ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಸಾಗರ...ಸಕತ್ ಹಾಟ್

January 15, 2008 - 4:57pm — ಗಣೇಶ

೨೦೦೭ ಕಳೆದು ೨೦೦೮ ಬಂತು.ದಿನಾ ಪೇಪರ್,ಟೀವಿ ನೋಡಿದರೆ ೩೦೦೮ ಬಂದರೂ ನಾವು ಬದಲಾಗುವುದಿಲ್ಲ ಎನಿಸುತ್ತದೆ.
ಒಬ್ಬ ಯತಿ ಸಾಗರೋಲ್ಲಂಘನೆ! ಮಾಡಿದಕ್ಕೆ ಉಳಿದವರ ವಿರೋಧ.ಬಹುಮತವಿದ್ದರೆ ಪ್ರಧಾನಿ ಮನೆ ಕಸಗುಡಿಸುವವನೂ ರಾಷ್ಟ್ರಪತಿ ಆಗಬಹುದಾದ ನಮ್ಮ ದೇಶದಲ್ಲಿ ಬಹುಮತದ ಯತಿಗಳು ವಿರೋಧಿಸಿದರು ಎಂಬ ಕಾರಣಕ್ಕೆ ಇವರು ಸುಮ್ಮನಿರಬಹುದಿತ್ತು.
--ಹಿಂದೆ ಕೃಷ್ಣ ಬೆನ್ನು ತಿರುಗಿಸಿ ಗೋಡೆ ಒಡೆದ.೨೦೦೮ರಲ್ಲಿ ಸಾಗರಕ್ಕೆ ಧುಮುಕದಂತೆ ನೋಡಿಕೊಳ್ಳಿ
ಸ್ವಾಮಿ.

ಮಾಜೀ ಮಂತ್ರಿ ಒಬ್ಬರು,ವಿರೋಧ ಪಕ್ಷವನ್ನು ದೂರುವುದು “ಗಾಂಧೀಜಿಯನ್ನು ಕೊಂದ ಗೋಡ್ಸೆ ಪಕ್ಷದವರು..”
--ಗಾಂಧೀಜಿಯನ್ನು ದಿನಾ ಕೊಲ್ಲುವುದನ್ನು ೨೦೦೮ರಲ್ಲಾದರೂ ನಿಲ್ಲಿಸಲಾರಿರಾ?

ಮಾಜೀ ಮಾಜೀ ಮುಖ್ಯಮಂತ್ರಿ ಒಬ್ಬರ ಗಿಣಿಪಾಠ “ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು”
--೨೦೦೮ರಲ್ಲಿ ಕರ್ನಾಟಕಕ್ಕೆ ಉತ್ತಮ,ಭದ್ರ ಸರಕಾರ ಕೊಡುತ್ತೇವೆ ಅನ್ನಬಾರದೇ?

ಸಕತ್ ಹಾಟ್ ಮಗಾ.ಡವ್ ಇತ್ಯಾದಿ ಇತ್ಯಾದಿ ಪದ ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿದೆ ಟಿ.ವಿ.,ರೇಡಿಯೋ ಎತ್ತಿ ಬಿಸಾಕುವಷ್ಟು ಬೇಸರವಾಗುತ್ತದೆ.
--೨೦೦೮ರಲ್ಲಾದರೂ ಈ ಪದಗಳಿಗೆ ರೆಸ್ಟ್ ಕೊಡುವಿರಾ?
...

~.~
  • ಗಣೇಶ ರವರ ಬ್ಲಾಗ್
  • Login or register to post comments
  • 382 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 16, 2008 - 3:22pm — varunbhatbm

ಉ: ಸಾಗರ...ಸಕತ್ ಹಾಟ್

varunbhatbm's picture

ನೀವು ಹೇಳಿದ್ದು ೧೦೦% ಸರಿ.....
ಆದ್ರೆ ಏನು ಮಾಡೋದು, ರಾಜಕಾರಣಿಗಳಿಗೆ ಮತ್ತು ಟಿವಿಯವರಿಗೆ ಚಿಲ್ಲರೆ ವಿಷಯಗಳೇ ಸಿಗೋದು.... ಜನರಿಗೆ ಎಷ್ಟು ಬೋರ್ ಹೊಡೆಸ್ತಾ ಇದ್ದೀವಿ ಅಂತ ಗೊತ್ತಾಗೋಲ್ಲ ಅವರಿಗೆ.

ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 17, 2008 - 6:45pm — madhava_hs

ಉ: ಸಾಗರ...ಸಕತ್ ಹಾಟ್

madhava_hs's picture

ಶುಧ್ಧಾತಿ ಶುದ್ಧ ಕನ್ನಡ ಸಿಗುವುದು ಸರ್ಕಾರಿ ಚಾನಲ್ಲುಗಳಲ್ಲಿ ಮಾತ್ರ. ಎಫ಼್.ಎಮ್. ರೈನ್ಬೊ, ವಿವಿಧ ಭಾರತಿಯಲ್ಲಿ ಮಾತ್ರ ಉತ್ತಮ ಕನ್ನಡ ನಿರೂಪಕ/ನಿರೂಪಕಿಯರಿರುತ್ತಾರೆ. ಬೇರೆ ಚಾನಲ್ಗೊಳೆಲ್ಲಾ ಬರೀ ಬಾಲಿಶ ಭಾಷೆ ಉಪಯೋಗಿಸ್ತವೆ.

"ಮಾಜೀ ಮಂತ್ರಿ ಒಬ್ಬರು,ವಿರೋಧ ಪಕ್ಷವನ್ನು ದೂರುವುದು “ಗಾಂಧೀಜಿಯನ್ನು ಕೊಂದ ಗೋಡ್ಸೆ ಪಕ್ಷದವರು..”
--ಗಾಂಧೀಜಿಯನ್ನು ದಿನಾ ಕೊಲ್ಲುವುದನ್ನು ೨೦೦೮ರಲ್ಲಾದರೂ ನಿಲ್ಲಿಸಲಾರಿರಾ? ""

=> ಗಾಂಧೀಜಿಯನ್ನು ಹೀಗೆ ದಿನಾ ಕೊಲ್ಲದಿದ್ದರೆ ಓಟು ಬರುತ್ತಾ?

ಮಾಜೀ ಮಾಜೀ ಮುಖ್ಯಮಂತ್ರಿ ಒಬ್ಬರ ಗಿಣಿಪಾಠ “ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು”
--೨೦೦೮ರಲ್ಲಿ ಕರ್ನಾಟಕಕ್ಕೆ ಉತ್ತಮ,ಭದ್ರ ಸರಕಾರ ಕೊಡುತ್ತೇವೆ ಅನ್ನಬಾರದೇ?

=>“ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು” ಎಂದರೆ "ಕರ್ನಾಟಕವು ಅಭಿವೃಧಿ ಹೊಂದಲು ಖಂಡಿತ ಬಿಡೆವು" ಎಂದರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 17, 2008 - 6:51pm — madhava_hs

ಉ: ಸಾಗರ...ಸಕತ್ ಹಾಟ್

madhava_hs's picture

ಮೊಸರು ಕಡೆಯುವುದು ನೋಡಿದ್ದೀರಲ್ಲಾ?

ಈ TV9 ಒಂಥರಾ ಅದೇ ರೀತಿ ನಿರೂಪಣೆ.

ಒಂದು ಚಿಕ್ಕ ವಿಷಯ/ಘಟನೆಯನ್ನು ತೆಗೆದು ಕೊಂಡು, ಸುಮಾರು ಅರ್ದ ಮುಕ್ಕಾಲು ಘಂಟೆ ಪದೇ ಪದೇ ಹೇಳಿದ್ದೇ ಹೇಳಿಸಿ ಕಾಲ ಹರಣ ಮಾಡಿ/ಮಾಡಿಸ್ತಾರೆ. ಪ್ರಬುದ್ಧತೆಗಿಂತ ಭಾವೋದ್ವೇಗಕ್ಕೆ ಹೆಚ್ಚು ಬೆಲೆ ಕೊಡ್ತಾರೆ. ಎಮೋಷನ್ ಸೆಲ್ಸ್ ಯು ನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 17, 2008 - 6:57pm — Sunil Jayaprakash

ಉ: ಸಾಗರ...ಸಕತ್ ಹಾಟ್

Sunil Jayaprakash's picture

೨೦೦೭ರ ಅತ್ಯಂತ ಕೆಟ್ಟ ಸಿನಿಮಾ ಒಂದರಲ್ಲಿ ಈ ರೀತಿಯ ಹಾಡು ಇದೆ.

ಹಾಟಪ್ಪ ಹಾಟು, ಸಖತ್ತು ಹಾಟು, ಈ ನನ್ನ ಹಾರ್ಟು ಮಗ,
ಸ್ವೀಟಪ್ಪ ಸ್ವೀಟು, ಸಖತ್ತು ಸ್ವೀತು ಈ ನಿನ್ನ ಹಾರ್ಟು ಮಗ,
ಮಸ್ತು ಮಜಾ ಮಾಡು, ಹಾ! ಸುಸ್ತು ಮಜಾ ಮಾಡು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 17, 2008 - 10:34pm — hamsanandi

ಉ: ಸಾಗರ...ಸಕತ್ ಹಾಟ್

hamsanandi's picture

ಈ ಸಿನೆಮಾ/ಟಿವಿ ಇಂದ ಕನ್ನಡ ಪದಗಳು ಇನ್ನೂ ಮರೆಯಾಗುತ್ತಿವೆ.

ಈಗ ಯಾರ ಮನೆಯಲ್ಲೂ ಹುಟ್ಟಿದಹಬ್ಬ ಮಾಡ್ತಾ ಇಲ್ಲ - ಬರೀ ’ಬರ್ತ ಡೇ’ - ಅಂದ ಹಾಗೆ, ಬರ್ತ್ ನಲ್ಲಿನ ಅರ್ಧಾಕ್ಷರವನ್ನು ಓಡಿಸಿ ಬರ್ತ ಮಾಡಿರುವುದು ಬೆಂಗಳೂರಿಗರ ವಿಶೇಷ ಅನ್ಸತ್ತೆ. ಹಾಗೆ, ಯಾರಿಗೂ ಈಗ ಸುಸ್ತು, ಆಯಾಸ, ಆಗೋದೇ ಇಲ್ಲ. ಏನಿದ್ರೂ, ಬರೀ ’ಟಯರ್ಡ್’ ಆಗ್ತಾರೆ. ಟಯರ್ಡ್ ಆದ್ರೆ, ಗೊತ್ತೇ ಇದೆಯಲ್ಲ ಮದ್ದು - ಹೋಗಿ ’ಫ್ರೆಶ್ ಆಗಿ ಬರೋದು’ Eye-wink

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 18, 2008 - 11:34pm — ಗಣೇಶ

ಉ: ಸಾಗರ...ಸಕತ್ ಹಾಟ್

ಗಣೇಶ's picture

ವರುಣ,ಮಾಧವ,ಸುನೀಲ,ಹಂಸಾನಂದಿ,
ಎಲ್ಲರಿಗೂ ನನ್ನಿ.

ವರುಣ್ ಭಟ್ರೆ,
'ಈ ರಾಜಕಾರಣಿಗಳನ್ನು ಮನುಷ್ಯರು ಎನ್ನಲು ಆಗುವುದಿಲ್ಲ.ಪ್ರಾಣಿಗಳು.ಪ್ರಾಣಿಗಳಿಗಿಂತಲೂ ಕಡೆ.ಇವರನ್ನು ತಿದ್ದಲು ಸಾಧ್ಯವೇ ಇಲ್ಲ..'
-ರಾಜಕಾರಣಿಗಳ ಬಗ್ಗೆ ನಿನ್ನೆ, ಟಿ.ವಿ.ನ್ಯೂಸ್ ಚಾನಲ್ ಒಂದಕ್ಕೆ ರೆಮೋ(ಖ್ಯಾತ ಹಾಡುಗಾರ)ಹೇಳಿದ ಕಟು ನುಡಿಗಳಲ್ಲಿ ಒಂದೆರಡು ವಾಕ್ಯ.

ಮಾಧವರೆ,
ನಿಮ್ಮ ಉತ್ತರ ಸರಿಯಾದುದು. ಕರ್ನಾಟಕ ಅಭಿವೃದ್ಧಿ ಹೊಂದಲು ಖಂಡಿತ ಬಿಡೆವು Smiling

ಸುನೀಲರೆ,
ಎಫ್.ಎಮ್ ರೇಡಿಯೋದ ಹಾಡಿಗೆ ಟಿ.ವಿಯ ಸಿನೆಮಾ ಡ್ಯಾನ್ಸ್ ನ್ನು (ಟಿ.ವಿ ಹಾಡನ್ನು ಮ್ಯೂಟ್ ಮಾಡಿ)ಹಾಕಿ ನೋಡಿ.ಈಗಿನ ಡ್ಯಾನ್ಸ್ ಗಳು ಯಾವ ಹಾಡಿಗೂ,ಹಾಗೇ ಹಾಡುಗಳು ಯಾವುದೇ ಸಿನೆಮಾ ಡ್ಯಾನ್ಸ್ ಗೂ ಮ್ಯಾಚ್ ಆಗುತ್ತದೆ.

ಹಂಸಾನಂದಿಯವರೆ,
ಪರಿಶುದ್ಧ ಹಾಲಿಗೆ ನಂದಿನಿ ಕುಡಿಯಿರಿ,ಅಂದಂತೆ-
ಕನ್ನಡ ಬೇಕಾ? ಸಂಪದ ನೋಡಿ
ಅನ್ನುವ ಕಾಲ ಬರುವುದೋ ಏನೋ?

ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾಟಮಂತ್ರ. ಐಟೆಕ್, ಶಾಫ್ಟ್ವೇರ್ ಎಲ್ಲ ಇಲ್ಲೆ ಐತೆ -ಇಂತವ್ನೆಲ್ಲ ನಂಬೊ ಜನ ನಮ್ಮೊರು, ಬಾರಿ ದ್ಯಾವ್ರ ಬಕ್ತ್ರು !
  • ವಾರ್ತಾ ಚೇಷ್ಟೆಗಳು
  • ಮಾತಿನ ಮೋಡಿ
  • ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!
  • ನಮ್ಮ ರಾಜಕೀಯ ನಾಯಕರ ನಡೆವಳಿಕೆ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 260 ಅತಿಥಿಗಳು ಆನ್ಲೈನ್ ಇರುವರು.


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator