ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ahoratra ರವರ ಬ್ಲಾಗ್

ಅಮ್ಮ.

May 14, 2006 - 11:13pm — ahoratra

ಅಮ್ಮ.

ಗಮ್ಮತ್ತಮ್ಮ ಗಮ್ಮತ್ತು
ಗಮಗಮಗಮಿಸುವ ಗಮ್ಮತ್ತು//

ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು/೧/

ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/

ಪ್ರಣತಿಯ ನಿರ್ಮಲ ಸಿಹಿಮುತ್ತು
ಅಮ್ಮನ ನೆನಪನು ತರುತಿತ್ತು
ನನ್ನ ಗೌರವದ ಒಳಗುಟ್ಟು
ಅಮ್ಮನು ಕೊಟ್ಟ ಸಂಪತ್ತು/೩/

ಭವಭಾರದ ಸಾಲಕೆ ತಲೆಕೊಟ್ಟು
ಮುರಿಯಿತು ಅಮ್ಮನ ನಡುಕಟ್ಟು
ಬಾರವು ಬೆಳೆಯಿತು ದುಪ್ಪಟ್ಟು
ಸಾಲವೆ ಅಮ್ಮನ ಕೊಂದಿತ್ತು/೪/

ಹೇಳುವೆ ಕೇಳಿ ಈ ಗುಟ್ಟು
ಸಾಲವೆ ದುಃಖದ ತಲೆಕಟ್ಟು
ಯಾರಿಗು ಬೇಡ ಈ ಕುತ್ತು
ಅಮ್ಮನು ಇಲ್ಲದ ಆಪತ್ತು/೫/

ಆಪತ್ತಮ್ಮ ಆಪತ್ತು
ಸಾಲವು ನಮಗೆ ಆಪತ್ತು//

ಅಹೋರಾತ್ರ.
೧೦:೪೦ ರಾತ್ರಿ.
೨/೫/೬.
ಮುಂಬೈ.

 

 

 

 

 

 

 

 

~.~
  • ahoratra ರವರ ಬ್ಲಾಗ್
  • Login or register to post comments
  • 644 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 15, 2006 - 9:22am — benaka

ಅದ್ಭುತ!

benaka's picture

ಅಹೋರಾತ್ರ ಕವಿಗಳೇ,

ಅದ್ಭುತ! ನಿಮ್ಮಲ್ಲಿರುವ ಕವಿಗೆ ಜೀವನೀಡಿದ್ದೀರಿ!
ಕವನವನ್ನು ಮಾಲೆಯಂತೆ ಪೋಣಿಸುವಾಗ ಎಲ್ಲ ಮಣಿಗಳಿಗೂ ಗಮನವಿರಲಿ.
ನಿಜಕ್ಕೂ ಒಳ್ಳೆಯ ಪ್ರಯತ್ನ.
ನಿಮ್ಮವ

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2006 - 10:00am — Sunil Jayaprakash

ಅಮ್ಮ, ಗೀತೆ ಮತ್ತು ಸಾಲ.

Sunil Jayaprakash's picture

ಅಹೋರಾತ್ರರೆ, ಕವನದ ಶೀರ್ಷಿಕೆ ನೋಡಿದಾಗ, "mother's day" ದಿನಕ್ಕಾಗಿ ಬರೆದಿರುವ ಒಂದು ಪದ್ಯವಿರಬಹುದು ಎಂದು ಭಾವಿಸಿದ್ದೆ. ಆದರೆ ಈ ಕವನದ ವಸ್ತುವೇ ಬೇರೆ. ಸುಮ್ಮನೆ ಸಾಲ ಮಾಡಬೇಡಿ ಎಂದು ಹೇಳಿದರೆ ಯಾರೂ ಕೇಳುವುದಿಲ್ಲ. ಆದರೆ ನಮಗೆ ಹತ್ತಿರವಿರುವ ಮುಖಾಂತರ ಹೇಳಿಸಿದರೆ ಮನಸ್ಸಿಗೆ ನಾಟುತ್ತದೆ.

ಹಾಗಾಗಿ, ಸಾಲ ಮಾಡಿದರೆ ನನಗೆ ಕೇಡಾಗುತ್ತದೆ ಎನ್ನುವುದಕ್ಕಿಂತ, ಅಮ್ಮನಿಗೆ ಕೇಡಾಗುತ್ತದೆ ಎಂದು ಹೇಳುತ್ತಾ, ಸಾಲ ಮಾಡಬೇಡ ಎಂಬ ಉಪದೇಶ ನೀಡುವಂತಿದೆ.

ನಿಮ್ಮ ಕವನ ಬಹಳವೇ ಇಷ್ಟವಾಯಿತು. ಕಾರಣ, ಇಷ್ಟೇ, ಇದರಲ್ಲಿರುವ ಪದಗಳೆಲ್ಲವೂ ಸರಳ, ದಿನವೂ ಉಪಯೋಗಿಸುವಂತದ್ದು.

ಅದರಲ್ಲೂ

ahoratra wrote:

ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು

ಮೇಲಿನ ಸಾಲುಗಳಂತೂ, ಯಾುವ ಇಂಗ್ಲೀಷ್ ರೈಮ್ಸಗೂ ಕಡಿಮೆಯಿಲ್ಲ. ಇದನ್ನು ಓದಿದ ನಾವು, ನಮ್ಮ ಮಕ್ಕಳಿಗೆ, ಕಡೇ ಪಕ್ಷ, ಈ ಸಾುಲುಗಳನ್ನಾದರು ಹೇಳಿಕೆೊಡೋಣ. ಮಕ್ಕಳು ಊಟ ಮಾಡುವುದಿಲ್ಲ ಎಂದು ಹಠಮಾಡಿದಾಗ, ಈ ಪದ್ಯ ಹೇಳಬಹುದು.

ಹಾಗೆಯೇ, ತಿಳಿದವರು ಇದರ ಅರ್ಥ ಸ್ವಲ್ಪ ವಿಷದವಾಗಿ ತಿಳಿಸುವುಕ್ಕಾಗುತ್ತದೆಯೇ.

ahoratra wrote:

ಗೀತೆಯ ಮಾತು ಗೊತ್ತಿತ್ತು.

ಗೀತೆಯ ಮಾುತು ಯಾವುದು.?

ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2006 - 10:27am — benaka

ಗೀತೆಯ ಮಾತು

benaka's picture

ಸುನಿಲರೇ,
ನನಗೆನಿಸುವಂತೆ ಕವಿ ಇಲ್ಲಿ ಹೇಳಹೊರಟಿದ್ದು ಆಧ್ಯಾತ್ಮದ ಮಾತನ್ನು:
ಬಹುಶಃ ನನಗೆ ಈ ನಾಲ್ಕು ಸಾಲುಗಳು ಇಷ್ಟವಾಗಲು ಅದೇ ಕಾರಣವಿರಬಹುದು.

ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/

ಇಲ್ಲಿ ಆಪ್ತರ ಸಾವಿನ ಮಾತಿದೆ; ಸಾವಿನ ದುಃಖವಿದೆ. ಸಮಾಧಾನಿಸಿಕೊಳ್ಳಲು ಕವಿಗೆ
ತೋಚಿದ್ದು ಗೀತೆಯ ಮಾತು: ಅಂದರೆ ಭಗವದ್ಗೀತೆಯ ಸಾರ; ಅದ್ಭುತ!
ಆ ಗೀತೆಯ ಮಾತು ಇನ್ನೇನೂ ಅಲ್ಲ ಇಷ್ಟೇ: ಆತ್ಮಕ್ಕೆ ಸಾವಿಲ್ಲ!

ನೈನಂ ಛಿಂದಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ
ಅಂದರೆ:
ಸೀಳದಿದನು ಆಯುಧವು
ಸುಡದು ಇದನು ಬೆಂಕಿ
ತೋಯಿಸದು ನೀರು ಕೂಡಾ
ಇದನೊಣಗಿಸದು ಗಾಳಿ

ಭಲಾ! ಒಳ್ಳೆಯ ಸಾಲು!

ನಿಮ್ಮವ

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2006 - 10:58am — ahoratra

ಗೀತೆಯ ಮಾತು ಗೊತ್ತಿತ್ತು.

ahoratra's picture

ಪ್ರೀತಿಯ ಸುನಿಲರೇ,

 'ಸುಖದುಃಖೇ ಸಮೇ ಕೃತ್ವ' ಎಂಬ ಮಾತು ನನ್ನನ್ನು ದುಃಖಿಯಾಗದಂತೆ ಎಚ್ಚರಿಸುತ್ತಿತ್ತು, ಆದರೂ ನನಗೆ ತಡೆಯಲಾಗಲಿಲ್ಲ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಮ್ಮ
  • ಮತ್ತು
  • ಮನೆಪಾಠ
  • ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯ
  • ’ಮ’ಕಾರ ಬಳ್ಳಿಯಲ್ಲಿ ಮಾತೆಯ ಮಮಕಾರ
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 6, 2008 - 5:51am
  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 96 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator