ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅ, ಆ, ಇ, ಈ....
ಭಾವನೆಗಳ ಬೆನ್ನೇರಿ...
ನನ್ನೊಲವಿಗೆ....
ನಾ ಚಿಗುರಾಗುವೆ
ಎನ್ನೊಳಗೆ ಲೀನವಾಗುವ
ಮುಂಜಾವದ ಮಂಜು
ನೀನಾಗಿ ಬರುವೆಯೆಂದು...
ನಾ ಹೂವಾಗುವೆ
ಈ ಪ್ರೀತಿ ಮಧುವ
ಹೀರ ಬರುವ ತುಂಬಿ
ನೀನಾಗಿ ಬರುವೆಯೆಂದು....
ನಾ ಹಣ್ಣಾಗುವೆ
ಈ ರುಚಿಯ ಸವಿಯ ಬರುವ
ಹೆಣ್ಣು ಗಿಳಿ
ನೀನಾಗಿ ಬರುವೆಯೆಂದು...
ನಾ ಮರವಾಗುವೆ
ಎನ್ನಪ್ಪಿ ಬೆಳೆವ
ಲಲಿತ ಲತೆ
ನೀನಾಗಿ ಬರುವೆಯೆಂದು...
ನಾ ಮರದ ಕೊಳಲಾಗುವೆ
ಒಳಗಣ್ಣಿನಿಂದುಸುರಿ ಬರುವ
ಸ್ವರ ನಿನಾದವಾಗಿ
ನೀ ಕಾಣ ಬರುವೆಯೆಂದು....
ನಾ ನಿರುಳ ಶಶಿಯಾಗುವೆ
ನೀ ನಭದಿ ಮಿನುಗುವ
ಧೃವತಾರೆಯಾಗಿ
ಕಾಣಬರುವೆಯೆಂದು.....
ಕಡೆಗೆ
ನಾ ನಾನಾಗುವೆ
ನೀ ನೀನಾಗಿ
ಎನ್ನೆದೆಬಡಿತದ ತಾಳವಾಗಿ
ಇರುವೆಯೆಂದು..ಎಂದೆಂದೂ....
- ಪ್ರಶಾಂತ ಎಂ.ಸಿ.

- ಪ್ರಶಾಂತ ಎಂ.ಸಿ. ರವರ ಬ್ಲಾಗ್
- Login or register to post comments
- 213 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನನ್ನೊಲವಿಗೆ....
ನಾ ಅಭಿಮಾನಿಯಾಗುವೆ,
ನೀ ಹೀಗೇ ಭಾವಗಳನ್ನು,
ಪದಗಳಾಗಿಸುತ್ತಿದ್ದರೆ..
ಉ: ನನ್ನೊಲವಿಗೆ....
ತುಂಬಾ ಭಾವುಕರಾಗಿದ್ದೀರಿ ಪ್ರಶಾಂತ. ಅದಕ್ಕೆಂದೇ ಕವನ ಚೆನ್ನಾಗಿ ಮೂಡಿ ಬಂದಿದೆ. ಹೀಗೇ ಬರೆಯುತ್ತಿರಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ನನ್ನೊಲವಿಗೆ....
ಸಂಪದ ಬಳಗಕ್ಕೆ ಸ್ವಾಗತ ಪ್ರಶಾಂತ,
ನಿಜವಾಗಲೂ ಕವನ ಭಾವದ ಬೆನ್ನೇರಿ......ಯೇ ಬಂದಿದೆ