ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ಶ್ಯಾಮ ಕಶ್ಯಪ ರವರ ಬ್ಲಾಗ್

ಶ್ಯಾಮ ಕಶ್ಯಪ

ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.

'be yourself' ಮತ್ತು 'ಸ್ವಂತಿಕೆ ಉಳಿಸಿಕೊಳ್ಳುವುದು'

August 21, 2005 - 12:07am — ಶ್ಯಾಮ ಕಶ್ಯಪ

ಉಪದೇಶ ಹೇಳುವಾಗ ಜನ ಕೆಲವೊಮ್ಮೆ ಇಂಗ್ಲೀಷ್ ನಲ್ಲಿ be yourself ಅಂತ ಹೇಳುತ್ತಾರೆ. ಪಶ್ಚಿಮದಲ್ಲಿ ಈ phraseನ ಬಹಳವಾಗಿ ಉಪಯೋಗಿಸುತ್ತಾರೆ. ಒಮ್ಮೆ ವಾಕಿಂಗ್ ಗಿಗೆ ಹೋಗುವಾಗ ಈ phraseಗೆ ಕನ್ನಡ ಅನುವಾದ ಹುಡುಕುತ್ತಿದ್ದೆ. ಕನ್ನಡಕ್ಕೆ literally ಅನುವಾದಿಸುವುದಾದರೆ 'ಸ್ವೇಚ್ಛಾಹಾರಿಯಾಗಿರು' ಎನ್ನಬಹುದು. ಆದರೆ ಈ ಪದವನ್ನು ನಾವು derogatory ಆಗಿ ಬಳಸುತ್ತೇವೆ. ಭಾವಾಂತರಕ್ಕೆ ಪ್ರಯತ್ನಿಸಿದರೆ, ನಿನ್ನತನ ಬೆಳೆಸಿಕೊ ಅಥವ ಸ್ವಂತಿಕೆ ಕಾಪಾಡಿಕೋ ಅಥವ ಸ್ವಂತಿಕೆ ಉಳಿಸಿಕೊ ಎನ್ನಬಹುದು. ಆದರೆ ಈ phraseಗಳ ಅರ್ಥಗಳೂ ಕೂಡ be yourself ಗೆ ಸರಿಯಾಗಿರುವಂತಹ ಅರ್ಥವನ್ನು ಕೊಡುವುದಿಲ್ಲ. be yourself ಗೆ ಹಾಗಾದರೆ ಅರ್ಥ ಏನು?

೧. ನೀನು ಏನಾಗಬೇಕೆಂದು ಕೊಂಡಿರುವೆಯೋ ಅದನ್ನು ಸಾಧಿಸು ಅಂತಲೇ ಇದರರ್ಥ? ಹಾಗಾದರೆ, ನನಗೆ ಒಂದು metal band ನ ನಾಯಕ ಆಗಬೇಕು ಅನ್ನಿಸತ್ತೆ. ಎಲ್ಲವನ್ನೂ ತೊರೆವ ಸನ್ಯಾಸಿಯಾಗಬೇಕು, ಗಾಂಧಿ, ಅಂಬೇಡ್ಕರ್, ಬಸವಣ್ಣ, ರಾಮಮನೋಹರ ಲೋಹಿಯ, ವಾಜಪೇಯಿ, ಅಣ್ಣ ಹಝಾರೆ, ಗೂಗಲ್ ಕಂಪನಿಯ ಮಾಲೀಕ ಹೀಗೆ ಬಹಳಷ್ಟು ಜನರಂತಾಗಬೇಕು ಎಂದೂ ಅನಿಸುತ್ತತೆ. ಅಷ್ಟೇ ಅಲ್ಲ, ಈ ಅನಿಸಿಕೆಗಳು ಬಹಳ ಪ್ರಬಲವಾದವೂ ಬಹಳ ವರ್ಷಗಳಿಂದ ಮನದಲ್ಲಿರುವಂತಹವೂ ಆಗಿವೆ. ಕೆಲವೊಮ್ಮೆ ಈ ನಿಟ್ಟಿನಲ್ಲಿ ನನ್ನ ವೃತ್ತಿಯನ್ನು ಬದಲಾಯಿಸಿಕೊಂಡದ್ದೂ ಉಂಟು, ಇರುವುದನ್ನು ಬಿಟ್ಟು ಮತ್ತಂದೆಡೆಗೆ ಹೋದದ್ದೂ ಉಂಟು. ಇವುಗಳಲ್ಲಿ ಇಂದಿನ ನಮ್ಮ ಸಾಮಾಜಿಕ ಸ್ಥಿತಿಗೆ, ನನ್ನ ವ್ಯಕ್ತಿಗತ ಸಾಮರ್ಥ್ಯ, ಇತಿಮಿತಿಗಳಿಗೆ ಹೊಂದಿಕೆಯೇ ಆಗದಿರುವಂತಹ ಹತ್ತು ಹಲವು ಆಸೆಗಳಿವೆ, ಆಕಾಂಕ್ಷೆಗಳಿವೆ. ಹೀಗೆ ಸ್ವೇಚ್ಛಾಹಾರಿಯಾಗಿ ಮನಸ್ಸಿಗೆ ಬಂದಂತಿರು ಇಂಬುದು be yourself ಎಂಬುದರ ಅರ್ಥವೇ ಹಾಗಾದರೆ ಅಥವ..

೨. ವರ್ತಮಾನದಲ್ಲಿ ನಿನ್ನ ಅವಸ್ಥೆಯೇ ನಿನ್ನ ನಿಜವಾದ ಪರಿಸ್ಥಿತಿ. ಈಗ ಹೇಗಿರುವೆಯೋ ಹಾಗೆಯೇ ಇರು ಎಂತಲೋ ಅಂತರೆ ನೀನು ಏನೇ ಮಾಡಾಲು ಬಯಸಿದರೂ ಅದು ತೋರುಬಯಕೆಯಷ್ಟೆ, ನಿನ್ನ ಕೈಲಾಗುವುದಿದ್ದರೆ ಹೀಗ್ಯಾಕೆ ಕೆಲಸವಿಲ್ಲದೇ ಕಾರ್ಯವಿಲ್ಲದೇ ಗುತ್ತುಗುರಿಯಿಲ್ಲದೇ ಕೊಳಕನಾಗಿ ಕೂತಿದ್ದೀಯೇ.. ನೀನೆಂದಿದ್ದರೂ ಇಷ್ಟೆ. ಗಾಳಿಗೋಪುರ ಕಟ್ಟಿ ಮತಿಭ್ರಂಶನಾಗುವುದಕ್ಕಿಂತ ಇವೆಲ್ಲವನ್ನೂ ಬಿಟ್ಟು..ನಿನ್ನ ಪಾಡಿಗೆ ಇರುವುದನ್ನು ನಡೆಸಿಕೊಂಡು ಹೋಗು ಅಂತಲೋ?

೩. ಅಥವ ಇವೆರಡರ ಮಧ್ಯದಲ್ಲಿ... ನಿನ್ನ ಕೈಯಲ್ಲಿ ಸಾಧಿಸುವುದಾಗಿರಬೇಕು, ಕಷ್ಟಸಾಧ್ಯವಾಗಿರಬೇಕು, practical ಆಗಿರಬೇಕು, ಇದ್ದುದರಲ್ಲಿ ಸೃಜನಶೀಲತೆಯಿರಬೇಕು, ನಿನ್ನ ಇಷ್ಟಗಳಿಗನುಗುಣವಾಗಿರಬೇಕು ಇತ್ಯಾದಿಗಳೋ?

ಈ ಚರ್ಚೆಯಲ್ಲಿ ಹುಡುಕಿದರೆ ಬಹಳ ನಾಜೂಕಾದ, subtle ಆದ implicit ಆದ ವಿಷಯವೊಂದಿದೆ. ಅದು, ನಮ್ಮ ಸ್ವತಂತ್ರ ಯೋಚನಾ ಲಹರಿಗಳನ್ನು ನಮ್ಮ ಸಮಾಜದ ಚೌಕಟ್ಟಿನಲ್ಲಿ, ಹಾಗೂ ನಮ್ಮ ಸ್ವಂತ ಪರಿಮಿತಿಯಲ್ಲಿ ನಮಗೆ ಸಮಾಧಾನ ತರುವ ಹಾಗೆ ಕಾರ್ಯಗತಗೊಳಿಸುವುದು ಹೇಗೆ ಎಂಬುದು. offcourse, ಈ ವಿಷಯದ ಮೇಲೆಯೇ be yourself ಎಬ phraseನ ಅರ್ಥ ಅಡಗಿರುವುದು?

ಈಗ ಇದರ ಕನ್ನಡ ತಾತ್ಪರ್ಯ ನೋಡಿ. 'ಸ್ವಂತಿಕೆ ಉಳಿಸಿಕೋ'; ಇದರಲ್ಲಿಯ ಎರಡೂ‌ ಪದಗಳು ಬಹಳ ಮುಖ್ಯ. ಸ್ವಂತಿಗೆ ಯೆಂದರೆ ಸ್ಥೂಲವಗಿ identity ಅಥವ personality ಅಂತ ಭಾಷಾಂತರಗೊಳಿಸಬಹುದು. ಅವರಿವರ  ಆದರ್ಶ, ಆಸೆಗಳಿಗೆ ಮಾರುಹೋಗಬೇಡಿ. ನಿಮ್ಮ ಪಥವನ್ನು ನೀವೇ ರೂಪಿಸಿಕೊಳ್ಳಿ (ಮತ್ತು ಯೋಚನೆಯ ಬಳಿಕ, ನಿಮ್ಮ identity ಪರರ identityಯೊಂದಿಗೆ ಸ್ವಾಮ್ಯವಾಗಿದ್ದರೆ, ಅದನ್ನೇ ಆರಿಸಿಕೊಳ್ಳಿ) ಅನ್ನುವುದನ್ನು ಇದೊಂದೇ ಪದ be yourself ನಷ್ಟೆ ಚೆನ್ನಾಗಿ ವ್ಯಕ್ತಪಡಿಸುತ್ತದೆ.

'ಉಳಿಸಿಕೋ':  ನಾವು ಸಾಮಾನ್ಯವಾಗಿ ಈ ಸ್ವಂತಿಕೆ ಉಳಿಸಿಕೋ ಇನ್ನುವದನ್ನು ಜೀವನದಲ್ಲಿ ಹೊಸ ಘಟ್ಟಕ್ಕೆ ತಲುಪಿದವನಿಗೋ ಅಥವ ಇನ್ನು ಬೆಳೆಯುತ್ತಿರುವವನಿಗೋ ಹೇಳುತ್ತೇವೆ. ದೊಡ್ಡವರು ಹೇಳುವ ಮಾತು, ಅಂದರೆ, ಜೀವನದಲ್ಲಿ ಅವರಿವರು ಮಾಡುವುದನ್ನು ನೋಡಿ ಮಾರುಹೋಗಬೇಡ, ನಿನ್ನತನ ಅಥವ ಮೇಲಿನ ಸ್ವಂತಿಕೆ ಈ ಅಮಿಷಗಳಿಂದ ಮತ್ತು  ಸೋಮಾರಿತನದಿಂದ ಅಥವ ಇನ್ಯಾವುದೇ ಸಾಮಾಜಿಕ ಶಕ್ತಿಯಿಂದ ಹೊರಟೇಹೋಗತ್ತೆ, ಕಾಪಾಡಿಕೊ, ಬಿಟ್ಟುಕೊಡಬೇಡ! ಹಾಗಾಗಿ be yourself ಗಿಂತಾ ಆ phraseನ ತಿರುಳನ್ನು ನಮ್ಮ ಕನ್ನಡದ ಈ ಪದಗುಛ್ಹ ಅದಕ್ಕಿಂತಾ ಚೆನಾಗಿ ಬಿಂಬಿಸಬಹುದು ಅಲ್ಲವೇ  

ಕನ್ನಡದಲ್ಲಿ ಹಾಗಾದರೆ be yourself ಬದಲು ಯಾಕೆ ಇಂತಹ, ಅದಕ್ಕಿಂತಾ ಗಹನವಾದ ಪದಬಳಕೆ ಬಂತು, ಜಾಣರಾದ ಪಾಶ್ಚಿಮಾತ್ಯರಿಗೆ ಏಕೆ ಬರಲಿಲ್ಲ ಅಂತ ನೀವು ಕೇಳಬಹುದು. ಆಗ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಅಂತರಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಪಾಶ್ಚಿಮಾತ್ಯರಲ್ಲಿ individualityಗೆ ಹೆಚ್ಚು ಬೆಲೆ. ಅಂದರೆ, individualityಗೆ ಸಾಮಾಜಿಕ ಜವಾಬ್ದಾರಿಗಳು ನಮ್ಮಲಿರುವುದಕ್ಕಿಂತಲೂ ಕಡಿಮೆ. ಅವರು ಅದನ್ನೇ ನೆಚ್ಚಿಕೊಂಡು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಮೂಗಿನ ನೇರಕ್ಕೆ ಯೋಚಿಸುವುದರಿಂದಲೇ, be yourself ಅಂತ ಹೇಳಿ ಸುಮ್ಮನಾಗ್ತಾರ್ಯೇ ವಿನಃ ಮುಂದೆ ಅದರಿಂದ ಬರಬಹುದಾದ potential ತೊಂದರೆಗಳ ಬಗ್ಗೆ ತಲೆ ಹಾಕುವುದಿಲ್ಲ. ಅದು ಅವರವರ ವೈಯುಕ್ತಿಕ ಸಮಸ್ಯೆ.

ಆದರೆ ನಮ್ಮಲ್ಲಿ, ಈ individualityಯನ್ನು ಕೊಕ್ಕೆ ಕಣ್ಣಿನಿಂದ ನೋಡುತ್ತೇವೆ. ಅನುಭವವಿದ್ದವರು ಅದಕ್ಕೇ ಹೇಳುವುದು, "ಕಷ್ಟ ಕಣಪ್ಪಾ, ನೋಡಿಕೊಂಡು ಸ್ವಂತಿಕೆ ಊಳಿಸಿಕೋ, ಇಲ್ಲ ಮೂರರಲ್ಲಿ ಮತ್ತೊಂದು ಆಗಿಹೋಗ್ತೀಯಾ" ಅಂತ.  ಒಟ್ಟಿನಲ್ಲಿ, ಅವರಿಗೆ individualityಯ ದುಷ್ಪರಿಣಾಮಗಳು ಕಾಣಿಸುವುದಿಲ್ಲ, ನಮಗೆ ಅದರ ಒಳ್ಳೆಯ ಗುಣಗಳನ್ನು ಕಾಣುವುದಕ್ಕೆ ಬರುವುದಿಲ್ಲ. ಅವರವರ ಅನುಭವ ಮಾತ್ರ ಅವರವರ ಭಾಷೆಗಳಲ್ಲಿ, ಮಾತುಗಳಲ್ಲಿ ಹೆಪ್ಪುಗಟ್ಟಿದೆ.

~.~
  • ಶ್ಯಾಮ ಕಶ್ಯಪ ರವರ ಬ್ಲಾಗ್
  • Login or register to post comments
  • 935 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 21, 2005 - 9:04am — olnswamy

ನೀನೇ ಆಗಿರು

olnswamy's picture

ನಿಮ್ಮ ಆಲೋಚನೆಗಳು ಮುಖ್ಯ ಅನ್ನಿಸಿ ಈ ಮಾತು. ಬಿ ಯುವರ್ ಸೆಲ್ಫ್ ಅನ್ನುವುದಕ್ಕೆ "ನೀನೇ ಅಗಿರು" ಅನ್ನುವುದು ಸೂಕ್ತವಾದ ಕನ್ನಡ ಮಾತು.
ಇಂಡಿವಿಜಿಯುಲ್ ಅನ್ನುವ ಮಾತಿನ ತಾಯಿ ಬೇರು "ವಿಭಜಿಸಲಾಗದ" ಇನ್-ಡಿವಿಸಿಬಲ್ ಎಂಬುದರಂಥದ್ದು. ಕನ್ನಡದಲ್ಲಿ ಯಾವುದನ್ನು ಅಖಂಡ, ಪೂರ್ಣ ಅನ್ನುತ್ತೇವೋ ಅದಕ್ಕೆ ಸಮವಾದದ್ದು. ನಾವು ಇಂಡಿವಿಜಿಯುಲ್ ಗಳು ಅಲ್ಲ. ಬೇರೆ ಬೇರೆ "ವ್ಯಕ್ತಿತ್ವ"ಗಳನ್ನು ಬೆಳೆಸಿಕೊಂಡವರು.
ವ್ಯಕ್ತಿತ್ವ ಅನ್ನುವುವುದ ಪರ್ಸನಾಲಿಟಿ. ಪರ್ಸೊನ ಎಂದರೆ ಮುಖವಾಡ. ವ್ಯಕ್ತಿತ್ವಗಳೆಲ್ಲ ಮುಖವಾಡಗಳೇ. ವ್ಯಕ್ತಿತ್ವ ಎಂಬುದು ಏನಿದ್ದರೂ ಇತರರ ಸಲುವಾಗಿ ನಾವು ಧರಿಸಿಕೊಳ್ಳುವ ಮಾಸ್ಕ್‌ಗಳು. ವ್ಯಕ್ತಿತ್ವ ವಿಕಸನ, ಪರ್ಸನಾಲಿಟಿ ಡೆವೆಲಪ್‌ಮೆಂಟ್ ಇವೆಲ್ಲ ಆಳದಲ್ಲಿ ಅಪಾಯಕಾರಿಗಳು. ಪರ್ಸನಾಲಿಟಿ ಅಲ್ಲ ಇಂಡಿವಿಜಿಯಾಲಿಟಿ ಮುಖ್ಯ. ಮನಶ್ಶಾಸ್ತ್ರದಲ್ಲಿ ಇಂಡಿವಿಜುಯೇಶನ್ ಮುಖ್ಯವಾದ ಕಲ್ಪನೆ. ಭಗವದ್ಗೀತೆಯಲ್ಲಿ ಹೇಳುವ ಸ್ವಧರ್ಮ ಮತ್ತು ಸ್ವ-ಭಾವಗಳು ಇಂಡಿವಿಜಿಯಾಲಿಟಿಗೆ ಸಂಬಂಧಿಸಿದವೇ ಹೊರತು ಪರ್ಸನಾಲಿಟಿಗೆ ಅಲ್ಲ. ನಾನು ನಾನೇ ಅಗಿರುವುದು, ಎಲ್ಲ ಸಂದರ್ಭಗಳಲ್ಲೂ, ಎಲ್ಲ ಕಾಲದಲ್ಲೂ ಮುಖ್ಯವೇ ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2005 - 10:13pm — ಶ್ಯಾಮ ಕಶ್ಯಪ

'ನೀನೇ ಆಗಿರು' be yourself ನ ಸೂಕ್ತ ಕನ್ನಡ ಅನುವಾದವೇ.

ಶ್ಯಾಮ ಕಶ್ಯಪ's picture

'ನೀನೇ ಆಗಿರು' be yourself ನ ಸೂಕ್ತ ಕನ್ನಡ ಅನುವಾದವೇ. ಆದರೆ ಬಳಕೆಯಲ್ಲಿ ನಮ್ಮಲ್ಲಿ ಕಡಿಮೆ ಅಂತ ನನ್ನ ಭಾವನೆ (ನನಗೆ ಆ ಮಾತನ್ನ ಬಹಳ ಜನ ಅದನ್ನ ಹೇಳಿದ್ದಿಲ್ಲ, ಸ್ವೇಚ್ಛಾಹಾರಿ ಅಂತ ಎಳೆದದ್ದೂ ಬಹಶಃ ಸ್ವಲ್ಪ ಉತ್ಪ್ರೇಕ್ಷೆ ಆಯ್ತೇನೋ)

ನಾನು ನಾನೇ ಆಗಿರುವಂತದ್ದು ಎಲ್ಲಾ ಸಂದರ್ಭಗಳಲ್ಲೂ ಎಲ್ಲಾ ಕಾಲದಲ್ಲೂ ಮುಖ್ಯವಾದದ್ದೇ, ಆದರೆ ನಮ್ಮ ಸಮಾಜದಲ್ಲಿ ಈ ವಿಷಯದಲ್ಲಿ ನಾವಾಗಿಯೇ ಒಂದು ಗಡಿ ನಿರ್ಮಿಸಿಕೊಂಡಿದ್ದೇವೆ ಅಂತ ನಿಮಗೆ ಅನ್ನಿಸುವುದಿಲ್ಲವೇ? ಹಾಗೆಯೇ ಅಮೇರಿಕಾದಲ್ಲಿ ನನ್ನ ಅನುಭವದಲ್ಲಿ, be yourself ಅನ್ನುವುದಕ್ಕೆ ನಾನು ಹೇಳಿರುವ superficial ವಿವರಣೆಯೇ ಹೆಚ್ಚಾಗಿ ಜನನಿತವಾಗಿದೆ ಅಂತ ಅನ್ನಿಸತ್ತೆ. ಆದರೆ, ನೀವು ಹೇಳಿದ ಅರ್ಥವನ್ನು ನಾನು ನಂಬಲಿಕ್ಕೆ ಇಚ್ಚಿಸುತ್ತೇನೆ ಏಕೆಂದೆರೆ ಅದರ ಅಮೂರ್ತತೆಗೆ, ವ್ಯಾವಹಾರಿಕೆಯ ಅರ್ಥಗಳಿಗಿರುವ ವಿರೋಧಾಭಾಸಗಳಿರುವುದಿಲ್ಲ. ಅಭ್ಯಾಸದಲ್ಲಿ, ಅವರವರ ಸಮಾಜದ uniquenessಗೆ ತಕ್ಕಂತೆ ತಲೆದೋರುವ ವಿರೋಧಾಭಾಸಗಳು ಕೆಲವೊಮ್ಮೆ ಕಾನ್ಸೆಪ್ಟಿನ ಅರ್ಥವನ್ನೇ ತಿರುಚುತ್ತವೆಯೇನೋ ಎಂಬುದು ನಾನು ಹೇಳಲಿಚ್ಛಿಸಿದ್ದು. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಝೆನ್ ಕಥೆ ೩೩: ಸಾವಧಾನ!
  • ಏಕೆ ಹೀಗೆ ಮಾಡಿದೆ ನೀನು?
  • ಬಸ್ ಕಂಡಕ್ಟರ್
  • ಝೆನ್ ಕಥೆ ೩೫: ನಾನು ಯಾರೋ!
Syndicate content

ಲೇಖಕರು

ಶ್ಯಾಮ ಕಶ್ಯಪ's picture

ಪೂರ್ಣ ಹೆಸರು
ಶ್ಯಾಮ ಕಶ್ಯಪ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
  • ASHOKKUMAR
    ಉ: ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
    September 6, 2008 - 7:59pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 7:46pm
ಇನ್ನಷ್ಟು


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator