ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

October 15, 2007 - 9:28am — ವೈಭವ

ನೆನ್ನೆ ನಾನು ನನ್ನ ನೆತ್ತರು ಬೀರಲು/ದಾನ ಮಾಡಲು ಹೋದಾಗ ಹಲವು ಅರಿಮೆಗಳು ಗೊತ್ತಾದವು.

೧) ನೆತ್ತರು ಕೊಡುವುದರಿಂದ ಯಾವುದೇ ಕೆಡುಕಿಲ್ಲ. ಬದಲಾಗಿ ಹಲವು ಬಳಕೆಗಳಿವೆ.
೨) ನಮಗೆ ಬೇಕಾಗಿರದ ಹೆಚ್ಚಿರುವ ಕಬ್ಬಿಣದ ಅಂಶಗಳು, ಕೊಲೊಸ್ಟರಾಲ್  ನೆತ್ತರು ಕೊಡುವುದರಿಂದ ಕಡಿಮೆಯಾಗುತ್ತದೆ. ಇದರಿಂದ ಕಾಯಕ್ಕಾಗುವ ಸುಸ್ತು ಕಡಿಮೆಯಾಗುತ್ತದೆ.
೨) ಹಲವಾರು ಮಂದಿ ಸರಿಯಾದ ಹೊತ್ತಿಗೆ ನೆತ್ತರು ಸಿಗದೆ ಸಾಯುತ್ತಿದ್ದಾರೆ.
೩) ನೆತ್ತರು ಕೊಡುವುದರಿಂದ ಗುಂಡಿಗೆಹೊಡೆತ/ಹೃದಯಾಘಾತದಿಂದಾಗುವ ಸಾವನ್ನು ೮೦% ರಶ್ಟು ತಪ್ಪಿಸಬಹುದು.

ನೆನ್ನೆ ನಾನು ನೆತ್ತರು ಕೊಟ್ಟು ಅರೆ ಗಂಟೆಯೊಳಗೆ ಎಂದಿನಂತೆ ಓಡಾಡುತ್ತಿದ್ದೆ. ಯಾವ ತೊಂದರೆಯೂ ಆಗಲಿಲ್ಲ.

ಬನ್ನಿ, ನೆತ್ತರು ಕೊಟ್ಟು ಉಸಿರು/ಜೀವಗಳನ್ನು ಉಳಿಸೋಣ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಇದಕ್ಕಿಂತ ಒಳ್ಳೆಯ ಕೆಲಸ ನಾವು ಮಾಡಕ್ಕಾಗುತ್ತದೆಯೇ?

 

 

  • ನೆತ್ತರು ಬೀರ್ ರಕ್ತ ದಾನ
~.~
  • ವೈಭವ ರವರ ಬ್ಲಾಗ್
  • Login or register to post comments
  • 437 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 15, 2007 - 11:39am — mahesha

ಉ: ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

mahesha's picture

ಒಳ್ಳೇ ಕೆಲಸಗೈದಿರಿ... ನಿಮಗೆ ಒಳ್ಳೇದಾಗಲಿ.

ಆದ್ರೆ ನೆತ್ತರುಬೀರುವಾಗ ಕೆಲವು ಸಂಗತಿಗಳ ಗಮನವಿಡಿರಿ..

೧) ಸೂಜಿಗಳು
೨) ಎರಡು ನೆತ್ತರುಬೀರಿಕೆಗಳ ನಡುವೆ ಕಡಮೆ ಅಂದ್ರೂ ೬ ತಿಂಗಳೂ ಸಂದಿರಲಿ.
೩) ನೆತ್ತರುಬೀರಿ ಗಡಿಬಿಡಿ ಮಾಡಿಕೊಂಡು ಓಡಬೇಡಿರಿ, ತುಸು ದಣಿವಾರಿಸಿಕೊಂಡು ಮನೆಗೆ ಹೋಗಿ.
೪) ನೆತ್ತರುಬೀರಿದ ಮರುಗಳಿಗೆ ಮೊದಲು ನೀವು ಹದುಳವೇ ಎಂದು ನೋಡಿಕೊಂಡೇ ಮದ್ದುಮನೆ(ಆಸ್ಪತ್ರೆ)ಯಿಂದ ಹೊರಗೆ ಬನ್ನಿ..

ನಾ ಹಾಸ್ಟೆಲಲ್ಲಿದ್ದಾಗ, ನನ್ನ ಗೆಳೆಯನೊಬ್ಬ ನೆತ್ತರುಬೀರಿ, ಸೈಕಲ್ ಮೇಲೇ ಓಡಿಬಂದು ಕೋಣೆಯಲ್ಲಿ ನಿಲ್ಲಲಾರದೇ ಬಿದ್ದನು. ನಾವು ಅವನ್ನು ಕರೆದುಕೊಂಡು ಮದ್ದುಮನೆಗೆ ಕರೆದೊಯ್ದೆವು. ಅದಕ್ಕೆ ಮುದ್ದುಗಾರರು ಇವನು ದಣಿವಾರಿಸಿಕೊಳ್ಳದೇ ಓಡಿಬಂದುದು, ಈತ ಉಸಿರಿಗೆ ಸಿಕ್ಕಾಯ್ತು ಎಂದ್ರು.

ನೆತ್ತರುಬೀರಿ, ಉಸಿರುಳಿಸಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2007 - 5:59pm — girish.rajanal

ಉ: ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

girish.rajanal's picture

ನಮಸ್ಕಾರ ,
ಒಳ್ಳೆ ಕೆಲಸ ಮಾಡಿದಿರಿ.
ಆದರೆ ನೀವು ಬಳಸಿರೋ ಪದ ನನ್ನ ಗಮನ ಸೆಳೆಯಿತು..
ಒಂದು ಕಡೆ ನೀವು ನೆನ್ನೆ ಅಂತ ಬರಿದಿದ್ದೀರಿ..
ಅದು ನಿನ್ನೆ ಆಗಬೇಕಾಗಿತ್ತು..ಅಂತ ಹೇಳೋದಕ್ಕೆ ಮನಸ್ಸಾಯಿತು..ಹೇಳಿದೆ..
ಈ ದಕ್ಷಿಣ ಕರ್ನಾಟಕದ ಕಡೆ ಬಂದರೆ ಹಿಂಗ್ಯಾಕ ಕರೀತಾರೆ ನನಗೆ ಗೊತ್ತಾಗುತ್ತಿಲ್ಲ.
ತಪ್ಪಿದ್ದಲ್ಲಿ ಕ್ಷಮೆಯಿರಲಿ..
ಇತಿ,
ಗಿರೀಶ ರಾಜನಾಳ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2007 - 7:12pm — mahesha

ಉ: ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

mahesha's picture

http://dsal.uchicago.edu/cgi-bin/philologic/getobject.pl?c.1:1:1174.burr...

ಅದಕ್ಕೆ Smiling

ನೆರ್‍+ನಾಳ್ = ನೆರ್ನಾಳ್ = ನೆನ್ನಾಳ್ => ನೆನ್ನೆ ಇರಬೇಕು.

ತಮಿಳಲ್ಲಿ ನೆರುನಾಳ್, ನೆನ್ನಾಳ್, ನಾವು ತಮಿಳನಾಡಿಗೆ ಹತ್ತಿರ ಅಲ್ವಾ ಅದಕ್ಕೆ ಇರಬೋದು. Smiling

ಆದ್ರೆ..

ಕಿಡು = ಕೆಡು
ಮುನ್ = ಮೊನ್
ಮುದಲ್ = ಮೊದಲು

ಇದು ಕನ್ನಡದಲ್ಲಿ common! ಅದಕ್ಕೆ ನಿನ್ನೆ, ನೆನ್ನೆ ಎರಡೂ/ಇರಡೂ/ಇರಂಡೂ ಸರಿ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2007 - 7:41pm — ವೈಭವ

ಉ: ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ

ವೈಭವ's picture

ಅವುದು. ನಮ್ಮ ಕಡೆ 'ನೆನ್ನೆ' ಅಂತಾನೆ ಉಲಿಯೋದು ಹೆಚ್ಚು. 'ನಿನ್ನೆ' ನೂ ಸರಿ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಿಳಿವು ಮಾರ್ಪು-ಅರ್ಥಾಂತರ!
  • ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.
  • ಮನಸೇ
  • ಕನ್ನಡದ ನುಡಿದಾಟಿ ಎಂತದು?
  • ಮೂಗೇಟು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 379 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator