ಜಿ ಟಿ ನಾರಾಯಣರಾವ್ ಇನ್ನಿಲ್ಲ
ಕನ್ನಡ ವಿಜ್ಞಾನ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಜಿ. ಟಿ ನಾರಾಯಣರಾವ್ ಇನ್ನಿಲ್ಲ. ಇಂದು (೨೭ ಜೂನ್ ೨೦೦೮ ಶುಕ್ರವಾರ) ಬೆಳಿಗ್ಗೆ ಏಳುಗಂಟೆಯ ವೇಳೆಗೆ ನಿಧನರಾದರೆಂದು ಕುಟುಂಬದವರು ತಿಳಿಸಿದ್ದಾರೆ.
~

- Login or register to post comments
- 614 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ಆಘಾತದ ಸುದ್ದಿ. ಕನ್ನಡ ವಿಜ್ಞಾನ ಸಾಹಿತ್ಯದ ಪ್ರಪಂಚಕ್ಕೆ ಮತ್ತು ಜನತೆಗೆ ಎಂತಹಾ ನಷ್ಟ. ಸಂಪದದಲ್ಲಿ ಅವರ ಸಂದರ್ಶನ ಎಷ್ಟು ಸಲ ಕೇಳಿ ದಣಿದೆನೋ ನಾನು. ನಿಜವಾಗಿಯು ನಮಗೆ ಇದು ತುಂಬಲಾಗದ ನಷ್ಟವೇ.
ಶೈಲಾಸ್ವಾಮಿ
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ಬಲು ಬೇಸರದ ಸಂಗತಿ.
ಜಿಟಿ ನಾರಾಯಣ ರಾವ್ ಅವರ ಒಡನೆ ಮೂರು ನಾಕು ದಿನ ಒಡನಾಡುವ ಸಂದರ್ಭ ನನಗೆ ದೊರೆತಿತ್ತು. ಅವರು ನನ್ನ ಮೇಲೆ ಮರೆಯಲಾರದ ಪರಿಣಾಮ ಬೀರಿದ್ದರು.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ಸಂಪ್ರದಾಯವಾದಿಗಳು ಎಷ್ಟೇ ಹೊಡಕೊಂಡ್ರೂ ಇವರು ವಿಜ್ಣಾನದ ಸತ್ಯಗಳನ್ನು ನಿರ್ಭಿಢೆಯಿಂದ ಪ್ರತಿಪಾದಿಸುತ್ತಿದ್ದರು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ಕನ್ನಡ ವಿಜ್ಞಾನ ಸಾಹಿತ್ಯದ ಇನ್ನೊಂದು ಕೊಂಡಿ ಕಳಚಿತು , ಅದರಲ್ಲೂ ಖಗೋಳ ವಿಜ್ಞಾನದ ವಿಭಾಗಕ್ಕೆ ಹೆಚ್ಚು ನಷ್ಟ . ಹೊಸ ಹೊಸ ಪ್ರತಿಭೆಗಳು ಅರಳಿ , ಆಗುತ್ತಿರುವ ನಷ್ಟವನ್ನು ಬೇಗನೆ ತುಂಬುತ್ತಾ ಬರಲಿ . ಕನ್ನಡ ಸಾರಸ್ವತ ಜಗತ್ತು ಚಿರಾಯುವಾಗಿರಲಿ .
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ದೇವರು ಇವರ ಆತ್ಮಕ್ಕೆ ಶಾಂತಿ ನೀಡಲೆಂದು ಕೋರುವೆ...!!
-ಯುವಪ್ರೇಮಿ
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ಛೇ, ನನ್ನದು ಎಂಥ ಸೋಗಲಾಡಿತನ ಅನ್ನಿಸ್ತಾ ಇದೆ. ಹೇಸಿಗೆಯಾಗುತ್ತಿದೆ. ಕನ್ನಡದ ಒಬ್ಬರು ಲೇಖಕರು ಮರೆಯಾದ ಕ್ಷಣದಲ್ಲಿ, ಬೇರೆ ಯಾವ್ದೋ ಕೆಲಸಕ್ಕೆ ಬಾರದ ಚರ್ಚೆಗಳಲ್ಲಿ ಮಾತಾಡ್ತಾ ಇದ್ದೀನಿ
ಜಿ.ಟಿ.ನಾರಾಯಣ ರಾಯರ ಲೇಖನಗಳನ್ನು ಓದಿ, ಎಲ್ಲರಿಗೂ ಅದರಿಂದ ಸ್ಫೂರ್ತಿ ಸಿಗುವಂತಾಗಲಿ ಎಂದು ಆಶಿಸುತ್ತೇನೆ.
ಉ: ಜಿ ಟಿ ನಾರಾಯಣರಾವ್ ಇನ್ನಿಲ್ಲ
ಹಿರಿಯ ಚೇತನ, ತೇನೆ.ನಮ್ಮನ್ನು ಅಗಲಿದ್ದಾರೆ. ಅವರ ಸ್ಪಷ್ಟ ನಿಲವುಗಳನ್ನು ನಾವು ಪಾಡ್ಕ್ಯಾಸ್ಟ್ ನಲ್ಲಿ ಕೇಳಿದ್ದೆವು.
ಅವರ ಆತ್ಮಕ್ಕೆ ಶಾಂತಿ ಕೋರುತ್ತ್ತೇನೆ.