ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಬ್ರಹ್ಮ ಕಮಲ.

July 4, 2008 - 1:20pm — Jayalaxmi.Patil
ಬ್ರಹ್ಮ ಕಮಲ

ಹೋದ ವರ್ಷ ಗೆಳತಿಯೊಬ್ಬಳು ನಮ್ಮನೆಗೆ ಬರೋವಾಗ ೪ ದೊಡ್ಡ ದೊಡ್ಡ ಎಲೆಗಳನ್ನು ತಂದಿದ್ದಳು. ಅವನ್ನು ಪಾಟ್‍ನಲ್ಲಿ ಹಾಕಲು ಹೇಳಿದಾಗ ನನಗೆ ಆಶ್ಚರ್ಯ!ಅರೆ, ಎಲೆಗಳನ್ನ ನೆಡೋದ್ರಿಂದ ಗಿಡ ಬೆಳೆಯುತ್ತಾ? ಅಂತ. ಆಕೆ ನಗುತ್ತಾ "ಅಷ್ಟೆ ಅಲ್ಲ, ಎಲೆಯಲ್ಲಿಯೇ ಎಲೆ ಬಿಡುತ್ತೆ ಅಲ್ಲದೆ ಹೂವು ಸಹ ಎಲೆಯ ತುದಿಗೇ ಹುಟ್ಟೋದು. ಇದನ್ನ ಬ್ರಹ್ಮ ಕಮಲ ಅಂತಾರೆ" ಅಂದ್ಲು. ಬ್ರಹ್ಮ ಕಮಲ ಅನ್ನೊ ಹೂವೊಂದಿದೆ,ಅದು ರಾತ್ರಿ ಅರಳಿ,ಬೆಳಗಾಗೊವಷ್ಟರಲ್ಲಿ ಬಾಡಿ ಹೋಗುತ್ತೆ ಅಂತ ಗೊತ್ತಿತ್ತು. ಆದರೆ ನೋಡಿರಲಿಲ್ಲ. ಆ ೪ ಎಲೆಗಳನ್ನು ನೆಟ್ಟು ಹೂವಿಗಾಗಿ ವರ್ಷವಿಡೀ ಕಾದದ್ದೇ ಬಂತು ಹೂವು ಮಾತ್ರ ಕಾಣಲಿಲ್ಲ! ಪಕ್ಕದ ಮನೆ ಆಂಟಿ ಹೇಳಿದ್ರು. ಹೂವು ಬಿಡೋದು ಜೂನ್- ಜುಲೈಯಲ್ಲಿ ಅಂತ. ಈಗ ೧೫ ದಿನದ ಹಿಂದೆ ಒಮ್ಮೆಲೆ ೩ ಮೊಗ್ಗು! ಮನೆಯಲೆಲ್ಲ ಸಂಭ್ರಮವೋ ಸಂಭ್ರಮ, ಮನೆ ಮಗಳ ಹೆರಿಗೆಯ ಕ್ಷಣಗಳನ್ನು ಎಲ್ಲರೂ ಎದುರು ನೋಡುವಂತೆ ಹೂ ಅರಳುವ ಕ್ಷಣಕ್ಕಾಗಿ ನಾವು, ಪಕ್ಕದ ಮನೆಯವರು ಕಾಯತೊಡಗಿದೆವು. ಮೊದಲ ಮೊಗ್ಗು ಅರಳುತ್ತಿರುವ ವೇಳೆ ನಮ್ಮ ನಮ್ಮೆಲ್ಲರ ಸಂತಸದ ಕಲರವ ದಾರಿಯಲ್ಲಿ ಹೋಗುವವರನ್ನು ಕ್ಷಣ ಕಾಲ ನಿಂತು ನೋಡುವಂತೆ ಮಾಡಿದ್ದು ಸುಳ್ಳಲ್ಲ. ಅವರನ್ನೂ ಕರೆದು ಬ್ರಹ್ಮ ಕಮಲದ ದರ್ಶನ ಮಾಡಿಸಿದ್ದಾಯ್ತು!
ಈಗ ನಿಮಗಾಗಿ ಆ ಅಪರೂಪದ ಹೂವಿನ ಫೋಟೊ.

  • ಅನುಭವ ಕಥನ
~.~
  • Login or register to post comments
  • 364 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 6, 2008 - 11:12pm — ರೇಖಾ

ಉ: ಬ್ರಹ್ಮ ಕಮಲ.

ರೇಖಾ's picture

ಜಯಲಕ್ಷ್ಮೀ ಅವರೇ, ಬ್ರಹ್ಮಕಮಲ ವರ್ಷಕ್ಕೆ ಒಮ್ಮೆ ಅರಳುತ್ತದೆ. ಆದರೆ, ಮಕ್ಕಳು ವರ್ಷದಲ್ಲಿ ಮೊಗ್ಗೊಡೆದು ಜೀವನ ಪರ್ಯಂತ ಅರಳುತ್ತಲೇ ಇರುತ್ತವೆ.

ತಮಾಷೆಗೆ ಹೇಳಿದೆ. ಬ್ರಹ್ಮಕಮಲದ ಫೋಟೊ ಮತ್ತು ಬರಹ ನೋಡಿ, ನಮ್ಮನೆಯಲ್ಲಿಯೇ ಹೂ ಅರಳಿತೇನೋ ಎಂಬ ಹಿಗ್ಗು ಉಂಟಾಯಿತು.

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 11:40am — Jayalaxmi.Patil

ಉ: ಬ್ರಹ್ಮ ಕಮಲ.

Jayalaxmi.Patil's picture

ನಿಜ ರೇಖಾ ಮಕ್ಕಳು ಜೀವನ ಪರ್ಯಂತ ಅರಳುವ ಮತ್ತು ಎಷ್ಟೆ ವಯಸ್ಸಾದರೂ ಹೆತ್ತವರಿಗೆ ಮುದ್ದು ಮುದ್ದಾಗೇ ಕಾಣುವಂಥ ಹೂಗಳು.
ಮಗು ಮತ್ತು ಹೂವು ಮಾತ್ರ ಎಲ್ಲರಲ್ಲೂ ಒಂದೇ ತೆರನಾದ ಹಿಗ್ಗು ತರಲು ಸಾಧ್ಯವೇನೊ... ನಿಮಗೆ ಬ್ರಹ್ಮ ಕಮಲ ಮುದ ನೀಡಿದ್ದು ಕೇಳಿ ನನಗೂ ಹಿಗ್ಗು.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 6:39pm — Deeparavishankar

ಉ: ಬ್ರಹ್ಮ ಕಮಲ.

Deeparavishankar's picture

ಹೂವು ಅರಳುವುದನ್ನು ಮಗಳ ಹೆರಿಗೆಗೆ ಕಾಯುವ೦ತೆ ಕಾದೆವು - ಉಪಮೆ ತು೦ಬಾ ತಕ್ಕುದಾಗಿದೆ. ಓದಿ ಖುಷಿಯಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 9:35pm — Jayalaxmi.Patil

ಉ: ಬ್ರಹ್ಮ ಕಮಲ.

Jayalaxmi.Patil's picture

ದೀಪಾ,
'ಸಂಪದ' ಬಳಗದ ಭಾಷೆಯಲ್ಲಿ ಹೇಳೋದಾದ್ರೆ ನಿಮಗೆ ನನ್ನ 'ನನ್ನಿ'!
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 10:59am — kadakolla05

ಉ: ಬ್ರಹ್ಮ ಕಮಲ.

kadakolla05's picture

ತುಂಬಾ ಚನ್ನಾಗಿದೆ.

ಇದನ್ನೂ ನೋಡಿ
http://baaladaari.blogspot.com/2008/07/blog-post.html

ಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 14, 2008 - 1:52pm — Jayalaxmi.Patil

ಉ: ಬ್ರಹ್ಮ ಕಮಲ.

Jayalaxmi.Patil's picture

ನಿಮ್ಮ ’ಬಾಳದಾರಿ’ಯಲ್ಲಿ ಕಂಡ ಬ್ರಹ್ಮ ಕಮಲ ನೋಡಿ, ನಿಮ್ಮ ಮತ್ತು ನಿಮ್ಮ ಮನೆಯೊಡತಿಯ ಸಂಭ್ರಮ ಓದಿ ಮತ್ತೊಮ್ಮೆ ಮನೆಯಲ್ಲಿ ಬಹ್ಮ ಕಮಲ ಅರಳಿದಷ್ಟು ಖುಷಿಯಾಯ್ತು.

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬ್ರಹ್ಮ ಕಮಲ
  • ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ
  • ಬ್ರಹ್ಮ ಕಮಲ.
  • ಬ್ರಹ್ಮ ಕಮಲ
  • ಬ್ರಹ್ಮ ಭ್ರೂಣ
Syndicate content

ಲೇಖಕರು

Jayalaxmi.Patil's picture

ಪೂರ್ಣ ಹೆಸರು
ಜಯಲಕ್ಷ್ಮೀ.ಪಾಟೀಲ್.

ಪರಿಚಯ

ಓದುವ, ಸ್ವಲ್ಪ ಬರೆಯುವ ಹವ್ಯಾಸವಿದೆ. ಸಂಗೀತ ಇಷ್ಟ. ಅಭಿನಯ ನನ್ನ ವೃತ್ತಿ, ಪ್ರವೃತ್ತಿ ಮತ್ತು ಅಭಿಮಾನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 546 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator