ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ದುಡ್ಡು.
ದುಡ್ಡು.
ದಡ್ಡ ಕಟುಕ ಅಂದ ಮಂದಿ
ದುಡ್ಡ ಹಿಂದೆ ಹಂದಿಯಂದಿ
ಕಾಂತಕಂಡ ಉಕ್ಕಿನಂದಿ
ಯಾವತ್ಜೀವವೆಲ್ಲ ಬಂಧಿ//
ದೊಡ್ಡ ನಿಪುಣ ಬೆಂದ ಮಂದಿ
ದುಡ್ಡತೊರೆದ ಗಾಂಧಿಯಂದಿ
ಕಾಂತಕಂಡ ಧರಣಿಯಂದಿ
ಶಿವನ ಹೊತ್ತ ಮಹಾನಂದಿ//
ಅಹೋರಾತ್ರ.
೧೪/೧೨/೦೬.

- ahoratra ರವರ ಬ್ಲಾಗ್
- Login or register to post comments
- 585 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಪ್ರಶ್ನೆಗಳು: ದುಡ್ಡು, ಅಂದಿ, ನಂದಿ ಮತ್ತು ಗಾಂಧಿ
ಅಹೋರಾತ್ರರಿಗೆ ನಮಸ್ಕಾರಗಳು, ದುಡ್ಡು ಪದ್ಯದಲ್ಲಿದ್ದ ಪ್ರಾಸಗಳು ಮುದ ನೀಡಿದವು.
ಹಿಂದೆ ಫಣಿರಾಮಚಂದ್ರ ನಿರ್ದೇಶನದಲ್ಲಿ ದುಡ್ಡು ದುಡ್ಡು ದುಡ್ಡು ಅಂತ ಧಾರಾವಾಹಿ ಬರುತ್ತಿತ್ತು.
ಅಂದಹಾಗೆ, ಪದ್ಯದಲ್ಲಿದ ಈ ಎರಡು ಸಾಲುಗಳ ಒಟ್ಟು ಅರ್ಥವೇನು
ಇಲ್ಲಿ ಕಾಂತ ಎಂದರೆ ಚಂದ್ರ ಎಂತಲೇ.
ಹಾಗೆಯೇ, ಗಾಂಧಿಗೂ ನಂದಿಗೂ ಏಕೆ ಸಂಬಂಧ ಕಲ್ಪಿಸಿದಿರಿ. ನಂದಿ ಶಿವಪಾರ್ವತಿಯರನ್ನು ಹೊತ್ತುಮೆರೆಸಿದ ಹಾಗೆ, ಗಾಂಧಿ ನಮ್ಮನ್ನು ಏಳಿಗೆಯ ಕಡೆಗೆ ಕೊಂಡೊಯ್ದರು ಎಂತಲೇ ?
ಅಂದ ಹಾಗೆ, ಇನ್ನೊಂದು ಮಾತು ಗೊತ್ತೇ. ಕನ್ನಡದಲ್ಲಿ ಅಂದಿ ಎಂದರೆ ಹುಳುಗಳು, ಧಾನ್ಯಕೊರಕ ಎಂಬುದಾಗಿ ಇನ್ನೊಂದು ಅರ್ಥವಿದೆ.
Re: ಪ್ರಶ್ನೆಗಳು: ದುಡ್ಡು, ಅಂದಿ, ನಂದಿ ಮತ್ತು ಗಾಂಧಿ
ಪ್ರಿಯ ಸುನಿಲರೇ,
ಇಲ್ಲಿ ಕಾಂತ ಅಂದರೆ ಆಯಸ್ಕಾಂತ ಅಂತ.
ಅಹೋರಾತ್ರ
ಧನ್ಯವಾದಗಳು: ಪ್ರಶ್ನೆಗಳು: ದುಡ್ಡು, ಅಂದಿ, ನಂದಿ ಮತ್ತು ಗಾಂಧಿ
ಧನ್ಯವಾದಗಳು, ಬಹಳ ದಿನಗಳ ನಂತರ, ಈ ವಾರ ಮತ್ತೆ ಸಂಪದದಲ್ಲಿ ಬರೆಯುತ್ತಿದ್ದೀರಿ. ಹೀಗೆಯೇ ಮುಂದುವರಿಸಿ. ಎಲ್ಲರಿಗೂ ನಿಮ್ಮ ಕವನಗಳ ಪರಿಚಯವಾಗಲಿ.