ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...

May 10, 2008 - 2:18pm — ವೈಭವ

ನಮ್ಮ ಕಂಪನಿಯಲ್ಲಿ ಪ್ರತಿ ಶುಕ್ರವಾರ ಕನ್ನಡ ಸಾಹಿತ್ಯದ ಬಗ್ಗೆ ಮಾತ್ಕೂಟಗಳನ್ನು ಏರ್ಪಡಿಸುತ್ತಾರೆ. ನಮ್ಮ ಕಂಪನಿಯಲ್ಲಿ ಇರುವ ಯಾರಾದರೂ ಕನ್ನಡದ ಕಬ್ಬಿಗರ/ಕಬ್ಬದ ಬಗ್ಗೆ ಅಣಿಯಾಗಿ ಮಾತನಾಡುತ್ತಾರೆ. ಸುಮಾರು ೧೦-೨೦ ಮಂದಿಯಾದರೂ ಇದಕ್ಕೆ ಬರುತ್ತಾರೆ. ಹೆಚ್ಚಾಗಿ ಹಳೆಗನ್ನಡ ಮತ್ತು ನಡುಗನ್ನಡದ ಕಬ್ಬಿಗರ/ಕಬ್ಬದ ಬಗ್ಗೆ ತಿಳಿದುಕೊಳ್ಳಲು ಹೊಸತಾದ ಹುರುಪಿರುವುದನ್ನು ಹಲವು ಮಂದಿಯಲ್ಲಿ ನಾನು ನೋಡಿದ್ದೇನೆ. ಮೊದಲ ಬಾರಿಗೆ ಕುಮಾರವ್ಯಾಸ ಮತ್ತು ಗದುಗಿನ ಬಾರತದ ಬಗ್ಗೆ ಮಾತ್ಕೂಟ ಚೆನ್ನಾಗಿ ನಡೆಯಿತು. ಆಮೇಲೆ ಇನ್ನೊಂದು ಶುಕ್ರವಾರಕ್ಕೆ ನಾನಾಗಿಯೇ 'ಕವಿರಾಜಮಾರ್ಗ'ದ ಬಗ್ಗೆ ಮಾತನಾಡಲು ಹುರುಪು ತೋರಿದೆ. ತಕ್ಕಮಟ್ಟಿಗೆ ಮಾತ್ಕೂಟಕ್ಕೆ ಅಣಿಯಾಗಿ(ನಲ್ಮೆಯ ಗೆಳೆಯರಾದ ಮಾಯ್ಸ, ಸುನೀಲರ ನೆರವನ್ನು ಇಲ್ಲಿ ನೆನೆಯುವುದು ನನ್ನ ದಮ್ಮ) ಹೋದೆ. ಸುಮಾರು ೧೦ ಮಂದಿ ಇದ್ದರು ಅನ್ಸುತ್ತೆ. ನಾವು ಮಯ್ ಮರೆತು ಕವಿರಾಜಮಾರ್ಗದ ಬಗ್ಗೆ ಉದ್ದುದ್ದ ಮಾತನಾಡಿದೆವು. ನಮ್ಮ ಮಾತ್ಕೂಟದ ತಿರುಳು ಹೀಗಿತ್ತು:
೧. ರಟ್ಟಕೂಟರ ಬಗ್ಗೆ
೨. ಕವಿರಾಜಮಾರ್ಗಕ್ಕೆ ಮುಂಚೆ ಕನ್ನಡ ಸಾಹಿತ್ಯ ಹೇಗಿತ್ತು?
೩. ಕವಿರಾಜಮಾರ್ಗದ ಹೆಗ್ಗಳಿಕೆಗಳು
೪. ಕವಿರಾಜಮಾರ್ಗದ ಸಾಲುಗಳು ಮತ್ತು ಅದರ ತಿರುಳನ್ನು ಬಿಡಿಸಿ ಹೇಳುವಿಕೆ
೫. ಕನ್ನಡದಲ್ಲಿ 'ದೇಸಿ' ಚಿಂತನೆ ಹೆಗ್ಗಳಿಕೆ( ಶೆಲ್ಡನ್ ಪೊಲಾಕ್, ಕೆವಿ ಸುಬ್ಬಣ್ಣ)
೬. ತಿರುಳ್ಗನ್ನಡ ನಾಡು
೭. ಕನ್ನಡ- ಸಕ್ಕದ
೮. ಕನ್ನಡಂಗಳ್ ಮತ್ತು ಅವುಗಳ ಬೇರೆತನ
೯. ಕವಿರಾಜಮಾರ್ಗದ ನಿಬ್ಬರಗಳು - ದನಿಯಾಲಂಕಾರ, ಸಪ್ತ ರಿಪುವರ್ಗ
೧೦. ಚಾಣಕ್ಯ v/s ಸಿರಿವಿಜಯ

ಇವುಗಳ ಬಗ್ಗೆ ಮಾತಾಡಿ, ಚರ್ಚಿಸಿ ಮುಗಿಸಿದಾಗ ಒಂದು ಗಂಟೆಯಶ್ಟು ಹೊತ್ತು ಮೀರಿತ್ತು. ಹಲವು ಮಂದಿ ಕವಿರಾಜಮಾರ್ಗದ ಬಗ್ಗೆ ಇದ್ದ ಮಿತ್ (ತಪ್ಪು ತಿಳುವಳಿಕೆ) ಗಳ ಬಗ್ಗೆ ಹೇಳಿದರು. ಮಿಗೆಯಾಗಿ/ವಿಶೇಶವಾಗಿ 'ಕಾವೇರಿಯಿಂದಂ....' ಪದ್ಯದ ಬಗೆಗಿನ ಹೆಮ್ಮೆ ಮತ್ತು ಉಲ್ಲಿ/ಊ ಗಳನ್ನು ಇನ್ನು ಮುಂದೆ ನಾವು ಬಳಸುತ್ತೇವೆ ಎಂದು ಹುರುಪು ತೋರಿದರು.  ಎಲ್ಲರೂ ಚೆನ್ನಾಗಿದೆ ಎಂದು ಹೇಳಿ ಇನ್ನೊಂದು ಮಾತ್ಕೂಟವನ್ನು ಮಾಡಿ ಕವಿರಾಜಮಾರ್ಗದ ಬಗ್ಗೆ ಹೆಚ್ಚು ತಿಳಿಯಬಯಸಿದರು.

ಏನೋ ಗೊತ್ತಿಲ್ಲ ಮಾತ್ಕೂಟವನ್ನು ಮುಗಿಸಿದಾಗ ಮನಸ್ಸಿಗೆ ನಲಿವು, ಹಾಲು ಕುಡಿದಶ್ಟು ಕುಸಿ ಎಲ್ಲ ಒಟ್ಟಿಗೆ ಆಯ್ತು. ಕನ್ನಡಮ್ಮನ ವಸಿಯಾದರೂ ಅಳಿಲುಸೇವೆ ಮಾಡಿದ ಅನಿಸು ಮೂಡಿತು.

 

  • ಕವಿರಾಜಮಾರ್ಗ ನ್ರುಪತುಂಗ ಸಿರಿವಿಜಯ ಕನ್ನಡ ರಟ್ಟಕೂಟ
~.~
  • ವೈಭವ ರವರ ಬ್ಲಾಗ್
  • Login or register to post comments
  • 301 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 12, 2008 - 12:20am — hamsanandi

ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...

hamsanandi's picture

v
ವೈಭವರೆ,

ಖುಶಿಯಾಯಿತು!
ಇದನ್ನ ನೀವು ರೆಕಾರ್‍ಡ್ ಮಾಡಿದ್ದರೆ, ನಮಗೂ ಸ್ವಲ್ಪ ಕೇಳಿಸಿ Smiling

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 12:52am — hpn

ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...

hpn's picture

ಭರತ್ ಸಾರ್, ಏನು ಹೇಳಿದ್ದೆ ಹೇಳಿ ನಾನು? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 8:07am — ವೈಭವ

ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...

ವೈಭವ's picture

ಇದು ಹೊಳೆಯಲಿಲ್ಲ. ಮುಂದೆ ರೆಕಾರ್ಡ್ ಮಾಡಲು ಮೊಗಸುವೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 2:38pm — madhava_hs

ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...

madhava_hs's picture

ಮೊಗಸಿ..ಮೊಗಸಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ದೇಶೀಯ ಚಿಂತನೆಯಲ್ಲಿ ಕವಿರಾಜಮಾರ್ಗವನ್ನು ಮೀರಿಸುವ ಕ್ರುತಿ ವಿಶ್ವಸಾಹಿತ್ಯದಲ್ಲಿ ಇಲ್ಲ..."
  • ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
  • ಕನ್ನಡದ ಬಗ್ಗೆ ಹತ್ತು ಕಣಸುಗಳು
  • ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator