ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಜೇಡರ ಬಲೆ ಹುಟ್ಟಿದ್ದು ಹೇಗೆ .....?

June 22, 2008 - 12:09pm — ChaitraHosmane

ಇತ್ತೀಚೆಗೆ ನಾನು ಕೇಳಿದ ಒಂದು ಸುಂದರ ಜನಪದ ಸೊಗಡಿನ ಕಥೆ ಇದು.

ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆ ಎಂದು ಹೆಸರಾಗಿದ್ದು ಗ್ರೀಸ್ ದೇಶದ ನಾಗರೀಕತೆ. ಈ ನಾಗರೀಕತೆ ಇಂದ ಹುಟ್ಟಿದ ಕಥೆಗಳು ಹಲವಾರು.

ತುಂಬ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಅರಾಕ್ನೆ ಎಂಬ ಹೆಸರಿನ ಯುವತಿ ವಾಸವಾಗಿದ್ದಳಂತೆ. ಆಕೆಯ ವೃತ್ತಿ ನೇಯ್ಗೆ. ರೇಶಿಮೆಯ ನೂಲನ್ನು ತೆಗೆದು ಅದನ್ನು ಸುಂದರವಾಗಿ ನೇಯ್ದು ವಿಧ ವಿಧವಾದ ರೇಷ್ಮೆಯ ಬಟ್ಟೆ ಗಳನ್ನು ತಯಾರಿಸುವುದರಲ್ಲಿ ಆಕೆಗೆ ಎಲ್ಲಿಲ್ಲದ ಆಸಕ್ತಿ.. ಆಕೆಯಲ್ಲಿದ್ದ ಕಲಾತ್ಮಕತೆಯಂತು ಅದ್ಭುತ. ನೇಯ್ಗೆಯನ್ನೇ ತನ್ನ ಜೀವ ಎಂದು ಕೊಂಡಿದ್ದ ಆಕೆ ದಿನದ ಸಂಪೂರ್ಣ ಸಮಯವನ್ನು ಹೊಸ ಹೊಸ ಮಾದರಿಯ ರೇಷ್ಮೆ ಬಟ್ಟೆಗಳನ್ನು ತಯಾರಿಸುವುದರಲ್ಲಿ ಕಳೆಯುತಿದ್ದಳು. ಬರಿ ಅಷ್ಟೆ ಅಲ್ಲ ಆ ಕೆಲಸವನ್ನು ಅಷ್ಟೇ ಪ್ರೀತಿಸುತಿದ್ದಳು ಕೂಡ..

ಹಾಗಿರುವಾಗ ಆರಾಕ್ನೆ ವಾಸವಾಗಿರುವ ಸುತ್ತ ಮುತ್ತಣ ಗ್ರೀಕ್ ಎಲ್ಲ ಜನರು ಕೂಡ ರೇಶಿಮೆಯ ಬಟ್ಟೆಗಳನ್ನು ಕರೀದಿಸಲು ಇವಳಲ್ಲಿಗೆ ಬರತೊಡಗಿದರು. ಹೀಗೆ ಬರು ಬರುತ್ತಾ ಸುತ್ತ ಮುತ್ತಣ ಪ್ರದೇಶದಲ್ಲಿ ಆರಾಕ್ನೆಯಾ ಪ್ರಸಿದ್ಧಿ ಹೆಚ್ಚಾಗುತ್ತಾ ಹೋಯಿತು. ಆರಾಕ್ನೆಗಂತೂ ತನ್ನ ಬುದ್ದಿಶಕ್ತಿ ಕಲಾತ್ಮಕತೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಹೀಗೆಯೇ ಪ್ರಸಿದ್ಧಿ ಹೆಚ್ಚಾದಂತೆಲ್ಲಾ ಅರಾಕ್ನೆಗೆ ಅಹಂ ಶುರುವಾಯಿತು. ಆಕೆ ತನ್ನ ಕೌಶಲ್ಯದ ಬಗ್ಗೆ ಎಲ್ಲರಲ್ಲಿ ಹೇಳುವುದಕ್ಕೆ ಶುರುಮಾಡಿದಳು.. ಬರು ಬರುತ್ತಾ ತನ್ನ ಪ್ರಸಿದ್ದಿ ಇನ್ನು ಜಾಸ್ಥಿಯಾದಂಥೆಲ್ಲಾ ಆರಾಕ್ನೆಯ ಅಹಂ ಕೂಡ ಆಷ್ಟೇ ಜಾಸ್ತಿಯಾಯಿತು.. ಅವಳು ನನ್ನ ಬುದ್ದಿಶಕ್ತಿಯನ್ನು ಮೀರಿಸಲು ಗ್ರೀಕ್ ದೇಶದ ದೇವತೆ ಅಥೆನ್ಸ್ ಗೆ ( ನಮ್ಮಲ್ಲಿಯ ಸರಸ್ವತಿಯಂತೆ) ಕೂಡ ಸಾಧ್ಯವಾಗದು ಎಂದು ಹೇಳಲು ಶುರು ಮಾಡಿದಳಂತೆ.

ನಂತರ ಇದನ್ನ ಕೇಳಿಸಿಕೊಂಡ ದೇವತೆ ಅಥೆನ ಇವಳಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದಳು. ಮಾರನೆಯ ದಿನ ಆರಾಕ್ನೆ ತನ್ನ ರೇಶಿಮೆಯ ನೇಯ್ಗೆಯನ್ನು ಒಂದು ಕಡೆಯಿಂದ ಮಾಡುತ್ತಾ ಹೋದಂತೆಲ್ಲ ಇನ್ನೊಂದು ಕಡೆಯಿಂದ ಬಟ್ಟೆ ಯ ನೂಲುಗಳು ಬಿಚ್ಚಿ ಕೊಳ್ಳುತ್ತಾ ಹೋದವು. ಆರಾಕ್ನೆಗೆ ಏನು ಮಾಡಲು ತೋಚದಾಯಿತು.. ಏಕೆ ಹೀಗಾಗುತ್ತಿದೆ ಎಂದು ಆಕೆಗೆ ತಿಳಿಯದಾಯಿತು.. ಮತ್ತೆ ಮರುದಿನ ಅದೇ ರೀತಿ.. ಆರಾಕ್ನೆ ಗೆ ಇದರಿಂದ ತುಂಬ ಬೇಜಾರಾಯಿತು.. ನೇಯ್ಗೆಯೇ ಜೀವವಾಗಿದ್ದ ಆಕೆಗೆ ಆನೇಕ ದಿನಗಳಿಂದ ಒಂದು ಬಟ್ಟೆಯನ್ನು ಪೂರ್ತಿ ಮಾಡಲು ಸಾಧ್ಯವಾಗದಾಗ ದಿಕ್ಕೇ ತೋಚದಂತಾಯಿತು. ಆರಾಕ್ನೆ ಮಾತು ಕೊಟ್ಟ ಎಲ್ಲರು ಆರಾಕ್ನೆ ಇಂದ ರೇಶಿಮೆಯ ಬಟ್ಟೆ ಯನ್ನು ಕೇಳಲು ಶುರುಮಾಡಿದರು. ಇದರಿಂದ ಬೇಸತ್ತ ಆರಾಕ್ನೆ ಆತ್ಮಹತ್ಯೆ ಮಾಡಿಕೊಂಡಳು. ನಂತರ ಗ್ರೀಕ್ ದೇಶದ ದೇವತೆ ಅಥೆನ್ಸ್ ಗೆ ತಾನು ತಪ್ಪು ಮಾಡಿದೆ ಅನ್ನಿಸಿತಂತೆ. ಆಕೆ ನಾನು ನಿನಗೆ ಕೊಟ್ಟ ಶಾಪ ವನ್ನು ವರವಾಗಿ ಪರಿವರ್ತಿಸುತ್ತೇನೆ. ನೀನು ಭೂಮಿ ಯಲ್ಲಿ ಜೇಡ ವಾಗಿ ಹುಟ್ಟು. ನಿನ್ನ ಜೀವಾವಧಿ ಪೂರ್ತಿ ನೀನು ನಿನಗೆ ಇಷ್ಟ ವಾದ ನೇಯ್ಗೆ ಯನ್ನು ನೇಯುತ್ತಾ ಇರು ಅಂಥ ಹೇಳಿದಳಂತೆ.

ಹೀಗೆ ಹುಟ್ಟಿದ್ದು ಜೇಡ ಎನ್ನುತ್ತದೆ ಜನಪದ ಸೊಗಡಿನ ಸುಂದರವಾದ ಗ್ರೀಕ್ ದೇಶದ ಈ ಕಥೆ.

ನೋಡಿ ಚಂದವಾಗಿ ಬಲೆಯನ್ನು ಕಟ್ಟುವುದು ಹೆಣ್ಣು ಜೇಡವೆ. ಒಳಗಡೆ ಇಂದ ಶುರು ಮಾಡಿ ಹೊರಗೆ ತಂದು ಪೂರ್ತಿಯಾಗಿ ಮುಗಿಸುತ್ತದೆ. ಹೊಟ್ಟೆಯ ಕೆಳಭಾಗದಲ್ಲಿರುವ ದ್ರವ ಇದಕ್ಕೆ ಸಹಾಯ ಮಾಡುತ್ತದೆ.

ನಮಗೆ ತಿಳಿದಿರುವ ಹಾಗೆ ಇಂಗ್ಲಿಷ್ ನ ಆನೇಕ ಶಬ್ದಗಳ ಮೂಲ ಗ್ರೀಕ್ ಮತ್ತು ಲ್ಯಾಟಿನ್ ಪದಗಳದ್ದು. ಹಾಗೆಯೇ ಜೇಡ ವನ್ನು ನಾವು aracnide ಎಂಬ ಗುಂಪಿಗೆ ಸೇರಿಸುತ್ತೇವೆ. ಇಲ್ಲಿಯೂ ಇದನ್ನು ವೈಜ್ಞಾನಿಕವಾಗಿ ಹೆಸರಿಸುವಲ್ಲಿ 'ಆರಾಕ್ನೆ' ಯನ್ನು ನೆನಪಿಸುತ್ತೇವೆ.

  • ಜನಪದ ಸಾಹಿತ್ಯ
~.~
  • Login or register to post comments
  • 320 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 23, 2008 - 2:27pm — shashikannada

ಉ: ಜೇಡರ ಬಲೆ ಹುಟ್ಟಿದ್ದು ಹೇಗೆ .....?

shashikannada's picture

ನಮಸ್ಕಾರ. ಸಂಪದ ಬಳಗಕ್ಕೆ ಸ್ವಾಗತ. ನಿಮ್ಮ ಬರಹವನ್ನು ಓದಿದೆ. ನಿಮ್ಮ ಕನ್ನಡ ಚೆನ್ನಾಗಿದೆ. ಒಂದೆರಡು ಕಡೆ ಕಾಗುಣಿತ ದೋಷವಿದೆಯಷ್ಟೆ. ಇಷ್ಟಕ್ಕೇ ನಿಲ್ಲಿಸದೆ ಮುಂದುವರಿಸಿ. ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 9:41pm — ChaitraHosmane

ಉ: ಜೇಡರ ಬಲೆ ಹುಟ್ಟಿದ್ದು ಹೇಗೆ .....?

ChaitraHosmane's picture

ಧನ್ಯವಾದಗಳು... ಖಂಡಿತವಾಗಿ...

ಚೈತ್ರಾ ಹೊಸ್ಮನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2008 - 8:06am — madhava

ಉ: ಜೇಡರ ಬಲೆ ಹುಟ್ಟಿದ್ದು ಹೇಗೆ .....?

madhava's picture

ಕಥೆ ಮತ್ತು ನಿಮ್ಮ ಬರಹ ಚೆನ್ನಾಗಿದೆ. ಇನ್ನೂ ಹೆಚ್ಚು ಹೆಚ್ಚು ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ನಕ್ಕನಾ ಏಸುದೇವ!"
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ಅಡಿಗೆಯವರ ಪುರಾಣ - ಭಾಗ -೨
  • ಮೂರು ಚಮತ್ಕಾರದ ವಾಕ್ಯಗಳು
  • ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !
Syndicate content

ಲೇಖಕರು

ChaitraHosmane's picture

ಪೂರ್ಣ ಹೆಸರು
ಚೈತ್ರ

ಪರಿಚಯ

ನಮಸ್ತೆ... ಹೆಸರು ಚೈತ್ರಾ. ಹುಟ್ಟಿದ್ದು ಬೆಳೆದದ್ದು ಮಲೆನಾಡು.
ಈಗ ಬೆಂಗಳೂರಿನಲ್ಲಿ ವಾಸ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್.
ಸಂಗೀತದಲ್ಲಿ ಆಸಕ್ತಿ... ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 98 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator