ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕನ್ನಡದ ಬಗ್ಗೆ ಹತ್ತು ಕಣಸುಗಳು

March 22, 2008 - 8:08pm — ವೈಭವ

ಕನ್ನಡದ ಬಗ್ಗೆ ಹತ್ತು ಕಣಸುಗಳು

ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ.

೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್ ಕನ್ನಡದಲ್ಲಿರಬೇಕು
೨) ಮದ್ದು/ಅವ್ಶದ ಇವುಗಳು ಹೆಸರುಗಳು ಕನ್ನಡದಲ್ಲಿ ಆ ಮದ್ದಿನ ಮೇಲೆ ಕನ್ನಡದಲ್ಲಿ(ಇಂಗಲೀಸ್ ಜೊತೆ) ಲಗತ್ತಿಸಿರಬೇಕು
೩) ಕನ್ನಡ ಸಿನಿಮಾಗಳು ಹೆಚ್ಚು ಟೆಕ್ನಿಕಲ್ ಆಗಿ ಮುಂದುವರೆಯಬೇಕು ಮತ್ತು ಬೇರೆ ರಾಜ್ಯ, ದೇಸಗಳಲ್ಲಿ ಕನ್ನಡ ಸಿನಿಮಾ ಸುಲಬವಾಗಿ ನೋಡುವಂತಾಗಬೇಕು
೪) ಕನ್ನಡಿಗರು ಇನ್ನು ಹೆಚ್ಚು ಎಂಟರ್ ಪ್ರಿನ್ಯೂರಿಯಲ್ ಆಗ್ಬೇಕು.
೫) ಕನ್ನಡ ನೆಲದಲ್ಲಿರುವ ಎಲ್ಲ ಮಂದಿಗೆ ಕನ್ನಡ ಮಾತನಾಡಲು/ತಿಳಿದುಕೊಳ್ಳಲು ಬರಬೇಕು.
೬) ಬಾನೋಡ/ವಿಮಾನದ ಟಿಕೆಟ್ ಗಳು ಕನ್ನಡದಲ್ಲೂ ಅಚ್ಚಾಗಿರಬೇಕು.
೭) ಸಿಂಗಾಪುರ ಎಲರ್ವಟ್ಟೆ(airlines)ಯವರು ತಮ್ಮ ಬಾನೋಡಗಳಲ್ಲಿ ಕನ್ನಡದ ಸಿನಿಮಾಗಳನ್ನು ತೋರಿಸಬೇಕು.
೮) ಸಿರಿವಿಜಯ, ಕೊಳಂಬೆ ಪುಟ್ಟಣ್ಣಗೌಡ ಮತ್ತು ಆಂಡಯ್ಯನವರ ಪದ್ಯಗಳು ಮಂದಿ ಬಾಯಲ್ಲಿ ಕುಣಿಯಬೇಕು.
೯) ಕನ್ನಡಕ್ಕೆ ತನ್ನದೇ ಆದ ಕೀಲಿ ಮಣೆ, ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಬೇಕು.
೧೦) ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರಕ್ಕಿಂತ ಕನ್ನಡ ಸರ್ಕಾರ ಬರಬೇಕು.

ಈ ಬ್ಲಾಗಿನ ಬಗ್ಗೆ ಕಮೆಂಟ್ ಮಾಡುವವರು ಈ ಪಿಡಿಎಪ್ ಓದಬೇಕಾಗಿ ಕೋರಿಕೆ. ಹೇಗೆ ತಮಿಳು ಇಂಗಲೀಸನ್ನು ಎದುರಿಸಲು ಹೋಗಿ ಸೊರಗಿದೆ ಅಂತ ಅರಿತ ಆಗುತ್ತೆ.

http://ccat.sas.upenn.edu/~haroldfs/public/AusbauTamil.pdf

 

  • ಕಣಸು ಕನ್ನಡ ಹತ್ತು
~.~
  • ವೈಭವ ರವರ ಬ್ಲಾಗ್
  • Login or register to post comments
  • 1281 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 23, 2008 - 4:56am — srivathsajoshi

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

srivathsajoshi's picture

'ಹತ್ತರೊಟ್ಟಿಗೆ ಹನ್ನೊಂದು’ ಅಂತಾರಲ್ಲ ಹಾಗೆ ಹನ್ನೊಂದನೆಯ ಕನಸು:

"ಹತ್ತು ಕನಸುಗಳ ವಿವರಣೆಯಲ್ಲಿನ ’ಎಲೆಕ್ಟ್ರಾನಿಕ್’, ’ಮಾನ್ಯುಯಲ್’, ’ಸಿನಿಮಾ’, ’ಟೆಕ್ನಿಕಲ್’, ’ಎಂಟರ್ ಪ್ರಿನ್ಯೂರಿಯಲ್’, ’ಟಿಕೆಟ್’, ’ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್’ ಪದಗಳು ಕನ್ನಡರೂಪದಲ್ಲಿ ಇರಬೇಕು".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 23, 2008 - 11:04am — hpn

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

hpn's picture

ಈ ಹತ್ತು + ಒಂದು ಕನಸುಗಳನ್ನು ಕೆಳಗೆ ತಳ್ಳಿ ಹೀಗೊಂದು ಮೊದಲನೆಯ ಕನಸು - ಕನ್ನಡಕ್ಕೊಂದು OCR, ಒಂದು ಉತ್ತಮ ಫಾಂಟು, ಒಂದು ಕನ್ನಡಕ್ಕಾಗಿಯೇ ನಿರ್ಮಿಸಿದ ಲಿನಕ್ಸ್ ವಿತರಣೆ (ಕನ್ನಡ ಆಪರೇಟಿಂಗ್ ಸಿಸ್ಟಮು). Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 23, 2008 - 1:22pm — ASHOKKUMAR

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ASHOKKUMAR's picture

ಉತ್ತಮ ಫಾಂಟು--ಈಗಿರುವುದು ಚೆನ್ನಾಗಿಲ್ಲವೇ? ನಿಮ್ಮ ಕಲ್ಪನೆ ಏನು..ಸ್ವಲ್ಪ ಬರೆಯುತ್ತೀರಾ?
ಕನ್ನಡ OS ಎಂದರೆ,ಕನ್ನಡ ಶಬ್ದದ ಕಮಾಂಡ್‍ಗಳಿಗೆ ಪ್ರತಿಕ್ರಿಯಿಸ ಬೇಕು ಅನ್ನುವುದು ನಿಮ್ಮ ಯೋಚನೆಯೇ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 23, 2008 - 3:18pm — hpn

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

hpn's picture

ಕಲ್ವನೆ? Smiling

ಉತ್ತಮ ಫಾಂಟು ಕಲ್ಪನೆ ಹೇಗಾಗುತ್ತದೆ? ಈಗ ಯಾವುದು ಉತ್ತಮ ಫಾಂಟ್ ಇದೆ ಹೇಳುತ್ತೀರಾ?

ಕನ್ನಡ OS ಅಲ್ಲ, ಕನ್ನಡಕ್ಕಾಗಿ OS. ಅದರಲ್ಲಿಯೇ ನಿಮ್ಮ ಪ್ರಶ್ನೆಗೆ ಉತ್ತರವಿದೆ ಎಂದು ಭಾವಿಸುತ್ತೇನೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 23, 2008 - 3:36pm — hpn

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

hpn's picture

ಉತ್ತಮ ಫಾಂಟ್ ಎನ್ನುವಾಗ ಈಗಿನ ಫಾಂಟುಗಳು (Unicode fonts) ಕುರಿತು, ಹಳೆಯದರ ಬಗ್ಗೆ ಅಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 7:21pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ನಾಡಿಗ್,
ನಿಮ್ಮ ಬೆಲೆಬಾಳುವ ಸಲಹೆಗಳಿಗೆ ನನ್ನಿ. ಕನ್ನಡಕ್ಕೊಂದು ಓಸಿಆರ್ ..ಒಹ್ ಇದು ನೆನೆಸಿಕೊಂಡರೆ ಕುಸಿ ಆಗುತ್ತೆ. ಇದರ ಬಗ್ಗೆ ಏನಾದರೂ ಕೆಲಸ ನಡೆದಿದಿಯೇ?

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 8:21am — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ಸಿನಿಮ, ಟಿಕೆಟ್ ಇವೆಲ್ಲ ಎಲ್ಲರಿಗೂ ಅರಿತ ಆಗುತ್ತೆ. ಇದನ್ನ ಕನ್ನಡಯ್ಸಬೇಕಾಗಿಲ್ಲ. ಬೇರೆಯವನ್ನ ಮಾಡ್ಬೇಕು, ಅದೇ ನಮ್ಮನ್ನು ಕಾಡೋ ವಿಸ್ಯ. ಹೇಗೆ ಎಲ್ಲರಿಗೂ ಅರಿತ ಹಾಗೊ ಹಾಗೆ ಕನ್ನಡಯ್ಸೋದು ಅಂತ.

ಈ ಬರಹದ ಉದ್ದೇಶ/ಗುರಿ
--> ಈ ಕಣಸುಗಳನ್ನು ದಿಟವಾಗಿಸಲು ಏನೂ ಮಾಡಬೇಕು?
--> ಈ ಕಣಸುಗಳಿಗಿಂತ ಇನ್ನು ತಲೆಮೆ ಹೊಂದಿರುವ ವಿಸ್ಯಗಳು ಇವೆಯೆ?
ಎಂಬುವುಗಳನ್ನು ತಿಳಿದುಕೊಳ್ಳಲು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 3:14pm — srivathsajoshi

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

srivathsajoshi's picture

ಅಂದರೆ ಕನಸುಗಳ ವಿವರಣೆಯಲ್ಲಿ ಬೇರೆ (ಸಿನಿಮಾ ಮತ್ತು ಟಿಕೆಟ್ ಹೊರತಾಗಿ) ಇಂಗ್ಲಿಷ್ ಪದಗಳು ಸದ್ಯಕ್ಕೆ ಹಾಗೆಯೇ ಇರಲಿ, ಯಾವಾಗಾದರೊಂದು ದಿನ (’ಸಿನಿಮಾ’ ಮತ್ತು ’ಟಿಕೆಟ್‌’ಗಳಂತೆಯೇ) ಕನ್ನಡಕ್ಕೆ ಅಳವಡಿಸುವ ಮೂಲಕ ಅವೂ ಸಹ ಜನರಿಗೆ ತಿಳಿಯುವಂಥವಾಗುತ್ತವೆ ಎಂದು ನಿಮ್ಮ ಅಂಬೋಣವೇ? ಹಾಗಿದ್ದರೆ ಸರಿ, ನಿಮ್ಮ ಕನಸುಗಳು ನನಸಾಗಲಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 4:14pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ಹವ್ದು.
ಎಲ್ಲರೂ ಒಪ್ಪಿಗೆ/ತೀರ್ಮಾನ ಮಾಡುವತನಕ ಟೆಕ್ನಿಕಲ್ ಪದಗಳಿಗೆ ಇಂಗಲೀಸ್ ಬಳಸದೆ ಬೇರೆ ದಾರಿಯಿಲ್ಲ.
ಮೊನ್ನೆಮೊನ್ನೆ ಟಿವಿ೯ ಲ್ಲಿ ಒಬ್ರು ಬಿನ್ನಣಿ ಬಂದಿದ್ರು. ಅವರು ಹೇಳುತ್ತಿದ್ದುದು. ಅವರು ಕುವೆಂಪು ಅವರ ಹತ್ತಿರ ಹೋಗಿ ಕೇಳುದ್ರಂತೆ
test tube ಗೆ ಪ್ರನಾಳ ಅನ್ಬೋದಾ ಅಂತ. ಅದಕ್ಕೆ ಅವರು ಈ ರೀತಿ ಅವನ್ನು ಸಕ್ಕದಕ್ಕೆ ಇಳಿಸಿ ಕನ್ನಡಕ್ಕೆ ಇಳಿಸಿದ್ದೀವಿ ಅನ್ಕೊಳ್ಳೋದುಕ್ಕಿಂತ ಅದು ಇಂಗಲೀಸ್ ನಲ್ಲಿದ್ರೆನೆ ವಾಸಿ ಅಂತ.

ಇದು ಕನಸಲ್ಲ. ಕಣಸು. ( ಸುನಿಲಂಗೆ ಕೇಳಿ ಕಣಸು ಅಂದ್ರೇನು ಅಂತ .ಬಿಡಿಸಿ ಹೇಳ್ತಾನೆ).

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 6:31pm — kpbolumbu

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

kpbolumbu's picture

ಅದ್ಭುತವಾಗಿದೆ, ಆದರೆ ಇದು ಎಷ್ಟರ ಮಟ್ಟಿಗೆ ನಿಜ? ನಿಸಾರ್ ಅಹಮ್ಮದರ ಪಾಡ್ಕ್ಯಾಸ್ಟ್ ಕೇಳಿರಿ. ಇಂತಹ ಬಳಕೆಗಳು ಕನ್ನಡಕ್ಕೆ ಬಂದದ್ದು ಶ್ರೀ ಕುವೆಂಪುರವರಿಂದಲೇ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 9:36pm — srivathsajoshi

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

srivathsajoshi's picture

’ಮಾನ್ಯುಯಲ್’, ’ಟೆಕ್ನಿಕಲ್’, ’ಎಂಟರ್ ಪ್ರಿನ್ಯೂರಿಯಲ್’ - ಇವೂ ಸಹ ಟೆಕ್ನಿಕಲ್ ಪದಗಳೆ? ಇವುಗಳ ಕನ್ನಡರೂಪವನ್ನು ನೋಡಲಿಕ್ಕೂ ಎಲ್ಲರೂ ಒಪ್ಪಿಗೆ/ತೀರ್ಮಾನ ಮಾಡುವತನಕ ಕಾಯಬೇಕೆ? ಸರಿ, ಹಾಗೆಯೇ ಆಗಲಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 10:30pm — hamsanandi

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

hamsanandi's picture

ಮ್ಯಾನ್ಯುಯಲ್ ಅನ್ನೋದಕ್ಕೆ ಹತ್ತಾರು ವರ್ಷಗಳಿಂದಲೇ ’ಕೈಪಿಡಿ’ ಅನ್ನೋ ಅಚ್ಚಕನ್ನಡದ್ದೇ ಹೆಸರಿದೆಯಲ್ಲ Smiling

ಅದನ್ನ, ಕೈಯಲ್ಲಿ ಹಿಡಿದರೆ, ಅದು ನಮ್ಮ ಕೈಯನ್ನು ಹಿಡಿದು ಮುಂದಕ್ಕೆ ಕರ್ಕೊಂಡು ಹೋಗತ್ತಲ್ಲಾ, ಅದಕ್ಕೇ ಈ ಹೆಸರು ಸರಿಯಾಗಿದೆ ಎಂದದ್ದು.

ಆ ಪದ ಉಪಯೋಗದಲ್ಲೂ ಇತ್ತು - ಈಗ ಏನಾದ್ರೂ ’ಚಿರನಿದ್ರೆ’ಗೆ ಹೋಗಿದ್ರೆ ಗೊತ್ತಿಲ್ಲ ನನಗೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:46pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಕೈಪಿಡಿಯನ್ನು ತೆಗೆದು ಪುಸ್ತಿಕೆ, ಮಾರ್ಗದರ್ಶೀಕೆ ಅಂತ ಮಾಡಿದ್ದಾರಲ್ಲ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 3:18pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ಹಂಸಾನಂದಿಗಳೇ,
ನೀವು ಬೆಂಗಳೂರಿನ ಅತ್ವ ಇನ್ನಾವುದೆ ಕರ್ನಾಟಕದ ಊರಿಗೆ ಹೋಗಿ ಎಲೆಕ್ಟ್ರಾನಿಕ್ ಸರಕು ಕೊಂಡಾಗ ನೀವು ಗ್ಯಾರಂಟಿ ಕಾರ್ಡ್ ಮತ್ತು ಮನ್ಯುಯಲ್ . ಕಯ್ ಪಿಡಿ ಅಂತ ಕೇಳ್ ನೋಡಿ ಮುಕ ಮುಕ ನೋಡ್ತಾರೆ. ನನಗೆ ಈ ತೆರನದಾ ಅನುಬವ ಆಗಿದೆ.

ಈ ಪೆನ್ನಿಸಿಲ್ವೇನಿಯ ಯೂನಿವರ್ಸಿಟಿಯ ಪಿಡಿಎಪ್ ನೋಡಿ. ಹೇಗೆ ತಮಿಳು ಇಂಗಲೀಸ್ ಜೊತೆ ಹೋರಾಡಲು ಹೋಗಿ ಸೊರಗಿದೆ ಅಂತ ಗೊತ್ತಾಗುತ್ತೆ.
http://ccat.sas.upenn.edu/~haroldfs/public/AusbauTamil.pdf

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:45pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಅವೆಲ್ಲ ಯಾಕೆ ಕನ್ನಡದಲ್ಲೇ ಇರಬೇಕು?

ನಿಮ್ಮ ವಿಚಿತ್ರಾನ್ನ ಅನ್ನೋದನ್ನ ಕನ್ನಡದಲ್ಲಿ ಹೇಳಿ!! ಯಾಕೆ ಸಂಸ್ಕೃತ?

ಈ ಪ್ರೆಶ್ನೆ ಕೇಳುವವರು ಒಂದೂ ಸಂಸ್ಕೃತಪದವನ್ನು ಬಳಸಲ್ಲ ಅಂತ ಆಣೆ ಮಾಡಬೇಕು!! ಸುಮ್ನೆ ತರಲೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 3:11pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

'ಟೆಕ್ನಿಕಲ್' ಟೆಕ್ನಿಕಲ್ ಪದ ಅಲ್ವ? ಸರಿವೋಯ್ತು.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 11:15am — madhava_hs

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

madhava_hs's picture

ಜೋಷಿಗಳೇ, ಅವರು ಬರೆದಿರುವ ಕನ್ನಡ ನೋಡಿದ್ರೆ ಅದು ಕನ್ನಡಿಗರ ಕನಸಿಗಿಂತ ಶಂಕ್ರಭಟ್ರ ಅಳಿಯನ ಕನಸು ಅನ್ಸುತ್ತೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 1:02pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಜೋಶಿಗಳೆ,

ನಿಮ್ಮದಿದು ಸುಮ್ಮನೆ ಕ್ಯಾತೆ ಅಲ್ವ!!

ವಿವರಣೆ, ರೂಪ ಇವೆಲ್ಲ ಕನ್ನಡದ ಒರೆಗಳೇ?

ಸಾರು, ಕೂಟು ಇವೆಲ್ಲ ತಮಿಳಿನಿಂದ ಕನ್ನಡಕ್ಕೆ ಬಂದುದು ಎಂದು ಪುರಾವೆ ಇಲ್ಲದೆ ಹೇಳಿ ಕೊನೆ ತಪ್ಪಾಯಿತು ಎಂದುದಕ್ಕಿಂತ ಇವರು ಯಾವ ತಪ್ಪು?

ಅವರು ಹೇಳ್ತಾ ಇರೋದನ್ನು ಅಣಕಿಸುವ ಸಲುವಾಗೇ ನೀವು ಮಾರಲಿಂದಂತಿದೆ... ಅದಕ್ಕೆ 'offensive' ತೆಕ್ಕೆಗೇರಿಸಿದ್ದೀನಿ. ಇದನ್ನು ನೀವ್ ಬೇಕಾದರರೆ "ರಣವೀಳ್ಯ, ಯಕ್ಷಗಾನ" ಎಂದು ಹೇಳಿಕೊಳ್ಳಿ.. ಆದರೆ ಇದು ಬಿಟ್ಟಿ ತರಲೆ ಅಶ್ಟೆ.

ಇನ್ನು ಅವರು ಹೇಳಿದ್ದರಲ್ಲಿ ತಪ್ಪೇನು? ಅದು ಅವರು ಬ್ಲಾಗಲ್ಲಿ ಹಾಕಿಕೊಂಡಿದ್ದಾರೆ. ನಿಮ್ಮ ಹಾಗೆ ಪೇಪರಲ್ಲಿ ಹೊತ್ತಗೆಯಲ್ಲಿ ಅರೆಬರೆ ತಿಳಿದು ಅಚ್ಚು ಹಾಕಿದ್ದಾರ?

ಚರಪು ಯಾರು ಏನೇ ಹೇಳಲಿ ಸಕ್ಕದ, ಅದು ನನ್ನ ಅನಿಸಿಕೆ ಅಬಿಪ್ರಾಯ ಅನ್ನು ನಾನೆಂದು ಬದಲಿಸಲ್ಲ.. ಅಂದರೇನು? Smiling ಬಾಲಿಶ ಮೊಂಡು! ಚರಪನ್ನು ವೆಂಕಟಸುಬ್ಬಯ್ಯರೇ ನಿಗಂಟಲ್ಲಿ ದೇಶೀಶಬ್ದ ಎಂದು ಬರೆದಿದ್ದಾರೆ..

ಸುದೀರಣ್ಣ.. ಮನ್ನಿಸರಿ..!!
ಜೋಶಿಗಳು ದಿಟವಾಗಲು ಇಲ್ಲಿ ಅಣಕ ಮಾಡಿದ್ದಾರೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 1:18pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

^^

ನನಗೆ ಮೇಲನದನ್ನು ಬರೆದು ತುಂಬ ಬೇಸರವಾಯ್ತು.. ಜೋಶಿಗಳಂತಹ ಪ್ರೌಢರಿಂದ ಅಂತಹ ಕಪಿಚೇಷ್ಟೆ ಚನ್ನಾಗಿರಲ್ಲ.. ಇರುಸು-ಮುರುಸು..!

ಜೋಶಿಗಳೆ.. ಮನ್ನಿಸಿರಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 3:13pm — madhava_hs

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

madhava_hs's picture

ಹೊಟ್ಟೆ ಉರಿ ಅಂದ್ರೆ ಇದಪ್ಪ..

ಜೋಶಿಯವರ ಲೇಖನಗಳು ವಿ.ಕ ದಲ್ಲಿ ಪ್ರಕಟವಾಗಿ ಅವು ಜನಪ್ರಿಯವೂ ಆಗಿವೆ.

'ಅರೆ ಬರೆ ತಿಳಿದು ಅಚ್ಚು ಹಾಕಿಸಿದ್ದಾರಾ’ ಅಂತ ಕೇಳ್ತಿದ್ದೀರಲ್ಲಾ.
ಯಾವ ವಿಷಯಗಳು ಅರೆ ಬರೆ ತಿಳಿದು ಬರೆದವು ತಿಳಿಸ್ತೀರಾ?? ನೀಮ್ಮಂಥ ಕೆಲವು ಮಂದಿ ಸುಮ್ಮನೆ ಅರ್ಥವಿಲ್ಲದೆ ಮಾತನಾಡಿದರೇನು, ಜೋಶಿಯವರ ಬರಹಗಳು ಪುಸ್ತಕವಾಗಿಯೂ ಬಂದು ಬಹಳ ಮೆಚ್ಚುಗೆ ಗಳಿಸಿವೆ..

ಇಲ್ಲಿ ಅವರು ಹೇಳಿದ್ದರಲ್ಲಿ ತಪ್ಪೇನಿದೆ? ’ಕನ್ನಡ ಕನಸು’ ಕಾಣುವವರು ಅದನ್ನೂ ಇಂಗ್ಲೀಶ್ ಪದಗಳಲ್ಲೇ ಕಾಣಬೇಕೆ. ೧೦ ಕನಸುಗಳ ಸಾಲಿನಲ್ಲಿ ಬಹಳಷ್ಟು ಆಂಗ್ಲ ಪದಗಳಿರುವುದು ನೋಡಿದರೆ ಕರ್ನಾಟಕವನ್ನು ಇಂಗ್ಲೆಂಡ್ ಮಾಡ ಹೊರಟಿದ್ದಾರೆಯೇ ಎನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 7:18pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ಜೋಶಿಯವರ ಬರಹಗಳಲ್ಲಿ ಒಂದ್ಮಣ ಸಕ್ಕದ ಸುರಿದಿರುವುದನ್ನ ನೋಡಿ ನಮಗೂ ಕನ್ನಡನಾಡನ್ನ ಆಪ್ಗಾನಿಸ್ತನ ಮಾಡ ಹೊರಟಿದ್ದಾರೆ ಅನ್ಸುತ್ತೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 9:32am — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಕಣಸೋ ಇವೋ
ನನಸಾಗುವುವೋ
ನಮ್ಮೆದೆಯಲಿ ಎಂತ
ದೊಡ್ಡ ಹಂಬಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 11:09am — madhava_hs

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

madhava_hs's picture

"ಸಿರಿವಿಜಯ, ಕೊಳಂಬೆ ಪುಟ್ಟಣ್ಣಗೌಡ ಮತ್ತು ಆಂಡಯ್ಯನವರ ಪದ್ಯಗಳು ಮಂದಿ ಬಾಯಲ್ಲಿ ಕುಣಿಯಬೇಕು"

ದೊಣ್ಣೆ ನಾಯಕನಪ್ಪಣೆ !!

ಬೇರೆಯವರ ಪದ್ಯಗಳು ಏಕೆ ಬೇಡ? ಬೇರೆಯವರ ಪದ್ಯಗಳಲ್ಲಿಲ್ಲದಂಥವು ಇದರಲ್ಲೇನಿವೆ?

ಗುಂಡನ ಕನ್ನಡ..!!

ಮೊದಲು ಕನ್ನಡ ಬರೆಯುವಾಗ ’ಎಲೆಕ್ಟ್ರಾನಿಕ್’,’ಮ್ಯಾನುಯಲ್’, ’ಟೆಕ್ನಿಕಲ್’, ’ಕಂಪ್ಯೂಟರ್’ ನಂತಹ ಆಂಗ್ಲ ಭಾಷೆಯ ಪದಗಳನ್ನೇ ಬಳಸುವ ತಿಕ್ಕಲು ತನ ದೂರವಾಗಲಿ !

ದೇಶ ಹೋಗಿ ದೇಸ ಆಗಿದೆ, ಸಧ್ಯ ದೋಸೆ ಆಗ್ಲಿಲ್ಲ, ನಮ್ಮ ಪುಣ್ಯ Smiling

ಸ್ವಾಮಿ, ನಮಗೆ ಈಗಿರುವ ಕನ್ನಡ ಚೆನ್ನಾಗಿಯೇ ಇದೆ. ನಿಮಗೆ ಬೇಕಾದರೆ ’ಗುಂಡನ ಕನ್ನಡ Ver ೧.೦’ ಅಂತ ಶುರು ಹಚ್ಕೊಳ್ಳಿ !! ಅದರಲ್ಲಿ ಬೇಕಾದರೆ ೯೦% ಆಂಗ್ಲ ಪದಗಳನ್ನು ಸೇರಿಸಿಕೊಳ್ಳಿ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 1:14pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಹರಿ..

ಇವರಿಗೆ ಕನ್ನಡದಲ್ಲಿ ಬರೆಯಲು ಎಶ್ಟ ಸರತಿ ಎಚ್ಚರಿಸಿದ್ದೀಯ? Smiling

ಸದ್ಯವದು ’ಸಧ್ಯ ’ಅಲ್ಲ Smiling

ಮಾಧವರ ಎಶ್ಟ ಪುಲ್ ಇಂಗ್ಲೀಶ್ ಬರಹಗಳನ್ನು ಅಳಿಸಿದ್ದೀಯ ಹರಿ?

ನನಗೆ ನೆನಪಿರುವಂತೆ "ಸಂಸ್ಕೃತದ ವಿಶೇಶತೆ"ಗಳು ಎಂದು ಪೂರ್ತಿ ಇಂಗ್ಲೀಶಲ್ಲಿ ಇತ್ತಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 7:16pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ಮಾದ್ವಣ್ಣೋರೆ,

ಇಡೀ ಬ್ಲಾಗನ್ನೇ ಇಂಗಲೀಸ್ ನಲ್ಲಿ ಬರೆದ ಮಹನೀಯರಲ್ಲವೆ ನೀವು .ಅದು ಸಕ್ಕದ ಹೊಗಳಿಕೆ ಮಾಡುವುದಕ್ಕೆ.
ತಾವು 'ಆಂಗ್ಲ, ಭಾಷೆ' ಅಂತಹ ಸಕ್ಕದ ಒರೆಗಳನ್ನು ಬಳಸುವ ತಿಕ್ಕಲುತನದಿಂದ ದೂರವಿರಿ.

ಪಾಪ, ಹರಿಪ್ರಸಾದ್ ನಾಡಿಗರು ತಮ್ಮನ್ನು ತಿದ್ದಿ ತಿದ್ದಿ ಸಾಕಾಗಿ ಹೋಗಿದ್ದಾರೆ. Smiling
ಕಣಸುಗಳ ಬಗ್ಗೆ ಮಾತಾಡುವುದಿದ್ದರೆ ಮುಂದುವರೆಸಿ. ಇಲ್ಲವಾದರೆ ಬೇಕಾಗಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 4:17pm — roopablrao

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

roopablrao's picture

ಮೊದಲು ಕನ್ನಡಿಗರು ಕಚ್ಚಾಡುವುದನ್ನು ನಿಲ್ಲಿಸಬೇಕು. ಆಗ ಹತ್ತಲ್ಲ , ನೂರು ಕನಸುಗಳು ನನಸಾಗುತ್ತವೆ. ನಮ್ಮವರ ಕಾಲೆಳೆಯುವುದು ಇತರರನ್ನು ಹೊಗಳಿ ಅಟ್ಟಕ್ಕೇರಿಸುವುದನ್ನು ಬಿಡಬೇಕಷ್ಟೇ
ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಾನೇನು ಹೊಸದಾಗಿ ಹೇಳಬೇಕಾಗಿಲ್ಲ

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2008 - 10:54pm — Sunil Jayaprakash

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

Sunil Jayaprakash's picture

ರೂಪಾ ಅವರೇ, ದಿಟವಾಗಿ ಹೇಳ್ತೀನಿ ನೋಡಿ. ಯಾವಾಗ ಹೆಂಗಸರು ಮುಂದೆ ಬಂದು ಮೂಗುದಾರ ಹಿಡಿಯಲ್ವೋ ಅಲ್ಲಿಯವರೆಗೆ ಈ ರೀತಿ ಗಂಡಸರ ಕಿತ್ತಾಟ ಇದ್ದೇ ಇರುತ್ತದೆ. ನೀವೇ ಬೇಕಿದ್ದರೆ ಗಮನಿಸಿ ಸಂಪದದಲ್ಲಿ ಕನ್ನಡದ ಬಗ್ಗೆ ಬರೆದವರು, ಕಿತ್ತಾಡಿದವರು ಎಲ್ಲರೂ ಗಂಡಸರೇ. ಒಂದು ಹೆಣ್ಣು ದಿಕ್ಕು ಇಲ್ಲದಿದ್ದರೆ ದೇಶಕ್ಕೆ ದೇಶವೇ ಎಕ್ಕುಟ್ಟು ಹೋಗುತ್ತದೆ. ಅಂಥದ್ದರಲ್ಲಿ...

ಒಟ್ನಲ್ಲಿ ನಮಗೆ,

೧. "Ego(ಇಗೋ) ಕನ್ನಡ". ನಾನೊಬ್ಬನೇ ಕನ್ನಡಕ್ಕೆ ಸಿಕ್ಕಾಪಟ್ಟೆ ಮಾಡಿರೋದು, ಮಾಡೋದು ಅಂತ ತೋರಿಸಿಕೊಳ್ಳೋ ಹೆಬ್ಬಯಕೆ.
೨. ಬೇರೆಯವನಿಗಿಂತ ನನ್ನ ಮಾನಸಿಕ ಪ್ರಭುತ್ವ (ಮೆಚೂರಿಟಿ) ಜಾಸ್ತಿ ಎನ್ನುವ ಅಹಂಭಾವ.
೩. ನನ್ನ ಆಲೋಚನಾ ಲಹರಿ ಎಲ್ಲರಿಗಿಂತ ಎತ್ತರದ ಮಟ್ಟದಲ್ಲಿದೆ ಅಂತ ತೋರಿಸಿಕೊಳ್ಳುವ ತೆವಲು.

@ಮಾಧವ,
ಅಲ್ಲಯ್ಯಾ ಮಾಧವ,

೧. ಶಂಕ್ರಭಟ್ರ ಅಳಿಯನ ಕನಸು ಅನ್ಸುತ್ತೆ.

ಈ ಕಾಮೆಂಟ್ ಎಷ್ಟು ಹೀನ ಮಟ್ಟದ್ದು ಎಂಬ ಕಲ್ಪನೆ ಇದೆಯಾ ನಿನಗೆ ? ಒಂದು ವೇಳೆ ಶಂಕರ ಭಟ್ಟರ ಅಳಿಯ ನಿನ್ನ ಕಾಮೆಂಟ್ ಓದಿದರೆ ಏನು ತಿಳಿಯಲ್ಲ ? ಅದು ಸರಿ, ನೀನು ಶಂಕರ ಭಟ್ಟರ ಒಂದಾದರೂ ಪುಸ್ತಕವನ್ನು ಓದಿದ್ದೀಯಾ ? ಮೊನ್ನೆ ಬೆಂಗಳೂರಿನಲ್ಲಿ ಬ್ಲಾಗರುಗಳ ಮೀಟ್ ಆಯ್ತಲ್ಲ, ಅಲ್ಲಿಗೆ ಬಂದಿದ್ದ ಕೀ.ರಂ. ಅವರು ಕೂಡ ಶಂಕರ ಭಟ್ಟರ ಪುಸ್ತಕಗಳ ಪ್ರಸ್ತಾಪ ಮಾಡಿದರು ಗೊತ್ತಾ ? books.google.com ನಲ್ಲಿ shankar bhat ಅಂತ ಹುಡುಕು ಎಷ್ಟು ಆರ್ಟಿಕಲ್(ಲೇಖನ)ಗಳು ಸಿಗುತ್ತವೆ ನೋಡು. ಸುಮ್ಮನೆ ಪರಿಜ್ಞಾನವಿಲ್ಲದೆ ಜಬರುದಸ್ತು ಬೇಡ.

ಬೇರೆಯವರ ಪದ್ಯಗಳು ಏಕೆ ಬೇಡ? ಬೇರೆಯವರ ಪದ್ಯಗಳಲ್ಲಿಲ್ಲದಂಥವು ಇದರಲ್ಲೇನಿವೆ?

ನೀನು "ಕವಿರಾಜಮಾರ್ಗ", "ಶಬ್ದಮಣಿದರ್ಪಣ", "ಕಬ್ಬಿಗರ್ ಕಾವನ್" (ಕವಿಗಳ ರಕ್ಷಕ), "ತಿಳಿಗನ್ನಡ ನುಡಿವಣಿಗಳು" ಇವುಗಳಲ್ಲಿ ಒಂದನ್ನಾದರೂ ಓದಿದ್ದೀಯಾ ? ನನಗೆ ನಿಜಕ್ಕೂ ಸಂಗೀತ ರತ್ನಾಕರ, ಚತುರ್ದಂಡಿ ಪ್ರಕಾಶಿಕಾ, ಮೇಘದೂತ, ಬೃಹದ್ದೇಶೀ ಮುಂತಾದ ಸಂಸ್ಕೃತ ಕೃತಿಗಳನ್ನು ಓದುವಾಗ ಸಂಸ್ಕೃತದ ಮೇಲೆ ಎಷ್ಟು ಹೆಮ್ಮೆ ಹಾಗು ಗರ್ವ ಮೂಡುವುದೋ ಅಷ್ಟೇ ವಾಕರಿಕೆ, ನಿರ್ಲಕ್ಷ್ಯ, ಬೇಸರ ಇಂತರ ಅಹಂಕಾರಮಿಶ್ರಿತ ಬಾಲಿಶ ವ್ಯಂಗ್ಯವನ್ನೋದಿದಾಗ ಆಗುವದು.

ಮಾಧವ, ನಿನಗೆ ಬರೆಯೋಕ್ಕೆ ಆಸಕ್ತಿಯಿದ್ದರೆ, ಹರಿ ಬರೆದನಲ್ಲ ಕನ್ನಡಕ್ಕೆ ocr ಬೇಕು ಎಂಬ ಮಾದರಿಯಲ್ಲಿ, ಹಾಗೆ ಕನ್ನಡಕ್ಕೆ ನಿನಗೆ ಏನು ಬೇಕೋ ಅದನ್ನು ಬರಿ. ಅದನ್ನು ಬಿಟ್ಟು ಬೇರೆಯವರ ಆಲೋಚನೆಯನ್ನು ಸಣ್ಣದಾಗಿಸುವ ಸಣ್ಣಬುದ್ಧಿ ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:05am — ಗಣೇಶ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ಗಣೇಶ's picture

ಕನ್ನಡ ನಮ್ಮ ಕಾಲಕ್ಕೆ ಮುಗಿಯಿತು. ಈಗಿನವರಿಗೆ ಕನ್ನಡ ಪ್ರೇಮವಿಲ್ಲ.
ಐ.ಟಿ.ಯವರು ಕನ್ನಡವನ್ನು ಬೆಂಗಳೂರಿಂದ ಓಡಿಸುವರು-ಎಂದು ಸಂಪದ ಬಳಗ ಸೇರುವ ಮೊದಲು ತಿಳಿದಿದ್ದೆ.

ನಿಜಕ್ಕೂ ನೋಡಿದರೆ, ನನ್ನ ಕನ್ನಡವೇ ಸರಿಯಿಲ್ಲ.(ಸಿಗರೇಟ್ ಹವ್ಯಾಸದಂತೆ )ಈ ಕನ್ನಡವನ್ನೇ ನಾಲ್ಕು ದಶಮಾನ ಬಳಸಿದ್ದರಿಂದ ಈಗ ನಿಮ್ಮಂತೆ ಮಾತನಾಡಲು ಸಾಧ್ಯವಿಲ್ಲ. ಪ್ರಯತ್ನಿಸಿದೆ...ಸರಿಯೋ, ತಪ್ಪೋ ಯೋಚನೆಯಲ್ಲೇ ಸಮಯ ಹೋಗುವುದು.

ಆದರೆ ಈ ಎಲ್ಲಾ ಹುಡುಗರ ಪ್ರಯತ್ನ,ಕನ್ನಡದ ಪ್ರೀತಿ ಮೆಚ್ಚಬೇಕಾದ್ದು. ಮಾಧವರೇ,ಜೋಶಿಯವರೇ ಯಾಕವರನ್ನು ರೊಚ್ಚಿಗೆಬ್ಬಿಸುತ್ತೀರಿ?

ಮಾಧವರದ್ದು ಅನಗತ್ಯ ಚರ್ಚೆ ಅನಿಸುತಿದೆ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 1:37pm — kpbolumbu

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

kpbolumbu's picture

ನಿಮ್ಮದೊಂದು ಜಾಣತನದ ಮಾತು. ಯಾವುದೋ ಒಂದು ಹದವನ್ನು ಒಪ್ಪಿಕೊಂಡವರದ್ದು ಮಾತ್ರ ಸರಿ, ಉಳಿದವರದ್ದು ಕೊಂಕು ಹೇಗಾಗುತ್ತದೆ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 1:46pm — kpbolumbu

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

kpbolumbu's picture

ವೈಭವ
ತಮ್ಮ ವಾದವನ್ನು ಪುಷ್ಟಿಗೊಳಿಸಲು ಸುಳ್ಳುಸಾಕ್ಷಿಯೇ ಬೇಕೇ? ಇನ್ನೊಮ್ಮೆ ಪಾಡ್ಕ್ಯಾಸ್ಟ್ ಕೇಳಿ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 1:37pm — kpbolumbu

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

kpbolumbu's picture

ಗಣೇಶ್,
ನಿಮ್ಮದೊಂದು ಜಾಣತನದ ಮಾತು. ಯಾವುದೋ ಒಂದು ಹದವನ್ನು ಒಪ್ಪಿಕೊಂಡವರದ್ದು ಮಾತ್ರ ಸರಿ, ಉಳಿದವರದ್ದು ಕೊಂಕು ಹೇಗಾಗುತ್ತದೆ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 3:05pm — ವೈಭವ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ವೈಭವ's picture

ನನ್ನಿ ಸುನೀಲ ಗಣೇಶರೆ,
ಈ ಮಾದವರು ಕನ್ನಡದ ಕಣಸು ಬ್ಲಾಗಲ್ಲಿ ಉರ್ದು-ಸಂಸ್ಕ್ರುತ ಅಂತ ಯಾಕ್ ಬರೀತಾ ಇದಾರೋ ನಂಗೆ ಗೊತ್ತಿಲ್ಲ.
ನಂಗೆ ದೊಣ್ಣೆನಾಯಕ ಹೀಗೆ ಮುಂತಾಗಿ ಹಳಿದಿದ್ದಾರೆ. Sad ಆದರೂ ನಾನು ಅವರಿಗೆ ಮರ್ವಾದೆ ಕೊಟ್ಟೇ ಮಾತಾಡ್ತ ಇದ್ದೇನೆ.

ಹರಿಪ್ರಸಾದ್ ತರ 'ಕನ್ನಡದಲ್ಲಿ ಓಸಿಆರ್' ಈ ತೆರನಾದ ಕಣಸುಗಳು ಹೊರಬರುತ್ತೇವೆಯೆ ಅನ್ಕೊಂಡು ಈ ಬ್ಲಾಗ್ ಹಾಕಿದೆ. ಆದರೆ ಈ ಮಾದವರು, ಜೋಶಿಗಳು ಬಂದು ಕುಲಗೆಡಿಸಿದರು.

ಹರಿ,
ಮಾದವರ ಈ ಬ್ಲಾಗಿನಲ್ಲಿರುವ ನಂಟಿರದ ಕಮೆಂಟುಗಳನ್ನು ಮಾಡರೇಟ್ ಮಾಡಿ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 8:25am — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಸುನಿಲ ಮತ್ತು ಗಣೇಶರೆ...

ನೀವು ಬರೆದುದರಿಂದ ತುಸು ತಣ್ಣಾಗಾಯ್ತು.. ಜೀವ..

ಇವರ ಕೊಂಕುಗಳಗೆ ಹಲವು ಸರತಿ ಹೇಸಿದ್ದೀನಿ.. ಇಂದೂ ಈ ತರಲೆಗೆ ನಾನು ಹೇಸುವವನೇ..!

ಹರಿ..

ಸೀರಿಯಸ್ಸಾಗಿ.. ನೀನು ಈ ಮಾಧವನ ಕಮೆಂಟನ್ನು ಸೆನ್ಸರ್‍ ಮಾಡಬೇಕಯ್ಯ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:05pm — madhava_hs

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

madhava_hs's picture

ಸುನಿಲರೇ,
ನನಗೆ ಶಂಕ್ರಭಟ್ರನ್ನೇ ಆಗಲಿ ಯಾರನ್ನೇಆಗಲಿ ಹೀಯಾಳಿಸುವ ಉದ್ದೇಶವಿಲ್ಲ. ’ಅಳಿಯ’ ಎಂಬ ಪದವನ್ನು ’ಭಕ್ತ’ ಎಂಬರೀತಿಯಲ್ಲಿ ಬಳಸಿದ್ದೇನಷ್ಟೆ.

ಈಗಾಗಲೇ ನಮ್ಮ ಕನ್ನಡ ಭಾಷೆಯಲ್ಲಿ ಇಂಗ್ಲೀಷ್ ಪದಗಳು ಸೇರಿ ಸೇರಿ ಎಕ್ಕುಟ್ಟಿ ಹೋಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡವನ್ನು ಇಂಗ್ಲೀಷ್ ಮಯ ಮಾಡ ಹೊರಟರೆ ಹೇಗೆ?.

ಗೊತ್ತಿಲ್ಲದಿರುವ ವ್ಯಕ್ತಿಯೊಬ್ಬನನ್ನು ’ನೀನು’ ತಾನು ಎಂದು ಸಂಭೋದಿಸುವುದು ನೀವು ಬೆಳೆದು ಬಂದ ಸಂಸ್ಕೃತಿಯನ್ನು ತೋರಿಸುತ್ತದಷ್ಟೆ.

ಇಂಗ್ಲೆಂಡ್ ದೇಶದಲ್ಲಿ ಒಂದು ಶಾಲೆಯಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರೆ ಎಂದು ಕಳೆದತಿಂಗಳು ಒಂದು ಪತ್ರಿಕೆ ವರದಿ ಮಾಡಿತ್ತು. ಇದಕ್ಕೆ ಕಾರಣವನ್ನು ಅಲ್ಲಿಯ ಪ್ರಾಂಶುಪಾಲರಿಗೆ ಕೇಳಲಾಗಿ ಅವರು ಸಂಸ್ಕೃತಕಲಿಕೆಯಿಂದ ಮಕ್ಕಳ ಮೇಧಾ ಶಕ್ತಿ ಹೆಚ್ಚುತ್ತದೆಂದೂ, ಅವರ ಗಣಿತ, ವಿಜ್ಞಾನ ವಿಷಯಗಳ ಗ್ರಹಿಕಾ ಸಾಮರ್ಥ್ಯ ಹೆಚ್ಚುತ್ತದೆಂದೂ ಸಂಶೋಧನೆಗಳಿಂದ ತಿಳಿದುಬಂದಿರುವುದರಿಂದ ಈ ರೀತಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರಂತೆ.

ವಿದೇಶೀಯರು ನಮ್ಮಲ್ಲಿನ ಯೋಗ, ಆಯುರ್ವೇದಗಳಿಗೆ ಪೇಟೆಂಟ್ ಮಾಡಲು ನೋಡುತ್ತಿರುವ ಸಮಯದಲ್ಲಿ ನಾವು ಇವೆಲ್ಲವೂ ಇರುವ ಭಾಷೆಯಾದ ಸಂಸ್ಕೃತವನ್ನು ಕಡೆಗಣಿಸುವುದು ಸರಿಯೇ? ಸಂಸ್ಕೃತದ ಕೆಲವು ಪದಗಳು, ಉರ್ದುವಿನ ಕೆಲವು ಪದಗಳು ನಮ್ಮ ಆಡುಭಾಷೆಯಲ್ಲಿ ಶತಶತಮಾನಗಳಿಂದ ಸೇರಿ ಹೋಗಿವೆ. ಈಗ ಅವುಗಳನ್ನು ಹೆಕ್ಕಿ ತೆಗೆಯುವ ದುರ್ಬುದ್ಧಿ ಏಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:29pm — Sunil Jayaprakash

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

Sunil Jayaprakash's picture

ನಮ್ಸ್ಕಾರ, ಈ ಬ್ಲಾಗಿಗೂ ಕನ್ನಡ-ಸಂಸ್ಕೃತ-ಉರ್ದು-ಪಾರ್ಸಿ-ಪೋರ್ಚುಗೀಸ್-ಇಂಗ್ಲೀಷ್ ಕಲಸುಮೇಲೋಗರಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ? ರಾಮ್ ರಾಮಾ, ಹರಿ ಹರೀ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:43pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

^^^

ವಿಭ್ರಮಭ್ರಮರಭ್ರಮಣಮೇಧಾವಿಷಯವಸ್ತುವಿರೂಪಜ್ಞ

ಸಂಸ್ಕೃತಾಭಿಹೀನಮಾನಗುಣಾವಶೇಷವಿಚಿತ್ರ

ಕನ್ನಡ ಕಣಸುಗಳಿಗೆ ಜೋಶಿ, ಮಾಧವರು ಎಳ್ಳುನೀರು ಬಿಟ್ಟಿದ್ದಾರೆ.!!! ಕುಚಿತ್ರಾನ್ನ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 2:21pm — Sunil Jayaprakash

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

Sunil Jayaprakash's picture

ಮಾಧವ ಮಹೋದಯರೇ, ದಯವಿಟ್ಟು ಭವದೀಯರು ಈ ಚಿತ್ರವನ್ನು ಪರಾಂಬರಿಸಿದಿರಾದರೆ ನಾವುಗಳು ಕೃತಕೃತ್ಯರಾಗುವೆವು.

ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್ ಬ್ಲಾಗಿನಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 2:28pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ಲೋ..

ನಾಳು-ನಾಳು ಹೊಟ್ಟಿನ-ಗಂಜಿ ತಿಂದು, ಹೊಟ್ಟಿನ-ಗಂಜಿಗಿಂತ ರುಜಿಯುಂಟೇ, ಹೊಟ್ಟಿನ-ಗಂಜಿಯೇ ಪವಿತ್ರ, ಅದೇ ಪರಮಾರ್ತ ಅಂತ ಬಡಿದುಕೊಳ್ಳವ ಮಡಿವಂತನ ಕರೆದು ನಯವಾದ ಗಮಗಮದ ಕುರಿಬಿರಿಯಾನಿ, ಶ್ಯಾಂಪಯ್ನ್ ಕೊಟ್ಟು.. ಹೇಗಿದೆ ಅಯ್ಯ ಅಂದ್ರೆ

"ಅನಿಶ್ಟ ರಂಡೆ ಗಂಡ, ಕಳ್ಳ ಸೂಳೆ ಮಗನೇ, ಹದರಕ್ಕೆ ಹುಟ್ಟಿದ ಬೊಡ್ಡಿಮಗನೇ.. ನೀನು ನೀಚ... ನಾನು ಪವಿತ್ರ... ನನ್ನ ಧರ್ಮ ಭ್ರಷ್ಟ ಮಾಡ್ತೀಯ ನಾಯಿ" ಅಂತ ಅಂದು ಉಗಿದು ಹೋದನಂತೆ!! Smiling

ಅದಕ್ಕೆ.. ಹೊಟ್ಟಿನ-ಗಂಜಿ ಕುಡಿಯೋರಿಗೆ, ಕಲಗಚ್ಚು ಕೊಡಬೇಕು ಹೊರತು..... ಹೆಚ್ಚುಮಂದಿ ಮೆಚ್ಚಿ ತಿನ್ನುವ ಈರುಳ್ಳಿಬಚ್ಚಿ ಅಲ್ಲ..!! Smiling

ತಿಳೀತೇ?

ಮೇಷಗ್ರಾಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 3:32pm — vinayudupa

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

vinayudupa's picture

>>"ಇಂಗ್ಲೆಂಡ್ ದೇಶದಲ್ಲಿ ಒಂದು ಶಾಲೆಯಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರೆ ಎಂದು ಕಳೆದತಿಂಗಳು ಒಂದು ಪತ್ರಿಕೆ ವರದಿ ಮಾಡಿತ್ತು. ಇದಕ್ಕೆ ಕಾರಣವನ್ನು ಅಲ್ಲಿಯ ಪ್ರಾಂಶುಪಾಲರಿಗೆ ಕೇಳಲಾಗಿ ಅವರು ಸಂಸ್ಕೃತಕಲಿಕೆಯಿಂದ ಮಕ್ಕಳ ಮೇಧಾ ಶಕ್ತಿ ಹೆಚ್ಚುತ್ತದೆಂದೂ, ಅವರ ಗಣಿತ, ವಿಜ್ಞಾನ ವಿಷಯಗಳ ಗ್ರಹಿಕಾ ಸಾಮರ್ಥ್ಯ ಹೆಚ್ಚುತ್ತದೆಂದೂ ಸಂಶೋಧನೆಗಳಿಂದ ತಿಳಿದುಬಂದಿರುವುದರಿಂದ ಈ ರೀತಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರಂತೆ."

ಮಾಧವರೆ,
ನಿಮ್ಮ ಮಾತನ್ನೇ ತಗೊಳ್ಳಿ. ಇಂಗ್ಲೆಂಡ್ ದೇಶದಲ್ಲಿ ಸಂಸ್ಕೃತ ಕಲೀತ ಇದಾರ್ಯೇ ಹೊರತು, ಸುಮ್ಸುಮ್ನೆ ಸಂಸ್ಕೃತ ಪದಗಳನ್ನ ಇಂಗ್ಲಿಷ್ನಲ್ಲಿ ಬೆರೆಸ್ತ ಇಲ್ಲ. ಅಲ್ಲೊಂದು ಇಲ್ಲೊಂದು ಪದಗಳನ್ನ ಬಳಸಬಹುದು ಅಷ್ಟೆ. ಅಷ್ಟು ಒಲವು, ಆಸಕ್ತಿ ಇರೋರು ಅದನ್ನ ಕಳೀತಾರೆ ಅಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 3:37pm — vinayudupa

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

vinayudupa's picture

ಕಳೀತಾರೆ ಅಲ್ಲ. ಕಲೀತಾರೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2008 - 8:16am — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ವಿನಯುಡುಪ...

ಅನುಬವ ಮಾತು ನಂದು..

ಇನ್ ಮುಂದೆ ಜೋಶಿ ಮತ್ತು ಮಾದವರ ಕಮೆಂಟ್ಗಳನ್ನು ಸೀರಿಯಸ್ಸಾಗಿ ತಗೊಂಡು ಅದಕ್ಕೆಲ್ಲ ಆನ್‌ಸರ್‍ ಮಾಡಬೇಕಿಲ್ಲ ಅಂತ ನಿಕ್ಕುವ ನಿಚ್ಚಳ ನಂಬಿಕೆ ಆಗಿ ಹೋಗಿದೆ..

ಅವರ ಹತೋಟಿಯನ್ನ ನಮ್ ಸಂಪದ-ನಾಡಿಗ್ಗೆ ಕಯ್ಗೆ ಬಿಟ್-ಬಿಡೋಣ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 3:32pm — vinayudupa

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

vinayudupa's picture

>>"ಇಂಗ್ಲೆಂಡ್ ದೇಶದಲ್ಲಿ ಒಂದು ಶಾಲೆಯಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರೆ ಎಂದು ಕಳೆದತಿಂಗಳು ಒಂದು ಪತ್ರಿಕೆ ವರದಿ ಮಾಡಿತ್ತು. ಇದಕ್ಕೆ ಕಾರಣವನ್ನು ಅಲ್ಲಿಯ ಪ್ರಾಂಶುಪಾಲರಿಗೆ ಕೇಳಲಾಗಿ ಅವರು ಸಂಸ್ಕೃತಕಲಿಕೆಯಿಂದ ಮಕ್ಕಳ ಮೇಧಾ ಶಕ್ತಿ ಹೆಚ್ಚುತ್ತದೆಂದೂ, ಅವರ ಗಣಿತ, ವಿಜ್ಞಾನ ವಿಷಯಗಳ ಗ್ರಹಿಕಾ ಸಾಮರ್ಥ್ಯ ಹೆಚ್ಚುತ್ತದೆಂದೂ ಸಂಶೋಧನೆಗಳಿಂದ ತಿಳಿದುಬಂದಿರುವುದರಿಂದ ಈ ರೀತಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರಂತೆ."

ಮಾಧವರೆ,
ನಿಮ್ಮ ಮಾತನ್ನೇ ತಗೊಳ್ಳಿ. ಇಂಗ್ಲೆಂಡ್ ದೇಶದಲ್ಲಿ ಸಂಸ್ಕೃತ ಕಲೀತ ಇದಾರ್ಯೇ ಹೊರತು, ಸುಮ್ಸುಮ್ನೆ ಸಂಸ್ಕೃತ ಪದಗಳನ್ನ ಇಂಗ್ಲಿಷ್ನಲ್ಲಿ ಬೆರೆಸ್ತ ಇಲ್ಲ. ಅಲ್ಲೊಂದು ಇಲ್ಲೊಂದು ಪದಗಳನ್ನ ಬಳಸಬಹುದು ಅಷ್ಟೆ. ಅಷ್ಟು ಒಲವು, ಆಸಕ್ತಿ ಇರೋರು ಅದನ್ನ ಕಳೀತಾರೆ ಅಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:28pm — roopablrao

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

roopablrao's picture

ಈ ಶಂಕರ ಭಟ್ಟರು ಯಾರು ಅವರ ಹೆಸರು ಸಂಪದದಲ್ಲಿ ಬಹಳ ಕಡೆ ಇದೆ. ಹಾಗು ಅವರ ಅಳಿಯ ಯಾರು?
ದಯವಿಟ್ಟು ಅಜ್ನಾನಕ್ಕಾಗಿ ಕ್ಷಮಿಸಿ
ಹಾಗು ಯಾರಾದರೂ ಅವರು ಯಾರೆಂದು ಹೇಳಿದರೆ ಬಹಳ ಉಪಕಾರವಾಗುತ್ತೆ
ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2008 - 12:36pm — mahesha

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

mahesha's picture

ರೂಪ

'ಅಳಿಯ 'etc ಅನ್ನೋದನ್ನ ಇಗ್ನೋರ್‍ ಮಾಡಿ...ನಾಚಿಕೆಗೇಡು!!

ಶಂಕರ ಬಟ್ಟರು ಹಲನುಡಿಬಲ್ಲರು/ಬಹುಭಾಷಾಪಂಡಿತರು, ಅವರು ಕನ್ನಡದ ಬಗ್ಗೆ ಹಲವು ಆರಯ್ಯು-ಹೊತ್ತಗೆಗಳನ್ನು/ಸಂಶೋಧನಾಪುಸ್ತಿಕೆಗಳನ್ನು ಬರೆದಿದ್ದಾರೆ.

ಅಂಕಿತ, ಸಪ್ನಕ್ಕೆ ಹೋದ್ರೆ...

೧) ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
೨) ಕನ್ನಡ ಬರಹವನ್ನು ಸರಿಪಡಿಸೋಣ

ಈ ಎರಡು ಒತ್ತಗೆ ಓದಿದರೆ ಅವರ