ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪಯಣದ ದಾರಿಯು ಬೇಸರವಾಗಿದೆ
ನಮಸ್ಕಾರ ಗೆಳೆಯ/ತಿ ಯರೆ. ಇದೊ೦ದು ನಾನು ಬರೆದ ಪುಟ್ಟ ಕವಿತೆ. ನಿಮಗೆ ಯಾವುದೆ ತರಹದ ಪ್ರೆಶ್ನೆಗಳಿದ್ದರೆ. ಡಯವಿಟ್ಟು ಪ್ರತಿಕ್ರಿಯೆ ಮಾಡಿ.
--------------------------------------
ಪಯಣದ ದಾರಿಯು ಬೇಸರವಾಗಿದೆ
--------------------------------------
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
ಎದೆಯಲ್ಲಿ ಚಿಗುರಿದ ಪ್ರೀತಿಯ ಮೊಳಕೆಯ
ಚಿವುಟಿ ನೀ ಸರಿದಾಗ ದೂರ
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
ನಿನ್ನ ನೋಡಿ ನಲಿದ ನನ್ನ ಕ೦ಗಳು ಈಗ
ಕಾಣದೆ ಕಣ್ಣೀರು ಹಾಕಿವೆ ನೋಡೆ,
ನಿನ್ನ ಮುದ್ದಿನ ಮಾತನು ಕೇಳದ ಕೀವಿಗೆ
ಸವಿಗಾನವು ಕಹಿಯನು ನೀಡಿವೆ ನೋಡೆ,
ನನ್ನ ಮನದಲ್ಲಿ ಉಕ್ಕಿದ ಬಯಕೆಗೆ ನೀನು
ಲೆಕ್ಕಿಸದೆ ನನ್ನ ನೋಡದೆ ಹೋದಾಗ.
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
- ಅನ೦ತಶಯನ ಸ೦ಜೀವ.

- anantshayan ರವರ ಬ್ಲಾಗ್
- Login or register to post comments
- 262 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪಯಣದ ದಾರಿಯು ಬೇಸರವಾಗಿದೆ
ಎಲ ಎಲಾ ಅನಂತ, ಪಯಣದ ದಾರಿ ಬೇಸರವಾಗಿದೆ ಎನ್ನುತ್ತಲೇ ಕನಸು ಬಿಚ್ಚಿಟ್ಟಿದ್ದೀರಿ. ಇನ್ನೊಂದಿಷ್ಟು ತಿದ್ದಿದ್ದರೆ, ಕವಿತೆಗೆ ಇನ್ನಷ್ಟು ಹೊಳಪು ಬರುತ್ತಿತ್ತು. ಆದರೂ ಪರವಾಗಿಲ್ಲ. ಉತ್ತಮ ಪ್ರಯತ್ನ. ಬರೆಯುತ್ತಿರಿ ಬೇಸರವಾಗದಂತೆ, ಬೇಸರ ಮಾಡಿಕೊಳ್ಳದಂತೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪಯಣದ ದಾರಿಯು ಬೇಸರವಾಗಿದೆ
ಧನ್ಯವಾದ ಪಲ್ಲವಿ! ನಿಮ್ಮ ಕ೦ಮೆ೦ಟ ನನಗೆ ಖುಶಿ ತ೦ತು.
ಹೀಗೆ ನಿಮ್ಮ ಸ್ಪೂರ್ತಿ ಇರಲಿ.
ಅನ೦ತಶಯನ.