ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಗಣೇಶ ರವರ ಬ್ಲಾಗ್

ನೀನು ಯಾರೆ

August 29, 2008 - 12:11am — ಗಣೇಶ

ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ
ನಿನ್ನ ಹೆರಳೊಳಗಿತ್ತು ಮಲ್ಲಿಗೆಯ ದಂಡೆ
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ

ನೆಚ್ಚಿನ ಕವಿ ನರಸಿಂಹಸ್ವಾಮಿಯವರ ‘ನೀನು ಯಾರೆ’ ಕವಿತೆಯ ೪ ಸಾಲಿದು.

‘ಕರಡಿಹುಬ್ಬ’ನ್ನು ಕುಡಿಹುಬ್ಬು ಮಾಡುವುದಕ್ಕೆ ಈಗ ಹೆಜ್ಜೆಗೊಂದು ಬ್ಯೂಟಿಪಾರ್ಲರ್‌ಗಳಿವೆ. ಈ ಹುಬ್ಬುಗಳನ್ನು ತಿಂಗಳಿಗೊಮ್ಮೆಯಾದರೂ ಬ್ಯೂಟಿಪಾರ್ಲರ್‌ಗೆ ಹೋಗಿ ಸರ್ವಿಸ್ ಮಾಡಿಸದಿದ್ದರೆ, ಊಟದ ಪಂಕ್ತಿಯಂತೆ ೨-೩ ಪಂಕ್ತಿ ಬೆಳೆದು ವಿಚಿತ್ರವಾಗಿ ಕಾಣಿಸುವುದು.

ವಿಷಯ ಅದಲ್ಲ-
ಮೇಲಿನ ಕವಿತೆಯಲ್ಲಿ-
ಈ ಕುಡಿಹುಬ್ಬುಗಳ ನಡುವಿನಿಂದ ಬೈತಲೆಯ ತನಕ ಹಣೆಯಲ್ಲಿದ್ದ- ‘ಕಸ್ತೂರಿ ತಿಲಕ’.

ಜಾನಪದದಲ್ಲೂ-
ಮುತ್ತಿನ ಓಲೆಯನ್ನಿಟ್ಟಳೆ ಮಹಾಲಕ್ಷುಮಿ, ‘ಕಸ್ತೂರಿ ತಿಲಕ’ ಧರಿಸಿದಳೆ..
ಎಂದಿದೆ.
ಬರೀ ಸ್ತ್ರೀಯರು ಮಾತ್ರವಲ್ಲ-
ಪುರಂದರ ದಾಸರುಕೀರ್ತನೆಯೊಂದರಲ್ಲಿ-
ಬತ್ತಲೆ ನಿಂತಿದ್ದವಗೆ ‘ಕಸ್ತೂರಿ ತಿಲಕ’ವೇಕೆ.. ಎಂದಿದ್ದಾರೆ.

ಈ ‘ಕಸ್ತೂರಿ ತಿಲಕ’ ಹೇಗೆ ಮಾಡುತ್ತಿದ್ದರು ಎಂಬಿತ್ಯಾದಿ ವಿವರ ಹುಡುಕುತ್ತಾ(ಸಿಗಲಿಲ್ಲ Sad ) ತಲುಪಿದ್ದು ‘ಟಿಬೆಟ್’ಗೆ !!
ಅಲ್ಲಿ ಅಳಿವಿನ ಅಂಚಿನಲ್ಲಿರುವ ಕಸ್ತೂರಿ ಮೃಗದ ಬಗ್ಗೆ ಓದುವಾಗ ಮಹೇಶರ ಪ್ರತಿಕ್ರಿಯೆ ನೆನಪಾಯಿತು.-‘ಬಾಡುತಿನಿಗಳಿಗೆ ಕೋರೆಹಲ್ಲು..’
ಕಸ್ತೂರಿ ಮೃಗದ ಚಿತ್ರ ಗಮನಿಸಿ-

http://www.cites.org/gallery/species/mammal/musk_deer.html

ಕೊಂಬಿಲ್ಲದ ಈ ಪ್ರಾಣಿಗೆರಡು ಸುಂದರ ಕೋರೆಹಲ್ಲುಗಳಿವೆ.ಮಾಂಸಾಹಾರಕ್ಕಲ್ಲ-
ತನ್ನವರೊಂದಿಗೆ ಕಾದಾಡಲು ಮಾತ್ರ ಉಪಯೋಗಿಸುವುದು.
ಗಂಡು ಕಸ್ತೂರಿ ಮೃಗದ ಮೂತ್ರದ್ವಾರದ ಬುಡದಲ್ಲಿ ನಿಂಬೆಗಾತ್ರದ ಕೋಶವಿದೆ.ಒಮ್ಮೆಗೆ ಅರ್ಧದಿಂದ ಎರಡೂವರೆ ತೊಲೆಯಷ್ಟು ‘ಕಸ್ತೂರಿ’ ಸುರಿಸುವುದು.
ಗಾಢವಾದ ಇದರ ಪರಿಮಳ ಮಾಸುವುದಿಲ್ಲವಂತೆ.ಕನ್ನಡ ಕಸ್ತೂರಿ ಎನ್ನುವುದು ಇದೇ ಕಾರಣಕ್ಕೊ?

‘ಕಸ್ತೂರಿ ತಿಲಕ’ ಮತ್ತು ‘ಕನ್ನಡ ಕಸ್ತೂರಿ’ ಬಗ್ಗೆ ಸಂಪದಿಗರಿಂದ ಇನ್ನಷ್ಟು ವಿವರ ಸಿಗಬಹುದೇ?
-ಗಣೇಶ.

  • ಕಸ್ತೂರಿ ಕನ್ನಡ
  • ಕಸ್ತೂರಿ ತಿಲಕ
~.~
  • ಗಣೇಶ ರವರ ಬ್ಲಾಗ್
  • Login or register to post comments
  • 182 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 29, 2008 - 8:08am — mahesha

ಉ: ನೀನು ಯಾರೆ

mahesha's picture

ಒಂದು ಗಮನಿಸಿಬೇಕು..

ಈ ಸೆಂಟು/ಕಸ್ತೂರಿ/ಗಂದ ಇವಲ್ಲ ಡವ್ಲಿನ, ದವಲತ್ತಿನ ಲಕ್ಶಣಗಳು..

ಕನ್ನಡಿಗರು ಹಿಂದೆ ಎಶ್ಟು ಸಿರಿವಂತರೆಂತರೇ ಅವರು ನಮ್ಮ ನೆಲದಲ್ಲಿ ಇರದ ಕಸ್ತೂರಿ ಸೆಂಟು ಬಳಕೆ ಮಾಡುತ್ತಿದ್ದರು..

ಆ ಜಿಂಕೆಗೆ ಇರೋದು ಕೋರೆವಲ್ಲಲ್ಲ ಅನ್ನಿಸ್ತದೆ.. ಆನೆಗೆ ಇರೋದು ಕೋರೆವಲ್ಲಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 10:15pm — ಗಣೇಶ

ಉ: ನೀನು ಯಾರೆ

ಗಣೇಶ's picture

ಮಹೇಶ,

ಪ್ರತಿಕ್ರಿಯೆಗೆ ನನ್ನಿ.

ನಮ್ಮ ನೆಲದಲ್ಲಿರದ ಉತ್ತರದ ಕಸ್ತೂರಿಯನ್ನು ಕನ್ನಡಿಗರು ಯಾಕೆ ಅಷ್ಟೊಂದು 'ಹಚ್ಚಿ'ಕೊಂಡರು?
ಕೋರೆಹಲ್ಲಿನ ಬಗ್ಗೆ-
ನಿಜ. ಜಿಂಕೆ(?)ಗೆ ಇರುವುದು ಕೋರೆಹಲ್ಲಲ್ಲ. ಆನೆ ತರಹದ ಉಲ್ಟಾ ದಂತ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
  • ಸಂಸ್ಕೃತವಿಲ್ಲದ ಕನ್ನಡ ಜಾಳು
  • ಕಸ್ತೂರಿ, ಸುವರ್ಣೋತ್ಸವದ ಹಾದಿಯಲ್ಲಿ.!!
  • ಚಲುವ ಕನ್ನಡ ಕಸ್ತೂರಿ
  • ಜಂಭದ ತುತ್ತೂರಿ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 184 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator