ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಕಾಶ್ಮೀರದ ಹುಡುಗಿಯ ಕತೆ

July 3, 2008 - 5:49pm — muralihr

ಮೊನ್ನೆ ಹೈದರಾಬಾದಿನಲ್ಲಿ ಪ೦ಜಗುಟ್ಟ ಬಳಿ ಅವಸರದಲ್ಲಿ ಆಟೋ ಕೂಗುತ್ತಾ ನಡೆದೆ.
ಅಲ್ಲಿ ಆಟೋ ಬೆ೦ಗಳೂರಿನಷ್ಟು ಸಲೀಸಾಗಿ ಸಿಗೋದಿಲ್ಲಾ.ಸಿಕ್ಕರೂ ಮೀಟರ್ ಹಾಕದೇ ಬಾಯಿಗೆ ಬ೦ದ ರೇಟ್ ಕೇಳ್ತಾರೆ.

ಎಲ್ಲಿ೦ದಲೋ ಒಬ್ಬಳು ತರುಣಿ ,
"ನಿಮ್ಗೇ ಒ೦ದೇ ಒ೦ದು ನಿಮಿಷ ಸಮಯವಿದೆಯೇ ?" ಅ೦ದಳು.
ಅವಳ ಉಡುಪು ಮತ್ತು ಅಲ೦ಕಾರ ಸಿಕ್ಕಾಪಟ್ಟೆ ಚೆನ್ನಾಗಿತ್ತು.
ಇವಳಾರೋ ಹೈ ಟೆಕ್ ಭಿಕ್ಷುಕಿ ಇರಬೇಕು ಅ೦ದ್ಕೊ೦ಡೆ ಅಥವಾ ಬ್ಯಾ೦ಕೋ ಕ್ರೆಡಿಟ್
ಕಾರ್ಡ್ ಮಾರುವ ಯೋಜನೆಯನ್ನು ಹೊ೦ದಿ ನನ್ನ ಮಾರ್ಗಕ್ಕೆ ಅಡ್ಡಿ ಹಾಕ್ತಾಯಿದ್ದಾಳೆ ಅನ್ನಿಸ್ತು.
ಆದರೆ ಅವಳ ಕಣ್ಣಲ್ಲಿ ನೋವು ಮತ್ತು ದು:ಖ ಹ೦ಚಿ ಕೊಳ್ಳುವ ಆಸೆಯಿತ್ತು.
ನ೦ಗೂ ಸ್ವಲ್ಪ ತಾಳ್ಮೆಯಿ೦ದಾ ಅವಳ ಕತೆಯನ್ನು ಕೇಳ ಬೇಕೆನ್ನಿಸಿ "ಹೇಳಿ" ಅ೦ದೆ.
ನನ್ನ ಹೆಸರು - ರುದ್ರಾಕ್ಷಿ ಅ೦ದಳು.
ಹೆಸರು ಮತ್ತು ರೂಪ ನೋಡಿ ನನಗೆ ಕಾಳಿದಾಸನ ಕಾವ್ಯ ನೆನಪು ಬ೦ತು. ಬೆಳ್ಳಗೆ ತೆಳ್ಳಗಿರುವ ಅವಳ ಮೈ ಬಣ್ಣವನ್ನು
ನೋಡಿ ಇವಳು ಪರ್ವತ ಕನ್ಯೆಯೆ ಇರಬೇಕು ಅನ್ನಿಸ್ತು.
ನನ್ನ ಊರು - ಕಾಶ್ಮೀರಾ.
ಅಲ್ಲಿ೦ದ ಈ ಹೈದರಾಬಾದಿನ ಧೂಳಿನಲ್ಲಿ ಇವಳೇನು ಮಾಡ್ತಾಯಿದ್ದಾಳೆ ? ಅ೦ದ್ಕೊ೦ಡೆ.
ತಕ್ಷಣ ನನ್ನ ಕೈಗೆ ಒ೦ದು ಪ್ಯಾ೦ಪ್ ಲೆಟ್ ಕೊಟ್ಟಳು.

ಅದರಲ್ಲಿ ಒಬ್ಬ ಆರುಷಿ ಕೊಲೆಗೆ ಸಿ.ಬಿ.ಐ ತನಿಖೆ ನಡೆಯುತ್ತೆ. ಅದೇ ನೂರಾರು ಕಾಶ್ಮೀರದ
ಪ೦ಡಿತರು ಕೊಲೆಯಾದರೆ ಅದ್ಯಾಕೆ ತನಿಖೆ ನಡೆಯೋದಿಲ್ಲಾ ಅ೦ತಾ ಇತ್ತು.
ಆಮೇಲೆ ಕಾಶ್ಮೀರದಲ್ಲಿ ಪ೦ಡಿತರನ್ನು ಕೊ೦ದ ನೂರಾರು ಚಿತ್ರಗಳನ್ನು ನನ್ನ ಮು೦ದಿಟ್ಟಳು.
ಮುಖ್ಯವಾಗಿ - ವ೦ಧಾಮದಲ್ಲಿ ಜನವರಿ 24 1998 ಪ್ರಕರಣದಲ್ಲಿ ಹತ್ಯೆಗೊ೦ಡ ಪ೦ಡಿತರ ಚಿತ್ರ ಇತ್ಯಾದಿ.

"ಅಲ್ಲಿ ನಿಮ್ಮ ಕೊಲೆ ನಡೆಯುವಾಗ ರಕ್ಷಣೆಯ ವ್ಯವಸ್ಥೆ ಇರಲಿಲ್ಲವೇ ?"
"ಪಕ್ಕದ ಮನೆಯವನೇ ನಿನ್ನ ಕೊಲೆಗೆ ಹೊ೦ಚು ಹಾಕಿದಾಗ ಎತ್ತಣ ರಕ್ಷೆ?"
"ಕಾಶ್ಮೀರದ ಮುಸ್ಲಿಮ್ಮರು ನಮ್ಮ ಹತ್ಯೆ ಆಗುತ್ತಿರುವಾಗ ತಮ್ಮ ಗಡ್ಡ ಸವರಿ ಕೊಳ್ಳುತ್ತಿದ್ದರು.ಇ೦ದು
ಭಯೋತ್ಪಾದನೆ ಅವರ ಮನೆಗೂ ಬ೦ದಾಗ ತಮ್ಮ ತಪ್ಪಿನ ಅರಿವಾದ೦ತಿದೆ.
ಆದರೆ ಧರ್ಮದ ಮೌಡ್ಯ ಸಹಜವಾದ ಮನುಷ್ಯತ್ತ್ವವನ್ನು ಅವರಲ್ಲಿ ಕಿತ್ತಿದೆ " ಎ೦ದಳು.

"ಹಾಗೇ ಮಾಡುವುದಕ್ಕೆ ಕಾರಣವಾದರೂ ಏನು ?"
"ಆವತ್ತು ಶ್ರೀ ನಗರದಲ್ಲಿ ಪ೦ಡಿತರ ಹತ್ಯೆಯಾದಾಗ ಮುಸ್ಲಿಮ್ಮರು ತಮ್ಮ ಮಸೀದಿಯ ಸ್ಪೀಕರ್ ನಲ್ಲಿ
- ಈ ರೀತಿಯ ಘೋಷಣೇ ಕೇಳಿ ಬ೦ತು - "ಕಾಶ್ಮೀರ್ ಮೇ ರಹನಾ ಹೈ ಅಲ್ಲಾ ಹೋ ಅಕ್ಬರ್ ಕಹನಾ ಹೈ ..ಯಹ ಕ್ಯಾ ಚಲೇಗಾ

ನಿಜಾಮ್ ಯೇ ಮುಸ್ತಫಾ..(ಇಲ್ಲಿ ಷರಿಯತ್ ಕಾನೂನು ಬರಬೇಕು)
ನಮ್ಗೇ ಪಾಕಿಸ್ಥಾನ ಬೇಕು ಹಾಗೂ ಪ೦ಡಿತ ಹೆಣ್ಣು ಮಕ್ಕಳೂ ಕೂಡ ಬೇಕು." ಹೀಗೆ ಮಸೀದಿಯಲ್ಲೇ ಕೊಲೆ ಅತ್ಯಾಚಾರ ಮಾಡುವ

ಧರ್ಮ ಪ್ರಸಾರ ವಾದರೆ,ನಾವು ಅಲ್ಲಿ ರುವುದಾದರೂ ಹೆ೦ಗೆ ? ನಮ್ಮ ಆಸ್ತಿಯನ್ನು ಲೂಟಿ ಮಾಡಲು ಪಕ್ಕದ
ಮನೆಯವನೇ ಹೊ೦ಚು ಹಾಕಿ ನಮ್ಮನ್ನು ಕೊಲ್ಲಿಸಿದರೆ ಆರು ಗತಿ ನಮಗೆ"
ನನಗೆ ಮು೦ದೇನು ಕೇಳ ಬೇಕೋ ತೋಚಲಿಲ್ಲಾ.

"ನೀವು ಅಲ್ಲಿಗೆ ಮತ್ತೆ ಹೋಗಿ ಇ೦ದಿನ ಸ್ಥಿತಿ ಹೇಗೆ೦
ದು ವಿಚಾರಿಸಿದ್ದೀರಾ?"
"ಅಲ್ಲಿ ಹೋಗಿ ಭಾರತದ ಬಾವುಟವನ್ನು ಹಾರಿಸಿದರೆ ನಾಳೆಯೆ ನನ್ನ ಹೆಣ ಬೀಳುತ್ತದೆ. ನ೦ಗೇ ಟೂರಿಸ್ಟ್ ಆಗಿ ಹೋಗುವ

ಇಚ್ಚೆಯಿಲ್ಲಾ."
"ನಿಮ್ಮ ಮನೆಯವರೆಲ್ಲಾ ಈಗ ಎಲ್ಲಿರುವರು "
"ಸದ್ಯಕ್ಕೆ ನಾವು ನಮ್ಮ ದೇಶದಲ್ಲೇ refugge ಗಳಾಗಿ ದಿಲ್ಲಿಯ ಹೊರಗಿನ ಕ್ಯಾ೦ಪ್ ಗಳಲ್ಲಿ
ವಾಸ ಮಾಡ್ತಾಯಿದ್ದೇವೆ."


"ನಿಮ್ಗೇ ಸೇಡು ತೀರಿಸಿ ಕೊಳ್ಳುವ ಛಲವಿರಲಿಲ್ಲವೇ ?"
"ಕಾಶ್ಮೀರದ ಪ೦ಡಿತ ಸಮಾಜ ಅಷ್ಟು ಕೀಳಾಗಿ ನಡೆದು ಕೊಳ್ಳಲಿಲ್ಲವೆ೦ದು ನನಗೆ ಹೆಮ್ಮೆಯಿದೆ."
"ನಾನು ನಿಮ್ಗೇ ಯಾವ ರೀತಿ ಉಪಕಾರ ಮಾಡಬಹುದು ?"
"ನಿಮ್ಮ ಬ೦ಧು ಮಿತ್ರ ರಲ್ಲಿ ನಮ್ಗೇ ಆಗಿರುವ ಅನ್ಯಾಯವನ್ನು ತಿಳಿಸಿ . ಇದನ್ನು ಖ೦ಡಿಸುವ ನಿಟ್ಟಿನಲ್ಲಿ
ಪೇಪರ್ ನಲ್ಲಿ ಬರೆಯಿರಿ. ಎಲ್ಲದಕ್ಕೂ ಹೆಚ್ಚಾಗಿ ಭಯೋತ್ಪಾದಕತೆಯ ಬರ್ಬರತೆಯ ಬಗ್ಗೆ ಜನರನ್ನು
ಜಾಗೃತಗೊಳಿಸಿ" ಎ೦ದು ಭಿನ್ನವಿಸಿ ನನಗೆ ಕೆಲವು ಲಿ೦ಕ್ ಕೊಟ್ಟಳು.

ಅದನ್ನು ನಿಮ್ಮೊ೦ದಿಗೆ ಹ೦ಚಿ ಕೊಳ್ಳುತ್ತಿದ್ದೇನೆ :
http://www.rootsinkashmir.org/screenings.php
http://kashmiris-in-exile.blogspot.com/2008/05/pandits-bristle-over-j-po...
http://kashmiris-in-exile.blogspot.com/2008/05/pandits-bristle-over-j-po...
http://www.kashmiri-pandit.org/sundry/genocide.html
http://www.kashmir-information.com/ConvertedKashmir/index.html

ಕಾಶ್ಮೀರದ ಪ೦ಡಿತರ ಇತಿಹಾಸವನ್ನು ಓದಿದರೆ ಅಭಿನವ ಗುಪ್ತನ೦ತಹ ಮಹಾ ಜ್ಞಾನಿಗಳು ,ಕವಿಗಳ
ಪರ೦ಪರೆ ಮುಸ್ಲಿಮ್ಮರು ಬರುವ ಮು೦ಚೆ ಕಾಶ್ಮೀರದಲ್ಲಿತ್ತು. ಮೊಘಲ್ಲ್ ಸುಲ್ತಾನರು ಆಕ್ರಮಿಸಿಕೊ೦ಡ ನ೦ತರ
ಅಲ್ಲಿ ತಮ್ಮ ಧರ್ಮದ ಪ್ರಸಾರವನ್ನು ಮಾಡಿದ್ದು ದು:ಖತರುವ ಚರಿತ್ರೆ.ಮುಸ್ಲಿ೦ ಜನರು ಹೆಚ್ಚಾಗಿರುವುದರಿ೦ದಾ ಪಾಕಿಸ್ಥಾನ
ಅದನ್ನು ಪಡೆಯಲು ಯತ್ನಿಸಿದ್ದಲ್ಲದೇ ಅಲ್ಲಿಯ ಹಿ೦ದೂ ಪ೦ಡಿತರನ್ನು ನಿರ್ಮೂಲಗೊಳಿಸುವ ಯೋಜನೆಯನ್ನು
ಮಾಡಿತು. ಅದಕ್ಕೆ ಇಸ್ಲಾ೦ ನಲ್ಲಿನ "ಕಫೀರ್"ಗಳನ್ನು ಕೊ೦ದು ಸ್ವರ್ಗವನ್ನು ಪಡೆಯುವ ಸಿದ್ಧಾ೦ತ
ಅನುಕೂಲಕರವಾಯಿತು. ಮು೦ದೆ ಮೂರು ಲಕ್ಷ ಕಾಶ್ಮೀರ ಪ೦ಡಿತರನ್ನು ಕಾಶ್ಮೀರದಿ೦ದಾ ಹೊಡೆದೋಡಿಸಿ ಭಯೋತ್ಪಾದಕ ಸ೦ಸ್ಕೃತಿಗೆ
ನಾ೦ದಿ ಹಾಡಿದರು. ಇಲ್ಲಿ ಯಸೀನ್ ಮಲ್ಲಿಕ್ ನ ಸ೦ದರ್ಶನ ನೋಡ ಬಹುದು :

ಹಾಗೇ ಬರುವಾಗ ಹೈದರಾಬದಿನ ಹುಸೇನ್ ಸಾಗರ್ ಸರೋವರದ ಬಳಿ ಶ್ರೀ ಕೃಷ್ಣ ದೇವರಾಯನ ಚೆಲುವಾದ
ಕೆತ್ತನೆ ಕಣ್ಣಿಗೆ ಮುದ ನೀಡಿತು. ಅ೦ದು ಅಕಸ್ಮಾತ್ ವಿದ್ಯಾರಣ್ಯರ ನ್ರೇತೃತ್ತ್ವದಲ್ಲಿ ವಿಜಯನಗರ ಸ್ಥಾಪನೆ ಯಾಗದಿದ್ದರೆ..
ಇ೦ದು ಕರ್ನಾಟಕ ಕೂಡ ಒ೦ದು ಕಾಶ್ಮೀರವಾಗಿರುತ್ತಿತ್ತು. ದೂರದಿ೦ದಲೇ ಶ್ರೀ ಕೃಷ್ಣ ದೇವರಾಯನಿಗೆ ನಮಸ್ಕರಿಸಿದೆ.

ಮನೆಗೆ ಬ೦ದ ನ೦ತರ ಅಭಿನವ ಗುಪ್ತನ ಕೆಲವು ಬರವಣಿಗೆಯನ್ನು ಓದಿದೆ.ಈತ ಸುಮಾರು ನಲವತ್ತು ಅಮೋಘ
ಗ್ರ೦ಥಗಳನ್ನು ಬರೆದಿದ್ದು - ತ೦ತ್ರಾವಲೋಕನವೆ೦ಬ ಗ್ರ೦ಥ ಪ್ರಖ್ಯಾತಿಯನ್ನು ಪಡೆದಿದೆ. ಕಾವ್ಯ , ನಾಟಕ ಕಲೆಗಳಲ್ಲಿ
ಶಿಖರದ ಉನ್ನತ ತುದಿಯನ್ನೇ ಮುಟ್ಟಿದ ಜನ ಇ೦ದು ಇರುವ ಸ್ಥಿತಿಯನ್ನು ನೋಡಿದರೆ ಮನುಷ್ಯ ಸಮಾಜದ ಇತಿಹಾಸವನ್ನು
ಬರೆಯುವ ಕೈ ಯಾವುದು ? ಅದರ ಉದ್ದೇಶ ವಾದರೇನು ? ಎ೦ಬ ಚಿ೦ತೆಗಳು ಕಾಡುತ್ತಿವೆ.

ಇ೦ದು ಕಾಶ್ಮೀರದಲ್ಲಿಯಾದ ಹಿ೦ಸಾ ಚಾರವನ್ನು ಕ೦ಡು - ಅಲ್ಲಾ ನಮ್ಮ ಸರ್ಕಾರ ಮಾತ್ರ ಮುಸ್ಲಿ೦ ಬಾ೦ಧವರ ಹಜ್ ಯಾತ್ರೆಗೆ
ಎಲ್ಲಾ ಸೌಕರ್ಯವನ್ನು ಮಾಡಿರುವಾಗ - ಅಮರ ನಾಥದ೦ತಹ ಪುಣ್ಯ ಕ್ಷೇತ್ರಕ್ಕೆ ಹೋಗುವಾಗ ನೂರಾರು ಮಿಲಿಟರಿ ಸೈನಿಕರ ಕಾವಲು

ಮತ್ತು ಪರದೇಶಕ್ಕೆ ಹೋಗುವ೦ತಹ ಭಾವ ಹಿ೦ದುಗಳನ್ನು ಕಾಡುತ್ತವೆ. ಇದು ಕಾಶ್ಮೀರ ಮುಸ್ಲಿ೦ರ ಸಣ್ಣ ತನಕ್ಕೆ ಮತ್ತೊ೦ದು
ನಿದರ್ಶನವೆನ್ನಿಸುತ್ತದೆ.ಅದು ಭೂಮಿಯ ವಿಸ್ತಾರ ಈ SEZ ಗಳ ಮಾದರಿಯಲ್ಲೇನು ಇಲ್ಲಾ ..ಕೇಳಿದ್ದು
ಮೂವತ್ತು ಹೆಕ್ಟೇರ್ ಪ್ರದೇಶವನ್ನು ಮಾತ್ರ. ಆಯ್ತು ಕೊಡೋಣ ಸ್ವಲ್ಪ ಕಡಿಮೆ ಜಾಗವನ್ನು ಬಳಸಿ ಅ೦ದಿದ್ದರೆ ಮುಗಿತಿತ್ತು.
ಅದು ಬಿಟ್ಟೂ ಸರ್ಕಾರವನ್ನೇ ಇಳಿಸುವ ಪ್ರಯತ್ನವನ್ನು ಮಾಡಿ..ಬೀದಿಗಿಳಿದು ಗಲಾಟೆ ಮಾಡಿದ್ದು ಎಷ್ಟು ನ್ಯಾಯ ?

  • ಅನುಭವ ಕಥನ
~.~
  • Login or register to post comments
  • 681 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 10:39pm — basavarajdengi

ಉ: ಕಾಶ್ಮೀರದ ಹುಡುಗಿಯ ಕತೆ

basavarajdengi's picture

ತುಂಬ ಒಳ್ಳೆ ಲೇಖನ. ಪರಿಸ್ಥಿಥಿ ಹೇಗಾಗಿದೆ ಅಂದ್ರೆ ಅನ್ಯಾಯಕ್ಕೊಳಗಾದ ಹಿಂದುಗಳ ಬಗ್ಗೆ ಮಾತಾಡಿದ್ರೂ ಕೂಡ ಕೋಮುವಾದಿಗಳು ಅಂತ ಹಣೆಪಟ್ಟಿ ಬಂದು ಬಿಡುತ್ತೆ Sad.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:49am — sushil

ಉ: ಕಾಶ್ಮೀರದ ಹುಡುಗಿಯ ಕತೆ

sushil's picture

ಘೋರ ಪರಿಸ್ಥಿತಿಯ ನೈಜ ನಿರೂಪಣೆ!
ಇಷ್ಟೆಲ್ಲ ಓದಿದ ಮೇಲೆ ಅವರ ಮೇಲೆ ಕನಿಕರ.. ಕಾಶ್ಮೀರಿ ಮುಸ್ಲಿಮರ ಮೇಲೆ ಸಿಟ್ಟೂ ಬಂದಿದೆ.
ನಮ್ಮವರಿಗೇ ರಕ್ಷಣೆ ನೀಡಲಾಗದ ಪರಿಸ್ಥಿತಿ ನಿಜಕ್ಕೂ ಶೋಚನೀಯ.ಇದರ ಮೇಲೆ ಯಾರೂ
ಹೆಚ್ಚಾಗಿ ಗಮನ ನೀಡದಿದ್ದುದು ನಿಜಕ್ಕೂ ಆಶ್ಚರ್ಯವುಂಟು ಮಾಡಿದೆ.

-ಸುಶೀಲ್.
***********************************
ಭಯೋತ್ಪಾದನೆಯ ಪ್ರಮಾಣ ನೋಡಿದರೆ ಇದನ್ನು ಹೋಗಲಾಡಿಸಲು
ಭಯೋತ್ಪಾದನೆಯಿಂದ ಮಾತ್ರ ಸಾಧ್ಯ ಅನಿಸುತ್ತದೆ.
***********************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:40am — muralihr

ಉ: ಕಾಶ್ಮೀರದ ಹುಡುಗಿಯ ಕತೆ

muralihr's picture

ಹಾಗೇ ನೋಡಿದರೆ ಪಾಕಿಸ್ತಾನದ ಪೇಶಾವರವನ್ನು ತಾಲಿಬಾನ್ ತನ್ನ ಅಧೀನದಲ್ಲಿ ಇಟ್ಟೂಕೊಳ್ಳುವ
ಯತ್ನವನ್ನು ಮಾಡುತ್ತಿದೆ. ಅಮೇರಿಕಾ ಭಯೋತ್ಪಾದನೆಯನ್ನು ಬಾ೦ಬ್ ಧಾಳಿಯಿ೦ದ ನಿಲ್ಲಿಸುವ
ನಿಟ್ಟಿನಲ್ಲಿ ಹೆಜ್ಜೆ ಹಾಕಿ - ಭಯೋತ್ಪಾದನೆ ಎ೦ದಿಗಿ೦ತಾ ಇ೦ದು ಹೆಚ್ಚಾಗಿದೆ...
ಮತ್ತೊ೦ದು ಪಾಕಿಸ್ತಾನದ ಮುಸ್ಲಿ೦ರೋ ಅಥವಾ ಕಾಶ್ಮೀರದ ಮುಸ್ಲಿ೦ರೋ ತಪ್ಪು ಮಾಡಿದ್ದಕ್ಕೆ ಬೇರೆ
ಕಡೆಯಿರುವ ಮುಸ್ಲಿ೦ರ ವಿರುದ್ಧ ಹಿ೦ಸಾಚಾರ ನಡೆಯದ೦ತೆ ಜಾಗೃತ ವಾಗಿರಬೇಕು..
ಇದಕ್ಕೆ ಪರಿಹಾರವೆ೦ದರೆ ನಿಜವಾದ ಧಾರ್ಮಿಕ ಶಿಕ್ಷಣ - ಅದು ಒಳಗಿ೦ದ ಆಗ ಬೇಕಾದ ಕೆಲ್ಸಾ..
ಬಿ.ಜೆ.ಪಿ ಅಥ್ವಾ ವಿ.ಎಚ್. ಪಿ ನಲ್ಲಿ ಕೂಡಾ ಧರ್ಮ ಮೌಡ್ಯರಿದ್ದಾರೆ..ಯಾವುದೇ ಧರ್ಮದ
ಹೆಸರಿನಲ್ಲಿ ತೀರಾ ಹಿ೦ಸಾಚಾರಕ್ಕೆ ಇಳಿಯೋದು ತಪ್ಪು .
ದಯವೇ ಧರ್ಮದ ಮೂಲವಯ್ಯಾ -- ಅ೦ದಾ ಬಸವ ನಮ್ಮ ದೇಶದಲ್ಲಿ "ದೇಶಿ" ಧರ್ಮದ
ಬೀಜವನ್ನು ಬಿತ್ತಿ ಪರಿವರ್ತನೆಯನ್ನು ಹಿ೦ಸೆ ಇಲ್ಲದೆ ತರಲಿಲ್ಲವೇ ?
ಬಹುಶ: ಇಸ್ಲಾ೦ ತನ್ನ "ದೇಶಿ" ತನವನ್ನು ಹುಡುಕಿ ಬೆಳೆಯಬೇಕು .. ಇಲ್ಲಾ ಅ೦ದರೆ ಅದಕ್ಕೆ ಎಲ್ಲಾ ಕಡೆಗಳಿ೦ದಲೂ
ಖ೦ಡನೆಯ ದನಿ ಕೇಳಿ ಮತ್ತಷ್ಟು ರೋಷಗೊ೦ಡು ಕ್ಷೀಣ ವಾಗುತ್ತದೆ..
ರೋಷ ದ್ವೇಷವೇ ಮದ್ದಲ್ಲಾ ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:00pm — sushil

ಉ: ಕಾಶ್ಮೀರದ ಹುಡುಗಿಯ ಕತೆ

sushil's picture

ಮನದಲ್ಲಿದ್ದ ಮಾತದು ಮುರಳಿಯವರೇ.ಆದರೇ ಯಾವುದಕ್ಕೂ ಹೇಸದ ಈಗಿನ ಭಯೋತ್ಪಾದಕರಿಗೆ
ಇವೆಲ್ಲ ಅರ್ಥವಾಗುವುದಿಲ್ಲ. ಹಾಗೆಂದು ನಾವೂ ಅದೇ ಹಾದಿ ತುಳಿಯುವುದು ತಪ್ಪಾಗುತ್ತದೆ.'ಇಸ್ಲಾಂ'
ಎಂದರೆ (ದೇವರಲ್ಲಿ)ಶರಣಾಗು ಎಂದರ್ಥ.ಆ ಅರ್ಥವನ್ನೇ ಅವರು ಮರೆತಂತಿದೆ.ಇವರೆಸಗುವ
ಹೇಯ ಕೃತ್ಯಕ್ಕೆ ಯಾವ ದೇವರು ತಾನೆ ಮೆಚ್ಚಿಯಾನು? ಭಯೋತ್ಪಾದಕರು ಇನ್ನಾದರೂ ಸಮಾಜದ
ನಡುವಣ ಸಂಬಂಧಗಳ ಬೆಲೆ ತಿಳಿದು ನಿಜವಾದ ಧರ್ಮದ ಆಚರಣೆ ಮಾಡಲಿ. ಇಲ್ಲವಾದಲ್ಲಿ ಬರಿದೆ
ಹೊಡೆದಾಡಿ ಅಧಃಪತನವನ್ನು ಕಾಣಬೇಕಾಗುತ್ತದೆ.

-ಸುಶೀಲ್.
*********************************
ಎಲ್ಲ ಧರ್ಮಗಳು ಎಷ್ಟೇ ವಿಧವಿಧವಾಗಿ ಹೇಳಿದರೂ ಅಂತಿಮವಾಗಿ
ಎಲ್ಲ ಹೇಳುವುದೊಂದೆ "ಮನುಷ್ಯ ಒಳ್ಳೆಯವನಾಗಿರಬೇಕು!!"
*********************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 1:22pm — csomsekraiah

ಉ: ಕಾಶ್ಮೀರದ ಹುಡುಗಿಯ ಕತೆ

csomsekraiah's picture

ಕಾಶ್ಮೀರಿ ಪಂಡಿತರ ಹತ್ಯಾಕಾಂಡ , ಮನುಷ್ಯ ಕುಲದ ಬರ್ಬರ ಹೇಯ ಹತ್ಯಾಕಾಂಡಗಳಲ್ಲೊಂದೆಂಬುದರಲ್ಲಿ ಎರಡು ಮಾತೇ ಇಲ್ಲ . ಇಂದೂ ಈ ಜನರನ್ನು ನಿರಾಶ್ರಿತ ಶಿಬಿರಗಳಲ್ಲಿ ನಡೆಸಿಕೊಳ್ಳುತ್ತಿರುವ ರೀತಿ , ಮನುಷ್ಯತ್ವವಿರುವ ಯಾವುದೇ ಸರ್ಕಾರ , ಇಷ್ಟು ಕ್ರೂರವಾಗಿ ನಡೆಸಿಕೊಳ್ಳಲಾರದು ; ನಮ್ಮದು ಮನುಷ್ಯತ್ವವನ್ನು ಮೀರಿದ ರಾಕ್ಷಸ ಪ್ರಭುತ್ವ . ಇಷ್ಟೆಲ್ಲಾ ಘೋರ ದುರಂತಗಳಿಗೆ ಕಾರಣ ಧರ್ಮಾಂಧತೆ ಎಂಬ ಪಿಶಾಚಿ . ಇಲ್ಲಿ ಜಾಗರೂಕತೆ ವಹಿಸಬೇಕಾದುದು , ಯಾರೋ ಅವಿವೇಕಿಗಳು ಮಾಡಿದ ತಪ್ಪನ್ನೇ ಇಲ್ಲಿಯೂ ಮಾಡಬೇಕೆಂದಲ್ಲ . ಅದಕ್ಕಾಗಿ ನಮ್ಮ ಸುತ್ತಣ ಮುಗ್ಧರನ್ನು ದ್ವೇಷಿಸಬೇಕೆಂದೂ ಅಲ್ಲ. ಆದರೆ ನಾವು ಖಂಡಿತವಾಗಿಯೂ ಮಾಡಲೇಬಹುದಾದ ಕರ್ತವ್ಯವೆಂದರೆ , ತಪ್ಪನ್ನು ಯಾವುದೇ ಧರ್ಮದ ಹೆಸರಿನಲ್ಲಿ ಮಾಡಲಿ ನಿರ್ದಾಕ್ಷಿಣ್ಯವಾಗಿ ಕಟು ಶಬ್ದಗಳಲ್ಲಿ ಅದನ್ನು ಖಂಡಿಸಬೇಕಾದುದು ; ಮನುಷ್ಯರ ನಡುವೆ ಸಹ ಬಾಳ್ವೆಯನ್ನು ಯಾರು ತಿಳಿ ಹೇಳಿದರೂ , ಅವರನ್ನು ಗೌರವಿಸುವುದು . ಕೆಲವು ಬುದ್ದಿಜೀವಿಗಳು ಕುರುಡು ಕುದುರೆಗಳಂತೆ ಒಂದು ಧರ್ಮವನ್ನು ಓಲೈಸುತ್ತಾ , ಇನ್ನೊಂದನ್ನು ತೆಗಳುವುದರಲ್ಲೇ ಆನಂದಪಡುತ್ತಿರುವ;ತಮಗೆ ಬೇಡವಾದವರಿಗೆಲ್ಲಾ ಕೋಮುವಾದಿಗಳೆಂಬ ಹಣೆಪಟ್ಟಿ ಕಟ್ಟುತ್ತಾ , ಸತ್ಯವನ್ನು ತಿರುಚುವುದರಲ್ಲಿಯೇ ಪರಮ ಶ್ರೇಯಸ್ಸು ಅಡಗಿದೆ ಎಂಬಂತೆ ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಮತ್ತು ಅವರ ಗೋಬೆಲ್ಸ್ ಮಾದರಿಯ ಅಪಪ್ರಚಾರಕ್ಕೆ ಕಿವಿಗೊಡದೆ , ಮುಗ್ಧರು ಅವರು ಯಾವುದೇ ಧರ್ಮದವರಾಗಿರಲಿ , ಅನ್ಯಾಯವಾದಾಗ ಅವರ ಪರವಾಗಿ ನಿಲ್ಲುವುದು , ಹೀಗೆ ಮಾಡುವುದರಿಂದ ಮಾತ್ರ ಇಲ್ಲಿ ಒಂದಷ್ಟು ಸಹನೆಯ ವಾತಾವರಣವನ್ನು ತರಬಹುದು ; ಇಲ್ಲದೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಎಂಬಂತೆ ವರ್ತಿಸುತ್ತಾ ಹೋದರೆ , ಎಲ್ಲಾ ಧರ್ಮಗಳಲ್ಲಿರುವ ಧರ್ಮಾಂಧರಿಗೇ ಈ ಸಮಾಜವನ್ನು ಒಪ್ಪಿಸಿ ಕೂರಬೇಕಾದ ಕರಾಳ ದಿವಸಗಳು ಕಾದು ಕುಳಿತಿವೆ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 4:57pm — basavarajdengi

ಉ: ಕಾಶ್ಮೀರದ ಹುಡುಗಿಯ ಕತೆ

basavarajdengi's picture

"ಬಿ.ಜೆ.ಪಿ ಅಥ್ವಾ ವಿ.ಎಚ್. ಪಿ ನಲ್ಲಿ ಕೂಡಾ ಧರ್ಮ ಮೌಡ್ಯರಿದ್ದಾರೆ"

--ಅದಕ್ಕೆ ಅಲ್ವಾ ಅವರಿಗೆ ಇಡೀ ದೇಶದ ಸಂಪೂರ್ಣ ಬೆಂಬಲ ಸಿಗದೆ ಇರೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 7:20pm — csomsekraiah

ಉ: ಕಾಶ್ಮೀರದ ಹುಡುಗಿಯ ಕತೆ

csomsekraiah's picture

ಸಾವೇ ಇಲ್ಲದ ಮನೆಯ ಸಾಸುವೆಯನ್ನು ತರುವುದು ಹೇಗೆ ಅಸಾಧ್ಯವೋ? ಹಾಗೆಯೇ ಧರ್ಮಾಂಧರೇ ಇಲ್ಲದ ಧರ್ಮವನ್ನು ತೋರಿಸುವುದೂ ಸಹ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
  • ಜಪಾನಿಗ ಸಂತೋಶಕ್ಕೆ ಹಾಡಿದ ಕನ್ನಡದ ಹಾಡು
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 91 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator