ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.

ಹೊಗಳುವದಿಲ್ಲ ನಾ ನಿನ್ನ,
ಕೇಳು ಒಮ್ಮೆ ಈ ಸಲಹೆಯನ್ನ.
ಹೂದೋಟದಲಿ ಎಂದೂ
ಸುಳಿಯದಿರು ಹುಡುಗಿ,
ಮುತ್ತೀತು ದುಂಬಿ, ತುಟಿಯ,
ಹೂವೆಂದು ಬಗೆದು.
ಹೊಗಳುವದಿಲ್ಲ ನಾ ನಿನ್ನ,
ಕೇಳು ಒಮ್ಮೆ ಈ ಸಲಹೆಯನ್ನ.
ನೆಟ್ಟಿರುಳಲಿ ಎಂದೂ,
ಹೊರಗೆ ಬರದಿರು ಹುಡುಗಿ,
ಕೂಗೀತು ಕೋಳಿ, ಹೊಂಬಣ್ಣವ,
ಹೊಂಬೆಳಕೆಂದು ಬಗೆದು.
ಹೊಗಳುವದಿಲ್ಲ ನಾ ನಿನ್ನ,
ಕೇಳು ಒಮ್ಮೆ ಈ ಸಲಹೆಯನ್ನ.
ಮಾವಿನ ಮರದಡಿ ಎಂದೂ,
ನಿಲ್ಲದಿರು ಹುಡುಗಿ,
ಕಚ್ಚೀತು ಗಿಳಿ, ಗಲ್ಲವ,
ಮಾವೆಂದು ಬಗೆದು.
ಹೊಗಳುವದಿಲ್ಲ ನಾ ನಿನ್ನ,
ಕೇಳು ಒಮ್ಮೆ ಈ ಸಲಹೆಯನ್ನ.
ಕೊಳದೊಳು ಎಂದೂ
ಈಸಲಿಳಿಯದಿರು ಹುಡುಗಿ,
ನುಗ್ಗೀತು ಮೀನ್ಚುಳ್ಳಿ, ಕಂಗಳ,
ಮೀನ್ಗಳೆಂದು ಬಗೆದು.

- ಸಂಗನಗೌಡ ರವರ ಬ್ಲಾಗ್
- Login or register to post comments
- 546 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಬರೀ ವಿರಹದ ಹಾಡುಗಳನ್ನೇ ಬರೆಯುತ್ತೇನೆ ನಾನು, ಅನ್ನುವವರಿಗೆ.
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
tumba chennagide...
-Vರ ( Venkatesha ರಂಗಯ್ಯ )
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ನನ್ನಿ ವೆಂಕಿ. :-)
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
"ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತೀ...." ನಿಮ್ಮ ಕವನಕ್ಕೆ ಸ್ಪೂರ್ತಿಯೋ ಗೌಡರೆ?
-ಸವಿತ
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಬರೆದ ಮೇಲೆ ಅನಿಸಿತು, ಹೌದಲ್ಲ!!, ಆ ಹಾಡಿನ ತಿರುಳೂ ಹಿಂಗೇ ಇದೆ ಅಂತ.
ನನ್ನಿ ಸವಿತ. :-)
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಹೊಗಳೋದಿಲ್ಲ ಅಂತ ಹೇಳಿ ವರ್ಣಿಸುತ್ತಿದ್ದೀರ ...

ಸಲಹೆ ಅಂತ ಹೇಳಿ ಮನದಾಳದ ಕಾಳಜಿಯನ್ನ ತೋರಿಸುತ್ತಿದ್ದೀರ...
ಚೆನ್ನಾಗಿದೆ ಗೌಡರೆ.
-ಸವಿತ
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
:D...
ಕಂಡು ಹಿಡಿದಿರಲ್ಲ..!!..
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಬಹಳ ಸೊಗಸಾಗಿದೆ ಸಂಗನ.

ಈ ತರಹದ ಕವನ ಬರೆಯಲು ಸ್ಫೂರ್ತಿ ಯಾರೆಂದು ಹೇಳುವಂತವರಾಗಿ?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ನನ್ನಿ, ರಮೇಶ್, ಆ ಚಿತ್ತಾರದಲ್ಲಿನ ಹುಡುಗಿ..
:-)
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಸಕ್ಕತ್,
ಸಂಗನ, ಮರೆತುಬಿಟ್ಟ್ರಾ? ನನ್ನ ಹೆಸರು ಅನಿಲ್...
ರಮೇಶ್, ನನ್ನ ತಂದೆಯವರ ಹೆಸರು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಓ!!, ಹೌದಲ್ಲವೇ,
ನಮ್ಮೂರ್ ಕಡೆ ಎರಡನೇ ಹೆಸರಿಂದ ಕರಿಯೋ ರೂಡಿ, ಗೆಳೆಯರ ಗುಂಪಲ್ಲಿ, ಮನೆತನದ ಹೆಸರುಗಳಿಂದಲೇ ಕರೆದು ರೂಡಿ..
ಹಾಗಾಗಿ ಸಣ್ಣ ತಪ್ಪು ಅನೀಲ್...
ಮನ್ನಿಸಿ.. :-)
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಚಿಂತಿಸಬೇಡಿ...
[ಹೇಳಿ ಇದು ಯಾವ ಚಲನಚಿತ್ರದ ಡೈಲಾಗ್?]
"ದೊಡ್ಡ ದೊಡ್ಡ ದೇಶದಲ್ಲಿ ಇಂಥ ಸಣ್ಣ ಪುಟ್ಟ ತಪ್ಪುಗಳು ನಡೆಯುತ್ತಿರುತ್ತವೆ"...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಗೌಡರೇ, ಚೆನ್ನಿದೆ!
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ನಲಿವು, ನನ್ನಿ :-)
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಗೌಡ್ರೇ, ಮೇಲಿನ ಚಿತ್ರ ಸಿಕ್ಕ ಮೇಲೆ ಕವನ ಬರದಿದ್ದಾ?? ಹೌದು ಅನ್ಸುತ್ತೆ....
ನನ್ನ ಕಂಗಳ
ಹಾಗೆ ದಿಟ್ಟಿಸಬೇಡ ಗೆಳತಿ
ನನ್ನಾಕಿಯಾಗೆಂದು
ಬರಸೆಳೆದು ಬಿಟ್ಟೇನು...
-Yogi
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಸರಳ ಸುಂದರ ಕವನ... ತುಂಬಾ ಚೆನ್ನಾಗಿದೆ.
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ..... ನೆನಪಾಯಿತು.
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಕವನ ಇಷ್ಟವಾಯಿತು.
ಮಿಂಚುಳ್ಳಿ ಅಂದರೇನು?
*ಅಶೋಕ್
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಮಿಂಚುಳ್ಳಿ - king fisher (ಸಮಯ ಇದ್ದಾಗ ಇದು ಓದಿ ...: http://www.sampada.net/blog/srinivasps/04/08/2008/10565)
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ನಿಮ್ಮ ಬರ್ಡ್ ವಾಚಿಂಗ್ ಬರಹ ಓದಿದ್ದೆ. ಚೆನ್ನಾಗಿದೆ- ಮರೆತಿತ್ತು.
ನನಿ.
*ಅಶೋಕ್
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ನನ್ನಿ
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಗೌಡ್ರೇ ಮಸ್ತಾಗಿ ಬರೆದಿದ್ದಿರಿ. ಹೀಗೆ ಬರೆಯುತ್ತಾ ಇರಿ...
ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಸಂಗನಗೌಡರೆ,
ಚೆನ್ನಾಗಿದೇರೀ ! ನೀವೊಳ್ಳೆ ಚಿತ್ರಗೀತೆಗಳನ್ನ ಬರೀಬಹುದು
ಯಾರಾದ್ರೂ ಮ್ಯೂಸಿಕ್ ಡೈರೆಕ್ಟರ್ ಗಳ ಸ್ನೇಹ ಬೆಳೆಸಿ
:)
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಯೋಗಿ, ಪೂರ್ಣಿಮ,ಅಶೋಕ್,ಸುನೀಲ್,ಹಂಸಾನಂದಿಯವರೇ, ನಿಮಗೆಲ್ಲರಿಗೂ ನನ್ನಿ.
ಹಂಸಾನಂದಿಗಳೇ, ಕೇಳುತ್ತಿದ್ದೇನೆ ನಿಮ್ಮ ಈ ಸಲಹೆಯನ್ನ,
ಇಲ್ಲೇ ಕೆಲವು ಮ್ಯೂಸಿಕ್ ಡೈರೆಕ್ಟರಗಳು ಇದಾರೆ, ನೋಡೋಣ.. :)
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಇದು ವಿರಹದ ಹಾಡೇ!
ಯಾಕೆಂದರೆ ನಿಮ್ಮ ಬಳಿ ನಿಮ್ ಹುಡುಗಿ ಇದ್ದಿದ್ರೆ ದುಂಬಿ, ಕೋಳಿ, ಗಿಣಿ ಮತ್ತು ಮೀನು ಏನೇನು ಮಾಡುತ್ತೆ ಅಂದಿದ್ರೋ ಅದನ್ನ ಸಂಗನಗವ್ಡರು ಮಾಡ್ತಿದ್ದರು
ಈಗ ಅದಲ್ಲೆ ಮಾಡಕ್ಕಾಗ್ತಾ ಇಲ್ಲ.. ಅದೇ ಇರಅ!
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಕಾಕಾ, ಮಸ್ತ್ ಐತಿ....
ವಿನಾಯಕ ಮುತಾಲಿಕ ದೇಸಾಯಿ
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
thanksಅಣ್ಣೋ :-) ಮಕ್ಕಳು-ಮರಿ ಆರಾಮಾ? :D
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಅಗದಿ ಖತರ್ನಾಕ್ ಬರದಿರಲ್ರಿ ಗೌಡ್ರೆ,,
ಬಾಳ ಖುಷಿ ಆತು ಇದನ್ನ ಓದಿ,,ಹಿಂಗಾ ಬರಕೊಂತಾ ಇರ್ರಿ,,
-
ವಸಂತ
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಬರಿನು ತುಗೋರಿ, ಹುರುಪು ತುಂಬೋ ನೀವು ಮತ್ತೆ ಅಂತ ಚೆಲುವಂತಿಯರು ಇರೋವಾಗ, ಬರಿಯಾಕ್ ಏನೈತಿ..

ಹುಡುಗರ ಚೆಲುವಿನ ಬಗ್ಗೆ ಯಾಕೆ ಹುಡುಗಿಯರು ಅಸ್ಟೊಂದ್ ಬರಿಯೋದಿಲ್ಲ?..
ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಸಂಗನ ಗೌಡರೇ,
ಕವನ ಬಹಳ ಚೆನ್ನಾಗಿದೆ. ನನಗೆ ರಫಿ ಹಾಡಿರುವ 'ತೇರಿ ಪ್ಯಾರಿ ಪ್ಯಾರಿ ಸೂರತ್ ಕೋ ಕಿಸೀ ಕಿ ನಜರ್ ನ ಲಗೇ" ಹಾಡು ನೆನಪಿಗೆ ಬಂತು.
http://www.youtube.com/watch?v=CZnKuXO0oAk&feature=related
"ಹುಡುಗರ ಚೆಲುವಿನ ಬಗ್ಗೆ ಯಾಕೆ ಹುಡುಗಿಯರು ಅಸ್ಟೊಂದ್ ಬರಿಯೋದಿಲ್ಲ?.. "
ಹುಡುಗರು ಹಾಗೇ ಬಿದ್ದುಬಿಡ್ತಾರೆ, ಕವನ ಕಟ್ಟಿ ಗೆಲ್ಲಬೇಕಾಗಿಲ್ಲವೇನೋ
ತಮಾಷೆಗೆ ಹೇಳಿದೆ, ಆದರೂ ಪ್ರಪಂಚದ ಯಾವುದೇ ಭಾಷೆ ಸಾಹಿತ್ಯ ತೆಗೆದು ನೋಡಿದರೂ ಗಂಡು ಹೆಣ್ಣನ್ನು ವರ್ಣಿಸಿರುವುದೇ ಹೆಚ್ಚು!
ಶಾಮಲ