ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪೊಲೀಸರಂದ್ರೇ ಭಯಾ ಯಾಕೆ ?
ಹೀಗೆ ಎಂದಿನಂತೆ ಶನಿವಾರ ಸಂಜೆ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮ ನಡೆಸುತ್ತಿದ್ದೆ. ಅದು ಒರಿಸ್ಸಾದಲ್ಲಿನ ಕ್ರೈಸ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕ್ರೈಸ್ತ ಶಾಲೆಗಳು ರಾಜ್ಯದಲ್ಲಿ ಬಂದ್ ಮಾಡಿದ್ದ ಬಗ್ಗೆ ಪರ ವಿರೋದ ಚರ್ಚೆ ನಡೆಯುತ್ತಿತ್ತು. ಹಠಾತ್ತಾಗಿ ಒಂದು ಘಟನೆ ನಡೆಯಿತು. ಕಾರ್ಯಕ್ರಮದ ಬ್ರೇಕ್ ನಡುವೆ ಒಬ್ಬ ಪೊಲೀಸ್ ಪೇದೆ ಸ್ಟುಡಿಯೋ ಒಳಗೆ ನುಗ್ಗಿ ಬೆತ್ತದಿಂದ ನನ್ನನ್ನು ತಿವಿದ. ಭೆಚ್ಚಿದ ನಾನು ಹಿಂತಿರುಗಿ ನೋಡಿದರೆ ಅದು ನಮ್ಮ ಸುದ್ದಿವಾಚಕ ಚನ್ನವೀರ್. ಯಾವುದೋ ಪೇದೆ ಡ್ರಸ್ ಸಿಕ್ತು ಅಂತ ಹಾಕ್ಕೊಂಡೆ ಅಂತ ನಕ್ಕರು.ನಂತರ ಎಲ್ಲರೂ ನಕ್ಕಿದ್ದೂ ಆಯ್ತು ಕಾರ್ಯಕ್ರಮನೂ ಮುಗಿಯಿತು. ನನ್ನ ಮನಸ್ಸಿನಲ್ಲಿ ಉಳಿದ ವಿಚಾರ ಒಂದೆ. ನಾವು ಪೊಲೀಸರಿಗೆ ಹೆದರಬೇಕೆ. ಪೊಲೀಸರು ಅಥವಾ ಪೊಲೀಸ್ ಇಲಾಖೆ ಇರುವುದೇ ನಮ್ಮ ರಕ್ಷಣೆಗಾಗಿ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತಲೆ ಇರುತ್ತೆ. ಆದರೆ ರಕ್ಷಕರು ರಕ್ಷಕರಾಗಿ ಉಳಿದಿದ್ದಾರಾ... ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಬಟ್ಟೆ ಅಂಗಡಿ ಮಾಲೀಕರೊಬ್ಬರು ತಮ್ಮ ನೂತನ ಅಂಗಡಿಯನ್ನು ಉದ್ಘಾಟಿಸುವ ಸಲುವಾಗಿ ನಡುರಾತ್ರಿಯವರೆಗೆ ಸಿಂಗರಿಸುತ್ತಿದ್ದರು. ಆ ಪ್ರದೇಶಕ್ಕೆ ಸಂಬಂಧಿಸಿರದ ಇತರೆ ಲಿಮಿಟ್ಸ್‌ನ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಸಿಬ್ಬಂಧಿಯೊಂದಿಗೆ ಅಲ್ಲಗೆ ಬಂದು ಅಂಗಡಿ ಮುಚ್ಚಲು ಬಲವಂತ ಮಾಡಿ ಮಾಲೀಕನನ್ನು ಮನ ಬಂದಂತೆ ಥಳಿಸಿದ್ಧಾರೆ. ಆದರೆ ನಂತರ ತಿಳಿದ ವಿಷಯವೇನೆಂದರೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹಣ ಕೊಟ್ಟು ಪೊಲೀಸರನ್ನು ಛೂ ಬಿಡಲಾಗಿತ್ತು.
ಮತ್ತದೇ ಯೋಚನೆ . ಈಗ ಹೇಳಿ ನಾವು ಪೊಲೀಸರನ್ನು ಹೆಗೆ ನಂಬೋದು.

- Anil bharadwaj ರವರ ಬ್ಲಾಗ್
- Login or register to post comments
- 182 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಪೊಲೀಸರಂದ್ರೇ ಭಯಾ ಯಾಕೆ ?
ಅನಿಲ ಭಾರದ್ವಾಜ್ ಅವರೇ, ಪೋಲಿಸರಷ್ಟೇ ಏಕೆ ಪ್ರೆಸ್‌ನವರು ಎಂದರೂ ಜನ ಭಯ ಬೀಳುತ್ತಾರೆ. ನೀವು ಪ್ರೆಸ್‌ನವರಾಗಿದ್ದರಿಂದ, ಎಲ್ಲರಿಗಿಂತ ನಿಮಗೇ ಉತ್ತರ ಚೆನ್ನಾಗಿ ಗೊತ್ತಿರುತ್ತದೆ. ಯಾವ ಕಾರಣಕ್ಕಾಗಿ ಪತ್ರಕರ್ತರೆಂದರೆ ಜನ ಅಳುಕುತ್ತಾರೋ, ಅಂಥವೇ ಕಾರಣಗಳಿಗಾಗಿ ಪೊಲೀಸರಿಗೂ ಅಳುಕುತ್ತಾರೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪೊಲೀಸರಂದ್ರೇ ಭಯಾ ಯಾಕೆ ?
ಪೊಲೀಸರ ಕೈಯಲ್ಲಿ ಕಾನೂನಿದೆ ಬಿಡಿ ಪಲ್ಲವಿಯವರೆ, ಅದನ್ನು ಅವರಿಗೆ ಬೇಕಾದ ಹಾಗೆ ಅವರು ಬಳಸುತ್ತಾರೆ. ಆದರೆ, ನಮ್ಮಂತಹ ಪತ್ರಕತ೯ರಿಗೆ ಇರೋದು ಪೆನ್ನು ಮಾತ್ರ. ಎಷ್ಟೇ ಆದರೂ, ನಾವು ಪೊಲೀಸರಷ್ಟು ಭಯಂಕರರು ಅಲ್ಲ.
ಉ: ಪೊಲೀಸರಂದ್ರೇ ಭಯಾ ಯಾಕೆ ?
ಪೊಲೀಸರೆ ಯಾಕೆ. ಅಧಿಕಾರ ಇರೊ ಪ್ರತಿಯೊಬ್ಬ ಮನುಷ್ಯನಿಗೂ ನಾವು ಹೆದರುತ್ತಿವಿ. ಅಧಿಕಾರವಿದೆಯೆಂದು ಅದನ್ನ ದುರೋಪಯೋಗಿಸುವ ಅಧಿಕಾರಿಗಳು, ಅದು ತಪ್ಪು ಎಂದು ತಿಳಿದು ಅದನ್ನ ಪ್ರತಿಭಟಿಸದ ಸಮಾನ್ಯರಿರುವ ಸಮಾಜ ನಮ್ಮದು...
ಸ್ಪ್ರಹಿ