ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಂಪದಕ್ಕಾಗಿ ಒಂದು ಮಾತು
ನಮ್ಮ ಕನ್ನಡ ಸಂಪದ ನನ್ನ ಮನಸ್ಸಿಗೆ ತುಂಬಾ ಮುದ ನೀಡುತ್ತಿದೆ. ಇಲ್ಲಿ ಎಲ್ಲಾ ಲೇಖನಗಳು ತಮ್ಮ ಮನಸ್ಸಿನ ಅಂತರಂಗವನ್ನು ಭಾವನೆಗಳನ್ನುತಮಗೆ ತೀಳಿದ ಬಾಷೆಯಲ್ಲಿ ಮುದ್ದಾಗಿ ಮುಸುಕಾಗಿ ಸಂತೋಷದಿಂದ ಸಿಟ್ಟಿನಿಂದ ಯೋಚಿಸಿ ಯೋಚಿಸದೇ ಯಾವುದೋ ಒಂದು ರೀತಿ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಿದ್ದಾರೆ. ಅದರು ಎಲ್ಲರು ತಮ್ಮ ಕನ್ನಡದ ಬಗ್ಗೆ ವಿಷಯ ಬಂದಾಗ ಎಲ್ಲರ ಪ್ರತಿಕ್ರಿಯೆ ನನ್ನ ಮನಸಿಗೆ ತುಂಬಾ ಖುಷಿ ಕೋಡುತ್ತದೆ. ಎಲ್ಲರಿಗು ಅದರ ಮೇಲೆ ಇರುವ ಕಾಳಜಿ ನಮ್ಮ ಸಂಪದ ಮಿತ್ರರ ಸಹಾಯದಿಂದಲೇ ಇಲ್ಲಿ ನಮ್ಮೆಲ್ಲರ ಬಾವನೆ ನೆಂಚಿಕೋಳ್ಳಲು ಸಹಾಯವಾಗಿರುವುದು. ಇಲ್ಲಿ ಇನ್ನು ಉತ್ತಮ ಬರಹಗಳ ಸರಮಾಲೆ ಬರಲಿ. ಇಲ್ಲಿ ಉತ್ತಮ ಉತ್ತಮ ಬರಹಗಾರರ ಮದ್ಯೆ ನಮ್ಮಂತ ಬರಹ ಬರದವ್ರಿಗೂ ಸಹ ಜೋತೆಯಾಗಲು ಅವಕಾಶ ಇರುವುದೇ ಒಂದು ಸಂತೋಷ. ಇಲ್ಲಿ ಪ್ರತಿಕ್ರಿಯೆಯಲ್ಲಿ ನೆಡೆಯುವ ತಮಾಷೆ ನಿಜಕ್ಕು ಸುಂದರ ಅದು ಇದೇ ರೀತಿ ಅರೋಗ್ಯದಿಂದ ಇರಲಿ ಯಾಕೆದಂರೆ ಮೋನ್ನೆ ದಟ್ಸ್ ಕನ್ನಡದ ರವಿಬೆಳಗೆರೆಅವರೆ ಲೇಖನದಲ್ಲಿನ ಪ್ರತಿಕ್ರಿಯೆಗಳು ನೋಡಿದರೆ ನಿಮಗೆ ತಿಳಿಯುತ್ತದೆ. ದಯವಿಟ್ಟು ಅಲ್ಲಿ ಪ್ರತಿಕ್ರಿಯೆ ನೀಡಿದಂತವರು ಸಂಪದದಲ್ಲಿ ನುಸುಳದ್ದಿದ್ದರೆ ನಮ್ಮ ಸಂಪದಕ್ಕು ತುಂಬಾ ಒಳ್ಳೆಯದು. ಯಾಕೆಂದರೆ ಒಂದು ವಿಷಯದ ಮೇಲಿನ ಪ್ರತಿಕ್ರಿಯೆ ನೋಡಿ ನಗುವಂತೆ ಇರಬೇಕು ಇಲ್ಲ ಅದರ ಬಗ್ಗೆ ಯೋಚಿಸುವಂತಾದರು ಇರಬೇಕು. ದ್ವೇಷ ಬಾವನೆ ಬರಬಾರದು ಎಂಬುದೇ ನನ್ನ ಅನಿಸಿಕೆ ಬಹಳ ಕನ್ನಡ ಪಂಡಿತರ ನಡುವೆ ಬರೆಯುತ್ತಿರುವೆ ತಪ್ಪಿದ್ದರೆ ದಯವಿಟ್ಟು ........

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 436 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಂಪದಕ್ಕಾಗಿ ಒಂದು ಮಾತು
ಉತ್ತಮ ಅನಿಸಿಕೆ ಚೈತನ್ಯ ಅವರೇ,
ದುರಂತವೆಂದರೆ ಸಂಪದದಲ್ಲಿ ಬಹಳಷ್ಟು ಸಾರಿ ಸಣ್ಣಪುಟ್ಟ ವಿಷಯಗಳ ಬಗ್ಗೆಯೇ ಜೋರು ಚರ್ಚೆ ನಡೆದುಬಿಡುತ್ತದೆ. ತಮಾಷೆಗೆ ಎಂದು ಆಗಾಗ ಅಂತಹ ಬರವಣಿಗೆಗಳನ್ನು ಬರೆದರೆ ಪರವಾಗಿಲ್ಲ. ಆದರೆ, ಅಂಥವನ್ನೇ ಬರೆಯುವ ಮನಃಸ್ಥಿತಿ ಕಾಣಿಸುತ್ತಿದೆ. ಹೀಗಾಗಿ, ಉತ್ತಮ ಬರಹಗಳನ್ನು ಹುಡುಕಿ ಓದುವ ಅನಿವಾರ್ಯತೆ ಉಂಟಾಗಿದೆ.
ನನಗೆ ಗೊತ್ತಿರುವಂತೆ ಕನ್ನಡದ ಬಹುತೇಕ ಇತರ ಅಂತರ್ಜಾಲ ತಾಣಗಳು ಬರಹಗಳನ್ನು ಒಪ್ಪಿಕೊಳ್ಳುವುದರಲ್ಲಿ ತುಂಬಾ ಚ್ಯೂಸಿ. ಹೀಗಾಗಿ ರೆಡಿಮೇಡ್ ಗುಣಮಟ್ಟ ಕಾಣುತ್ತದೆ. ಆದರೆ, ಅವರಿಗೂ ಸಂಪದಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಇಲ್ಲಿ ಬರವಣಿಗೆ ಸ್ವಾತಂತ್ರ ಇದೆ. ನಿಮಗೆ ಹಿಡಿಸಿದ್ದನ್ನು ಬರೆಯಬಹುದು. ಓದುವವರು ತಮ್ಮ ಪ್ರತಿಕ್ರಿಯೆಯನ್ನು ಮುಕ್ತವಾಗಿ ದಾಖಲಿಸಬಹುದು. ಈ ಪ್ರಕ್ರಿಯೆಯಲ್ಲಿ ಜೊಳ್ಳು ಧಾರಾಳವಾಗಿ ಬರುತ್ತದೆ ನಿಜ. ಹಾಗಂತ ಅದೊಂದೇ ಇಲ್ಲ. ಉತ್ತಮ ಬರಹಗಳೂ ಸಾಕಷ್ಟಿವೆ.
ಇತರ ತಾಣಗಳಲ್ಲಿ ಕೇವಲ ಉತ್ತಮ ಅನಿಸುವಂಥ ಕೆಲವನ್ನು ಮಾತ್ರ ಹೆಕ್ಕಿ ಪ್ರಕಟಿಸುತ್ತಾರೆ. ಅವು ಒಂಥರಾ ಪಾರ್ಕ್‌ಗಳಿದ್ದಂತೆ. ಸಂಪದ ಅರಣ್ಯ. ಇಲ್ಲಿ ವೈವಿಧ್ಯತೆ ಇದೆ. ಹೀಗಾಗಿ ಇಷ್ಟವಾಗುತ್ತದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಸಂಪದಕ್ಕಾಗಿ ಒಂದು ಮಾತು
ಸಂಪದ ಅರಣ್ಯ ಅನ್ನೋದು ಖಂಡಿತ ನಿಜ. ಕಾಡು ಪ್ರಾಣಿಗಳಿರೋದೂ ನಿಜ.
ದೂರದಿಂದ ನೋಡೋರಿಗೆ ಖುಶಿ (ಸಫಾರಿ ತರ). ಆದರೆ ಅಲ್ಲೇ ಇರೋದು ಕಷ್ಟ. ಕಾಡು ಪ್ರಾಣಿಗಳು ಕಾಯ್ತಿರತ್ವೆ. ಆದರೂ ಸಂಪದ rocks... \m/
ಕೀರ್ತಿ ಕಿರಣ್ ಎಂ
ಉ: ಸಂಪದಕ್ಕಾಗಿ ಒಂದು ಮಾತು
ಸೊಗಸು ಪಾರ್ಕ್‌ಗಿಂತ ಮಿತಿಯಿಲ್ಲದ ಕಾಡು ಲೇಸು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಸಂಪದಕ್ಕಾಗಿ ಒಂದು ಮಾತು
ಪಲ್ಲವಿ<<ದುರಂತವೆಂದರೆ ಸಂಪದದಲ್ಲಿ ಬಹಳಷ್ಟು ಸಾರಿ ಸಣ್ಣಪುಟ್ಟ ವಿಷಯಗಳ ಬಗ್ಗೆಯೇ ಜೋರು ಚರ್ಚೆ ನಡೆದುಬಿಡುತ್ತದೆ. ತಮಾಷೆಗೆ ಎಂದು ಆಗಾಗ ಅಂತಹ ಬರವಣಿಗೆಗಳನ್ನು ಬರೆದರೆ ಪರವಾಗಿಲ್ಲ. ಆದರೆ, ಅಂಥವನ್ನೇ ಬರೆಯುವ ಮನಃಸ್ಥಿತಿ ಕಾಣಿಸುತ್ತಿದೆ. ಹೀಗಾಗಿ, ಉತ್ತಮ ಬರಹಗಳನ್ನು ಹುಡುಕಿ ಓದುವ ಅನಿವಾರ್ಯತೆ ಉಂಟಾಗಿದೆ.
ಸಂಪದಿಗರಲ್ಲಿ ಬಹಳಷ್ಟು ಜನ ಕೆಲಸದ ನಡುವೆ ಬಿಡುವು ಮಾಡಿಕೊಂಡು ಚರ್ಚೆ ಮಾಡುವುದರಿಂದ ಹಾಗಾಗುತ್ತಿರಬಹುದು. ಬಿಡುವಿದ್ದವರು ಗಂಭೀರವಾಗಿ ಬರೆಯಬಾರದೇ?
ತಮ್ಮ ನೆಚ್ಚಿನ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿ ಆ ವಿಚಾರಗಳ ಬಗೆಗೆ ಬರವಣಿಗೆ ನಡೆಸಲೂ ಬಹುದು.
*ಅಶೋಕ್
ದುರಂತವೆಂದರೆ>ಉ: ಸಂಪದಕ್ಕಾಗಿ ಒಂದು ಮಾತು
ಬರೆಯಲು ಆಸಕ್ತಿ ಇದ್ದರಾಯಿತು, ಬಿಡುವು ಸಿಕ್ಕೇ ಸಿಗುತ್ತದೆ ಅಶೋಕ್. ತೀರಾ ನಿದ್ದೆ ಬರುವಷ್ಟು ಗಂಭೀರವಾಗಿ ಬರೆದರೆ ಹೇಗೆ? ಗಂಭೀರ ಬರವಣಿಗೆ ಎಂಬ ಶಬ್ದವೇ ಅಳುಕು ಹುಟ್ಟಿಸುತ್ತದೆ. ಬರೆದಿದ್ದು ಮನಸ್ಸು ಹೊರಳಿಸಬೇಕು, ಅರಳಿಸಬೇಕು, ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಬೇಕು. ಓದಿದ್ದು ಮುಗಿದ ನಂತರವೂ ಒಂದಿಷ್ಟು ಗುಂಗನ್ನು ಉಳಿಸಿರಬೇಕು.
ಇಂಥದನ್ನು ಬರೆಯಲು ಖಂಡಿತ ಸಾಧ್ಯವಿದೆ. ಒಂದೆರಡು ಸಾರಿ ಬರೆದ ಮೇಲೆ ಅದೇ ರೂಢಿಯಾಗುತ್ತದೆ. ಊಟದ ನಡುವೆ ಉಪ್ಪಿನಕಾಯಿಯಂತೆ, ಲಘು ಬರಹಗಳು ಆಗ ಖುಷಿ ಕೊಡುತ್ತವೆ. ಆದರೆ, ತಟ್ಟೆಯ ತುಂಬ ಉಪ್ಪಿನಕಾಯಿ ಇದ್ದರೆ ತಿನ್ನುವುದು ಹೇಗೆ? ಸಿಕ್ಕಿದ್ದನ್ನು ಒಂದಿಷ್ಟು ನೆಕ್ಕಿಕೊಂಡು ಎದ್ದು ಹೋಗಬೇಕಾಗುತ್ತದೆ.
ಸಂಪದ ಹಾಗಾಗಬಾರದು ಎಂಬುದಷ್ಟೇ ಈ ಪ್ರತಿಕ್ರಿಯೆಯ ಉದ್ದೇಶ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಸಂಪದಕ್ಕಾಗಿ ಒಂದು ಮಾತು
ಗಂಭೀರವಾದ ವಿಷಯ ಬರೆದವರಿಗೆ ಪ್ರತಿಕ್ರಿಯೆಗಳು ಅಷ್ಟಾಗಿ ಬರುವುದಿಲ್ಲ. ಆದರೆ ಹರಟೆಗಳನ್ನು, ಜಗಳಗಳನ್ನು ನಡೆಸುವವರಿಗೆ (ಇನ್ನೊಂದು ಸೋಜಿಗದ ಸಂಗತಿಯೆಂದರೆ ಹುಡುಗಿಯರ ಥ್ರೆಡ್ಡುಗಳಿಗೆ) ಹೆಚ್ಚು ಪ್ರತಿಕ್ರಿಯೆಗಳು ಬರುತ್ತವೆ.
ಇದು ಒಂಥರಾ ದಿ ಹಿಂದೂ ಪತ್ರಿಕೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ, ಹೊಗಳುತ್ತಾರೆ, ಆದರೆ ಟೈಮ್ಸಾಫಿಂಡಿಯಾದ ಬಿಟಿಯಲ್ಲಿ ತಲೆ ಹುದುಗಿಸಿ ಕುಳಿತುಕೊಳ್ತಾರೆ- ಎಂಬಂತೆ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸಂಪದಕ್ಕಾಗಿ ಒಂದು ಮಾತು
>>>>ಇನ್ನೊಂದು ಸೋಜಿಗದ ಸಂಗತಿಯೆಂದರೆ ಹುಡುಗಿಯರ ಥ್ರೆಡ್ಡುಗಳಿಗೆ ಹೆಚ್ಚು ಪ್ರತಿಕ್ರಿಯೆಗಳು ಬರುತ್ತವೆ.
ಅನಾನಿಮಸ್ ಆನ್ಲೈನ್ ಚಾವಡಿಗಳಲ್ಲಿ, ಹುಡುಗರ್ಯಾರೋ ಹುಡುಗೀರ್ಯಾರೋ ಆಗಿರ್ಬಹುದಲ್ರೀ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಸಂಪದಕ್ಕಾಗಿ ಒಂದು ಮಾತು
ಕ್ಷಮಿಸಿ ಹುಡುಗಿಯರ ಅಲ್ಲ, ‘ಹುಡುಗಿಯರ’ ಹೆಸರು ಹಾಗೂ ಫೋಟೊ ಇರುವ ಪ್ರೊಫೈಲ್‌ನಲ್ಲಿನ ಬರಹಗಳಿಗೆ ಎಂದು ತಿದ್ದು ಪಡಿ ಮಾಡಿಕೊಳ್ಳಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com