ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ahoratra ರವರ ಬ್ಲಾಗ್

ಗರ್ಭದಲ್ಲಿ ದಶಾವತಾರ

May 18, 2006 - 5:18pm — ahoratra

                           ಗರ್ಭದಲ್ಲಿ ದಶಾವತಾರ

               ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು,
               ಪಿಂಡದಿಂದ ಬ್ರಹ್ಮ ಮಾಡೊ ಅಂಡ ವೇದವು.//ಪ//.

               ವೇದರಕ್ಷೆಗಾಗಿ ಬಂದ ಮತ್ಸ್ಯಾವತಾರವು,
               ಪ್ರಥಮಮಾಸ ಗರ್ಭದಲ್ಲಿ ಮೀನಾಕಾರವು.//೧//.

               ದೇವರಮರಗೊಳಿಸಿದಂತ ಕೂರ್ಮಾವತಾರವು,
               ಗರ್ಭದೆರಡು ತಿಂಗಳಲ್ಲಿ ಆಮೆರೂಪವು.//೨//.

               ಅಸುರಾರಿ ಹರಿಯು ತಳೆದ ವರಾಹಾವತಾರವು,
               ಮೂರುಮಾಸದುದ್ದಮುಖದ ಪುಟ್ಟ ಗರ್ಭವು.//೩//.

               ಹಿರಣ್ಯಕಶಿಪುನಾಶಕಾಗಿ ಬಂದ ನಾರಸಿಂಹವು,
               ನಾಲ್ಕುಮಾಸ ಗರ್ಭದಲ್ಲಿ ಸಿಂಹರೂಪವು.//೪//.

               ಬಲಿಯ ತುಳಿದ ತ್ರಿವಿಕ್ರಮ ವಾಮನಾವತಾರವು,
               ಐದುಮಾಸ ಬೆಳೆದ ಕುಬ್ಜ ವಿಷ್ಣು ರೂಪವು.//೫//.

               ಧರೆಯ ದುಷ್ಟರನ್ನು ಕೊಂದ ಭಾರ್ಗವಾವತಾರವು,
               ಆರುಮಾಸ ಗರ್ಭಶಿಶುವ ಕ್ಷಾತ್ರ ತೇಜವು.//೬//.

               ಶ್ರೀ ರಾಮಚಂದ್ರನಾ ಸಪ್ತಮಾವತಾರವು,
               ಶುದ್ದಮನದ ಮಾನವಾಕೃತಿಯ ಪೂರ್ಣವು.//೭//.

               ಗೀತಾಮೃತವ ಕೊಟ್ಟ ಕೃಷ್ಣಾವತಾರವು,
               ಶಿಶುವಿನಲ್ಲಿ ಬುದ್ಧಿಜ್ಞಾನಕರ್ಮಯೋಗವು.//೮//.

               ರಾಗದ್ವೇಷ ನಾಶದಾ ಬುದ್ಧಾವತಾರವು,
               ನವಮಾಸದ ಗರ್ಭದಲ್ಲಿ ಧ್ಯಾನಯೊಗವು.//೯//.

               ಹರಿಯು ಕಲ್ಕಿಯಾಗಿ ಬರುವ ದಶಮಾವತಾರವು,
               ಜನುಮ ತಳೆದ ಮಗುವಿನಾ ಮೂರ್ತಿ ರೂಪವು.//೧೦//.

               ದೇವ ಬ್ರಹ್ಮಾಂಡವು ದೇಹ ಪಿಂಡಾಂಡವು,
               ಅಂಡ ಪಿಂಡ ಬ್ರಹ್ಮಾಂಡದ ಪ್ರಣವನಾದವು.//ಪ//.

                                        -:ಅಹೋರಾತ್ರ. 

~.~
  • ahoratra ರವರ ಬ್ಲಾಗ್
  • Login or register to post comments
  • 488 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 18, 2006 - 5:47pm — ಮಹೇಶ ಭೋಗಾದಿ

ದಶಾವತಾರ..

ಮಹೇಶ ಭೋಗಾದಿ's picture

ಕೆಲವು ಪದಗಳು ಗೊಂದಲ ಮೂಡಿಸಿವೆ.

೧)ಪಿಂಡಾಂಡ:
ಪಿಂಡ = ಮುದ್ದೆ, ದುಂಡಗೆ ಇರುವಂತಹದ್ದು
ಅಂಡ = ಮುಟ್ಟೆ, ಮುಟ್ಟೆಯಾಕಾರದ್ದು......

ಇಲ್ಲಿ ಪಿಂಡಾಂಡವೆಂದರೇನು? ಇಲ್ಲಿ ಯಾವ ಅರ್ಥದಲ್ಲಿ ಪಿಂಡ ಪದದ ಬಳಕೆಯಾಗಿದೆ?

೨) "ವೇದರಕ್ಷೆಗಾಗಿ ಬಂದ ಮತ್ಸ್ಯಾವತಾರವು". ನನಗೆ ತಿಳಿದಂತೆ ವರಹಾವತಾರದಲ್ಲಿ ಮಹಾವಿಷ್ಣುವು ಕಡಲಿನಲ್ಲಿ ಮುಳುಗಿದ್ದ ವೇದಗಳನ್ನು ಮತ್ತು ಭೂದೇವಿಯನ್ನು ಕಾಪಾಡಿದನು.

ಮತ್ಯಾವತಾರದ ಕತೆಯಲ್ಲಿ ಸತ್ಯವ್ರತನ ಪರೀಕ್ಷೆಗಾಗಿ, ವಿಷ್ಣು ಮೀನಿನಾಕಾರದಲ್ಲಿ ಬಂದು ದೊಡ್ಡದಾಗಿ ಬೆಳೆಯುತ್ತಾ ಹೋಗುವನು.

ಇದರಲ್ಲಿ ವೇದರಕ್ಷೆಯು ಹೇಗಾಯಿತು ಎಂದು ತಿಳಿಯಲಿಲ್ಲ.

೩) "ಹಿರಣ್ಯಕಶಿಪುನಾಶಕಾಗಿ ಬಂದ ನಾರಸಿಂಹವು,"
ಅದು "ಹಿರಣ್ಯಕಶ್ಯಪ"/"ಹಿರಣ್ಯಕಶ್ಯಪು" ಎಂದು ಅಲ್ಲವೆ?
ನರಸಿಂಹ ಮತ್ತು ನಾರಸಿಂಹ, ಇವೆರಡಕ್ಕೆ ಏನು ವ್ಯತ್ಯಾಸ?

೪)ಧರೆಯ ದುಷ್ಟರನ್ನು ಕೊಂದ ಭಾರ್ಗವಾವತಾರವು,
ಆರುಮಾಸ ಗರ್ಭಶಿಶುವ ಕ್ಷಾತ್ರ ತೇಜವು.//೬//.

ಭಾರ್ಗವನ ಕ್ಷಾತ್ರ ತೇಜ? ಭಾರ್ಗವನು ಕ್ಷತ್ರಿಯರನ್ನು ಭೂಲೋಕದಿಂದಲೇ ಅಳಿಸಲು ಹೊರಟವನು.

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ವೆರಿಲಾಗ್
  • ಅನುಭವ ವಾಣಿ
  • "ಅನಂತನ ಅವಾಂತರ"
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
  • ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 341 ಅತಿಥಿಗಳು ಆನ್ಲೈನ್ ಇರುವರು.


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator