ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

June 28, 2008 - 8:51pm — ವೈಭವ

ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ.

ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ. ಒಕ್ಕಲಿಗರು, ಲಿಂಗಾಯಿತರು, ಉಪ್ಪಾಲಿಗರು, ಕುರುಬರು,ಹಾಲುಮತದವರು ಮತ್ತು ದಲಿತರು ಹೀಗೆ ಎಲ್ಲ ಜಾತಿಗಳ ಜನರು ಈ ಮಾದಪ್ಪನ ಒಕ್ಕಲು. ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ,ಕೊಳ್ಳೆಗಾಲ, ಹನೂರುಗಾಣೆ ಹೋಗಿ ಮಲಯ್ ಮಾದಪ್ಪನ ಬೆಟ್ಟವನ್ನ ತಲುಪಬಹುದು. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡಿಗರು 'ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎನ್ನುವುದು ಅಕ್ಕರಕ್ಕರವೂ ದಿಟ ಅನ್ನುವುದು ಮಾದಪ್ಪನ ಮೇಲೆ ಕಟ್ಟಿರುವ ಜನಪದ ಹಾಡುಗಳು(ಕಂಸಾಳೆ ಹಾಡುಗಳು) ಕೇಳಿದರೆ ನಮಗೆ ಅರಿವಾಗುತ್ತದೆ. ಯಾಕಂದ್ರೆ ಈ ಪದಗಳನ್ನು ಕಟ್ಟಿರುವವರು ಹೆಚ್ಚೇನು ಓದಿದವರಲ್ಲ ಅತವ ಬೇರೆ ಹಳೆಗನ್ನಡ/ನಡುಗನ್ನಡ ಕಬ್ಬಿಗರಂತೆ ಸಕ್ಕದ, ಪಾಗದಗಳನ್ನು ಕಲಿತವರೂ ಅಲ್ಲ. ಹಾಗಾಗಿ ಈ ಜನಪದ ಹಾಡುಗಳಲ್ಲಿ ನಮಗೆ ದಿಟವಾದ ಕನ್ನಡದ ಸೊಗಡು ಕಾಣಲು ಸಿಗ್ತದೆ.

ಡಾ. ಕೇಶವನ್ ಪ್ರಸಾದ್ ಎಂಬುವರು ಸಂಪಾದಿಸಿರುವ 'ಮಲಯ್ ಮಾದೇಶ್ವರ'ಎಂಬ ಹೊತ್ತಿಗೆಯ ಮುನ್ನುಡಿಯಲ್ಲಿ ಡಾ.ಚಂದ್ರಶೇಕರ ಕಂಬಾರರು
 "ಮಾದೇಶ್ವರ ಕಾವ್ಯವನ್ನು ಬುಡಕಟ್ಟು ಕಬ್ಬಕ್ಕೆ ಸೇರಿಸಿ ಅದರಿಂದ ಕನ್ನಡ ನಡಾವಳಿ/ಸಂಸ್ಕ್ರುತಿಯನ್ನು ಹುಡುಕುವ ಕೆಲಸಕ್ಕೆ ನಾವು ಕಯ್ ಹಾಕಿದ್ದೇವೆ. ಕಾಡು ಮತ್ತು ನಾಡಿನ ಹತ್ತಾರು ಜನವರ್ಗಗಳು ಪೂಜಿಸುವ ದೇವರು ಮತ್ತು ಆ ದೇವರ ಮೇಲೆ ಕಟ್ಟಿರುವ ಪದಗಳು ನೂರಾರು. ಇದುವರಗೆ ಕಡೆಣಿಕೆಗೆ ಗುರಿಯಾದ ಈ ಬುಡಕಟ್ಟಿನ ಸಂಸ್ಕ್ರುತಿ ಕೂಡ ಸಿರಿವಂತ ಎಂಬುದನ್ನು, ಮತ್ತು ಅದು ನಮ್ಮ ಹಿರಿಯರ ನುಡಿಯನ್ನು,ಅರಿವನ್ನು ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂಬುದನ್ನು ನಾವು ತಿಳಿಯುತ್ತೇವೆ." ಎಂದಿದ್ದಾರೆ.

ಇದು 'ಪಿನ್ ಲಾಂಡಿನ ಬಾಯಿಗಬ್ಬದಶ್ಟೆ ದೊಡ್ಡದು' ಎಂಬುದು ಹಾ.ಮಾ.ನಾಯಕರ ಮಾತು. " ಈ ಹಿರಿಗಬ್ಬದಲ್ಲಿ ಬರುವ ಒಳ್ಳೆ ವಿಶಯಗಳು ಎಲ್ಲ ಕಾಲಕ್ಕೂ ಒಪ್ಪುವಂತದು ಹಾಗು ಅಲ್ಲಿನ ಪರಿಸರದ ಬಗ್ಗೆ ಅರಿವು, ಸಾಮಾಜಿಕ ತಿಳುವಳಿಕೆ ಹಾಗು ಮನಸ್ಸಿನ ಹರಹುಗಳು ಇಂದಿಗೂ ಒಪ್ಪುವಂತವು. ಓರ್ವ, ಕೆಟ್ಟ ವೆವಸ್ತೆಯನ್ನು ಇದಿರಿಸಿ ಒಟ್ಟಾರೆ ಸಾಮಾಜಿಕ ಅರಿವನ್ನು ತೋರಿಸಿ ವಸ್ತು-ಸ್ತಿತಿಯ ಅರಿವುಂಟು ಮಾಡುತ್ತಾನೆ' ಎನ್ನುತ್ತಾರೆ ಕೇಶವನ್ ಪ್ರಸಾದ್ ಅವರು.

ಇಲ್ಲಿ ಇನ್ನೊಂದು ಮುಕ್ಯವಾದ ಅಂಶ. ಮಾದೇಶ್ವರ, ಜುಂಜಪ್ಪ, ಮಯ್ಲಾರ ಮತ್ತು ಮಂಟೇಸಾಮಿಯಂತ ಶರಣರು ಕೆಳವರ್ಗದವರ ಇರುವಿಕೆಯನ್ನು ಮತ್ತೆ ಬಲಪಡಿಸುವ ಮತ್ತು ತಮ್ಮದೇ ಆದ ಸಂಸ್ಕ್ರುತಿಯನ್ನು ಕಟ್ಟುವ ಉದ್ದೇಶ ಇವರದಾಗಿತ್ತು ಅನ್ನಿಸ್ತದೆ. ಬೇಡರು, ಕಾಡು ಕುರುಬರು, ಸೋಲಿಗರೆಂಬ ಬುಡಕಟ್ಟು ಮಂದಿಯೆ ಮಾದಪ್ಪನ ಸೇವಕರು. ಅವರ ಉದ್ದೇಶಕ್ಕೆ ದುಡಿದವ ಮಾದೇಶ್ವರ.ಮಲಯ್ ಮಾದೇಶ್ವರ ನ ಮೇಲೆ ಕಟ್ಟಿರುವ ಪದಗಳನ್ನೆಲ್ಲ ಕೂಡಿಸಿದರೆ ಅದು ರಾಮಾಯಣ, ಮಾಬಾರತದಂತೆ ಒಂದು ಹಿರಿಗಬ್ಬ ಎನಿಸಿಕೊಳ್ಳುವದರಲ್ಲಿ ಎರಡು ಮಾತಿಲ್ಲ. ಅದನ್ನು oral epic ಎಂದೇ ಅರಯ್ಯುಗಾರರು ಹೇಳುತ್ತಾರೆ.

ಇನ್ನೊಂದು ನಿಬ್ಬರದ ಸಂಗತಿಯಂದರೆ ಈ ಮಾದಪ್ಪನ ಬೆಟ್ಟಕ್ಕೆ ಗಡಿಯಲ್ಲಿರುವ ತಮಿಳುನಾಡಿನ ಮಂದಿಯೂ ಬರುತ್ತಾರೆ. ಆದರೆ ತಮಿಳಿನಲ್ಲಿ ಮಾದಪ್ಪನ ಬಗ್ಗೆ ಪದಗಳು/ಕಬ್ಬಗಳು ಸಿಕ್ಕಿರುವುದು ತೀರ ಕಡಿಮೆ. ಹಾಗಾದರೆ ಮಾದಪ್ಪನ ಬೆಟ್ಟಕ್ಕೆ ಈಗಲು ತಮಿಳುನಾಡಿನಿಂದ ಬರುವವರು ಒಂದಾನೊಂದು ಕಾಲದಲ್ಲಿ ಕನ್ನಡದವರೇ ಆಗಿರಬೇಕು. ಹಾಗಾಗಿ ಕನ್ನಡ ಜನರು ಮತ್ತು ಕನ್ನಡ ನಾಡು ಕಾವೇರಿಯಿಂದ ಆಚೆಗೂ ಹರಡಿದ್ದಿರಬಹುದು(ಕವಿರಾಜಮಾರ್ಗಕಾರನು ಕನ್ನಡ ನಾಡಿನ ತೆಂಕಣದ ಎಲ್ಲೆಯನ್ನು ಸರಿಯಾಗಿ ಗುರುತ್ಸಿಲ್ಲ ಎಂಬ ವಾದಕ್ಕೆ ಇನ್ನಶ್ಟು ಬಲ ಬರುತ್ತದೆ  - ಈ ವಾದದ ಬಗ್ಗೆ ಒಂದು ಹೊತ್ತಿಗೆಯನ್ನು ನಾನು 'ಅಂಕಿತ'ದಲ್ಲಿ ನೋಡಿದೆ).

ಡಿಎಲ್ ಅಯ್ ನಲ್ಲಿ ಮಾದಪ್ಪನ ಬಗ್ಗೆ ಹೊತ್ತಿಗೆಯಿದೆ.
http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107

ಈ ಹೊತ್ತಿಗೆಯ ಪುಟ ೧೨ ರಲ್ಲಿ ಹೀಗಿದೆ.
"..ಸೇಲಂ ಜಿಲ್ಲೆಯ ಕೆಲವು ಊರುಗಳನ್ನು ಸುತ್ತಿ ಕೇಳಲಾಗಿ ಮಾದಪ್ಪನ ಬಗ್ಗೆ ಕತೆ ಹೇಳುವವರು ಯಾರೂ ಇಲ್ಲ ಎಂಬ ಉತ್ತರ ದೊರೆಯಿತು. ಆದರೆ ದರ್ಮಪುರಿಯ ಕೆಲವು ಪ್ರದೇಶಗಳಲ್ಲಿ ಮಾದಪ್ಪನ ಹಾಡು ಹಾಡುವ ಕೆಲವು ಬಕುತರಿದ್ದಾರೆ ಎಂಬುದು ತಿಳಿಯಿತು. ಉಡುಕು ವಾದ್ಯವನ್ನು ಬಳಸಿಕೊಂಡು ಕನ್ನಡದವರೇ ತಮಿಳು ನಾಡಿಗೆ ಸೇರಿಕೊಂಡು ತಮಿಳಿನಲ್ಲಿ ಪದ್ಯ ಕಟ್ಟಿ ತಮ್ಮದೇ ಆದ ದಾಟಿಯಲ್ಲಿ ಹಾಡುವರೆಂದೆನಿಸುತ್ತದೆ. ಏನೇ ಇರಲಿ ತಮಿಳಿನ ಜನಪದ ಸಾಹಿತ್ಯದಲ್ಲಿ ಮಾದೇಶ್ವರರ ಕತೆಗಳಿಲ್ಲ ಎಂಬುದು ನಿಕ್ಕುವವಾಯಿತು...".

ಕೊ.ಕೊ:  ಈಗ 'ಸಯ್ಕೊ' ಸಿನಿಮಾದ ರಗು ದೀಕ್ಸಿತ್ ರವರ ಹಾಡು 'ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಇವರ ಕರುಣದಿ ಕಾಯೋ ಮಾದೇಸ್ವರ' ಸಿಕ್ಕಾಪಟ್ಟೆ ಹಿಟ್ ಆಗಿದೆ.

  • ಮಲಯ್ ಮಾದಪ್ಪ ಕವಿರಾಜಮಾರ್ಗ ಕಂಸಾಳೆ oral epic ಚಂದ್ರಶೇಖರ ಕಂಬಾರ
~.~
  • ವೈಭವ ರವರ ಬ್ಲಾಗ್
  • Login or register to post comments
  • 248 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2008 - 10:14pm — Sunil Jayaprakash

ಉ: ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

Sunil Jayaprakash's picture

ವೈಭವ, ಒಳ್ಳೆಯ ಬರಹ. ನನ್ನನ್ನೂ ಒಮ್ಮೆ ಅಲ್ಲಿಗೆ ಕರೆದುಕೊಂಡು ಹೋಗಬೇಕೆಂಬುದಾಗಿ ಕೋರಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 11:46am — mahesha

ಉ: ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

mahesha's picture

ಇದೊಂದು ಬಲು ವಿರಳವಾದ ಮೇಲ್ಮಟ್ಟದ ಬರಹ.

ಸಮುಸುಕುರುತದ ನೆರಳಲ್ಲಿ ಬಲಿತ ಕಾವ್ಯಗಳಿಂದ ಇಂತಹ ನೆಲದ ಹಾಡುಗಳು ಮರೆಯಾಗವೆ. ಇಂತಹ ನೆಲಹಾಡುಗಳನ್ನು ಬೆಳಕಿಗೆ ತರುವಲ್ಲಿ ಬೆರಳಿಣಿಕೆಯನಿತ್ತು ಮಂದಿ ದುಡಿದವರೆ.

ಕನ್ನಡ ನಾಡಲ್ಲಿ ’ಶಿಶ್ಟ ಸಾಹಿತ್ಯ’ ಎಂದು ಹೇರಳ ಸಕ್ಕದ ತುಂಬಿರುವ ಕಬ್ಬಗಳಿಗೆ ಇಂಬೀಯ್ಯವುದು ಇಂದಿಗೂ ಅಯಿತೆ. ’ಕನ್ನಡ ಸಾಹಿತ್ಯ ಪರಿಷತ್ತು’ ಮುಂತಾದ ಸರಕಾರದಿಂದ ಹೆಚ್ಚು ದುಡ್ಡು ಪಡೆಯುವ ಕೂಟಗಳು ಇಂತಹ ನೆಲದ ಕಬ್ಬಗಳ ಬಗ್ಗೆಯ ಆರಯ್ಯುಗಳನ್ನು ಹುರಿದುಂಬಿಸುವುದೂ ಕೇಳಲೂ ಸಿಕ್ಕಕ್ಕಿಲ್ಲ.

’ಮಲೆಯ ಮಾದಪ್ಪ’ ಎಮ್ಮೆನಾಡಿನ(ಮಯಿಸೂರು) ಮನೆಮನೆಯ ದೇವರು. ನಂಜನಗೂಡಿನ ನಂಜನ ಒಕ್ಕಲ ಹಾರುವರೂ ಇವನ ಗುಡಿಗೆ ಹೋಗಿ ಬತ್ತಾರೆ.

ತುಂಬಾ ಚನ್ನಾದ ಬರಹಕ್ಕೆ ನನ್ನಿ...

ಗಮನಿಸಿರಿ : ಕನ್ನಡದಲ್ಲಿ ಮಲೆ ಆದರು ಚಾಮರಾಜನಗರದ ಮಂದಿ ಮಲಯ್, ಮನಯ್ ಎಂದೇ ಉಲಿಯುವುದು. ಅದಕ್ಕೆ ನೆಲದ ದೇವರಾದ ಮಾದಪ್ಪ, ಮಲೆ ಮಾದಪ್ಪ ಎಂದು ಕರೆದರೂ, ಅವನು ಮಲಯ್ ಮಾದಪ್ಪನೇ ಆಗವನೆ.

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಂಸಾಳೆ - ಜನಪದ ಕಲೆಯ ಬಗ್ಗೆ
  • 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
  • ಸುದ್ದಿಪುಟಗಳಲ್ಲಿ 'ಸಂಪದ'
  • ಏನಿದು 'ಅದಿ'?
  • ಕಾವೇರಿ ತೀರ್ಪಿನ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
  • nekkar_guru
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 8, 2008 - 1:07am
  • mayakar
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 12:16am
  • raghava
    ಉ: ಮೊದಲ ಚಿತ್ರ
    September 8, 2008 - 12:13am
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator