"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಹಿಂದೂ ಉಗ್ರ - ಮೀಡಿಯಾದ ಮತ್ತೊಂದು ಮ್ಯಾಜಿಕಲ್ ಪದ.... ಇಷ್ಟು ವರ್ಷ ಎಂಥಾದ್ದೆ ಉಗ್ರವಾದ ಈ ದೇಶ ಕಂಡಿದ್ರು ಸಹಿಸಿದ್ರು ಸಹ "ಕೆಲವು ಹಿಂದೂಗಳ ಮಾಡಿದ ಅತ್ಯಂತ ಹೇಯ ಕೃತ್ಯ" (೫ ಮುಗ್ದ/ಅಮಾಯಕ ವೋಟು ಬ್ಯಾಂಕ್ ನ ಹತ್ಯೆ) ಹಿಂದೂ ವಿರೋಧಿ ಸಮಾಜದವರಿಗೆ ನುಂಗಲಾರದ ತುತ್ತಾಗಿದೆ. ಇಷ್ಟು ವರ್ಷ/ಈಗಲೂ ಸಹ ಜಿಹಾದ್(ಮುಸ್ಲಿಂ) ನಡೆಸುತ್ತಿರುವವರು ಅಥವಾ ಕ್ರುಸೇಡರ್ಸ(ಕ್ರೈಸ್ತ) ಗಳ ವಿಷಯ ಬಂದಾಗ ಮೀಡಿಯಾ ಹಾಗು ವೋಟು ಬ್ಯಾಂಕ್ ನವರ ಕಹಳೆ ಒಂದೇ - ಟೆರರಿಸ್ಟ್ ಗಳಿಗೆ ಜಾತಿ ಧರ್ಮ ಇಲ್ಲ ಅಂತ. ಆದ್ರೆ ಈಗ ನಡಿತಿರೋ ಮಾಳೆಗಾವ್ ಬಾಂಬ್ ತನಿಖೆಯಲ್ಲಿ ಹಿಂದೂ ಉಗ್ರ ಹುಟ್ಟಿದ. ಟೆರರಿಸ್ಟ್ ಗಳಿಗೆ ಜಾತಿ ಇದೆ ಅಂತ ಜಾಗತಿಕ ಮಟ್ಟದಲ್ಲಿ ನಮ್ಮ ಭಾರತೀಯರು ವಿಶೇಷವಾಗಿ ಕ್ರೈಸ್ತರ ದಾಳವಾಗಿರುವ ಮೀಡಿಯಾ ಬೊಗಳುತ್ತಿರುವುದು ಇದನ್ನೇ. ಇದೊಂದು ವಿಷಯದಲ್ಲಿ ಹಿಂದೆ ಉಳಿದಿದ್ರೆನೋ ಆದ್ರೆ ಅದನ್ನು ಸಹ ಹಿಂದೂ ಉಗ್ರರ ಹುಟ್ಟಿನಿಂದ ಪೂರ್ತಿ ಮಾಡಿಕೊಂಡರು. ಪಾಕಿಸ್ತಾನಿ ಸೈನಿಕರು ಗಡಿ ಭಾಗದಲ್ಲಿ ಯಾವಾಗಲು ನಾಯಿಗಳು ಕೆರೆದಂತೆ ನಮ್ಮ ಗಡಿ ಮೇಲೆ ಕಾಲು ಇಡುವಾಗ ಅವರನ್ನು ಹಿಮ್ಮೆಟ್ಟಿಸುವ ನಮ್ಮ ಸೈನಿಕರು ಸಹ ಉಗ್ರರೇ, ಇತ್ತ ಚೀನಾದವರು ಅರುನಾಚಲ್ ಪ್ರದೇಶ್ ತಮ್ಮದೇ ಎಂದು ಹೇಳಿಕೊಂಡರು ಸಹ ಅವರನ್ನು ನಮ್ಮ ಗಡಿಯೊಳಗೆ ನುಸುಳಲಾರದೆ ತಡೆಗಟ್ಟುವ ನಮ್ಮ ಸೈನಿಕರು ಸಹ ಉಗ್ರರೇ... ಎಲ್ಲ ಕೂಡ ಒಂದೇ ತಕ್ಕಡಿಲಿ ಹಾಕಬಹುದಲ್ವ "retaliation" . ಈ ಥರ ಹಿಂದೂ ಉಗ್ರ ಇದ್ದಿದ್ರೆ ಅವನು ಜಗತ್ತಿನ್ನ ಎಲ್ಲ ಭಾಗದಲ್ಲೂ ಹೋಗಿ ತನ್ನ ಉಗ್ರತನವನ್ನು ತೋರಿಸುತ್ತಿದ್ದ ಪಾಪ ಈ ಅಂಶ ಎಲ್ಲ ವೋಟು ಬ್ಯಾಂಕ್ ಗೆ ಅಂತಾನೆ ಬದುಕ್ತಿರೋ ರಾಜಕಾರಣಿಗಳಿಗೆ ಬೇಕಿಲ್ಲ ಅಥವಾ ಕ್ರೈಸ್ತರ ಹಿಡಿತದಲ್ಲಿರುವ ಈ ಮೀಡಿಯಾ ನೆಟ್ವರ್ಕ್ ಗೆ ಬೇಕಿಲ್ಲ.. ಬೇಕಾಗಿರೋದು ಏನಿದ್ರು ಬಿಸಿ ಬಿಸಿ ಮಸಾಲೆ ಸುದ್ದಿ.. ಸತ್ಯ, ಅಸತ್ಯ ಬೇಕಿಲ್ಲ ಹಿಂದೂ ರಾಷ್ಟ್ರದಲ್ಲಿ ಹಿಂದೂ ಮೇಲೆ ಕಾಲೋರೆಸಿದರೆ ಅದಕ್ಕಿಂತ ಮಸಾಲೆ ಏನು ಇರೋಕ್ಕೆ ಸಾಧ್ಯ?? ಕೂಗಾಡೋರು ಕಮ್ಮಿ, ಕೂಗಿದರು ಸಹ ಅದು ಅರಣ್ಯ ರೋದನೆ ಆಗುತ್ತೆ ವಿನಃ ಹುಲ್ಲು ಗರಿಕೆ ಸಹ ಅಳುಗಾಡೋಲ್ಲ ಯಾಕಂದ್ರೆ ಮೇಲಿನಿಂದ ಮಧ್ಯದವರೆಗೂ ಕೂತಿರೋರು ಬೆನ್ನು ಸವರುತ್ತ ಕತ್ತು ಕುಯ್ದು ಮೇಲೇರಿದ ಹಿಂದೂ ವಿರೋಧಿಗಳು.. ಕನ್ನಡಿಗರು ಅನ್ನೋ ಕಾನ್ಸೆಪ್ಟ್ ಹಾಗು ಹಿಂದೂಗಳು ಅನ್ನೋ ಕಾನ್ಸೆಪ್ಟ್ ಗೆ ತುಂಬ ಸಾಮ್ಯತೆ ಇದೆ... ಇಬ್ರು ಸಹ ಇರೋ ತಮಗೆ ಇರೋ ಗೌರವ ಮಾನ್ಯತೆ ನ granted ಆಗಿ ತೊಗೋಳೋದು. ಉಳಿಸಬೇಕೆಂಬ ಹಂಬಲ ಇಲ್ಲ ಬೆಳೆಸಬೇಕೆಂಬ ಛಲ ಇಲ್ಲ.. ಕೋಟಿ ಕನ್ನಡಿಗರಿದ್ರೂ ಸಹ ಕನ್ನಡಿಗರದ್ದು ಅಂತ ಹೇಳಿಕೊಲ್ಲೋಕ್ಕೆ ಕಸ್ತೂರಿ ಎಂಬ ಲೋಕಲ್ ವಾಹಿನಿ ಬಿಟ್ರೆ ರಾಷ್ಟ್ರಮಟ್ಟದಲ್ಲಿ ಒಂದು ವಾಹಿನಿ ಸಹ ಇಲ್ಲ ಹಾಗೆಯೇ ಸಹ ಹಿಂದೂ ಪರ ಬರೆಯುವ ಹಲವು ದಿನಪತ್ರಿಕೆ ಇದ್ರೂ ಸಹ ಶತ ಕೋಟಿ ಹಿಂದುಗಳಿಗೆ ಅಂತ ರಾಷ್ಟ್ರಮಟ್ಟದಲ್ಲಿ ಒಂದೂ ಹಿಂದೂ ಪರ ಮೀಡಿಯಾ ಇಲ್ಲ... ಬರೋರಿಗೆಲ್ಲ ಹಾದಿ ಮಾಡಿಕೊಟ್ಟು ತಾವೇ ಮೆಟ್ಟಿಲಾಗಿ ಅವರಿಗೆ ಬೆಳೆಯೊಕ್ಕೆ ಬಿಡುವುದು.. ಬೆಳೆದ ಮೇಲೆ ಅವರು ತುಳಿಯೋಕ್ಕೆ ಶುರು ಮಾಡಿದಾಗ ಬಲಿಯಾಗುತ್ತಿರುವ ನಿಸ್ಸಹಾಯಕ ಕುರಿಯಂತೆ ಅರಚುವುದು ಇಲ್ಲದಿದ್ದರೆ ಅವರು ತುಣುಕು ಎಸೆಯುತ್ತಾರೆಂದು ತಿಳಿದು ಅವರ ಬೂಟನ್ನು ನೆಕ್ಕುವುದು (ವೋಟ್ ಬ್ಯಾಂಕ್ ನ ಮುಖ)... ಇದೆಲ್ಲದರ ಮೇಲೆಗೆ ಸದ್ಯದ ಪರಿಸ್ಥಿತಿಗೆ ಬೇಡವಾದ ವಿಶಾಲ ಮನೋಭಾವ, ಸಹನ ಶೀಲತೆ ಪ್ರದರ್ಶನ ಮಾಡುವುದು. ಜಗತ್ತಿನಲ್ಲಿ ಯಾವುದೇ ಧರ್ಮದಲ್ಲಿ ಇಲ್ಲದ ಪಾರದರ್ಶಕತೆ, ಪ್ರಶ್ನೆ ಮಾಡುವ ಸ್ವಾತಂತ್ರ್ಯ, ವಿಷಯಗಳ ಬಗ್ಗೆ ಇರುವ ಗ್ರಂಥಗಳು ಕೇವಲ ಸನಾತನ ಧರ್ಮದಲ್ಲಿ ಮಾತ್ರ ಇರುವುದು. ಅರ್ಥ ಮಾಡ್ಕೊಳ್ಳಕ್ಕೆ ಆಗದೆ ಇರೋದು ನಮ್ ಕರ್ಮ ಬರೆದವರು ಅರ್ಥ ಮಾಡ್ಕೋಬೇಡಿ ಅಂತ ಹೇಳಿಲ್ಲ ಅಲ್ವ.. ಕಾಲ ಕಲಿಗಾಲದ ನಾಲ್ಕನೆ ಪಾದ, ಈ ಪಾದದಲ್ಲಿ ಈ ಭೂಮಿ ವಿನಾಶ ಹೊಂದುವುದು ಅಗ್ನಿ ಇಂದ ಅಂತ ಉಲ್ಲೇಖ ಇದೆ ಗ್ಲೋಬಲ್ ವಾರ್ಮಿಂಗ್ ಏನ್ ಮಾಡ್ತಿದೆ ಅಂತ ವಿಶೇಷವಾಗಿ ಹೇಳಬೇಕಿಲ್ಲ. ಅಂತು ಇಂತೂ ಹಿಂದೂ ಉಗ್ರ ನ ಹುಟ್ಟಿಸಿದರು... ಹುಟ್ಟಿಸಿದ ಮೇಲೆ ಪೋಷಿಸದೆ ಇದ್ದಲ್ಲಿ ಅದು ಹೇಗೆ ತಾನೆ ಬೆಳೆದಾತು? ಈ ಹಿಂದೂ ಉಗ್ರನಿಗು ಸಹ ಅದೇ ಬಂದೊದಗಿರುವುದು. ATS ನವರು ಆರೋಪದ ಮೇಲೆ ಆರೋಪ ಹೇರುತ್ತ ಹೋದರೆ ವಿನಃ ಒಂದು ಪುರಾವೆ ಕೂಡ ಅವರ ಬಳಿಯಿಲ್ಲ ಯಾಕೆಂದರೆ ಅವರ ಮಾತಿನಲ್ಲಿ ಸತ್ಯಾಂಶವಿಲ್ಲ ಕೇವಲ ರಾಜಕೀಯ ದಾಳವಾಗಿ ಎಲೆಕ್ಷನ್ ಮುಗಿಯುವ ತನಕ ಹಿಂದೂ ಉಗ್ರನನ್ನು ಹೆಂಗಾದರು ಮಾಡಿ ಪೋಷಿಸುವುದು ಅವರ ಆದ್ಯ ಕರ್ತವ್ಯ. ಇಷ್ಟೆಲ್ಲಾ ಬರಿತಿರೋ ನಾನು ಪುರಾವೆ ಇಲ್ಲದೆ ಬರೆದ್ರೆ ನಂಗೆ ತಲೆ ಕೆಟ್ಟಿದೆ ಅಂತಾನೆ ಅನ್ಬೇಕು ಅದಕ್ಕೋಸ್ಕರ ಅಂತಾನೆ ಹಿಂದೂ ಉಗ್ರ ಪ್ರಗ್ಯಾ ಸಾಧ್ವಿ ಅವರ ಕೋರ್ಟ್ ಆಫ್ಫಿಡವಿಟ್ ನ ಕೊಂಡಿಯನ್ನು ಕೊಟ್ಟಿದೀನಿ. ೨ ನಿಮಿಷ ಬದಿಗಿಟ್ಟು ಇದನ್ನು ಓದಿದರೆ ಸತ್ಯ ಏನೆಂದು ಗೊತ್ತಾಗುತ್ತೆ.

ಕೆಳಗಿನ ಲಿಂಕ್ ಕ್ಲಿಕ್ಕಿಸಿ
http://www.badongo.com/file/12321107.

ಒಂದೆರಡು ಲಾಜಿಕಾಲ್ ಪ್ರಶ್ನೆ
೧. ಕೇಸ್ ಫೈಲೇ ಮಾಡದೆ ಸಾಧ್ವಿ ಅವರನ್ನು ಹಲವು ದಿನಗಳವರೆಗು ಹೇಗೆ ಅರೆಸ್ಟ್ ಮಾಡಿದರು?
೨. ಅಷ್ಟು ದಿನಗಳು ಒಂದು ಮಹಿಳಾ ಪೋಲಿಸ್ ಇಲ್ಲದೆ detention ನಲ್ಲಿ ಇಡಬಹುದಾ?
೩. ಅಷ್ಟೂ ದಿನಗಳಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುವ ಅಗತ್ಯ ಇತ್ತಾ?
೪. ಅಷ್ಟು ದಿನ ವಿಚಾರಣೆ ಮಾಡಿದ ಮೇಲೆ ಏನು ಪುರಾವೆ ಯಾಕೆ ಸಿಗಲಿಲ್ಲ?
೫. ಒಂದು ಹೆಂಗಸಿಗೆ ಗಂಡು ಪೋಲಿಸ್ ವಿಚಾರಣೆ ಮಾಡುವುದು ರೂಲ್ಸ್ ಪ್ರಕಾರ ವಿರುದ್ಧ. ಮಹಿಳಾ ಪೋಲಿಸ್ ವಿಚಾರಣೆ ಮಾಡಬೇಕು, ಇದರ ವಿರುದ್ಧ ಯಾರದೇ ಧ್ವನಿ ಇಲ್ಲ..
೬. ಮಾನವ ಹಕ್ಕು ಉಲ್ಲಂಘನೆಯವರ ಧ್ವನಿ ಯಾಕೆ ಇಲ್ಲ.
೭. ರಾಷ್ಟ್ರೀಯ ಮಹಿಳಾ ಸಂಘದ ಧ್ವನಿ ಯಾಕೆ ಇಲ್ಲ...
ಈ ಎರಡು ಸಂಘದವರು ಅಲ್ಪ ಸಂಖ್ಯಾತರು ಅಂದ್ರೆ ಪ್ರಾಣ ಹೋದ ಹಾಗೆ ಅರಚುವ ಜನ ಯಾಕೆ ಸುಮ್ಮನೆ ಇದಾರೆ. ಹಿಂದೂಗಳ ಹಕ್ಕು ಹಕ್ಕಲ್ಲವ? ಅಥವ ಪ್ರಗ್ಯಾ ಸಾಧ್ವಿ,,, ಅವರ ಕಣ್ಣಿಗೆ ಹೆಣ್ಣಿನ ತರಹ ಕಂಡಿಲ್ವಾ?
೮. ಮೀಡಿಯಾ ದವರು ಈ ಕೋರ್ಟ್ ಆಫ್ಫಿದವಿತ್ ಅನ್ನು ಯಾಕೆ ಬಹಿರಂಗ ಪಡಿಸಿಲ್ಲ?

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಳಚಿಬೀಳುವ ಮುಖವಾಡ

harshab's picture

ಸರಿಯಾಗಿ ಬರೆದಿದ್ದೀರಿ.

Syndicate content