ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಲಕ್ಷ್ಮೀ.. ಬಾರಮ್ಮಾ..
ಒಂದು ಹಳೇ ಕತೆ-
ಒಬ್ಬ ಹುಡುಗ ಗೆಳೆಯನ ಪೆನ್ಸಿಲ್ ಕದ್ದುತಂದ.
ತಾಯಿ ಜೋರು ಮಾಡಲಿಲ್ಲ.
ಹುಡುಗ ಕಳ್ಳತನ ಮುಂದುವರಿಸಿದ.
ದೊಡ್ಡ ದರೋಡೆಕೋರನಾದ.
ಸಿಕ್ಕಿಬಿದ್ದ-ಗಲ್ಲುಶಿಕ್ಷೆ-ತಾಯಿಯನ್ನು ಬಳಿ ಕರೆದು, ‘ಚಿಕ್ಕವನಿದ್ದಾಗ ಪೆನ್ಸಿಲ್ ಕದ್ದು ತಂದಾಗ ಬುದ್ಧಿಮಾತು ಹೇಳಿದ್ದರೆ ಈ ಕ್ಷಣ ಬರುತ್ತಿರಲಿಲ್ಲ’ ಎಂದನು.
ನಾನೂ ಚಿಕ್ಕವನಿದ್ದಾಗ-
ಸ್ಕೂಲ್‌ನಲ್ಲಿ ಭಾಷಣ ಸ್ಪರ್ಧೆ ಇತ್ತು-‘ಹಣ ಮೇಲೋ, ಗುಣ ಮೇಲೋ’.
ತಂದೆ ಬರೆದುಕೊಟ್ಟರು, ಕಂಠಪಾಠ ಮಾಡಿ ಒಪ್ಪಿಸಿದೆ.
ಬಹುಮಾನ ಬಂತು, ಟೀಚರ್‌ಗಳು ಮೆಚ್ಚಿ ಹೊಗಳಿದರು.
ಮಾಡಿದ ಭಾಷಣವನ್ನು ನಿಜವೆಂದು ನಂಬಿದೆ-ಗುಣಕ್ಕೆ, ವಿದ್ಯೆಗೆ ಪ್ರಾಮುಖ್ಯತೆ ಕೊಟ್ಟೆ.
ಹಣವನ್ನು ಕಡೆಗಣಿಸಿದೆ. ಕಡೆಗಣ್ಣಲ್ಲೂ ಲಕ್ಷ್ಮಿಯ ಫೋಟೋ ನೋಡಲಿಲ್ಲ.
ಓದಿದೆ..ಓದಿದೆ..
ಉಳಿದವರು ಲಕ್ಷ್ಮಿಪೂಜೆ ಮಾಡಿದರು, ಹಣ ಮಾಡಿದರು. ಪೂಜೆ ..ಹಣ..
ಊರಿಡೀ ಸೈಟು, ಮನೆ ಮಾಡಿಕೊಂಡರು..
...
‘ಹಣ ಮೇಲೋ ಗುಣ ಮೇಲೋ’-
ಹಣ ಫಿಮೇಲು, ಪ್ರೀತಿಸಿ/ಪೂಜಿಸಿದವರಿಗೇ ಒಲಿಯುವುದು.
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 242 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲಕ್ಷ್ಮೀ.. ಬಾರಮ್ಮಾ..
ನಿಜ, ಬಾಲ್ಯದ ನಂಬಿಕೆಗಳು ಹಸಿ ಗೋಡೆಯಲ್ಲಿ ಹರಳು ಒತ್ತಿದಂತೆ ಭದ್ರ ಸುಭದ್ರ.
ಜಯಲಕ್ಷ್ಮೀ.ಪಾಟೀಲ್.
ಉ: ಲಕ್ಷ್ಮೀ.. ಬಾರಮ್ಮಾ..
ಗಣೇಶರೆ,
ಕಥೆ
ಚೆನ್ನಾಗಿದೆ.
ಇನ್ನೇನು ಇದ್ದೇ ಇದೆಯಲ್ಲ, ಹಣವೇ? ಗುಣವೇ? ಅಂತ ಸುಭಾಷಿತ ಹೇಳ್ತಾ ಇರೋದು ಅಷ್ಟೇ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಲಕ್ಷ್ಮೀ.. ಬಾರಮ್ಮಾ..
ಇದು ಖಂಡಿತ ಒಳ್ಳೆಯ "ಕತೆ".
*ಅಶೋಕ್
ಉ: ಲಕ್ಷ್ಮೀ.. ಬಾರಮ್ಮಾ..
ಚೆನ್ನಾಗಿದೆ
~ಕಲ್ಪನ
ಉ: ಲಕ್ಷ್ಮೀ.. ಬಾರಮ್ಮಾ..
ಹ್ಹೆ ಹ್ಹೆ ಹ್ಹೆ
ಮೇಲು + ಫೀಮೇಲು !!!!
ಉ: ಲಕ್ಷ್ಮೀ.. ಬಾರಮ್ಮಾ..
ಅದ್ಸರಿ, ನೀವೇಕೆ ಫೂಲ್
ಆದ್ರಿ
ಉ: ಲಕ್ಷ್ಮೀ.. ಬಾರಮ್ಮಾ..
ಅಧಮಾಃ ಧನಮಿಚ್ಛಂತಿ ಧನಮಾನೌ ಚ ಮಧ್ಯಮಾಃ
ಉತ್ತಮಾಃ ಮಾನಮಿಚ್ಛಂತಿ ಮಾನೋ ಹಿ ಮಹತಾಂ ಧನಮ್||
ಅಧಮರು ಹಣ ಬಯಸುತ್ತಾರೆ. ಮಧ್ಯಮರು ಹಣ ಮಾನವೆರಡನ್ನೂ ಬಯಸುತ್ತಾರೆ. ಉತ್ತಮರು ಮಾನವನ್ನು ಬಯಸುತ್ತಾರೆ. ಮಾನವೇ ಮಹಾಶಾಲಿಗಳಿಗೆ ಹಣ.
ಉ: ಲಕ್ಷ್ಮೀ.. ಬಾರಮ್ಮಾ..
'ಅಧನಾಃ' ಧನಮಿಚ್ಛಂತಿ
ಧನಮಾನೌ ಚ ಮಧ್ಯಮಾಃ
ಉತ್ತಮಾಃ 'ಸಂಪದ'ಮಿಚ್ಛಂತಿ...
-ಹಂಸಾನಂದಿ,ಕನ್ನಡಕಂದ,ಜಯಲಕ್ಷ್ಮಿ,ಕಲ್ಪನಾ,ಅಶೋಕ,ನನ್ನಿಸುನೀಲರಿಗೆ ನನ್ನಿ.
-ಗಣೇಶ.
ಉ: ಲಕ್ಷ್ಮೀ.. ಬಾರಮ್ಮಾ..
ಸುಬಾಶಿತ ಅನ್ನತ್ತೆ.. ಎಲ್ಲಬಿಟ್ಟು ಬೆತ್ತಲೇ ತಿರುಗೋರಿಗೇನೇ ಮುಕ್ತಿ ಅಂತ..
ಈ ಸುಬಾಶಿತ ಬರೆದೋನು ಇಲ್ಲ ದುಡ್ಡು ಮಾಡಕ್ಕೆ ಲಯಾಕ್ ಅಲ್ಲದವನು.. ಇಲ್ಲ.. ಬೇರೆಯವರ ದುಡ್ಡು ಕಸಿಯೋ ತಲೆ ಇರುವವನು.