ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

August 19, 2008 - 2:26pm — ಸಂಗನಗೌಡ

ಮತ್ತೆ ನಿಲ್ಲುವೆ, ನೀ

ಬರುವ ದಾರಿಯಲಿ, ಹೂ

ಚೆಲ್ಲಿ ಕಾಯುತ್ತ.

 

ಎಸ್ಟು ಬಂದರೂ ಬರಗಾಲ,

ಮತ್ತೆ ಬೀಜವ ಬಿತ್ತಿ,

ಹಣೆಗೆ ಕೈ ಹಚ್ಚಿ ರೈತ,

ಮೋಡಗಳ ಕಾಯ್‍ವಂತೆ.

 

ಮತ್ತೆ ನಿಲ್ಲುವೆ, ನೀ

ಬರುವ ದಾರಿಯಲಿ, ಹೂ

ಚೆಲ್ಲಿ ಕಾಯುತ್ತ.

 

ಕಡಲಾಳದಲ್ಲೆಲ್ಲೋ,

ಎಂದೋ ಬರುವ ಸ್ವಾತಿ ಮಳೆಗೆ,

ಚಿಪ್ಪೊಂದು ಬಾಯ್‍ಕಳೆದು,

ಹನಿಗೆ ಕಾಯ್‍ವಂತೆ.

 

ಮತ್ತೆ ನಿಲ್ಲುವೆ, ನೀ

ಬರುವ ದಾರಿಯಲಿ, ಹೂ

ಚೆಲ್ಲಿ ಕಾಯುತ್ತ.

 

ಎಸ್ಟು ಸಲ ಸುಟ್ಟರೂ,

ಮತ್ತೆ ದೀಪದೆಡೆ ಸುಳಿಯುತ,

ಬೆಳಕಿನ ಹುಳುವದು,

ಸೆಳೆತಕ್ಕೆ ಸಿಲುಕುವಂತೆ

 

ಮತ್ತೆ ನಿಲ್ಲುವೆ, ನೀ

ಬರುವ ದಾರಿಯಲಿ, ಹೂ

ಚೆಲ್ಲಿ ಕಾಯುತ್ತ.

~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 340 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 19, 2008 - 2:35pm — ASHMYA

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

ASHMYA's picture

ಚನ್ನಾಗಿದೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 2:41pm — mahesha

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

mahesha's picture

ಅಲಲಾ ಸಂಗನ..

ಸೂಪರ್‍...

ಆದ್ರೇ ತುಂಬಾ ಕಾಯೋದು.. ತಪ್ಪೂ..

ಹೊತ್ ಹರೆಯ ಮೀರೀತು ಜೋಕೆ! ಓಕೆ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 4:01pm — anil.ramesh

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

anil.ramesh's picture

ಚೆನ್ನಾಗಿದೆ Smiling

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು,
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು,
ಕಾಯಿಸಿದರೂ, ಪ್ರೀತಿಸಿದರೂ,
ನಾನು ನಿನ್ನ ಪ್ರೀತಿಸುವೆ|
ನಾನು ನಿನ್ನ ಪ್ರೀತಿಸುವೆ||

ಈ ಹಾಡು ನೆನಪಿಗೆ ಬಂದಿರ್ಬೇಕು... ಅಲ್ವೇನ್ರಿ ಗೌಡ್ರ... Eye-wink

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 8:29am — pallavi.dharwad

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

pallavi.dharwad's picture

ಏನೋ ಅನಿಲ್‌, ಗೌಡ್ರು ಗದ್ಲದಾಗ ಬಿದ್ದಾರ ಅನ್ಸುತ್ತ ನಂಗೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 9:40am — anil.ramesh

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

anil.ramesh's picture

ಹೂ ಪಲ್ಲವಿ, ನಂಗೂ ಹಾಗೇ ಅನ್ನಿಸ್ತಿದೆ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 10:34am — nrachar

ಉ:

nrachar's picture

ಕಾಯೋದ್ರಲ್ಲೂ ಅದೇನೋ ಸುಖ .........
ಏನೋಪ್ಪ..... ಮುಂದುವರೆಸಿ ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 6:40pm — ಸಂಗನಗೌಡ

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

ಸಂಗನಗೌಡ's picture

ಬರೆದ ಎಲ್ಲರಿಗೂ ನನ್ನಿ,.. ಈ ಹಾಡು ನಿಮ್ಮ ಮನಗಳಿಗೆ ಮುದ ನೀಡಿದ್ದರೆ, ನಲಿವು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 9:24pm — Jayalaxmi.Patil

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

Jayalaxmi.Patil's picture

ಎಸ್ಟು ಬಂದರೂ ಬರಗಾಲ,

ಮತ್ತೆ ಬೀಜವ ಬಿತ್ತಿ,

ಹಣೆಗೆ ಕೈ ಹಚ್ಚಿ ರೈತ,

ಮೋಡಗಳ ಕಾಯ್‍ವಂತೆ.

ಈ ಸಾಲುಗಳು ತುಂಬಾ ಇಷ್ಟವಾದವು.

ಚೆನ್ನಾಗಿದೆ.

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 8:28am — pallavi.dharwad

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

pallavi.dharwad's picture

ಯಾರವರು ಗೌಡರ ಹೃದಯ ಕದ್ದವಳು
ಬೇಗ ಹೋಗಿ ಬಿಡೇ ಚೆಲುವೆ
ಹೃದಯ ಸುಟ್ಟೀತು, ಮನಸು ಮುರಿದೀತು
ನಗುವ ಚೆಲ್ಲುತ ಹೋಗೇ ಒಲವೇ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 12:21pm — ಸಂಗನಗೌಡ

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

ಸಂಗನಗೌಡ's picture

ಹೋಗಿ ಬಿಡು ಅಂದರೆ? ಅತ್ತ ಹೋಗಿ ಬಿಡು ಅಂತಾನ ಪಲ್ಲವಿ? Smiling
ನೋಡಿ, ರೈತ ಬೀಜ ಬಿತ್ತಿ ಮಳೆಗೆ ಕಾಯುತ್ತಾನೆ, ಅದು ಬಂದೇ ಬರುವದೆಂಬ ದಿಟ ನಂಬುಗೆ ಅವನದು, ಅದೆಂದೂ ಬತ್ತದು, ಅದು ಅವನ "ಅನಿವಾರ್ಯತೆ" ಕೂಡ, ಅವನ ಸಹಜ ಗುಣ, ಸ್ವಾತಿ ಮಳೆ ಹನಿ ಬಿದ್ದೇ ಬೀಳುವದೆಂಬ ನಂಬುಗೆ ಚಿಪ್ಪಿನದು, ಹಾಗೆ ಕಾಯುವದು ಅದರ ಕೆಲಸ, ಇನ್ನು ಬೆಳಕಿನ ಹುಳು, ಅದು ಸುಟ್ಟರೂ, ಬೆಳಕಿನೆಡೆಗೆ ಸೆಳೆತಕ್ಕೊಳಪಡುವದು ಅದರ ಸಹಜ ಕೆಲಸ, ಅದಕ್ಕೆ ಬೇರೆ ದಾರಿ ಇಲ್ಲ, ಅದರೆಡೆಗೆ ಅದು ಹೋಗಲೇಬೇಕು, ಹಾಗೆ, ಒಲುಮೆ ಕೂಡ, ಸಹಜ, ಸರಳ, ಕಾಯುವದು "ಅನಿವಾರ್ಯ".
ಹಾಗೆ ಸುಮ್ಮನೆ,.. ಒಂದು ಅನಿಸಿಕೆ,.. ಇನ್ನೂ ಅದರ ಗುಂಡಿಗೆ ಬಿದ್ದಿಲ್ಲ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 11:33pm — pallavi.dharwad

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

pallavi.dharwad's picture

ಅಯ್ಯೋ, ಇದೂ ಒಂಥರಾ ’ಬ್ಯಾಡ ಹೋಗು’ ಅನ್ನುವ ಮುನಿಸೇನೋ. ನಿಮ್ಮ ಚಿಪ್ಪಿನೊಳಗೆ ಸ್ವಾತಿ ಹನಿ ಬೀಳಲಿ. ಅದು ಮುತ್ತಾಗುವವರೆಗೆ ನೀವು ಸಹನೆಗೆಡದೇ ಕಾಯುವಂತಾಗಲಿ.

ಆದಷ್ಟು ಬೇಗ ಗುಂಡಿಗೆ ಬೀಳುವಂತಾಗಲಿ. ಗೌಡರಿಗೆ ಗೌಡತಿ ಬರುವಂತಾಗಲಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 1:11pm — harshab

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

harshab's picture

ಬೊಂಬಾಟಾಗಿದೆ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 4:53pm — ಸಂಗನಗೌಡ

ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

ಸಂಗನಗೌಡ's picture

ಹರ್ಷ ಅವರಿಗೆ ನನ್ನಿ, ಮತ್ತು ಜಯಲಕ್ಷ್ಮಿ ಅವರಿಗೆ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈಗೆಲ್ಲಿ ನಲ್ಲೆ ಈಗೆಲ್ಲಿ
  • ಮಾಯೆ
  • ನಾನೆಲ್ಲಿ
  • ಯಾತಕ್ಕೆ ಮಳೆ ಹೋದವೋ...
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 192 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator