ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಶಾಯರಿ
ಮನ್ಯಾಗ್ ಎಷ್ಟು ದೀಪ ಇದ್ದರೇನು
ದೇವರ ಮುಂದಿನ ದೀಪಾನೆ ಬೇರೆ
ಮನ್ಯಾಗ್ ಎಷ್ಟು ದೀಪ ಇದ್ದರೇನು
ದೇವರ ಮುಂದಿನ ದೀಪಾನೆ ಬೇರೆ
ಕಣ್ಣ್ ಮುಂದೆ ಎಷ್ಟು ಹುಡ್ಗೀರಿದ್ರೆ ಏನು
ಎದೆ ಗೂಡಲ್ಲಿರುವ ಹುಡ್ಗೀನೆ ಬೇರೆ

- ಸಂಗನಗೌಡ ರವರ ಬ್ಲಾಗ್
- Login or register to post comments
- 321 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಶಾಯರಿ
ವಾಹಾಃ ವಾಹಾಃ! ಬಹಳ ಚೆನ್ನಾಗಿ ಬರೆದೀರಿ.
ಸವಿತ
ಉ: ಶಾಯರಿ
ವ್ಹಾ ವ್ಹಾ ವ್ಹಾ ವ್ಹಾ ಚೆನ್ನಾಗಿದೆ...
ಕಣ್ಣ್ ಮುಂದೆ ಎಷ್ಟು ಹುಡ್ಗೀರಿದ್ರೆ ಏನು
ಎದೆ ಗೂಡಲ್ಲಿರುವ ಹುಡ್ಗೀನೆ ಬೇರೆ
ಈ ಸಾಲುಗಳು ನನಗೆ ತುಂಬಾ ಇಷ್ಟವಾಯಿತು...
ಅನಿಲ್ ರಮೇಶ್.
ಉ: ಶಾಯರಿ
ಹೆ ಹೆ
ಎದೆಗೂಡಲ್ಲಿ ಎಶ್ಟು ಹುಡ್ಗೀರ್ ಇದ್ರೇನು
ಎದೆಗೂಡಲ್ಲಿ ಎಶ್ಟು ಹುಡ್ಗೀರ್ ಇದ್ರೇನು
ಜೊತೆಗೆ ಇರೋ ಹುಡ್ಗೀನೇ ಬ್ಯಾರೇ!
ಉ: ಶಾಯರಿ
nice one!!!
ಉ: ಶಾಯರಿ
ಮರುನುಡಿದ ಎಲ್ಲರಿಗೂ ನನ್ನಿ...
ಬದುಕಲ್ಲಿ ಹುರುಪಿನಿಂದಿರುವ.
ಉ: ಶಾಯರಿ
ವಾ, ವ್ಹಾ ಸಂಗನಗೌಡ್ರೇ ಮಸ್ತ್ ಬರ್ದೀರಿ.
ನಿಮ್ಮ ಶಾಯರಿ ನನಗೆ ವಿ.ಜಿ. ಭಟ್ಟ ಅವರ ಕವಿತೆ ’ಭಟ್ಟಿ ಇಳಿಸಿದ ಪ್ರೇಮ’ ನೆನಪಿಸಿತು. ಅದನ್ನು ಇಲ್ಲಿ ಬರೆದರೆ ಪ್ರಸ್ತುವಾದೀತೇನೋ.
ವಿ.ಜಿ. ಭಟ್ಟ ಬರೆದಿದ್ದು:
ಸೂಳೆ ದೇಹದಲಿ ಸೋಸಿ ಹೋಯ್ತೋ
ಅವನ ಕೆಟ್ಟ ಕಾಮ
ಮಡದಿಗಾಗಿ ತಂದ ಭಟ್ಟಿ ಇಳಿ-
ಸಿರುವ ಶುದ್ಧ ಪ್ರೇಮ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಶಾಯರಿ
ಪಲ್ಲವಿ ಅವರೇ, ಶುದ್ಧ, ಸ್ವಚ್ಛ, ಚೆಂದನೆ ಪ್ರೇಮ ಇರುವಲ್ಲಿ, ಕಾಮಕ್ಕೆ ಎಡೆ ಎಲ್ಲಿ? ಮನಸ್ಸಿನ ತುಂಬ ಪ್ರೇಮಮಯಿ ಮಡದಿಯ ಮೊಗವೇ ತುಂಬಿಕೊಂಡಾಗ, ಬೇರಾವ ಹೆಣ್ಣಿನೆಡೆಗೂ ಆ ಭಾವನೆ ಮೂಡುವದಿಲ್ಲ,. ಈ ಶಾಯರಿ ಹೇಳುವದೂ ಅದನ್ನೇ,..
"ಕಣ್ಣ ಮುಂದೆ ಎಸ್ಟು ಹುಡುಗಿಯರಿದ್ದರೂ
ಎದೆ ಗೂಡಲ್ಲಿರುವ ಹುಡುಗಿಯೇ ಬೇರೆ"
ಇದರ ಅರ್ಥ, ಮನಸ್ಸು ಒಬ್ಬಳಲ್ಲೇ ಅನುರಕ್ತವಾದಾಗ ಬರುವ ಭಾವನೆ.
ಅವನ ಕೆಟ್ಟ ಕಾಮ
ಈ ಸಾಲು ಇಸ್ಟ ಆಗಲಿಲ್ಲ, ಹೆಣ್ಣನ್ನು ಗೌರವದಿಂದ ಕಾಣುವವರಿಗೆ ಇಂತವು ಇಸ್ಟ ಆಗುವದಿಲ್ಲ ಪಲ್ಲವಿ ಅವರೇ.
ಉ: ಶಾಯರಿ
ಸಂಗನಗೌಡ್ರೇ, ಅದನ್ನು ಬರೆದಿದ್ದು ತೀರಾ ಹಳಬರಾದ ವಿ.ಜಿ. ಭಟ್ಟ ಎನ್ನುವ ಕವಿ. ಶುದ್ಧ ಪ್ರೇಮದ ಮುಂದೆ ಇವೆಲ್ಲಾ ಭಾವನೆಗಳು ಬರುವುದಿಲ್ಲ ಎಂಬ ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ, ಆ ಕವಿತೆ ಬಳಸಿದ್ದು ಬದುಕಿನ ಇನ್ನೊಂದು ಮಗ್ಗಲನ್ನು ತೋರಿಸುವುದಕ್ಕೇ ಹೊರತು ನಿಮ್ಮ ಭಾವನೆಗಳನ್ನು ಗೇಲಿ ಮಾಡಲು ಅಲ್ಲ. ಇಂತಹ ಪ್ರಸ್ತಾಪಗಳು ನಮ್ಮ ಮಹಾಕಾವ್ಯಗಳಲ್ಲೇ ಇವೆ.
ನೋವಾಗಿದ್ದರೆ ಕ್ಷಮಿಸಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಶಾಯರಿ
ಹೋಗಲಿ ಬಿಡಿ
)
ನನ್ನಿ, ವಿ.ಜಿ.ಭಟ್ಟರ ಬಗ್ಗೆ ತಿಳಿಸಿದ್ದಕ್ಕೆ, ನಂಗೊತ್ತಿರಲಿಲ್ಲ.
ಉ: ಶಾಯರಿ
ನಾನಾದರೂ ಅವರ ಒಂದೆರಡು ಕವಿತೆಗಳನ್ನು ಮಾತ್ರ ಓದಿದ್ದೇನೆ. ಅವರ ಬಗ್ಗೆ ಗಂಭೀರವಾಗಿ ಎಲ್ಲೂ ಪ್ರಸ್ತಾಪವಾದಂತಿಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...