ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ದನಿಯಱಿವು

July 3, 2008 - 10:21am — kannadakanda

ಕನ್ನಡ ದನಿಗಳ ಅಱಿವಿನ ಬಗ್ಗೆ ಬರೆಯುತ್ತಿದ್ದೇನೆ.

ಉಸಿರುಲಿಗಳು(ಸರಗಳು=ಸ್ವರಗಳು):

ಅ ಆ (ಕೊರಲು(ಳು)ಲಿ). 

ಇ ಈ (ಅಂಗುೞುಲಿ).

ಉ ಊ (ತುಟಿಯುಲಿ).

(ಋ, ೠ) (ನೆತ್ತಿಯುಲಿ) 

ಎ ಏ ಐ (ಕೊರಲಂಗುೞುಲಿ).

ಒ ಓ ಔ (ಕೊರಲ್ದುಟಿಯುಲಿ).

ತಡೆಯುಲಿಗಳು(ಬೆಂಜನಗಳು):

ಕ (ಖ) ಗ (ಘ) ಙ (ಕೊರಲುಲಿಗಳು) ನನ್ನ ಪ್ರಕಾರ ಮೆದುವಂಗುೞುಲಿ .

ಚ (ಛ) ಜ (ಝ) ಞ (ಅಂಗುೞುಲಿ).

ಟ (ಠ) ಡ (ಢ) ಣ (ನೆತ್ತಿಯುಲಿ) ನನ್ನ ಪ್ರಕಾರ (ಸುರುೞುಲಿ) (ನಾಲಿಗೆ ಉಚ್ಚರಿಸುವಾಗ ಸುರುೞಿಗೊಳ್ಳುತ್ತದೆ).

ತ (ಥ) ದ (ಧ) ನ (ಹಲ್ಲುಲಿಗಳು).

ಪ (ಫ) ಬ (ಭ) ಮ (ತುಟಿಯುಲಿಗಳು).

ಯ (ಅಂಗುೞುಲಿ). 

ರ (ನೆತ್ತಿಯುಲಿ) ನನ್ನ ಪ್ರಕಾರ ಹಲ್ವೇರ್ತಟ್ಟುಲಿ (ಹಲ್ಲಿನ ಬುಡವನ್ನು ನಾಲಿಗೆ ಹೊಡೆಯುತ್ತದೆ).

ಱ (ಹಲ್ವೇರ್ನಡುಗುಲಿ) (ಹಲ್ಲಿನ ಬುಡದಲ್ಲಿ ನಾಲಿಗೆ ನಡುಗುತ್ತದೆ).

ಲ (ಹಲ್ಲುಲಿ).

ವ (ಹಲ್ದುಡಿಯುಲಿ) (ಹಲ್ಲು ಮತ್ತು ತುಟಿ).

(ಶ)(ಅಂಗುೞುಲಿ ).

(ಷ)(ನೆತ್ತಿಯುಲಿ ಮತ್ತು ಸುರುೞುಲಿ).

ಸ (ಹಲ್ಲುಲಿ).

ಹ (ಕೊರಲುಲಿ).

ಳ (ನೆತ್ತಿಯುಲಿ ಮತ್ತು ಸುರುೞುಲಿ).

ೞ (ಅಂಗುೞುಲಿ ಮತ್ತು ಸುರುೞುಲಿ).

ಹಾಗೆಯೇ ಙ, ಞ, ಣ, ನ, ಮ (ಅನುಸ್ವಾರ) ಆಯಾ ವರ್ಗದ ಜೊತೆಗೆ ಮೂಗುಲಿಗಳು ಕೂಡ.

ಯ, ರ,ಱ, ಲ, ವ, ಳ, ೞ (ನಡುವುಲಿಗಳು=ಅಂತಸ್ಥಗಳು ಉಸಿರುಲಿಗಳ ತೆಱ ವರ್ತಿಸಬಲ್ಲುವು)

ಶ, ಷ, ಸ, ಹ=(ತಳ್ಳುಲಿ=ಮಹಾಪ್ರಾಣ) (ಉಸಿರನ್ನು ತಳ್ಳಿ ಉಚ್ಚರಿಸಬೇಕಾಗುತ್ತದೆ. ಈ ತಳ್ಳುಲಿಗಳ ಗುಂಪಿಗೆ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳು ಸೇರುತ್ತವೆ)

ಗದಱುಲಿ/ಗಜಱುಲಿಗಳು= ಉಸಿರುಲಿಗಳು, ವರ್ಗದ ಮೂಱು, ನಾಲ್ಕು ಐದನೆಯ (ಗ, ಘ, ಙ ಇತ್ಯಾದಿ) ಅಕ್ಷರಗಳು ಮತ್ತು ಯ, ರ,ಱ, ಲ, ವ, ಳ, ೞ, ಹ(ಇವುಗಳನ್ನುಲಿಯುವಾಗ ದನಿಪೆಟ್ಟಿಗೆ ನಡುಗುತ್ತದೆ).

ಕಿಱುಚುಲಿಗಳು= ವರ್ಗದ ಮೊದಲ ಮತ್ತು ಎರಡನೆಯ ಅಕ್ಷರಗಳು ಮತ್ತು ಶ, ಷ, ಸ (ಇವುಗಳನ್ನು ಉಚ್ಚರಿಸುವಾಗ ದನಿಪೆಟ್ಟಿಗೆ ನಡುಗುವುದಿಲ್ಲ)

  • ಭಾಷೆ-ಕನ್ನಡ
~.~
  • Login or register to post comments
  • 300 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 2:30pm — mahesha

ಉ: ದನಿಯಱಿವು

mahesha's picture

ಉಲಿಯರಿವು ತುಂಬಾ ಚನ್ನಾಗಿದೆ..

ಒಂದು ಟೇಬಲ್ಲಲ್ಲಿ ಹಾಕಿ ತಿಳಿಸಲು ಆದರೆ ನೋಡಿ.

ಒಂದು ಪಾಪೆ/ಚಿತ್ರದಲ್ಲಿ ಹೇಳಲು ತಿಣುಕಿ.

ದಯವಟ್ಟು ಶಂಕರಬಟ್ಟರ ಹೊತ್ತಗೆ ನೋಡಿ..

ಮೂರು ಬೇರುಉಸಿರುಲಿಗಳು ಅ ಇ ಉ ಎಂಬುದು ಸಕ್ಕದ ನಂಬಿಕೆ ಎ = ಅ + ಇ, ಒ = ಅ + ಉ ಮುಂತಾದವು..

ಆದರೆ ಕನ್ನಡದಲ್ಲಿ ಅಯ್ದು. ಎ ಇ ಉ ಒ ಅ. ಇವುಗಳಲ್ಲಿ ಎ ಮತ್ತು ಇ ನಾಲಗೆಯ ಮೇಲೆ, ಉ ಒ ಅ ನಾಲಗೆಯ ನಡುವಲ್ಲಿ ಉಲಿಯಲಾಗುವುವು.! ಉದ್ದುಸಿರುಲಿಗಳನ್ನು ಬೇರೆಯಾಗಿ ಎಣಿಸಬೇಕಿಲ್ಲ!

ಒಳ್ಳೆಯ ಅರಿಮೆ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 8:24pm — ಕೇವೆಂ

ಉ: ದನಿಯಱಿವು

ಕೇವೆಂ's picture

Quote:
ಮೂರು ಬೇರುಉಸಿರುಲಿಗಳು ಅ ಇ ಉ ಎಂಬುದು ಸಕ್ಕದ ನಂಬಿಕೆ ಎ = ಅ + ಇ, ಒ = ಅ + ಉ ಮುಂತಾದವು.

ಇದು ಆ ಭಾಷೆಯ ಮಟ್ಟಿಗೆ ಸರಿ . ಅಲ್ಲಿ ಎ ಮತ್ತು ಒ ಎಂಬ ಗಿಡ್ದುಲಿಗಳೇ ಇಲ್ಲ. ಅಲ್ಲಿರುವುದು ಬರೇ ಏ, ಓ ಮಾತ್ರ ಅಂತ ನನ್ನ ತಿಳುವಳಿಕೆ.
ಉಚ್ಚಾರಣೆಯ ರೀತಿಯಲ್ಲಿ
ಏ= ಅ + ಇ(ಮೊಟಕು), ಐ= ಅ + ಇ(ಮೊಟಕಿಲ್ಲದ )
ಓ = ಅ + ಉ(ಮೊಟಕು), ಔ=ಅ + ಉ(ಮೊಟಕಿಲ್ಲದ )

ಇದರಿಂದ ಆಗೋ ಎಡವಟ್ಟು. "ಮಹೇಶ " ಎರಡು ಭಾಷೆಗಳಲ್ಲೂ ಒಂದೇ ತರ. ಆದರೆ ಕನ್ನಡದ "ವೆಂಕಟ" ಸಂಸ್ಕ್ರುತದಲ್ಲಿ "ವೇಂಕಟ" ವಾಗುತ್ತಾನೆ

ಆದರೆ ಕನ್ನಡದಲ್ಲಿ ಎ ಮತ್ತು ಒ ಸ್ವತಂತ್ರ ಗಿಡ್ಡ ಸ್ವರಗಳಾಗಿ ಬರುತ್ತವೆ. ನೀವು ಹೇಳಿದ ಹಾಗೆ ಇವನ್ನು ಬೇರುಲಿಗಳೆಂದೇ ಎಣಿಸಬೇಕು.

Quote:
ಉದ್ದುಸಿರುಲಿಗಳನ್ನು ಬೇರೆಯಾಗಿ ಎಣಿಸಬೇಕಿಲ್ಲ!

ಕೊಡು ಮತ್ತು ಕೋಡುಗಳ ನಡುವೆ ವ್ಯತ್ಯಾಸವಿದೆಯಲ್ಲ ಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 9:58pm — hamsanandi

ಉ: ದನಿಯಱಿವು

hamsanandi's picture

ಕೇವೆಂ ಹೀಗೆಂದರು:

ಇದರಿಂದ ಆಗೋ ಎಡವಟ್ಟು. "ಮಹೇಶ " ಎರಡು ಭಾಷೆಗಳಲ್ಲೂ ಒಂದೇ ತರ. ಆದರೆ ಕನ್ನಡದ "ವೆಂಕಟ" ಸಂಸ್ಕ್ರುತದಲ್ಲಿ "ವೇಂಕಟ" ವಾಗುತ್ತಾನೆ

ಇಲ್ಲಿ ಮಾತ್ರ ಸಂಸ್ಕೃತದ ವೇಂಕಟವೇ ಸರಿ; ಏಕೆಂದರೆ, ಮೂಲಪದ ತಮಿಳಿನ ವೇಂಗಡ; ಅದು ಸಂಸ್ಕೃತದಲ್ಲಿ ವೇಂಕಟವಾಗಿದೆ. ಕನ್ನಡದಲ್ಲಿ ಯಾಕೋ ದೀರ್ಘವನ್ನು ತೊರೆದು, ವೆಂಕಟವಾಗಿದೆ.

ಆದರೆ ಬೇರೆ ನೂರಾರು ಕಡೆ ಈ ತೊಂದರೆ ಇರುವುದು ನಿಜವೇ. ( ಅದಕ್ಕೇ ಮರಾಠಿಗಳು ಬೆಳಗಾವಿಗೆ ಬೇಳಗಾಂವ್ ಎಂದು ಹೇಳುವುದು!)

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:42am — kannadakanda

ಉ: ದನಿಯಱಿವು

kannadakanda's picture

ಸಾಮಾನ್ಯವಾಗಿ ಅಕ್ಷರದ ಮುಂದೆ ಒತ್ತಕ್ಷರವಿದ್ದರೆ(ಅನುಸ್ವಾರವಿದ್ದರೆ ಎರಡೂ ಒಂದೇ) ಹಿಂದಿನ ದೀರ್ಘ ಕನ್ನಡದಲ್ಲಿ ಹ್ರಸ್ವವಾಗುತ್ತದೆ. ನೋಡಿ ಕಾಣು. ಕಾಣ್+ದ+ನು=ಕಂಡನು. ಹಾಗೆಯೇ ಹಿಂದಿಯ ರಾಸ್ತಾ ರಸ್ತೆ (ಒತ್ತಕ್ಷರ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:06am — mahesha

ಉ: ದನಿಯಱಿವು

mahesha's picture

ಕೇವೆಂ ನೀವು ಹೇಳಿದ್ದು ಸರಿ...

ನಾನು ಹೇಳ ಹೊರಟಿದ್ದು.. ಸಕ್ಕದಲ್ಲಿ ಅ ಇ ಉ (ಋ?) ಗಳನ್ನು ಬೀಜಸ್ವರಗಳೆಂದು ಏ ಐ ಓ ಔ ಗಳನ್ನು ಸಂಯುಕ್ತಸ್ವರ ಎನ್ನುವುದುಂಟು.. ಅದನ್ನು ಅರುಹಲು ಹೋಗಿ ಹೀಗೆ ಆಯಿತು..

ಎಳ್ಳೂರು ಮರಾಟಿಯಲ್ಲಿ ಯಳ್ಳೂರು ಅಂತೆ
ಹಾಗೆ ಕೆರೆ = ಕ್ಯರೆ Smiling
ಕೊರೆ = ಕ್ವರೆ...

ಹೀಗೆ ದ್ರಾವಿಡದಿಂದ/ಕನ್ನಡದಿಂದ ಸಕ್ಕದಕ್ಕೆ ಒರೆಗಳು ಹೋದಾಗೆ ಹೀಗೆ ಆಗಿರುತ್ತದೆ.. ಸೊಲ್ => ಸ್ವಲ್ .. ಇದನ್ನು ಗಮನಿಸಿದರೆ.. ಹಲವು ಸಕ್ಕದದ ಒರೆಗಳು ದ್ರಾವಿಡ ಮೂಲದವು ಎಂದು ತೋರಿಸಬೋದು.

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 5:04pm — ವೈಭವ

ಉ: ದನಿಯಱಿವು

ವೈಭವ's picture

ಆದರೆ ಶಂಕರಬಟ್ಟರು ಹೇಳಿರುವುದ್ ಹೀಗೆ ಅನ್ಸುತ್ತೆ

ಕೊರಳಿಸದ ಉಲಿಗಳು - ಕ,ಟ ತ,ಪ
ಕೊರಳಿಸಿದ ಉಲಿಗಳು - ಗ,ಡ,ದ,ಬ

ಮಾದರಿ:
ಮಗು- ಮಕ್ಕಳು
ಪುಟ್ಟಿ - ಬುಟ್ಟಿ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 8:29pm — ಕೇವೆಂ

ಉ: ದನಿಯಱಿವು

ಕೇವೆಂ's picture

(ಋ, ೠ) - ಇವುಗಳ ಸರಿಯಾದ ಉಚ್ಚಾರಣೆ ನಿಮಗೆ ಬರುತ್ತದೆಯೆ? ಒಬ್ಬೊಬ್ಬರು ಒಂದೊಂದು ತರ ಹೇಳ್ತಾರೆ.
ಒಮ್ಮೆ ಕೇಳೋಣ ಅಂತ ತವಕ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:16am — mahesha

ಉ: ದನಿಯಱಿವು

mahesha's picture

ವಯ್ಬವರೇ..

ಕೊರಳಿಸದ ಮತ್ತು ಕೊರಳಿಸಿದ ಇದೂ ಕೂಡ ಒಳ್ಳೇ ಹೆಸರುಗಳೇ..

ಆದರೆ ಗರಚು ಮತ್ತು ಕಿರುಚು ಇದು ಚನ್ನಾಗಿದೆ...

ಕೆಳೆಯ = ಗೆಳೆಯ
ಪುಟ್ಟಿ = ಬುಟ್ಟಿ
ಕೆಂಡೆ = ಗೆಂಡೆ
ಕುಂಡಿ = ಗುಂಡಿ
ಕುಳಿ = ಗುಳಿ
ಕೆರೆ(ಪರಚು) = ಗೆರೆ( ಪರಚಿ ಆದುದು )
ಕೊಂಬು/ಕುಂಬು = ಗುಮ್ಮು

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:34am — kannadakanda

ಉ: ದನಿಯಱಿವು

kannadakanda's picture

ಗರಚು ಪದವಿಲ್ಲ. ಗದಱು ಅಥವಾ ಗಜಱು ನಮಗೆ ಒಪ್ಪಿಗೆ. ಏಕೆಂದರೆ ಇಲ್ಲಿ ಒಂದೇ ಒಂದು ಕಿಱುಚುಲಿಗಳಿಲ್ಲ. ಆದರೆ ’ಗರಚು’ ಹೇೞುವಾಗ ವಾಹನಕ್ಕೆ ಥಟ್ಟನೆ ತಡೆಯೊಡ್ಡಿದ ಕೂಡಲೇ ಗಕ್ಕೆಂದು ನಿಲ್ಲುವ ’ಚ’ ಕೊನೆಯಲ್ಲಿದೆ. ಇದೊಂದು ಭಾಷಾಭ್ಯಾಸದ ದೃಷ್ಟಿ ಅಷ್ಟೇ. ನೀವು ಗರಚು ಬಳಸಿದರೆ ನಮ್ಮ ಅಭ್ಯಂತರವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:25am — mahesha

ಉ: ದನಿಯಱಿವು

mahesha's picture

ಇಲ್ಲ ಇಲ್ಲ

ನೀವು ಗಜರು ಸರಿಯಾಗಿ ಹೇಳಿದ್ದೀರಿ.. ನಾನೇ ತಪ್ಪು ಬರೆದುದು..

ನಿಮ್ಮ ಈ ಬರಹ ತುಂಬಾ ಚನ್ನಾಗಿದೆ....

ದಯವಟ್ಟು(ದಯ+ಪಟ್ಟು) ಒಂದು ಟೇಪಲ್ಲ ಬರೆಯಿರಿ...

ಹಾಗೇ ಕನ್ನಡದಲ್ಲಿ ಸ್ಪರ್ಶ, ಊಶ್ಮ ಈ ವಿಂಗಡಣೆ/ಹಂಚಿಕೆ ಬೇಕೇ ಬೇಡವೇ ತಿಳಿಸಿರಿ..

ದನಿಯರಿವುಗಿಂತ ಉಲಿಯರಿವು ಅನ್ನೋದು ಹೆಚ್ಚುತಕ್ಕಹೆಸರು..

ಸಾರ್‍.. ನಿಮ್ಮ ಈ ಅರಿಮೆಯನ್ನು ಒಂದು ಹದ/ಓಜೆ/ಕ್ರಮದಲ್ಲಿ ಜೋಡಿಸಿರಿ.. ತುಂಬಾ ನೆರವಾಗುವುದು
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:37am — kannadakanda

ಉ: ದನಿಯಱಿವು

kannadakanda's picture

ಅವರು ದನಿಪೆಟ್ಟಿಗೆಗೆ ಕೊರಲೆಂದಿರಬಹುದು. ದನಿಪೆಟ್ಟಿಗೆ ಕೊರಲಿನ ಒಂದು ಅಂಗ. ಅದು ನಡುಗಿದರೆ ಈ ಗದಱುಲಿಗಳು ಉತ್ಪತ್ತಿಯಾಗುತ್ತವೆ. ದನಿಪೆಟ್ಟಿಗೆಗೆ ಇನ್ನೊಂದು ಪದ ಮೆಟ್ರೆ. ಮೆಟ್ರೆಯುಲಿ ಎಂದೂ ಹೇೞಬಹುದೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 8:29pm — ಕೇವೆಂ

ಉ: ದನಿಯಱಿವು

ಕೇವೆಂ's picture

(ಋ, ೠ) - ಇವುಗಳ ಸರಿಯಾದ ಉಚ್ಚಾರಣೆ ನಿಮಗೆ ಬರುತ್ತದೆಯೆ? ಒಬ್ಬೊಬ್ಬರು ಒಂದೊಂದು ತರ ಹೇಳ್ತಾರೆ.
ಒಮ್ಮೆ ಕೇಳೋಣ ಅಂತ ತವಕ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:31am — kannadakanda

ಉ: ದನಿಯಱಿವು

kannadakanda's picture

ಸ್ವರರಹಿತ ’ರ್’ ಉಚ್ಚರಿಸುವಾಗ ಉಸಿರು ತಡೆಯದೆ ಬಿಡಲು ಪ್ರಯತ್ನಿಸಿ. ಆಗ ’ಋ’ ಸ್ವರ ಉಚ್ಚರಿಸಬಹುದು. ಹಾಗೆಯೇ ಅದರ ದೀರ್ಘ ’ೠ’. ಇಷ್ಟೆ ಅಲ್ಲದೆ ’ಲ್’ ಉಚ್ಚರಿಸುವಾಗ ಉಸಿರು ತಡೆಯದಿದ್ದರೆ ಸಂಸ್ಕೃತದಲ್ಲಿ ಬಳಸುವ ऌ. ಹಾಗೆಯೇ ’ೞ’ ಮತ್ತು ’ಳ’ ಗೆ ಸಂಬಂಧಿಸಿದಂತೆ ಸ್ವರಗಳಿವೆ. ಅದನ್ನು ಹಿಂದಿನವರಾರೂ ಪ್ರಯತ್ನಿಸಿಲ್ಲ. (ಸಂಸ್ಕೃತದಲ್ಲಿ ’ಳ’ ಮತ್ತು ’ೞ’ ಇಲ್ಲ.). ಆದ್ದಱಿಂದ ಯ, ರ, ಲ, ವ, ಳ, ೞ ಗಳನ್ನು ಅಂತಸ್ಥವೆಂದರು (semivowels)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:50am — kannadakanda

ಉ: ದನಿಯಱಿವು

kannadakanda's picture

ಕನ್ನಡದ್ದಲ್ಲದ ಇನ್ನೆರಡು ಸೇರಿಕೆ:
ಪ಼್ (ಕಿಱುಚಾದ ಹಲ್ದುಟಿಯುಲಿ)
ಜ಼್ (ಗದಱಾದ ಹಲ್ಲುಲಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:09pm — kannadakanda

ಉ: ದನಿಯಱಿವು

kannadakanda's picture

ಈ ಸ್ಪರ್ಷಗಳು ಬೇಕಾಗುತ್ತವೆ. ಸಂಪೂರ್ಣವಾಗಿ ಉಸಿರು ತಡೆಯುವ ಈ ತಡೆಯುಲಿಗಳನ್ನು ಕಡುತಡೆಯುಲಿಗಳೆನ್ನಬಹುದು. ತಳ್ಳುಲಿಗಳು ನಿಜವಾಗಿ ಎರಡೇ ಅಚ್ಚಗನ್ನಡದಲ್ಲಿ , ಸ ಮತ್ತು ಹ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:13pm — mahesha

ಉ: ದನಿಯಱಿವು

mahesha's picture

ತಡೆಯುಲಿ ಎಂದು ಶಂಕರಬಟ್ಟರೂ ಹೇಳುತ್ತಾರೆ...

ಮತ್ತೊಮ್ಮೆ ಓದಿ ಹೇಳುವೆನು..

ನನ್ನಿ.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 4:49pm — girish.rajanal

ಉ: ದನಿಯಱಿವು

girish.rajanal's picture

’ೞ’ ;ೞಿ’ ಈ ಒರೆಗಳನ್ನು ಹೇಗೆ ಉಲಿಯುವುದು???

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 5:00pm — mahesha

ಉ: ದನಿಯಱಿವು

mahesha's picture

ಅದರ ಬಗ್ಗೆ ಕನ್ನಡ ಕಂದ ಒಂದು ಬರಹ/ಚರ್ಚೆ ಹಾಕಿದ್ದಾರೆ ನೋಡಿ..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 11:32am — kannadakanda

ಉ: ದನಿಯಱಿವು

kannadakanda's picture

ಮಾನ್ಯ ಗಿರೀಶ್‍ರವರೆ,
ಹೌದು. ಇಲ್ಲದೇ ಹೋದರೆ ಹೇೞಿದ್ದನ್ನೆ ಹೇೞಿದಂತೆ ಆಗುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 11:45am — kannadakanda

ಉ: ದನಿಯಱಿವು

kannadakanda's picture

ಆದೇಶ ಸಂಧಿ ವಿಶೇಷವಾಗಿ ಕ ತ ಪ ಗಳಿಗೆ ಗ ದ ಬ ಆದೇಶವಾಗಿ ಬರುವುದು ಕೆಲವು ವೇಳೆ ಸ ಕ್ಕೆ ಜ ಬರುವುದು ಹಾಗೂ ಸಾಮಾನ್ಯವಾಗಿ ತಮಿೞ್‍ ಮಲಯಾಳಂಗಳಲ್ಲಿ ಪದದ ನಡುವಿನ ಕ ಚ ಟ ತ ಪಗಳು ಗ ಜ ಡ ದ ಬ (ಅಂದರೆ ಕಿಱುಚುಲಿಗಳು ಗದಱುಲಿಗಳಾಗುವುದು) ಉಚ್ಚಾರ ಸರಾಗವಾಗಲಿ ಎಂದು. ಕಿಱುಚುಲಿಗಳು ಪದವುಲಿವಿಗೆ (ವಾಹನಕ್ಕೆ ಗಕ್ಕೆಂದು ತಡೆಯೊಡ್ಡಿದಂತೆ) ತಡೆಯೊಡ್ಡುವುದಱಿಂದ ಈ ವ್ಯವಸ್ಥೆ. ಹಾಗೂ ಕನಡ ಮತ್ತು ತೆಲುಗಿನ ಪದದ ಮೊದಲಿಗೂ ಇತರ ತೆನ್ನುಡಿಗಳಲ್ಲಿ ಕಿಱುಚುಲಿ ಇದ್ದರೂ ಗದಱುಲಿ ಆಗುವುದಕ್ಕೆ ಇದೊಂದು ಕಾರಣ.

ಉದಾಹರಣೆ ಕುಱಿ=ಗುಱಿ (ಕನ್ನಡ ತೆಲುಗೆರಡರಲೂ) ಕುಱಿ=ಕನ್ನಡದಲ್ಲೂ ಇದೆ.
ಕುದುರೆ= ತೆಲುಗಿನಲ್ಲಿ ಗುರ್ರ

ಹಾಗೆಯೇ ನೋಡಿ ಕುೞಿ(ಣಿ)->ಗುೞಿ(ಣಿ), ತಱಗು=ದಱಗು(ಸಾಮಾನ್ಯವಾಗಿ ಜನ ಹೇೞುವುದು)
ಕಸಕಸೆ=ಗಸಗಸೆ ಇತ್ಯಾದಿ ಇತ್ಯಾದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
  • ’ಱ’ ಮತ್ತು ’ೞ’ ಕುಱಿತು ಮತ್ತಷ್ಟು ಬೆಳಕು.
  • ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ
  • ನನ್ನ ಮೊದಲನೆ ಬ್ಲಾಗ್
  • ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 142 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator