ಸ್ವಚ್ಛಂದ ಬಂಧ
ಎಷ್ಟೇ ಸ್ವಚ್ಚಂದವಾಗಿ ಹರಿದರೂ, ನದಿಗೆ ತನ್ನದೇ ಲಯವಿದೆ..
ಮೋಡವಾಗಿಯೇ ಉಳಿಯುವುದು ಯಾರ ತಪ್ಪು?
ಮತ್ತೆ ಮತ್ತೆ ನಿನ್ನ ನೆನಪಿನೆಡೆಗೆ ಸಾಗಲು ನನಗೆ
ನೋಯಿಸಿರುವೆ ನಿನ್ನ ಎಂಬುದೊಂದೇ ಕಾರಣವೇ,
ನೋವಾಯಿತೇ ಮೊದಲು ಬಡಿದುದೆಂದು ಕೇಳಲು
ಮತ್ತೆ ಮತ್ತೆ ತೀರದೆಡೆಗೆ ಅಲೆಯು ಬರುವಂತೆ?
ಮಿಡಿವ ಶರಧಿಯ ಮನಸು ಅಲೆಯಲ್ಲಿ ತೋರುವುದು,
ಆಳವೆಷ್ಟೇ ಇದ್ದರೂ ಅದು ಮೇಲಷ್ಟೇ ತೇಲುವುದು.
ಅಲೆಗಳು ಹೊತ್ತು ತರುವುದು ಕಸ, ಕಪ್ಪೆಚಿಪ್ಪು,
ಆಳದಲಿ ಮುತ್ತಿನ ರಾಶಿ, ಅದು ಮರೆತು ಹೋದರೆ ತಪ್ಪು.
ಉಪಮೆಯಿಲ್ಲದ ಎಲ್ಲ ಗಳಿಗೆಗಳಲಿ
ನೆನಪು ಬರುವುದಾದರೆ ಅವುಗಳಲೇನು ದೋಷವಿದೆ?
ಮುಂಜಾನೆ, ಮುಸ್ಸಂಜೆಗಳಲ್ಲಿ ಅರಳುವುದಾದರೆ
ಈ ನೆನಪಿಗೆ ದೋಷವಲ್ಲದ ಮತ್ತಾವ ಪಾಶವಿದೆ?
ಸ್ವಾತಿ ಹನಿಗಾಗಿ ಕಾಯುವುದು ಕಡಲಚಿಪ್ಪು,
ಮೋಡವಾಗಿಯೇ ಉಳಿಯುವುದು ಯಾರ ತಪ್ಪು?
(Composed this sonnet in January 2003)

- ಸ್ವಚ್ಛಂದ ಬಂಧ ರವರ ಬ್ಲಾಗ್
- Login or register to post comments
- 372 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: