ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
ಅಕ್ಕ ಸಮ್ಮೇಳನಕ್ಕೆ ನಮ್ಮ ರಾಜಕಾರಣಿಗಳು ಮಜ ಮಾಡಲು ಹೋಗುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ.
ಯಾವ ಒಳ್ಳೆಯ ಕೆಲಸ ಮಾಡಲು ಹೊರಡುವಾಗಲೂ ಅಡ್ಡಕಾಲಿಡುವುದು ಕೆಲವರ ಅಭ್ಯಾಸ.
ನಿಜ ಸಂಗತಿ ಅದಲ್ಲ..
ಹತ್ತಿರ ಬನ್ನಿ.. ಗುಟ್ಟಿನ ವಿಚಾರ..
ಇನ್ನೂ ಹತ್ತಿರ ಬನ್ನಿ.. ಶ್.. ಬುಶ್‌ಗೆ ಕೇಳಿಸೀತು.
ಅಪರೇಷನ್!! ಹೌದೂ. ‘ಆಪರೇಷನ್ ಅಕ್ಕ’!!
ಇವರು ಏನೇ ಮಾಡಿದರು ಅದರ ಹಿಂದೆ ಒಂದು ತರ್ಕವಿದೆ, ಒಂದು ಪ್ಲಾನ್ ಇದೆ, ಒಂದು ಕುತಂತ್ರವಿದೆ-
ಒಲಿಂಪಿಕ್ಸ್‌ನಲ್ಲಿ ನಾವು ೨-೩ ಪದಕ ಪಡೆಯಲು ತಿಣುಕುತ್ತಿರುವಾಗ, ಅದ್ಯಾರೋ ಅಮೆರಿಕಾದ ‘ಮೈಕೆಲ್ ಪೆಲ್ಪ್ಸ್’ ಚಿನ್ನದ ಮೇಲೆ ಚಿನ್ನ ಗೆಲ್ಲುತ್ತಿದ್ದಾನಂತೆ.
ನಮ್ಮ ‘ಧಣಿ’ಗಳಿಗೆ ಸಾಧ್ಯವಾಗದ್ದು ಎನೂ ಇಲ್ಲ.
ಆ ಆಜಾನುಬಾಹು Phelpsನ್ನು ಎತ್ತಾಕೊಂಡು ಬರಲು helpಗೆ ಇಷ್ಟೊಂದು ಮಂದಿಯನ್ನು ಕಳುಹಿಸುತ್ತಿರುವುದು ಅಷ್ಟೇ.
ನೋಡಿ ಮುಂದಿನ ಒಲಿಂಪಿಕ್ಸ್‌ಗೆ “ಪೆಲ್ಪ್ಸ್ ಫ್ರಂ ಇಂಡಿಯಾ” !!
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 162 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: