ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Abhimani ರವರ ಬ್ಲಾಗ್

ನಾವು ನಮ್ಮವರು

ಆಗಾಗ್ಗೆ ನಾನು ಬರೆದ ಕತೆ,ಕವನಗಳನ್ನ ಇಲ್ಲಿ ಜೋಡಿಸ್ತಿನಿ..ಓದಿ, ಚೆನ್ನಾಗಿದ್ದರೆ ಹೇಳಿ..ಚೆನ್ನಾಗಿಲ್ಲದಿದ್ದರೂ ಹೇಳಿ... Smiling

ನಿಯತ್ತು

June 22, 2007 - 3:08am — Abhimani

ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾವಲಿಗೆ ಅಂತ ಇಟ್ಟೋರು ಅದೇನೋ ದೆಯ್ಯ,ಪಿಸಾಚಿ ಅಂತ ಹೆದರಿ ಓಡಿ ಹೋಗಿದ್ದರು.”ಎಲ್ಲಾ ನರ ಸತ್ತ ನಾಮರ್ದ ಗಳು, ಯಾವೋ ಪೋಲಿ ಹುಡುಗರು ಕಾಯಿ ಕೀಳೋಕೆ ಬಂದು ಇವರನ್ನ ಹೆದರಿಸಿದಂಗೆ ಐತೆ,ಇವು ಮೂದೇವಿಗಳು ಭಯ ಬಿದ್ದಾವೆ.” ಅಂತ ಮಾತಡ್ಕೊಂಡ್ರುನೆ,ಕಾವಲು ಇಲ್ಲದಾಗಲೂ ಯಾವ ಕಳ್ಳತನ ಆಗದೇ ಇರೋದು ನೋಡಿ ಗೌಡ್ರಿಗೆ ಸ್ವಲ್ಪ ಕುಶಿ,ಜಾಸ್ತಿ ದಿಗಿಲಾಗಿತ್ತು. ಮನೆ ದೇವ್ರು ಜಾತ್ರೆಗೆ ಅಂತ ಮಲೆ ಮಾದೇಸನ ಬೆಟ್ಟಕ್ಕೆ ಹೋಗಿ ಬಂದ ಗೌಡ್ರಿಗೆ ಹೊಸ ಹುರುಪು..”ನಮ್ಮಪ್ಪ ಮಾದೇಸ ಅವ್ನೆ ನನ್ನ ಜೊತೆಗೆ,ಅದೇನೊ ಒಂದು ಕಿಟ ನೋಡಿಬರ್‍ತೀನಿ..ನೀನ್ ಯಾಕ ಹಿಂಗೆ ಆಡಿದಿ,ಏನು ಆಗಾಕಿಲ್ಲ ..ಸುಮ್ಮನಿರಮ್ಮಿ ” ಅಂತ ಲಕ್ಷಮ್ಮನಿಗೆ ಭರವಸೆ ನೀಡಿ,ನಾಲ್ಕು ದಪ್ಪ ಬ್ಯಾಟರಿಯ ಸರ್ಚ್ ಲೈಟು,ಕಾಡು ಹಂದಿ ಹೊಡೆಯೋಕೆ ಅಂತ ಇಟ್ಟ ಕೋವಿ ಎತ್ತಿಕೊಂಡು..ಹೆಗಲ ಮೇಲಿನ ಟವಲ್ ನ ಒಂದು ಸಲ ಕೊಡವಿ,ಹೊರಟು ಬಂದಾಗಿತ್ತು.

ಊರಿಗೆ ದೊಡ್ಡ ಸಾಹುಕಾರ ಅಲ್ಲದೇ ಇದ್ರೂನೆ ತಿಮ್ಮೇಗೌಡರು ಸ್ಥಿತಿವಂತರೆ..ಅಜ್ಜ,ಮುತ್ತಜ್ಜ ಕಾಲದ ಆಸ್ತಿನ ಉಳಿಸಿ,ಬೆಳೆಸಿಕೊಂಡು ಬಂದ ಮನೆತನ,ಈ ಮನೆತನದ ಮರ್ಯಾದೆ ಹೆಚ್ಚಿಸಿಕೊಂಡೆ ಬಂದ ತಿಮ್ಮೆಗೌಡ್ರು,ಮನೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾಕಷ್ಟು ಕಷ್ಟಪಟ್ಟು ಹೊಲ,ಗದ್ದೆ,ತೋಪು ಚೆನ್ನಾಗಿ ಗೇಯೊದಲ್ಲದೆ ಇನ್ನಷ್ಟು ಹೆಚ್ಚಿಸಿದ್ದರು.ಗೌಡ್ರಿಗೆ ಈ ತೋಪು ಅಂದ್ರೆ ಒಸಿ ಅಕ್ಕರೆ ಜಾಸ್ತಿನೆಯ..ತಮ್ಮದೇ ಅಂತ ಮಾಡಿದ ಮೊದಲ ಆಸ್ತಿ ಇದು..ತೋಪಿಗೆ ಹಾಕಿದ್ದ ಬೇಲಿ,ಬೇಲಿಯ ಒಂದು ಮೂಲೆಗೆ ಅಡಿಕೆ ದಬ್ಬೆಯ ಗೇಟು..ಬೀಗ ತೆಗೆದು ಒಳಗೆ ಬಂದ ಗೌಡ್ರಿಗೆ ನೆನಪಾದದ್ದು..”ಈ ತೋಪಿಗೆ ಕಾಲಿಟ್ಟೇ ಶ್ಯಾನೆ ದಿನ ಆಯ್ತಲ್ಲ” ಅಂತ,ಹಂಗೆ ನೆನಪಾದ ನರಸ,ಅವನು ಇರ್‍ಓಗಂಟ ಈ ತೋಪೆ ಏನು ಊರಿನ ಪೂರ್ವಕ್ಕಿದ್ದ ಅವರ ಹೊಲ,ಗದ್ದೆ,ಎಲ್ಲದರ ಕಾವಲು ಕಾದು,ಒಂದು ದಿನಾನು ಇಂತಾದ್ದು ಇಲ್ಲಿ ಇದ್ದದ್ದು ,ಇಲ್ಲದಂಗೆ ಆಗೈತೆ ಅನ್ನೋ ಮಾತೇ ಇಲ್ಲದಂಗೆ ಮಾಡಿ..ಗೌಡ್ರು ಈ ಕಡೆಯ ಯೋಚನೆ ಬಿಟ್ಟೇ ಬಿಟ್ಟಿದ್ರು.

ದೂರದಾಗೆಲ್ಲೋ ಗೂಬೆ ಕೂಗಿದಂತಾದಾಗ ಗೌಡ್ರು ಬೆಚ್ಚಿ ನೆನಪಿಂದ ಹೊರಗೆ ಬಂದು, ಹಂಗೆ ಸುತ್ತು ಹಾಕ್ತ ಹೊಂಟರು..ಒಣಗಿದ ಎಲೆ ಮೇಲಿಟ್ಟ ಕಾಲಿನ ಸದ್ದು “ಚರ್ ಚರ್” ಅಂತ ಹಿಮ್ಮೇಳ ಕೊಟ್ಟಿತ್ತು..”ಚರ್..ಚರ್..ಚರ್…” ಇದ್ದಕಿದ್ದ ಹಂಗೆ ಪಕ್ಕದಾಗೆ ಯಾರೊ ಓಡಿ ಹೋದಂಗೆ ಆಯ್ತು ಅನಿಸಿ ನಿಂತವು.. ಹೆಜ್ಜೆ.ನನಗೆಲ್ಲೋ ಐಲು ಈ ಕೆಲ್ಸಕ್ಕೆ ಬಾರದವರ ಮಾತು ಕಟ್ಟಿಕೊಂಡು ಏನೇನೊ ಅಂದ್ಕತೀವ್ನಿ ಅಂತ ಸಮಾಧಾನ ಮಾಡ್ಕೊಂಡು,ತೋಳಿನಾಗಿದ್ದ ಮಾರಮ್ಮನ ತಾಯಿತ ಮುಟ್ಟಿ ನಮಸ್ಕಾರ ಮಾಡ್ಕೊಂಡು ಮತ್ತೆ ಮುಂದೆ ಹೊರಟರು.ಚರ್,ಚರ್,ಚರ್……ನಡಿತಿದ್ದ ಗೌಡ್ರು ಮತ್ತೆ ನಿಂತರು. ಏನೊ ಸದ್ದು…ಮೈಯೆಲ್ಲಾ ಕಿವಿಯಾದಂಗೆ ಕೇಳಿದ್ರು …ಅಲ್ಲೇ ಎಲ್ಲೋ ಸ್ವಲ್ಪ ದೂರದಾಗೆ …ಗಂಡಸು ಅಳೋ ದನಿ..ಎಲ್ಲಿ ಸದ್ದು ಹೊರಗೆ ಬಂದಾತೊ ಅಂತ ತಡ್ಕೊಂಡು,ತಡ್ಕೊಂಡು..ಬಿಕ್ಕಿ ಬಿಕ್ಕಿ ಅತ್ತಂಗೆ.ಇದ್ಯಾವ ಶನಿ ಇದ್ದಾತು ಈ ರಾತ್ರಿನಾಗೆ ಮಾವಿನ ತೋಪಿಗೆ ಬಂದು ಅಳೊ ಅಂತ ಸಂಕಟ ಇದಕ್ಕೇನು ಅಂತ ಗೌಡ್ರು..”ಯಾವನ್ಲ ಅಲ್ಲಿ…ಬಾರಲ ಇತ್ಲಾಗೆ ” ಅಂತ ಕೂಗು ಹಾಕಿದರು..ಆ ಕೂಗಿಗೆ ಮರದಾಗಿದ್ದ ಹಕ್ಕಿಗಳು ಎದ್ದು ಕಿರುಚಾಡಿ…ಮತ್ತೆ ಬಂದು ಕೂತವೋ,ಮಲಗಿದವೋ..? ಗೌಡ್ರಿಗೆ ಯಾರು ಕಾಣಲಿಲ್ಲ ..ಅಳು ಕೇಳಿಸಿದ ಕಡೆ ಕೋವಿ ಮುಂದೆ ಮಾಡಿ ನಡೆದ್ರು..,”ಯಾವ ನನ್ನ ಮಗನೂ ಇಲ್ವಲ್ಲ ..”,ಈಗ ಮನಸ್ಸಿನಾಗಿನ ದಿಗಿಲು ಗೌಡ್ರ ಮುಖದ ಮ್ಯಾಗೆ ನೆರಿಗೆ ಹಂಗೆ ಕಾಣಾಕೆ ಶುರು ಆಯ್ತು.ಗೌಡ್ರಿಗೆ ನರಸ ಮತ್ತೆ ನೆನಪಾದ… “ಬಡ್ಡಿ ಮಗ ಇದ್ದಿದ್ರೆ ನನಗೆ ಈ ಪಾಡು ಯಾಕೆ ಬರ್ತಿತ್ತು”..

೩೦ ವರ್ಷದ ಕೆಳಗಿನ ಮಾತು,ಗೌಡ್ರಿಗೆ ಮದುವೆಯಾಗಿ ಆರು ತಿಂಗಳಾಗಿತ್ತು,ಯೌವ್ವನ,ಮುದ್ದಾದ ಹೆಂಡತಿ,ಹೆಗಲ ಮೇಲಿದ್ದ ಸ್ವಲ್ಪ ಜವಾಬ್ದಾರಿ ಅದೇನೋ ನಡಿತಿದ್ರೆ ಕುಣಿತವರೆ ಅನ್ನೋ ಹಾಗೆ ನಡಿತಾ ಇದ್ರು ..ಆವತ್ತು ಶನಿವಾರ ಸಂತೆಗೆ ಅಂತ ಶ್ರೀರಂಗಪಟ್ಟಣ ಹೋದವರು,ಮೂರು ತುಂಬಿದ ಬ್ಯಾಗು ಹೊರಲಾಗದೆ ಸಂಜೆಯ ಕೊನೆಯ ಬಸ್ಸಿಗೆ ಕಾಯ್ತ,ಪ್ರೈವೇಟ್ ಬಸ್ ಸ್ಟಾಂಡಿನಾಗಿ ನಿಂತಿದ್ದರು.ಇದ್ದಕಿದ್ದಂಗೆ “ಹಿಡಿರಲಾ,ಬಿಡ್ ಬ್ಯಾಡಿ ನನ್ನ ಮಗನ್ನ.. “ಅಂತ ಕೂಗು ಕೇಳಿಸಿದ ಕಡೆ ನೋಡಿದ್ರೆ, ಒಂದೈದು ಜನ ಒಂದು ೧೫ ವರ್ಷದ ಹುಡುಗನ್ನ ಒಬ್ಬನ ಅಟ್ಟಿಸಿಕೊಂಡು ಇತ್ತಲಾಗೆ ಬರ್ತಾ ಇದ್ದರು,ಏನೋ ಕದ್ದು ಇರಬೇಕು ಬಡ್ಡೆತ್ತದು ಅಂತ ಗೌಡ್ರು ಯೋಚಿಸ್ತಿದ್ದಂಗೆ ಹುಡುಗ ಇವರ ಹತ್ತಿರಕ್ಕೆ ಬಂದಿದ್ದ,ಧಿಡೀರ್ ಅಂತ, ಓಡೋ ಹುಡುಗನ ಕೊಳಪಟ್ಟೆ ಹಿಡಿದ ಗೌಡ್ರು …”ಏನಲ…ಏನು ಕದ್ದೆ .. ” ಅಂತ ಕೇಳೋದ್ರಾಗೆ ಅಟ್ಟಿಸಿಕೊಂಡು ಬಂದವರು ಅವನ ಸಾಯಿಸೊ ತರಹ ಗುರಾಯಿಸ್ತ,”ಇಕ್ರಲಾ ಅವಂಗೆ” ಅಂತ ಕೂಗಾಡೋಕೆ ಶುರು ಮಾಡಿದರು.ಗೌಡ್ರು “ಅಯ್ಯಾ ಅದ್ಯಾಕೆ ಹಂಗೆ ಆಡಿರಿ.. ಏನು ಕದ್ದ..ಕಳ್ಳ ಬಡ್ಡಿ ಮಗ,ವಸಿ ಅದಾರ ಹೇಳ್ರಲಾ” ಅಂತ ಗದರಿಕೊಂಡರು.”ಬಿಡಿ ಗೌಡ್ರೇ ಅವನ,ನನ್ನ ಮಗನ್ನ ಸಿಗಿದು ತೋರಣ ಕಟ್ತೀವಿ” ಅಂತ ಅವರಳೊಗೆ ಸ್ವಲ್ಪ ಚಿಕ್ಕವನು ಅನಿಸೋನು ಗುರುಗುಟ್ಟಿದ.”ಕಟ್ಟವಂತೆ,ಬಾಯಿ ಬಿಟ್ಟು ಅದೇನು ಕದ್ದ ಅಂತ ಹೇಳ್ರಲಾ..” ಅಂತ ಸ್ವಲ್ಪ ಗಟ್ಟಿಯಾಗೇ ಕೇಳಿದರು.”ಇವರಪ್ಪನ ಮನೆ ಆಸ್ತಿ ಅಂದುಕೊಂಡಾವ್ನ ಕಳ್ಳ ಬಡ್ಡಿ ಮಗ,೩ ಪ್ಲೇಟ್ ಇಡ್ಲಿ ತಿಂದು ಓಡಿ ಹೋಗ್ತನೆ..—-ಗುಟ್ಟಿದ –ಮಗ ” ಅಂತ ಯದ್ವಾತದ್ವ ಕಿರುಚುತಿದ್ದವರ ಮೇಲೆ ಗೌಡ್ರಿಗೆ ಅದ್ಯಾಕೋ ಶ್ಯಾನೆ ಕ್ವಾಪ ಬಂದು “ಅಲ್ಲ ಕಣ್ರಲ,ಏನೊ ಹಸಿವು ಇಂತಹ ಕೆಲಸ ಮಾಡಾವ್ನೆ,ಅದ್ಕ್ಯಾಕ್ರಲ ಹಿಂಗೆ ಆಡ್ತಿರ..,ತಗಾ ಇದ.., ಎರಡು ರೂಪಾಯಿ..ನಿಮ್ಮ ಮೂರು ಪ್ಲೇಟ್ ಇಡ್ಲಿ ಕಾಸು, ಹೋಗ್ರಲಾ ಸಾಕು”ಅಂತ ಪಂಚೆ ಎತ್ತಿ ನಿಕ್ಕರಿನ ಜೇಬಿನಾಗಿದ್ದ ಕಾಸು ತೆಗೆದು ಕೈ ಚಾಚಿದರು,ಕಾಸು ಇಸ್ಕೊಂಡವನೊಬ್ಬ “ಗೌಡ್ರೇ ಇಂತಾವನೆಲ್ಲ ಹಿಂಗೆ ಬಿಟ್ರೆ ಆಯ್ತದ.,ದುಡಿದು ತಿನ್ನೋಕೆ ಏನಂತೆ..ಒದ್ದು ಒಳಿಕೆ ಹಾಕಬೇಕು ..ನನ್ನ ಮಕ್ಕಳನ” ಅಂತ ಮಾತಡ್ತಲೇ ,ಹುಡುಗನ ಗುರಾಯಿಸ್ತ ಹೊರಟ.

ಆ ಹರಕು ಚಡ್ಡಿ,ತೂತು ಬನಿಯನ್,ಕೆದರಿದ ಕೂದಲು,ಮೈ ತೊಳೆದು ಅದೆಷ್ಟು ದಿನವಾಗಿತ್ತೋ ಅನ್ನೋ ಹಾಗಿದ್ದ ನರಸ ನಡುಗ್ತ ಇದ್ದ…ಹೆಚ್ಚಿಗೆ ಮಾತಾಡಲಿಲ್ಲ… ಗೌಡ್ರೂನೂವೆ, ..ದಿಕ್ಕು ದೆಸೆ ಇಲ್ಲ ಅಂತ ಅವನ ಕಡೆಯಿಂದ ತಿಳಿದು,ಜೊತೆಗೆ ಊರಿಗೆ ಕರ್ಕೊಂಡು ಬಂದಾಗ ಹೊಸಿಲ ತಾವ ಕೂತಿದ್ದ ಅವ್ವ,”ಇದು ಯಾರಲ .. ಎಲ್ಲಿಂದ ಕರ್ಕೊಂಡು ಬಂದೆ ಈ ಮೂದೇವಿಯ ” ಅನ್ನೊಕು ಗೌಡ್ರಿಗೆ ಥಟ್ಟನೆ ಹೊಳೆದಿದ್ದು “ಅದೇ ಕಣವ್ವ,ತ್ವಾಟಕ್ಕೆ ಕಾವಲು ಬೇಕಿತ್ತಲ್ಲ,ಈ ಹೈದನ ಕರ್ಕೊಂಡು ಬಂದೀವ್ನಿ..ಇದಕ್ಕು ಯಾರು ದಿಕ್ಕಿಲ್ಲ,ಎಡ್ಲು ಹೊತ್ತು ಅಂಬಲಿ ಕೊಟ್ರೆ ಸಾಕು ಬಿಡು” ಅಂದ.ಅಂದಕೊಂಡದ್ದಕ್ಕಿಂತ ಚೆನ್ನಾಗೆ ಕೆಲಸ ಮಾಡ್ತಿದ್ದ ನರಸನ್ನ ಕಂಡು ಗೌಡ್ರಿಗೆ “ಸದ್ಯ, ಇವನು ಕರ್ಕೊಂಡು ಬಂದಿದ್ದಕ್ಕೆ,ತಪ್ಪು ಕೆಲ್ಸ ಮಾಡಿದೆ ಅಂತ ಅನಿಸದಂಗೆ ಮಾಡಿದನಲ್ಲ” ಅಂತ ಖುಶಿಯಾಯ್ತು. ಆವತ್ತು ಗೌಡ್ರು ಹಂಗೆ ತೋಪಿನಾಗೆ ನಡಿತ ತ್ವಾಟದ ಮನೆ ತಾವ ಹೋಗಿ ನರಸನ ವಿಚಾರಿಸ್ವ ಅಂತ ಆ ಕಡೆ ನಡೀವಾಗ … ತ್ವಾಟದ ಮನೆ ಹಿತ್ತಲಿನಾಗೆ ನರಸ ತೂತು ಬಿದ್ದಿದ್ದ ಪಟ್ಟ್ ಪಟ್ಟೆ ನಿಕ್ಕರಿನಾಗೆ ಕೂತು ಬಳಪದ ಹಂಗಿದ್ದ ಬಟ್ಟೆ ಸೋಪಿನಾಗೆ,ಬಟ್ಟೆ ತಿಕ್ಕಾದ ನೋಡಿ ..ಅದ್ಯಾಕೋ ಗೌಡ್ರ ಕಳ್ಳು ಚುರ್ ಅಂತು.ಯಾರನು ಮಾತಡಿಸದಂಗೆ ತನ್ನ ಪಾಡಿಗೆ ತಾನು ತೋಟದ ಮನೆಯಲ್ಲಿ ಇರ್ತಿದ್ದ ಇವಂಗೆ ಒಂದು ಮದುವೆ ಮಾಡಬೇಕು ಅನಿಸಿ..ಮೂರು ಹುಣ್ಣಿಮೆ ಮುಗಿಯೋ ಮುಂಚೆ,ಪಕ್ಕದೂರ ಮಾದಿಗರ ಕರಿಯಣ್ಣನ ಮಗಳು ಬಸ್ವಿಯ ತಂದು ಗಂಟು ಹಾಕಿದ್ರು.

ಹಾಕಿದ ಗಂಟು ಗಟ್ಟಿಯಾಗೇ ಇತ್ತು,ಮೂರು ಮಕ್ಕಳಾದ ಮೇಲೆ ಗೌಡ್ರು ಅವನ ಮುಖಕ್ಕೆ ಉಗಿದು ಆಪರೇಶನ್ ಮಾಡಿಸ್ಕೊ ಅಂತ ಕಾಸಿ ಕೊಟ್ಟು ಅಕಳಿಸಿದ್ರು.ಗೌಡ್ರ ಹೆಸರಿನಾಗೆ ದೀಪ ಹಚ್ಚತಿದ್ದವ ನರಸ ಒಬ್ಬನೆಯ..ಬಸ್ವಿಗು ಅದೇನು ಯಾವ ಗೌಡ್ರನ ಕಂಡ್ರೂನವೇ “ಎಲ್ಲ ರಕ್ತ ಹೀರ್ತಾವೆ ..,ಅವರೇನು ಪುಕಸಟ್ಟೆ ಮಾಡವರ…ಹಗಲು,ರಾತ್ರಿ ಗೇಯಕಿಲ್ವ ನೀನು” ಅನ್ನೋಳು ,ನರಸ..,ಗೌಡ್ರ ವಿಶ್ಯ ಎತ್ತಿದಾಗಲೆಲ್ಲ.ಎಲ್ಡು ಗಂಡು ಹಿಂದೆ ಒಂದು ಹೆಣ್ಣು,ಎಲ್ಲಾನೂವೆ ಗೌರ್ ಮೆಂಟ್ ಸ್ಕೂಲಿನಾಗೆ ಓದೋಕೆ ಹೊಗ್ತಿದ್ವು.
ದಿನಾ ಮಾರಮ್ಮನ ಗುಡಿ ಮುಂದೆ ೧೦ ನಿಮಿಷ ಹಂಗೆ ಅಡ್ಡ ಬಿದ್ದಿರುವ…ಗೌಡ್ರ ಮುಂದೆ ಯಾವತ್ತು ನಿಂತಾವನಲ್ಲ,ದೂರದಾಗೆಲ್ಲೊ ಬೆನ್ನು ಬಗ್ಗಿಸಿ ನಿಲ್ಲವ.. ಆಗ ಈಗ ಲಕ್ಷಮ್ಮವ್ವ ಕಾಯಿ ಕೀಳೊಕೆ ಏನಾರ ಕರೆಸಿ,,ಉಣ್ಣಾಕಿಕ್ಕಿದ್ದರೆ ಎಲೆ ಎತ್ಕೊಂಡು ಹಿತ್ತಲಿಗೆ ಓಡಾವ.ಆವತ್ತೊಂದು ದಿನ ಗೌಡ್ರೇ ಕರೆಸಿದ್ರು.ಛಾವಡಿ ಮ್ಯಾಗೆ ಕೂತ ಗೌಡ್ರಿಂದ ಆಟು ದೂರದಾಗೆ ನಿಂತ ನರಸನ್ನ ..ಗೌಡ್ರು ಕರೆದೆ ಕರೆದ್ರು..”ಬಾರಲ…ಪರವಾಗಿಲ್ಲ..,ಇಲ್ಲೇ ಕುಂತ್ಕಾ ಬಾ..ಯಾರು ದೊಡ್ಡವ್ರು,ಸಣ್ಣೊರು ಅಂತ ಇಲ್ಲ ..ಆ ಮಾದೇಸನ ಮುಂದೆ ಎಲ್ಲಾ ಒಂದೆ ..” ಅಂದ್ರು ನರಸ ಹಲ್ಲು ಗಿಂಜಿಕೊಂಡು ಅಲ್ಲೇ ನಿಂತ .. ಈ ಮೂದೇವಿ ಈ ವಿಶ್ಯದಾಗೆ ಮತ್ತೆ ಆ ಹಾಳು ಬೀಡಿ ವಿಶ್ಯದಾಗೆ .., ನನ್ನ ಮಾತು ಕೇಳೊಲ್ಲ ಅಂತ ಗೌಡ್ರಿಗು ಗೊತ್ತಿದ್ದೆಯ.. “ಮೇಷ್ಟ್ರು ಸಿಕ್ಕಿದ್ರು ಕಣ್ಲ..ಗಂಗವ್ವನ ಹೋಟ್ಲ ತಾವ,ನಿನ್ನ ಹೈಕಳು ಶಾನೆ ಸಂದಾಗಿ ಓದ್ತಾವಂತೆ ಕಣ್ಲ..ಮುಂದೇನು ಮಾಡಿಯ ಅವಕ್ಕೆ” ಅಂದ್ರು.ಅಲ್ಲಿವರೆಗು ಅವನ ಕಡೆ ನೋಡ್ತ ಇದ್ದ ಗೌಡ್ರುನೂವೆ ಅವನ ಗಿಂಜಿದ ಹಲ್ಲು ನೋಡಿ ಒಸಿ ಹಂಗೆ ದೃಷ್ಟಿ ಬದಲಾಯಿಸಿದರು.”ಏನೈತೆ ಅಪ್ಪ,ನಿಮ್ಮ ತ್ವಾಟದ ಕಾಯಿ ನಿಮ್ಮ ಮನೀಗೆ ತಾನೆ…?, ಏನು ಓದ್ತಾವೋ ಏನೊ..? ನನಗೇನು ತಿಳಿದಾತು..ಇನ್ನೆಲ್ಡು ವರ್ಷ ಕಳದ್ರೆ ನಿಮ್ಮ ಮುಂದೆ ತಂದು ನಿಲ್ಲಿಸ್ತಿನಿ,ನಿಮ್ಮ ನೆರಳಾಗೆ ಬದುಕ್ತಾವೆ..” ಅಂದ.ಗೌಡ್ರಿಗೆ ನರಸನ ಈ ನಿಯತ್ತೇ ಬಾಳ ಕುಶಿಯಾಗೋದು…”ನನ್ನ ಬಿಟ್ರೆ ಲೋಕದಾಗೆ ಏನು ಇಲ್ಲದೋರ ಹಂಗೆ ಹೇಳ್ತಾನೆ ಬಡ್ಡಿ ಮಗ,ಆದ್ರೂವೆ ನಿಜಾನೆ …ಯಾರು ಇದ್ದರು..? ” ಇದಲ್ಲ ಈಗ ನೆನೆ ಬೇಕಾಗಿರೋ ಇಸ್ಯ ಅಂತ ಗೌಡ್ರು ತಮ್ಮ ಬಿರುಸು ದನಿಯಾಗೆ ಹೇಳಿದ್ರು.. “ಲೇ, ಅಡಕಸಬಿ ಹಂಗೆ ಮಾತಡಬೇಡ ಕಣ್ಲ.. ಚೆನ್ನಾಗಿ ಓದ್ತಾವೆ ಅಂದ್ರೆ ಇಲ್ಲಿ ತಂದು ದಿನಗೂಲಿ ಹಾಕ್ತಾನಂತೆ ಬೇಕೂಪ..ನಾಳೆ ನನ್ನ ಜೊತೆ ತಾಲೂಕು ಆಪೀಸಿಗೆ ಬಾರಲ..ನಿಂದಂತು ಯಾವ ಜಾತಿನೋ ಕಾಣೆ..ನಿಂದು,ಬಸ್ವಿದು,ಹೈಕಳ್ದು ಒಂದೇ ಜಾತಿನೆಯ ಅಂತ ಒಂದು ಸರ್ಕಿಪಿಕೇಟ್ ಮಾಡ್ಸಿ,ಆ ಹೈಕಳನ್ನ ಅಲ್ಲೇ ಹಾಸ್ಟೆಲ್ ನಾಗೆ ಬಿಡು..ಸರ್ಕಾರ ವ್ಯವಸ್ಥೆ ಮಾಡೈತೆ,ನೀನು ಏನು ಮಾಡಬೇಕಾದು ಇಲ್ಲ..ಅಲ್ಲೇ ಇದ್ದು ಓದಿ ..ಇದ್ಯ,ಬುದ್ಧಿ ಕಲೀಲಿ ಅವಾರ” ಅಂದ್ರು.ಗೌಡ್ರು ಹೇಳಿದ ಮೇಲೆ ಅದು ಒಳ್ಳೆದಕ್ಕೆ ಅಂತ ನರಸನ ಮನಸ್ಸಿನಾಗೆ ಅಚ್ಚೊತ್ತಿದ್ರು,ಇವನ ಮಕ್ಳು ಗೌಡ್ರ ಸೇವೆ ಮಾಡಿ ಋಣ ತೀರಿಸಬೇಕು ಅಂತ ಅವನ ಆಸೆ…ಹೇಳೇಬಿಡಾವ ಅಂತ ಒಂದು ಸಲ ಯೋಚ್ನೆ ಬಂದ್ರು ..ಗೌಡ್ರಿಗೆ ಉತ್ತರ ಕೊಡೊದಾ..?? ಅಪ್ಪರಾಣೆ ಆಯಾಕಿಲ್ಲ ಅಂತ ತಲೆ ಅಲ್ಲಾಡಿಸಿ ಹೊಂಟ..”ಇರಲ,ಕಾಪಿ ಕುಡಿದು ಹೋಗವಂತೆ” ಅಂತ ಗೌಡ್ರು ಕೂಗೋ ಹೊತ್ತಿಗೆ ದನಿ ಕೇಳದಷ್ಟು ದೂರ ಹೊಂಟು ಹೋಗಿದ್ದ.ಅಮಾಸೆಗೆ ಒಂದು ಸಲ,ಹುಣ್ಣಿಮೆಗೆ ಒಂದು ಸಲ ಸದ್ದಿಲ್ಲದೆ ಕುಡಿದು ಮಲಗಾವ..ಆವತ್ತು ೪ ಪ್ಯಾಕೇಟು ಕುಡಿದು,ಜಗಲಿ ಮ್ಯಾಗೆ ಕೂತು ಬಸ್ವಿನ,ಮಕ್ಕಳನ ತಾರ ಮಾರ ಬೈದು,ಬೈದು ..ಉಗುಳೆಲ್ಲ ಖಾಲಿ ಆದಂಗೆ ಆಗಿ..ಅಲ್ಲೇ ಬಿದ್ಕೊಂಡ..ಈ ಮೂದೇವಿಗೆ ಯಾನ ಬಂತ ಯಾವತ್ತು ಇರದ ರ್‍ವಾಗ ಅಂತ ಮಕ್ಕಳನ್ನ ಸಮಧಾನ ಮಾಡ್ಕೊಂಡು ಬಸ್ವಿ ಕದ ಗಟ್ಟಿ ಮಾಡಿ ಕಣ್ಣೀರು ಹಾಕ್ತ ಕೂತಳು.
ಮಕ್ಳು ಹೋದ್ವು,ನಿಂಗಿ ಮ್ಯಾಲು ಅಷ್ಟಕಷ್ಟೆಯಾ ಈಗ..ಗೌಡ್ರು ಸಂಬಳ ಅಂತ ಕೊಡೊ ಕಾಸಿನಾಗೆ ಗಣೇಶ ಬೀಡಿಗೆ ಅರ್ಧ ಸುರೀತಾ ಇದ್ದ.ಬಸ್ವಿ ಉಣ್ಣಾಕೆ ಇಟ್ರೆ ಉಂಡ,ಇಲ್ಲಂದ್ರೆ ಅದರ ಮ್ಯಾಗು ದ್ಯಾಸ ಇಲ್ಲದಂಗೆ ಇರ್ತಿದ್ದ. ಕಾವಲು ಕೆಲ್ಸದಾಗೆ ಏನು ಕಮ್ಮಿ ಆಗಲಿಲ್ಲ.

ಎಲ್ಲಾ ಸರಿ.., ಮುಂಡೇದು… ಬಿಡದಂಗೆ ಬೀಡಿ ಸೇದಿ ಸೇದಿ ಹಾಳಾಯ್ತು…ಅಂತ ಗೌಡ್ರು ಮರುಗಿದರು.ಟಿ.ಬಿ ಕಾಯಿಲೆ ಅಂತ ಅವನು ಹಾಸಿಗೆ ಹಿಡಿದಾಗ ಮಾಡೋ ಪ್ರಯತ್ನ ಎಲ್ಲಾ ಮಾಡಿ ,ಸಾವಿರಾರು ರೂಪಾಯಿ ಖರ್ಚೂ ಮಾಡಿ,ಮೈಸೂರಿನಾಗಿನ ಕೆ.ಆರ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರೂವೆ ಉಳಿಲಿಲ್ಲ ಜೀವ..ನಾಳೆ ಸಾವು ಅಂತ ನರಸಂಗೆ ಕನಸೇನಾದ್ರು ಬಿದ್ದಿತ್ತೋ ಏನೋ ….ಅವ್ನ ನೋಡಾಕೆ ಹೋದ ಗೌಡ್ರ ಕಣ್ಣಿನಾಗೆ ಆವತ್ತೇ ಇರಬೇಕು ಕಣ್ಣಿಟ್ಟು ಮಾತಡಿದ್ದು.. “ನನ್ನಪ್ಪ…ನಾ ಸತ್ರೂ ನಿಮ್ಮ ಋಣದಾಗೆ ಇರ್ತೀನಿ….ಇನ್ನಾ ಏಳು ಜನುಮದಾಗು ತೀರಿಸೋಕೆ ಅಯಾಕಿಲ್ಲ ನನ್ನ ಕೈಲಿ..” ಎಲ್ಡು ಕೈಯೆತ್ತಿ ಮುಗಿದ..ಅವನ ಕೈ ಹಿಡಿದ ಗೌಡ್ರು “ಲೇ ಅದೇನು ಮಾತು ಅಂತ ಆಡಿದಿ..ಬಿಡ್ತು ಅನ್ಲ…ಗಡಾನೆ ಹುಸಾರಾಗು,ಈ ಋಣ,ಗಿಣ ಅಂತ ಮಾತಡಾದೊ ನಾನು ಏನು ಮಾಡಿಲ್ಲ ..ತಗಿ ಅತ್ಲಾಗೆ” ಅಂತ ಗದರಿಕೊಂಡರು.

“ನನ್ನಪ್ಪ….” ದೂರದಾಗೆ ಯಾರೊ ಕರೆದಂತಾಯ್ತು..,ಗೌಡ್ರು ಬೆಚ್ಚಿದರು..ಸಣ್ಣಗೆ ಬೆವರು,ಕೋವಿ ಹಿಡಿದ ಕೈ ನಡುಗೋಕೆ ಶುರು ಆಯ್ತು …ಗಂಟಲು ಬಿಗಿದಂತಾಯ್ತು…ನಾಲಿಗೆ ಒಣಗಿ, ಕೂಗಾನ ಅಂದ್ರು ತನಗೆ ಮಾತು ಬಾರದ ಮೂಕ ಅನಿಸ್ತ ಇತ್ತು.ಇನ್ನೊಂದು ಸಲ ಅಲ್ಲಿಂದಾನೆ “ನನ್ನಪ್ಪ…………” ದನಿ ನರಸಂದು ಇದ್ದಂಗೆ ಐತೆ… !! ಗೌಡ್ರ ಮೈ ಮೇಲಿದ್ದ ಬೆಳ್ಳನೆ ಕೂದಲೆಲ್ಲ ನಿಗಿರಿ,ಕಾಲು ಅದುರಿ,ಏನು ಮಾಡಬೇಕು ತೋಚವಲ್ಲದು.. ಮಾರವ್ವ,ಮಲೆ ಮಾದೇಸ,ಈರಭದ್ರ ಸಾಮಿ,ಒಬ್ಬರು ಆದ ಮ್ಯಾಗೆ ಒಬ್ಬರು ಎಲ್ಲರ ನೆನೆಸ್ಕೊಂಡು ಜೀವ ಭಿಕ್ಷೆ ಬೇಡೋಕೆ ನಿಂತರು…ಯಾವು ದೇವ್ರು ಕೇಳ್ತೊ ಗೊತ್ತಿಲ್ಲ..ಅಂತು ಗೌಡ್ರಿಗೆ ಮತ್ತೆ ಧೈರ್ಯ ಬಂತು.. “ಯಾವನ್ಲ ಅವನು..ಏನು ಹುಡುಗಾಟ ಆಡಿಯ..ಬಾರಲ ಮುಂದಕ್ಕೆ ..ಬರ್ತಿಯ ಇಲ್ಲ ನಿನ್ನ ತಿಥಿ ಮಾಡವ ” ಅಂತ ಏರು ದನಿನಾಗೆ ಕಿರುಚಿ…ನನ್ನ ದನಿನೇನಾ ಇದು ಅಂತ ಗೌಡ್ರಿಗೆ ಆಶ್ಚರ್ಯ ಆಯ್ತು.

“ನನ್ನಪ್ಪ…” ದನಿ ಸ್ವಲ್ಪ ಹತ್ರ ಆದಂಗೆ ಆಯ್ತು.. “ಮುಲಾಜಿಲ್ಲ,ಇದು ನರಸಂದೆ ದನಿ..” ಗೌಡ್ರು ದೆವ್ವ,ಭೂತದ ಕಥೆ ಕೇಳಿದ್ರು ..ಸಣ್ಣೋರಿದ್ದಾಗ ಬೆಚ್ಚಿ ಬೆಚ್ಚಿ ಹಾಸಿಗೆನು ಬೆಚ್ಚಗೆ ಮಾಡಿದ್ರು..ದೇವ್ರು ಇದ್ದ ಮ್ಯಾಗೆ ದೆವ್ವನು ಇರಬಹುದ ಅಂತ ನಂಬೊದ್ರು,ಅವರಜ್ಜಿ ಯಲ್ಲಮ್ಮ ಹಿಂಗೆ ಒಂದು ಕಥೆ ಹೇಳ್ತ ಒಂದು ಒಳ್ಳೆ ದೆವ್ವ ರಾಜಂಗೆ ಒಬ್ಬಂಗೆ ಸಹಾಯ ಮಾಡಿದ್ದು ಜ್ನಾಪಕ ಬಂತ..”ಅಂದ್ರೆ ಏನು,ಈ ದೆವ್ವ ನರಸಂದೆ ಆಗಿದ್ರೆ….?? ನನ್ನ ಏನು ಮಾಡದ…?” ಅವರೇ ಕೇಳಿಕೊಂಡ ಪ್ರಶ್ನೆಗೆ ಯಾರು ಉತ್ತರ ಕೊಡಲಿಲ್ಲ ..ಜೀವ ಹೊಗೊದಾದ್ರೆ ಯಾವನು ತಡಿತಾನೆ..ಹೆದರಿ ಅಂತೂ ಸಾಯಕಿಲ್ಲ ಅಂತ ಗಟ್ಟಿ ಮನಸು ಮಾಡಿ ..”ಯಾವನ್ಲಾ…ಅವನು ಬೇವರ್ಸಿ ನನ್ನ ಮಗ .. ತಿಮ್ಮೇಗೌಡನ ಹೆದರಿಸೋ ಅಷ್ಟು ಧಿಮಾಕೆನ್ಲ..” ಅಂತ ಕೋವಿ ಎತ್ತಿ ಹಿಡಿದು ಗಾಳಿನಾಗೆ ಒಂದು ಗುಂಡು ಮೇಲಕ್ಕೆ ಹಾರಿಸಿ ಸಮಾಧಾನ ಮಾಡ್ಕೊಂಡ್ರು….ಮತ್ತೆ ಹಕ್ಕಿಗಳ ಸದ್ದು ನಿಂತ ಮೇಲೆ … . ” ನನ್ನಪ್ಪ , ನೀವು ಯಾಕೆ ಬರೋಕೆ ಹೋದ್ರಿ ಇಲ್ಲಿಗಂಟ..ಇಷ್ಟು ಹೊತ್ತಿನಾಗೆ … ನಾನು ಇದ್ದನಲ್ಲ ಇಲ್ಲೇ” ಅಂತ ಕೀರಲು ದನಿ ಕೇಳಿಸ್ತು.

ಗೌಡ್ರಿಗೆ ಈಗ ಖಾತ್ರಿ ಆಯ್ತು ..”ಲೇ ನರಸ …ನೀನೆ ಏನಲ ಅಲ್ಲಿ ” ಅಂತ ಬಿದ್ದು ಹೋಗ್ತಿದ್ದ ಧೈರ್ಯನೆಲ್ಲ ಒಟ್ಟಿಗೆ ಮಾಡ್ಕೊಂಡು ಕೇಳಿದ್ರು.. ” ನಾನೇ ಅಪ್ಪ .. ನಿಮ್ಮ ನರಸ ..,ಯಾಕೆ ಬರೋಕೋದ್ರಿ ಸರಿ ರಾತ್ರಿನಾಗೆ,ನೀವು ಹೋಗಿ ಮಲಿಕೊಳ್ಳಿ …ನಾನು ಇದಿನಿ ಅಪ್ಪ ” ಮತ್ತದೇ ಕೀರಲು ದನಿ ..ಎಲ್ಲೋ ಮರದ ಹಿಂದೆ ನಿಂತು ಮಾತಾಡಿದಂಗೆ…

ಹೆಗಲ ಮೇಲಿದ್ದ ಟವೆಲ್ ಕೈನಾಗೆ,ಕೋವಿ ಕೆಳಗೆ ಮಾಡ್ಕೊಡು ಬಂದ ಗೌಡ್ರನ ಕಾಯ್ತ ಇದ್ದ ಲಕ್ಷಮವ್ವ “ಏನಾತು , ಯಾಕ ಹಿಂಗೆ ಇದಿರ.?.,ಏನಾರ ಗೊತ್ತಾತ..?” ಒಂದಾದ ಮೇಲೆ ಒಂದು ಪ್ರಶ್ನೆ ಕೇಳ್ತ ಇದ್ದೊರ ಕಡೆ ಗೌಡ್ರು ಒಂದು ಸಲ ನೋಡಿ.. ” ಇನ್ನು ಮ್ಯಾಗೆ ಯಾವನು ಕಾವಲು ಕಾಯಂಗಿಲ್ಲ ಹಂಗೆ ಜೋಪಾನ ಮಾಡಿವ್ನಿ..” ಅನ್ನುತ ಹೊಸಲು ದಾಟಿ ಒಳಗೆ ಹೋಗಾಕು,ಅಲ್ಲೇ ಕಾದ್ಕೊಂಡು ಕೂತಿತ್ತೇನು ಅನ್ನೊ ಹಂಗೆ ಬಾಗಿಲ ಮ್ಯಾಲಿನ ಹಲ್ಲಿ ಲೊಚ ಗುಟ್ಟಿತು !!..

  • ಕತೆ
~.~
  • Abhimani ರವರ ಬ್ಲಾಗ್
  • Login or register to post comments
  • 627 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 22, 2007 - 10:09pm — Abhimani

ಉ: ನಿಯತ್ತು

Abhimani's picture

ಯಾರಾದರು ಓದಿ ..ಪ್ರತಿಕ್ರಿಯೆ ಮಾಡ್ತಿರಾ ಅಂತ ನಿರೀಕ್ಷಿಸುತ್ತಿದ್ದೆ.. "ಸಮಯ"ವಾದಲ್ಲಿ ಈ ಕತೆಯ ಪ್ರಯತ್ನ ಓದಿ..,ಹೇಗಿದೆ ತಿಳಿಸಿ..

ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 11:27pm — Sunil Jayaprakash

ಉ: ನಿಯತ್ತು

Sunil Jayaprakash's picture

ಬೋ, ಪಸಂದಾಗದೆ ಬಿಡ್ ಕಾಳ. ಅಂಗೆಯಾ ನರಸಪ್ಪನ ಎಂಡ್ರು ಮಕ್ಳು ಏನಾದ್ವು Puzzled

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2007 - 8:26pm — Abhimani

ಉ: ನಿಯತ್ತು

Abhimani's picture

ಅವರಿಗೇನಣ್ಣ.. ಸಂದಾಗವರೆ.. ಮಕ್ಕಳು ಇದ್ಯ ಬುದ್ಧಿ ಕಲ್ತವಲ್ಲ....

ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೌಡರ ತುಟಿಯಂಚಿನಲ್ಲಿ ತುಂಟನಗೆ?
  • ಚಿನ್ನದ ನಾಡಿದು, ಗಂಧದ ಗುಡಿಯಿದು, ಎಲ್ಲಾ ಹೊರಟುಹೋಗಿ, ನಾಟಕದ ಬೀಡಿದು ಕರ್ ನಾಟಕ ವಾಗಿದೆ !
  • ತಕ್ಕಳಪ್ಪ, (ಸ) ಗೌಡ್ರು (?) ಸುರುಮಾಡೇಬಿಟ್ರು, ಆ ದರ್ಮೇಂದ್ರಪ್ಪನ್ ಡೈಲಾಗ್ನ !
  • ದೃಷ್ಠಿ ವರ್ಗ ಹೋಮ
  • ಕೆಂಪೇ ಗೌಡ್ರು ಇದ್ನೆಲ್ಲಾ ಕಟ್ಕಂಡ್ ಏನ್ ಮಾಡಾರು ನೀವೆ ಏಳಿ. ನಮ್ ಜನಕ್ಕ್ ಯಾವಾಗ್ ಬುದ್ದಿ ಬರ್ತದೋ ಆ ದ್ಯಾವ್ರ್ಗೇ ತಿಳೀದು ಅಂತ್ ಕಾಣ್ಸ್ತೈತೆ !
Syndicate content

ಲೇಖಕರು

Abhimani's picture

ಪರಿಚಯ

ಸಾಹಿತ್ಯದಲ್ಲಿ ಆಸಕ್ತಿ.. ಒಂದಷ್ಟು ಬರೆಯುವ ಹವ್ಯಾಸ..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 173 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator