ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ದಿ ಬೆಸ್ಟ್ ಆಫ್ 'ಸಂಪದ'

ಶ್ಯಾಮ ಕಶ್ಯಪ

ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.

Brahmins for Dummies

July 18, 2007 - 5:20pm — ಶ್ಯಾಮ ಕಶ್ಯಪ

ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚಾರಗಳಷ್ಟೇ.ನ

ನಾನು ಮಲೆನಾಡಿನ ಸ್ಮಾರ್ತ ಬಬ್ಬೂರುಕಮ್ಮೆ ಬ್ರಾಹ್ಮಣ. ನಮ್ಮದು ಯಜುರ್ವೇದ. ನಮ್ಮ ಕಡೆ ಬಬ್ಬೂರುಕಮ್ಮೆ ಬ್ರಾಹ್ಮಣರು ಕಡಿಮೆಯಂತೆ. ಇದ್ದುದರಲ್ಲಿ ಹವ್ಯಕರೇ ಹೆಚ್ಚು ನಮ್ಮ ಕಡೆ. ಅವರನ್ನು ಬಿಟ್ಟರೆ ಕೋಟ, ಕಂದಾವರ, ಶಿವಳ್ಳಿ, ಅಥವ ಮಾಧ್ವಮಣಿಗಳು. ಹೊಯ್ಸಳ ಕರ್ನಾಟಕರು ಇಲ್ಲವೇ ಇಲ್ವಂತೆ...ಹೀಗೆ ಸಾಗುತ್ತದೆ ನಮ್ಮ ಮಲೆನಾಡಿನ ಬ್ರಾಹ್ಮಣ ಪುರಾಣ.

ಬ್ರಾಹ್ಮಣ ಸಾರಂಶ:
೧. ನಿಮಗೆ ಬೇಕೋ ಬೇಡವೋ, ಒಳ್ಳೇದಕ್ಕೋ ಕೆಟ್ಟದ್ದಕ್ಕೋ, ಬ್ರಾಹ್ಮಣರು ಕಳೆದ ಒಂದೆರೆಡು ಸಾವಿರ ವರ್ಷಗಳಿಂದ, ನಾವು ಇಂದು ತಿಳಿದ ಇತಿಹಾಸದಂತೆ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಪ್ರಮುಖ ಪಾತ್ರವನ್ನು ತೊಟ್ಟಿದ್ದಾರೆ. ಭಾರತೀಯ ಸಮಾಜವು ಯಾವುದಕ್ಕೆ ಸ್ಪಂದಿಸಿದರೂ, ಅದರಲ್ಲಿ ಬ್ರಾಹ್ಮಣರ ಪಾತ್ರ ಎದ್ದುಕಾಣುತ್ತದೆ.
೨. ಸಮಾಜದಲ್ಲೇ ಯಾವುದೇ ಬಗೆಯ ಹೊಸ ಪ್ರಗತಿಯುಂಟಾದರೂ ಅದರ ಉಪಯೋಗವನ್ನು ಪಡೆದವರ ಮಂಚೂಣಿಯಲ್ಲಿ ಬ್ರಾಹ್ಮಣರಿರುತ್ತಾರೆ.
೩. ಹಿಂದೆ ಜಾತಿ ಪದ್ಧತಿಯನ್ನು ನಿಯಂತ್ರಿಸುವ ಬಲವಿದ್ದಾಗ ನಾವು ಮಿಕ್ಕವರನ್ನು, ಅವರ ಯೋಚನಾಲಹರಿಯನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದೆವಂತೆ. ಕ್ಷತ್ರಿಯರಂತಲ್ಲದಿದ್ದರೂ, ತಕ್ಕಮಟ್ಟಿಗೆ ಕ್ರೌರ್ಯವನ್ನು ಪ್ರದರ್ಶಿಸುವ, ಇತರರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಯುಕ್ತಿ ನಮಗಿತ್ತಂತೆ.
೪. ಇಂದಿಗೆ ಈ ಬಲವು ಕ್ಷೀಣಿಸಿರುವುದು ನಿಜವಾದರೂ ಪೂರ್ತಿ ನಶಿಸಿಲ್ಲವೆಂಬುದು ಕಣ್ಣೆದುರಿಗೇ ಇದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿಗೂ, ಸಾಹಿತ್ಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ, ರಾಜಕೀಯಪಕ್ಷಗಳಲ್ಲಿ, ದಿನಪತ್ರಿಕೆಗಳಲ್ಲಿ, ಅಧಿಕಾರಿವರ್ಗದಲ್ಲಿ, ಕ್ರಿಕೆಟ್ಟಿನಲ್ಲಿ, ಸಾಫ್ಟ್-ವೇರಿನಲ್ಲಿ, ಸಾವಯವ ಕೃಷಿಯಲ್ಲಿ ನಮ್ಮ ಜನ ತುಸು ಹೆಚ್ಚೇ ಇದ್ದಾರೆ. ಸಮಾಜದಲ್ಲಿ ನಮ್ಮ ಸಂಖ್ಯೆ ಕಡಿಮೆಯಿದ್ದರೂ ಇವೆಲ್ಲದರಲ್ಲೂ ಹೆಚ್ಚಿನ ಸಂಖ್ಯಯಲ್ಲಿ ನಮ್ಮ ಪ್ರತಿನಿಧಿಗಳಿನ್ನೂ ಉಳಿದಿರುವುದು ಸತ್ಯ.
೫. ಹಲವು ಬ್ರಾಹ್ಮಣರು ಸಮುದ್ರೋಲ್ಲಂಘನ ಮಾಡಿಯೂ ಬ್ರಾಹ್ಮಣಿಕೆಯನ್ನು ಉಳಿಸಿಕೊಂಡಿರುವುದು ನಮಗೆಲ್ಲ ಖುಷಿ ತರುವ ವಿಷಯವಾಗಿದೆ. ಬ್ರಾಹ್ಮಣಿಕೆಯು ಬ್ರಾಹ್ಮಣರನ್ನು ಬಿಟ್ಟರೂ, ಬ್ರಾಹ್ಮಣನು ಜಾತಿಯನ್ನು ಬಿಡುವುದು ಅಪರೂಪ.
೬. ಕೌಟಿಲ್ಯನೂ ಬ್ರಾಹ್ಮಣನೇ, ಮನುವೂ ಬ್ರಾಹ್ಮಣನೇ, ಹೈದರಾಲಿಯ ಮುಖ್ಯಮಂತ್ರಿ ಕೂಡ ನಮ್ಮವನೇ. ಒಟ್ಟಿನಲ್ಲಿ ನಮ್ಮಲ್ಲೂ ಎಲ್ಲಾ ತರದವರಿದ್ದಾರೆ. ಒಳ್ಳೆಯವರು, ಕೆಟ್ಟವರು, ಆಸೆಬುರುಕರು, ಸಾಧ್ವಿಮಣಿಗಳು.. ಹೀಗೆ.
೭. ನಾವು ಭೌದ್ಧಿಕವಾಗಿ ಇತರರಿಗಿಂತ ಉನ್ನತರು ಎಂಬ ನಂಬಿಕೆ ನಮ್ಮಲ್ಲಿ ಈಗಲೂ ಇದೆ. ಅದನ್ನು ಈಗೀಗ ಬಾಹ್ಯವಾಗಿ ತೋರಿಸದೇ ಇರಬಹುದು.. ಆದರೆ ಇಬ್ಬರು ಬ್ರಾಹ್ಮಣರು ಆಗಾಗ ಭೇಟಿಯಾಗುತ್ತಿದ್ದರೆ, ಯಾವಾಗಲಾದರೊಮ್ಮೆ, ಸಮಯಸಿಕ್ಕಾಗ ಈ ಮಾತು ಖಂಡಿತ ಬರುತ್ತದೆ. ಅವರಿವರ ಜಾತಿಗಳನ್ನು ಬೈಯದಿದ್ದರೆ ಆಡಿಕೊಳ್ಳದಿದ್ದರೆ ನಮಗೆ ತಿಂದ 'ಹುಳಿ' ಅರಗುವುದಿಲ್ಲ.
೮. ಭಾರತದ ಹಲವು ಜಾತಿಗಳಂತೆಯೇ ಬ್ರಾಹ್ಮಣರಲ್ಲೂ ಹಲವು ಕಚ್ಚಾಡುವ ಉಪಜಾತಿಗಳಿವೆ. ನಮ್ಮಲ್ಲೂ ಒಗ್ಗಟ್ಟು ಇಲ್ಲ.
೯. ನಮ್ಮ ವಿವಿಧ ಉಪಜಾತಿಗಳ ಕಚ್ಚಾಟದಂತೆಯೇ ಬ್ರಾಹ್ಮಣರು ತಾತ್ವಿಕವಾಗಿಯೂ ಒಂದಲ್ಲ. ಬ್ರಾಹ್ಮಣ ಮೂಲಭೂತವಾದಿಗಳಿದ್ದಾರೆ, ನಕ್ಸಲೈಟ್ ಗಳಿದ್ದಾರೆ, ಆಷಾಡಭೂತಿಗಳಿದ್ದಾರೆ, ಸಮಾಜವಾದಿಗಳಿದ್ದಾರೆ, ಬಂಡವಾಳಶಾಹಿಗಳಿದ್ದಾರೆ, ಇವೆರೆಡನ್ನೂ ಪ್ರಯತ್ನಿಸಿದ/ಪ್ರಯತ್ನಿಸದ ಅಡ್ಡಗೋಡೆಯ ದೀಪಗಳೂ ಹಲವಿವೆ.
೧೦. ಇತ್ತೀಚಿನ ಬೆಳವಣಿಗೆಗಳು ಕುತೂಹಲ ಕೆರಳಿಸಬಹುದು: ಬ್ರಾಹ್ಮಣರು ಯಾರ ಯಾರ ವಿಷಯಕ್ಕೋ ತಮ್ಮ ತಮ್ಮೊಳಗೇ ಜಗಳವಾಡಿಕೊಳ್ಳುತ್ತಿರುತ್ತಾರೆ. ಮುಸ್ಲಿಮರು ಕೆಟ್ಟವರು ಎಂದು ಒಬ್ಬ ಬ್ರಾಹ್ಮಣ ಹೇಳಿದರೆ ಅವ ಪೆದ್ದ ಎಂದು ಮತ್ತೊಬ್ಬ ಬ್ರಾಹ್ಮಣ ಹೇಳುತ್ತಾನೆ. ಇವರಿಬ್ಬರ ಜಗಳವನ್ನು ನೋಡಿ ಮೂರನೆಯ ಬ್ರಾಹ್ಮಣನೊಬ್ಬ ಇದೇ ವಿವಾದವನ್ನು ಬಳಸಿ ಲಾಭ ಮಾಡುತ್ತಾನೆ. ಈ ಆಸೆಬುರುಕ ಬ್ರಾಹ್ಮಣನನ್ನು ಖಂಡಿಸಿ ಮತ್ತೊಬ್ಬ ಮಗದೊಬ್ಬ ಹೀಗೆ ಹಲವು ಬ್ರಾಹ್ಮಣರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬಾರುಗಳಲ್ಲಿ ಮತ್ತು ಸಿಕ್ಕಸಿಕ್ಕಲ್ಲೆಲ್ಲಾ ಚರ್ಚೆ ಮಾಡುತ್ತಾರೆ. ಒಟ್ಟಿನಲ್ಲಿ ಬ್ರಾಹ್ಮಣರು ಅಥವ ಯಾರದ್ದೋ ಬ್ರಾಹ್ಮಣಿಕೆ ಚರ್ಚೆಯಲ್ಲಿದ್ದೇ ಇರುತ್ತದೆ.
೧೧. ಬ್ರಾಹ್ಮಣರು ವಾದ ಮಾಡುವಾಗ ಇತರ ಜಾತಿಯವರನ್ನು ಸರಿಸಮಾನಾಗಿ ಕಾಣುವುದು ಕಡಿಮೆ. ಅವರನ್ನು ಸರಿಸಮಾನರಲ್ಲರೆಂದು ಬಿಟ್ಟು ವಿರುದ್ಧ ಬಣದಲ್ಲಿರುವ ಬ್ರಾಹ್ಮಣರನ್ನು ಆಯ್ಕೆಮಾಡಿ ಅವರ ವಿರುದ್ಧ ವಾದಮಾಡುವುದು ವಾಡಿಕೆ.
೧೨. ಸಮಾಜದಲ್ಲಿ ಯಾವುದೇ ಚರ್ಚೆ, ವಾದವಿವಾದ ನಡೆದರೂ, ಗೆಲ್ಲುವುದು/ಸೋಲುವುದು ಬ್ರಾಹ್ಮಣನೇ. ಖ್ಯಾತನೋ ಕುಖ್ಯಾತನೋ.. ಅವ ಬ್ರಾಹ್ಮಣನಾಗಿದ್ದರೆ ನಮಗೆ ನೆಮ್ಮದಿ.
೧೩. ಬ್ರಾಹ್ಮಣರು ಏನೇ ಚರ್ಚೆ ಮಾಡಲಿ, ಬ್ರಾಹ್ಮಣರು ಒಳ್ಳೆಯವರೇ ಕೆಟ್ಟವರೇ ಬ್ರಾಹ್ಮಣರ ಬಗ್ಗ್ಗೆ ಯಾರಿಗೆ ಕೂಲಂಕುಷವಾಗಿ ತಿಳಿದಿದೆ ಎಂಬುದೇ ಮುಖ್ಯವಿಷಯ. ಅದು ಆಡುವ ಮಾತಿನಲ್ಲಿಲ್ಲದಿದ್ದರೂ, ಗುಪ್ತಗಾಮಿನಿಯಾಗಾದರೂ ಹರಿಯುತ್ತಲೇ ಇರುತ್ತದೆ. ಬ್ರಾಹ್ಮಣಿಕೆಯಿಲ್ಲದ ವಿಷಯಗಳು ಇದ್ದದ್ದೇ ಆದರೆ, ಬ್ರಾಹ್ಮಣರಿಗೆ ಅದರಲ್ಲಿ ಆಸಕ್ತಿ ಕಡಿಮೆ.
೧೪. ಯಾವುದೇ ವಾದವಿರಲಿ, ವ್ಯಕ್ತಿಯ ನಿಲುವು ಏನೇ ಇರಲಿ, ಚರ್ಚಿಸುವಾಗ ಗೊತ್ತಿರಲೀ ಬಿಡಲಿ, ಬ್ರಾಹಣರು ಬ್ರಾಹ್ಮಣಿಕೆಯ ವಿವಿಧ ಅಭ್ಯಾಸಗಳನ್ನು, ವೇದಮಂತ್ರಗಳನ್ನು, ಪುಂಖಾನುಪುಂಕವಾಗಿ ಉದ್ಧರಿಸದೇ ಬಿಡುವುದು ಅಪರೂಪ. ವೇದಮಂತ್ರಗಳೂ ಕೂಡ, ಒಂದೊಂದು ಒಂದೊಂದು ಬಗೆಯಿದ್ದು ಯಾವ ನಿಲುವನ್ನು ಬೇಕಾದರೂ ಸಮರ್ಥಿಸಿಕೊಳ್ಳುವಂತೆ ರಚಿತವಾಗಿದೆ.

ಇದು ನನ್ನ ಜಾತಿ. ಮುಖ್ಯವಾದದ್ದೇನಾದರೂ ಬಿಟ್ಟಿದ್ದರೆ ಓದುಗರು ಸೇರಿಸಲಿ.

‹ ಪರಿವಿಡಿಮೇಲಿನ ಪುಟಕ್ಕೆಅನುಭವ ಕಥನ ›
  • ಅವಲೋಕನ
  • ಜಾತಿಮತ
~.~
  • ಶ್ಯಾಮ ಕಶ್ಯಪ ರವರ ಬ್ಲಾಗ್
  • Printer-friendly version
  • Login or register to post comments
  • 2110 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 18, 2007 - 7:49pm — mahesha

ಉ: Brahmins for Dummies

mahesha's picture

ಶ್ಯಾಮರೇ,

ಚನ್ನಾಗಿದೆ. !
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:10am — muralihr

ಉ: Brahmins for Dummies

muralihr's picture

1. ಬ್ರಾಹ್ಮಣರು ಮದುವೆ ಮಾಡಿಕೊಳ್ಳುವ ಬಗ್ಗೆ ತಿಳಿಸಿ.
2. ಆಮೇಲೆ ಅವರ ಕಲಾವ೦ತಿಕೆ ಮತ್ತು ಮಾತು ಭ್ಹಿನವೇನು ??
3. ಅಡಿಗೆಯ ವಿಷಯ ಬೇರೆ ಮರೆತ ಹಾಗಿದೆ.ತು೦ಬಾ ImportantU
4. ಭಾರತದಲ್ಲಿ ತಿಥಿ ಮಾಡಿ ಕಜ್ಜಾಯ ಆ೦ಬೋಡೆ ತಿನ್ನುವ ಜನಾ೦ಗ ಮತ್ತೊ೦ದು ಉ೦ಟೇ ??
ಹಾಗೇ ಹಬ್ಬ ಮಾಡಿ ಒಬ್ಬಟ್ಟು ಮಾಡಿ ಮುತ್ತೈದೆಯರನ್ನು ಕರೆಯುವ ಜನರ ಬಗ್ಗೆ ಮತ್ತೆ ಹೇಳಿ.
5. ಅಧ್ಯಾತ್ಮದ ಬಗ್ಗೆ ಸ್ವಲ್ಪ ಹೇಳಿ. ಈಗಿನ ಕಾಲದ ಬ್ರಾಹ್ಮಣರು ಏನು ತಿಳಿಕೊ೦ಡವರೇ ??
6. ಬ್ರಾಹ್ಮಣರಲ್ಲಿ ಕ್ರೂರರಾದ ರಾಜರ ಬಗ್ಗೆ ಒ೦ದು ಪಟ್ಟಿ ಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:39am — mahesha

ಉ: Brahmins for Dummies

mahesha's picture

ಮುರುಳಿ ದೇವರು!

1. ಬ್ರಾಹ್ಮಣರು ಮದುವೆ ಮಾಡಿಕೊಳ್ಳುವ ಬಗ್ಗೆ ತಿಳಿಸಿ.
ಬ್ರಾಹ್ಮಣರು ಮದುವೆ ಮಾಡಿಕೊಳ್ಳಲ್ಲ. ಮಾಡಿಸಿಕೊಳ್ಳೋದು. Smiling

ನನಗೆ ತಿಳಿದಂತೆ, ಬ್ರಾಹ್ಮಣರಲ್ಲಿ ’ಕನ್ಯಾದಾನ’ ಇದೊಂದೇ ಇರುವುದು. ಹೆಣ್ಣಿನ ತಂದೆತಾಯಿ ಒಪ್ಪಿ ’ದಾನ’ವಾಗಿ ಕೊಡಬೇಕು. "ಕಚ ಮತ್ತು ದೇವಯಾನಿ" ಕತೆ ನೆನೆಸಿಕೊಳ್ಳಿರಿ.

ಇದನ್ನು ಬಿಟ್ಟು ಈ ಕೆಳಗಿನ ಮದುವೆಗಳನ್ನು ಮಾಡಿಕೊಳ್ಳುವುದು "ಸಂಪ್ರದಾಯ"ವಲ್ಲ

೧) ಗಾಂಧರ್ವ( ದುಷ್ಯಂತ ಶಕುಂತಲೆ Smiling )
೨) ಸ್ವಯಂವರ( ಸೀತೆ ರಾಮ )
೩) ಹೆಣ್ಣುನ್ನು ಯುದ್ಧದಲ್ಲಿ ಗೆದ್ದು ಪಡೆಯುವುದು ( ಭೀಷ್ಮ, ಕಾಶಿರಾಜನ ಮಗಳಂದಿರನ್ನು ಗೆದ್ದು ತಂದಂತೆ),
೪) ದುಡ್ಡುಕೊಟ್ಟು, ಇಸುಕೊಂಡು ಮದುವೆ ಇಲ್ಲ. ಮದುವೆಯಲ್ಲಿ ಕನ್ಯೆಯೇ ದಕ್ಷಿಣೆ, ಇದನ್ನು ಬಿಟ್ಟು ಬೇರೆ ರೊಕ್ಕಗಿಕ್ಕ ಇಲ್ಲ Smiling. ಬಡ ಬ್ರಾಹ್ಮಣರು Smiling
ಪೈಶಾಚ, ರಾಕ್ಷಸ ಮುಂತಾದ ಬಗೆಗಳು ಸಲ್ಲದು. ಶಾಂತಂ ಪಾಪಂ

love marriage ಸಂಪ್ರದಾಯವಲ್ಲ Smiling

3. ಅಡಿಗೆಯ ವಿಷಯ ಬೇರೆ ಮರೆತ ಹಾಗಿದೆ.ತು೦ಬಾ ImportantU
ಅಡುಗೆ ವಿಷಯದಲ್ಲಿ ಒಂದೇ ಮಾತು" ಬ್ರಾಹ್ಮಣೋ ಭೋಜನ ಪ್ರಿಯಃ" Smiling.

4. ಭಾರತದಲ್ಲಿ ತಿಥಿ ಮಾಡಿ ಕಜ್ಜಾಯ ಆ೦ಬೋಡೆ ತಿನ್ನುವ ಜನಾ೦ಗ ಮತ್ತೊ೦ದು ಉ೦ಟೇ ??
ಕಜ್ಷಾಯ ಬ್ರಾಹ್ಮಣರು ಮಾಡ್ತಾರ? ಇದು ಯಾವ ಕಜ್ಜಾಯ?

ಕಜ್ಜಾಯ ಅಂದರೆ ಎರೆಯಪ್ಪ, ಸಜ್ಜಪ್ಪ ಮುಂತಾದ ’ಅಪ್ಪ’ಗಳಾ? ( ಸಜ್ಜಿಗೆ ಅಪ್ಪ = ಸಜ್ಜಪ್ಪ Smiling )

ಈ ಹಾಡು ಕೇಳಿದ್ದೀರ?
"ಶ್ರಾದ್ಧದೂಟ ಸುಮ್ಮನೆ ನೆನೆಸಿಕೊಂಡ್ರೆ ಗಮ್ಮನೆ
ಈ ಹಾಳು ನಾಲಗೆ ಕುಣಿವುದಯ್ಯ ಜುಮ್ಮನೆ":)

ಉದ್ದಿನೊಡೆ, ಅಂಬೊಡೆ, ಪಾಯಸ, ರೆವ ಉಂಡೆ, ರಸಾಯನ, ತಿಳಿಸಾರು, ಕೂಟು, ಗೊಜ್ಜು, ಪಲ್ಯೆ, ಕೋಸಂಬರಿ, ಉಪ್ಪಿಕಾಯಿ, ಎಲೆಯಡಿಕೆ. ಇಷ್ಟೇ Smiling

ಹಾಗೇ ಹಬ್ಬ ಮಾಡಿ ಒಬ್ಬಟ್ಟು ಮಾಡಿ ಮುತ್ತೈದೆಯರನ್ನು ಕರೆಯುವ ಜನರ ಬಗ್ಗೆ ಮತ್ತೆ ಹೇಳಿ.
- ಇದು ಹಾಗೆ ಸುಮ್ನೆ ಕೋಸಂಬರಿ, ಪಾನಕ ಹಂಚಿಕ್ಕೆ ಒಂದು ನೆಪ Smiling

6. ಬ್ರಾಹ್ಮಣರಲ್ಲಿ ಕ್ರೂರರಾದ ರಾಜರ ಬಗ್ಗೆ ಒ೦ದು ಪಟ್ಟಿ ಕೊಡಿ.
ಬ್ರಾಹ್ಮಣ ರಾಜರೇ ಬೆರಳೆಣಿಕೆಯಷ್ಟು. ಅದರಲ್ಲಿ ಕ್ರೂರ ಅಂದ್ರೆ? ( ರಾವಣ ಅಂದ್ರೆ ದ್ರಾವಿಡರಿಗೆ ಸಿಟ್ಟು ಬರಬಹುದು Smiling )

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:34am — hamsanandi

ಉ: Brahmins for Dummies

hamsanandi's picture

Quote:
3. ಅಡಿಗೆಯ ವಿಷಯ ಬೇರೆ ಮರೆತ ಹಾಗಿದೆ.ತು೦ಬಾ ImportantU
ಅಡುಗೆ ವಿಷಯದಲ್ಲಿ ಒಂದೇ ಮಾತು" ಬ್ರಾಹ್ಮಣೋ ಭೋಜನ ಪ್ರಿಯಃ" .

ಇದಕ್ಕೆ ಶತಮಾನಗಳ ಇತಿಹಾಸ ಇದೆಯಲ್ರೀ! ಹೀಗೆ ಇಲ್ಲದಿದ್ದರೆ ಚಾರುದತ್ತ, ವಾಸವದತ್ತ , ಮಾಲವಿಕಾಗ್ನಿಮಿತ್ರ ಮೊದಲಾದ ನಾಟಕದ ವಿದೂಷಕರ ಪಾತ್ರಗಳಿಗೆಲ್ಲಿ ಕಳೆ ಕಟ್ಟುತ್ತಿತ್ತು? Eye-wink

ಮೊನ್ನೆ ಯಜ್ಞಫಲ ನಾಟಕ ಓದುತ್ತಿದ್ದೆ - ಎಸ್.ವಿ. ಪರಮೇಶ್ವರ ಭ್ಹಟ್ಟರ ಅನುವಾದ. ಅದರ ವಿದೂಷಕನೂ ಇದೇ ತೆರವೇ!

Quote:

4. ಭಾರತದಲ್ಲಿ ತಿಥಿ ಮಾಡಿ ಕಜ್ಜಾಯ ಆ೦ಬೋಡೆ ತಿನ್ನುವ ಜನಾ೦ಗ ಮತ್ತೊ೦ದು ಉ೦ಟೇ ??
ಕಜ್ಷಾಯ ಬ್ರಾಹ್ಮಣರು ಮಾಡ್ತಾರ? ಇದು ಯಾವ ಕಜ್ಜಾಯ?

ಕಜ್ಜಾಯ ಅಂದರೆ ಎರೆಯಪ್ಪ, ಸಜ್ಜಪ್ಪ ಮುಂತಾದ ’ಅಪ್ಪ’ಗಳಾ? ( ಸಜ್ಜಿಗೆ ಅಪ್ಪ = ಸಜ್ಜಪ್ಪ )

ನಾನು ಚಿಕ್ಕವನಿರುವಾಗ ಕಾಗೆ-ಕಜ್ಜಾಯದ ಕಥೆ ಕೇಳಿದಾಗಲೆಲ್ಲ, ನಮ್ಮ ಮನೆಯಲ್ಲಿ ಮಾಡದ ಇದೇನು special ತಿನಿಸು ಅನ್ನಿಸ್ತಿತ್ತು.
ಆಮೇಲೆ ತಿಳಿದ ಪ್ರಕಾರ ಕಜ್ಜಾಯ= ಎರೆಯಪ್ಪ

ಈ ಎರೆಯಪ್ಪ ಪದದ ವ್ಯುತ್ಪತ್ತಿ ಗೊತ್ತಿದ್ದರೆ ತಿಳಿಸ್ರೀ. (ಎರೆಯುವುದು ಎಂದರೆ ಎಣ್ಣೆ ಸ್ನಾನ ಮಾಡುವುದು ಅನ್ನೋ ಅರ್ಥವೊಂದು ಗೊತ್ತು, ಅದನ್ನು ಬಿಟ್ಟು ಇನ್ನೇನಾದರೂ ಇದೆಯಾ? )

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 10:37am — prapancha

ಉ: Brahmins for Dummies

prapancha's picture

ಬ್ರಾಹ್ಮಣನಾಗಿ ಹೇಳುತ್ತೇನೆ, ಬ್ರಾಹ್ಮಣರು ಆಚರಿಸಿದ ಅಸ್ಪ್ರುಶ್ಯತೆ ಮಾತ್ರ ಅಸಹ್ಯ ಹುಟ್ಟಿಸುವ೦ತಹದ್ದು. ಇದಕ್ಕೇ ಏನೇ ಕಾರಣಗಳಿರಲಿ ಸನ್ನಿವೇಶಗಳಿರಲಿ, ಅಸ್ಪ್ರುಶ್ಯತೆ ಆಚರಣೆ ಮಾತ್ರ ಒ೦ದು ಘನಘೋರ ಅಪರಾದ. ಇದರಿ೦ದಲೇ ದರ್ಮದ ವಿನಾಶವಾಗುತ್ತಿರುವುದು. ಇವತ್ತು ಕೆಳವರ್ಗದವರು ಹಿ೦ದೂಗಳು ಎ೦ದು ಹೇಳಿಕೊಳ್ಳಲೂ ಹಿ೦ಜರಿಯುತ್ತಿದ್ದಾರೆ ಇದಕ್ಕೆ ಕಾರಣ ಅಸ್ಪ್ರುಶ್ಯತೆ ಆಚರಣೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 11:38am — mahesha

ಉ: Brahmins for Dummies

mahesha's picture

ಪ್ರಪಂಚ,

ಹಾಗೇ 'ತಾಗಿಸದು' ಇದುರು ಹೋರಾಟ ಮಾಡಿದ ಬ್ರಾಮ್ರ ದೊಡ್ಡ ಪಟ್ಟಿ ಇದೆ.

ಹೀಗೆ ಈ ನಡೆತ ಇಲ್ಲ. ಕೆಲವು ಹಳ್ಳಿಯಲ್ಲಿ ಇರಬಹುದು. ಬೆಂಗಳೂರಲ್ಲಂತೂ ಇಲ್ಲವೇ ಇಲ್ಲ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 11:52am — prapancha

ಉ: Brahmins for Dummies

prapancha's picture

Quote: "ಹೀಗೆ ಈ ನಡೆತ ಇಲ್ಲ. ಕೆಲವು ಹಳ್ಳಿಯಲ್ಲಿ ಇರಬಹುದು. ಬೆಂಗಳೂರಲ್ಲಂತೂ ಇಲ್ಲವೇ ಇಲ್ಲ." unquote

ಕಳೆದವಾರ ಒ೦ದು ಮಠಕ್ಕೆ ಹೋಗಿದ್ದೆ, ಹಣೆಯಲ್ಲಿಟ್ಟಿದ್ದ ನಾಮ ಸರಿಯಾಗಿ ಕಾಣುತ್ತಿಲ್ಲವೆ೦ದು ಊಟಕ್ಕೆ ಕುಳಿತಿದ್ದಾಗ ಎಲ್ಲರ ಮು೦ದೆ ಅವಮಾನವಾಗುವ ಹಾಗೆ ನಡೆದುಕೊ೦ಡರು. ಇದರಿ೦ದ ನನ್ನ ಮನಸ್ಸು ಸ್ವಲ್ಪ ವ್ಯಘ್ರವಾಗಿದೆ. ನಮ್ಮ೦ತವರ ಪರಿಸ್ಥಿತಿಯೇ ಹೀಗಾದರೇ ಇತರೆ ಜನಗಳ ಪಾಡೇನು? ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತು. ಇ೦ತವರ ಸ೦ಖ್ಯೆ ಕಡಿಮೆಯಿದ್ದರೂ ಇನ್ನು ಇದೆಯಲ್ಲ ಎ೦ದು ವಿಷಾದವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:02pm — mahesha

ಉ: Brahmins for Dummies

mahesha's picture

"ಹಣೆಯಲ್ಲಿಟ್ಟಿದ್ದ ನಾಮ"

ಸಾರ್‍.. ಇದು ಅಸ್ಪೃಶ್ಯತೆ ಎಲ್ಲಿ ಆಯ್ತು? ಜೊತೆಗೆ ಊಟಕ್ಕೆ ಸೇರಿಸಿದ್ದರಲ್ಲ.

ಅಂತಹ ಮಠಕ್ಕೆ ಹೋದಾಗ ಸರಿಯಾಗಿ "ನಾಮ" ಬಳೆದುಕೊಳ್ಳಬೇಕಾದುದು ಸಂಪ್ರದಾಯ ಅಲ್ವಾ!!
ಆಚಾರಕ್ಕಾಗಿ ತಾನೆ ಮಠಕ್ಕೆ ಹೋಗೋದು. ಅಲ್ಲಿಗೆ ನೀವು ವಿಚಾರಕ್ಕೆ ಹೋಗಿದ್ದರೆ, ಊಟಕ್ಕೆ ಕೂರುವ ಅಗತ್ಯವಿರಲಿಲ್ಲ.

ಹೋಕ್ಕೊಳ್ಳಿ ಬಿಡಿ, ನಾನು "ನಾಮ"ದವನಲ್ಲ. ಅದಕ್ಕೆ ಅಲ್ಲಿಯ ಪದ್ದತಿ ಸರಿಯಾಗಿ ತಿಳಿದಿಲ್ಲ.

ಸುಮ್ಮನೆ general ಆಗಿ, ಅಂತಹ ಕಡೆ ಪಂಚೆ, ನಾಮ, ಮುಂತಾದ 'ಸಂಪ್ರದಾಯದ ಲಾಂಛನ'ಗಳಿಗೆ ಹೆಚ್ಚು ಒತ್ತುಕೊಟ್ಟೇ ಕೊಡುತ್ತಾರೆ. ಅದು ಒಂದು ಬಗೆಯಲ್ಲಿ ಸರಿ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:09pm — prapancha

ಉ: Brahmins for Dummies

prapancha's picture

ಇಲ್ಲಿ 'ನಾಮ' ದ ಬಗ್ಗೆ ಅವರು ಮಾತಾಡಿದ್ದು ಕೇವಲ ತೋರಿಕೆ. ಇದರ ಹಿ೦ದಿನ ಮರ್ಮವಿದ್ದುದು ಇವನಾರೋ ಶೂದ್ರ ಬ೦ದು ಅಟಗಾಯಿಸಿಕೊ೦ಡಿದ್ದಾನೆ ಎ೦ದು. ನಾನು ಪುಲ್ ಅಟೈರ್ ನಲ್ಲೇ ಇದ್ದೆ. ಅಲ್ಲಿಗೆ ಹೋಗಬೇಕಾದದ್ದೂ ಕೂಡ ತೀರ ಅನಿವಾರ್ಯವಾಗಿತ್ತು ಯಾಕ೦ದ್ರೆ ಅ೦ದು ಹೋಗಿದ್ದು ನಮ್ಮವರೊಬ್ಬರ ಆಪ್ತ ಆಮ೦ತ್ರಣದಿ೦ದ!.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 10:09pm — obba.oduga

ಉ: Brahmins for Dummies

obba.oduga's picture

ಇಂತಹುದೇ ‘ಅಸ್ಪೃಷ್ಯತೆ’ ಯನ್ನು ಬೇರೆ ಕಡೆಯಲ್ಲಿಯೂ ನೋಡಬಹುದು.

೧. ಕೆಲವು ಕ್ಲಬ್ ಗಳಲ್ಲಿ ಚಪ್ಪಲಿ ಅಥವಾ ಸ್ಪೋರ್ಟ್ ಶೂ ಹಾಕಿಕೊಂಡಿದ್ದರೆ ಒಳಗೆ ಬಿಡುವುದೇ ಇಲ್ಲ!
೨. ನಾನು ಕೆಲಸ ಮಾಡುತ್ತಿದ್ದ ಕಂಪನಿಯೊಂದರ ಒಂದು ಫ್ಲೋರ್ ನಲ್ಲಿ ಸೂಟು ಧರಿಸಿದವರು ಮಾತ್ರ ಒಳಗೆ ಹೋಗಬಹುದಿತ್ತು.
೩. ಬೆಂಗಳೂರಿನ ಕೆಲವು ಆಂಗ್ಲ ಶಾಲೆಗಳಲ್ಲಿ ಕನ್ನಡ ಮಾತನಾಡುವಂತಿಲ್ಲವಂತೆ. ಹಾಗೆ ಮಾಡಿದರೆ ಫೈನ್ ಹಾಕುತ್ತಾರಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 11:56am — Sunil Jayaprakash

ಉ: Brahmins for Dummies

Sunil Jayaprakash's picture

ಶ್ಯಾಮ್ ಸಖತ್ತಾಗಿದೆ. ಎಲ್ಲಕ್ಕಿಂತ ನನಗೆ ಓದಿದೊಡನೆಯೇ ನಗು ತರಿಸಿದ್ದು ಇದರ ಶೀರ್ಷಿಕೆ. "Brahmins for Dummies". "Java for Dummies", "C for Dummies" ಇಂತಹ ಪುಸ್ತಕಗಳ ಶೀರ್ಷಿಕೆಗಳನ್ನು ನೋಡಿ ನೋಡಿ ಬೇಸತ್ತಿದ್ದ ನನಗೆ, "Brahmins for Dummies" ತುಂಬಾ ನಗು ತರಿಸಿತು. ಹಾಗಾದರೆ, ಮುಂದಿನ ಬರಹ "Brahmin in 21 days" ಸದ್ಯದಲ್ಲಿಯೇ ನಿರೀಕ್ಷಿಸೋಣವೇ. ಈ 21 Days ಪುಸ್ತಕಗಳನ್ನು ಬಿಡುವಲ್ಲಿ SAM seriesನವರದು ಎತ್ತಿದ ಕೈ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:03pm — kpbolumbu

ಉ: Brahmins for Dummies

kpbolumbu's picture

ಮಿ.ಶ್ಯಾಮ ಕಶ್ಯಪ,
ಸರ್ವಸಮಾನತೆಯ ಇಂದಿನ ಯುಗದಲ್ಲಿ ಬ್ರಾಹ್ಮಣರು ತಮ್ಮ ಹಣೆಗೆ ಬಳಿದ ತಿಲಕವನ್ನೋ ನಾಮವನ್ನೋ ಹೊರತುಪಡಿಸಿ ಇನ್ನೇನನ್ನೂ ತಮಗಾಗಿಯೇ ಇಟ್ಟುಕೊಳ್ಳುವಂತಿಲ್ಲ. ಇಂತಿರುವಾಗ ನೀವು ಮೇಲೆ ತಿಳಿಸಿದ ಕಲ್ಯಾಣಗುಣಗಳನ್ನು ಸ್ವಂತಕ್ಕೆಂದು ಇಟ್ಟುಕೊಂಡಿದ್ದೀರಿ.

ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 3:21pm — ಶ್ಯಾಮ ಕಶ್ಯಪ

ಉ: Brahmins for Dummies

ಶ್ಯಾಮ ಕಶ್ಯಪ's picture

ಮೇಲೆ ತಿಳಿಸಿರುವುದನ್ನೆಲ್ಲ ಕಲ್ಯಾಣಗುಣಗಳೆಂದು ನಾನು ತಿಳಿದಿಲ್ಲ. ಯಾವುದನ್ನು ಸ್ವಂತಕ್ಕೆ ಇಟ್ಟುಕೊಳ್ಳುವುದು ಯಾವುದನ್ನು ಬಿಡುವುದು ಎನ್ನುವ ಪ್ರಶ್ನೆ ಕೂಡ ಯಾಕೆ ಎಂಬುದು ನನಗೆ ಹೊಳೆಯಲಿಲ್ಲ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 4:07pm — kpbolumbu

ಉ: Brahmins for Dummies

kpbolumbu's picture

"ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ..." ಎಂದು ವಿನಮ್ರವಾಗಿಯೇ ಶುರುವಿಟ್ಟರೂ ಯಾವುದೋ ಒಂದರ ಬಗ್ಗೆ ಉದ್ವೇಗವಿದ್ದಂತೆ ಕಂಡುಬಂತು.ಮೊದಲ ಆರು ಅಂಶಗಳಲ್ಲಿ ಇದು ತಮ್ಮ ಜಾತಿಯೆ ಬಗೆಗಿನ ದುರಭಿಮಾನವೆಂದು ನಾನಂದುಕೊಳ್ಳಬಹುದೇ?
ಅದು 'ಸ್ಮಾರ್ಥ'ವಲ್ಲ, ಸ್ಮಾರ್ತ ಎಂದು ಕೇಳಿ ಬಲ್ಲೆ.
'ಬ್ರಾಹ್ಮಣರಲ್ಲಿ ಇಲ್ಲದ ಒಗ್ಗಟ್ಟು' ನಿಮ್ಮ ಅಭಿಪ್ರಾಯದಲ್ಲಿ ಯಾವುದರಲ್ಲಿ ಇರಬೇಕು, ಯಾರೂ ಬಿಜೆಪಿಗೆ ಓಟು ಹಾಕದಿರುವುದರಲ್ಲೋ? 'ಬ್ರಾಹ್ಮಣರ ಒಗ್ಗಟ್ಟು' ಒಂದು ಆದರ್ಶವೆಂದು ಒಪ್ಪಿಕೊಳ್ಳದಿರುವಾಗ
'ಇಲ್ಲ ' ಎಂದು ಬೊಟ್ಟು ಮಾಡುವುದರ ಔಚಿತ್ಯವೇನು?
"ಬ್ರಾಹ್ಮಣರು ತಾತ್ವಿಕವಾಗಿಯೂ ಒಂದಲ್ಲ. ಬ್ರಾಹ್ಮಣ ಮೂಲಭೂತವಾದಿಗಳಿದ್ದಾರೆ, ನಕ್ಸಲೈಟ್ ಗಳಿದ್ದಾರೆ, ಆಷಾಡಭೂತಿಗಳಿದ್ದಾರೆ, ಸಮಾಜವಾದಿಗಳಿದ್ದಾರೆ, ಬಂಡವಾಳಶಾಹಿಗಳಿದ್ದಾರೆ, ಇವೆರೆಡನ್ನೂ ಪ್ರಯತ್ನಿಸಿದ/ಪ್ರಯತ್ನಿಸದ ಅಡ್ಡಗೋಡೆಯ ದೀಪಗಳೂ ಹಲವಿವೆ." ಆದರೂ ಪ್ರಯೋಜನವನ್ನು ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ತಮ್ಮ ಅಭಿಮತವಲ್ಲವೇ!
'ಇದು ನನ್ನ ಜಾತಿ. ಮುಖ್ಯವಾದದ್ದೇನಾದರೂ ಬಿಟ್ಟಿದ್ದರೆ ಓದುಗರು ಸೇರಿಸಲಿ....' ಎಂದಿರಿ, ಎಲ್ಲರೂ ಹೀಗೆ ತಮ್ಮ ತಮ್ಮ ಜಾತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ 'ಸಂಪದ ಚರ್ಚಾಪುಟ'ವನ್ನು ಇದಕ್ಕಾಗಿಯೇ ಮೀಸಲಿಡಬೇಕಾದೀತು.ಹಾಗಲ್ಲದೆ ನಿಮ್ಮ ಜಾತಿಯ ಬಗೆಗೆ ಮಾತ್ರ ಎಲ್ಲರೂ ಆಸಕ್ತಿಯಿಟ್ಟುಕೊಳ್ಳಬೇಕೆಂದು ವಾದಿಸುವುದು ಎಷ್ಟರ ಮಟ್ಟಿಗೆ ಸರಿ?

ಬ್ರಾಹ್ಮಣ ಆಷಾಡಭೂತಿಗಳು ನಿಷ್ಠ ಬ್ರಾಹ್ಮಣರಲ್ಲಷ್ಟೇ ಅಲ್ಲದೆ ಮಾಧ್ಯಮಗಳ ನಡುವೆಯೂ ಇರುತ್ತಾರೆ. ಕ್ಷಮಿಸಿ, ಇದು ವ್ಯಂಗ್ಯವಲ್ಲ.....
http://thatskannada.oneindia.in/column/ravibelagere/110607caste_religion...
http://thatskannada.oneindia.in/column/ravibelagere/180607caste_religion...

ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 4:33pm — mahesha

ಉ: Brahmins for Dummies

mahesha's picture

ಬೊಳುಂಬು ಅವರೇ

ಸ್ಮಾರ್ತ ಸರಿ!!

೧. ಸ್ಮಾರ್ತ (ಸಂ) (ನಾ) ೧ ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ ೨ ಸ್ಮೃತಿ ವಿಧಿಗಳನ್ನು ಪಾಲಿಸುವವನು ೩ ಶಂಕರಾಚಾರ್ಯರ ಮತಾನುಸಾರಿಯಾದ ಅದ್ವೈತ ಪಂಥದ ಬ್ರಾಹ್ಮಣ

೨. ಸ್ಮಾರ್ತ (ಸಂ) (ಗು) ಸ್ಮೃತಿ ಗ್ರಂಥಗಳಲ್ಲಿ ವಿಧಿಸಿದ, ಸ್ಮೃತಿ ನಿಯಮಗಳಿಗೆ ಅನುಸಾರವಾದ
ಪ್ರಿಸಂ

ಸ್ಮೃತಿಯ ಕರ್ಮಗಳನ್ನು ನಂಬಿರುವ ಕರ್ಮಠರು!
೧. ಕರ್ಮಠ (ಸಂ) (ನಾ) ೧ ಕೆಲಸದಲ್ಲಿ ನಿಪುಣನಾದವನು ೨ ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವನು Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 4:36pm — kpbolumbu

ಉ: Brahmins for Dummies

kpbolumbu's picture

ನನ್ನಿ ಮಹೇಶ್!
ವಿವರಗಳಿಗಾಗಿ ಮತ್ತೊಮ್ಮೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 11:07pm — mahesha

ಉ: Brahmins for Dummies

mahesha's picture


""ಅಸ್ಮಿನ್ ಧರ್ಮೇsಖಿಲೇನೋಕ್ತೌ ಗುಣದೋಷೌ ಚ ಕರ್ಮಣಾಮ್ |
ಚತುರ್ಣಾಮಪಿ ವರ್ಣಾನಾಮಾಚಾರಶ್ಚೈವ ಶಾಶ್ವತಃ || C. ||

ಆಚಾರಃ ಪರಮೋ ಧರ್ಮಃ ಶ್ರುತ್ಯೋಕ್ತಃ ಸ್ಮಾರ್ತ ಏವ ಚ |
ತಸ್ಮಾದಸ್ಮಿನ್ ಸದಾ ಯುಕ್ತೋ ನಿತ್ಯಂ ಸ್ಯಾದಾತ್ಮವಾನ್ ದ್ವಿಜಃ || C. ||

ಆಚಾರಾದ್ ವಿಚ್ಯುತೋ ವಿಪ್ರೋ ನ ವೇದಫಲಮಶ್ನುತೇ |
ಆಚಾರೇಣ ತು ಸಂಯುಕ್ತಃ ಸಮ್ಪೂರ್ಣಫಲಭಾಗ್ ಭವೇತ್ || "

- ಮನುಸ್ಮೃತಿ

ಬೊಳುಂಬು ಅವರೆ ನನಗೆ ಇದರ ತರ್ಜುಮೆ ಸಿಗುತ್ತಿಲ್ಲ. ನಾನು ಅರಿತಿರುವುದು ಸರಿಯೇ ಎಂಬ ಐಬಿದೆ. ( ನನಗೆ ಮನುಸ್ಮೃತಿ ಮೇಲೇ ಬಲು ಗರುವ ಇಲ್ಲ ). ನನ್ನನ್ನು ತಿದ್ದಿ ದಯವಿಟ್ಟು.( ಊ ಗೊತ್ತಿರುವವರು )

ಈ ಶ್ಲೋಕಗಳ ತಿರುಳು ಗಡಿಬಿಡಿಯಲ್ಲಿ ಹೇಳಲಿಲ್ಲ. ( ಇವನೇ ಮಹಾ ಎಂದು ಅಂದುಕೊಳ್ಳೋರು ಮನ್ನಿಸಿರಿ ನನ್ನ )

ಗಮನಿಸಿ

"ನಾಲ್ಕು ವರ್ಣಗಳ ಆಚಾರಗಳೂ ಶಾಶ್ವತ. ಅಂದರೆ ಈ ನಾಲ್ಕು ವರ್ಣಗಳು ಏನೇ ಆದರೂ, ಹೇಗೆ ಆದರೂ ಅವರ ಆಚಾರಗಳು ಶಾಶ್ವತ. ಬ್ರಾಹ್ಮಣರು ಬ್ರಾಮ್ರ ಆಚಾರ ಬಿಡಲ್ಲ, ಕ್ಷತ್ರಿಯರು ಅವರ ಆಚಾರ ಬಿಡಲ್ಲ. ವೈಶ್ಯರು ಅವರ ಆಚಾರ ಬಿಡಲ್ಲ. ಹಾಗೇ ಶೂದ್ರರು ಅವರ ಆಚಾರ ಬಿಡಲ್ಲ. ಇಲ್ಲಿ ಆಚಾರ ಅಂದ್ರೆ, ಬರೀ ಹಣೆಗೆ ಇಡೋದು ಇಂತವಲ್ಲ. ಇದಕ್ಕಿಂತ ಮೇಲಾದುದು ಎಂದು ನನ್ನ ಅನಿಸಿಕೆ. ಅವರ ನಡೆ-ನುಡಿ-ಯೋಚನೆ ಮುಂದಾದ ಚರ್ಯೆಗಳು."

ವೇದದಲ್ಲಿ ಹೇಳಿದ ಆಚಾರವೇ ಪರಮಧರ್ಮವೂ ಸ್ಮಾರ್ತವೂ( ಹಿಡಿದು ನಡೆಸಬೇಕಾದುದು ), ಇದರಂತೆ ದ್ವಿಜ ಯಾವಾಗಲೂ ಇರ-ತಕ್ಕದ್ದು.

ಆಚಾರ ಬಿಟ್ಟ ವಿಪ್ರನಿಗೆ ವೇದಫಲವಿಲ್ಲ. ಆಚಾರವು ಕೂಟವಿದ್ದರೆ ಇಡೀ ಫಲವು ಸಿಗುವುದು."
===

ಆದರೆ ಇಲ್ಲಿ ಗೊಂದಲ ಏನು ಗೊತ್ತಾ? ಹಲ ಬ್ರಾಮ್ರಿಗೆ ವೇದಫಲ ಏನು ಅಂತ ಗೊತ್ತಿಲ್ಲ( ನನಗೂ ಗೊತ್ತಿಲ್ಲ Sad ). ಇದನ್ನು ತಿಳಿಯದೇ ಬರೀ "ಆಚಾರ" ಎಂದು ಏನೇನೋ ಮಾಡ್ತಾರೆ, ಅದನ್ನೂ ಸರಿಯಾಗಿ ಮಾಡಲ್ಲ. ಇಂತವು ಅರೆಬರೆ ಬ್ರಾಮ್ರು( ಪೂರ್ಣ ಫಲ ಇಲ್ಲದವರು). ಇಂತವರನ್ನೂ ನೋಡಿ ಬ್ರಾಮ್ಮು ಹಿಂಗೆ ಎಂಬುದು, ಅರೆಬರೆ "ಬ್ರಾಮ್ಮಣಿಕೆ"ಯನ್ನು ತಿಳಿದು ಮಾತಾಡಿದಂತೆ.

ಮೊದಲು ಇವನ್ನೆಲ್ಲ ತಿಳಿದು, ಅಂದ್ರೆ ವೇದಫಲ ಅಂದ್ರೇನು ಎಂದು ತಿಳಿದು, ಆ ವೇದಫಲಕ್ಕಾಗಿ ಹೇಳಿರುವ "ಆಚಾರ" ಮಾಡುವುದು ಬ್ರಾಮ್ರಿಗೆ ಸರಿ ಅಲ್ವಾ!!
ಹಾಗೇ
ಇವನ್ನೆಲ್ಲ ಅರಿತು, ಬ್ರಾಮ್ರು ಹಿಂಗೇ ಅನ್ನೋದು ಸರಿ ಅಲ್ವಾ. ಬರೀ ಇಬ್ಬರು ಮೂರು ಮಂದಿ ನೋಡಿ ’ಹೀಗೆ’ ಎಂದು ತೀರ್ಪೀಯ್ಯಬಾರದು( ಇದು ಕಶ್ಯಪರ ಬರಹದ ತಿರುಳು ಎಂದು ನನ್ನ ಅರಿವು )

ಕಶ್ಯಪರು ಹೇಳಿದುದು "ಸ್ಮಾರ್ತ ಮುಂತಾದ ಪದಗಳ ತಿರುಳ ಆಳದಲ್ಲಿ ಇಲ್ಲ" ಅವರ ಮಾತು ಬರೀ ಮಾಮೂಲಿ ಮಂದಿಗೆ ಹೇಗೆ ಬ್ರಾಮ್ರು ಕಾಣ್ತಾರೆ ಎಂದು ಬರೆದಿದ್ದಾರೆ. ಬ್ರಾಮ್ರಲ್ಲಿ ಎಲ್ಲಾ ತರದೋರು ಇದ್ದಾರೆ ಎಂದು ಹೇಳಿದ್ದಾರೆ. ಅವರ ಮಾತನ್ನು ಅಷ್ಟೇ ಆಳದಲ್ಲಿ ತಗೊಂಡುಬಿಡಬೇಕು.

ಕಶ್ಯಪರ ಅನಿಸಿಕೆ, ಆ ಮಟ್ಟದಲ್ಲಿ ಸರಿಯಾಗಿ ಚನ್ನಾಗೇ ಇದೆ.!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 4:39pm — mahesha

ಉ: Brahmins for Dummies

mahesha's picture

"ಅಸ್ಮಿನ್ ಧರ್ಮೇsಖಿಲೇನೋಕ್ತೌ ಗುಣದೋಷೌ ಚ ಕರ್ಮಣಾಮ್ |
ಚತುರ್ಣಾಮಪಿ ವರ್ಣಾನಾಮಾಚಾರಶ್ಚೈವ ಶಾಶ್ವತಃ || C. ||

ಆಚಾರಃ ಪರಮೋ ಧರ್ಮಃ ಶ್ರುತ್ಯೋಕ್ತಃ ಸ್ಮಾರ್ತ ಏವ ಚ |
ತಸ್ಮಾದಸ್ಮಿನ್ ಸದಾ ಯುಕ್ತೋ ನಿತ್ಯಂ ಸ್ಯಾದಾತ್ಮವಾನ್ ದ್ವಿಜಃ || C. ||

ಆಚಾರಾದ್ ವಿಚ್ಯುತೋ ವಿಪ್ರೋ ನ ವೇದಫಲಮಶ್ನುತೇ |
ಆಚಾರೇಣ ತು ಸಂಯುಕ್ತಃ ಸಮ್ಪೂರ್ಣಫಲಭಾಗ್ ಭವೇತ್ || "

- ಮನುಸ್ಮೃತಿ

ಆಚಾರಗಳ ಬಗ್ಗೆ ಸಕ್ಕತಾಗಿ ಹೇಳಿದೆ. ತತ್ವಗಳು ಹಾಳು ಬಿದ್ದರೂ ಆಚಾರಗಳು ಶಾಶ್ವತ! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 6:14pm — ಶ್ಯಾಮ ಕಶ್ಯಪ

ಉ: Brahmins for Dummies

ಶ್ಯಾಮ ಕಶ್ಯಪ's picture

ಹೌದು. "ಸ್ಮಾರ್ತರು" ಎಂಬುದು ಸರಿಯಾದ ಬಳಕೆ. ತಪ್ಪಿಗೆ ಕ್ಷಮೆಯಿರಲಿ.

Quote:
ವಿನಮ್ರವಾಗಿಯೇ ಶುರುವಿಟ್ಟರೂ ಯಾವುದೋ ಒಂದರ ಬಗ್ಗೆ ಉದ್ವೇಗವಿದ್ದಂತೆ ಕಂಡುಬಂತು.ಮೊದಲ ಆರು ಅಂಶಗಳಲ್ಲಿ ಇದು ತಮ್ಮ ಜಾತಿಯೆ ಬಗೆಗಿನ ದುರಭಿಮಾನವೆಂದು ನಾನಂದುಕೊಳ್ಳಬಹುದೇ?

ಜಾತಿಯ ಬಗ್ಗೆ ದುರಭಿಮಾನ ಇದ್ದಾಗ ಮಾತ್ರ ಈ ರೀತಿಯ ಅನಿಸಿಕೆಗಳು ಬರತ್ತೆ ಅನ್ನುವುದಕ್ಕೆ ನಾನು ಒಪ್ಪುವುದಿಲ್ಲ. ನಾನಂದುಕೊಂಡ ಹಾಗೆ ಮೇಲಿನವು facts. ಇಲ್ಲಿ ಅಭಿಮಾನ/ದುರಭಿಮಾನದ value judgment ಬರುವುದಿಲ್ಲ. ಹಾಗೆಯೇ ಒಗ್ಗಟ್ಟಿಲ್ಲದಿರುವುದು observation. 'ಬ್ರಾಹ್ಮಣರಲ್ಲಿ ಇಲ್ಲದ ಒಗ್ಗಟ್ಟು' ಬೇರೆಯವರಲ್ಲಿದೆಯೇ ಅಥವ ಬ್ರಾಹ್ಮಣರಲ್ಲಿ ಒಗ್ಗಟ್ಟಿರಬೇಕೆ/ ಬೇರೆ ಜಾತಿಗಳಲ್ಲಿವೆಯೇ ಈ ವಿಷಯಗಳು ನಿಮ್ಮ ನಿಮ್ಮ ಮನಸ್ಸಿಗೆ ಬಿಟ್ಟದ್ದು.

Quote:
'ಇಲ್ಲ ' ಎಂದು ಬೊಟ್ಟು ಮಾಡುವುದರ ಔಚಿತ್ಯವೇನು?

ಲೇಖನದ ಶೀರ್ಷಿಕೆಯ ಅರ್ಥ ನಿಮಗೆ ತಿಳಿಯಲಿಲ್ಲವೆಂದು ತೋರುತ್ತದೆ. http://sampada.net/blog/18/07/2007/5031#comment-9781 ನೋಡಿ. -____ for dummies ಎನ್ನುವುದು ಯಾವುದಾದರು ವಿಷಯದ ಬಗ್ಗೆ ತಕ್ಷಣಕ್ಕೆ, ಸರಳವಾಗಿ ತಿಳಿಸುವ ಒಂದು ಪ್ರಖ್ಯಾತ ಸೀರೀಸ್. ಅದರ ಶೀರ್ಷಿಕೆಗಳೆಲ್ಲ ಹೀಗೇ ಇರುತ್ತವೆ C for Dummies, Java for Dummies... ಹೀಗೆ. ಇಲ್ಲಿ ಬ್ರಾಹ್ಮಣ ಜಾತಿಯ introduction ಇದೆ.

Quote:
"ಬ್ರಾಹ್ಮಣರು ತಾತ್ವಿಕವಾಗಿಯೂ ಒಂದಲ್ಲ. ಬ್ರಾಹ್ಮಣ ಮೂಲಭೂತವಾದಿಗಳಿದ್ದಾರೆ, ನಕ್ಸಲೈಟ್ ಗಳಿದ್ದಾರೆ, ಆಷಾಡಭೂತಿಗಳಿದ್ದಾರೆ, ಸಮಾಜವಾದಿಗಳಿದ್ದಾರೆ, ಬಂಡವಾಳಶಾಹಿಗಳಿದ್ದಾರೆ, ಇವೆರೆಡನ್ನೂ ಪ್ರಯತ್ನಿಸಿದ/ಪ್ರಯತ್ನಿಸದ ಅಡ್ಡಗೋಡೆಯ ದೀಪಗಳೂ ಹಲವಿವೆ." ಆದರೂ ಪ್ರಯೋಜನವನ್ನು ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ತಮ್ಮ ಅಭಿಮತವಲ್ಲವೇ!

ಯಾವುದರ ಪ್ರಯೋಜನ?

Quote:

'ಇದು ನನ್ನ ಜಾತಿ. ಮುಖ್ಯವಾದದ್ದೇನಾದರೂ ಬಿಟ್ಟಿದ್ದರೆ ಓದುಗರು ಸೇರಿಸಲಿ....' ಎಂದಿರಿ, ಎಲ್ಲರೂ ಹೀಗೆ ತಮ್ಮ ತಮ್ಮ ಜಾತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ 'ಸಂಪದ ಚರ್ಚಾಪುಟ'ವನ್ನು ಇದಕ್ಕಾಗಿಯೇ ಮೀಸಲಿಡಬೇಕಾದೀತು.ಹಾಗಲ್ಲದೆ ನಿಮ್ಮ ಜಾತಿಯ ಬಗೆಗೆ ಮಾತ್ರ ಎಲ್ಲರೂ ಆಸಕ್ತಿಯಿಟ್ಟುಕೊಳ್ಳಬೇಕೆಂದು ವಾದಿಸುವುದು ಎಷ್ಟರ ಮಟ್ಟಿಗೆ ಸರಿ?

ಮೊದಲಿಗೆ, ಇದು ಚರ್ಚಾಪುಟವಲ್ಲ. ನಾನು ಈ ಲೇಖನ ಹಾಕಿರುವುದು ನನ್ನ ಬ್ಲಾಗಿನಲ್ಲಿ. ಇಲ್ಲಿರಿವುದು ಒಂದು ಜಾತಿಯ introduction. ಯಾಕೆ ಬೇಕು ಅಂದರೆ ವಾದಗಳಲ್ಲಿ, ಅನಿಸಿಕೆಗಳಲ್ಲಿ ಜನರು ಬ್ರಾಹ್ಮಣರು ಹೀಗೆ ಎನ್ನುವಾಗ ಬ್ರಾಹ್ಮಣರನ್ನು ಒಂದು monolithic group ಆಗಿ ನೋಡುತ್ತಿದ್ದಾರೆ. ಬ್ರಾಹ್ಮಣರೆಲ್ಲ ಹಂಗೆ, ಬ್ರಾಹ್ಮಣರೆಲ್ಲ ಹಿಂಗೆ ಅಂತ. ಇದನ್ನು ವಿವರಿಸುವುದು ನನಗೆ ಅವಶ್ಯ ಅನ್ನಿಸಿದೆ. ಬರೆದಿರುವೆ. ಇದು ನಿಮಗೆ ತಪ್ಪೆನಿಸಿದರೆ ಅದು ತಮ್ಮ ಅನಿಸಿಕೆ.

ಎರಡು: ನನ್ನ ಜಾತಿಯ ಬಗ್ಗೆ ಮಾತ್ರ ಎಲ್ಲರೂ ಆಸಕ್ತಿ ತೋರಿಸಲಿ ಎಂದು ಎಲ್ಲಿ ನಾನು ವಾದ ಮಾಡಿದ್ದೇನೆ? ಅಥವ ಬಡಾಯಿ ಎಲ್ಲಿ ಕೊಚ್ಚಿದ್ದೇನೆ?

ಮೂರು: ಸಂಪದದಲ್ಲಿ ಹಲವು ಜಾತಿಯ/ಉಪಜಾತಿಗಳ ಜನರಿದ್ದಾರೆ. ನಮ್ಮೆಲ್ಲರ ಸಾಮಾಜಿಕ/ಸಾಂಸ್ಕೃತಿಕ ವೈವಿಧ್ಯವನ್ನು, ಇತಿಹಾಸವನ್ನು ತಾವು ಬಲ್ಲಿರೇನೋ.. ನಾನಂತು ನನ್ನ ಜಾತಿಯನ್ನು ಬಿಟ್ಟು ಮಿಕ್ಕ ಜಾತಿಗಳ ಬಗ್ಗೆ, ಆ ಜಾತಿಯ ಜನರು ತಮ್ಮ ತಮ್ಮ ಜಾತಿಗಳನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ತಿಳಿದವನಲ್ಲ. ಇದರಲ್ಲಿ ನನಗೆ ಆಸಕ್ತಿಯಿದೆ. ಆದ್ದರಿಂದ ಬರೆಯಲಿ ಬಿಡಿ gowdas for dummies, lingayaths for dummes ಅಂತ. .. ಇದಕ್ಕಾಗಿಯೇ ಬೇರೆ ಪುಟಗಳನ್ನು ಮೀಸಲಾಗಿಯೇ ಇಡೋಣ, ಜಾತಿಮತ - ಇತಿಹಾಸ ಅಂತ ಏನೀಗ?

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 3:25pm — ಶ್ಯಾಮ ಕಶ್ಯಪ

ಉ: Brahmins for Dummies

ಶ್ಯಾಮ ಕಶ್ಯಪ's picture

ಧನ್ಯವಾದಗಳು ಸುನಿಲ. ಇಷ್ಟು ವರ್ಷ ಬ್ಲಾಗ್ ಮಾಡಿದ್ದಕ್ಕೆ ಗಿಮಿಕ್ ಶೀರ್ಷಿಕೆ ಕೊಡೋದನ್ನೂ ನಾನು ಕಲಿದಿದ್ರೆ ಹೇಗೆ ಅಂತ ಕಷ್ಟಪಟ್ಟು ಹುಡುಕಿದ ಹೆಸರು ಇದು (off-course ಸ್ವಂತಿಕೆ ಏನಿಲ್ಲ ಬಿಡಿ)

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 10:01pm — obba.oduga

ಉ: Brahmins for Dummies

obba.oduga's picture

ಬ್ರಾಹ್ಮಣನಾಗಿ ತಮ್ಮ ಜನಾಂಗ ಮಾಡಬಾರದ ತಪ್ಪನ್ನೇನೋ ಮಾಡಿಬಿಟ್ಟಿದೆಯೆಂದು ಅಪರಾಧಿ ಪ್ರಜ್ಞೆಯಿಂದ ಬಳಲುವ ಬ್ರಾಹ್ಮಣ,

ಮತ್ತು

ತಮ್ಮೆಲ್ಲಾ ಸಮಸ್ಯೆಗಳಿಗೆ ಬ್ರಾಹ್ಮಣನೇ ಕಾರಣ ಎಂದು ಭಾವಿಸುವ ಬ್ರಾಹ್ಮಣೇತರ

ಇಬ್ಬರೂ ಓದಬೇಕಾದ ಪಾವೆಂ ಆಚಾರ್ಯ ಅವರ ಲೇಖನ ಇಲ್ಲಿದೆ.

http://pratikriye.blogspot.com/2007/06/blog-post.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2007 - 4:42pm — kpbolumbu

ಉ: Brahmins for Dummies

kpbolumbu's picture

ಓದುಗ,
ಬ್ರಾಹ್ಮಣರು ಏನು ಮಾಡಬೇಕು ಎನ್ನುವುದಕ್ಕಿಂತ ಬ್ರಾಹ್ಮಣರು ಏನು ಮಾಡಬಹುದು ಎಂದು ಮೇಲಿನ ಲೇಖನಕ್ಕೆ ಶೀರ್ಷಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು, ಯಾಕೆಂದರೆ ಅದು ಒಂದು ಒತ್ತಾಯವಾಗಬಾರದು.ಶ್ರೀ ಪಾ.ವೆಂ. ಆಚಾರ್ಯರ ಲೇಖನವನ್ನು ಪ್ರಕಟಿಸಿದ್ದು ಸಮಯೋಚಿತವಾಗಿದೆ.
ಶ್ಯಾಮ ಕಶ್ಯಪ,
'ಬ್ರಾಹ್ಮಣರ ಒಗ್ಗಟ್ಟು' ನಿಮಗೆ ಒಂದು ಆದರ್ಶವಲ್ಲ ಎಂಬುದು ನಿಮ್ಮ ಲೇಖನದಿಂದಲೇ ಸ್ಪಷ್ಟವಾಗಿದೆ.

Quote:
ನಾನಂದುಕೊಂಡ ಹಾಗೆ ಮೇಲಿನವು facts.

Quote:
ಯಾವುದರ ಪ್ರಯೋಜನ?
[red]೨. ಸಮಾಜದಲ್ಲೇ ಯಾವುದೇ ಬಗೆಯ ಹೊಸ ಪ್ರಗತಿಯುಂಟಾದರೂ ಅದರ ಉಪಯೋಗವನ್ನು ಪಡೆದವರ ಮಂಚೂಣಿಯಲ್ಲಿ ಬ್ರಾಹ್ಮಣರಿರುತ್ತಾರೆ.[/red]

Quote:
೩. ಹಿಂದೆ ಜಾತಿ ಪದ್ಧತಿಯನ್ನು ನಿಯಂತ್ರಿಸುವ ಬಲವಿದ್ದಾಗ ನಾವು ಮಿಕ್ಕವರನ್ನು, ಅವರ ಯೋಚನಾಲಹರಿಯನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದೆವಂತೆ. ಕ್ಷತ್ರಿಯರಂತಲ್ಲದಿದ್ದರೂ, ತಕ್ಕಮಟ್ಟಿಗೆ ಕ್ರೌರ್ಯವನ್ನು ಪ್ರದರ್ಶಿಸುವ, ಇತರರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಯುಕ್ತಿ ನಮಗಿತ್ತಂತೆ.

ಇದಕ್ಕೆ ಉತ್ತರ ಶ್ರೀ ಪಾ.ವೆಂ. ಆಚಾರ್ಯರ ಲೇಖನದಿಂದ ಸಿಕ್ಕೀತು.
Quote:
೭. ನಾವು ಭೌದ್ಧಿಕವಾಗಿ ಇತರರಿಗಿಂತ ಉನ್ನತರು ಎಂಬ ನಂಬಿಕೆ ನಮ್ಮಲ್ಲಿ ಈಗಲೂ ಇದೆ.

ತಮ್ಮ ಲೇಖನವೂ ಅದಕ್ಕೆ ಒಂದು ಉದಾಹರಣೆಯಾಗಿದೆ.
Quote:
ವೇದಮಂತ್ರಗಳೂ ಕೂಡ, ಒಂದೊಂದು ಒಂದೊಂದು ಬಗೆಯಿದ್ದು ಯಾವ ನಿಲುವನ್ನು ಬೇಕಾದರೂ ಸಮರ್ಥಿಸಿಕೊಳ್ಳುವಂತೆ ರಚಿತವಾಗಿದೆ.

ಇದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ.
Quote:
ಇದು ನನ್ನ ಜಾತಿ. ಮುಖ್ಯವಾದದ್ದೇನಾದರೂ ಬಿಟ್ಟಿದ್ದರೆ ಓದುಗರು ಸೇರಿಸಲಿ..

ಇದು ನಿಮ್ಮ ಜಾತಿಯ ಬಗ್ಗೆ ಇತರರು ಆಸಕ್ತಿ ವಹಿಸಬೇಕೆಂಬುದಕ್ಕೆ ನಿದರ್ಶನವಾಗಿದೆ.
Quote:
ಇದು ಚರ್ಚಾಪುಟವಲ್ಲ.

ಕ್ಷಮಿಸಿ, ನೀವು ನಿಮ್ಮ ಬ್ಲಾಗಿನಲ್ಲಿ ಬರೆದಿರಿ.
Quote:
C for Dummies, Java for Dummies... ಹೀಗೆ.

ಅಂದರೆ ಮೇಲೆ ತಿಳಿಸಿದ ವಿಚಾರಗಳಂತೆಯೇ 'ಬ್ರಾಹ್ಮಣ ಯಾರು' ಎನ್ನುವ ವಿಚಾರವೂ ಇಂದಿನ ಆಧುನಿಕೋತ್ತರ ಸಮಾಜದಲ್ಲೂ ಆಸಕ್ತಿದಾಯಕವೆಂಬುದು ತಮ್ಮ ಅಭಿಪ್ರಾಯವೋ?
Quote:
http://thatskannada.oneindia.in/column/ravibelagere/110607caste_religion_intellectuals.html
http://thatskannada.oneindia.in/column/ravibelagere/180607caste_religion_intellectuals2.html

ಇದನ್ನು ಗಮನಿಸಲಿಲ್ಲವೇ?
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2007 - 6:42pm — ಶ್ಯಾಮ ಕಶ್ಯಪ

ಉ: Brahmins for Dummies

ಶ್ಯಾಮ ಕಶ್ಯಪ's picture

"ಬ್ರಾಹ್ಮಣರ ಒಗ್ಗಟ್ಟು" ನನಗೆ ಆದರ್ಶ ಹೌದೋ ಅಲ್ವೋ ಅನ್ನೋ ವಿಷಯ ನೀವ್ಯಾಕೆ ಇತ್ತುತ್ತಾ ಇದೀರ ನನಗೆ ಅರ್ಥ ಆಗ್ತಿಲ್ಲ. ನನ್ನ ಆದರ್ಶಕ್ಕೂ ಬ್ರಾಹ್ಮಣರಲ್ಲಿರುವ ಒಗ್ಗಟ್ಟು/ಹೊಡೆದಾಟಕ್ಕೂ ಸಂಬಂಧವೇನು?

ನಾನು ಯಾವ ಪ್ರಶ್ನೆಯನ್ನೂ ಕೇಳಿಲ್ಲ ಸ್ವಾಮಿ. ಪಾವೆಂ ಹೇಳುವುದು ಸರಿಯಿರಬಹುದು, ತಪ್ಪಿರಬಹುದು. ಅವರ ಯೋಚನೆಗಳು ಅದು ಇಲ್ಲಿ ಪ್ರಸ್ತುತವಲ್ಲ.

ಬ್ರಾಹ್ಮಣರ ಔನ್ನತ್ಯಕ್ಕೆ ಹಾಗು ಮೇಲಿರುವ ಹಲವು ವಿಚಾರಗಳಿಗೆ ನನ್ನ ಲೇಖನವೂ, ಇಲ್ಲಿ ಚರ್ಚೆ ಮಾಡುತ್ತಿರುವ ಬಾಹ್ಮಣರೂ ಎಲ್ಲರೂ ಉದಾಹರಣೆಯೇ. ಅದನ್ನ ನಾನು ನಿರಾಕರಿಸುವುದಿಲ್ಲ.

ವೇದ, ಮಂತ್ರಗಳು ವಿಷಯದಲ್ಲಿ, ವಿಷಯಗಳ ಬಗ್ಗೆ ನಿಲುವುಗಳನ್ನು ತೆಗೆದುಕೊಳ್ಳುವುದರಲ್ಲಿ ವೈವಿಧ್ಯವನ್ನು ತೋರುತ್ತವೆ ಎನ್ನುವುದು ನನ್ನ (ಬ್ರಾಹ್ಮಣನ) ವೈಯುಕ್ತಿಕ ಅಭಿಪ್ರಾಯ ಹೌದು. ವೇದಮಂತ್ರಗಳ ಪರಿಚಯವಿಲ್ಲದೇ ಹೇಳಿದ ಮಾತಲ್ಲ ಇದು. ವಾದಿ, ಪ್ರತಿವಾದಿಗಳಿಬ್ಬರೂ ತಮ್ಮ ತಮ್ಮ ನಿಲುವುಗಳನ್ನು ಪುಷ್ಠಿಗೊಳಿಸಲು ವಿವಿಧ ಮಂತ್ರಗಳನ್ನು ಉಚ್ಛರಿಸುವುದು ತಾವು ಕಂಡಿಲ್ಲವೆ?

ಅದಿರಲಿ. ನನ್ನ ವೈಯುಕ್ತಿಕ ಅಭಿಪ್ರಾಯಕ್ಕೆ ತಮ್ಮ ಪ್ರತಿವಾದವೇನು? ವೇದ ಮಂತ್ರಗಳೆಲ್ಲವೂ ಒಂದೇ ಒಂದು ಅರ್ಥಕೊಡುತ್ತವೆ ಅಂತಲೋ?

ಹೇಳಿದ್ದನ್ನೇ ಹೇಳುವುದಕ್ಕೆ ಇಷ್ಟವಿಲ್ಲ. ಆದರೂ ಹೇಳುವೆ. ನನಗೆ ಬೇರೆ ಜಾತಿಗಳ ಬಗ್ಗೆ ಗೊತ್ತಿಲ್ಲ ಎಂಬುದನ್ನು ಮೊದಲೇ ಹೇಳಿರುವೆ.
ನನ್ನ ಜಾತಿಯ ಬಗ್ಗೆ ಹೇಳಿಕೊಳ್ಳುವ ಆಸಕ್ತಿಯಿದೆ ಅಂತ ಮಾತ್ರಕ್ಕೆ ನನ್ನ ಬಗ್ಗೆ ಮಾತ್ರ ಹೇಳುವುದಕ್ಕೆ ಆಸಕ್ತಿ, ಬೇರೆಯವರ ಬಗ್ಗೆ ತಿಳಿದುಕೊಳ್ಳಲು ಇಲ್ಲ ಅಂತ ತಾವು ಹೇಗೆ ನಿರ್ಧರಿಸಿದಿರಿ?

'ಬ್ರಾಹ್ಮಣ ಯಾರು' ಎನ್ನುವ ವಿಚಾರವೂ ಇಂದಿನ ಆಧುನಿಕೋತ್ತರ ಸಮಾಜದಲ್ಲೂ ಆಸಕ್ತಿದಾಯಕವೆಂಬುದು ತಮ್ಮ ಅಭಿಪ್ರಾಯವೋ?
-- ಹೌದು. ಈ ಆಸಕ್ತಿ ಬ್ರಾಹ್ಮಣರಲ್ಲೇ ಇದೆ ಎಂಬುದನ್ನು ಸಂಪದ ಓದುವುದರಿಂದಲೇ ತಮಗೇ ಗೊತ್ತಾಗುತ್ತಿಲ್ಲವೇ?

ತಾವು ಕೊಂಡಿ ಕೊಡುವುದು ಸರಿಯೇ. ಕೊಟ್ಟ ಮಾತ್ರಕ್ಕೆ ಅದು ನನಗೆ ಪ್ರಸ್ತುತ ಎಂದೇ ಅನ್ನಿಸಬೇಕು ಅಂತೇನು ಇಲ್ಲವಲ್ಲ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2007 - 5:42pm — kpbolumbu

ಉ: Brahmins for Dummies

kpbolumbu's picture

"ನಾನು ಯಾವ ಪ್ರಶ್ನೆಯನ್ನೂ ಕೇಳಿಲ್ಲ ಸ್ವಾಮಿ." 'ಯಾವುದರ ಪ್ರಯೋಜನ' ಎಂಬ ಪ್ರಶ್ನೆಯನ್ನು ತಾವು ಕೇಳಿದ್ದೀರಿ.
ತಮಗೆ ಆ ಲಿಂಕ್ ಮುಖ್ಯವಾಗಿರಲಿಲ್ಲ, ಆದರೆ ಅಲ್ಲಿ ಇರುವ ವಿಚಾರಗಳನ್ನು ನೋಡಿದರೆ.....ತಮ್ಮ ಕಾಣ್ಕೆಗೆ (ಒಬ್ಸರ್ವೇಷನ್) ಸಂಬಂಧಪಟ್ಟವುಗಳೇ ಆಗಿವೆ.
೧."ಇವತ್ತಿನ ಸಮಾಜದ ಎಲ್ಲ ದುಷ್ಟತನ, ದೌರ್ಜನ್ಯ, ಶ್ರೇಣೀಕೃತ ವ್ಯವಸ್ಥೆಗೆ ಬ್ರಾಹ್ಮಣರೇ ಕಾರಣ! ಶತಶತಮಾನಗಳಿಂದ ಬ್ರಾಹ್ಮಣರು ನಮ್ಮನ್ನು ಶೋಷಿಸುತ್ತ ಬಂದಿದ್ದಾರೆ.. ’ ಅಂದರು. ಕೇಳಿಸಿಕೊಂಡವರು ಚಪ್ಪಾಳೆ ಹೊಡೆದರು. "
೨."ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಗಳೆರಡೂ ನಮ್ಮ ಕ್ರಾಂತಿಕಾರಿಗಳ ಕಣ್ಣಿಗೆ ಎಲ್ಲ ಶತಮಾನಗಳಲ್ಲೂ ಅಪಾಯಕಾರಿಗಳಾಗಿ, ಶೋಷಣೆ ಮಾಡುವವರಾಗಿ, ಯಾವತ್ತೂ ಕೈಗೆ ಸಿಕ್ಕರೂ ಒದೆಯ ಬೇಕಾದವರಾಗಿ ಕಾಣಿಸಿದರು."-ರವಿ ಬೆಳಗೆರೆ

"ಬ್ರಾಹ್ಮಣರು ಜಾತಿ ಪದ್ಧತಿಯನ್ನು ನಿರ್ಮಿಸಿದರೆಂದು ಇತಿಹಾಸ ಸಮಾಜಶಾಸ್ತ್ರಗಳಲ್ಲಿ ನಿರಕ್ಷರಿಗಳಾದವರು ಮಾತ್ರ ನಂಬಬಹುದು. ಜಾತಿಗಳು ನಿರ್ಮಾಣವಾದದ್ದು ಐತಿಹಾಸಿಕ ಒತ್ತಡಗಳಿಂದ; ಭಾರತದ ವಿಶಿಷ್ಟ ಭೌಗೋಲಿಕ ಪರಿಸರದಿಂದಾಗಿ ಅದು ಗಟ್ಟಿಯಾಯಿತು. ಯೂರೋಪ್ ಅಥವಾ ಪಶ್ಚಿಮ ಏಶಿಯಾದಲ್ಲಿ ಎದ್ದಂಥ ಜನಾಂಗಗಳ ಒತ್ತಡ, ದಂಡಯಾತ್ರೆಗಳು ಇಲ್ಲಿ ಎದ್ದು ನಿಂತ ನೀರಿನ ಕಟ್ಟೆಯೊಡೆದು ಬಿಡಲಿಲ್ಲವಾಗಿ ಅದು ಸ್ಥಿರವಾಯಿತು. ರೋಮನ್ ಇತಿಹಾಸದಲ್ಲಿ ಆಢ್ಯರಿಗೂ ಪ್ಲೆಬ್(ಸಾಮಾನ್ಯ) ರಿಗೂ ಗಂಭೀರ ಕಲಹಗಳಾದಂತೆ ಇಲ್ಲಿ ಮೇಲ್ಜಾತಿಗಳವರಿಗೂ ಶೂದ್ರರಿಗೂ ಹೋರಾಟವಾಗಲಿಲ್ಲ. ಇದಕ್ಕೆಲ್ಲಾ ಬ್ರಾಹ್ಮಣರು ಕಾರಣವೆಂದು ಹೇಳುವುದಾದರೆ ಬ್ರಾಹ್ಮಣರು ಅತಿಮಾನುಷ ಬುದ್ಧಿಬಲದಿಂದ ಸಾವಿರಾರು ವರ್ಷಗಳಿಗಾಗಿ ಯಶಸ್ವಿ ಯೋಜನೆ ಹಾಕಿದರೆಂದು ಒಪ್ಪಬೇಕಾಗುತ್ತದೆ. ಅಂಥ ಅತಿಮಾನುಷ ಬುದ್ಧಿಶಕ್ತಿ ಬ್ರಾಹ್ಮಣರಿಗಿತ್ತೆಂದು ಯಾರೂ ನಂಬುವಂತಿಲ್ಲ. ನಿಜವಾಗಿ ನಡೆದದ್ದೆಂದರೆ ಶತಮಾನಗಳ ಕಾಲ ನಡೆದು ಬಂದ ಸಂಪ್ರದಾಯಕ್ಕೆ ಬ್ರಾಹ್ಮಣ ಶಾಸ್ತ್ರಕಾರರು ಶಾಸ್ತ್ರಮುದ್ರೆ ಒತ್ತಿದರಷ್ಟೇ. ಆಗಿನ ಎಲ್ಲಾ ಅರ್ಥವಂತ ವರ್ಗಗಳಿಗೂ ಅದು ಅನುಕೂಲವಿದ್ದುದರಿಂದ ಈ ಶಾಸ್ತ್ರಮುದ್ರೆ ಒತ್ತಲು ಸಾಧ್ಯವಾಯಿತೆಂದು ತೋರುತ್ತದೆ. ಪೌರೋಹಿತ್ಯದಿಂದ ಜೀವಿಸುವ ವರ್ಗಕ್ಕೆ ಯಜಮಾನ ಜಾತಿಗಳ ಬೆಂಬಲವಿಲ್ಲದಿದ್ದರೆ ಇದು ಆಗುತ್ತಲೂ ಇರಲಿಲ್ಲ."-ಪಾವೆಂ.

"ಅವರ ಯೋಚನೆಗಳು ಇಲ್ಲಿ ಪ್ರಸ್ತುತವಲ್ಲ." ನೀವು ಬರೆದಿರುವ ವಿಚಾರಗಳ ಹಿನ್ನೆಲೆಯಲ್ಲಿ ಕಂಡಿತ ಅವು ಪ್ರಸ್ತುತವೇ ಆಗಿವೆ. ('ಖಂಡಿತ'ವಲ್ಲ, ಅದರ ಅರ್ಥ ತುಂಡರಿಸಲ್ಪಟ್ಟ ಎಂದು. 'ಖಂಡಿತ'ವಲ್ಲವೇ ಎಂಬ ಸಂದೇಹ ಕೆಲವರಿಗಾದರೂ ಬರಬಹುದು) ಯಾಕೆಂದರೆ "ಈ ದೇಶದಲ್ಲಿ ಜಾತಿ ಪದ್ಧತಿಯನ್ನು ಎತ್ತಿ ಹಿಡಿದವರು ಬ್ರಾಹ್ಮಣರು ಮಾತ್ರ ಎಂಬ ರೀತಿಯಲ್ಲಿ ನಮ್ಮ ಇತಿಹಾಸವನ್ನು ಬರೆಯಲಾಗುತ್ತಿದೆ..."ಎನ್ನುತ್ತಾರೆ. ತಮ್ಮ ಲೇಖನದಲ್ಲೂ "ಹಿಂದೆ ಜಾತಿ ಪದ್ಧತಿಯನ್ನು ನಿಯಂತ್ರಿಸುವ ಬಲವಿದ್ದಾಗ ನಾವು ಮಿಕ್ಕವರನ್ನು, ಅವರ ಯೋಚನಾಲಹರಿಯನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದೆವಂತೆ. ಕ್ಷತ್ರಿಯರಂತಲ್ಲದಿದ್ದರೂ, ತಕ್ಕಮಟ್ಟಿಗೆ ಕ್ರೌರ್ಯವನ್ನು ಪ್ರದರ್ಶಿಸುವ, ಇತರರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಯುಕ್ತಿ ನಮಗಿತ್ತಂತೆ...." ಎಂದಿದ್ದೀರಿ.factಗಳ ಬಗ್ಗೆ ಬರೆಯುವಾಗ ".... for Dummies" ಸೀರೀಸಿನ ಪುಸ್ತಕಗಳಲ್ಲಿ ನಂಬಿಕೆಯ ಆಧಾರದಲ್ಲಿ ಬರೆಯುತ್ತಾರೋ?

ಕೆಲವು ವರ್ಷಗಳ ಹಿಂದೆ 'ನೆಗ್ಗಿಲು ಎಂದರೇನು' ಎಂಬ ವಿಚಾರವಾಗಿ ವಿವಾದವೆದ್ದಿತ್ತಂತೆ. ಆಗ ಯಾರೋ 'ನೆಗ್ಗಿಲು ಎಂದರೆ ಬ್ರಾಹ್ಮಣರು' ಎಂದಿದ್ದರಂತೆ. ಅಲ್ಲ, ಅದೊಂದು ಜಾತಿಯ ಮುಳ್ಳು ಎಂಬ ಪಂಡಿತರ ಉತ್ತರಕ್ಕೆ 'ಅದನ್ನೇ ನಾನೂ ಹೇಳಿದ್ದು,ನೆಗ್ಗಿಲು ಮುಳ್ಳೆಂದರೆ ಬ್ರಾಹ್ಮಣರು' ಎಂದು ವಾದಿಸುತ್ತಿದ್ದರಂತೆ. 'ನೆಗ್ಗಿಲು ಎಂದರೇನು' ಎಂಬ ಪ್ರಶ್ನೆಯನ್ನು ಎತ್ತಿದವರು ಯಾರು ಮತ್ತು ಇದಕ್ಕೆ ಉತ್ತರಿಸಿದವರು ಯಾರು ಎಂಬ ಬಗ್ಗೆ ನನಗೆ ಮಾಹಿತಿ ಸಿಗಲಿಲ್ಲ. ಅವರೂ ತಮ್ಮ ವಾದವನ್ನು ಬ್ರಾಹ್ಮಣ್ಯದ ಬಗ್ಗೆ ವಿಶಿಷ್ಟ ವ್ಯಾಖ್ಯಾನವೆಂದು ಕರೆದಿರಬಹುದಾದ ಸಾಧ್ಯತೆಗಳಿವೆ.

ನಿಮಗೆ "ಬ್ರಾಹ್ಮಣರ ಒಗ್ಗಟ್ಟು" ಒಂದು ಆದರ್ಶವೋ ಅಲ್ಲವೋ ಎಂಬ ಬಗ್ಗೆ ಮತ್ತು ಅದರ ಬಗ್ಗೆ ನನ್ನ ಉತ್ಸಾಹದ ಬಗ್ಗೆ....
ನೀವು 'ನಾನೊಬ್ಬ ಬ್ರಾಹ್ಮಣ' ಎನ್ನುತ್ತೀರಿ, ಹಾಗಿದ್ದ ಮೇಲೆ ಬ್ರಾಹ್ಮಣರಲ್ಲಿ ಒಗ್ಗಟ್ಟಿನ ಕೊರತೆಯನ್ನು ನೀಗಿಸುವ/ಸುಧಾರಿಸುವ ಬಗ್ಗೆ ನಿಮ್ಮ ಸಲಹೆಗಳನ್ನೂ ಹೇಳಬೇಕಾಗುತ್ತದೆ.ಸಮಸ್ಯೆಯನ್ನು ಗುರುತಿಸುವವರಿಗೆ ಅದಕ್ಕೆ ಪರಿಹಾರ ಸೂಚಿಸುವ ಹೊಣೆಗಾರಿಕೆಯಿಲ್ಲವೇ...

"ಸಮಾಜದಲ್ಲಿ ಯಾವುದೇ ಚರ್ಚೆ, ವಾದವಿವಾದ ನಡೆದರೂ, ಗೆಲ್ಲುವುದು/ಸೋಲುವುದು ಬ್ರಾಹ್ಮಣನೇ. ಖ್ಯಾತನೋ ಕುಖ್ಯಾತನೋ.. ಅವ ಬ್ರಾಹ್ಮಣನಾಗಿದ್ದರೆ ನಮಗೆ ನೆಮ್ಮದಿ."
ಬಂಜಗೆರೆ ವಿವಾದದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದುದು ಬಸವಣ್ಣ ಬ್ರಾಹ್ಮಣನೋ ಅಲ್ಲವೋ ಎಂಬುದಲ್ಲ, ಅವರು ವಾಮಾಚಾರದ ಮೂಲಕ ಹುಟ್ಟಿದರು ಎಂದಿರುವುದು.

ಇಲ್ಲಿ ನಾನು ಹೇಳಬೇಕಾಗಿದ್ದುದು:
೧.ನನ್ನ ಅಭಿಪ್ರಾಯದಲ್ಲಿ ವೇದ ಮಂತ್ರಗಳು ನಿರ್ದಿಷ್ಟ ಅರ್ಥದಲ್ಲೇ ರಚನೆಗೊಂಡಿವೆ, ಆದರೆ ಅವು(ಪರಸ್ಪರ ವಿರುದ್ಧ ಸಂದರ್ಭಗಳಲ್ಲಿ ಬಳಸಿಕೊಳ್ಳುವಿಕೆ) ವ್ಯಕ್ತಿಗಳ ವೈರುಧ್ಯವನ್ನು ಸೂಚಿಸಬೇಕೇ ಹೊರತು ವೇದಗಳ ವೈರುಧ್ಯವನ್ನಲ್ಲ.
ಉದಾ: "ಆನೋ ಭದ್ರಾ: ಕ್ರತವೋ ಯಂತು ವಿಶ್ವತ:".
ಈ ಋಗ್ವೇದ ಮಂತ್ರಕ್ಕೆ ನಾನು ತಿಳಿದಂತೆ ಒಂದೇ ಅರ್ಥವಿದೆ, ಅದು " ಒಳ್ಳೆಯ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮ್ಮತ್ತ ಬರಲಿ" ಎಂಬುದಾಗಿದೆ.'ಒಳ್ಳೆಯ ವಿಚಾರ' ಯಾವುದು ಎಂದು ಕೇಳುವುದಾದರೆ ಅದು ವ್ಯಕ್ತಿಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತದೆ.
ಇರಲಿ, ತಮಗೆ ತಿಳಿದಿರುವ ಶ್ಲೇಷಾರ್ಥವನ್ನು ಸೂಚಿಸುವ ಯಾವುದಾದರೂ ಒಂದು ವೇದಮಂತ್ರದ ಉದಾಹರಣೆ ಕೊಡಿ. ಇಷ್ಟಕ್ಕೂ ವೇದಗಳು ಬ್ರಾಹ್ಮಣರ ಆಸ್ತಿಯಲ್ಲ, ಎಲ್ಲ ಭಾರತೀಯರಿಗೂ ಸೇರಿದ್ದು. ತಮಗೂ ತಿಳಿದಿರುವಂತೆ ಇಂದಿನ ದಿನಗಳಲ್ಲಿ ವೇದಾಧ್ಯಯನವನ್ನು ಮಾಡಲು ಬ್ರಾಹ್ಮಣನಾಗಿ ಹುಟ್ಟಬೇಕಾಗಿಲ್ಲ.
೨.ಹೀಗೆ ಬ್ರಾಹ್ಮಣರನ್ನು generalize ಮಾಡುವ ಧಾಟಿಯ ಲೇಖನವನ್ನು ಬರೆಯುವ ಹಲವರು ಹಿಂದೆ ಆಗಿಹೋದ ಅನಾಚಾರಗಳ ಯಾರಾದರೂ ಕುರಿತಾಗಿ ಬರೆದರೆ ಅವರದ್ದು 'ದ್ವೇಷ ಪೂರಿತ ಮನಸ್ಸು' ಎನ್ನುತ್ತಾರೆ.
೩."ಈ ವ್ಯವಸ್ಥೆಯಿಂದ ಬ್ರಾಹ್ಮಣರು ಇತರರನ್ನು ಶೋಷಿಸಿ ತಾವು ಲಾಭ ಮಾಡಿಕೊಂಡರೆಂಬುದೂ ಸರಿಯಲ್ಲ." -ಪಾವೆಂ.
ದಕ್ಷಿಣಕನ್ನಡದಲ್ಲಿ ಹವ್ಯಕರು ಬಂಟ ಭೂಮಾಲಿಕರ ಒಕ್ಕಲುಗಳಾಗಿಯೂ ಜೀವಿಸುತ್ತಿದ್ದ ಉದಾಹರಣೆಗಳಿವೆ.
೪.“ಬ್ರಾಹ್ಮಣರಿಗೆ ಆಸ್ತಿ ಕಡಿಮೆ ಇತ್ತು ಮತ್ತು ಸುಧಾರಣೆಗಳ ನಂತರ ಇನ್ನೂ ಕಡಿಮೆಯಾಯಿತು.” ಎಂಬ ಅಂಶ ದಶಕಗಳ ಹಿಂದೆಯೇ ಬೆಳಕಿಗೆ ಬಂದಿದೆ. ಇದು ನನ್ನ ಅಭಿಪ್ರಾಯವಲ್ಲ, ಯೋಚಿಸಿ ನೋಡಿದರೆ ಯಾರಿಗೂ ಹೊಳೆಯುವುದು.ಶ್ರೀ ಪಾ.ವೆಂ. ಆಚಾರ್ಯರು ತಮ್ಮ ಲೇಖನದಲ್ಲೂ ಬರೆದಿದ್ದಾರೆ.
೫.ನೀವು ನೀಡಿರುವ ವ್ಯಾಖ್ಯಾನಗಳು ನಿರ್ದಿಷ್ಟವಾದೊಂದು ವಿಚಾರಧಾರೆಯನ್ನು ತಮ್ಮದಾಗಿಸಿಕೊಂಡ ಲೇಖಕರ ಸಾಮಾನ್ಯ ಶೈಲಿಯಾಗಿದೆ.
೬,"ಬ್ರಾಹ್ಮಣರ ಔನ್ನತ್ಯಕ್ಕೆ ಹಾಗು ಮೇಲಿರುವ ಹಲವು ವಿಚಾರಗಳಿಗೆ ................................. ಎಲ್ಲರೂ ಉದಾಹರಣೆಯೇ. ಅದನ್ನು ನಾನು ನಿರಾಕರಿಸುವುದಿಲ್ಲ.." ಇದನ್ನೇ __________ಎಂದು ಕರೆದೆನು. ಆ ಪದದ ಬಳಕೆ ನಿಮಗೂ ಹಿಡಿಸುವುದಿಲ್ಲ.
__________________________________________________________

ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2007 - 7:00pm — Sunil Jayaprakash

ಉ: Brahmins for Dummies

Sunil Jayaprakash's picture

೧.ನನ್ನ ಅಭಿಪ್ರಾಯದಲ್ಲಿ ವೇದ ಮಂತ್ರಗಳು ನಿರ್ದಿಷ್ಟ ಅರ್ಥದಲ್ಲೇ ರಚನೆಗೊಂಡಿವೆ, ಆದರೆ ಅವು(ಪರಸ್ಪರ ವಿರುದ್ಧ ಸಂದರ್ಭಗಳಲ್ಲಿ ಬಳಸಿಕೊಳ್ಳುವಿಕೆ) ವ್ಯಕ್ತಿಗಳ ವೈರುಧ್ಯವನ್ನು ಸೂಚಿಸಬೇಕೇ ಹೊರತು ವೇದಗಳ ವೈರುಧ್ಯವನ್ನಲ್ಲ.
ಉದಾ: "ಆನೋ ಭದ್ರಾ: ಕ್ರತವೋ ಯಂತು ವಿಶ್ವತ:".

ಕೃಷ್ಣ ಪ್ರಕಾಶ ಬೊಳಂಬು, ಇಲ್ಲಿ ಚರ್ಚೆಯಾದ ಎಷ್ಟೋ ವಿಚಾರಗಳ ಬಗ್ಗೆ ಹೇಳಲು ಹೊಸತು ಇಲ್ಲವಾದರೂ, "ವೇದಗಳ ವೈರುಧ್ಯದ" ಬಗ್ಗೆ ಸ್ವಲ್ಪ ಹೇಳಬೇಕೆನಿಸಿತು.

೧. ವೇದಗಳ existentialityಯನ್ನು (ಪ್ರಸ್ತುತತೆ??) ವೇದಗಳೇ ಪ್ರಶ್ನಿಸಿವೆ ಎಂಬುದಾಗಿ ಶತಾವಧಾನಿ ಡಾ.ಆರ್.ಗಣೇಶ್ ಅವರು ಒಮ್ಮೆ ಹೇಳಿದ್ದರು. ಈ ರೀತಿ ವೇದಗಳನ್ನೇ ವೇದಗಳು ಪ್ರಶ್ನಿಸಿರುವಂತಹ ಶ್ಲೋಕಗಳು ಎಲ್ಲಿ ಬರುತ್ತವೆ ಎಂದು ನನಗೆ ತಿಳಿದಿಲ್ಲವಾದರೂ ಶತಾವಧಾನಿ ಡಾ||ಆರ್.ಗಣೇಶರ ಪಾಂಡಿತ್ಯದ ಮೇಲಿನ ಗೌರವದಿಂದ, ಆ ಮಾತುಗಳನ್ನು ಅನುಮಾನದಿಂದ ನೋಡಬಹುದಾದರೂ, ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಅಲ್ಲವೇ. ಆದರೆ ಬೇರೆ ಬೇರೆ ಶ್ಲೋಕಗಳಲ್ಲಿ ವೇದಗಳಲ್ಲಿಯೇ ವೈರುಧ್ಯ ಇರುವುದನ್ನು ಸ್ಪಷ್ಟವಾಗಿ ಗುರುತಿಸಿದ್ದೇನೆ. ಉದಾ:- ಪಂಚಕೋಶವಿದ್ಯಾ ಮತ್ತು ಈಶಾವಾಸ್ಯೋಪನಿಷತ್.
೨. ವೇದಗಳ ವೈರುಧ್ಯಕ್ಕೆ ಸ್ಪಟಿಕದಂತಹ ಉದಾಹರಣೆಯೆಂದರೆ ಬ್ರಾಹ್ಮಣ ಶಾಖೆಯ ಮುಮ್ಮತಗಳು. ಸ್ಮಾರ್ತ, ಮಾಧ್ವ ಮತ್ತು ಶ್ರೀವೈಷ್ಣವ ಮತಗಳ ಮೂಲ ಸಿದ್ಧಾಂತ ಬೇರೆ ಬೇರೆ. ಆದರೆ ವಿಚಿತ್ರವೆಂದರೆ ಈ ಮೂರೂ ಶಾಖೆಗಳಿಗೂ ವೇದಗಳೇ ಆಧಾರ.
೩. ನಾನು ಪ್ರಶ್ನೋಪನಿಷತ್ (ಶ್ಲೋಕಗಳು ಮಾತ್ರ, ಅದರ ಇಂಟರ್ಪ್ರಿಟೇಶನ್ ಅಲ್ಲ) ಓದಿದಾಗ ಅದೆಷ್ಟು ಆಲೋಚನೆಗಳು ಬಂದಿತ್ತು ಎಂಬುದನ್ನು ಇಲ್ಲಿ ವಿವರಿಸುವುದು ಕಷ್ಟ. ಇಲ್ಲಿ ವಿಷಯಗಳು ನಿರ್ದಿಷ್ಟವಾಗಿ ಹೇಳಲ್ಪಟ್ಟಿದೆಯೋ ಇಲ್ಲವೋ, ಆದರೆ ಬೇರೆ ಬೇರೆ ನಿಲುವನ್ನು ಸಮರ್ಥಿಸುವಂತೆ ಮಾಡಬಹುದು. ಇದನ್ನೇ ಶ್ಯಾಮ ಕಶ್ಯಪ ಮೊದಲಲ್ಲಿ ಹೇಳಿದ್ದು ಅನ್ನಿಸುತ್ತೆ.

ವೇದಮಂತ್ರಗಳೂ ಕೂಡ, ಒಂದೊಂದು ಒಂದೊಂದು ಬಗೆಯಿದ್ದು ಯಾವ ನಿಲುವನ್ನು ಬೇಕಾದರೂ ಸಮರ್ಥಿಸಿಕೊಳ್ಳುವಂತೆ ರಚಿತವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2007 - 8:28pm — mahesha

ಉ: Brahmins for Dummies

mahesha's picture

೨. ವೇದಗಳ ವೈರುಧ್ಯಕ್ಕೆ ಸ್ಪಟಿಕದಂತಹ ಉದಾಹರಣೆಯೆಂದರೆ ಬ್ರಾಹ್ಮಣ ಶಾಖೆಯ ಮುಮ್ಮತಗಳು. ಸ್ಮಾರ್ತ, ಮಾಧ್ವ ಮತ್ತು ಶ್ರೀವೈಷ್ಣವ ಮತಗಳ ಮೂಲ ಸಿದ್ಧಾಂತ ಬೇರೆ ಬೇರೆ. ಆದರೆ ವಿಚಿತ್ರವೆಂದರೆ ಈ ಮೂರೂ ಶಾಖೆಗಳಿಗೂ ವೇದಗಳೇ ಆಧಾರ.

ಇದನ್ನು ಬಿಡಿಸಿ, ಬೆಂಬಲಿಸಿರಿ! ಇದು ನನಗೆ ಸರಿಯೆಂದು ತೋರಲಿಲ್ಲ!

ಸ್ಮಾರ್ತನು ಮಾಧ್ವನೂ ಆಗಬಹುದು, ಶ್ರೀವೈಷ್ಣವನೂ ಆಗಬಹುದು, ಹಾಗೇ ಶೈವನೂ ಆಗಬಹುದು. ಸ್ಮಾರ್ತನಿಗೆ ಹರಿಹರ ಅಂತ ಅಲ್ಲ ಬೇಕಾಗಿರುವುದು. ಅವನಿಗೆ ಸ್ಮೃತಿ ಬೇಕಾಗಿರುವುದು!!

ಇಲ್ಲಿ ಬ್ರಾಹ್ಮಣ ಶಾಖೆ ಅಂದರೆ? ಬರೀ ಬ್ರಾಹ್ಮಣರು ಶೈವ, ವೈಷ್ಣವ, ಗಾಣಾಪತ್ಯ, ಶಾಕ್ತೀಯ ಅಂತ ಇಲ್ಲ. ಮಿಕ್ಕ ಮೂರು ವರ್ಣಗಳು ಹೀಗೆ ತಮ್ಮ ಇಷ್ಟದೇವದ ಮೇಲೆ ಪಂಗಡವಾಗಿವೆ. ಬ್ರಾಹ್ಮಣರಲ್ಲಿ ಇರುವ ಶಾಖೆಗಳೇ ಬೇರೆ ಬೇರೆ.
ಅವರನ್ನು
೧) ಅವರ ವೇದಗಳು ಎಷ್ಟು ಎಂಬುದರ ಮೇಲೆ ಏಕವೇದಿ, ದ್ವಿವೇದಿ, ತ್ರಿವೇದಿ
೨) ಯಾವ ವೇದ, ಋಗ್ವೇದಿ, ಯಜುರ್ವೇದೀ...
೩) ಅದ್ವೈತಿ( ಇವ ಶೈವನೋ, ವೈಷ್ಣವನೋ ಬೇಕಾಗಿಲ್ಲ ), ದ್ವೈತಿ.
೪) ಇನ್ನೂ ಹಲವು ಗುಣಗಳ ಮೇಲೆ ಪಂಗಡಗಳನ್ನು ಮಾಡಬಹುದು.

ಇನ್ನೂ ಜೈನ ಬ್ರಾಹ್ಮಣರೂ, ಬೌದ್ಧಬ್ರಾಹ್ಮಣರೂ ಇದ್ದಾರೆ!

ವೇದದಲ್ಲಿ ಎಲ್ಲೆಡೆ ಇರೋದು "ಸರ್ವ ಖಲ್ವಿದಂ ಬ್ರಹ್ಮಾ" ( ನಾನು ಕಲಿತಷ್ಟರಲ್ಲಂತೂ ಎಲ್ಲೆಲ್ಲೂ ಇದೆ )! ಆದರೆ ವೇದಗಳೂ ಕುಷಿತವಾಗಿದೆ, ಅಂದರೆ ವೇದವೂ ಹಲವು ಬದಲಾವಣೆ, ಬೆರಕೆಗಳನ್ನು ಕಂಡಿದೆ.
ಗಣೇಶಾರ್ಥವ ಶೀರ್ಷದಲ್ಲೂ "ತ್ವಂ ಬ