ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಕನ್ನಡ ಭಾಷೆಗೊಂದು ಸಂಗೀತ

June 30, 2008 - 8:29pm — Narayana

 

ತೇಜಸ್ವಿ ಬರೆದ ಅಣ್ಣನ ನೆನಪುಗಳು ಪುಸ್ತಕದಲ್ಲಿ ಅವರು ತಮ್ಮ ತಂದೆ ಕುವೆಂಪು ತಮಗೆ "ಆಡಿಟರಿ ಇಮ್ಯಾಜಿನೇಷನ್" ಬಗ್ಯೆ ವಿವರಿಸಿದ್ದನ್ನು ಬರೆದಿದ್ದಾರೆ. ಸಂಪದದಲ್ಲಿ ಕನ್ನಡ – ಸಂಸ್ಕೃತದ ಬಗ್ಯೆ ಚರ್ಚೆಗಳಾಗುತ್ತಿರುವ ಹಿನ್ನೆಲೆಯಲ್ಲಿ, ಕುವೆಂಪು ಹೇಳಿದ್ದನ್ನು ( ತೇಜಸ್ವಿ ಮಾತಿನಲ್ಲಿ) ಕೆಳಗೆ ಉದ್ಧರಿಸಿದ್ದೇನೆ.

 

Quote

ಆಡಿಟರಿ ಇಮ್ಯಾಜಿನೇಷನ್ ಎಂದರೆ ಶ್ರವಣ ಪ್ರತಿಭೆ ಎಂದು ಕರೆಯಬಹುದು. ಪ್ರತಿಯೊಂದು ಭಾಷೆಯೂ ಒಂದು ಆರ್ಕೆಸ್ಟ್ರಾ ಇದ್ದ ಹಾಗೆ. ಅವಕ್ಕೆ ಅದರದೇ ಆದ ಸಂಗೀತ ಇರುತ್ತದೆ. ಸಂಗೀತ ಎಂದಕೂಡಲೇ ನಾವು ರಾಗತಾಳಗಳ ಸರಿಗಮಪದನಿಸ ಸಂಗೀತವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಅದು ಖಂಡಿತಾ ಅಲ್ಲ. ಭಾಷೆ ಮೂಲತಃ ಸ್ವರ ವ್ಯಂಜನ ಒತ್ತಕ್ಷರ ದೀರ್ಘಗಳ ವಿಚಿತ್ರ ಉಚ್ಚಾರಣೆಯ ಶಬ್ದಗಳು. ಒಂದೊಂದು ಭಾಷೆಯಲ್ಲೂ ಇವು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಂಯೋಜನೆಗೊಂಡಿರುತ್ತವೆ. ಆ ಭಾಷೆ, ಆ ಭಾಷೆಯನ್ನಾಡುವ ಜನರ ವ್ಯಕ್ತಿತ್ವ, ಅವರ ಮಾತಿನ ಧಾಟಿ, ಇವೆಲ್ಲದರ ಸಮ್ಮಿಳನ ಆ ಭಾಷೆಯ ಸಂಗೀತ ಅಥವಾ ಛಂದಸ್ಸಂಗೀತ. ಭಾಷೆಯಲ್ಲಿ ಮೇಲು ನೋಟಕ್ಕೆ ಯಾವನು ಯಾವ ಶಬ್ದವನ್ನು ಹೇಗೆ ಬೇಕಾದರೂ ಉಚ್ಚರಿಸಬಹುದಾದ ಸ್ವಾತಂರ್ತ್ಯ ವಿರುವಂತೆ ಕಾಣುತ್ತದೆ. ಆದರೆ ಭಾಷೆಯಲ್ಲಿನ ಪ್ರತಿಯೊಂದು ಶಬ್ದವೂ ಒಂದು ಅರ್ಥಪೂರ್ಣ ವಾಕ್ಯದಲ್ಲಿ ತನ್ ಅಕ್ಕಪಕ್ಕದ ಶಬ್ದಗಳ ಸರಣಿಯಲ್ಲಿ ಸಂಯೋಜನೆಗೊಂಡ ನಾದ. ವ್ಯಾಕರಣದ , ಅರ್ಥದ ತರ್ಕಗಳಿಂದ ನಾವಿ ವಾಕ್ಯಗಳನ್ನು ಸೃಷ್ಟಿಸುತ್ತೇವಾದರೂ ಇವೆಲ್ಲವನ್ನೂ ಅಪ್ರಜ್ಞಾಪೂರ್ವಕವಾಗಿ ಒಂದು ಭಾಷೆಯ ಛಂದಸ್ಸಂಗೀತ ನಿರ್ದೇಶಿಸುತ್ತದೆ. ಇದು ಆಯಾ ಭಾಷೆಯ ಕಾವ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಗದ್ಯ ಪದ್ಯಗಳೆರಡರಲ್ಲಿಯೂ ಇದು ಬೇರೆಬೇರೆ ತೀವ್ರತೆಯೊಂದಿಗೆ ಕಾರ್ಯಪ್ರವೃತ್ತವಾಗಿರುತ್ತದೆ.

 

ಯಾರಿಗೆ ಭಾಷೆಯ ಈ ಆಯಾಮಗಳು ಗೊತ್ತಿರುತ್ತದೆಯೋ, ಯಾರು ಭಾಷೆಯ ಈ ಛಂದಸ್ಸಂಗೀತಕ್ಕೆ ಸ್ಪಂದಿಸಬಲ್ಲರೋ ಅವರು ಮಾತ್ರ ಉತ್ತಮ ಸಾಹಿತ್ಯ ರಚಿಸಬಲ್ಲರು. ಕೆಲವರು ಈ ಬಗ್ಯೆ ಅಪ್ರಜ್ಞಾಪೂರ್ವಕವಾಗಿರಬಹುದು.ಆದ್ದರಿಂದಲೇ ಕಾವ್ಯದಲ್ಲಿ ಅಚ್ಚಕನ್ನಡ ಶಬ್ದಗಳನ್ನು ಉಪಯೋಗಿಸಬೇಕು ಎನ್ನುವುದಾಗಲೀ ಅಥವಾ ಒಬ್ಬನ ಕಾವ್ಯ ಸಂಸ್ಕೃತ ಭೂಯಿಷ್ಠವಾಗಿದೆ ಎಂದು ತೆಗಳುವುದಾಗಲೀ ಅರ್ಥವಿಲ್ಲದ್ದು. ಒಂದು ಭಾಷೆಯ ಛಂದಸ್ಸಂಗೀತವನ್ನು ಬಲ್ಲವನು ಯಾವ ಪದವನ್ನು ಹೇಗೆ ಬೇಕಾದರೂ ಬಳಸಿ ಕಾವ್ಯ ಬರೆಯಬಹುದು. ವ್ಯಾಕರಣ ನಿಬಂಧನೆಗಳಿಗೆ ಮಹಾಕವಿ ಪ್ರಯೋಗಗಳು ಒಳಪಡುವುದಿಲ್ಲ ಎಂದು ಕೇಶಿರಾಜ ಹೇಳಿದ್ದು ಈ ಅರ್ಥದಲ್ಲೇ ಇರಬಹುದು. ಸಹೃದಯ ನೋಡಬೇಕಾದದ್ದು ಅದು ರಸಾನುಭವದ ಅತಿ ಕ್ಷಿಪ್ರ ಮಾರ್ಗವೇ ? ಅಲ್ಲವೇ? ಎಂಬುದನ್ನು ಮಾತ್ರ. ಎಲಿಯಟ್ "ಕಾವ್ಯ ಅರ್ಥವಾಗುವುದಕ್ಕೆ ಮೊದಲೇ ರಸಾನುಗಮ್ಯವಾಗುತ್ತದೆ " ಎಂದು ಹೇಳಿರುವುದು ಈ ದೃಷ್ಟಿಯಿಂದ ಸತ್ಯ

 

Unquote

 

ಕನ್ನಡ ಭಾಷಿಕರಲ್ಲದವರು ಕನ್ನಡ ಮಾತನಾಡಿದಾಗ , ಅದು ವ್ಯಾಕರಣ ಶುದ್ಧವಾಗಿದ್ದರೂ , ನಮಗೆ ಅವರು ಕನ್ನಡದವರಲ್ಲ ಎಂದು ತಕ್ಷಣ ಗೊತ್ತಾಗುವುದಕ್ಕೆ ಬಹು಼ಷಃ ಇದೇ ಕಾರಣವಿರಬಹುದು. ಅವರಿಗೆ ಭಾಷೆಯ ವ್ಯಾಕರಣ ಗೊತ್ತಿದ್ದರೂ ಕನ್ನಡದ ಛಂದಸ್ಸಂಗೀತ ಗೊತ್ತಿರುವುದಿಲ್ಲ. ಇದೇ ಮಾತು ಯಾವುದೇ ಭಾಷಿಕರು ಇನ್ಯಾವುದೋ ಭಾಷೆಯನ್ನಾಡುವಾಗಲೂ ಗಮನಿಸಬಹುದು.

 

  • ಭಾಷೆ-ಕನ್ನಡ
~.~
  • Login or register to post comments
  • 215 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 1, 2008 - 3:11pm — mahesha

ಉ: ಕನ್ನಡ ಭಾಷೆಗೊಂದು ಸಂಗೀತ

mahesha's picture

ಅಯ್ಯೋ ಅದು ಇಶ್ಟೊಂದೆಲ್ಲ ಕಶ್ಟ ಅಲ್ಲ ಬಿಡಿ...

ನೀವು ಹೇಳೋದನ್ನ ಆರಾಮಾಗಿ Accent/ಉಲಿಕೆ ಅಂತಾರೆ.

ಶಂಕರಬಟ್ಟರ ’ಕನ್ನಡ ನುಡಿ ನಡೆದು ಬಂದ ದಾರಿ’ ಹೊತ್ತಗೆ ಓದಿ ತಿಳಿಯುತ್ತೆ...

ನಾಲಗೆಯ ಮೇಲೆ-ತುದಿಯಲ್ಲಿ ’ಎ’, ಅದರ ಹಿಂದೆ ’ಇ’
ನಾಲಗೆಯ ನಡುವೆ-ತುದಿಯಲ್ಲಿ ’ಉ’ ಅದರ ಹಿಂದೆ ’ಒ’ ಅದರ ಹಿಂದೆ ’ಅ’
ನಾಲಗೆಯ ಕೆಳಗೆ-ಹಿಂದೆ ’~ಅ’( ಇದನ್ನ ಬಡಗುಗನ್ನಡಿಗರು ಸಲೀಸಾಗಿ ಉಲೀತಾರೆ ).
ಮತ್ತೆರಡು ~ಎ, ‘ಎ ಇದೆ ಇದು ನನಗೆ ಮರೆತು ಹೋಗಿದೆ.

ಕ್‌ಅತ್ತಿ( ಚಾಕು ) ಮತ್ತು ಕ್‌~ಅತ್ತಿ( ಕತ್ತೆ ) ಈ ಎರಡು ಕತ್ತಿಗಳ ನಡುವೆ ಕ್‌ಗೆ ಹತ್ತುವ ಅ ಬೇರೆ ಬೇರೆ..( ಇದು ಬಡಗು ಕನ್ನಡ ನಿಬ್ಬರ )

ಹಾಗೇ ಬಡಗರಲ್ಲಿ( ಬಡಗ ಬುಡಕಟ್ಟು, ಊಟಿಯ ಮಂದಿ) ಮೂರು ’ಎ’ಗಳಿವೆ, ’ಬೇ’ ಅವರು ಮೂರು ’ಎ’ಗಳಲ್ಲಿ ಉಲಿದು ಬೇರೆ ಬೇರೆ ತಿಳಿವು ಕೊಡುವ ಒರೆಗಳನ್ನು ಉಲಿಯುವರು.

ಹಾಗೇ.. ತೆಂಕುಗನ್ನಡ ಮಂದಿ ಊರು ಎಂದು ಪೂರ್ತಿ ’ಉ’ ಕಾರದಿಂದ ಒರೆ ಉಲಿದರೆ ಬಡಗುಗನ್ನಡಿಗರು ಊರ್‍~ಉ ಎಂದು ಮತ್ತೊಂದು ~ಉ ಇಂದು ಕೊನೆ ಮಾಡುವರು, ಅದು ಕೇಳಲು ’ಊರ’ ತುಸು ಎಂಬಂತೆ ಇರುವುದಂತೆ.

ಇದನ್ನು Phonology/ಉಲಿಕೆಬಲ್ಮೆ ಅನ್ನುವರು..!!

ಒಂದು ಬುಡಗಟ್ಟು/ಜನಾಂಗಕ್ಕೆ ಒಂದು ನಿಬ್ಬರದ/ವಿಶೇಶವಾದ ಉಲಿಕೆಗಳಿದ್ದು, ಅವರಿಗೆ ಒಂದಿಶ್ಟು ಸದ್ದುಗಳುನ್ನು ಸ್ವಬಾವವಾಗಿ/ನ್ಯಾಚುರಲ್ಲಾಗಿ ಬರುವುದು..
ಮಾದರಿ ಕನ್ನಡಿಗರ ಳ, ತಮಿಳರ ೞ, ಇಂಗ್ಲೀಶರ Orange ಮತ್ತು Apple ಅಲ್ಲಿರುವ ಅ. ಮಳಯಾಳಿಗಳು ಞ್ಕಾರದಿಂದ ಒರೆ/ಪದ ಸುರುಮಾಡಬಲ್ಲರು. ತಮಿಳಲ್ಲಿ ಒಂದು ಬೇರೆಯದೇ ನ ಇದೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಥೇಚ್ಛವೋ ಯಥೇಷ್ಟವೋ?
  • ಕುಂಟನಿ ಎಂಬ ವಿಸ್ಮಯ
  • ಏನಿರಬಹುದು ಕಾರಣ....?
  • ಆಷಾಢಕ್ಕೆ ತೌರಿಗೆ ಬರಲಿಲ್ಲ.
  • ಚಿಂತನ
Syndicate content

ಲೇಖಕರು

Narayana's picture

ಪೂರ್ಣ ಹೆಸರು
Narayana

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾರಂತರ ಜೀವಂತ ಪಾತ್ರಗಳು ೧೩ (೨)
  • ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
  • LTTE ಭಯೋತ್ಪಾದಕ ಸಂಘಟನೆಯಲ್ಲವೇ?
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಗು೦ಡ ಮತ್ತು ಕತ್ತೆ!!!!!
  • ಕಾರಂತರ ಜೀವಂತ ಪಾತ್ರಗಳು ೧೩ (೧)
  • ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 456 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator