ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಹೈದರಾಬಾದ್

September 18, 2008 - 4:30pm — ಸಂಗನಗೌಡ

ಎರಡು-ಮೂರು ವಾರಗಳ ಮಟ್ಟಿಗೆ ಹೈದರಾಬಾದ್-ಗೆ ಹೋಗಬೇಕಾಗಿ ಬಂದಿದೆ, ಬಿಡುವಾದಾಗ ತುಸು ಸುತ್ತೋಣ ಅಂತ, ಬಲ್ಲವರು ಹೈದರಾಬಾದ್ ಸಂಗತಿ ತಿಳಿಸಿ.

sikhanagoudar AT gmail ಗೆ ಮಿಂಚಂಚೆ ಕಳುಹಿದರೂ ಆದೀತು.

ನನ್ನಿ :-)

  • ಪಯಣ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 18, 2008 - 5:28pm — anil.ramesh

ಉ: ಹೈದರಾಬಾದ್

anil.ramesh's picture

ಈ ಮಾಹಿತಿ ನೋಡಿ... ಇಲ್ಲಿ ನೋಡಿ...
ನಿಮಗೆ ಉಪಯೋಗವಾಗಬಹುದು...

ನಿಮಗೆ ಈ-ಮೇಲ್ ಐಡಿ ಗೂ ಸಹ ಮೇಲ್ ಕಳುಹಿಸಿದ್ದೇನೆ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2008 - 5:27pm — makrumanju

ಉ: ಹೈದರಾಬಾದ್

makrumanju's picture

ನಾನ್ ನೋಡಿಲ್ಲ ಆದರೆ ನನ್ನ ಸ್ನೇಹಿತ ಹೇಳಿದ ಸ್ಥಳಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಚಾರ್ ಮಿನಾರ್, ಬಿರ್ಲಮಂದಿರ, ರಾಮೋಜಿ ಪಿಲ್ಮ್ ಸಿಟಿ, ಎನ್.ಟಿ.ಆರ್ ಗಾರ್ಡನ್, ಉಸೇನ್ ಸಾಗರ್, ಟ್ಯಾಂಕ್ ಬಂಡ್, ನೆಹರು ಜುಲಾಜಿಕಲ್ ಪಾರ್ಕ್, ಎರ್ ಪೋರ್ಟ್ ಇವು ಸುಂದರ ಸ್ಥಳಗಳಂತೆ ಸಮಯ ಸಿಕ್ಕರೆ ನೋಡಿ.

ಮಾ.ಕೃ.ಮಂಜು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2008 - 9:46pm — ಸಂಗನಗೌಡ

ಉ: ಹೈದರಾಬಾದ್

ಸಂಗನಗೌಡ's picture

ಅನೀಲ್, ಮತ್ತು ಮಂಜು, ನನ್ನಿ. ಹೈದರಾಬಾದ್ ನಲ್ಲಿರೋರು, ಹೆಲುಪ್ ಮಾಡಿ.. ವಸಿ... ಯಾವ ಯಾವ ತಾಣಗಳು, ನೋಡಲೇಬೇಕಾದಂತವು, ಮುಂತಾದವುಗಳ ಕುರಿತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2008 - 11:38pm — ಗಣೇಶ

ಉ: ಹೈದರಾಬಾದ್

ಗಣೇಶ's picture

ಸಂಗನ ಗೌಡ್ರೆ,

ಸಮಯ ಸಿಕ್ಕಾಗ 'ಗೋಲ್ಕೊಂಡ ಫೊರ್ಟ್'(ಗೊಲ್ಲರ ಬೆಟ್ಟ) ನೋಡಲು ಮರೆಯದಿರಿ.
ಚಾರ್ ಮಿನಾರ್ ಸಹಿತ ಉಳಿದವೆಲ್ಲಾ ಅದರೆದುರಿಗೆ ಬಚ್ಚಾ. Smiling
ಹೈದರಾಬಾದ್ ಪ್ರವಾಸ,ವಾಸ ಸುಖಕರವಾಗಿರಲಿ,
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 9:01pm — Lokeshgowda

ಉ: ಹೈದರಾಬಾದ್

Lokeshgowda's picture

- ಲೋಕೇಶ್‌ಗೌಡ ಎಚ್‌.ಸಿ.

ಸಂಗನಗೌಡರೇ ಹೈದರಾಬಾದ್‌ನಲ್ಲಿ ನೀವು ನೋಡಲೇ ಬೇಕಾದ ಅನೇಕ ಸ್ಥಳಗಳಿವೆ. ಮೊದಲನೆಯದಾಗಿ ಏಷಿಯಾದ ನಂಬರ್‌ ಒನ್ ಪಿಲ್ಮ್‌ಸಿಟಿ ರಾಮೋಜಿ ಫಿಲ್ಮ್‌ಸಿಟಿ. ಜೀವಮಾನದಲ್ಲಿ ಕಂಡು ಕೇಳರಿಯದ ಅನುಭವ ಸವಿಯಬಹುದು. ಗೊಲ್ಕೊಂಡಾ ಫೋರ್ಟ್‌, ಹುಸೇನ್‌ ಸಾಗರ್‍ ಲೇಕ್, [ಮೂಗು ಮುಚ್ಚಿಕೊಳ್ಳುವುದು ಒಳಿತು] ಎನ್‌ಟಿಆರ್‌ ಗಾರ್ಡ್‌‌ನ್, ಬಿರ್ಲಾ ಮಂದಿರ್‌, ಸಾಲರ್‌ಜಂಗ್ ಮ್ಯೂಸಿಯಂ ನನಗೆ ತಿಳಿದಿರುವುದು ಇಷ್ಟು. ಸಾಧ್ಯವಾದರೆ ಈಟಿವಿ ಸಮೂಹಕ್ಕೆ ಭೇಟಿ ನೀಡಿ. ಅಲ್ಲಿ ನಿಮ್ಮ ಪರಿಚಯಸ್ಥರಿದ್ದರೆ ಮಾತ್ರ ಪ್ರವೇಶ.

ಆಲ್‌ ದಿ ಬೆಸ್ಟ್‌ ಗೌಡರೆ, ಎಂಜಾಯ್‌ ಮಾಡಿ ಬನ್ನಿ.
ಹೆಚ್‌ ಸಿ ಲೋಕೇಶ್‌ಗೌಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 9:02pm — Lokeshgowda

ಉ: ಹೈದರಾಬಾದ್

Lokeshgowda's picture

- ಲೋಕೇಶ್‌ಗೌಡ ಎಚ್‌.ಸಿ.

ಸಂಗನಗೌಡರೇ ಹೈದರಾಬಾದ್‌ನಲ್ಲಿ ನೀವು ನೋಡಲೇ ಬೇಕಾದ ಅನೇಕ ಸ್ಥಳಗಳಿವೆ. ಮೊದಲನೆಯದಾಗಿ ಏಷಿಯಾದ ನಂಬರ್‌ ಒನ್ ಪಿಲ್ಮ್‌ಸಿಟಿ ರಾಮೋಜಿ ಫಿಲ್ಮ್‌ಸಿಟಿ. ಜೀವಮಾನದಲ್ಲಿ ಕಂಡು ಕೇಳರಿಯದ ಅನುಭವ ಸವಿಯಬಹುದು. ಗೊಲ್ಕೊಂಡಾ ಫೋರ್ಟ್‌, ಹುಸೇನ್‌ ಸಾಗರ್‍ ಲೇಕ್, [ಮೂಗು ಮುಚ್ಚಿಕೊಳ್ಳುವುದು ಒಳಿತು] ಎನ್‌ಟಿಆರ್‌ ಗಾರ್ಡ್‌‌ನ್, ಬಿರ್ಲಾ ಮಂದಿರ್‌, ಸಾಲರ್‌ಜಂಗ್ ಮ್ಯೂಸಿಯಂ ನನಗೆ ತಿಳಿದಿರುವುದು ಇಷ್ಟು. ಸಾಧ್ಯವಾದರೆ ಈಟಿವಿ ಸಮೂಹಕ್ಕೆ ಭೇಟಿ ನೀಡಿ. ಅಲ್ಲಿ ನಿಮ್ಮ ಪರಿಚಯಸ್ಥರಿದ್ದರೆ ಮಾತ್ರ ಪ್ರವೇಶ.

ಆಲ್‌ ದಿ ಬೆಸ್ಟ್‌ ಗೌಡರೆ, ಎಂಜಾಯ್‌ ಮಾಡಿ ಬನ್ನಿ.
ಹೆಚ್‌ ಸಿ ಲೋಕೇಶ್‌ಗೌಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 8:38am — savithasr

ಉ: ಹೈದರಾಬಾದ್

savithasr's picture

ಸಂಗನರೆ,

ಹೈಟೆಕ್ ಸಿಟಿ ದ್ವಾರದಲ್ಲೇ ಇರೋ ಶಿಲ್ಪಾರಾಮಂ ಪಾರ್ಕ್ಗೆ ಹೋಗೋದು ಮರೀಬೇಡಿ.. ಹಾಗೆ ಹತ್ತಿರದಲ್ಲಿ ದುರ್ಗಂ ಚೆರುವು (Secret Lake) ಗೂ ಹೋಗಿ... ಹೈಟೆಕ್ ಸಿಟಿ ಒಳಗಿಂದ ಹೋಗಿ ತೆಪ್ಪದಲ್ಲಿ ಆಚೆ ದಡದಲ್ಲಿರೋ ಉದ್ಯಾನವನಕ್ಕೆ ಹೋಗೋದು ತುಂಬಾ ಚೆನ್ನಾಗಿರತ್ತೆ...ಉದ್ಯಾನವನದ ಚಿಕ್ಕ ಗುಡ್ಡ ಹತ್ತಬೇಕು...ಶುಕ್ರವಾರವೋ ಭಾನುವಾರವೊ ನೆನಪಿಲ್ಲ ಸೌಂಡ್ & ಲೈಟ್ ಪ್ರೊಗ್ರಾಮ್ ಇರತ್ತೆ!!

ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಹೋಗಬಹುದು..ಇದನ್ನ VISA Temple ಅಂತಾನು ಕರೀತಾರೆ ಯಾಕಂದ್ರೆ ಅಲ್ಲಿ ಹೋಗಿ ಅದೆಷ್ಟೋ(೧೦೧ ಪ್ರದಷ್ಕಿಣೆ ಅನ್ನಿಸುತ್ತೆ!!) ಹಾಕಿದ್ರೆ VISA ಗ್ಯಾರಂಟಿ !! Smiling

ಚಾರ್ಮಿನಾರ್ನಲ್ಲಿ ನಿಮ್ಮ ಅಕ್ಕ,ತಂಗಿಗೆ,ಅಮ್ಮಂಗೆ ಬಳೆ ತಗೊಳ್ಳಿ..ಹಾಗೆ ರೋಡ್ ಸೈಡ್ನಲ್ಲಿ ಇರಾನಿ ಟೀ ಕೂಡ ಟೇಸ್ಟ್ ಮಾಡಬಹುದು Smiling

PVR ನಲ್ಲಿ ಒಂದಷ್ಟು ತೆಲುಗು ಸಿನೆಮಾ ನೋಡಿ..ಸಂಜೆ ಹೊತ್ತು ಟ್ಯಾಂಕ್ ಬಂಡ್ ರೋಡ್ನಲ್ಲಿ ನಡೆಯೋದು ಚೆನ್ನಾಗಿರತ್ತೆ!

ಸ್ನೋ ವರ್ಲ್ಡ್ಗೂ ಹೋಗಿ ಒಂದು ಗಂಟೆ ಹಿಮಾಲಯದ ಅನುಭವ ಸಿಗತ್ತೆ!

ಹೈದರಾಬಾದ್ ಬಿರಿಯಾನಿಗೆ ಸಿಕಂದರ್ರಬಾದ್ನಲ್ಲಿರೋ ಪ್ಯಾರಡೈಸ್ಗೆ ಹೋಗಿ Smiling

ಗೋಲ್ಕೊಂಡ ಕೋಟೆಗೆ ಹೋದ್ರೆ ಸಂಜೆ ಸೌಂಡ್ & ಲೈಟ್ ಪ್ರೋಗ್ರಾಮ್ ಮುಗಿಯೋವರೆಗೂ ಇರಿ.. ಅಮಿತಾಬ್ ಬಚ್ಚನ್ ಗೋಲ್ಕೊಂಡ ಕೋಟೆಯ ಕತೆ ಹೇಳ್ತಾರೆ!

ಮತ್ತೆ ಬಿರ್ಲಾ ಮಂದಿರ್ಗೆ ಹೋಗಿ,ಹುಸೇನ್ ಸಾಗರ್,NTR ಪಾರ್ಕು ಹತ್ತಿರದಲ್ಲೆ ಇವೆ..ಹುಸೇನ್ ಸಾಗರ್ ನೀರು ಗಲೀಜು..Sad ಬೋಟ್ನಲ್ಲಿ ಹೋಗೋದು ನಿಮಗೆ ಬಿಟ್ಟಿದ್ದು.. ಹೋದ್ರೆ ಮದ್ಯದಲ್ಲಿರೋ ಬುದ್ದನ ವಿಗ್ರಹವನ್ನ ನೋಡಬಹುದು.

ಆರ್ಚಿಯೋಲಾಜಿಕಲ್ ಮ್ಯುಸಿಯಂನಲ್ಲಿರೋ ಬುದ್ದನ ಕಲ್ಲಿನ ವಿಗ್ರಹಗಳು ನನಗಂತೂ ಅಚ್ಚರಿ ಮೂಡಿಸಿದ್ವು..ಆಗಿನ ನವಾಬ ಕೊಂಡು ತಂದಿರೋ "ಮಮ್ಮಿ" ನೋಡೋದನ್ನ ಮರೀಬೇಡಿ!!

ಸಿಕಂದರಾಬಾದ್ನಲ್ಲಿ ಒಳ್ಳೆಯ ಮುತ್ತು,ಹವಳಗಳು ಸಿಗುತ್ತವೆ...ನಿಮ್ಮ ಆಫೀಸ್ id card ತಗೊಂಡು ಹೋಗಿ ಯಾಕಂದ್ರೆ ಕಾರ್ಪೊರೇಟ್ ಡಿಸ್ಕೌಂಟ್ ಅಂತ ೧೫-೨೦% ಕೊಡ್ತಾರೆ Smiling ಹಾಗೆ ಗೊತ್ತಿರೋರನ್ನ ಕರೆದುಕೊಂಡು ಹೋದ್ರೆ ಒರಿಜಿನಲ್ ಮುತ್ತು,ಹವಳಗಳು ಸಿಗುತ್ತವೆ...ಇಲ್ಲಾಂದ್ರೆ ನಿಮಗೊಂದು ಟೋಪಿ ಗ್ಯಾರಂಟಿ! Laughing out loud

ಅಮೀರಪೆಟ್ನಿಂದ ಹೈಟೆಕ್ ಸಿಟಿಗೆ ಶೇರಿಂಗ್ ಆಟೋದಲ್ಲಿ ಹೋಗಿ..!!

ರಾಮೋಜಿ ಫಿಲ್ಮ್ ಸಿಟಿಗೆ ವಿಕೆನ್ದ್ನಲ್ಲೆ ಹೋಗಿ..ಪೂರ್ತಿ ನೋಡ್ಲಿಕ್ಕೆ ತುಂಬಾ ಸಮಯ ಬೇಕು.

ಎಲ್ಲಿಗೆ ಹೋದ್ರೂ ಕ್ಯಾಮೆರಾ ತಗೊಂಡು ಹೋಗೋದನ್ನ ಮರೀಬೇಡಿ..

ಬರೋವಾಗ ಪುಲ್ಲಾ ರೆಡ್ಡಿ ಸ್ವೀಟ್ಸ್ಗೆ ಹೋಗಿ ಸಕ್ಕತ್ ಸ್ವೀಟ್ಸ್ ಸಿಗತ್ತೆ!! ಒಮ್ಮೆ ತಿಂದು ನೋಡಿ ಕೆಜಿಗಟ್ಟಲೆ ತಗೊಂಡು ಬರ್ತೀರಾ Smiling

ಬೆಂಗಳೂರಿಗೆ ಬಂದ ಮೇಲೆ ನಿಮ್ಮ ಹೈದರಾಬಾದ್ ಅನುಭವ ಹೇಗಿತ್ತು ಅಂತ ಹೇಳಿ Smiling

-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 8:56am — savithru

ಉ: ಹೈದರಾಬಾದ್

savithru's picture

ಸೂಪರ್! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 9:52am — savithasr

ಉ: ಹೈದರಾಬಾದ್

savithasr's picture

ಹೈದರಾಬಾದ್ನಲ್ಲಿ ಎರಡು ಬೇಸಿಗೆಕಾಲ,ಎರಡು ಮಳೆಗಾಲ ಮತ್ತು ಒಂದುವರೆ ಛಳಿಗಾಲ ನೋಡಿದ್ದೆ...
ಅಲ್ಲಿಂದ ಟ್ರಾನ್ಸ್ಫರ್ ಮಾಡಿ ಅಂತ ಒಂದೇ ಸಮನೆ ಗೋಳೊಯ್ಕೊಂಡು....ಬೆಂಗಳೂರಿಗೆ ಬಂದ ಮೇಲೆ ಹೈದರಾಬಾದ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಂಡೆ Sad ಅದ್ಯಾಕೋ ಗೊತ್ತಿಲ್ಲ ಹೈದರಾಬಾದ್ ನಂಗೆ ಸಿಕ್ಕಾಪಟ್ಟೆ ಇಷ್ಟವಾಯ್ತು..
ಇದೆಲ್ಲ ಬರೀವಾಗ ನಾನೇ ಹೈದರಾಬಾದ್ಗೆ ಹೋಗಿ ಬಂದಂತಾಯ್ತು... Smiling
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 3:31pm — ಸಂಗನಗೌಡ

ಉ: ಹೈದರಾಬಾದ್

ಸಂಗನಗೌಡ's picture

ಚೆನ್ನನ್ನಿ ಸವಿತ ಅವರಿಗೆ. :-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 9:08am — anil.ramesh

ಉ: ಹೈದರಾಬಾದ್

anil.ramesh's picture

ಮೇಲೆ ಕೊಟ್ಟಿರೋ ಸಂಪೂರ್ಣ ಮಾಹಿತಿ ಸೂಪರ್‍‍... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 10:41am — savithasr

ಉ: ಹೈದರಾಬಾದ್

savithasr's picture

Smiling
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 5:44pm — ಮನಹ್ಪಠಲ

ಉ: ಹೈದರಾಬಾದ್

ಮನಹ್ಪಠಲ's picture

Quote:
ಎರಡು-ಮೂರು ವಾರಗಳ ಮಟ್ಟಿಗೆ ಹೈದರಾಬಾದ್-ಗೆ ಹೋಗಬೇಕಾಗಿ ಬಂದಿದೆ,
ನೀವು ಬರೋ ಸಮಯ ಹೇಳಿದ್ರೆ ಚೆನಾಗಿರ್ತಿತ್ತು. ಹೈದರಾಬಾದನಲ್ಲಿ ಒ೦ದಾ ಎರಡಾ ಬೇಕಾದಶ್ಟು ಸ್ಥಳಗಳಿವೆ, ಕಣ್ಣು ಹಾಯ್ಸೋದಕ್ಕೆ. ನಾನೀಗ ಕೆಲ್ಸದ ಸಲುವಾಗಿ ಕೆನಡಾದಲ್ಲಿದ್ದೇನೆ. ಹೈದರಾಬಾದನಲ್ಲಿ ಕೆಲ್ವೊಬ್ಬ ಕನ್ನಡಿಗ ಸ್ನೇಹಿತರಿದ್ದಾರೆ. ಪರಿಚಯ ಮಾಡ್ಸ್ತೇನೆ ನಿಮಗೆ ಬೇಕಿದ್ರೆ, ಇವರ್ಯಾರೂ ಸ೦ಪದಿರಗರಲ್ಲ. ಒ೦ದು ತಿ೦ಗಳು ಹಿ೦ದೆ ಬನ್ದಿದ್ರೆ ನಾನೆ ನಿಮಗೆ ಹೈದರಾಬಾದನ ಪೂರ ಪರಿಚಯ ಮಾಡ್ಸಿತಿದ್ದೆ. ನಾನಿನ್ನು ಭಾರತಕ್ಕೆ ಬರೋದು ಡಿಸೆ೦ಬರ್ ೫ ರಿ೦ದ ೮ ಕ್ಕೆ ಬರೋ ಕಾರ್ಯ್ಕ್ರಮ.

ನಿಮ್ಮವ
ಕ್ರಿಸ್ನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2008 - 7:26pm — cmariejoseph

ಉ: ಹೈದರಾಬಾದ್

cmariejoseph's picture

ಹೈದರಾಬಾದ್ ನಗರದಲ್ಲಿ ತೆಲುಗು ಮಾತನಾಡುವವರು ಎಷ್ಟು ಮಂದಿ ಇದ್ದಾರೋ ಅಷ್ಟೇ ಕನ್ನಡ ಮಾತನಾಡುವವರೂ ಇದ್ದಾರೆ. ತೆಲುಗು ಗೊತ್ತಿಲ್ಲವೆಂದು ಕತ್ತು ಅಲ್ಲಾಡಿಸದೇ ಕನ್ನಡದಲ್ಲಿ ವ್ಯವಹರಿಸಿದರೆ ಸುಸೂತ್ರವಾಗಿ ಕೆಲಸ ಸಾಗುತ್ತದೆ. ಕನ್ನಡದಲ್ಲಿ ಮಾತನಾಡಿದರೆ ಅಪರಿಚಿತರೆಂದು ಭಾವಿಸದೆ ಅಥವಾ ಅಸಹನೆಯಿಂದ ನೋಡದೇ ಅದೂ ನಮ್ಮದೇ ಭಾಷೆಯೆಂಬಂತೆ ನಡೆದುಕೊಳ್ಳುವುದು ಇಲ್ಲಿನವರ ದೊಡ್ಡಗುಣ.

ಅದು ನಗರಸಾರಿಗೆ ಬಸ್ಸಾಗಿರಬಹುದು, ತರಕಾರಿ ಅಂಗಡಿಯಾಗಿರಬಹುದು, ಹೋಟೆಲಾಗಿರಬಹುದು, ಆಸ್ಪತ್ರೆಯಾಗಿರಬಹುದು ಎಲ್ಲೆಡೆ ಕನ್ನಡ ನಡೆಯುತ್ತೆ. ಬೆಳ್ಳಂಬೆಳಗ್ಗೆಯೇ ಇಲ್ಲಿ ಕನ್ನಡಪ್ರಭ, ಪ್ರಜಾವಾಣಿಗಳು ದೊರೆಯುತ್ತವೆಂದರೆ ಅದು ಸೋಜಿಗದ ಸಂಗತಿಯೇನಲ್ಲ. ಕನ್ನಡಿಗರು ಇಲ್ಲಿ ಶತಮಾನಗಳಿಂದ ನೆಲೆಸಿದ್ದಾರೆ. ಇಲ್ಲಿನ ದೇವಾಲಯಗಳು, ಹೋಟೆಲುಗಳು, ಖಾಸಗಿ ಬಸ್ ಸೇವೆ, ವಿದ್ವತ್ವರ್ಗ ಹಾಗೂ ಅಧಿಕಾರವರ್ಗದಲ್ಲಿ ಮುಕ್ಕಾಲುಪಾಲು ಅಥವಾ ಅದಕ್ಕೂ ಹೆಚ್ಚು ಕನ್ನಡಿಗರೇ ಆಗಿರುವುದರಿಂದಲೂ, ವ್ಯಾಪಾರ ವಾಣಿಜ್ಯ ವಹಿವಾಟುಗಳಲ್ಲಿ ತಲೆಮಾರುಗಳಿಂದಲೂ ಕನ್ನಡಿಗರು ತೊಡಗಿಸಿಕೊಂಡಿರುವುದರಿಂದಲೂ ಈ ಸಾಧ್ಯತೆ ಅತ್ಯಂತ ಸಹಜವಾಗಿದೆ.

ವೀರಶೈವ ಕೇಂದ್ರಗಳಾದ ಬಸವಕಲ್ಯಾಣ ಹಾಗೂ ಶ್ರೀಶೈಲಗಳು ಇಲ್ಲಿಗೆ ಹತ್ತಿರದಲ್ಲೇ ಇವೆ. ಮಾಧ್ವ ಕೇಂದ್ರವಾದ ಮಂತ್ರಾಲಯವೂ ಹತ್ತಿರದಲ್ಲಿದೆ. ಹಲವು ಶತಮಾನಗಳ ಕಾಲ ಹೈದರಾಬಾದ್ ಪ್ರಾಂತ್ಯವು ಮುಸಲ್ಮಾನ ದೊರೆಗಳ ಆಳ್ವಿಕೆಗೆ ಸಿಲುಕಿದ್ದರಿಂದ ಇಲ್ಲಿದ್ದ ಹಿಂದೂಗಳಿಗೆ ಶ್ರೀಶೈಲದ ಮಲ್ಲಿಕಾರ್ಜುನನೂ ಮಂತ್ರಾಲಯದ ರಾಘವೇಂದ್ರಸ್ವಾಮಿಗಳೂ ಅಪ್ಯಾಯಮಾನರಾಗಿದ್ದರು. ಈ ಒಂದು ಕಾರಣದಿಂದಲೇ ತೆಲುಗರಿಗೆ ಕನ್ನಡವು ಅಪರಿಚಿತವಾಗಿ ಕಾಣದೆ ಇರಲು ಸಾಧ್ಯವಾಗಿದೆ ಎನ್ನಬಹುದು. ಇನ್ನು ಹೈದರಾಬಾದಿನ ಜಾನಪದ ದೇವತೆ ಮೈಸಮ್ಮಳು ಕನ್ನಡಿಗರ ಅಧಿದೇವತೆ ಚಾಮುಂಡಿಯೇ ಆಗಿದ್ದಾಳೆ.

ಇಂದಿಗೂ ಹೈದರಾಬಾದ್ ನಗರದ ಹಲವೆಡೆಗಳಲ್ಲಿ ಕನ್ನಡದ ನಾಮಫಲಕಗಳು ರಾಜಾರೋಷವಾಗಿ ಪ್ರದರ್ಶಿತವಾಗಿವೆ. ಕಾಚಿಗುಡವು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶ. ದೇಶಪಾಂಡೆಯವರ ದವಾಖಾನೆ, ರಾಘವೇಂದ್ರಸ್ವಾಮಿಗಳ ಗುಡಿ, ಕನ್ನಡ ಸಾಹಿತ್ಯಮಂದಿರ, ಟೂರಿಸ್ಟ್ ಹೋಟೆಲ್ ಮುಂತಾದವುಗಳ ನಾಮಫಲಕ ಕನ್ನಡದಲ್ಲೇ ಇದೆ. ಕೆಲವೆಡೆಗಳಲ್ಲಿ ಕನ್ನಡದ ಪಠ್ಯವನ್ನೇ ತೆಲುಗು ಲಿಪಿಯಲ್ಲಿ ಪ್ರದರ್ಶಿಸಿದ ಉದಾಹರಣೆಯಿದೆ. ಮತ್ತೂ ಕೆಲವು ಸ್ಥಳನಾಮ ಹೇಳುತ್ತ ಅಂದರೆ ಬೆಂಗಳೂರು ಅಯ್ಯಂಗಾರರ ಬೇಕರಿ, ಮೈಸೂರು ತುಪ್ಪದ ಅಂಗಡಿ ಇತ್ಯಾದಿಯಾಗಿ ಕನ್ನಡದ ಸಂಬಂಧವನ್ನು ಸೂಚಿಸುತ್ತಿವೆ. ಇಲ್ಲಿನ ಟೂರಿಸ್ಟ್ ಹೋಟೆಲಿನ ಸಾಂಬಾರು ವಡೆ, ಶಿವಂ ರಸ್ತೆಯ ಉಡುಪಿ ಹೋಟೆಲಿನ ಊಟ, ಬಡೇಚಾವಡಿಯಲ್ಲಿನ ಬೆಣ್ಣೆದೋಸೆ, ಕೋಠಿಯಲ್ಲಿನ ಮಸಾಲೆದೋಸೆ ಬಾಯಲ್ಲಿ ನೀರೂರಿಸುತ್ತವೆ.

ಹೈದರಾಬಾದಿನಲ್ಲಿ ನೋಡತಕ್ಕ ಸ್ಥಳಗಳು ಹಲವಾರಿವೆ. ಚಾರ್ಮಿನಾರ್ ಬಳಿಯ ಮುತ್ತಿನ ಅಂಗಡಿಗಳ ಸಾಲು ಸಾಲೇ ಇದ್ದು ಕೃತಕವಾಗಿ ಸೃಜಿಸಿದ ವಿವಿಧ ರೀತಿಯ ವಿವಿಧ ಗಾತ್ರದ ಮುತ್ತುಗಳನ್ನು ಕೊಳ್ಳಬಹುದು. ಸಾಲಾರ್ಜಂಗ್ ಮ್ಯೂಸಿಯಂನಲ್ಲಿ ಹೈದರಾಬಾದ್ ಸಂಸ್ಥಾನವನ್ನಾಳಿದ ನಿಜಾಮ್ ಅರಸರ ಅತ್ಯಮೂಲ್ಯ ವಸ್ತುಸಂಗ್ರಹವನ್ನೂ ಅವರ ದಿರಿಸುಗಳನ್ನೂ ಆಭರಣಗಳನ್ನೂ ಈಜಿಪ್ಟಿನ ಮಮ್ಮಿಯನ್ನೂ ಸೈನಿಕರ ಕವಾಯತುಳ್ಳ ದೊಡ್ಡ ಗಡಿಯಾರವನ್ನೂ ನೋಡಬಹುದು. ಹುಸೇನ್ ಸಾಗರದ ನಡುವಿನ ಬುದ್ಧ ಪ್ರತಿಮೆಯು ನಾಗಾರ್ಜುನಸಾಗರ ಅಣೆಕಟ್ಟೆಯಲ್ಲಿ ಮುಳುಗಿಹೋದ ಬುದ್ಧಪ್ರತಿಮೆಯ ಪ್ರತಿರೂಪವಾಗಿದೆ. ಸಂಜೆಯ ತಂಪುಗಾಳಿಯಲ್ಲಿ ಹುಸೇನ್‌ಸಾಗರದ ಕಟ್ಟೆ(tank bund)ಯ ಮೇಲಿನ ವಾಕಿಂಗು ಮುದನೀಡುತ್ತದೆ. ಇವಿಷ್ಟಲ್ಲದೆ ಗೋಲ್ಕೊಂಡ ಕೋಟೆ (ಧ್ವನಿ ಬೆಳಕು ಕಾರ್ಯಕ್ರಮ ತಪ್ಪಿಸ್ಕೋಬಾರ್ದು), ಹದಿನೆಂಟನೇ ಶತಮಾನದ ಚರ್ಚುಗಳು, ಪ್ರಾಣಿಸಂಗ್ರಹಾರಣ್ಯ, ರಾಮೋಜಿ ಫಿಲ್ಮ್ ಸಿಟಿ ಮುಂತಾದವುಗಳನ್ನು ನೋಡಲೇಬೇಕು.

ರಾಮೋಜಿ ಫಿಲಂಸಿಟಿ ನೋಡಲು ಪೂರ್ಣ ಒಂದು ದಿನ ಬೇಕು. APSTDC ಬಸ್ಸಿನಲ್ಲೇ ಹೋದರೆ ಒಳ್ಳೆಯದು. IMAX ಅನ್ನೋದು ನಮ್ಮ ಗರುಡ ಮಾಲ್ ಇದ್ದ ಹಾಗೆ. ಅದರಲ್ಲಿನ ಹಾರರ್‍ ಶೋ ಒಂಥರಾ ಚೆನ್ನಾಗಿರುತ್ತೆ. ಅಲ್ಲಿಂದ ಹೊರಬಂದು ಮೈಸಮ್ಮ ಗುಡಿ ದಾರಿಯಲ್ಲಿ ಸಾಗಿ ಟ್ಯಾಂಕ್ ಬಂಡ್ ಕೆಳಗೆ ಬಂದರೆ ಅಲ್ಲಿದೆ ಸ್ನೋ ವರಲ್ಡ್. ಅಲ್ಲಿ high altitude ವಾತಾವರಣವನ್ನು ಸೃಜಿಸಿರುವುದರಿಂದ ಸಿಯಾಚಿನ್ ಅನುಭವ ಪಡೆಯಬಹುದು.

ನಾನು ಮೊದಲ ಸಲ ಹೈದರಾಬಾದಿಗೆ ಹೋಗಿದ್ದಾಗ ಸಿಕಂದರಾಬಾದ್ ರೈಲುನಿಲ್ದಾಣದ ಎದುರಿಗಿರುವ ಹೋಟೆಲ್ ಸಿತಾರಾದಲ್ಲಿ ತಂಗಿದ್ದೆ. ಮತ್ತೊಮ್ಮೆ ಹೋಗಿದ್ದಾಗ ಕಾಚಿಗುಡದ ಮನೆಯೊಂದರಲ್ಲಿ ಪಿ.ಜಿ. ಆಗಿದ್ದೆ.

>> ಬರೋವಾಗ ಪುಲ್ಲಾ ರೆಡ್ಡಿ ಸ್ವೀಟ್ಸ್ಗೆ ಹೋಗಿ ಸಕ್ಕತ್ ಸ್ವೀಟ್ಸ್ ಸಿಗತ್ತೆ!! ಒಮ್ಮೆ ತಿಂದು ನೋಡಿ ಕೆಜಿಗಟ್ಟಲೆ ತಗೊಂಡು ಬರ್ತೀರಾ<<

ಪುಲ್ಲಾರೆಡ್ಡಿ ನೇತಿಮಿಠಾಯಿಲು, ಚೆನ್ನಾಗಿರುತ್ತಮ್ಮ ಸವೀ. ಆದರೆ ಆಯಾ ದಿನವೇ ತಿಂದು ಮುಗಿಸಬೇಕು. ಶುದ್ಧತುಪ್ಪದ್ದಾದ್ದರಿಂದ ಮರುದಿನಕ್ಕೆ ಶುಷ್ಕವಾಗುತ್ತೆ.

>>ಚಾರ್ಮಿನಾರ್‍ [ಆಜೂ ಬಾಜೂ] ನಿಮ್ಮ ಅಕ್ಕ, ತಂಗಿಗೆ, ಅಮ್ಮಂಗೆ [ಮುತ್ತು ಪೋಣಿಸಿದ] ಬಳೆ ತಗೊಳ್ಳಿ. [ಅದರಬದಿಯಲ್ಲೇ ಇರುವ ದೊಡ್ಡ ಮಸೀದಿಗೆ ಹೋಗಿ ಗುಂಪು ಗುಂಪಾದ ಪಾರಿವಾಳಗಳಿಗೆ ಒಂದಷ್ಟು ಕಾಳು ಹಾಕಿ]

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 9:44pm — ಗಣೇಶ

ಉ: ಹೈದರಾಬಾದ್

ಗಣೇಶ's picture

ಮರಿಜೋಸೆಫ್‌ರಿಗೆ ನನ್ನಿ,

ಹೈದರಾಬಾದ್‌ನ ಕೋನೆ ಕೋನೆ ಬಿಡದೆ ವಿವರಿಸಿದ್ದೀರಿ. ಸವಿತಾ ಅವರು ಸಹ.
ಹೈದರಾಬಾದ್ ನೋಡದವರು ಈ ರಜೆಯಲ್ಲಿ ಹೈದರಾಬಾದ್ ಟೂರ್ ಇಟ್ಟುಕೊಂಡಾರು.
ಅರೆಬರೆ ನೋಡಿ ಪ್ರತಿಕ್ರಿಯೆ ನೀಡಿದ ನಾನೂ ಸಹ.

ಮರಿಜೋಸೆಫ್,ಸವಿತಾ, ಸಂಗನಗೌಡರಿಗೆ ನನ್ನಿ.

ಸಂಗನಗೌಡರೆ, ಬರುವಾಗ ಒಂದು ಕೆ.ಜಿ. ಪುಲ್ಲಾರೆಡ್ಡಿ ನೇತಿ ಮಿಠಾಯಿಲು ಮರಿಬೇಡಿ.. Smiling
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 8:36am — savithasr

ಉ: ಹೈದರಾಬಾದ್

savithasr's picture

ಧನ್ಯವಾದಗಳು ಗಣೇಶ,
ಬೇಸಿಗೆ ರಜೆಯಲ್ಲಿ ಮಾತ್ರ ಹೋಗ್ಬೇಡಿ....ರೋಸ್ಟ್ ಆಗ್ಬಿಡ್ತೀರ Smiling!!!
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 2:15pm — ಸಂಗನಗೌಡ

ಉ: ಹೈದರಾಬಾದ್

ಸಂಗನಗೌಡ's picture

ನನ್ನಿ ಜೋಸೆಫ್,

Quote:
ತೆಲುಗು ಗೊತ್ತಿಲ್ಲವೆಂದು ಕತ್ತು ಅಲ್ಲಾಡಿಸದೇ ಕನ್ನಡದಲ್ಲಿ ವ್ಯವಹರಿಸಿದರೆ ಸುಸೂತ್ರವಾಗಿ ಕೆಲಸ ಸಾಗುತ್ತದೆ

Smiling... ಇರಲಿ...
...ರಾಮೋಜಿರಾವ್ ಫಿಲ್ಮ್ ಸಿಟಿಗೆ, ಒಂದು ದಿನ ತೆಗೆದಿರಿಸಿದರೆ ಒಳ್ಳೇದು ಅನ್ನಿ, ನನ್ನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 2:54pm — mahesha

ಉ: ಹೈದರಾಬಾದ್

mahesha's picture

ಹು...

ಕರೆಕ್ಟು...

ಹಯಿದರಾಬಾದಿನ ಸಿಟಿಬಸ್ ನಿಲ್ದಾಣದಲ್ಲಿ ನಾನು ಜ್ಯೂಸುಕುಡಿಯಲು ಬಸವಣ್ಣರ ಪಟವಿದ್ದ ಅಂಗಡಿಗೆ ವೋಗಿ ಕನ್ನಡದಲ್ಲೇ ಮಾಜಾ ಕೊಡಿ, ಎಶ್ಟು ಎಂದು ಮಾತಾಡಿದ್ದೆ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಜೋಕ್ಸ (??????)
  • ಏಳಾಯ್ತು...ವರುಷ ಏಳಾಯ್ತು
  • ಕರ್ನಾಟಕ ಕ್ರಿಕೆಟ್ - ೪
  • ತಾಯಿ.
  • ಇ-ಲೈಫ್!!
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator