ಏಕಿಷ್ಟು ಅವಸರವೋ
ಎಲ್ಲಿಗೋಡುವರಿವರು
ನಾಳೆ ಮಾಡುವರು ಏನು ನಾನು ಕಾಣೆ
ಅಷ್ಟು ಅವಸರವದೇಕೋ ನಾನು ಕಾಣೆ.
ದೂರದಲಿ ಇದ್ದ ಜನರೆಲ್ಲರೂ
ಹತ್ತಿರವೇ ಆಗುವರು ಇನ್ನಷ್ಟೂ
ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ
ಗಾವುದ ಗಾವುದ ಸರಿಯುವರು ಮತ್ತಷ್ಟೂ.
ವೈದ್ಯರಾದರು ಜನರು ಎಷ್ಟು-ಎಷ್ಟು
ರೋಗಗಳು ಹೆಚ್ಚಿದವು ಮತ್ತಷ್ಟು
ವಿದ್ಯೆ ಪಡೆದರು ಜನರು ಎಷ್ಟು ಎಷ್ಟು
ಮೋಸ ತಂತ್ರಗಳು ಹೆಚ್ಚಿದವು ಮತ್ತಷ್ಟು.
ಅನ್ನ ಬೆಳೆದರು ಇಲ್ಲಿ ಎಷ್ಟು ಎಷ್ಟು
ಅನ್ನವಿಲ್ಲದ ಜನರು ಈಗಲೂ ಅದು ಎಷ್ಟು
ಧರ್ಮ ನಂಬಿದ ಜನರು ಎಷ್ಟು ಎಷ್ಟು
ಅಧರ್ಮಿಗಳಾಗಿ ಮೆರೆದವರು ಅದು ಎಷ್ಟೋ
ಬಾಯಿಂದ ಹೇಳುವುದು ನೀತಿ ಪಾಠ
ಮತ್ತ ಆಡುವುದು ಅನೀತಿ ಆಟ
ಮುಂದೊಂದು ಹಿಂದೊಂದು,ಒಳಗೊಂದು ಹೊರಗೊಂದು
ಬೇಕೆ ನಮಗೆ ಇಂತ ಆಟ.
ಜಯಪ್ರಕಾಶ ನೇ ಶಿವಕವಿ.

- Login or register to post comments
- 253 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಜಯಪ್ರಕಾಶ ನೇವಾರ ಶಿವಕವಿ
ಪರಿಚಯ
ನನ್ನ ಹೆಸರು ಜಯಪ್ರಕಾಶ ನೇವಾರ ಶಿವಕವಿ, ಊರು ಬಳ್ಳಾರಿ ಜಿಲ್ಲೆಯಲ್ಲಿರುವ ಉಜ್ಜೈನಿ ಗ್ರಾಮ, ವಾಸ ಬೆಂಗಳೂರೆಂಬ ಬೆಂದಕಾಳೂರು, ಝೈಲೋಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅನ್ನೊ ಸಂಸ್ಥೆಯಲ್ಲಿ ತಂತ್ರಾಂಷ ತಂತ್ರಜ್ಞನಾಗಿ ಕೆಲಸ, ಕವನ ಬರೆಯುವ ಮತ್ತು ಅನುವಾದಮಾಡುವುದು ನನ್ನ ಹವ್ಯಾಸ, ನನ್ನ ಜಿಮೈಲ್ ವಿಳಾಸ. jp [dot] nevara [at] gmail [dot] com
ಇದಿಷ್ಟು ನನ್ನ ಸ್ವ ಪುರಾಣ.
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am



RSS: