ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ರೇಖಾ ರವರ ಬ್ಲಾಗ್

ಗೌರಿ ಬ್ಲಾಗ್

ನನ್ನ ಮಗಳು ಗೌರಿ ನನಗೆ ತೋರಿದ ಹೊಸ ಜಗತ್ತಿನ ಬಗ್ಗೆ ಈ ಬ್ಲಾಗ್. ಕಳೆದ ಆರು ವರ್ಷಗಳಿಂದ ವಿಶಿಷ್ಠಚೇತನಳಾಗಿರುವ ಮಗಳೊಂದಿಗೆ ನಾವೂ ಬೆಳೆಯುತ್ತಿದ್ದೇವೆ. ಈ ಅನುಭವ, ಇಂತಹ ಮಕ್ಕಳನ್ನು ಹೊಂದಿದ ತಂದೆತಾಯಿಗಳಿಗೆ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಸಹಾಯವಾದೀತು ಎಂಬ ನಂಬಿಕೆ ನನ್ನದು. ಅದೇ ರೀತಿ, ಅಂಥ ಮಹನೀಯರ ಅನುಭವ ನಮಗೂ ಸಹಕಾರಿಯಾದೀತು ಎಂಬ ಆಸೆಯಿಂದ ಈ ಬ್ಲಾಗ್‌ ಪ್ರಾರಂಭಿಸಿದ್ದೇನೆ.

ನಾನು ಯಾವ ಕಾಲದಲ್ಲಿ ಇದ್ದೇನೆ...!?

October 15, 2008 - 10:57am — ರೇಖಾ

ಕೆಲವೊಂದು ಅಭ್ಯಾಸಗಳು ಬಾಲ್ಯದಿಂದಲೇ ಬರಬೇಕು. ಓದುವುದು, ಬರೆಯುವುದು, ಸಂಗೀತ, ನೃತ್ಯ, ಆಟೋಟಗಳ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇದ್ದರೆ ಚೆನ್ನ. ನಡುವೆ ಅವನ್ನು ರೂಢಿಸಿಕೊಳ್ಳುವುದು ಕಷ್ಟ.

ಆದರೆ, ಇವತ್ತು ಅವಶ್ಯವಾದ ಹಲವಾರು ಸಂಗತಿಗಳು ನನಗೆ ಬಾಲ್ಯದಲ್ಲಿ ಬರಲಿಲ್ಲ. ಅಂತಹ ವಾತಾವರಣವೂ ಇದ್ದಿಲ್ಲ. ಯಾರಿಗೂ ಅವು ಮುಂದೆ ಬೇಕಾಗಬಹುದು ಎಂಬ ಯೋಚನೆಯಿದ್ದಿಲ್ಲ. ಅದಕ್ಕೆ ಅವಕಾಶವೂ ಇರಲಿಲ್ಲ. ನಮ್ಮ ಪಾಡಿಗೆ ನಾವು ಬೆಳೆದೆವು. ಹೆಣ್ಣುಮಕ್ಕಳಿಗೆ ಒಂದು ಡಿಗ್ರಿ ಮಾಡಿಸಿದರೆ ಆಯಿತು ಎಂಬ ಧೋರಣೆ ಮನೆಯಲ್ಲಿ. ಅದರಾಚೆ ಯೋಚಿಸುವ ಪುರಸೊತ್ತೂ ಅವರಿಗೆ ಇರಲಿಲ್ಲ. ಅದನ್ನು ಕೇಳಿ ಪಡೆಯುವ ಬುದ್ಧಿಯೂ ನಮಗೆ ಇರಲಿಲ್ಲ.

ಹೀಗಾಗಿ ಉದ್ದಕ್ಕೆ ಓದಿದೆವು. ಏನು ಓದಿದೆವು ಎಂಬುದು ಈಗ ನೆನಪಿನಲ್ಲಿ ಇಲ್ಲ. ನೆನಪಿನಲ್ಲಿ ಉಳಿದಿರುವುದು ಈಗ ಉಪಯೋಗಕ್ಕೆ ಬರುತ್ತಿಲ್ಲ. ನಮ್ಮ ಡಿಗ್ರಿ ಕೈಯಲ್ಲಿ ಇಟ್ಟುಕೊಂಡು ಜಗತ್ತನ್ನು ಎದುರಿಸುವುದು ಆಗುವುದಿಲ್ಲ. ಎಷ್ಟೊಂದು ಹೊಸ ವಿಷಯಗಳನ್ನು ಕಲಿಯಬೇಕು ಎಂಬುದು ಗೊತ್ತಾಗುತ್ತ ಹೋದಂತೆ, ಮುಂಚೆಯೇ ಇವನ್ನು ಒಂಚೂರು ಕಲಿತಿದ್ದರೆ ಚೆನ್ನಾಗಿತ್ತು ಎಂದು ಹಳಹಳಿಸುತ್ತೇನೆ.

ನನ್ನ ಮಗಳು ಒಳ್ಳೆಯ ಮನೆಗೆ ಹೋದರೆ ಸಾಕು ಎಂಬ ಧೋರಣೆ ಅಪ್ಪ-ಅವ್ವನದು. ಅವರು ಬೆಳೆದು ಬಂದಿದ್ದೇ ಹಾಗೆ. ಅದರಾಚೆ ಯೋಚಿಸುವ ಸೌಲಭ್ಯವಾಗಲಿ, ದೂರದೃಷ್ಟಿಯಾಗಲಿ ಅವರಿಗೆ ಇರಲಿಲ್ಲ. ತಮ್ಮ ಮಿತಿಯೊಳಗೆ ಸಾಧ್ಯವಾದ ಅತಿ ಹೆಚ್ಚಿನದನ್ನು ಅವರು ನಮಗೆ ಕೊಡಿಸಿದ್ದಾರೆ. ತಮ್ಮ ಅಭಿರುಚಿಗೆ ತಕ್ಕಂತೆ ಬೆಳೆಸಿದ್ದಾರೆ. ಆದರೆ, ಅವುಗಳಿಂದ ನಮಗೆ ಏನು ಉಪಯೋಗವಾಗುತ್ತದೆ ಎಂಬುದನ್ನು ಅವರು ಯೋಚಿಸಲಿಲ್ಲ. ಹೀಗಾಗಿ, ಬಿಎ ಮಾಡಿದೆ. ಆಸಕ್ತಿ ಇತ್ತು ಎಂದು ಒಂಚೂರು ಸಂಗೀತ ಕಲಿತೆ. ಅಷ್ಟರಲ್ಲಿ ಮದುವೆಯಾಯಿತು. ಮುಂದೆ ಗಂಡ ನೋಡಿಕೊಳ್ಳುತ್ತಾನೆ ಎಂಬುದು ತಂದೆತಾಯಿಗಳ ವಿಚಾರ.

ಆದರೆ, ಇಷ್ಟರಿಂದಲೇ ಬದುಕು ಎದುರಿಸಲು ಆದೀತಾ? ಹಾಗಾಗುವುದಿಲ್ಲ ಎಂಬುದು ನನ್ನ ಅನುಭವ.

ಮದುವೆಯಾದಾಗ ಜೀವನ ಹೇಗೆ ಸಾಗಿಸಬೇಕು ಎಂಬುದು ಸ್ವಲ್ಪವೂ ಗೊತ್ತಿದ್ದಿಲ್ಲ. ಕ್ರಮೇಣ ತನ್ನಷ್ಟಕ್ಕೆ ತಾನೇ ತಿಳಿಯುತ್ತ ಹೋಗುತ್ತದೆ ಎಂಬ ವಾತಾವರಣದಲ್ಲಿ ಬೆಳೆದವಳು ನಾನು. ಮೊದಮೊದಲು ಸಮಸ್ಯೆಯಾಗಿದ್ದಿಲ್ಲ. ಕ್ರಮೇಣ ಒಂದೊಂದೇ ರೂಢಿಯಾದವು. ಯಾವಾಗ ಗೌರಿ ಹುಟ್ಟಿದಳೋ, ಆಗ ಕೊಂಚ ಹೆಚ್ಚಿನ ಜವಾಬ್ದಾರಿ ಬಂದಿತು. ಎಷ್ಟೋ ವಿಷಯಗಳು ಗೊತ್ತೇ ಇಲ್ಲ ಎಂಬುದು ಗೊತ್ತಾಗತೊಡಗಿತು.

ಗೌರಿಗೆ ಬೆಳವಣಿಗೆ ಸಮಸ್ಯೆ ಇರುವುದು ಗೊತ್ತಾದಾಗ ಜಗತ್ತೇ ಕಳಚಿಕೊಂಡು ಬಿದ್ದಿತ್ತು. ನಮ್ಮನೆಯಲ್ಲಿ ಯಾರಿಗೂ ಇಂಥ ಪರಿಸ್ಥಿತಿಯನ್ನು ನಿಭಾಯಿಸಿ ಗೊತ್ತಿದ್ದಿಲ್ಲ. ಅವರದು ಸರಳ ಬದುಕು. ಅಲ್ಲಿ ದೊಡ್ಡಮಟ್ಟದ ಏರಿಳಿತಗಳು ಇರಲಿಲ್ಲ. ಯಾವುದೋ ಒಂದು ನೌಕರಿ ಇದ್ದರೆ ಸಾಕು, ಎಂಥದೋ ಒಂದು ಮನೆ ಇದ್ದರಾಯಿತು, ಒಂದಿಷ್ಟು ಸೌಲಭ್ಯಗಳು ಇದ್ದರಾಯಿತು ಎಂಬ ಮನೋಭಾವದಲ್ಲಿ ಬೆಳೆದವಳಿಗೆ ಗೌರಿಯ ಸಮಸ್ಯೆ ಒಂದು ದೊಡ್ಡ ಆಘಾತ.

ಈ ತಯಾರಿ, ಈ ಮನೋಭಾವ ನನ್ನನ್ನು ಬೆಳೆಸುವುದಿಲ್ಲ ಎಂಬುದು ಕ್ರಮೇಣ ಗೊತ್ತಾಗುತ್ತ ಹೋಯಿತು. ಎಷ್ಟೊಂದು ಕಲಿಯುವುದು ಇದೆಯಲ್ಲ ಎಂಬುದು ತಿಳಿಯುತ್ತ ಹೋಯಿತು. ಇಂಗ್ಲಿಷ್ ಕಲಿಯಬೇಕು, ಬರವಣಿಗೆ ಕಲಿಯಬೇಕು, ಮಕ್ಕಳ ಬಗ್ಗೆ ತಿಳಿದುಕೊಳ್ಳಬೇಕು, ಬುದ್ಧಿಮಾಂದ್ಯತೆ ಬಗ್ಗೆ ಗೊತ್ತು ಮಾಡಿಕೊಳ್ಳಬೇಕು, ಒಂಚೂರು ತಂತ್ರಜ್ಞಾನ ಕಲಿಯಬೇಕು, ಹೊಸ ಹೊಸ ಪರಿಕರಗಳ ಬಗ್ಗೆ ತಿಳಿಯಬೇಕು, ಹೊಸ ವಾತಾವರಣ, ಜನ, ಮನಸ್ಸು, ಭಾವನೆಗಳು, ಭಾಷೆ- ಅಬ್ಬಬ್ಬಾ ಎಷ್ಟೊಂದು ವಿಷಯಗಳ ಬಗ್ಗೆ ನನಗೆ ಗೊತ್ತೇ ಇಲ್ಲ ಎಂಬುದು ಗೊತ್ತಾಗುತ್ತ ಹೋಯಿತು.

ಆಗೆಲ್ಲ ತುಂಬ ಹಿಂಸೆಯಾಯಿತು. ನಗುನಗುತ್ತ ಕಲಿಯುವ ಸಮಯ ವ್ಯರ್ಥವಾಗಿ ಹೋಗಿತ್ತು. ಈಗ ಅನಿವಾರ್ಯತೆಗೆ, ಅದೂ ಅರ್ಜೆಂಟಾಗಿ ಕಲಿಯುವ ಅವಶ್ಯಕತೆ ಬಂದಾಗ ನಿಜಕ್ಕೂ ಕಷ್ಟ ಪಡಬೇಕಾಯಿತು.

ಪುಣ್ಯಕ್ಕೆ ಚಿಕ್ಕವಳಿದ್ದಾಗ ಹಟ ಹಿಡಿದು ಸೈಕಲ್ ಕಲಿತಿದ್ದೆ. ಅಪ್ಪ ಮೊಪೆಡ್ ತಂದಾಗ, ಆಗೀಗ ಹಟ ಹಿಡಿದು ಅದನ್ನೂ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಿದಾಗ ಗೌರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದು ತುಂಬ ಸಹಾಯ ಮಾಡಿತು. ಇವರು ಮನೆಯಲ್ಲಿ ಇಲ್ಲದಾಗ, ಸ್ಕೂಟಿ ಮೇಲೆ ಗೌರಿಯನ್ನು ನಾನೇ ಕರೆದುಕೊಂಡು ಹೋಗಲು ಇದರಿಂದ ಸಾಧ್ಯವಾಯಿತು.

ಆದರೆ, ಬಹಳಷ್ಟು ವಿಷಯಗಳು ಇಷ್ಟು ಸರಳವಾಗಿರಲಿಲ್ಲ. ಇಂಗ್ಲಿಷ್ ಸ್ವಲ್ಪ ಅರ್ಥವಾಗುತ್ತಿತ್ತಾದರೂ ಮಾತನಾಡಲು ಬರುತ್ತಿರಲಿಲ್ಲ. ಬೆಂಗಳೂರಿಗೆ ಬಂದಾಗ ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ತಡವರಿಸುವಂತಾಗುತ್ತಿತ್ತು. ಇಂಗ್ಲಿಷ್ ಸುದ್ದಿ ಬೇಗ ಅರ್ಥವಾಗುತ್ತಿರಲಿಲ್ಲ. ಪೇಪರ್ ಓದಿದಾಗ ತಿಳಿಯುತ್ತಿದ್ದುದಕ್ಕಿಂತ ಗೊಂದಲವೇ ಹೆಚ್ಚಾಗಿರುತ್ತಿತ್ತು. ಹೊಸ ಉಪಕರಣಗಳ ಬಳಕೆ ಬೇಗ ರೂಢಿಯಾಗುತ್ತಿರಲಿಲ್ಲ. ಪ್ರತಿಯೊಂದನ್ನೂ ವ್ಯವಧಾನದಿಂದ ತಿಳಿದುಕೊಳ್ಳಲು ಸಮಯದ ಕೊರತೆ. ಎಲ್ಲವೂ ತಕ್ಷಣ ಗೊತ್ತಾಗಬೇಕಾದ ಅನಿವಾರ್ಯತೆ.

ಆಗೆಲ್ಲ ಅನಿಸುತ್ತದೆ: ಚಿಕ್ಕಂದಿನಿಂದಲೇ ಇಂತಹ ಕೆಲವು ವಿಷಯಗಳನ್ನು ಕಲಿಸಿದ್ದರೆ ಎಷ್ಟೊಂದು ಸಹಾಯವಾಗುತ್ತಿತ್ತಲ್ಲ ಎಂದು. ಸೈಕಲ್ ಕಲಿತಿದ್ದರಿಂದ ಸ್ಕೂಟಿ ಓಡಿಸುವುದು ಸರಾಗವಾಯಿತು. ಅದೇ ರೀತಿ, ಹೊಸದನ್ನು ಕಲಿಯುವಂಥ ಮನೋಭಾವ ಇದ್ದಿದ್ದರೆ, ಅದನ್ನು ಮನೆಯಲ್ಲಿ ಬೆಳೆಸಿದ್ದರೆ ಸಮಸ್ಯೆಗಳು ಇಷ್ಟೊಂದು ಕಾಡುತ್ತಿರಲಿಲ್ಲ. ಓದುವುದು, ಬರೆಯುವುದು, ಸಂಗೀತ, ನೃತ್ಯ, ವಾಹನ ಚಾಲನೆ, ಭಾಷೆಗಳು, ಜನರೊಂದಿಗೆ ವ್ಯವಹರಿಸುವುದು- ಇವನ್ನೆಲ್ಲ ಒಂಚೂರು ಕಲಿತಿದ್ದರೆ, ಕ್ರಮೇಣ ಕಲಿಯುವ ಆಸಕ್ತಿಯಾದರೂ ಗಟ್ಟಿಯಾಗಿರುತ್ತಿತ್ತು ಎಂದು ಅನಿಸುತ್ತದೆ.

ಎಲ್ಲವನ್ನೂ ಮುಂಚೆಯೇ ಊಹಿಸಿಕೊಂಡು ಸಿದ್ಧರಾಗುವುದು ಎಲ್ಲ ಸಮಯದಲ್ಲಿ ಸಾಧ್ಯವಾಗಲಿಕ್ಕಿಲ್ಲ. ನಾನು ಬೆಳೆದು ಬಂದ ವಾತಾವರಣ ಅದಕ್ಕೆ ಪೂರಕವೂ ಆಗಿರಲಿಲ್ಲ. ಆದರೆ, ಅವತ್ತೇ ಒಂದು ಪುಟ್ಟ ಬೀಜ ಬಿತ್ತಿದ್ದರೂ ಸಾಕಿತ್ತು, ಇವತ್ತು ಅದು ಮರವಾಗಿ ಬೆಳೆದಿರುತ್ತಿತ್ತೋ ಏನೋ.

ಈಗ ತಡವಾಗಿದೆ ನಿಜ. ಹಾಗಂತ ನಿರಾಶಳಾಗಿಲ್ಲ. ಇಂದಾದರೂ ಆ ಕೆಲಸ ಮಾಡಲು ನಾನು ಮುಂದಾಗಬೇಕಿದೆ. ಎರಡು ಮಕ್ಕಳಾದ ನಂತರ ಕಲಿಯುವಿಕೆ ನಿಂತು ಹೋಗುವುದಿಲ್ಲವಲ್ಲ?

ಹಾಗಂದುಕೊಂಡೇ ನಿಧಾನವಾಗಿ ಇಂಗ್ಲಿಷ್ ಕಲಿಯಲು ಯತ್ನಿಸುತ್ತಿದ್ದೇನೆ. ಅಟ್ಟದ ಮೇಲಿಟ್ಟ ಹಾರ್ಮೋನಿಯಮ್ ಕೆಳಗಿಳಿಸಿ, ಮರೆತೇಹೋದಂತಿದ್ದ ರಾಗಗಳನ್ನು ಮತ್ತೆ ರೂಢಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಗೌರಿಯ ಸಮಸ್ಯೆಗೆ ಇಂಟರ್‍ನೆಟ್‌ನಲ್ಲಿ ಏನಾದರೂ ಗೊತ್ತಾಗುತ್ತದೆಯೇ ಎಂದು ಹುಡುಕುತ್ತಿದ್ದೇನೆ. ಮಕ್ಕಳು ಮಲಗಿದಾಗ ಓದಲು ಪ್ರಾರಂಭಿಸಿದ್ದೇನೆ. ಕಲಿಕೆ ತುಂಬ ನಿಧಾನವಾಗಿದೆ ನಿಜ. ಆದರೆ, ಪ್ರಾರಂಭವಾದರೂ ಆಗಿದೆ. ಅದೇ ಸಂತೋಷ.

ನನ್ನ ಮಕ್ಕಳಿಗಾದರೂ ನಾನು ಇವನ್ನೆಲ್ಲ ಕಲಿಸಬೇಕಲ್ಲ? ಅದಕ್ಕಾಗಿಯಾದರೂ ಕಲಿಯಬೇಕಿದೆ. ಹೀಗಾಗಿ ನಾನು ಮತ್ತೆ ವಿದ್ಯಾರ್ಥಿನಿಯಾಗಿದ್ದೇನೆ. ಒಂದೇ ವ್ಯತ್ಯಾಸವೆಂದರೆ, ಆಗ ನಾನು ಬರೀ ವಿದ್ಯಾರ್ಥಿನಿಯಾಗಿದ್ದೆ. ಈಗ ಎರಡು ಮಕ್ಕಳ ತಾಯಾಗಿರುವ ವಿದ್ಯಾರ್ಥಿನಿ.

ಇದೂ ಒಂಥರಾ ಕಲಿಕೆಯೇ.

- ರೇಖಾ ಚಾಮರಾಜ

  • ಕಲಿಕೆ
  • ತಿಳಿವಳಿಕೆ
~.~
  • ರೇಖಾ ರವರ ಬ್ಲಾಗ್
  • Login or register to post comments
  • 276 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 15, 2008 - 9:39pm — hamsanandi

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

hamsanandi's picture

ರೇಖಾ ಅವರೆ,

ಮನಸ್ಸಿಗೆ ತಟ್ಟುವಂತೆ ಬರೆದಿದ್ದೀರ.

ಎಡರು ತೊಡರುಗಳ ನಡುವೆ ಮುಂದೆ ನಡೆಯುವುದೇ ಜೀವನವಲ್ಲವೇ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 5:19pm — ರೇಖಾ

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

ರೇಖಾ's picture

ನಿಜ ಹಂಸಾನಂದಿಯವರೆ, ಎಡರು ತೊಡರುಗಳನ್ನು ದಾಟಿ ಹೋಗಲೇಬೇಕು ಅದೇ ಜೀವನ.
- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 11:51am — shylaswamy

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

shylaswamy's picture

ಪ್ರಿಯ ರೇಖಾ ಅವರೆ,
ತಮ್ಮ ನೋವಿನ ನುಡಿಗಳು ಮನಮುಟ್ಟುತ್ತಿವೆ. ಅದರೊಂದಿಗೆ ತಾವು ಅನೇಕ ವಿಚಾರಗಳನ್ನು ಕಲಿಯಲು ಹೊರಟಿರುವುದನ್ನು ನೋಡಿದಾಗ ನಿಮ್ಮ ಬಗ್ಗೆ ಮೆಚ್ಚುಗೆ ಆಗಿದೆ. ತಮ್ಮ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಇಂಗ್ಲೀಷ್‍ನಲ್ಲಿ ಒಂದು ರೂಢಿ ಮಾತಿದೆ ‘Better late than never' ಅಂತ. ಬಾಲ್ಯದಲ್ಲಿ ಆಗಲಿಲ್ಲವಲ್ಲ ಎಂದು ಕೊರಗಬೇಡಿ. ನೀವು ಇನ್ನೂ ಚಿಕ್ಕವರು. ಕಲಿಯುವ ಉತ್ಸಾಹವೂ ಇದೆ. ವಯಸ್ಸೂ ಇದೆ. ಮುಂದುವರೆಸಿ. ಖಂಡಿತವಾಗಿಯೂ ಯಶಸ್ಸು ಕಾಣುತ್ತೀರಿ. ನೀವೂ ಕಲಿಯಿರಿ, ನಿಮ್ಮ ಮಕ್ಕಳಿಗೂ ಕಲಿಸಿರಿ. ನಿಮಗೆ ಒಳ್ಳೆಯದಾಗಲಿ.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 5:16pm — ರೇಖಾ

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

ರೇಖಾ's picture

ನಿಮ್ಮ ಹಾರೈಕೆಗೆ ಥ್ಯಾಂಕ್ಸ ಶೈಲಾ ಮೆಡಂ
- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 1:29pm — shreedevikalasad

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

shreedevikalasad's picture

ರೇಖಾ, ನಿಜಕ್ಕೂ ಖುಷಿಯಾಯ್ತು. ಅನಿವಾರ್ಯ ಒಂದುಕಡೆ. ಆದರೆ ನೆಮ್ಮದಿಯೂ ಕಲಿಕೆಯಲ್ಲಿಯೇ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 5:14pm — ರೇಖಾ

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

ರೇಖಾ's picture

ಕಲಿತಿದಿನಿ ಶ್ರೀದೇವಿಯವರೆ ಅದರಿಂದ ಮಕ್ಕಳಿಗೆ ಸಹಾಯ ಆದರೆ ಸಾಕು.
- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 19, 2008 - 10:02pm — ಗಣೇಶ

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

ಗಣೇಶ's picture

ರೇಖಾ ಮತ್ತು ಚಾಮರಾಜರವರೇ,

ಕೆಲವು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯವಾಗುವ ಔಷಧೀ ಸಸ್ಯಗಳ ಲಿಸ್ಟ್ :
ಶಂಖಪುಷ್ಪೀ- Convolvulus pleuricaulis

ಬ್ರಾಹ್ಮೀ- Bacopa monnieri

ವಚಾ- Acorus calamus

ಮಂಡೂಕ ಪರ್ಣೀ-Centella asiatica

ಅಶ್ವಗಂಧ- Withania somnifera

ಜ್ಯೋತಿಷ್ಮತಿ- Celastrus paniculata

ಜಟಾಮಾಂಸಿ- Nardostachys jatamansi
ಉಪಯೋಗಿಸುವ ರೀತಿ ಆಯುರ್ವೇದೀಯ ವೈದ್ಯರಿಂದ ಕೇಳಿ ತಿಳಿದುಕೊಳ್ಳಬೇಕು.
ತಪ್ಪು ತಿಳಿಯಬೇಡಿ. ನೀವು ಇಷ್ಟರೊಳಗೆ ಇವೆಲ್ಲಾ ಹುಡುಕಿ ಪ್ರಯತ್ನಿಸಿಯಾಗಿರಬಹುದು. ಅಥವಾ ಗೌರಿಯ ಸಮಸ್ಯೆಗೆ ಇದು ಸಂಬಂಧಿಸಿಯೇ ಇಲ್ಲದಿರಬಹುದು.

ನಿಮಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇಂಟರ್ನೆಟ್‌ನಲ್ಲಿ ಹುಡುಕಿ ಒಟ್ಟು ಮಾಡಿ ಬರೆದೆ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 20, 2008 - 4:06pm — ರೇಖಾ

ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?

ರೇಖಾ's picture

ಥ್ಯಾಂಕ್ಸ ಗಣೇಶರವರೆ ನಿಮ್ಮ ಕಾಳಜಿಗೆ. ನೀವು ನಮ್ಮ ಗೌರಿಗೆ ಸಂಬಂಧಿಸಿದ ಕುರಿತು ಎಷ್ಟೆಲ್ಲ ಮಾಹಿತಿ ನೀಡಿದ್ದೀರಿ. ಹೃದಯ ತುಂಬಿ ಬಂತು. ನೀವು ತಿಳಿಸಿದ ಕೆಲವೊಂದು ಸಸ್ಯಗಳ ಔಷಧಗಳನ್ನು ಈಗಾಗಲೇ ಕೊಡುತ್ತಿದ್ದೇವೆ. ನಿಮ್ಮಂಥ ಹಲವಾರು ಸಹೃದಯರ ಹಾರೈಕೆ ಆಕೆಯ ಮೇಲಿದೆ. ಅದೇ ನಿಜವಾದ ಔಷಧಿ.

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಣ್ಣು ನೋಡೇ ಗೌರಿ
  • ಕಣ್ಣು ನೋಡೇ ಗೌರಿ
  • ಬದುಕೇ, ನಿನಗೊಂದು ಥ್ಯಾಂಕ್ಸ್‌
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
Syndicate content

ಲೇಖಕರು

ರೇಖಾ's picture

ಪೂರ್ಣ ಹೆಸರು
ಗೌರಿ ಬ್ಲಾಗ್

ಪರಿಚಯ

ನನ್ನ ಮಗಳ ಹೆಸರಿನಲ್ಲಿ ಬರೆಯುತ್ತಿರುವ ಬ್ಲಾಗ್ ಇದು. ಇಲ್ಲಿ ಬರಲಿರುವ ಕೆಲವು ಬರಹಗಳು ತುಂಬ ಜನ ತಂದೆ-ತಾಯಿಗಳಿಗೆ ಸಹಾಯವಾಗಲಿ ಎಂಬುದು ನನ್ನ ಆಸೆ. ನನ್ನ ಮಗಳೊಂದಿಗೆ ಕಂಡ ಹೊಸ ಜಗತ್ತಿನ ಕುರಿತ ಬರವಣಿಗೆ ನನ್ನ ಉದ್ದೇಶ.

- ರೇಖಾ ಚಾಮರಾಜ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 194 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator