ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಕಾದಿರುವೆ ನಿನಗಾಗಿ

August 29, 2008 - 11:57am — ಸಂಗನಗೌಡ

waiting girl 

 

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,

ಮನದ ಮುತ್ತಿನ ಹಾರ ತೊಡಿಸಲೆಂದು.

 

ಮನೆಯ ಮುಂದಿನ ತೋಟ,

ಬಾಗಿಲು, ನೆಲಹಾಸು,

ನನ್ನ ಮನೆಯ ಪಡಸಾಲೆ,

ಎಲ್ಲ ಕಾಯುತಿವೆ, ನೀ ಬರುವೆಯೆಂದು.

 

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,

ಮನದ ಮುತ್ತಿನ ಹಾರ ತೊಡಿಸಲೆಂದು.

 

ನಾ ಸಾಕಿರುವ, ಗಿಣಿ, ಹಂಸ,

ಬೆಕ್ಕು, ಪುಟ್ಟ ನಾಯಿ ಮರಿ,

ತೋಟದಿ ಕಟ್ಟಿರುವ ಆಕಳ ಕರು,

ಎಲ್ಲ ಕಾಯುತಿವೆ, ನೀ ಬರುವೆಯೆಂದು.

 

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,

ಮನದ ಮುತ್ತಿನ ಹಾರ ತೊಡಿಸಲೆಂದು.

 

ನಾ ಬರೆದ ಚಿತ್ತಾರ, ರಂಗೋಲಿ,

ಹೆಣೆದ ಕೈಚೀಲ, ಮುತ್ತಿನ 

ಚೆಂಡು, ಹೂಬುಟ್ಟಿ, ನನ್ನ ಪುಟ್ಟ

ಜಗತ್ತೇ ಕಾಯುತಿದೆ, ನೀ ಬರುವೆಯೆಂದು.

 

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,

ಮನದ ಮುತ್ತಿನ ಹಾರ ತೊಡಿಸಲೆಂದು. 

  • ಕವನ
  • ಹಾಡು
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 367 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 29, 2008 - 2:28pm — mahesha

ಉ: ಕಾದಿರುವೆ ನಿನಗಾಗಿ

mahesha's picture

ಚನ್ನಾಗಿದೆ...

"ಮನೆಯ ಮುಂದಿನ ತೋಟ,

ಬಾಗಿಲು, ನೆಲಹಾಸು,

ನನ್ನ ಮನೆಯ ಪಡಸಾಲೆ,

ಎಲ್ಲ ಕಾಯುತಿವೆ, ನೀ ಬರುವೆಯೆಂದು. "

ಇಂತ ಮನೆ ಬೆಂಗಳೂರಲ್ಲಿ ಇದ್ರೆ ಯಾವ ಹುಡುಗೀ ಬೇಕಾದರೂ ಬರ್ತಾಳ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 3:57pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 3:54pm — savithasr

ಉ: ಕಾದಿರುವೆ ನಿನಗಾಗಿ

savithasr's picture

ಮೊದಲ ಸಲ ಓದಿದಾಗ ಅದೇಕೋ ನರಸಿಂಹ ಸ್ವಾಮಿಯವರ "ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ" ನೆನಪಾಯ್ತು..
ತುಂಬಾ ಚೆನ್ನಾಗಿ ಬರೆದಿದ್ದೀರ.

ಚಿತ್ರ ಕಾಣಿಸ್ತಿಲ್ಲ... ಆದ್ರೆ ಗಿಣಿ,ಹಂಸ, ಹೆಣೆದ ಕೈಚೀಲ, ಮುತ್ತಿನ ಚೆಂಡು, ಹೂಬುಟ್ಟಿ... ಚಿಕ್ಕ ಮಗುವನ್ನ ಕುರಿತಾಗಿ ಬರೆದಿರೋದು ಅನ್ನಿಸ್ತು.
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 4:02pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ಈಗ ನೋಡಿರಿ ಸವಿತ. ಹುರಿದುಂಬಿದ್ದಕ್ಕೆ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 4:21pm — savithasr

ಉ: ಕಾದಿರುವೆ ನಿನಗಾಗಿ

savithasr's picture

ವಾಹ್! ಚಿತ್ರಕ್ಕೆ ತಕ್ಕ ಕವನ...ಕವನಕ್ಕೆ ಒಪ್ಪೋ ಚಿತ್ರ...
ಚಿತ್ರ ಕೂಡ ನೀವೇ ಬಿಡಿಸಿದ್ದಾ?
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 6:07pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ಇಲ್ಲ... ಹುಡುಕಿದ್ದು....

:-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 6:36pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ಸವಿತ ಅವರೇ, ಕೆ.ಎಸ್.ನ ನನ್ನ ಮೆಚ್ಚಿನ ಕಬ್ಬಿಗ.
ನನ್ನಿ :-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 5:00pm — anil.ramesh

ಉ: ಕಾದಿರುವೆ ನಿನಗಾಗಿ

anil.ramesh's picture

ಗೌಡ್ರೇ,
ಕವನ ಚೆನ್ನಾಗಿದೆ...
ಚಿತ್ರವೂ ಸೊಗಸಾಗಿದೆ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 6:51pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ನನ್ನಿ ಅನಿಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 6:56pm — ASHOKKUMAR

ಉ: ಕಾದಿರುವೆ ನಿನಗಾಗಿ

ASHOKKUMAR's picture

ಸರಳ ಸುಂದರ ಕವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 9:11am — Sunil Jayaprakash

ಉ: ಕಾದಿರುವೆ ನಿನಗಾಗಿ

Sunil Jayaprakash's picture

ನಮ್ ಗೌಡರ ಮತ್ತೊಂದು, ಸರಳ ಸುಂದರ ವಿರಹ ಕವನ Smiling.

ಈ ಬರಹದ ಹೆಸರು ನೋಡಿ, ಈ ಹಾಡು ನೆನಪಾಯ್ತು, "ಕಾದಿರುವ ನಿನಗಾಗಿ, ಓ ರಾಮಚಾರಿ ಈಗ ಬೇಗ ಬಾ". ಆದರೆ ಒಂದೇ ವ್ಯತ್ಯಾಸವೆಂದರೆ, ಆ ರಾಮಾಚಾರಿ ಚಿತ್ರದಲ್ಲಿ, ಹುಡುಗಿ ಹುಡುಗನನ್ನು ನೆನಸಿಕೊಂಡು ಹಾಡ್ತಾಳೆ, ಇಲ್ಲಿ ಉಲ್ಟಾ Smiling

ಸಂಗನ, ನೀನೇ ಚಿತ್ರ ಬಿಡಿಸಿದ್ಯಾ ? ಪೆದ್ದು ಮುದ್ದು ಮುದ್ದಾಗಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 11:55am — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ಸುನೀಲ್, ಇಲ್ಲೂ ಅಸ್ಟೆ ಹುಡುಗಿನೇ ಹುಡುಗನನ್ನು ನೆನೆಯುತ್ತಿರುವದು :-), ಇಲ್ಲಿ ಕಬ್ಬಿಗನಾಗಿ ನಾನೊಂದು ಮೀಡಿಯಮ್ ಅಸ್ಟೆ...
ತನ್ನ ಹುಡುಗನಿಗಾಗಿ ಕಾಯುತ್ತಿರುವ ಒಬ್ಬ ಹಳ್ಳಿಯ ಮಗುದೆ, ಚೆಲುವೆ, ತಿಳಿಮನದ ಬಾಲೆಯ ಮನಸ್ಸನ್ನು ಪದಗಳಲ್ಲಿ ಕಟ್ಟಿಡುವ ಒಂದು ಸಣ್ಣ ಜತನ....
ನನ್ನಿ. :-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 12:09pm — pallavi.dharwad

ಉ: ಕಾದಿರುವೆ ನಿನಗಾಗಿ

pallavi.dharwad's picture

ಕವನ ಸರಳವಾಗಿ ಚೆನ್ನಾಗಿದೆ ಗೌಡ್ರೆ. ಆದರೆ, ಕೊನೆಯ ನುಡಿ ಪಕ್ಕಾ ಹುಡುಗಿಯರ ಭಾವನೆಯಲ್ಲಿದೆ. ನೀವ್ಯಾವಾಗ ಚಿತ್ತಾರ ಹಾಕುವುದನ್ನು, ರಂಗೋಲಿ ಇಡುವುದನ್ನು, ಚೀಲ ಹೆಣೆಯುವುದನ್ನು ಕಲಿತಿರಿ?

ಅಮ್ಮಾವ್ರ ಗಂಡನಾಗೋ ತಯಾರೀನಾ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 3:36pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ಪಲ್ಲವಿ ಅವರಿಗೆ ನನ್ನಿ,
ಅದು ಹುಡುಗಿಯ ’ಭಾವನೆ’ ತಿಳಿಸಲೆಂದೇ ಬರೆದದ್ದು... :-)...
ಮತ್ತೇತಕ್ಕೂ ಅಲ್ಲ.....
ಇದೊಂದು ಮನ ಮಿಡಿಯುವ ಹಾಡು ಅಸ್ಟೇ,.. ನನ್ನ ಸೊಂತ ಬದುಕಿಗೆ ನೆಂಟಾದುದೇ ಆಗಿರಬೇಕೆಂದೇನಿಲ್ಲವಲ್ಲ...
ಏನಂತಿರ?
ಅಶೋಕ್ ಅವರಿಗೆ ನನ್ನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 11:08am — pallavi.dharwad

ಉ: ಕಾದಿರುವೆ ನಿನಗಾಗಿ

pallavi.dharwad's picture

ಖಂಡಿತ. ಅದು ಕವಿ ಸ್ವಾತಂತ್ರ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 4:14pm — dhanu.vijai

ಉ: ಕಾದಿರುವೆ ನಿನಗಾಗಿ

dhanu.vijai's picture

ಗೌಡ್ರೆ ,

ಕವನ ತುಂಬ ಸರಳವಾಗಿದೆ,
ಚಂದವಾಗಿದೆ,ಆದರೆ ಕೊನೆಯಲ್ಲಿ ರಂಗೋಲಿ ಎಲ್ಲ ಬರಿತ್ತಿನಿ ಅಂತ ಹೇಳಿ ಹುಡುಗರಿಗೆ ಅವಮಾನ ಮಾಡ್ಬಿಟ್ಟಿದ್ದಿರ.............

ಸ್ನೆಹದ "ಸಂಪದ"ದಲ್ಲಿ
ಧನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 5:28pm — ಸಂಗನಗೌಡ

ಉ: ಕಾದಿರುವೆ ನಿನಗಾಗಿ

ಸಂಗನಗೌಡ's picture

ಧನು ಅವರಿಗೆ ನನ್ನಿ, ಬೇರೆ ಮಾರುಲಿಗಳನ್ನು ನೋಡಿ, ತಿಳಿಯುವದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಏಕೆ ಹೀಗೆ ಮಾಡಿದೆ ನೀನು?
  • ಮೊದಲ ಅನುಭವ
  • ಬಾ ತಬ್ಬಿಕೋ :-)
  • ಹುಟ್ಟು ಹಬ್ಬದ ಶುಭಾಶಯಗಳು
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 106 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator