ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
canon sx100 ಮಸ್ತ್ ಕೆಮರಾ, 1ox ಜೂಮ್ ಉಳ್ಳದ್ದು, ದೂರದಲ್ಲಿರುವ, ಕಣ್ಣಿಗೆ ಕಾಣದ ಅಕ್ಕರಗಳನ್ನು ಕೂಡ ಓದಬಹುದು ಇದರಿಂದ ಜೂಮ್ ಮಾಡಿ. ಇದು ನನ್ನ ಮೊತ್ತ ಮೊದಲ ಡಿಜಿಟಲ್ ಕೆಮರಾ, ತುಂಬ ಒಳ್ಳೆ ಪಾಪೆಗಳು ಮೂಡುತ್ತವೆ, SLR ಕೆಮೆರಾಗಳ ಮುಂದೆಲ್ಲ ಇದು ಬಚ್ಚಾ ಅಂತ ಗೊತ್ತು. photography ಅನ್ನುವದು, ಪದಗಳಲ್ಲಿ ಅಸ್ಟೇ ಗೊತ್ತಿರುವ ನನ್ನಂತವರಿಗೆ, ಅದೂ ಕೂಡ ಏನೆಲ್ಲ ಸೊಂತಿಕೆಗಳನ್ನು ಬಯಸುತ್ತೆ ಅಂತ ತಿಳಿಯೋಕೆ ಬಲ್ ಅನುಕೂಲ ಇದು. ನಮಗೆ ಸಿಗುವ ನೋಟ, ಬರೀ ಒಂದೇ ಒಂದು ಅರೆಗಳಿಗೆಯದು, ಮುಂದಿನ ಅರೆಗಳಿಗೆಯಲ್ಲಿ ಅದು ಇರುವದಿಲ್ಲ.
ಮೊನ್ನೆ ಇದರಿಂದಾಗಿ ಒಂದು ಸಂಗತಿ ತಿಳಿಯಿತು, ಇರುಳಲ್ಲಿ, ದೂರದ ಜಂಗಮ ದಿನಿಸು(moving object
), ಕೆಮೆರಾದ flash ಮುಚ್ಚಿದ್ದರೆ, ಕೆಮೆರಾದಲ್ಲಿ ಅದನ್ನು ಸೆರೆ ಹಿಡಿಯುವದು ಬಲ್ ತ್ರಾಸು ಅಂತ. ಪಾಪೆ ಬ್ಲರ್ ಬರುತ್ತೆ. ಆದರೆ ಪಾಪೆ ಹಿಡಿಯುವವರ ಕೈ ಚಳಕದಿಂದ, ಮೂಡುವ ಆ ಬ್ಲರ್ ಕೂಡ ಪಾಸಿಟಿವ್ ಆಗಿ, ಮಾಮೂಲಿಗಿಂತ ಒಳ್ಳೆ ಪಾಪೆ ನೀಡಬಲ್ಲುದು.
ಕೆಳಗಿನ ಪಾಪೆ ಅದಕ್ಕೆ ಒಳ್ಳೆಯ ಮಾದರಿ.

- ಸಂಗನಗೌಡ ರವರ ಬ್ಲಾಗ್
- Login or register to post comments
- 203 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
shutter speed ಹೆಚ್ಚಿದ್ರೆ moving objectಗಳನ್ನು ಬ್ಲರ್ ಬಾರದಂತೆ ಸೆರೆ ಹಿಡಿಯಬಹುದು.
ಹಾಗೆಯೇ, ಇರುಳಲ್ಲಿ ಅಪೆರ್ಚರ್ ಕಡಿಮೆ ಇದ್ದು ಅಯ್.ಎಸ್.ಓ ಹೆಚ್ಚಿದ್ದರೇ ಒಳ್ಲೇಯದು. ಅಪರ್ಚರ್ ಕಡಿಮೆ ಇದ್ರೆ ಹೆಚ್ಚು ಬೆಳಕನ್ನು ಒಳಗೆ ಬಿಡುತ್ತದೆ. ಅಯ್. ಎಸ್. ಓ ಹೆಚ್ಚಿದ್ದರೇ ಕ್ಯಾಮ್ರಾದ ಸೆನ್ಸರ್ ಬೆಳಕಿಗೆ ಹೆಚ್ಚು ಸೆನ್ಸಿಟಿವ್ ಆಗುತ್ತಂತೆ. ಶಟರ್ ಸ್ಪೀಡ್, ಅಯ್.ಎಸ್.ಓ ಮತ್ತು ಅಪರ್ಚರ್ಗಳನ್ನು ಪ್ರಯೋಗ ಮಾಡಿ ಒಂದು ಒಳ್ಳೆ ಕಾಂಬಿನೇಷನ್ ಸೆಟ್ ಮಾಡ್ಕೊಂಡ್ರೆ ಸಕ್ಕತ್ತಾಗಿರೋ ಪೋಟೊಗಳನ್ನು ತೆಗೆಯ ಬಹುದು.
ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
ನನ್ನಿ ಸಂದೀಪ್... ನೀವು ಹೇಳಿದಂತೆ ಮಾಡಿ ನೋಡುವೆ...