ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಕನ್ನಡದ ನುಡಿದಾಟಿ ಎಂತದು?

July 19, 2008 - 7:09pm — ಸಂಗನಗೌಡ

ಯಾವುದೇ ನುಡಿಗೆ ಒಂದು ದಾಟಿ ಇರುತ್ತದೆ. ಹಾಗೆಯೇ ಕನ್ನಡಕ್ಕೂ ಒಂದು ದಾಟಿ ಇದೆ. ಅಂದರೆ ಕನ್ನಡದ ಪದಗಳು ಹೇಗಿವೆ ಅಂದರೆ ಒಂದು ಪದವು ಇನ್ನೊಂದು ಕನ್ನಡದ್ದೇ ಪದದೊಂದಿಗೆ ಅಗದಿ ಆರಾಮಾಗಿ ಕೂಡಿಕೊಳ್ಳುತ್ತದೆ. ಕನ್ನಡದ ಹಲವಾರು ಹಾಡುಗಳನ್ನು ತೆಗೆದುಕೊಂಡರೆ,.. ನಾವು ಇಂದು ಮಾತಿನಲ್ಲಿ ಬಳಸದೇ ಇರದಂತ ಎನಿತೋ ಪದಗಳು ಕಾಣುತ್ತವೆ. ಮಾದರಿಗೆ,

ನೂರಾರು ಸಾವಿರ ಓಲೆ - ಗುಬ್ಬಚ್ಚಿ ಗೂಡಿನಲ್ಲಿ ಹಾಡು -ಬಿಂದಾಸ್ ಸಿನಿಮಾದಿಂದ,  ನಾಡಿಯಲ್ಲಿ ನೆತ್ತರು ಹರಿಯೋದು ನಿಂತೇ ಹೋದರು- ಕೊಲ್ಲೆ ಹಾಡು- ಅರಮನೆ ಸಿನಿಮಾದಿಂದ, ಸೋಕುತಿರಲು ಬಿಸಿ ಬಿಸಿ ಒಡಲು - ಬಾ ಚೋರಿ ನೀ ಮುದ್ದಾಟಕೆ ಹಾಡು - ಬೆಳದಿಂಗಳಾಗಿ ಬಾ ಸಿನಿಮಾದಿಂದ. ಆ ಹಾಡನ್ನುಇಲ್ಲಿ ಕೇಳಬಹುದು.ಈ ಮಾದರಿಗಳಲ್ಲಿ ನೋಡಿ,. ನಾವು ಓಲೆ, ನಾಡಿ, ನೆತ್ತರು, ಒಡಲು ಈ ಪದಗಳನ್ನು ಮಾತಿನಲ್ಲಿ ಬಳಸುವದನ್ನು ಬಿಟ್ಟೇ ಬಿಟ್ಟಿದಿವಿ,.. ಓಲೆಗೆ ಹಿಂದೆ ಪತ್ರ ಅಂತಿದ್ದೆವು, ಈಗ ಲೆಟ್ಟರ್ ಅಂತೀವಿ, ನಾಡಿಗೆ ರಕ್ತನಾಳ ಇಲ್ಲವೇ ಪಲ್ಸ್ ಅಂತೀವಿ, ಹಳ್ಳಿಗಳಲ್ಲಿ ನಾಡಿನೇ ಅಂತಾರೆ,. ನೆತ್ತರಿಗೆ ಹಳ್ಳಿ, ಪೇಟೆಗಳಲ್ಲೆಲ್ಲಾ ರಕ್ತಾನೇ ಅಂತಾರೆ, ಈಗಿನ ಒರೆ ಬ್ಲಡ್.., ಒಡಲಿಗೆ ಶರೀರ, ಈಗ body ಅಂತೀವಿ. ಆದರೂ ಮೇಲಿನ ಹಾಡುಗಳಲ್ಲೇಕೆ ಎಲ್ಲಿಯೂ ಸುಳಿಯದ ಒಡಲು, ನೆತ್ತರು,ಓಲೆ ಅನ್ನುವಂತ ಒರೆಗಳು ಬಂದವು? ಬೆರಗಲ್ಲವೇ??

ಹಾಡುಗಳಲ್ಲಿ ಕನ್ನಡ ಒರೆಗಳೇ ತುಂಬ ಚೆನ್ನಾಗಿ ಒಂದಕ್ಕೊಂದು ಹೊಂದಿಕೊಂಡು, ಹಾಡು ಚಂದವಾಗುತ್ತದೆ. ಹಿಂದೆ ಒಬ್ಬರು auditory imagination, ಕೇಳ್ ಒಳಕಾಣುವಿಕೆಯ ಬಗ್ಗೆ ಸಂಪದದಲ್ಲೇ ಬಲಾಗಿದ್ದರು,. ಬೇರೆ ನುಡಿಯ ಒರೆಗಳು ಈ ಕೇಳ್ಒಳಕಾಣ್ವಿಕೆಯ ಹಲಗೆಯ ಮೇಲೆ ಸರಿಯಾಗಿ ಕೂರುವದಿಲ್ಲ, fit ಆಗುವದಿಲ್ಲ.

ಒಂದೊಂದು ಭಾಷೆಯಲ್ಲೂ ಇವು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಂಯೋಜನೆಗೊಂಡಿರುತ್ತವೆ. ಆ ಭಾಷೆ, ಆ ಭಾಷೆಯನ್ನಾಡುವ ಜನರ ವ್ಯಕ್ತಿತ್ವ, ಅವರ ಮಾತಿನ ಧಾಟಿ, ಇವೆಲ್ಲದರ ಸಮ್ಮಿಳನ ಆ ಭಾಷೆಯ ಸಂಗೀತ ಅಥವಾ ಛಂದಸ್ಸಂಗೀತ. ಭಾಷೆಯಲ್ಲಿ ಮೇಲು ನೋಟಕ್ಕೆ ಯಾವನು ಯಾವ ಶಬ್ದವನ್ನು ಹೇಗೆ ಬೇಕಾದರೂ ಉಚ್ಚರಿಸಬಹುದಾದ ಸ್ವಾತಂರ್ತ್ಯ ವಿರುವಂತೆ ಕಾಣುತ್ತದೆ. ಆದರೆ ಭಾಷೆಯಲ್ಲಿನ ಪ್ರತಿಯೊಂದು ಶಬ್ದವೂ ಒಂದು ಅರ್ಥಪೂರ್ಣ ವಾಕ್ಯದಲ್ಲಿ ತನ್ ಅಕ್ಕಪಕ್ಕದ ಶಬ್ದಗಳ ಸರಣಿಯಲ್ಲಿ ಸಂಯೋಜನೆಗೊಂಡ ನಾದ.

ಹಾಗಾಗಿ ಕನ್ನಡದಲ್ಲಿ ಕನ್ನಡದ್ದೇ ಒರೆಗಳನ್ನು ಸೇರಿಸಿ ಮಾತಾಡೋಕೆ ಹೆಚ್ಚಾಗಿ ನೋಡೂನು.. ಬೇರೆ ದಾರಿನೇ ಇಲ್ಲದಾದಾಗ,. ಬೇರೆ ನುಡಿಯ ಒರೆಯನ್ನು ಸೇರಿಸಿದರೆ ತಪ್ಪಿಲ್ಲ.,. ಆದರೆ ನಮ್ಮ ನುಡಿದಾಟಿಗೆ ಹೊಂದುವಂತೆ ಆ ಒರೆಯನ್ನು ಬಗ್ಗಿಸಿ, ಸೇರಿಸಲು ನೋಡುನು. ಹೌದಲ್ಲರೀ?

 

  • ಕನ್ನಡ
  • ನುಡಿಸಂಗೀತ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 246 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 21, 2008 - 2:38pm — mahesha

ಉ: ಕನ್ನಡದ ನುಡಿದಾಟಿ ಎಂತದು?

mahesha's picture

ಸಂಗನಗೌಡರೇ,

ಬಲು ಚಲುವಾದ ಬರಹ. ಅಚ್ಚಕಟ್ಟಾದ ಬಗೆ.

ನಿಮ್ಮ ಬರಹ ಹುರುಳು ಒಪ್ಪ ತಕ್ಕದ್ದು.. ಕನ್ನಡ ಮಾತಾಡುವ ಬೇರೆ ನುಡಿಯ ಒರೆ, ನುಣುಪಾದ ದಾರಿಯಲ್ಲಿ ನನ್ನ ಸೊಗಸಾದ ಕಾರು ಹಾಯ್ದು ಹೋಗುತ್ತಿರುವಾಗ, ನಡುವೆ ಒಂದು ಹಳ್ಳ ಬಂದು ಎಗರಿದಂತೆ.

ಈ ಬಳಕೆಗಳನ್ನು ನೋಡಿ..

ತಿಳಿವಾತು/ಮಾತು = ಸ್ಪಷ್ಟನುಡಿ
ಹಲಮಂದಿ = ಬಹುಮಂದಿ
ರಕ್ತ ಹರಿಯಿತು = ನೆತ್ತರು ಹರಿಯಿತು
ಹಾಲು ಕುಡಿ = ಕ್ಷೀರ ಕುಡಿ
ಅಮ್ಮನ ಮಡಿಲು = ಜನನಿಯ ಮಡಿಲು
ಚಿಕ್ಕಮಗು = ಚಿಕ್ಕ ಬೇಬಿ

ನಮ್ಮ ನುಡಿಯ ಒಳಮಾಟವೇ ಯಾವುದೋ ಒಂದು ಚಲುವಾದ ಇನಿಯಾದ ಹದದಲ್ಲಿದೆ.. ಅದನ್ನು ಗುರುತಿಸಿಕೊಂಡಿಲ್ಲ ನಾವಿನ್ನು.. !!

"ಎನಿತು ಇನಿದು ಈ ಕನ್ನಡ ನುಡಿಯು" ಅಪ್ಪಟ ಕನ್ನಡ ಇಂಪು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 6:16pm — ಸಂಗನಗೌಡ

ಉ: ಕನ್ನಡದ ನುಡಿದಾಟಿ ಎಂತದು?

ಸಂಗನಗೌಡ's picture

ಹೌದು ಮಹೇಶ್,.. ಕನ್ನಡದ ಒಳಮಾಟ ಒಂದು ಚೆಲುವಾದ, ಇನಿಯಾದ ಹದದಲ್ಲಿದೆ. ನನಗಂತು ಆ ಮಾಟ ತುಂಬಾ ಹಿಡಿಸಿದೆ.. ಮನಸ್ಸಿಗೇನೋ ಮುದ,.. ಬೆರಕೆಯಿಲ್ಲದ ಗಟ್ಟಿ ಹಾಲು ಕುಡಿದಂತೆ,.. ಸಿಹಿ ಕಬ್ಬನ್ನು ಜಗಿದಂತೆ,.. ಬಡಗಣದಿ ಮಾಡುವ ಹಾಲುಗ್ಗಿಯನ್ನು ಸುರು ಸುರು ಸಪ್ಪಳ ಮಾಡುತ್ತ,.. ಸುರಿದು ತಿಂದಂತೆ... (ಹಾಲುಗ್ಗಿಯ ರುಚಿಯೇ ರುಚಿ.. Smiling)
ಒಟ್ಟಿನಲ್ಲಿ ಕನ್ನಡದ ಬಗ್ಗೆ ಒಲುಮೆ ಬೆಳೆದದ್ದು ಅಪ್ಪಟ ಕನ್ನಡದ ಸಿಹಿ ಉಂಡಾಗಲೇ..

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 9:01am — mahesha

ಉ: ಕನ್ನಡದ ನುಡಿದಾಟಿ ಎಂತದು?

mahesha's picture

ಹಾಲುಗ್ಗಿಯೇ?

ನಿಮ್ಮ ಮದುವೆಗೆ ಮಾಡಿಸಿ ಬರ್ತೀನಿ. Smiling

ಸುಲಿದ ಬಾಳೆಹಣ್ಣಿನಂದದ...ಜಾಣ್ನುಡಿ.. ಕನ್ನಡ!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 5:19pm — ಸಂಗನಗೌಡ

ಉ: ಕನ್ನಡದ ನುಡಿದಾಟಿ ಎಂತದು?

ಸಂಗನಗೌಡ's picture

ಮದುವೆವರೆಗೂ ಕಾಯೋದ್ಯಾಕೆ? Smiling

ಒಮ್ಮೆ ಊರಿಗೆ ಹೋದಾಗ ಕಟ್ಟಿಸಿಕೊಂಡು ಬರುವೆ,.. ಇಲ್ಲಿ ತಂದು ಬಿಸಿ ಮಾಡಿ ಉಂಡರಾತು. Smiling
ಮದುವೆಗೆ ತಪ್ಪದೇ ಬನ್ನಿ, ಬಡಗಣದ ಎಲ್ಲ ಬಗೆ ಬಗೆಯ ತಿನಿಸುಗಳನ್ನು ಚಪ್ಪರಿಸಿ ತಿನ್ನುವಿರಂತೆ.
Smiling
-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 8:20am — mahesha

ಉ: ಕನ್ನಡದ ನುಡಿದಾಟಿ ಎಂತದು?

mahesha's picture

ಒಮ್ಮೆ ಬಳ್ಳಾರಿಗೆ ನನ್ ಗೆಳೆಯನ ಮದುವೆಯಲ್ಲಿ ಮೊದಲ ಸರತಿ ಮಂಡಿಗೆ ತಿಂದು, ಅವನಿಗೆ ಊರಿಗೆ ಹೋದಾಗಲೆಲ್ಲ ಯಾವುದಾದ್ರೂ ಮದುವೆಗೆ ಹೋಗಿ ಮಂಡಿಗೆ ತಾ ಎಂದು ಕಾಡಿಸುವೆ. Smiling

ಇರಲಿ..

ಕನ್ನಡದಾಟಿಗೆ ಕನ್ನಡದ ಒರೆಗಳು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 9:51pm — Narayana

ಉ: ಕನ್ನಡದ ನುಡಿದಾಟಿ ಎಂತದು?

Narayana's picture

auditory imagination ಬಗ್ಯೆ ನಾನು ಸಂಪದದಲ್ಲಿ ಉದ್ಧರಿಸಿದ ಕುವೆಂಪು ನುಡಿಯನ್ನು ನೀವು ಉದ್ಧರಿಸಿದ್ದಕ್ಕಾಗಿ ವಂದನೆಗಳು

ಭಾಷಾ ಸಂಗೀತ ಬಹಳ ಮುಖ್ಯ. ಅದಕ್ಕೇ ನಮ್ಮ ಹಿರಿಯರು ಕನ್ನಡ ಮಾತಾಡಿದರೆ ಕಿವಿಗೆ ಸಿಗುವ ಇಂಪು ಈಗಿನವರು ಮಾತಾಡಿದರೆ ಸಿಗುವುದಿಲ್ಲ. ಇದು ಬರಿ ಭಾಷಾ ಶುದ್ಧತೆಯ ಪ್ರಶ್ನೆಯಲ್ಲ . ಇದು ಶಬ್ದಗಳ ಜೋಡಣೆಯಿಂದ ಹುಟ್ಟುವ ಛಂದಸ್ಸು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 9:15am — mahesha

ಉ: ಕನ್ನಡದ ನುಡಿದಾಟಿ ಎಂತದು?

mahesha's picture

ನಾರಾಯಣ,

ತಪ್ಪುತಿಳಿಯಬೇಡಿ..

ನುಡಿದಾಟಿಗೆ ಹೆಚ್ಚು ಒತ್ತಿದೆ.. ಆದರೆ ನಿಮ್ಮ ಬರವಣಿಗೆ ಕನ್ನಡದ ನುಡಿದಾಟಿಯಲ್ಲಿ ಇಲ್ಲ...

ಅಪ್ಪಟಕನ್ನಡ ಒರೆಗಳ ಬಳಕೆಯಲ್ಲೇ ನಮ್ಮ ದಾಟಿ ಇರುವುದು..

ಮಹಾಪ್ರಾಣ. ಶ,ಷ ಋಗಳ ಬಳಕೆ ನಮ್ಮ ಕನ್ನಡವನ್ನು ಕರ್ಕಶ/ಕಿರುಚು ಮಾಡುವುದೆಂದು ಕಬ್ಬಿಗರದಾರಿ/ಕವಿರಾಜಮಾರ್ಗ, ನುಡಿವಣಿಗನ್ನಡಿ/ಶಬ್ದಮಣಿದರ್ಶಣದಿಂದ ಶಂಕರಬಟ್ಟರ ಹೊತ್ತಗೆ ವರೆಗೂ ಹೇಳಿದೆ.

ಅದನ್ನೇ ಸಂಗನನೂ ಹೇಳಿರುವುದು..!!

"ಭಾಷಾ ಶುದ್ಧತೆ" ಇದು ಕನ್ನಡದ ದಾಟಿಯಲ್ಲ.. ಇದು ಕನ್ನಡಕಿವಿ ಕಿರುವು ಕೂಡ..

ಕನ್ನಡಿಗರು ಮಾತು ಹಾವು ಬುಸುಗುಟ್ಟಿದ ಹಾಗೆಯಿಲ್ಲ. ಉಸಿರನ್ನು ಜೋರಾಗಿ ಬಿಡುವುದು ಇಂಪಲ್ಲ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಭಾಷೆಗೊಂದು ಸಂಗೀತ
  • ಯಥೇಚ್ಛವೋ ಯಥೇಷ್ಟವೋ?
  • ವ್ಯರ್ಥ ಪ್ರೀತಿ
  • ಆಷಾಢಕ್ಕೆ ತೌರಿಗೆ ಬರಲಿಲ್ಲ.
  • ನಡೆದಾಡುವ ವಿಶ್ವಕೋಶ ...
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 108 ಅತಿಥಿಗಳು ಆನ್ಲೈನ್ ಇರುವರು.


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator