ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಬ್ರಹ್ಮಾಂಡ ಸೃಷ್ಠಿ!!
ಬ್ರಹ್ಮಾಂಡ ಸೃಷ್ಠಿ ಹೇಗಾಯಿತು ಎಂಬ ಒಗಟನ್ನು ನಮ್ಮಂತಹ ಸೈಂಟಿಸ್ಟ್‌ಗಳನ್ನು ಬಿಟ್ಟು ಮಾಡಿದರೆ ನೀರಲ್ಲಿ ಹೋಮ ಮಾಡಿದಂತೆ. ಆದರೆ ನಾವೂ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ.
೫೦ ಬಿಲಿಯನ್ ಡಾಲರುಗಳ ಯೋಜನೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಅದರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆನು:-
ನಮ್ಮ ಪುರಾಣದಲ್ಲಿ ಬ್ರಹ್ಮಾಂಡ ಸೃಷ್ಠಿ ಹೇಗಾಯಿತೆಂದು ವಿವರವಿದೆ. ಆದರೆ ಈಗಿನವರು ಅದನ್ನು ವೈಜ್ಞಾನಿಕವಾಗಿ ಪ್ರೂವ್ ಮಾಡಿ ತೋರಿಸಿದರೇ ನಂಬುವುದು.
ಅದಕ್ಕಾಗಿ-
ಬೆಂಗಳೂರಿಂದ ಪಾಕಿಸ್ತಾನದವರೆಗೆ ೧೦೦ ಅಡಿ ಆಳದಲ್ಲಿ ಸುರಂಗಮಾರ್ಗ ಕೊರೆಯಲಾಗುವುದು. (ಪಾಕಿಸ್ತಾನ ಕಡೆಯಿಂದ ಈಗಾಗಲೇ ಸುರಂಗ ಕೊರೆಯಲು ಸುರುಮಾಡಿಯಾಗಿದೆ. ಅದರ ಮೂಲಕ ಪ್ರಾಯೋಗಿಕವಾಗಿ ಭಯೋತ್ಪಾದಕರು ಒಂದೆರಡು ಬಾರಿ ಬಂದು ಹೋಗಿರುವರು
)
ನಮ್ಮ ಯೋಜನೆಯಲ್ಲಿ ಆಸಕ್ತರಾದ ಪುರಾಣ,ಸಂಸ್ಕೃತಗಳಲ್ಲಿ ಪರಿಣತರನ್ನು, ಪವಾಡ ಪುರುಷರನ್ನು,ಗ್ರಂಥಗಳೊಂದಿಗೆ ಅಲ್ಲಿ ಸೇರಿಸಲಾಗುವುದು. ವಿವರವನ್ನು ಕಲೆಹಾಕಲು ಕಂಪ್ಯೂಟರ್ ಕಲಿತವರನ್ನೂ,ಕಲಿಯುವವರನ್ನೂ ಅಲ್ಲಿ ಸೇರಿಸಲಾಗುವುದು. ಇನ್ನೊಂದು
ಬ್ರಹ್ಮಾಂಡ ಸೃಷ್ಠಿಸಿಯೇ ಅವರು ಹೊರಬರುವುದು!!
ಇದನ್ನೆಲ್ಲಾ ಭೂಮಿ ಮೇಲೆ ಮಾಡಬಹುದಲ್ವಾ? ಸುರಂಗ ಮಾರ್ಗ ಯಾಕೆ? ಅಂತ ತಾನೆ ನಿಮ್ಮ ಪ್ರಶ್ನೆ?
-ಈ ಸಂಸ್ಕೃತ ದ್ವೇಷಿಗಳ,ವಿರೋಧಿಗಳ ಕಾಟ ತಪ್ಪಿಸಲು! ಸುರಂಗ ಮಾರ್ಗಕ್ಕೆ ಅವರಿಗೆ ಪ್ರವೇಶವಿಲ್ಲ.
-ಏನಾದರೂ ಗಿಮಿಕ್ ಮಾಡಿದರೆ ಅದಕ್ಕೆ ಜಾಸ್ತಿ ಪ್ರಚಾರ ಸಿಗುವುದು. ಹಣ ಹರಿದು ಬರುವುದು.
-ಸುರಂಗ ನಿರ್ಮಾಣವನ್ನು ಸಹ ನಮ್ಮ ರಸ್ತೆ ನಿರ್ಮಾಣ ಮಾಡಿದ ಕಂಟ್ರಾಕ್ಟರ್‌ಗಳಿಗೇ
ಗುತ್ತಿಗೆ ಕೊಡಲಾಗುವುದು. ಇದರಿಂದ ೧೦೦ ವರ್ಷದ ಯೋಜನೆ ೨೦೦ ವರ್ಷಕ್ಕೆ ಹೋಗುವುದು. ೫೦ ಬಿಲಿಯನ್ ಡಾಲರ್ ಯೋಜನೆ ೧೦೦ ಬಿಲಿಯನ್‌ಗೆ ಏರುವುದು.
ಹಣದ ಹೊಳೆಯೇ ಹರಿಯುವುದು.
ನಿಮಗೂ ಯೋಜನೆಯಲ್ಲಿ ಆಸಕ್ತಿ ಇದ್ದರೆ, ಮೇಲಿನ ಯಾವುದೇ ವಿಷಯದಲ್ಲಿ ಪರಿಣತರಾಗಿದ್ದರೆ, ಸಂಪರ್ಕಿಸಬೇಕಾದ ವಿಳಾಸ.. ..
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬ್ರಹ್ಮಾಂಡ ಸೃಷ್ಠಿ!!
ಹ್ಹ ಹ್ಹ!!! ಚೆನ್ನಾಗಿದೆ ಗಣೇಶ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಬ್ರಹ್ಮಾಂಡ ಸೃಷ್ಠಿ!!
ಅನಿಲ್,
ಪ್ರತಿಕ್ರಿಯೆಗೆ ನನ್ನಿ.
ತಮ್ಮ ಪರಿಚಯ ಫೋಟೋ ನೋಡಿದಾಗ, ನಮ್ಮ ಪ್ರಾಜೆಕ್ಟ್‌ನ ವೇದ ಅಧ್ಯಯನಕ್ಕೆ ಈಗಲೇ ಹೊರಟಂತೆ ಕಾಣಿಸುತ್ತದೆ. (ಸಿಟ್ಟಾಗಬೇಡಿ)
-ಗಣೇಶ.
ಉ: ಬ್ರಹ್ಮಾಂಡ ಸೃಷ್ಠಿ!!
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಬ್ರಹ್ಮಾಂಡ ಸೃಷ್ಠಿ!!
>ನಮ್ಮ ಪುರಾಣದಲ್ಲಿ ಬ್ರಹ್ಮಾಂಡ ಸೃಷ್ಠಿ ಹೇಗಾಯಿತೆಂದು ವಿವರವಿದೆ
ಒಂದೊಂದು ಪುರಾಣ ಒಂದೊಂದು ತರ ಹೇಳಿದೆ ... ಯಾವ ಪುರಾಣ ಸರಿ ಅಂತಾನೆ ಈಗ ಪರೀಕ್ಷೆ ನಡಿತಿರೋದು.
>ಪ್ರಾಯೋಗಿಕವಾಗಿ ಭಯೋತ್ಪಾದಕರು ಒಂದೆರಡು ಬಾರಿ ಬಂದು ಹೋಗಿರುವರು
ಮತ್ತು ಪರೀಕ್ಷೆಗಳನ್ನೂ ನಡೆಸಿರುವರು!
>೫೦ ಬಿಲಿಯನ್ ಡಾಲರುಗಳ ಯೋಜನೆಯ ಕರಡು ಪ್ರತಿ ಸಿದ್ಧವಾಗುತ್ತಿದೆ
ಯಡೆಯೂರಪ್ಪನವರ ಸರ್ಕಾರ ಇದನ್ನು ಗ್ಯಾರಂಟಿ ಸ್ಪಾನ್ಸರ್ ಮಾಡುತ್ತೆ. ಕೇಂದ್ರದ ಮಟ್ಟದಲ್ಲಿ ಅದ್ವಾನಿಯವರು PM ಆಗೋವರ್ಗೂ ಕಾದರೆ ಇನ್ನೂ ಹೆಚ್ಚಿನ ಹಣಕಾಸಿನ ಬೆಂಬಲ ಸಿಗಬಹುದು!
ಗಣೇಶ ಅವ್ರೆ ಬಹಳ ಚೆನ್ನಾಗಿದೆ ನಿಮ್ಮ ಈ ಬರಹ....ಮತ್ತು ಪ್ರಾಜೆಕ್ಟ್
ಸವಿತೃ
ಉ: ಬ್ರಹ್ಮಾಂಡ ಸೃಷ್ಠಿ!!
ಸವಿತೃ,
ನಾನು ಬರೆದುದಕ್ಕಿಂತಲೂ ಬಹಳ ಚನ್ನಾಗಿದೆ ತಮ್ಮ ಪ್ರತಿಕ್ರಿಯೆ.
-ಗಣೇಶ.