ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಹಿಂದೊಮ್ಮೆ ನಮ್ಮ ಸುನಿಲ ಜಯಪ್ರಕಾಶರು 'ಊ' ವನ್ನು 'random' ಅರಿತದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟಿದ್ದರು. ಇವತ್ತು(ಇವೊತ್ತು) ಹಳೆಗನ್ನಡದ ಹುಚ್ಚು ಹೆಚ್ಚಾಗಿ ಕವಿರಾಜಮಾರ್ಗದ ಸಾಲುಗಳಲ್ಲಿ ಹಾಗೆ ಕಣ್ಣುಹಾಯಿಸಿದಾಗ ಅವರ ವಾದಕ್ಕೆ ಇಂಬು ಕೊಡುವ ಅಂಶಗಳನ್ನು ಗಮನಿಸಿದೆ. ಅದನ್ನೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.ಕವಿರಾಜಮಾರ್ಗದ ಬಿಡಿ ೧ ರ ೬೩ ನೇ ಪದ್ಯದಲ್ಲಿ ಹೀಗಿದೆ.
ನಿಲ್ತೋಳಂ ಬರ್ಪುದು ಸ
ಯ್ತಲ್ತೂರುಂ (ದೂರಮೆನೆಡೆತುಡಗರ್ಪೂರಂ)
ಕಲ್ತುಲ್ಲಿಂದೋಡವಮೆಂ
ಬಲ್ತುಣ್ಣಿಂ ತಂದ ಕೂೞನೂ ಸಂಗಮದೊಳ್
ಬಿಡಿಸಿದರೆ
"ನಿಲ್, ತೋಳಂ ಬರ್ಪುದು, ಸಯ್ತಲ್ತು, ಊರುಂ ದೂರಂ
ಎನ್, ಎಡೆತುಡಗರ್ಪೂರಂ ಕಲ್ತು ಉಲ್ಲಿಂದೆ ಓಡುವಂ
ಎಂಬ ಅಲ್ತು, ತಂದ ಕೂೞಂ ಊ ಸಂಗಮದೊಳ್ ಉಣ್ಣಿಂ"
ಇದನ್ನು ಗಮನಿಸಿದರೆ 'ಊ' ಪಯಣಿಗ ತನ್ನ ಒಡಪಯಣಿಗರಿಗೆ ಕಾಡುದಾರಿಯಲ್ಲಿ ಹೋಗುತ್ತಿರುವಾಗ ಎಚ್ಚರಿಕೆ ಮಾತುಗಳನ್ನಾಡುತ್ತಿದ್ದಾನೆ ಅನ್ಸುತ್ತೆ. ನಿಲ್ಲು ತೋಳ ಬರುತ್ತಿದೆ; ಈಗ ನಮ್ಮ ಪಾಡು ನೆಟ್ಟಗಿಲ್ಲ(ಸಯ್ತಲ್ತು), ಊರು ಬೇರೆ ದೂರದಲ್ಲಿದೆ. ಇತ್ತ ಹಾದಿಗಳ್ಳರ(ಎಡೆತುಡಗರ್) ಕಾಟ ಬೇರೆ.ಓಡುವುದನ್ನು ಕಲಿತು ಉಲ್ಲಿ(random place) ಓಡಕ್ಕು ಕೂಡ ಆಗಲ್ಲ. ತಂದಿರುವ ಬುತ್ತಿ(ಕೂೞ)ನ್ನು 'ಊ'(random) ಕೂಡಲಿನಲ್ಲಿ/ಸಂಗಮದಲ್ಲಿ ತಿನ್ನಿ
ಈಗ ನೋಡೋಣ ಹೇಗೆ'ಊ'ನಿಂದ ಕೆಲವು ಇಂಗಲೀಸ್ ಪದಗಳನ್ನು ಕನ್ನಡಯ್ಸಬಹುದು.
Random = ಊ
Randomness= ಊತನ
Random signal = ಊತೋರುಗ
Random process = ಊ+ಓರಣ= ಊವೋರಣ
Random sample = ಊಮಾದರಿ
ಈಗ ನೋಡೋಣ ಹೇಗೆ 'ಉಲ್ಲಿ' ಬಳಸಬಹುದು.
೧) let's meet somewhere
ನಾವು ಉಲ್ಲಿ ಸಿಗೋಣ.
೨) That shop is somewhere on this road
ಆ ಅಂಗಡಿ ಈ ದಾರಿವುಲ್ಲಿದೆ (ದಾರಿ+ಉಲ್ಲಿದೆ).
ಕವಿರಾಜಮಾರ್ಗದಲ್ಲಿ ಹೀಗೆ ಹಲವು ಕನ್ನಡದ ಕೆಲವು ನಿಬ್ಬರ/ವಿಶೇಶಗಳು ಕಾಣಿಸುತ್ತವೆ. ಆ ನಿಬ್ಬರಗಳನ್ನು ಬಳಸಿಕೊಂಡು ಈಗಿನ ಕಾಲದ ಕೆಲವು ಹೊರಗಿನಿಂದ(ಇಂಗಲೀಸ್) ಬಂದ ಹೊಸ ವಿಶ್ಯ/ಒರೆಗಳನ್ನು ಕನ್ನಡಯ್ಸುಬಹುದು.
ತೊಡರ್ಚು = ಕಟ್ಟು,ಸೇರಿಸು , ಒಳಗಿಸಿಕೊಳ್ಳು (ನುಡಿಯಂ ಛಂದದೊಳೊಂದಿರೆ ತೊಡರ್ಚಲರಿವಾತನಾತನಿಂದಂ ಜಾಣಂ ತಡೆಯದೆ ಮಹಾಧ್ವಕೃತಿಗಳನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ)
ನಿಕ್ಕುವ = ನಿಶ್ಚಿತ = definite

- ವೈಭವ ರವರ ಬ್ಲಾಗ್
- Login or register to post comments
- 461 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಶ್ರುತದುಷ್ಟಕ್ಕೊಂದುದಾಹರೆಣೆ. ಇಲ್ಲಿ ಸಂಧಿ ಮಾಡಿ ಬರೆದಿರುವುದಱಿಂದ ಸ್ತ್ರೀ ಪುರುಷರ ಗುಪ್ತಾಂಗಗಳ ಬಗ್ಗೆ ಕೇಳಿದ ಹಾಗೆ ಇರುವುದಱಿಂದ ಕವಿರಾಜ ಮಾರ್ಗಕಾರನು ಈ ತೆಱನಾಗಿ ಸಂಧಿ ಮಾಡಬಾರದೆನ್ನುತ್ತಾನೆ. ’ಕಲ್ತುಲ್ಲಿಂ’ ಇದನ್ನು ಕಲ್ತು ಉಲ್ಲಿಂ ಎಂದು ಬಿಡಿಸಿದರೂ ಸಂಧಿ ಮಾಡಿದಾಗ ಅಸಭ್ಯವಾಗುವುದಱಿಂದ ಹಾಗೆ ಕೂಡದು.’ಎಂಬಲ್ತುಣ್ಣಿಂ’ ಎಂಬುದನ್ನು ಎಂಬ ಅಲ್ತು ಉಣ್ಣಿಂ ಎಂದು ಬಿಡಿಸಬಹುದಾದರೂ ಸಂಧಿ ಮಾಡಿದಾಗ ಅಸಭ್ಯವಾಗುವುದಱಿಂದ ಇದು ಸಲ್ಲದ ಕಾವ್ಯರಚನೆಯೆನ್ನುತ್ತಾನೆ ಕವಿರಾಜಮಾರ್ಗಕಾರ.
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಸಾರ್,
ಯಾಕೆ ಅಸಬ್ಯ ಅಂತ ಗೊತ್ತಾಗಲಿಲ್ಲ. ದಯವಿಟ್ಟು ಬಿಡಿಸಿ ಹೇಳಿದರೆ ನೆರವಾಗುವುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಕಲ್ತುಲ್ಲಿಂ = ಕಲ್ತು ಉಲ್ಲಿಂ = ಕಲಿತು ಎಲ್ಲಿಯಾದರೂ
ಕಲ್ತುಲ್ಲಿಂ = ಕಲ್ + ತುಲ್ಲಿಂ(ವೆಜಯ್ನ/vagina ) = ಕಲ್ಲಿನ ತುಲ್ಲಿ
ಎಂಬಲ್ತುಣ್ಣಿಂ = ಎಂಬ ಅಲ್ತು ಉಣ್ಣಿಂ
= ಎಂಬಲ್ ತುಣ್ಣಿಂ(ಪೀನಸ್/penis)
ಇದರಲ್ಲಿ ಅಸಭ್ಯ ಏನಿಲ್ಲ.. ಆದ್ರೆ ಏನೋ ಬೇರೆಯಾದೇ ಅರಿತ ಬರುವುದು/ಅಪಾರ್ತ( ಹೇಳಬೇಕಾದ ಅರಿಕೆ ಅಲ್ಲದೇ ಬೇರೇನೋ ಬರುವುದು )
=====================================
ಮಾಯ್ಸ!
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಸಂಧಿ ಮಾಡಿದಾಗ ಗಮನಿಸಿ. ’ಎಂಬಲ್ತುಣ್ಣಿಂ’ ಹಾಗೆಯೆ ’ಕಲ್ತುಲ್ಲಿಂ’ ಎಂಬುದನ್ನು ಓದಿದಾಗ ಪುರುಷ ಮತ್ತು ಸ್ತ್ರೀಯರ ಗುಪ್ತಾಂಗದ ಬಗ್ಗೆ ಹೇೞಿದಂತೆ ಕೇಳುವುದಱಿಂದ ಇದು ’ಶ್ರುತದುಷ್ಟ’. ಅಂದರೆ ಕೇಳಲಿಕ್ಕೆ ಅಸಹ್ಯವಾಗಿರುವುದಱಿಂದ ಇದನ್ನು ಬೞಸಬಾರದೆಂದು ಕವಿರಾಜಮಾರ್ಗಕಾರನೇ ಮುಂದಿನ ಪದ್ಯಗಳಲ್ಲಿ ಹೇೞುತ್ತಾನೆ. ಮುಂದಿನ ಪದ್ಯಗಳನ್ನು ನೀವು ಗಮನಿಸಿಲ್ಲವೆಂದು ಕಾಣುತ್ತದೆ.
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಶ್ರುದದುಷ್ಟಕ್ಕೂ ಉ, ಊ ಬಳಕೆಗೂ ನಂಟಿಲ್ಲ. ಕವಿರಾಜಮಾರ್ಗದಿಂದ ನಾವು ಕಲಿಯಬೇಕಾದದ್ದು, ಉ, ಊ ಗಳ ಬಳಕೆಗಳು ಇತ್ತು ಎಂಬುದನ್ನು.
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಇಲ್ಲೂ ಉಲ್ಲಿಂದೋಡುವಂ ಎಂದರೆ ಮಧ್ಯದಿಂದ ಓಡಿಹೋಗೋಣ ಎಂದರ್ಥ. ತೋಳ ಬರುವ ದಿಕ್ಕೂ ಅಲ್ಲ. ಊರಿನ ಕಡೆ ದಿಕ್ಕೂ ಅಲ್ಲ. ಮಧ್ಯದ ದಿಕ್ಕು. (ಪ್ರಾಯಶ: ಅಡ್ದ ದಾರಿ ಅಥವಾ ಅಡ್ಡ ದಿಕ್ಕು) ಊ ಸಂಗಮದೊಳ್= ಮಧ್ಯದ ನದಿಯ ಸಂಗಮದಲ್ಲಿ. ಪ್ರಾಯಶ: ಇದು ಮಧ್ಯದ ಅಡ್ಡ ದಿಕ್ಕು ಎಂದೆನಲ್ಲ ಅದಱ ವಿರುದ್ದ ದಿಕ್ಕಿನಲ್ಲಿರಬಹುದು. ಪ್ರಾಯಶ: ಹೀಗೆ ಭಾವಿಸಿ. ತೋಳ ಬರುತ್ತಿರುವ ದಿಕ್ಕು ಪೂರ್ವ ಎಂದೆಣಿಸಿ. ಊರಿರುವ ದಿಕ್ಕು ಪಶ್ಚಿಮ. ನಡುವೆ ಎರಡು ದಿಕ್ಕುಗಳಿವೆ ಉತ್ತರ ದಕ್ಷಿಣ. ಉತ್ತರದಲ್ಲಿ ತಪ್ಪಿಸಿಕೊಂಡು ಓಡಿ. ಇಲ್ಲವೇ ದಕ್ಷಿಣದ ದಿಕ್ಕಿನಲ್ಲಿರುವ ನದೀಸಂಗಮದಲ್ಲಿ ತಂದಿರುವ ಬುತ್ತಿ ತಂದು ನೀರು ಕುಡಿಯಿರಿ ಎಂದರ್ಥೈಸಲಿಕ್ಕೂ ಬರುತ್ತದೆ.
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಬುತ್ತಿ ತಂದು ಅಲ್ಲ. ಬುತ್ತಿ ತಿಂದು ಎಂದೋದಿಕೊಳ್ಳಿ
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಇದನ್ನು ಮುಂದುವರೆಸುತ್ತಿದ್ದೇನೆ. ನಾನು ಹೇೞಿದಂತೆ ’ಅಲ್ಲಿ’ ತುಂಬಾ ದೂರದಲ್ಲಿರುವ ಊರು. ’ಇಲ್ಲಿ’ ಇದು ಹತ್ತಿರದಲ್ಲೆ ತೋಳ ಬಂದಿದೆಯೆಂದು ಸೂಚಿಸುವ ಸ್ಥಳ. ಉಲ್ಲಿಂದ ಎಂದರೆ ಮಧ್ಯದಲ್ಲೆಲ್ಲಾದರೂ=’ಅಲ್ಲಿ’ (ಊರು)ಗಿಂತ ಹತ್ತಿರ ’ಇಲ್ಲಿ’ಗಿಂತ (ತೋಳಕ್ಕೆ ಸಿಗದಷ್ಟು ದೂರ) ಅಥವಾ ಈ ’ಉಲ್ಲಿ’ ಗೆ ವಿರುದ್ಧ ದಿಕ್ಕಿನಲ್ಲಿರುವ ’ಊ’ ಸಂಗಮ (ನದೀ ಸಂಗಮವಂತೂ ಸಹಜವಾಗಿ ’ಅಲ್ಲಿ’ರುವ ಊರಿಗಿಂತ ಹತ್ತಿರವಿರಲೇಬೇಕು. ’ಇಲ್ಲಿ’ರುವ ತೋಳದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ದೂರದಲ್ಲಿರಬೇಕು. ಏಕೆಂದರೆ ನದೀಸಂಗಮದಲ್ಲಿ ಊಟ ಮಾಡಿ ನೀರು ಕುಡಿಯಬೇಕೆಂದರೆ ’ಇಲ್ಲಿ’ನ ತೋಳದಿಂದ ಸಾಕಷ್ಟು ದೂರವಿರಲೇಬೇಕು. ಹೇಗೆ ನೋಡಿದರೂ ’ಉಲ್ಲಿ’ ’ಊ ಸಂಗಮಗಳು’ ’ಇಲ್ಲಿ’ ತೋಳಕ್ಕಿಂತ ದೂರವಿರಲೇ ಬೇಕು ’ಅಲ್ಲಿ’ನ ಊರಿಗಿಂತ (ದೂರದ ಊರಿಗಿಂತ) ಹತ್ತಿರವಿರಲೇಬೇಕು. ಹೇಗೆ ನೋಡಿದರೂ ಕಿಟ್ಟೆಲರು ಹೇೞಿದಂತೆ ’ಉಲ್ಲಿ’ ’ಅಲ್ಲಿ’ ಮತ್ತು ’ಇಲ್ಲಿ’ಗಳ ನಡುವೇ ಇರಬೇಕು. ’ಇಲ್ಲಿ’ ಮತ್ತು ಈ ಎರಡು ’ಉಲ್ಲಿ’ಗಳ ದೂರ ’ಅಲ್ಲಿ’ (ದೂರದ ಊರು) ಮತ್ತು ’ಇಲ್ಲಿ’ (ತೋಳ)ಕ್ಕಿಂತ ಹತ್ತಿರವಿರಬೇಕು.
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಅದು ಇದು ಉದು ಆ ಈ ಊ ಅವನು ಇವನು ಉವನು ಇತ್ಯಾದಿಗಳ ಚರ್ಚೆಯನ್ನು ’ಉ’ಕಾರಾದಿಗಳಿಗೆ ’ಅ’ಕಾರಾದಿ ಮತ್ತು ’ಇ’ಕಾರಾದಿಗಳ ಮಧ್ಯೆಯೇ ಇರಬೇಕೆಂಬುದು ಹೞಗನ್ನಡದ ಉಪಯೋಗಗಳಲ್ಲಿ ಹಾಗೂ ತಮಿೞಿನಲ್ಲೂ ಈ ತೆಱನಾಗಿ ಉಪಯೋಗದಲ್ಲಿರುವುದು ಕಂಡಿರುವುದಱಿಂದ (ಕ್ಷಮಿಸಿ ತೆಲುಗು, ಮಲಯಾಳಂ, ತುಳುಭಾಷಿಕ ಪಂಡಿತರು ನನಗೆ ದೊರಕದೇ ಇರುವುದಱಿಂದ) ಯಾದೃಚ್ಛಿಕವಾಗಿ ಯಾವುದೇ ಶಬ್ದ ಬೞಸಿದಾಗ ಭಾಷೆ ಕೆಡುವುದೆಂಬ ಅಭಿಪ್ರಾಯಕ್ಕ್ರೆ ಬಂದಿರುವುದಱಿಂದ (ಹೇಗೆಂದರೆ ’ಹಣ್ಣು’ ಎನ್ನುವುದಕ್ಕೆ ’ಹುಲ್ಲು’ ಎಂದರೆ ಯಾವ ವ್ಯತ್ಯಾಸ ಇಲ್ಲ. ಏಕೆಂದರೆ ಈ ಹಣ್ಣು ಮತ್ತು ಹುಲ್ಲು ಶಬ್ದಗಳಲ್ಲಿ ಹಣ್ಣನ್ನು ’ಹಣ್ಣು’ ವೇ ಸೂಚಿಸಬೇಕು. ಹುಲ್ಲನ್ನು ’ಹುಲ್ಲು’ವೇ ಸೂಚಿಸಬೇಕೆಂಬ ಯಾವ ಗುಣಲಕ್ಷಣಗಳು ಈ ಶಬ್ದಗಳು ಸೂಚಿಸದಿರುವುದಱಿಂದ ಹಾಗೆ ಹೇೞಿದಾಗ ಯಾದೃಚ್ಛಿಕತೆ ಯಾವುದಕ್ಕೆ ಯಾವುದು ಬೇಕಾದರಾಗಬಹುದೆಂದಾದಾಗ ಒಂದು ಭಾಷೆಗೆ ಪೆಟ್ಟು ಬೀೞುತ್ತದೆ. ಭಾಷೆಯ ಅವನತಿ ಪ್ರಾರಂಭವಾಗುತ್ತದೆ. ಆದ್ದಱಿಂದ ಈ ವಿಷಯದಲ್ಲಿ ಈ ಶಬ್ದಗಳ ಬೞಕೆ ಯಥಾವತ್ತಾಗಿ ಇರಬೇಕೆಂದು ನನ್ನ ಅಭಿಪ್ರಾಯ ಇರುವುದಱಿಂದ ನಾನು ಈ ವಿಚಾರವನ್ನು ಇಲ್ಲಿಗೇ ನಿಲ್ಲಿಸುತ್ತೇನೆ. (ಅನ್ಯಭಾಷಿಕನಿಗೆ ಕನ್ನಡದಲ್ಲಿ ’ಹುಚ್ಚ’ ಎಂದರೆ ’ಸುಂದರ’ ಎಂದು ಒಬ್ಬ ವ್ಯಕ್ತಿ ಹೇೞಿ ಎರಡು ಮೂಱು ದಿನ ತಮಾಷೆ ನೋಡಿದ್ದನಂತೆ). ಹಾಗೆ ಕನ್ನಡದ ಬೞಕೆ ನಮ್ಮಿಂದ ಯಾವ ಕಾರಣಕ್ಕೂ ಆಗಬಾರದು.

ಈ ಉಲ್ಲಿ ಊ ಸಂಗಮಗಳು ’ಅಲ್ಲಿ’=ದೂರದ ಊರು ಮತ್ತು ’ಇಲ್ಲಿ’ (ತೋಳ ಇರುವ ಸ್ಥಳ)ಗಳ ನಡುವೆಯಲ್ಲಿ ಎಲ್ಲಾದರೂ (ಯಾದೃಚ್ಛಿಕವಾಗಿ ಆದರೆ ತೋಳ ಮತ್ತು ಊರಿನ ನಡುವಯೇ ಮಾತ್ರ) ಇರಬೇಕು.
ಉ: ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
ಈ ಉಲ್ಲಿ ಸಿಗೋಣ ಎಂಬುದು ನಮ್ಮ ನಿಮ್ಮ ಸ್ಥಳಗಳ ನಡುವೆಯೆಲ್ಲಿಯಾದರೆ ಎಂದರೆ ಮಾತ್ರ ಸರಿ ಎಲ್ಲಾದರು ಎಂದರೆ ತಪ್ಪು.