ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
೮ನೇ ತರಗತಿ. ಸ್ಕೂಲ್‌ಡೇಗೆ ಡ್ರಾಮಾಕ್ಕೆ ನನ್ನನ್ನೂ ಸೇರಿಸಿದರು.
೨ನೇ ನಾಯಕನ ಪಾತ್ರ. ನಾಟಕದ ತಯಾರಿಗೆ ಜಾಸ್ತಿ ದಿನ ಸಿಕ್ಕಿರಲಿಲ್ಲ.
ಸ್ಕೂಲ್‌ಡೇ ದಿನ ಬೆಳಗ್ಗೆ ನಾಯಕ ನಾ... ಪ..ತ್ತೆ!!
ತರಾತುರಿಯಲ್ಲಿ ನಮ್ಮ ಜತೆ ಇದ್ದ ಒಬ್ಬನನ್ನೇ ನಾಯಕನಾಗಿ ಬದಲಾಯಿಸಲಾಯಿತು.
ಮಧ್ಯಾಹ್ನಕ್ಕೆ ಹಿನ್ನಲೆ ಸಂಗೀತದವರು ಬಂದರು. ಹೊಸ ನಾಯಕನನ್ನು ಕಟ್ಟಿಕೊಂಡು ಮಾಮೂಲೀ ಡಯಲಾಗ್‌ಗಳೇ ಹೊಂದಾಣಿಕೆಯಾಗುತ್ತಿರಲಿಲ್ಲ. ಇನ್ನೆಲ್ಲಿಯ ಹಿನ್ನಲೆ ಸಂಗೀತ? ಸ್ವಲ್ಪ ಹೊತ್ತು ಕುಳಿತು ನಮ್ಮ ನಾಟಕ ಪ್ರಾಕ್ಟೀಸನ್ನು ನೋಡಿ, ಗುರುಗಳ ಹತ್ತಿರ ಏನೋ ಹೇಳಿ ಹೋದರು.
ಡ್ರಾಮಾಕ್ಕೆ ಇನ್ನೆರಡು ಗಂಟೆ ಇದೆ ಎನ್ನುವಾಗ ತಿಳಿಯಿತು-ಹಿನ್ನಲೆ ಗಾಯಕರು ನನಗೊಂದು ಹಾಡು ಸೇರಿಸುವರೆಂದು! ಮೊದಲೇ ನಾಯಕನೊಂದಿಗೆ ಡಯಲಾಗ್ ಹೊಂದಾಣಿಕೆಯಾಗುತ್ತಿರಲಿಲ್ಲ.
(ಸ್ಕೂಲ್ ಡ್ರಾಮಾದಲ್ಲಿ ನಟಿಸಿದವರಿಗೆ ನನ್ನ ಕಷ್ಟ ಅರ್ಥವಾಗಬಹುದು. ಎದುರಿರುವವನು ಹೇಳಬೇಕಾದ ಕೊನೆಯ ವಾಕ್ಯ ನೆನಪಿರುತ್ತದೆ. ಅದು ಮುಗಿದ ಕೂಡಲೇ ನಮ್ಮ ಡಯಲಾಗ್ ಸುರು-ಇಲ್ಲಾತ ಕೊನೆಯ ವಾಕ್ಯವೇ ಹೇಳುತ್ತಾ ಇಲ್ಲ)
ಹಾಡು ಬೇಡವೆಂದು ಗುರುಗಳ ಬಳಿ ಬೇಡಿಕೊಂಡೆ. “ಯಾಕೆ ಬೇಡ? ಒಂದು ಕೈ ಆಚೆ, ಇನ್ನೊಂದು ಕೈ ಈಚೆ ಮಾಡು, ಈ ಕೊನೆಗೆ ಒಮ್ಮೆ, ಆ ಕೊನೆಗೆ ಒಮ್ಮೆ ಹೋಗು.. .. ..”
ಎಂದು ಹೇಳಿ ಗುರುಗಳು ಬೇರೆ ತಯಾರಿ ನಡೆಸಲು ಹೋದರು.
ಸರಿ. ಡ್ರಾಮಾ ಸುರು..
ನಾಯಕ ಅವನ ಪಾಲಿನ ಮಾತು ಅವನಿಗೆ ನೆನಪಾದ ಹಾಗೆ ಹೇಳುತ್ತಿದ್ದ. ಸೀನಿನ
ಕೊನೆಯಲ್ಲಿ ಹೇಳಬೇಕಾದ ಮಾತು ಮೊದಲೇ ಹೇಳಿ ಬಿಡುತ್ತಿದ್ದ.
(ಸ್ಟೇಜ್ ಬದಿಯಿಂದ ಪ್ರಾಂಪ್ಟ್ ಮಾಡುತ್ತಿದ್ದವನು ತಲೆಬಿಸಿಯಾಗಿ ಪುಸ್ತಕ ಬಿಸಾಕಿ ಸೀದಾ ಹೋದ.)
ಹೀಗೇ ಕೆಲವು ಸೀನುಗಳು ಮುಗಿದವು.
ಗ್ಯಾಪ್ ಮ್ಯೂಸಿಕ್ ಮುಗಿಯುವ ಮೊದಲೇ ಮುಂದಿನ ಸೀನಿನ ಡಯಲಾಗ್ ಒಮ್ಮೆ
ನೋಡಿಕೊಳ್ಳುವೆ ಎಂದಿದ್ದಾಗ-‘ಈಗ ನಿನ್ನ ಹಾಡು’ ಎಂದು ಸ್ಟೇಜ್‌ಗೆ ದಬ್ಬಿದರು.
ಅದೇ ಮೊದಲು ಆ ಹಾಡು ಕೇಳಿದ್ದು!
ಹಾಡುಗಾರನಿಗೆ ತನ್ನ ಪ್ರತಿಭೆ ತೋರಿಸಲು ಚಾನ್ಸ್ ಸಿಕ್ಕಿತು ಎಂದು ರಾಗ ಎಳೆದದ್ದೇ
ಎಳೆದದ್ದು..
ನಾನೂ ಕೈಯೆತ್ತಿದೆ, ಇಳಿಸಿದೆ, ಸ್ಟೇಜ್‌ನ ಮೂಲೆ ಮೂಲೆಗೂ ಹೋದೆ. ಒಂದು ಸಲ
ಎರಡು ಸಲ.. ಸಾಕಾಯಿತು..
೩ ನಿಮಿಷದ ಹಾಡು ..ಇಲ್ಲಿ ಸೆಕೆಂಡುಗಳೂ ನನಗೆ ತಾಸಿನಂತೆ ಅನಿಸುತಿತ್ತು.
ಹಾಡು ಕೇಳಿ ಬರುತ್ತಿರುವ ದಿಕ್ಕಿಗೆ ಮುಖಮಾಡಿ ಕೈಮುಗಿದೆ(ಸ್ಟೇಜ್‌ಗೆ ಫೋಕಸ್ ಬೆಳಕು ಹಾಕಿರುವುದರಿಂದ ಹಾಡುಗಾರ ಕಾಣಿಸುತ್ತಿರಲಿಲ್ಲ) ಹಾಡುಗಾರ ಕಣ್ಣುಮುಚ್ಚಿ ಹಾಡುತ್ತಿದ್ದ ಕಾಣುತ್ತದೆ. ನನ್ನ ಕಷ್ಟ ಅವನಿಗೆ ಗೊತ್ತಾಗಲಿಲ್ಲ. ಕೊನೇ ಲೈನ್ ಆಗುವ ಹೊತ್ತಿಗೆ ನನಗೆ ಕಣ್ಣೀರು ಬರಲು ಸುರುವಾಗಿತ್ತು. ಇನ್ನು ನನ್ನ ಜನ್ಮಕ್ಕೂ ಡ್ರಾಮಾದಲ್ಲಿ ನಟಿಸುವುದಿಲ್ಲ ಎಂದು ತೀರ್ಮಾನಿಸಿದ್ದೆ.
ನಾಟಕ ಮುಗಿದ ಮೇಲೆ ಗುರುಗಳು -‘ನಾಟಕ ಕ್ಯಾನ್ಸಲ್ ಮಾಡಬಹುದಿತ್ತು. ಅದರಲ್ಲೇನಿದೆ? ಈಗ ನೀವು ಮಾಡಿತೋರಿಸಿದ್ದು ನಿಜವಾದ ಸಾಧನೆ. ಕೀಪಿಟಪ್’ ಅಂದರು.
॒॒॒॒॒॒॒॒॒
ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ? ಹೀಗೇನಾದರು ವಿಶೇಷಗಳು ಆಗಿತ್ತೆ?
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 223 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ಪ್ರಿಯ ಗಣೇಶ್ ಅವರೆ,
ನಿಮ್ಮ ಅನುಭವ ನೋಡಿ ನಗು ಬಂತು. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲಾ ಸ್ಕೂಲ್‍ಗಳಲ್ಲೂ ಸಿಗುವಂತಹುದೇ. ಇಂತಹಾ ಪರಿಸ್ಥಿತಿಗಳು ಉಂಟಾಗುತ್ತಲೇ ಇರುತ್ತವೆ. ಒಮ್ಮೆ ನಮ್ಮ ಶಾಲೆಯಲ್ಲಿ ವೀರ ಸಾವರ್ಕರ್ ಅವರ ಜೀವನವನ್ನಾಧರಿಸಿದ ಸ್ಕಿಟ್ ಮಾಡಿಸುವಾಗ ನನ್ನ ಸಾವರ್ಕರ್ ಕೊನೆಯ ದಿನ ಕೈಕೊಟ್ಟ. ಸರಿ ಅವನ ಜಾಗಕ್ಕೆ ನನ್ನ ಶಿಷ್ಯೆ ಒಬ್ಬಳನ್ನು ಹಾಕಿಕೊಂಡೆ. (ತುಂಬಾ ಜಾಣೆ. ಒಂದು ಸಲ ಓದಿದರೆ ನೆನಪು ಇಟ್ಟುಕೊಂಡುಬಿಡುವವಳು. ನನಗೆ ಮಾಡಿಸುವುದಕ್ಕೆ ಸುಲಭ ಎಂದು ಸಾಧಾರಣವಾಗಿ ಅವಳನ್ನೇ main roleಗೆ ತೆಗೆದುಕೊಳ್ಳುತ್ತಿದ್ದೆ.) ಆದರೆ ಆಸಲ ಬೇರೆಯವರಿಗೆ ಅವಕಾಶ ಕೊಟ್ಟು ನೋಡೋಣ ಎಂದು ಪ್ರಯತ್ನ ಮಾಡಿದೆ. ಒಂದು ವಾರ ರಿಹರ್ಸಲ್ ಕೊಟ್ಟರೂ ಡಯಲಾಗನ್ನು ಕಲಿಯಲಾರದೇ ಕೊನೆಗೆ ಕೈಕೊಟ್ಟ. ಕೊನೆಗೆ ಅವಳನ್ನೇ ಮತ್ತೆ ತೆಗೆದುಕೊಳ್ಳುವಂತೆ ಆಯಿತು. ಅವಳು ನಾಟಕ ಚೆನ್ನಾಗಿ ಮಾಡಿದ್ದರಿಂದ ಅವತ್ತು ನಾಟಕ ಚೆನ್ನಾಗಿ ಬಂತು. ಹಾಗೇ ನಿಮಗೆ ಒಂದು ಹಾಡಿಗೆ ಅಭಿನಯಿಸುವ ಅವಕಾಶ ಸಿಕ್ಕಿತಲ್ಲವೇ? ಅದು ಇವತ್ತಿಗೆ ಒಂದು ಸವಿ ನೆನಪಲ್ಲವೇ? ಅದನ್ನು ಮೆಲುಕು ಹಾಕಿ. ಬೇಸರಪಟ್ಟುಕೊಳ್ಳಬೇಡಿ.
ಶೈಲಾಸ್ವಾಮಿ
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ಶೈಲಾಸ್ವಾಮಿಯವರಿಗೆ ನನ್ನಿ,
-ಗಣೇಶ.
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ನಾನೂ ಶಾಲೆಯಲ್ಲಿದ್ದಾಗ ಒಮ್ಮೆ ಪಾರ್ಟ್ ಮಾಡಿದ್ದೀನಿ. ಅದೇನೆಂದು ಹೇಳುವ ಮುಂಚೆ, "ಶ್" ಚಿತ್ರದಲ್ಲಿ ಒಂದು ಸನ್ನಿವೇಶ ನೆನಪಾಗುವದು
ಅಂತೂ ಇಂತೂ ನಾನೂ ಕೇಳೀ ಕೇಳೀ ಹಾಕಿಸಿಕೊಂಡ ಪಾತ್ರ, ಯಾವ್ದು ಅಂತೀರಿ, ಮಂಗನದ್ದು...ಶರೀರದ ತುಂಬಾ ಕಪ್ಪು ಡ್ರೆಸ್ ಹಾಕಿ, ಬರೀ ಕಣ್ಣು ಕಾಣುವಷ್ಟು ತೂತು ಬಿಟ್ಟಿದ್ದರು
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ಸಂಭಾಷಣೆ ತಾಪತ್ರಯ ಇದ್ದಿರಲಿಲ್ಲ ಅಂತ ಊಹಿಸುವುದರಲ್ಲಿ ತಪ್ಪಿಲ್ಲ.
*ಅಶೋಕ್
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
"ಮಾತು" ಒಂಚೂರೂ ಇರಲಿಲ್ಲ. ನಾಟಕದ ಕೊನೆಯಲ್ಲಿ, ಎಲ್ರೂ ಅದೇನೋ ಇಂಗ್ಲೀಶ್ ಸಾಲು ಹೇಳಬೇಕಿತ್ತು
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ಕೇಳಿ ಕೇಳಿ ಹಾಕಿಸಿಕೊಂಡ ಪಾತ್ರ.
ಪುನಃ ಪುನಃ ನೆನಪಾಗಿ ನಗು ಬರುತ್ತಿದೆ.
ಸುನಿಲ್, ಅಶೋಕ್‌ಗೆ ನನ್ನಿ.
-ಗಣೇಶ.
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ನಾನು ಎರಡು ನಾಟಕಗಳಲ್ಲಿ ಅಭಿನಯಿಸಿದೆ. ಅದರಲ್ಲಿ ಒಂದು ತೆರೆ ಕಾಣಲಿಲ್ಲ
ವಿವರಗಳು ಇನ್ನೊಮ್ಮೆ.
*ಅಶೋಕ್
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ನಾನು ಹತ್ತನೆಯ ತರಗತಿಯಲ್ಲಿದ್ದಾಗ ಕರ್ಣನ ಪಾತ್ರ ಮಾಡಿದ್ದೆ.ಮಾಡಿದ್ದೆ ಎನ್ನುವುದಕಿಂತಲೂ ಕ್ಲಾಸಿಗೆ ಸೇರಿಸುವುದಿಲ್ಲವೆಂದು ಹೆದರಿಸಿ, ಟೆಸ್ಟಿಗೆ ಕೂರಿಸುವುದಿಲ್ಲವೆಂದು ಬೆದರಿಸಿ ನಾನು ಮಾದುವಂತೆ ಮಾಡಿದ್ದರು ನಮ್ಮ ಟೀಚರ್. ಅದು ಮಹಾಭಾರತದ ಅಕ್ಷಯ ಪಾತ್ರೆಯ ಬಗೆಗಿನ ನಾಟಕ. ಕರ್ಣನ ಭಾರವಾದ ಕರ್ಣಕುಂಡಲಗಳು,ಮೈ ಕೈ ತುಂಬ ಆಭರಣಗಳು, ಎಂಥದ್ದೋ ಅಂಟು ಹಾಕಿ ಅಂಟಿಸಿದ ಮೀಸೆ, ದೊಡ್ಡ ಬಿಲ್ಲು,ಎಲ್ಲದರ ಮೇಲೆ ಅತಿ ಭಾರವಾದ ಕಿರೀಟ.. ಅಬ್ಬಾ ನಾನಂತೂ ಕುಸಿದು ಹೋಗಿದ್ದೆ. ತುಂಬ ತೆಳ್ಳಗಿದ್ದ ನನಗೆ ಅವನೆಲ್ಲಾ ಹೊತ್ತು ನಡೆಯಲೇ ಆಗುತ್ತಿರಲಿಲ್ಲ.. ಸ್ವಲ್ಪ ತಲೆ ಆಕಡೆ ಈಕಡೆ ಆಡಿಸಿದರೂ ನನ್ನ ಕಿರೀಟ ಬಿದ್ದುಹೋಗುವಂತಿತ್ತು

ಕೌರವರ ಸಭೆಯಲ್ಲಿ ನಾವೆಲ್ಲ ಕುಳಿತು ಗಹನವಾದ ಚರ್ಚೆ ಮಾಡುವಾಗ, ಯಾವುದೋ ಮುನಿಯ ಪಾತ್ರ ಮಾಡಿದ್ದ ಹುಡುಗನೊಬ್ಬನಿಗೆ ಅಂಟಿಸಿದ್ದ ಮೀಸೆ ಬಿದ್ದು ಹೋಗಿ ನಮ್ಮನೆಲ್ಲಾ ನಗೆಗಡಲಲ್ಲಿ ಮುಳುಗಿಸಿತು