋಡಿ, ಕೇಳಿ ಬಹಳ ದಿನಗಳಾಗಿದ್ದರಿಂದ, ಈ ಹಾಡು ಅಂತರ್ಜಾಲದಲ್ಲಿ ದೊರಕಿದಾಗ ನನಗೆ ಆದ ಆನಂದ ಅಷ್ಟಿಷ್ಟಲ್ಲ...

ಈ ಹಾಡಿನ ರಾಗ ಸಂಯೋಜನೆ ಅದ್ಭುತವಾಗಿದೆ. ಅದರ ಪೂರ್ಣ ಕ್ರೆಡಿಟ್ ಹಂಸಲೇಖ ಅವರಿಗೆ ಸಲ್ಲಬೇಕು.
ಡಾ|| ಎಂ. ಬಾಲಮುರಳಿಕೃಷ್ಣ ಅವರ ಗಾಯನವಂತೂ ಅದ್ಭುತವಾಗಿದೆ...

ಈ ಹಾಡಿನಲ್ಲಿ ಬರುವ ಅಮೃತವರ್ಷಿನಿ ರಾಗವೆಂದರೆ ನನಗೆ ಬಲು ಪ್ರೀತಿ...

ಹಾಡನ್ನು ನೋಡಿದಾಗ, ಕೇಳಿದಾಗ, ಮನಸ್ಸಿಗೆ ಸಂತೋಷವಾಯಿತು.

ಒಟ್ಟಿನಲ್ಲಿ ನನಗಂತೂ ಈ ಹಾಡು ತುಂಬಾ ಇಷ್ಟ...

ನೀವೂ ಈ ಹಾಡನ್ನು ನೋಡಿ... ಖುಷಿ ಪಡಿ... Smiling


ಚಿತ್ರ: ಮುತ್ತಿನ ಹಾರ
ಸಾಹಿತ್ಯ, ಸಂಗೀತ: ಹಂಸಲೇಖ
ಗಾಯಕರು: ಡಾ|| ಬಾಲಮುರಳಿಕೃಷ್ಣ, ಚಿತ್ರ ಮತ್ತು ಸಂಗಡಿಗರು
ದೇವರು ಹೊಸೆದ ಪ್ರೇಮದ ದಾರ
-------------------
ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ || ಪ ||

ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
ಪ್ರೇಮಕೂ ಅಗ್ನಿಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಎಂದರೆ ನಾವು ಸುಡದೆ ಇರುವುದೆ ನೋವು
ಸರಿಯೋಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ
||ದೇವರು ಹೊಸೆದ ||

ಮೇಘವೋ ಮೇಘವು ಮುಂಗಾರಿನ ಮೇಘವು
ಮೇಘವೋ ಮೇಘವು ಹಿಂಗಾರಿನ ಮೇಘವು
ಹನಿ ಹನಿ ಹನಿ ಹನಿ ಚಿಟಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡು ಗುಡುಗೋ ಗುಡುಗಿನ
ಫಳ ಫಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಹೊಳೆಮಳೆ
ಹಸ್ತ ಚಿತ್ತ ಸ್ವಾತಿ ಹೊಳೆ ಮಳೆ
ಸಿಡಿಯುವ ಭುವಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ
ಆsss ಆssss ಆssss

ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಆssssss ಆsss
ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಕವಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
ಕುಹು ಕುಹು ಕುಹು ಕುಹು ಕುಹು ಕುಹು ಕುಹು ಕುಹು
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೊಗಿಲೆ ಗಾನದ ಹೊನಲು
ಬಿಸಿಲೋ ಮಳೆಯೋ ಚಿಗುರೋ ಹಿಮವೋ
ಅಳುವೋ ನಗುವೋ ಸೋಲೋ ಗೆಲುವೋ
ಬದುಕೇ ಪಯಣ ನಡಿಯೇ ಮುಂದೆ
ಒಲವೇ ನಮಗೆ ನೆರಳು ಹಿಂದೆ
||ದೇವರು ಹೊಸೆದ||

ಸಾಹಿತ್ಯವನ್ನು ಇಲ್ಲಿಂದ ತೆಗೆದುಕೊಂಡಿದ್ದು...

ಮರೆತಿದ್ದೆ,
ಈ ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ ಅನ್ಸುತ್ತೆ.

  • ಕನ್ನಡ ಚಲನಚಿತ್ರ
  • ಡಾ|| ಎಂ. ಬಾಲಮುರಳಿ ಕೃಷ್ಣ
  • ಮುತ್ತಿನ ಹಾರ
  • ರಾಗಮಾಲಿಕೆ
  • ರಾಜೇಂದ್ರ ಸಿಂಗ್ (ಬಾಬು)
  • ರಾಜ್ಯ ಪ್ರಶಸ್ತಿ
  • ಹಂಸಲೇಖ
~.~
  • anil.ramesh ರವರ ಬ್ಲಾಗ್
  • Login or register to post comments
  • 303 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 9, 2008 - 11:53pm — hamsanandi

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

hamsanandi's picture

ಒಳ್ಳೇ ಹಾಡು - ಸ್ವಲ್ಪ ಅಪರೂಪವಾದ ಸಂಗೀತ ಸಂಯೋಜನೆ

ಪಲ್ಲವಿ ಮತ್ತು ಮೊದಲ ಚರಣ (ಬೇಸಿಗೆ) ಮತ್ತೆ ಕೊನೆಗೆ ಬರುವ ಬಿಸಿಲೋ-ಮಳೆಯೋ ಎಂಬ ಭಾಗ - ಕನಕಾಂಗಿ ರಾಗದಲ್ಲಿದೆ ; ೭೨ ಮೇಳಗಳ ಪಟ್ಟಿಯಲ್ಲಿ ಇದೇ ಮೊದಲ ರಾಗ.

ಮತ್ತೆ ಮಳೆಗಾಲ ಮತ್ತು ವಸಂತಗಳು ಹೆಸರಿಗೆ ಹೊಂದುವ ಅಮೃತವರ್ಷಿಣಿ ಮತ್ತು ವಸಂತ Smiling ರಾಗಗಳಲ್ಲಿವೆ!

ಬಾಲಮುರಳಿಯವರು ಹಾಡಿರುವುದೂ ಬಹಳ ಚೆನ್ನಾಗಿದೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 8:11am — mahesha

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

mahesha's picture

ನಂನಿ.,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 8:40pm — anil.ramesh

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

anil.ramesh's picture

ಹಂಸಾನಂದಿ ಅವರೇ,
ವಸಂತ ರಾಗ ೧೭ನೇ ಮೇಳಕರ್ತ ರಾಗವಾದ ಸೂರ್ಯಕಾಂತದಲ್ಲಿ ಜನ್ಯ ಅಲ್ವೇ?

ಇದು ವಕ್ರ ಔಡವ - ಷಾಡವ ರಾಗ.

ಆರೋಹಣ: - ಸ ಮ ಗ ಮ ದ ನಿ ಸ
ಅವರೋಹಣ: ಸ ನಿ ದ ಮ ಗ ರಿ ಸ
ಅಂತರ ಗಾಂಧಾರ; ಶುದ್ಧ ಮಧ್ಯಮ; ಚತುಶೃತಿ ಧೈವತ; ಕಾಕಲಿ ನಿಷಾದ...
ಅವರೋಹಣದಲ್ಲಿ ಶುದ್ಧ ರಿಷಭ ಬರುವುದು...

ಸರಿಯೇ? ತಪ್ಪಿದ್ದರೆ ತಿದ್ದಿರಿ...

ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 9:56pm — hamsanandi

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

hamsanandi's picture

ಅನಿಲ್,

ನೀವು ಹೇಳಿರೋದು ಸರಿ ಇದೆ.

ಮತ್ತೆ "ಇಂತಹದರಲ್ಲಿ ಜನ್ಯ" ಎನ್ನುವುದೆಲ್ಲ ಅನುಕೂಲಕ್ಕಾಗಿ ಮಾಡಿರೋ ಪದ್ಧತಿ. ನಿಜ ಹೇಳಬೇಕೆಂದರೆ ವಸಂತ ಅನ್ನೋದು ಹಳೇ ರಾಗ ( ಕಮ್ಮಿ ಅಂದರೆ ೫೦೦-೬೦೦ ವರ್ಷದಿಂದ ಬಳಕೇ ಇರೋ ರಾಗ). ಸೂರ್ಯಕಾಂತ ಅದಕ್ಕಿಂತ ಹೊಸದು (ಹೆಚ್ಚೆಚ್ಚು ಅಂದ್ರೆ ಇನ್ನೂರೈವತ್ತು ವರ್ಷ).

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 10:02pm — anil.ramesh

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

anil.ramesh's picture

ಹಾಗಿದ್ರೆ, ಒಟ್ಟು ಎಷ್ಟು ರಾಗಗಳಿವೆ? *
ಸಂಪೂರ್ಣ, ಜನ್ಯ, ಎಲ್ಲಾ ಸೇರಿ? *

ನೂರಾರು ರಾಗಗಳಿರಬಹುದಲ್ಲವೇ? ನೂರಾ ಅನ್ನೋದಕ್ಕಿಂತ ಸಾವಿರಾರು ಸೂಕ್ತ ಅನ್ಸುತ್ತೆ...

*ಸುಮ್ಮನೆ ಕುತೂಹಲಕ್ಕೆ ಅಷ್ಟೆ...

ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2008 - 4:38am — hamsanandi

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

hamsanandi's picture

ಕಷ್ಟದ ಪ್ರಶ್ನೆಗಳನ್ನ ಕೇಳ್ತಿದ್ದೀರ Smiling

Quote:
ಹಾಗಿದ್ರೆ, ಒಟ್ಟು ಎಷ್ಟು ರಾಗಗಳಿವೆ? *

ರಾಗಗಳು ಅನಂತ ಅನ್ನುವ ಮಾತಿದೆ - ಅಂದ್ರೆ ಎಣಿಸಲಾರದಷ್ಟು - ಅಥವಾ ಊಹೆಗೆ ನಿಲುಕಲು ಸಾಧ್ಯವಾಗೋ ಅಷ್ಟು ಅಂದುಕೋಬಹುದು.

ನಿಜವಾಗಿ ಬಳಕೆಯಲ್ಲಿರೋವ್ದನ್ನ ನೋಡಿದರೆ, ನಮ್ಮ ಸಂಗೀತ ಚರಿತ್ರೆಯಲ್ಲೇ ಯಾವಾಗಲೂ ಐವತ್ತರಿಂದ ನೂರು ಪ್ರಸಿದ್ಧ ರಾಗಗಳೂ, ಮತ್ತೆ ಅದಕ್ಕೆ ಮೂರೋ ನಾಕರಷ್ಟೋ ಅಪರೂಪದ ರಾಗಗಳಿರಬಹುದು. ಇವತ್ತಿನ ಮಟ್ಟಿಗೆ ಹೇಳುವುದಾದರೂ ಅದು ನಿಜ.

ರಾಗಗಳ ಪಟ್ಟಿಯನ್ನು ನೋಡಿದರೆ ನಿಮಗೆ ಸಾವಿರಾರು ಕಾಣಬಹುದು.

Quote:
ಸಂಪೂರ್ಣ, ಜನ್ಯ, ಎಲ್ಲಾ ಸೇರಿ? *

ಒಂದು ಪ್ರಶ್ನೆಗೆ ಮಾತ್ರ ಸರಿಯಾದ ಉತ್ತರ ಕೊಡಬಹುದು - ಕರ್ನಾಟಕ ಸಂಗೀತದಲ್ಲಿ ಮೇಳಕರ್ತ* (ಸಂಪೂರ್ಣ ರಾಗ ಅಂತ ಹೇಳಲಿಲ್ಲ - ಗಮನಿಸಿ) ಗಳು ೭೨. ಇವನ್ನು ಬಿಟ್ಟು ಇನ್ನೆಲ್ಲವೂ ಜನ್ಯ ರಾಗಗಳೇ.

*ಎಲ್ಲ ಮೇಳಕರ್ತಗಳೂ ಸಂಪೂರ್ಣ - ಆದರೆ ಎಲ್ಲ ಸಂಪೂರ್ಣ ರಾಗಗಳೂ ಮೇಳಕರ್ತಗಳಲ್ಲ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 5:14pm — shylaswamy

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

shylaswamy's picture

ಪ್ರಿಯ ಅನಿಲ್ ಅವರೆ,
ನಿಜಕ್ಕೂ ಅದ್ಭುತವಾದ ಹಾಡು. ಬಾಲಮುರಳಿಕೃಷ್ಣ ಅವರ ಮಧುರ ಕಂಠದಲ್ಲಿ ಹಿತವಾಗಿ ಮನಸ್ಸಿಗೆ ಮುದ ನೀಡುವ ಹಾಡು. ಎಷ್ಟೋ ಸಲ ಟೀವಿಯಲ್ಲಿ ಕೇಳಿದಾಗಲೆಲ್ಲಾ ಸಹಾ ಮಾಡುವ ಕೆಲಸ ಬಿಟ್ಟು ಬಂದು ನಿಂತು ಕೇಳಿ ನಂತರವೇ ನನ್ನ ಕೆಲಸ ಮುಂದುವರೆಸುತ್ತಿದ್ದೆ. ಅಷ್ಟು ಸಲ ಕೇಳಿದರೂ ಮತ್ತೆ ಕೇಳಿದಾಗ ಹೊಸದಾಗಿ ಕೇಳುತ್ತಿದ್ದೇನೇನೊ ಎನ್ನುವಂತೆ ಮನವರಳುತ್ತಿತ್ತು. ಅದನ್ನು ಮತ್ತೊಮ್ಮೆ ಕೇಳಿಸಿದ್ದಕ್ಕೆ ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 8:26pm — anil.ramesh

ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

anil.ramesh's picture

ಶೈಲಾಸ್ವಾಮಿ ಅವರೇ,
ಪ್ರತಿಕ್ರಿಯೆಗೆ ನನ್ನಿ...

ನಿಮ್ಮ ಮನಸ್ಸಿಗೆ ಈ ಹಾಡು ಖುಷಿ ಕೊಟ್ಟಿದ್ದರೆ, ಅದಕ್ಕಿಂತ ಸಂತೋಷ ಮತ್ತೊಂದಿಲ್ಲ... Smiling

ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದೇ ನಾಡು ಇದೇ ಭಾಷೆ - ತಿರುಗುಬಾಣ
  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಅನೇಕತಾ ಮೆ ಏಕತಾ
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
Syndicate content

ಲೇಖಕರು

anil.ramesh's picture

ಪೂರ್ಣ ಹೆಸರು
ಅನಿಲ್ ರಮೇಶ್

ಪರಿಚಯ

ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ...
ತ. ರಾ. ಸು. ಹಾಗು ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿ...
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ...
ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ...
ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಆಸೆ...
ಮ್ಯಾಂಡೊಲಿನ್ ನುಡಿಸುವುದನ್ನು ಕಲಿಯುತ್ತಿದ್ದೇನೆ.


ನನ್ನ ಬ್ಲಾಗ್ ಗೆ ಭೇಟಿ ಕೊಡಿ


ನನ್ನ ಫೋಟೋ ಆಲ್ಬಮ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 531 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator