ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
ನಿಯಮಿತವಾಗಿ ಫ್ಲಾಸಿಂಗ್ ಮಾಡುವವರು ಇದನ್ನು skip ಮಾಡಿ ಬೇರೆ ಬ್ಲಾಗ್ ಓದಿ.
ಉಳಿದವರಿಗೆ ಒಂದು test-
ನೀವು ಉಪಯೋಗಿಸುವ paste(೧೮ ಆಯುರ್ವೇದ ಗಿಡಮೂಲಿಕೆಯಿಂದ ಕೂಡಿದ ವಜ್ರದಂತಿ/colgate/closeup/..ಯಾವುದೇ ಆಗಬಹುದು)ಬ್ರಷ್ ತುಂಬಾ ಹಾಕಿ,೧೦-೧೫ ನಿಮಿಷ,ಉದ್ದ,ನೀಟ,ಅಡ್ಡಡ್ಡ ಎಲ್ಲಾ ದಿಕ್ಕಿನಲ್ಲೂ ಬ್ರಷ್ ಮಾಡಿ.೧೦ ನಿಮಿಷ ನೀರಲ್ಲಿ ಬಾಯಿ ಮುಕ್ಕಳಿಸಿ.ಫಳಫಳ ಮಿಂಚುತ್ತಿರುವ ಹಲ್ಲನೊಮ್ಮೆ ಕನ್ನಡಿಯಲ್ಲಿ ನೋಡಿ.
ಈಗ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ,ಫ್ಲಾಸಿಂಗ್ ದಾರವನ್ನು ತನ್ನಿ.(ಫ್ಲಾಸಿಂಗ್ ದಾರವು ಅನೇಕ ವಿಧದವು ಇದೆ.ನಿಮಗೆ ಎಳೆದು ತುಂಡು ಮಾಡಿ ಉಪಯೋಗಿಸಲು ಅನುಕೂಲವಾಗುವಂತೆ ಸುಂದರವಾದ ಡಬ್ಬಿಯಲ್ಲಿರುವುದು.ಒಂದು ಡಬ್ಬಿಗೆ ೧೦೦ರೂ ಆಸುಪಾಸು ಬೆಲೆ ಇರುವುದು.)೬-೭ಇಂಚು ಉದ್ದಕ್ಕೆ ದಾರವನ್ನು ಎಳೆದು ತೆಗೆದುಕೊಂಡು,ಎರಡೂ ಕೈಯ ತೋರುಬೆರಳಿಗೆ ದಾರದ ಕೊನೆಗಳನ್ನು ಸುತ್ತಿ,ಎರಡು ಹಲ್ಲಿನ ನಡುವೆ ಸಿಕ್ಕಿಸಿ, ಹಿಂದೆ ಮುಂದೆ ಮೆಲ್ಲಗೆ ಎಳೆಯಿರಿ. ಬ್ರಷ್ ಮಾಡಿದ ಮೇಲೂ ತಿಂದ ಆಹಾರದ ತುಣುಕುಗಳು ಹಲ್ಲಿನ ಎಡೆಯಲ್ಲಿ ಉಳಿದಿರುವುದು ಗಮನಕ್ಕೆ ಬಂತೆ?
ಬೆಳಗ್ಗೆ ಎದ್ದಾಗ,ರಾತ್ರಿ ಮಲಗುವಾಗ ಬ್ರಷ್ ಮಾಡಿದರಷ್ಟೇ ಸಾಲದು.ಕೆಲವರ್ಷಗಳ
ಹಿಂದೆ,ಊದಿದ ಒಸಡನ್ನು ಒತ್ತಿ ಹಿಡಕೊಂಡು,ಹಲ್ಲಿನ ಡಾಕ್ಟ್ರ ಬಾಗಿಲು ಕಾಯುತ್ತಾ ಇದ್ದಾಗ, ಬಾಗಿಲಿಗಂಟಿಸಿದ ಚೀಟಿಯಲ್ಲಿ ಫ್ಲಾಸಿಂಗ್ ಬಗ್ಗೆ ಓದಿದೆ. ಫ್ಲಾಸಿಂಗ್ ಮಾಡಲು ಸುರುಮಾಡಿದ ಮೇಲೆ ಹಲ್ಲಿನ ಡಾಕ್ಟ್ರ ಬಾಗಿಲು ಕಾಯುವ ಕೆಲಸ ಕಮ್ಮಿಯಾಗಿದೆ.
(ಸೂಚನೆ: ಫ್ಲಾಸಿಂಗ್ ಸುರು ಮಾಡುವ ಮೊದಲು ನಿಮ್ಮ ಫ್ಯಾಮಿಲಿ ಡಾಕ್ಟ್ರ ಅಭಿಪ್ರಾಯಕೇಳಿ)
-ಗುಂಪೊಡೆಯ(ಗಣೇಶ)

- ಗಣೇಶ ರವರ ಬ್ಲಾಗ್
- Login or register to post comments
- 436 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
ನಮ್ಮ ಡೆಂಟಿಸ್ಟ್ ಪ್ರಕಾರ "ಫ್ಲಾಸಿಂಗ್ ಬೇಕಿಲ್ಲ". ಅವರು ದಿನಕ್ಕೆರಡು ಬಾರಿ (ಬೆಳಿಗ್ಗೆ, ರಾತ್ರಿ) ಸಾಧ್ಯವಾದರೆ ಹಲ್ಲು ಉಜ್ಜಿ - ಜೊತೆಗೆ ಮುಖ್ಯವಾಗಿ ಉಪ್ಪು ನೀರು ಉಗುಳಿ ಸಾಕು, ಮೌತ್ ವಾಶ್ ಕೂಡ ಉಪಯೋಗಿಸುವುದೂ ಬೇಡ ಅಂತಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
*ಕೂಡ ಉಪಯೋಗಿಸುವುದು - ಎಂದು ಓದಿಕೊಳ್ಳಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
ನಾನು ಈಗ ಉಪ್ಪಿರೋ ಟೂಥ್ ಪೇಸ್ಟ್ ಬಳಸ್ತಿದ್ದೀನಿ
- ಬೇವು ಇರೋ ಟೂಥ್ ಪೇಸ್ಟ್ ಬಂತು , ಉಪ್ಪಿರೋದು ಬಂದಿದೆ , ಇದ್ದಿಲು , ಕುಳ್ಳು ( ಬೆರಣಿ) ಇರೋ ಟೂಥ್ ಪೇಸ್ಟ್ ಬಾಕಿ ಇದೆ .
ಇದ್ದಿಲು ಪುಡಿಯಂಥ ಹಲ್ಲುಪುಡಿ - ಮಂಕೀ ಬ್ರಾಂಡ್ ಎಂದಿನಿಂದಲೋ ಇದೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
ಮಿಶ್ರಿಕೋಟಿಯವರೆ,ನಾನು ಹಳ್ಳಿಯ ಯಾವುದೇ ಸಂಬಂಧಿಗಳ ಮನೆಗೆ ಹೋಗುವಾಗ ಟೂತ್ ಪೇಷ್ಟ್, ಬ್ರಶ್ ತೆಗೆದುಕೊಂಡು ಹೋಗುವುದಿಲ್ಲ.ತೋಟಕ್ಕೆ ಹೋಗಿ ಮಾವಿನ ಎಲೆ ಅಥವಾ ಗೇರು ಎಲೆ ತೆಗೆದುಕೊಂಡು,ನಡುವಿನ ದಂಟಿನಿಂದ ಎಲೆಯನ್ನು ಬೇರ್ಪಡಿಸಿ,ಸುರುಳಿ ಸುತ್ತಿ,ತುದಿಯನ್ನು ಸ್ವಲ್ಪ ಜಗಿದು ಮೆತ್ತಗೆ ಮಾಡಿ ಬ್ರಷ್ ನಂತೆ ಉಜ್ಜುವುದು.ನಡುವಿನ ದಂಟಿನಿಂದ ನಂತರ tongue cleanಮಾಡುವುದು.
ತೆಂಗಿನ ಕಾಯಿಯ ಎಳೇ ಸಿಪ್ಪೆಯನ್ನು ಸಣ್ಣದಾಗಿ ತುಂಡುಮಾಡಿ ಇಟ್ಟುಕೊಂಡಿದ್ದು,ಅದರ ತುದಿಯನ್ನು ಸಹ ಜಗಿದು ಮೆದು ಮಾಡಿ ಬ್ರಷ್ ನಂತೆ ಉಪಯೋಗಿಸಬಹುದು. ಇದೇ ರ್‍ಈತಿ ಬೇವಿನ ಕಡ್ಡಿ ಸಹ ಉಪಯೋಗಿಸಬಹುದು.
ಹಿಂದೆ ಜಾಹಿರಾತಿನಲ್ಲಿ ಉಪ್ಪಿನಲ್ಲಿ ಹಲ್ಲುಜ್ಜುವ ಪಹಿಲ್ವಾನ್ ನನ್ನು ತಮಾಷೆ ಮಾಡಿದ ಕಂಪನಿಗಳೇ,ನಮ್ಮ ಪೇಷ್ಟ್ ನಲ್ಲಿ ಉಪ್ಪಿದೆ,ತೆಗೆದುಕೊಳ್ಳಿ, ಎನ್ನುತ್ತಿವೆ.
ಉ: ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
ಸರ್,ನಿಮ್ಮ ಹಲ್ಲು ಸ್ವಚ್ಚವಾಗಿರುವುದನ್ನು ನೋಡಿ,ತಮ್ಮ ಡೆಂಟಿಸ್ಟರು ತಮಾಷೆಗೆ ಹಾಗೆ ಹೇಳಿರಬಹುದು.ಫ್ಲಾಸಿಂಗ್ ಮಾಡದಿದ್ದರೆ ನಮ್ಮ ಹಲ್ಲಿನ ೪೦% ಭಾಗ ಸ್ವಚ್ಚವಾಗಲಿಲ್ಲವೆಂದೇ
ಲೆಕ್ಕ.
ಸರ್,ದಯಮಾಡಿ www.dentalgentlecare.com/flossing.htm ಒಮ್ಮೆ ಓದಿ ತಮ್ಮ ಅಭಿಪ್ರಾಯ ತಿಳಿಸಿ.ಯಾಕೆಂದರೆ ತಮ್ಮ ಅಭಿಪ್ರಾಯಕ್ಕೆ ಸಂಪದದಲ್ಲಿ ಬೆಲೆ ಇದೆ. ತಾವು ಬರೆದುದನ್ನು ಓದಿ ಫ್ಲಾಸಿಂಗ್ ಅಗತ್ಯವಿಲ್ಲವೆಂದು ಎಲ್ಲರೂ ತಿಳಿದಾರು.ಇಂಟರ್ನೆಟ್ ನಲ್ಲಿ ಬಂದುದು ೧೦೦% ನಿಜವೆಂದು ನಾನೂ ನಂಬುವುದಿಲ್ಲ.ಫ್ಲಾಸಿಂಗ್ ದಾರದವರೇ ಪ್ರಾಯೋಜಕತ್ವ ಮಾಡಿರಬಹುದು. ಇದರ ಸತ್ಯಾಸತ್ಯತೆಯನ್ನು ತಾವು ನೋಡಿ ತಿಳಿಸಿದರೆ ಒಳ್ಳೆಯದಿತ್ತು.ತಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.