ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮಳೆಗಾಲದೊಂದು ರಾತ್ರಿ....

ಮಳೆಗಾಲದ ಒಂದು ರಾತ್ರಿ. ಕಛೇರಿಯಲ್ಲಿ ಕೆಲಸ ಮುಗಿದಿತ್ತು. ಮನೆಗೆ ಹೋಗಲೆಂದು ಬಸ್ ಹಿಡಿಯಲು ಹೊರಗೆ ಬಂದೆ. ಮಳೆ ಜಿನುಗುತಿತ್ತು. ಛತ್ರಿ ತಂದಿರಲಿಲ್ಲ (ನೀನೇ ದೊಡ್ಡ ಛತ್ರಿ ಅಂತೀರಾ? ಹಳೇ ಜೋಕು ರೀ!). ಅದೇನೋ ನನ್ನ ಛತ್ರಿಗೂ ಮಳೆಗೂ ಆಗಿ ಬಂದಿಲ್ಲ. ನಾನು ಛತ್ರಿ ತಂದಾಗೆಲ್ಲ ಮಳೆನೇ ಬರುವುದಿಲ್ಲ. ಆದ ಕಾರಣಕ್ಕೆ ಅದೊಂದು ಭಾರವನ್ನು ನಾನು ಜೊತೆಗೊಯ್ಯುವುದಿಲ್ಲ (ನನ್ನ ಭಾರವೇ ಸಾಕಷ್ಟಿರುವಾಗ !!). ಆದ್ದರಿಂದ ಆ ಜಿನುಗುವ ಮಳೆಯಲ್ಲೇ ಬಸ್ ನಿಲ್ದಾಣಕ್ಕೆ ಹೊರಟೆ. ಅಲ್ಲೂ ದುರಾದೃಷ್ಟ ನನ್ನ ಬೆನ್ನು ಬಿಡಲಿಲ್ಲ. ಮಧ್ಯ ಹಾದಿಯಲ್ಲೇ ವರುಣನ (ಅವ)ಕೃಪೆಗೆ ಪಾತ್ರವಾದೆ. ಧೋ ಎಂದು ಒಮ್ಮೆಗೆ ಮಳೆರಾಯನ ಆರ್ಭಟ. ನಿಲ್ಲಲೊಂದು ಸೂರು ಕಾಣಲಿಲ್ಲ. ಇನ್ನರ್ಧ ದಾರಿ ಸಾಗುವಷ್ಟರಲ್ಲಿ ಪೂರ್ತಿ ಒದ್ದೆಯಾಗಿ, ಇನ್ನೆರಡು ಕೆಜಿ ತೂಕ ಜಾಸ್ತಿಯಾಗಿ ಬಸ್ಸೇರುವಂತಾಯಿತು. ನಂತರ ಬಂದವರ ಸ್ಥಿತಿಯೇನು ಭಿನ್ನವಾಗಿರಲಿಲ್ಲ. ಯಾಕೆಂದರೆ ಮಳೆ ನಿಂತಿರಲಿಲ್ಲ. ನಿಲ್ಲುವ ಸೂಚನೆಯೂ ಇರಲಿಲ್ಲ.

ಚಳಿಗೆ ನಡುಗುತಿದ್ದ ಆ ದೇಹಗಳನ್ನೇ ಹೊತ್ತು ಬಸ್ಸು ಹೊರಟಿತು. ಬೆಂಗಳೂರಿನಲ್ಲಿ, ಮಳೆಗಾಲದಲ್ಲಿ, ಆ ವಾಹನ ಸಂದಣಿಯಲ್ಲಿ, ಎಲೆಕ್ಟ್ರಾನಿಕ್ ಸಿಟಿಯಿಂದ ಯಶವಂತಪುರದವರೆಗೆ, ಹೊಸೂರು ರಸ್ತೆ, ಎಂ.ಜಿ. ರಸ್ತೆಗಳನ್ನು ದಾಟಿ ಹೋಗಬೇಕು. ಪಯಣಿಗರ ಸ್ಥಿತಿ ಊಹೆಗೆ ಬಿಟ್ಟಿದ್ದು. ಕಾಲಹರಣವಾದರೂ ಹೇಗೆ? ಪುಸ್ತಕ ಓದುವ ಸ್ಥಿತಿಯಲ್ಲಿರಲಿಲ್ಲ. ಹಾಗೇ ಕಿಟಕಿಯಿಂದಾಚೆ ನೋಡುತ್ತಾ ಕುಳಿತೆ. ಆ ರಾತ್ರಿಯಲ್ಲಿ, ಸುರಿಯುತ್ತಿರುವ ಆ ಮಳೆಯಲ್ಲಿ ಏನು ಕಾಣಲು ಸಾಧ್ಯ? ರಸ್ತೆಯಲ್ಲಿ ತುಂಬಿದ್ದ ನೀರು, ಹುಯ್ಯುತ್ತಿರುವ ಮಳೆ.  ಮುಂದೆ ಓದಿ »

~.~

ಪತ್ರಿಕೋದ್ಯಮದ ಅನಿವಾರ್ಯತೆಗಳು

ಸತ್ಯ ಹೇಳಲಾಗದ ಸಂದಿಗ್ಧತೆ

ಸಾವಿನಲ್ಲಾದರೂ ಸತ್ಯ ಹೊರಬರಬಾರದೇ?

ಪ್ರತಿಯೊ೦ದು ಸಾವನ್ನು ಕ೦ಡಾಗಲೂ ನನ್ನ ಮನಸ್ಸು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಹೋಗುತ್ತದೆ. ಇತ್ತೀಚೆಗೆ ತು೦ಬಾ ಜನ ಅನಿರೀಕ್ಷಿತವಾಗಿ ಸಾಯತೊಡಗಿದ್ದಾರೆ. ಬಡವರ ಸಾವುಗಳಲ್ಲಿ ಸತ್ಯ ಬಲು ಬೇಗ ಹೊರಬ೦ದರೆ, ಅಧಿಕಾರದಲ್ಲಿರುವವರ ಹಾಗೂ ಹಣವ೦ತರ ಸಾವುಗಳಲ್ಲಿ ಮೊದಲು ಸುಳ್ಳು ಬಲು ಬೇಗ ಹರಡುತ್ತದೆ. ಸತ್ಯ ನ೦ತರ, ನಿಧಾನವಾಗಿ ಹೊರಬರುತ್ತಾ ಹೋಗುತ್ತದೆ.

ಅಷ್ಟೊತ್ತಿಗೆ ಪತ್ರಿಕೆಗಳಲ್ಲಿ ಚರಮಗೀತೆ ಪ್ರಕಟವಾಗಿರುತ್ತದೆ. ಪುಟಗಟ್ಟಲೇ ಶ್ರದ್ಧಾ೦ಜಲಿಗಳು ಅಚ್ಚಾಗಿರುತ್ತವೆ. ಅದಕ್ಕಿಂತ ತೀವ್ರವಾಗಿ ದೃಶ್ಯಮಾಧ್ಯಮದಲ್ಲಿ ಸುದ್ದಿ ಪುನರಾವರ್ತನೆಯಾಗಿರುತ್ತದೆ. ಅಲ್ಲಲ್ಲಿ ಶೋಕಸಭೆಗಳಾಗಿರುತ್ತವೆ. ಸತ್ತವರ ತಿಥಿ ಊಟ ಕೂಡಾ ಜೀರ್ಣವಾಗಿ ಹೋಗಿ, ಸಾವಿನ ಮನೆಯಲ್ಲಿ ಬದುಕು ಸಹಜ ಸ್ಥಿತಿಯತ್ತ ಕು೦ಟುತ್ತಾ ಬರುತ್ತಿರುತ್ತದೆ.  ಮುಂದೆ ಓದಿ »

~.~

ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!

ಸಾವಿರ ಸವಾಲುಗಳ ದಾಟಿಸಿದ ತಂದೆ...

ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು ಸಂತೈಸಿದ, ಭರವಸೆ ತುಂಬಿದ ಮೊದಲ ವ್ಯಕ್ತಿ ಆತ. ಬಾಲ್ಯದ ನೂರೆಂಟು ನೆನಪುಗಳನ್ನು ಸಮೃದ್ಧವಾಗಿಸಿದ ಆತ ನಮ್ಮ ಅಪ್ಪ.

ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.  ಮುಂದೆ ಓದಿ »

~.~

ಚ೦ದಿರನೇತಕೆ ಓಡುವನಮ್ಮಾ....

ಚ೦ದಿರ

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚ೦ದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು|

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು||

ಹೀಗೆ ತ೦ದೆಯವರಿ೦ದ ಜೋಗುಳ ಕೇಳಿಸಿಕೊ೦ಡು ಮಲಗುತ್ತಿದ್ದ ಕಾಲವೊ೦ದಿತ್ತು. ಊಟ ಮಾಡಲು ಹಠ ಮಾಡುತ್ತಿದ್ದ ತ೦ಗಿಯರಿಗೆ ಚ೦ದಿರನ ತೋರಿಸಿ ಮೋಸದಲ್ಲಿ ತುತ್ತಿಡುತ್ತಿದ್ದ ಸಮಯವೊ೦ದಿತ್ತು. ಬೆಳದಿ೦ಗಳ ರಾತ್ರಿಯಲ್ಲಿ, ಮನೆಯ೦ಗಳದಲ್ಲಿ, ಅಮ್ಮನ ತುತ್ತು, ಅಪ್ಪನ ತುತ್ತುಗಳ ನಡುವೆ ಓಡಾಡುತ್ತಾ ಉಣ್ಣುತ್ತಿದ್ದ ಗಳಿಗೆಗಳಿದ್ದವು... ಹೀಗೆಯೇ ಪ್ರತಿಯೊಬ್ಬರ ನೆನಪಿನ೦ಗಳದಲ್ಲೂ ತಿ೦ಗಳನ ಬೆಳದಿ೦ಗಳು ಮನೆ ಮಾಡಿದೆ. ಬಹುಶ: ಭೂಮಿಗೆ ಬ೦ದ ಗಳಿಗೆಯಿ೦ದ ಹುಟ್ಟಿಕೊಳ್ಳುವ ಸ೦ಬ೦ಧ ಈ ಚ೦ದಿರನೊ೦ದಿನದು. ಆದ್ದರಿ೦ದಲೇ ಆತ ಚ೦ದ"ಮಾಮ". ಭೂತಾಯಿಯ ತಮ್ಮ. ತವರಿನ ನ೦ಟು!  ಮುಂದೆ ಓದಿ »

~.~
Syndicate content