ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಮುಡುಕುತೊರೆ - ಒಂದು ಬರಹ

July 6, 2007 - 9:47am — ವೈಭವ

    ಮುಡುಕುತೊರೆ - ಈ ಇಕ್ಕೆ/ಸ್ತಳ ನಂಗೆ ಬೊ ಇಶ್ಟ. ಮೈಸೂರಿನ ತಿರುಮಕೂಡಲು ನರಸೀಪುರ ತಾಲ್ಲೂಕಿಗೆ ಸೇರಿದೆ. ಇಂದಿಗೂ ಹೆಸರಾಗಿರುವ ತಲಕಾಡಿಗೆ ಇದು ತುಂಬಾ ಹತ್ತಿರ. ಇಲ್ಲಿ ಕಾವೇರಿ ಚೂಪಾಗಿ ತಿರುವಿರುವುದು ನೋಡಲು ಬಲು ಚೆನ್ನ. ಇದರ ಹೆಸರೇ ಹೇಳುವಂತೆ  ಮುಡುಕು+ತೊರೆ = ತಿರುವು+ತೊರೆ = ತಿರುಗಿರುವ ನದಿ ಎಂದು ತಿಳಿಯಬಹುದು. ನಮ್ಮ ಹಿರಿಯರನ್ನು ನೋಡಿ ಏನ್ ಚೆಂದ ಹೆಸರು ಇಟ್ಟಿದ್ದಾರೆ. ಇಲ್ಲಿ ಮುಡುಕುತೊರೆ ಜಾತ್ರೆಯಾದಾಗ ದನಗಳ ಜಾತ್ರೆ ಕೂಡ ಮಾಡುತ್ತಾರೆ. ಇಂದಿಗೂ ನಮ್ಮ ಕಡೆ ಮುಡುಕುತೊರೆ ಜಾತ್ರೆ ಎತ್ತುಗಳು ಅಂದ್ರೆ ಬಹಳ ಬೇಡಿಕೆ ( ಏನ್ ಒಳ್ಳೆ ಮುಡುಕುತೊರೆ ಜಾತ್ರೆ ಎತ್ತುಗಳ್ ತರ ಕೊಬ್ಬಿದಿಯಾ ಅಂತ ಗೇಲಿ ಮಾಡುವುದುಂಟು Smiling ). . ಇಲ್ಲಿ 'ಮಲ್ಲಿಕಾರ್ಜುನನ' ಗುಡಿಯಿದೆ.

  • ಮೈಸೂರು ತಿರುಮಕೂಡಲು
~.~
  • ವೈಭವ ರವರ ಬ್ಲಾಗ್
  • Login or register to post comments
  • 477 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 6, 2007 - 11:44am — mahesha

ಉ: ಮುಡುಕುತೊರೆ - ಒಂದು ಬರಹ

mahesha's picture

ವಯ್ಬವ..

ಅದರ ಹೆಸರು ಮೂಡಕ್-ತೊರೆ ಅಂತ ಕೇಳಿದ್ದೀನಿ.

ಅಲ್ಲಿ ಕಾವೇರಿ ಹೊಳೆ ತೆಂಕಣದಿಂದ- ಮೂಡಣಕ್ಕೆ ಹರಿವನ್ನು ತಿರುಗಿಸುವುದು ಅಲ್ವಾ? ತಲಕಾಡ ತಾವ ಐತೆ.

"ತಿರುಮ ಕುಂಡ್ಲು" ಅಂತ ಕೇಳಿದ್ದೆ. "ತಿರುಮ ಕೂಡಲು" ಕೂಡ ಸರಿಯಾಗಿ ಹೊಂದುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 11:02pm — hamsanandi

ಉ: ಮುಡುಕುತೊರೆ - ಒಂದು ಬರಹ

hamsanandi's picture

ಕೂಡಲ್ -> ಎರಡು ನದಿಗಳು ಕೂಡುವ ಸ್ಥಳ
ಮುಕ್ಕೂಡಲ್ -> ಮೂರು ನದಿಗಳು ಸೇರುವೆಡೆ ;

ತಿರು+ ಮುಕ್ಕೂಡಲ್ -> ತಿರುಮುಕ್ಕೂಡಲ್ ( ಪವಿತ್ರವಾದ, ಪಾವನವಾದ ಮೂರು ನದಿಗಳು ಸಂಗಮವಾಗುವ ಸ್ಥಳ) ;
ಆಡು ಮಾತಿನಲ್ಲಿ ಇದು ತಿರುಮಕೂಡಲಾಗಿದೆ.

ತಿರು ಎಂಬ ಮುಂಪ್ರತ್ಯಯ ಚೋಳರ ಕಾಲದ ಕೊಡುಗೆಯಾಗಿರಬಹುದು.

ಈ ಊರಿನ ಹೆಸರು ನರಸೀಪುರ ಎಂದೂ ಇದೆ - ತಿರುಮಕೂಡಲು ನರಸೀಪುರ, ಟಿ.ನರಸೀಪುರ ಎಂಬುದನ್ನು ನೀವು ಕೇಳಿಯೇ ಇರುತ್ತೀರಿ.

ಮೈಸೂರಿನವರು ನರಸೀಪುರ ಎಂದಾಗ, ಅವರು ಸಾಧಾರಣವಾಗಿ ಮಾತಾಡುತ್ತಿರುವುದು ತಿರುಮಕೂಡಲ ವಿಷಯ. ಹಾಸನದ ಕಡೆಯವರು ನರಸೀಪುರ ಎಂದರೆ, ಅದು ಹೊಳೇನರಸೀಪುರದ ಬಗ್ಗೆ. ಈ ಎರಡೂ ತಾಲ್ಲೂಕು ಕೇಂದ್ರಗಳು ನದೀತಟದಲ್ಲಿವೆ.

ಈಗ ಮಲಪ್ರಭಾ ಕೃಷ್ಣಾ ಸಂಗಮದ ಕೂಡಲ ಸಂಗಮ - ಇಲ್ಲಿ ನೋಡಿ ಮತ್ತೊಂದು ದ್ವಿರುಕ್ತಿ Smiling
ಕೂಡಲ - ಎರಡು ಹೊಳೆ ಸೇರುವೆಡೆ
ಸಂಗಮ - --- ಡಿಟ್ಟೋ ---

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2007 - 3:42am — anivaasi

ಉ: ಮುಡುಕುತೊರೆ - ಒಂದು ಬರಹ

anivaasi's picture

Quote:
ಈಗ ಮಲಪ್ರಭಾ ಕೃಷ್ಣಾ ಸಂಗಮದ ಕೂಡಲ ಸಂಗಮ - ಇಲ್ಲಿ ನೋಡಿ ಮತ್ತೊಂದು ದ್ವಿರುಕ್ತಿ Smiling
ಕೂಡಲ - ಎರಡು ಹೊಳೆ ಸೇರುವೆಡೆ
ಸಂಗಮ - --- ಡಿಟ್ಟೋ ---

ಏ.ಕೆ.ರಾಮಾನುಜಂ ಇದರ ಬಗ್ಗೆ "speaking of shiva" ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ. ಬಸವಣ್ಣನ ಅಂಕಿತದಲ್ಲಿ ಬರುವ ಇದು - ಒಂದು ಕನ್ನಡ, ಮತ್ತೊಂದು ಸಂಸ್ಕೃತ ಪದ. ಕೆಲವು ವಚನಕಾರರು ಇದನ್ನು ಬೇಕೆಂದೇ ಮಾಡಿದ್ದಾರೆ ಎಂದು ಅವರ ನಿಲುವು. ಅಕ್ಕನ "ತೆರಣಿಯ ಹುಳು" ವಚನದಲ್ಲಿ "ಸ್ನೇಹ" ಎಂಬ ಸಂಸ್ಕೃತ ಪದದ ಬಗ್ಗೆಯೂ ಹೇಳಿದ್ದಾರೆ.
ಇಲ್ಲಿನ ಮಾತಿನ ಎಳೆಯ ದಿಕ್ಕು "ತಿರುಗಿ" ಬಿಡುವಂತೆ ನಾನು ಮಾತಾಡಿದ್ದರೆ ಮನ್ನಿಸಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2007 - 3:28pm — ವೈಭವ

ಉ: ಮುಡುಕುತೊರೆ - ಒಂದು ಬರಹ

ವೈಭವ's picture

ಮಾತು 'ಮುಡುಕುತೊರೆ' ಬಿಟ್ಟು 'ತಿರುಮಕೂಡಲ' ಕಡೆಗೆ ಮುಡುಕಿರುವುದು( ತಿರುಗಿರುವುದು). ಆದರೂ ತಿರುಮಕೂಡಲ ಬಗ್ಗೆ ತಿಳಿಸದಕ್ಕೆ ನನ್ನಿ.

ವಸಿ ಮುಡುಕುತೊರೆ ಬಗ್ಗೂ ಮಾತಾಗಲಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2007 - 7:46am — hamsanandi

ಉ: ಮುಡುಕುತೊರೆ - ಒಂದು ಬರಹ

hamsanandi's picture

ಮುಡುಕುತೊರೆಯ ಚ್ಜಿತ್ರ್ಗಗಳೇನಾದರೂ ಇದ್ದರೆ ಹಾಕ್ರೀ, ಯಾರಾದ್ರೂ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 9:58pm — ವೈಭವ

ಉ: ಮುಡುಕುತೊರೆ - ಒಂದು ಬರಹ

ವೈಭವ's picture

ತಗೋಳ್ಳಿ ಹಂಸಾನಂದಿ, ಈವತ್ತು "ಪ್ರಜಾವಣಿಯಲ್ಲಿ" ಇದರ ಬಗ್ಗೆ ಬರಹ ಬಂದಿದೆ. ಪಾಪೆ/ಚಿತ್ರ ಕೂಡ ಇದೆ.

http://www.prajavani.net/Content/Jul192007/state2007071837611.asp?sectio...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 1:13pm — Khavi

ಉ: ಮುಡುಕುತೊರೆ - ಒಂದು ಬರಹ

Khavi's picture

Quote:
ತಿರು ಎಂಬ ಮುಂಪ್ರತ್ಯಯ ಚೋಳರ ಕಾಲದ ಕೊಡುಗೆಯಾಗಿರಬಹುದು

ತಿರುಳ್ಗನ್ನಡ ಇರೊ ಹಾಗೆ ತಿರು ಅಂದರೆ ತಿಳಿಯಾದ ಎಂದು ಇರಬೇಕು..
ಇದು ಚೋಳರ ಕೊಡುಗೆ ಅಲ್ಲ ಅನಿಸುವುದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 2:07pm — mahesha

ಉ: ಮುಡುಕುತೊರೆ - ಒಂದು ಬರಹ

mahesha's picture

ಖವಿ,

ಇಲ್ಲಿ ಹಂಸಾನಂದಿಯವರು ಹೇಳಿದುದು ಸರಿ.!

'ತಿರು' ಅಂದ್ರೆ ತಮಿಳಲ್ಲಿ 'ಶ್ರೀ' ಎಂದು. ಇಲ್ಲ ಶ್ರೀಗೆ ಬದಲು ತಿರು ಬಳಕೆ ಇದೆ.

ತಮಿಳು ಒರೆಗಂಟು ಹೀಗೆ ಹೇಳುವುದು.
1 tiru 1. Laksmi1, the goddess of wealth and prosperity; 2. wealth, riches, affiuence; 3. distinction, eminence; 4. beauty; 5. brilliance; 6. fertility; 7. blessing, fortune; 8. holiness; sacredness; 9. good karma; 10. astrologer; 11. wedding badge; 12. an ancient head-ornament; 13. a deity supposed to be seated on woman's breasts

ತಿರುಪತಿ = ಶ್ರೀಪತಿ
ತಿರುಮಲೈ = ಶ್ರೀಮಲೆ
ತಿರುವಯ್ಯಾರ್‍ = ತಿರು + ಅಯ್ಯಾರ್‍? ( ನಂಗೆ ಗೊತ್ತಿಲ್ಲ ) = ಶ್ರೀ ಅಯ್ಯಾರ್‍

ಕನ್ನಡಕ್ಕೆ, ಹೊಯ್ಸಳರ ಹೊತ್ತಿನಲ್ಲಿ ಚೋಳ ನಾಡಿನಲ್ಲಿ ನಡೆ ಯಾವುದೋ ಗೊಡವೆಯಿಂದ, ರಾಮಾನುಜಾಚಾರ್ಯರು ಅವರ ಸಂಗಡಿಗ ಕೂಟೇ ಇಲ್ಲಿ ವಲಸೆ ಬರುವರು. ಅವರಿಗೆ ಬಿಟ್ಟಿಗ ಇಂಬೀಯ್ಯವನು. ಆಮೇಲೆ ಈ ಹೆಸರುಗಳನ್ನು ನಮ್ಮ ಕಡೆ ಕಾಣಲು ಸುರುವಾಗಿದ್ದು.

ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿರುವ ಹೆಚ್ಚು ವಿಷ್ಣು ಗುಡಿ ಹೊಯ್ಸಳರ ಹೊತ್ತಿನವು....
ಆದರೆ ಇಲ್ಲಿ ಗಂಗರ, ಚೋಳ ಶಿವಲಿಂಗದ ಗುಡಿಗಳು ಹಲವಿವೆ. ಇವು ಇರುವ ಗುಡಿಗಳಲ್ಲಿ ಬಲು ಹಳೆಯವು.

ತಿರುೞ್ಗನ್ನಡ ನಾಡು ಈ ತಿರುಳು ಬೇರೆ.

ಕನ್ನಡದಲ್ಲಿ 'ತಿರು'/'ತಿರುಗು' ಅಂದರೆ 'ಪ್ರತಿ'/ದಿಕ್ಕುಬದಲಿಸು ಎಂದು

ಮಾತು = ತಿರುಮಾತು
ಬಾಣ = ತಿರು-ಬಾಣ/ತಿರುಗುಬಾಣ

ತಿರುಕ = ಭಿಕ್ಷುಕ
ತಿರುಪೆ = ಭಿಕ್ಷೆ

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 2:44pm — mahesha

ಉ: ಮುಡುಕುತೊರೆ - ಒಂದು ಬರಹ

mahesha's picture

ಬರೆವಣಿಗೆಯಲ್ಲಿ ತುಂಬಾ ಅಚ್ಚುತಪ್ಪುಗಳಾಗಿವೆ ಮನ್ನಿಸಿರಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 3:15pm — ವೈಭವ

ಉ: ಮುಡುಕುತೊರೆ - ಒಂದು ಬರಹ

ವೈಭವ's picture

ಇಲ್ಲಿ 'ತಿರುಮ' ಕನ್ನಡದ 'ತಿರುವು' "ತಿರುಗು' ಇವುಗಳೇ ಏಕಾಗಿರಬಾರದು. ತಿರುಮಕೂಡಲು = ತಿರುಗಿರುವ ಕೂಡಲು ಯಾಕಾಗಿರಬಾರದು?

ನೀವೆ ಹೇಳಿದಂತೆ ತಿರುಪತಿ, ತಿರುಮಲೆ....ಇಲ್ಲ ಇರುವುದು ಬರೀ 'ತಿರು', 'ತಿರುಮ' ಅಲ್ಲ.

ನಮ್ಮ ಮಂಡ್ಯದ/ಮೈಸೂರಿನ ಕಡೆ 'ಮ' ಸೇರಿಸುವುದು ಎಲ್ಲರಿಗೂ ತಿಳಿದಿರುವುದು.

ಮಾದರಿ: ಹೋಗುಮ, ತಿರುಗುಮ, ಬರುಮ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 3:52pm — mahesha

ಉ: ಮುಡುಕುತೊರೆ - ಒಂದು ಬರಹ

mahesha's picture

ಅಯ್ಯೋ

ಹೌದು.. ಇದು ಹೊಳೆಯಲೇ ಇಲ್ಲ!!

ಸರಿ.. ನೋಡೂಮ!! Smiling

ಹೋಗುವ = ಹೋಗುಮ/ಹೋಗೂಮ = ಹೋಗೋಣ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 10:30pm — hamsanandi

ಉ: ಮುಡುಕುತೊರೆ - ಒಂದು ಬರಹ

hamsanandi's picture

ತಿರುಮಕೂಡಲಿನ ತಿರು, ತಿರುವಿಗೂ, ತಿರಿಯುವುವಕ್ಕೂ ಸಂಬಂಧವಿಲ್ಲವೆಂದೇ ನನ್ನ ಭಾವನೆ

ಮೂರು + ಕೂಡಲ್ -> ಮುಕ್ಕೂಡಲ್
ಇದೇ ರೀತಿಯ ಮೂರು + ಕಣ್ಣವ -> ಮುಕ್ಕಣ್ಣ ; ಮೂರು (ಬೇಳೆಗಳ) ಕೂಟದ ದೋಸೆ -> ಮುಕ್ಕೂಟ ದೋಸೆ ಮೊದಲಾದವನ್ನು ನೆನೆಯಿರಿ

ಎರಡು ನದಿಗಳ ಸಂಗಮದಲ್ಲಿ ಮೂರನೆ ಗುಪ್ತಗಾಮಿನಿಯನ್ನು ಹೆಸರಿಸಿ, ಅದನ್ನು ತ್ರಿವೇಣಿ ಸಂಗಮವನ್ನಾಗಿ ಮಾಡುವುದು ರೂಢಿ.
ಗಂಗಾ-ಯಮುನಾ - (ಸರಸ್ವತಿ) ; ಅಲಹಾಬಾದಿನಲ್ಲಿ
ಕಾವೇರಿ-ಕನ್ನಿಕೆ- (ಸುಜ್ಯೋತಿ) ; ಭಾಗಮಂಡಲದಲ್ಲಿ
ಕಾವೇರಿ -ಕಪಿಲೆ - (ಸ್ಫಟಿಕಸರೋವರ) ; ತಿ. ನರಸೀಪುರದಲ್ಲಿ

ಈ ಭಾಗ ಗಂಗರಿಂದಲೂ, ಚೋಳರಿಂದಲೂ ಆಳಲ್ಪಟ್ಟಿರುವುದು ತಿಳಿದ ವಿಷಯವೇ. ಈ ಕಡೆ ಕನ್ನಡ್, ಸಂಸ್ಖೃತಗಳ ಜೊತೆಗೆ ತಮಿಳು ಶಾಸನಗಳೂ ಸಿಗುತ್ತವೆ. ತಮಿಳಿನ ತಿರು, ಪವಿತ್ರ ಎಂಬ ಅರ್ಥದಲ್ಲಿ ಉಪಯೋಗವಾಗಿದ್ದರೆ ಅಚ್ಚರಿಯಿಲ್ಲ. ಮೇಲುಕೋಟೆಗೂ ತಿರುನಾರಾಯಣಪುರ ಎಂಬ ಹೆಸರಿರುವುದನ್ನು ನೆನೆಯಬಹುದು.

ಇನ್ನು ತಿರುವೈಯಾರು -> ತಿರು + ಐದು + ಆಋ ->ಪವಿತ್ರವಾದ ಐದು ನದಿಗಳ ಪ್ರದೇಶ - ಇದರ ಬಗ್ಗೆ ಇನ್ನೊಂದು ಲೇಖನದಲ್ಲಿ ಈಗಾಗಲೇ ಬರೆದಿದ್ದೇನೆ;

ತಿರುವಾರೂರು -> ತಿರು + ಆರು+ ಊರು ಇರಬಹುದು -> ಪವಿತ್ರವಾದ ನದಿಯ ಊರು
ಈ ಪದವನ್ನು ತಮಿಳಿನಲ್ಲಿ ಹೇಗೆ ಬರೆಯುತ್ತಾರೆಂದು ಮರೆತಿದ್ದೇನೆ - ಹಾಗಾಗಿ ನನ್ನ ವಿವರಣೆ ತಪ್ಪಾಗಿರಲೂಬಹುದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 10:46pm — hamsanandi

ಉ: ಮುಡುಕುತೊರೆ - ಒಂದು ಬರಹ

hamsanandi's picture

Quote:

ತಿರುವಾರೂರು -> ತಿರು + ಆರು+ ಊರು ಇರಬಹುದು -> ಪವಿತ್ರವಾದ ನದಿಯ ಊರು
ಈ ಪದವನ್ನು ತಮಿಳಿನಲ್ಲಿ ಹೇಗೆ ಬರೆಯುತ್ತಾರೆಂದು ಮರೆತಿದ್ದೇನೆ - ಹಾಗಾಗಿ ನನ್ನ ವಿವರಣೆ ತಪ್ಪಾಗಿರಲೂಬಹುದು.
[\quote]

ಸ್ವಲ್ಪ ಹೆಚ್ಚಿಗೆ ವಿವರಣೆ:

ಇದನ್ನು ತಿರುವಾಱೂರು ಎಂದು ತಮಿಳಲ್ಲಿ ಬರೆದರೆ, ಅದಕ್ಕೆ ಪವಿತ್ರ ನದಿಯ(ಅಥವಾ ತೀರ್ಥದ) ಊರು ಎಂದು ಅರ್ಥೈಸಬಹುದು. ಆದರೆ, ಅದನ್ನು ತಿರುವಾರೂರು ಎಂದು ಬರೆಯುವುದಾದರೆ ಅದು ಸರಿ ಹೊಂದದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2007 - 12:27pm — ವೈಭವ

ಉ: ಮುಡುಕುತೊರೆ - ಒಂದು ಬರಹ

ವೈಭವ's picture

ಮುಕ್ಕೂಡಲ್ ಆಗಿದ್ದರೆ ಅಲ್ಲಿ 'ಮು' ಇರಬೇಕಿತ್ತು
ತಿರುಮಕೂಡಲಿನಲ್ಲಿರುವುದು 'ಮ' , 'ಮು' ಅಲ್ಲ. ಕನ್ನಡಿಗರಿಗೆ 'ಮು' ಉಲಿಯಲು ಎಡರೇನಿಲ್ಲ.

ಹಾಗಾಗಿ ತಿರುಗುಕೂಡಲ್ ಸರಿ ಅಂತ ನನಗೆ ಅನ್ನಿಸ್ತಾ ಇದೆ.

ತಿರುಗುಕೂಡಲ್=ತಿರುಗುಮಕೂಡಲ್ = ತಿರುಮಕೂಡಲ್.

ತಲಕಾಡು, ತಿರುಮಕೂಡಲಿನಲ್ಲಿ 'ಗಂಗ'ರ ಆಳ್ವಿಕೆಯ ಪ್ರಬಾವ ಹೆಚ್ಚಿತ್ತಲ್ಲವೆ. ತಲಕಾಡು ಗಂಗರ ಅರಸನೂರು/ರಾಜದಾನಿ ಆಗಿತ್ತಾಲ್ಲವೆ?

ಚೋಳರು ಚಾ.ನಗರ, ನಂಜನಗೂಡು ವರೆಗೆ ಬಂದಿದ್ದರು. ಇಂದಿಗೂ ಇರುವ ನಂಜನಗೂಡಿನ ಗುಡಿ ಚೋಳರೇ ಕಟ್ಟಿಸಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 2:22pm — kannadakanda

ಉ: ಮುಡುಕುತೊರೆ - ಒಂದು ಬರಹ

kannadakanda's picture

ನೀವೇ ಹೇೞಿದಂತೆ ತಿರು=ಪವಿತ್ರ, ಶುದ್ಧ ಅಥವಾ ಸಂಸ್ಕೃತಕ್ಕೆ ’ಶ್ರೀ’ಗೆ ಸಂವಾದಿಯಾಗಿ ತಮಿೞರು ಬೞಸುತ್ತಾರೆ. ಶ್ರೀ->ಸಿರಿ->ತಿರು (ಸಕಾರಕ್ಕೆ ತಕಾರ ಬೞಸುವುದು ತಮಿೞಲ್ಲಿ ವಾಡಿಕೆ ಮಾಸ->ಮಾದಮ್, ಎಸೞ್->ಇದೞ್) ಹಾಗಾಗಿ ನಿಮ್ಮ ವಾದ ಸರಿ. ನೋಡಿ ತಿರುಪತಿ->ಶ್ರೀಪತಿ ತಿರುವಣ್ಣಾಮಲೈ->ಶ್ರೀಯಣ್ಣಾಮಲೈ, ತಿರುವನಂತಪುರಂ->ಶ್ರೀಯನಂತಪುರಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 9:41am — kannadakanda

ಉ: ಮುಡುಕುತೊರೆ - ಒಂದು ಬರಹ

kannadakanda's picture

ಮುಡುಕುತೊಱೆ ಎಂದೂ ಶಾಸನಗಳಲ್ಲಿ ನಮೂದಾಗಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
  • ನಾಗನ ಪೂಜೆಯ ತಾಣದಲ್ಲಿ... ವಾರ್ಷಿಕ ಜಾತ್ರೆ..
  • ಇಂಡಿಯ-ಆಸ್ಟ್ರೇಲಿಯಾ ಗೆಳೆತನ ಜಾತ್ರೆ - ೫
  • ಇಂಡಿಯ-ಆಸ್ಟ್ರೇಲಿಯಾ ಗೆಳೆತನ ಜಾತ್ರೆ - ೪
  • ಇಂಡಿಯ-ಆಸ್ಟ್ರೇಲಿಯಾ ಗೆಳೆತನ ಜಾತ್ರೆ - ೩
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 119 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator