ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಕನ್ನಡದಲ್ಲಿ ವೆರಿಲಾಗ್
ಕನ್ನಡದಲ್ಲಿ ವೆರಿಲಾಗ್(Verilog)
ನಾವು ಮಿನ್ಕೆ ಎಂಜಿನಿಯರ್ ಗಳು ಚಿಪ್ಪುಗಳನ್ನು ಡಿಸಯ್ನ್ ಮಾಡಲು ವೆರಿಲಾಗ್ ಎಂಬ HDL(Hardware Descriptive Language)
ನ್ನು ಬಳಸುತ್ತೇವೆ. ಅದರಲ್ಲಿ ಒಂದು ಬಿಟ್ ನ್ನು(1,0) ನೆನಪಿಡಲು ಪ್ಲಿಪ್-ಪ್ಲಾಪ (Flip-flop)ನ್ನು ಬಳಸುತ್ತೇವೆ. ಆ ಪ್ಲಿಪ್-ಪ್ಲಾಪಗೆ ವೆರಿಲಾಗ್ ಕೋಡ್ ಈ ಕೆಳಕಂಡಂತೆ ಇರುತ್ತದೆ.
http://en.wikipedia.org/wiki/Flip-flop_(electronics)
always @(posedge clk or negedge rst_n)
begin
if ( rst_n == 1'b0)
q <= 1'b0;
else
q <= d;
end
ಇದನ್ನೆ ಕನ್ನಡದಲ್ಲಿ ಬರೆದರೆ ಹೀಗಾಗಬಹುದು.
d = ಒ (ಒಳಗೆ ಬರುವ)
clk=ಕಲಕ
rst_n=ರಸಟ_ಇ
q = ಹೊ (ಹೊರಗೆ ಹೋಗುವ)
ಯಾವಾಗಲೂ @(ಏರುವ ಕಲಕ ಮೇಣ್ ಇಳಿಯುವ ರಸಟ_ಇ)
ಸುರು
(ರಸಟ_ಇ == 0) ಆದರೆ
ಹೊ <= 0;
ಇಲ್ಲವೆ
ಹೊ <= ಒ;
ಮುಗಿ
_________
| |
ಒ ---| |--- ಹೊ
| |
| |
ಕಲಕ --- |> |
|_________|
೦
ರಸಟ_ಇ -----|
ನೇರವಾಗಿ ಹೇಳಬೇಕು ಅಂದರೆ
--> 'ಒ' ವಿನ ಬೆಲೆ(value)ಬದಲಾಗುವವರೆಗೆ ಅದರ ಬೆಲೆಯನ್ನು 'ಹೊ'ನಲ್ಲಿ ನೆನಪಿಟ್ಟಿಕೊಳ್ಳಲಾಗುತ್ತದೆ.
--> ಯಾವಾಗಲೂ'ಹೊ'ವಿನ ಬೆಲೆ 'ಕಲಕ' ಏರಿದಾಗ(0->1) ಮೇಣ್ 'ರಸಟ_ಇ'ಇಳಿದಾಗ(1->0) ಬದಲಾಗುತ್ತದೆ.
ಕೊ.ಕೊ.:
ವೆರಿಲಾಗ್ ನಲ್ಲಿ ಬರೆದರೇನ್ ಅರಿತ ಆಗೋದು ಕನ್ನಡದಲ್ಲೆ ಅಲ್ವ ![]()
ಮೇಣ್ = ಅತ್ವ

- ವೈಭವ ರವರ ಬ್ಲಾಗ್
- Login or register to post comments
- 285 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಕನ್ನಡದಲ್ಲಿ ವೆರಿಲಾಗ್
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಕನ್ನಡದಲ್ಲಿ ವೆರಿಲಾಗ್
ಹಂಸಾನಂದಿಗಳೆ,
ನಿಮ್ಮ ನಗುಮೊಗಗಳಿಗೆ(smiley) ನನ್ನಿ.
ನನ್ನ ಗೆಳೆಯ ಇದನ್ನು ನೋಡಿ ನಿನ್ನ ಹುಚ್ಚು ಹೆಚ್ಚಾಯಿತು ಅಂತ ಬಯ್ದ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡದಲ್ಲಿ ವೆರಿಲಾಗ್
ಹೇ ವೈಭವ ...ಬೊಂಬಾಟ್!
ಕನ್ನಡದ ಸಂಸ್ಕೃತಿ ಇರುವ ಈ ಡೀ ಫ್ಲಿಪ್ ಫ್ಲಾಪ್ ಚೆನ್ನ್ನಾಗಿದೆ!
ಕಲಕ (clk, clock) ದ ಬದಲು ಅಲೆ ಅತ್ವ ತರಂಗ ಬಳಸ ಬಹುದಲ್ವ?
ಒಳಗೆ (d, data) ಬದಲು ದತ್ತ ಹೇಗೆ? ... offcourse ಇದು ಕನ್ನಡ ಅಲ್ಲ!
(q, queue?) ಕನ್ನಡೀಕರನಗೊಂದಾಗ ಹೊರಗೆ ಸರಿಹೊಂದಬಹುದೇನೋ?
ಮುಂದುವರಿಯಲಿ!!!
ಸವಿತೃ
ಉ: ಕನ್ನಡದಲ್ಲಿ ವೆರಿಲಾಗ್
ನೇಸರ,
ಈ ಅಲೆ, ತರಂಗ ಇವುಗಳಿಗೆ ಆಗಲೆ ಎಲ್ಲರ ಮನದಲ್ಲೂ/ಮೆದುಳಿನಲ್ಲೂ ಒಂದು ಅರಿತ ಬೇರೂರಿದೆ. ಅದನ್ನ ಹೋಗಲಾಡಿಸುವುದು ಕಶ್ಟ.
ಅದಕ್ಕೆ ನಾನು c l k -> ಕ ಲ ಕ ಅಂತ ಮಾಡಿದೆ ( ನೀನು 'ಕಲಕಲ', 'ಲಕಲಕ' ಎಂಬುವ ಅನುಕರಣ ಪದಗಳನ್ನು ಕೇಳಿರಬಹುದು).
ಈ ಅನುಕರಣ ಪದಗಳು ಒಂತರ clock(clk signal) ಇದ್ದಂಗೆ ಅಲ್ವ. (same pattern repeats itself).
ಒಂತರದಲ್ಲಿ ಕಲಕ, clk ಗೆ ಚೆನ್ನಾಗಿ ಹೊಂದುತ್ತೆ.
ನಿನ್ನ ಸವಿನುಡಿಗಳಿಗೆ ನನ್ನಿ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡದಲ್ಲಿ ವೆರಿಲಾಗ್
ವೆರಿಲಾಗ್ ಬಗ್ಗೆ ಹೆಚ್ಚು ಹುರುಪಿರುವವರು ಕೆಳಗಿರುವ ಎಳೆ ಕ್ಲಿಕ್ಕಿಸಿ.
http://en.wikipedia.org/wiki/Verilog
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು